

ಕುಂದಾಪುರ, ಅ.12; ಅಕ್ಟೋಬರ್ 12 ರಂದು ಭಾಗ್ಯವಂತೆ ರೋಜರಿ ಮಾತಾ ಚರ್ಚಿನಲ್ಲಿ, ಚರ್ಚ್ ವ್ಯಾಪ್ತಿಯಲ್ಲಿನ ಎಲ್ಲಾ ವಿಧದ ವಾಹನಗಳ ಆಶಿರ್ವಚನ ಕಾರ್ಯಕ್ರಮ ನಡೆಯಿತು. ಪ್ರಾರ್ಥನ ವಿಧಿಯನ್ನು ನಡೆಸಿದ ಬಳಿಕ, ಚರ್ಚ್ ಮೈದಾನದಲ್ಲಿ ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಪವಿತ್ರ ಜಲದಿಂದ ಎಲ್ಲರ ವಾಹನಗಳನ್ನು ಆಶಿರ್ವದಿಸಿದರು.



















