
Some of these photos are by Rima DAlmeida

ಕುಂದಾಪುರ, ಸೆ. 21; ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚಿನಲ್ಲಿ ಕುಟುಂಬ ಆಯೋಗದ ವತಿಯಿಂದ ದಂಪತಿಗಳ ದಿನಾಚರಣೆ ಸೆ. 21 ರಂದು ನಡೆಯಿತು.
ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಬಲಿದಾನವನ್ನು ಅರ್ಪಿಸಿ ‘ದಂಪತಿಗಳು ಸುಖ ಮತ್ತು ದುಖದಲ್ಲಿ ಜೊತೆ ನೀಡಬೇಕು. ಒಬ್ಬರನೊಬ್ಬರು ಅರಿತು ಬಾಳಬೇಕು. ದೇವರು ಒಟ್ಟು ಮಾಡಿದ್ದು, ಮನುಷನು ಬೇರೆ ಮಾಡಬಾರದು. ತಮ್ಮ ಮಕ್ಕಳನ್ನು ಪ್ರೀತಿಯಿಂದ ಬೆಳಸಬೇಕು” ಎಂದು ಸಂದೇಶ ನೀಡಿದರು.
ನಂತರ ದಂಪತಿಗಳಿಗೆ ಶಿಬಿರ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ವೆರೋನಿಕಾ ಕರ್ನೇಲಿಯೊ ಮತ್ತು ವಿವಿಯನ್ ಕರ್ನೇಲಿಯೊ ದಂಪತಿಗಳು ಆಗಮಿಸಿದ್ದು, ವೆರೋನಿಕಾ ಕರ್ನೇಲಿಯೊ ‘ದಂಪತಿಗಳ ನಡವಳಿಕೆ, ಹೇಗಿರಬೇಕು ಎಂದು ವಿಸ್ತಾರವಾಗಿ ತಿಳಿಸಸಿದರು. ವಿವಿಯನ್ ಕರ್ನೇಲಿಯೊ ತಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕು, ಮಕ್ಕಳು 7 ನೇ ವರ್ಷದ ತನಕ ತಂದೆ ತಾಯಿ ಇತರರು ಹೇಗೆ ಹೇಳಿ ಕೊಡುತಾರೊ ಅದನ್ನು ಅನುಕರಣೆ ಮಾಡುತ್ತಾರೆ, ಇದು ಅವರ ಮನಸಿನಲ್ಲಿ ಶಾಸ್ವತವಾಗಿ ತುಂಬಿರುತ್ತೆ. ಹಾಗಾಗಿ ಅವರನ್ನು ಚಿಕ್ಕ ಪ್ರಾಯದಲ್ಲಿ ಒಳ್ಳೆಯ ಸನ್ನಡೆತೆಯಲ್ಲಿ ಪೋಷಿಸಬೇಕು. ತಮ್ಮ ಆರೋಗ್ಯದ ಕಡೆ ಗಮನ ನೀಡಬೇಕು, ಆರ್ಥಿಕ ಸ್ಥಿಯಂತೆ ಬಾಳಬೇಕು, ದುಂದು ವೆಚ್ಚ ಮಾಡಬಾರದು ಎಂದು’ ತಿಳಿಸಿದರು. ಕುಟುಂಬ ಆಯೋಗದ ಸಂಚಾಲಕಿ ಜೂಲಿಯಾನ ಮಿನೇಜೆಸ್ ಸ್ವಾಗತಿಸಿದರು. ಅ।ವಂ।ಪೌಲ್ ರೇಗೊ ಮತ್ತು ಕುಟುಂಬ ಆಯೋಗದ ಸದಸ್ಯರು ಉಪಸ್ಥಿತರಿದ್ದರು. ಈ ಶಿಬಿರದ ಉಪಯೋಗವನ್ನು ಹಲವು ದಂಪತಿಗಳು ಪಡೆದರು.
























































