

ಕೋಟ: ಸಂತ ಜೊಸೆಫರ ಇಗರ್ಜಿಯಲ್ಲಿ ಮಾತೆ ಮರಿಯಮ್ಮನವರ ಜಲ್ಮದಿನಾಚರಣೆ ಹಾಗೂ ತೆನೆಹಬ್ಬವನು ಸಂಭ್ರಮದಿಂದ ಆಚರಿಸಲಾಯಿತು.
ಚರ್ಚಿನ ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ಅವರು ತೆನೆಗಳನ್ನು ಆಶೀರ್ವಚಿಸಿದರು. ಅತಿಥಿ ಧರ್ಮಗುರುಗಳಾಗಿ ಗೋವಾ ಪಿಲಾರಿನ ಧರ್ಮಗುರು ವಂ। ಹೆಂಡ್ರಿ ಡಿಸೋಜಾ (ಎಫ್ ಎಕ್ಸ್ ಎಸ್) ಬಲಿದಾನದಲ್ಲಿ ಭಾಗಿಯದರು. ಮಾತೆ ಮರಿಯಮ್ಮನವರ ವಿಗ್ರಹವನ್ನು ಮೆರವಣಿಗೆಯಲ್ಲಿ ಚರ್ಚಿಗೆ ಕೊಂಡೊಯ್ಯಲಾಯಿತು. ಮಕ್ಕಳು ಹೂಗಳನ್ನು ಅರ್ಪಿಸಿದರು. ನಂತರ ಪವಿತ್ರ ಬಲಿಪೂಜೆ ನಡೆಯಿತು. ಬಲಿಪೂಜೆಯ ನಂತರ, ಹೊಸ ತೆನೆ ಮತ್ತು ಸಿಹಿ ತಿಂಡಿಗಳನ್ನು ವಿತರಿಸಲಾಯಿತು. ಸಾಂಪ್ರದಾಯಿಕವಾಗಿ ಕಬ್ಬುಗಳನ್ನು ವಿತರಿಸಲಾಯಿತು.























































