

ಶ್ರೀನಿವಾಸಪುರ : ದೇಶವನ್ನು ಹಗಲಿರಲು ನಮ್ಮ ಸೈನಿಕರು ಕಾಯುತ್ತಿದ್ದಾರೆ ಅವರಿಗೆ ಮನಪೂರ್ವಕಾಗಿ ಅಭಿನಂದನೆಗಳನ್ನು ಸಲ್ಲಿಸಬೇಕು ಎಂದು ಬಿಜೆಪಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಕೆ.ಎನ್.ವೇಣುಗೋಪಾಲರೆಡ್ಡಿ ಹೇಳಿದರು.
ಪಟ್ಟಣದಲ್ಲಿ ಗುರುವಾರ ಬಿಜೆಪಿ ಪಕ್ಷದವತಿಯಿಂದ ಹರ್ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. 79 ನೇ ಸ್ವಾತಂತ್ರ ದಿನಾಚರಣೆ ಅಂಗವಾಗಿ 13, 14,15 ರಂದು ಈ ಮೂರು ದಿನಗಳ ಕಾಲ ಪ್ರತಿಯೊಬ್ಬರ ಮನೆಯ ಮೇಲೆ ರಾಷ್ಟ್ರದ್ವಜವನ್ನು ಹಾರಿಸುವುದರ ಮೂಲಕ ದೇಶ ಪ್ರೇಮವನ್ನು ಮರೆಯಬೇಕೆಂದು ಪ್ರದಾನ ಮಂತ್ರಿ ನರೇಂದ್ರ ಮೋದಿರವರು ಕರೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಭಾರತ ಪ್ರಜೆ ಆದ್ಯ ಕರ್ತವ್ಯವಾಗಬೇಕು ಎಂದರು.
ಅದೇ ರೀತಿಯಾಗಿ ಅಂಬೇಡ್ಕರ್ ರವರು ರಚನೆ ಮಾಡಿರುವ ಸಂವಿದಾನದಿಂದ ಇಂದು ನಾವು ಬದಕನ್ನು ಕಟ್ಟಿಕೊಳ್ಳುತ್ತಿದ್ದು, ಅವರ ಆಶಯಕ್ಕೆ ನಾವೆಲ್ಲೂರು ಗೌರವ ಸಲ್ಲಿಸಬೇಕೀದೆ ಎಂದರು.
ಮಂಡಲ ಅಧ್ಯಕ್ಷ ರೋಣುರು ಆರ್.ಎನ್.ಚಂದ್ರಶೇಖರ್ ಮಾತನಾಡಿ ಪ್ರತಿಯೊಬ್ಬರ ಮನೆಯ ಮೇಲೆ ರಾಷ್ಟ್ರ ದ್ವಜವನ್ನು ಹಾರಿಸಬೇಕೆಂದು ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪ್ರಧಾನ ಮಂತ್ರಿ ನರೇಂದ್ರಮೋದಿ ಆಶಯದಂತೆ ನಾವೆಲ್ಲರೂ ದೇಶ ಪ್ರೇಮವನ್ನು ತೋರಿಸುವ ಸಲುವಾಗಿ ಪ್ರತಿ ಮನೆಯ ಮೇಲೂ ರಾಷ್ಟ್ರದ್ವಜ ಹಾರಿಸಬೇಕು. ಅಲ್ಲದೆ ಅಂಬೇಡ್ಕರ್ ರವರು ರಚನೆ ಮಾಡಿರುವ ಸಂವಿದಾನವನ್ನು ಗೌರವಿಸಬೇಕು ಎಂದರು.
ಹರ್ಘರ್ ತಿರಂಗಾ ಅಭಿಯಾನದ ಅಂಗವಾಗಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಇರುವ ಅಬೇಂಡ್ಕರ್ ಪುತ್ಥಳಿಗೆ ಪುಷ್ಪಮಾಲೆ ಸರ್ಮಪಿಸಿದರು. ಹಾಗು ಪಟ್ಟಣದ ವರದಬಾಲಂಜನೇಯ ಸ್ವಾಮಿ ದೇವಾಲಯದಿಂದ ಮುಳಬಾಗಿಲು ವೃತ್ತದವರೆಗೂ ಬ್ಯಾಕ್ರ್ಯಾಲಿ ಹಮ್ಮಿಕೊಳ್ಳಲಾಯಿತು.
ಉಪಾಧ್ಯಕ್ಷ ನಾಗಭೂಷನ್, ಮುಖಂಡರಾದ ದಿವಾಕರ್, ನಲ್ಲಪಲ್ಲಿ ರೆಡ್ಡಪ್ಪ, ವಕೀಲ ಬಂಗವಾದಿ ನಾಗರಾಜ್, ಶೀಗಹಳ್ಳಿಮಂಜು, ಸೀನಪ್ಪ, ಆಂಜಪ್ಪ ಇದ್ದರು.

