

ಮಂಗಳೂರು ; ದಿನಾಂಕ 25/7/2025ರಂದು ಛತ್ತೀಸ್ಗಢದಲ್ಲಿ ಕೇರಳದ ಸಿಸ್ಟರ್ ಆಫ್ ಮೇರಿಇಮ್ಯಾಕ್ಯುಲೇಟ್ಆಫ್ ಅಸ್ಸಿಸಿಯ ಸದಸ್ಯರಾದ ತಲಶ್ಶೇರಿಯ ಸಿಸ್ಟರ್ ವಂದನಾ ಫ್ರಾನ್ಸಿಸ್ ಮತ್ತು ಅಂಗಮಾಲಿಯ ಸಿಸ್ಟರ್ ಪ್ರೀತಿ ಮೇರಿ ಎಂಬ ಇಬ್ಬರು ಮಲಯಾಳಿ ಕಥೊಲಿಕ್ ಸನ್ಯಾಸಿನಿಯರು ಛತ್ತೀಸ್ಘಡದ ನಾರಾಯಣಪುರ ಜಿಲ್ಲೆಯ 18ರಿಂದ 19 ವರ್ಷದೊಳಗಿನ ಓರ್ವ ಯುವತಿಯನ್ನು ಮನೆ ಕೆಲಸಕ್ಕಾಗಿ ಹಾಗೂ ಇಬ್ಬರು ಯುವತಿಯರನ್ನು ನರ್ಸಿಂಗ್ ಶಿಕ್ಷಣಕ್ಕಾಗಿ ಕರೆದೊಯ್ಯುತ್ತಿದ್ದಾಗ ಜ್ಯೋತಿಶರ್ಮ ಎಂಬ ಯುವತಿಯ ನೇತೃತ್ವದಲ್ಲಿ ಪ್ರಯಾಣಕ್ಕೆ ತಡೆಯೊಡ್ಡಿ ಮಾನವ ಕಳ್ಳ ಸಾಗಾಣಿಕೆ ಹಾಗೂ ಮತಾಂತರಗೊಳಿಸುವ ಆರೋಪವನ್ನು ಹೊರಿಸಿ ಹಾಗೂ ಅವರ ಮೇಲೆ ಭಾರತೀಯ ನ್ಯಾಯ ಸಂಹಿತೆ ಮತ್ತು ಧಾರ್ಮಿಕ ಮತಾಂತರ ಆರೋಪ ಹೊರಿಸಿರುವುದು ಹಾಗೂ ಬಂಧನಗೊಳಪಡಿಸಿರುವುದನ್ನು ಖಂಡಿಸಿ ಈ ನಿರಪರಾದಿ ಕ್ರೈಸ್ತ ಸನ್ಯಾಸಿನಿಯರ ಮೇಲೆ ಹೊರಿಸಿರುವ ಎಲ್ಲಾ ಆರೋಪಗಳನ್ನು ಹಿಂಪಡೆದುಕೊಂಡು ಕೂಡಲೇ ಬಂಧನದಿಂದ ಬಿಡುಗಡೆಗೊಳಿಸಬೇಕು ಹಾಗೂ ಅವರನ್ನು ಬಂಧಿಸಲು ಕಾರಣೀಕರ್ತರಾದ ದುಷ್ಕರ್ಮಿಗಳ ಮೇಲೆ ಸೂಕ್ತ ಕಾನೂನು ಕ್ರಮಕೈಗೊಂಡು ಈ ಧರ್ಮಭಗಿನಿಯರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿ ದಿನಾಂಕ 04-08-2025 ಸೋಮವಾರದಂದು ಅಪರಾಹ್ನ 4.00 ಗಂಟೆಗೆ ಮಂಗಳೂರು ಮಿನಿವಿಧಾನಸೌಧದ ಎದುರು ಕಥೊಲಿಕ್ ಸಭಾ ಮಂಗಳೂರು ಪ್ರದೇಶ್(ರಿ) ಇದರ ನೇತೃತ್ವದಲ್ಲಿ ಸಾರ್ವಜನಿಕ ಪ್ರತಿಭಟನಾ ಸಭೆಯನ್ನು ನಡೆಸಲಾಯಿತು. ಈ ಸಭೆಗೆ ಪಕ್ಷ, ಮತ, ಭೇದವನ್ನು ಮರೆತು ಮಾನವೀಯತೆಯನ್ನು ಹೊತ್ತಸುಮಾರು 6,000 ಮಂದಿ ಪ್ರತಿಭಟನಾಕಾರರು ಭಾಗವಹಿಸಿದ್ದರು.
ಜಿಲ್ಲಾಧಿಕಾರಿಗಳ ಮುಖಾಂತರ ಕೇಂದ್ರ ಸರಕಾರ ಹಾಗೂ ಸಂಬಂಧಪಟ್ಟ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂತೋಷ್ಡಿಸೋಜಾ- ಕೇಂದ್ರೀಯಅಧ್ಯಕ್ಷರು, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಪೌಲ್ ರೋಲ್ಫಿಡಿಕೋಸ್ತಾ-ಸಾರ್ವಜನಿಕ ಸಂಪರ್ಕಅಧಿಕಾರಿ, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ರೋಯ್ಕ್ಯಾಸ್ಟೆಲಿನೊ, ಸಾರ್ವಜನಿಕ ಸಂಪರ್ಕಅಧಿಕಾರಿ, ಮಂಗಳೂರು ಕ್ರೈಸ್ತಧರ್ಮಪ್ರಾಂತ್ಯ ಲಾರೆನ್ಸ್ಡಿಸೋಜಾ, ಉಪಾಧ್ಯಕ್ಷರು, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ವಿಲ್ಮಾ ಮೊಂತೇರೊ – ಪ್ರಧಾನ ಕಾರ್ಯದರ್ಶಿ, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಆಲ್ವಿನ್ಡಿಸೋಜಾ, ಪಾನೀರ್-ನಿಕಟಪೂರ್ವಅಧ್ಯಕ್ಷರು, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಸ್ಟೇನಿ ಲೋಬೊ, ಮಾಜಿಅಧ್ಯಕ್ಷರು, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಓಲ್ವಿನ್ರೊಡ್ರಿಗಸ್, ಸಹ ಕಾರ್ಯದರ್ಶಿ, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಉಪಸ್ಥಿತರಿದ್ದರು.
Catholic Sabha Mangalore Pradesh demands justice for nuns falsely accused in Chhattisgarh

Mangalore ; On 25th July 2025, in Chhattisgarh, two Malayali Catholic nuns from Kerala, Sister Vandana Francis and Sister Preeti Mary (Angamaliya) of the Sisters of Mary Immaculate of Assisi, Thalassery, were stopped and falsely accused while traveling with three girls aged around 18 to 19 years, from Narayanapura, Chhattisgarh. Of the three girls, one was being accompanied for domestic work, while the other two for nursing studies. However, under the leadership of a woman named Jyothi Sharma, the nuns were detained and accused of human trafficking and religious conversion. They were unjustly booked under the BharatiyaNyaya Sanhita and laws pertaining to religious conversion, and subsequently imprisoned. This incident has shocked the community. The innocent nuns allcharges should be widthdrawn and appropriate legal action should be taken on those responsible for such misdeed and justice should be provided. In response to this grave injustice, on Monday, 4th August 2025, at 4:00 PM, a massive protest was organized by the Catholic Sabha Mangalore Pradesh® in front of the Mangalore Mini VidhanaSoudha. The protest witnessed the participation of nearly 6,000 people, cutting across party lines, religious backgrounds, and divisions, united in the name of humanity and justice.
We have sent a request letter through the District Commissioner to the Central Government and respected Ministers in charge.
Attendees
Santhosh Dsouza – Central President, Catholic Sabha Mangalore Pradesh
Paul Rolphy Dcosta – Public Relation Officer, Catholic Sabha Mangalore Pradesh
Roy Castelino Public Relation Officer, Mangalore diocese
Lawrence Dsouza – Vice president, Catholic Sabha Mangalore Pradesh
Wilma Monteiro – General Secretary, Catholic Sabha Mangalore Pradesh.
Alwyn Dsouza Paneer- preceding president catholisabha mangalore Pradesh
Stany Lobo- Ex-president, catholic sabha Mangalore Pradesh
Alwyn Rodrigues – Assistant Secretary Catholic Sabha Mangalore Pradesh

