

ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಅಲ್ಪಸಂಖ್ಯಾತರಿಗೆ ಲಭ್ಯವಿರುವ ಸರ್ಕಾರಿ ಸೌಲಭ್ಯಗಳ ಕುರಿತು ಕಾರ್ಯಾಗಾರವನ್ನು ಆಯೋಜಿಸಿತು. ಉದ್ಘಾಟನಾ ಸಮಾರಂಭದಲ್ಲಿ, ಎಂಎಲ್ಸಿ, ಐವನ್ ಡಿಸೋಜಾ, ಕ್ರೈಸ್ತ ಸಮುದಾಯದ ಫಲಾನುಭವಿಗಳು ಅವರಿಗೆ ಸರ್ಕಾರ ಕೊಡುವ ಸೌಲಭ್ಯಗಳ ಮಾಹಿತಿಯನ್ನು ಪಡೆದು ಅದನ್ನು ಪಡೆಯಲು ಪ್ರಯತ್ನಿಸಬೇಕು ಎಂದರು ವಿಧಾನಪರಿಷತ್ ಸದಸ್ಯ ಶ್ರೀ ಐವನ್ ಡಿಸೋಜಾ. ಅಲ್ಪಸಂಖ್ಯಾತರಿಗೆ ಸರ್ಕಾರದ ವತಿಯಿಂದ ಲಭಿಸುವ ಸೌಲಭ್ಯಗಳ ಮಾಹಿತಿ ಕಾರ್ಯಾಗಾರವನ್ನು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ರಿ,ಇದರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದು ಅದನ್ನು ಉದ್ಘಾಟಿಸಿ ತಮ್ಮ ಸಂದೇಶವನ್ನು ನೀಡಿದರು. ಕಥೊಲಿಕ್ ಸಭೆಯ ಕೇಂದ್ರಿಯ ಸಮಿತಿಯ ಸಮುದಾಯ ಅಭಿವೃದ್ಧಿ ಸಂಚಾಲಕ ಶ್ರೀ ಗೊಡ್ವಿನ್ ಪಿಂಟೊ ತಮ್ಮ ಪ್ರಸ್ತಾವಿಕ ಮಾತಿನಲ್ಲಿ, ಕಥೊಲಿಕ್ ಸಭಾ ಸದಸ್ಯರು ಸರ್ಕಾರದ ವತಿಯಿಂದ ದೊರಕುವ ಸೌಲಭ್ಯಗಳನ್ನು ಪಡೆಯಲು ಸಮುದಾಯದ ಜನರಿಗೆ ಸಹಾಯ ಮಾಡಲು ಮುಂದೆ ಬರಬೇಕು ಎಂದರು.ನಮ್ಮ ಸಮುದಾಯಕ್ಕೆ ದೊರೆಯಬೇಕಾದ ಮಿಸಲು ಪ್ರಮಾಣದಲ್ಲಿ ಹೆಚ್ಚಳ ಮಾಡಲು ಶಾಸಕರು ಪ್ರಯತ್ನಿಸಬೇಕು ಎಂದು ವಿನಂತಿಸಿದರು.
ಕಥೊಲಿಕ್ ಸಭೆಗೆ ಐವತ್ತು ವರ್ಷ ತುಂಬುವ ಹೊತ್ತಿಗೆ ಶಾಶ್ವತ ಕಟ್ಟಡವನ್ನು ನಿರ್ಮಾಣ ಮಾಡಲು ಸಭೆಯು ಪ್ರಯತ್ನಿಸುತಿದ್ದು, ಅ ಪ್ರಯುಕ್ತ ಕಟ್ಟಡ ದೇಣಿಗೆ ಕೋಶವನ್ನು ಉದ್ಘಾಟಿಸಿದ ವಿಧಾನಪರಿಷತ್ ಸದಸ್ಯ ಶ್ರೀ ಐವನ್ ಡಿಸೋಜಾ ತಮ್ಮ ದೇಣಿಗೆಯನ್ನು ನೀಡಿದರು. ದೇಣಿಗೆ ಕೋಶದ ಕೀಲಿಗಳನ್ನು ಕಟ್ಟಡ ಸಮಿತಿ ಸಂಚಾಲಕ ಶ್ರೀ ವಾಲ್ಟರ್ ಡಿಸೋಜಾ, ಸಹ ಸಂಚಾಲಕ ಶ್ರೀ ಡೆನಿಸ್ ಡಿಸಿಲ್ವ ರುಚಿಗೆ ಹಸ್ತಾಂತರಿಸಿದರು.
ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಶ್ರೀ ನಜೀರ್ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಶ್ರೀ ಜಗದೀಶ್ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಶ್ರೀ ಸಂತೋಷ್ ಡಿಸೋಜಾ ಸ್ವಾಗತಿಸಿದರು.ಶ್ರೀಮತಿ ವಿಲ್ಮಾ ಮೊಂತೇರೊ ವಂದಿಸಿದರು. ಶ್ರೀ ಲಾರೆನ್ಸ್ ಕಾರ್ಯಕ್ರಮ ನಿರೂಪಿಸಿದರು.
Catholic Sabha Mangalore Region (R) – Workshop on government facilities available to minorities.

The Catholic Sabha Mangalore Pradesh (R) organized a workshop on government facilities available to minorities. During the inauguration, Sri Ivan Dsouza, MLC, emphasized the importance of Christians availing themselves of government facilities, stating, “Christians should come forward to visit government offices to avail government facilities provided by our government. Sadly, we show little interest in this and then blame our community.”
He further noted that unlike other minority communities, Christians are often unaware of government schemes. The state government of Karnataka is keen to provide financial assistance for education, health, business, and house construction.
Mr. Godwin Pinto, Samudaya Abhirudhi Convener of the Central Committee, highlighted the need for Catholic Sabha members to be aware of these schemes and disseminate information to beneficiaries. He requested Sri Ivan Dsouza to advocate for reservation in government jobs and works for the community.
The event included the inauguration of a donation box for the Golden Jubilee building fund, with Sri Ivan Dsouza contributing generously. He handed over the donation box key to Mr. Walter Dsouza, Convenor of the Building Committee, and Mr. Denis Dsilva, Joint Convenor.
Mr. Nazir from the Minority Department; and Mr. Jagadish from the Karnataka Minority Development Corporation, who provided information on available facilities.
Mr Santosh Dsouza welcomed the gathering, Mrs. Wilma Monteiro proposed the vote of thanks.
The program was well-coordinated, with Mr. Lawrence serving as the compere.






















