

ಮಂಗಳೂರು ; ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು, ಬಜ್ಜೋಡಿಯ ಸಂದೇಶ ಪ್ರತಿಷ್ಟಾನದಲ್ಲಿ 13, ಜುಲೈ 2025ರಂದು ಪ್ರಖ್ಯಾತ ಸಾಹಿತಿಗಳಾದ ಜೊ.ಸಾ.ಆಲ್ವಾರಿಸ್ರವರು ರಚಿಸಿದ ಕೊಂಕಣಿ ಭಾಷೆಯ ಕನ್ನಡ ಲಿಪಿಯ ಪ್ರಪ್ರಥಮ ಕಾದಂಬರಿ ಪ್ರಕಟವಾಗಿ 75 ವರ್ಷ ತುಂಬುವ ಸಂದರ್ಭದಲ್ಲಿ, ʼಆಂಜೆಲ್-75ʼ ಶೀರ್ಷಿಕೆಯಡಿ ಕಾರ್ಯಗಾರವನ್ನು ಹಮ್ಮಿಕೊಂಡಿದೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ವಹಿಸಿಕೊಳ್ಳಲಿದ್ದಾರೆ. ಡಾ| ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷರಾದ ಡಾ| ಗಣನಾಥ ಎಕ್ಕಾರ್ರವರು ಮುಖ್ಯ ಅತಿಥಿಯಾಗಿ, ಕೊಂಕಣಿ ನಾಟಕ ಸಭೆಯ ಅಧ್ಯಕ್ಷರಾದ ವಂ.ರೊಕಿ ಡಿಕುನ್ಹಾರವರು ಹಾಗೂ ದಿ.ಜೊ..ಸಾ. ಆಲ್ವಾರಿಸ್ರವರ ಧರ್ಮಪತ್ನಿ ಶ್ರೀಮತಿ ಮೋನಿಕಾ ಆಲ್ವಾರಿಸ್ರವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕೊಂಕಣಿಯ ಹಿರಿಯ ಸಾಹಿತಿಗಳಿಗೆ ಗೌರವ ನೀಡುವ ಈ ಕಾರ್ಯಕ್ರಮದಲ್ಲಿ ಕೊಂಕಣಿ ಸಾಹಿತಿಗಳು ಹಾಗೂ ಕೊಂಕಣಿ ಅಭಿಮಾನಿಗಳು ಭಾಗವಹಿಸಲು ಕೋರಲಾಗಿದೆ.


