

ಶ್ರೀನಿವಾಸಪುರ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯಿಂದ 4 ಜನ ಶಾಸಕರು ಕಾಂಗ್ರೇಸ್ ಪಕ್ಷದಿಂದ ಚುನಾಯಿತರಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸುತ್ತಿದೆ. ಜೆ.ಡಿ.ಎಸ್.ನ ಇಬ್ಬರು ಶಾಸಕರು ಗೆದಿದ್ದಾರೆ. ಲೋಕಸಭೆಯಲ್ಲಿ ಜೆ.ಡಿ.ಎಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಮತ್ತು ಜೆ.ಡಿ.ಎಸ್.ನ ವಿಧಾನ ಪರಿಷತ್ ಸದಸ್ಯರು ಇದ್ದಾರೆ ಆದರೂ ಸಹ ಜಿಲ್ಲೆಯು ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ ಎಂದು ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಪಿ.ಆರ್.ಸೂರ್ಯನಾರಾಯಣ ತಿಳಿಸಿದರು.
ಪಟ್ಟಣದ ಶಂಕರ ಮಠದ ಬಳಿ ಸಿಪಿಐ(ಎಂ) ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.
ಕೃಷಿ ಪ್ರಧಾನವಾದ ಕೋಲಾರ ಜಿಲ್ಲೆಯ ರೈತರು ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯುವುದರಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದ್ದರೂ ಕಳೆದ ಆರು ತಿಂಗಳಿಂದ ಟೊಮೊಟೋ ತರಕಾರಿಗಳಿಗೆ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ. ಈ ವರ್ಷ ಮಾವಿಗೂ ಬೆಲೆ ಇಲ್ಲದೆ ರೈತಾಪಿ ವರ್ಗ ಕಂಗೆಟ್ಟು ಬೀದಿಗೆ ಬಂದು ಹೋರಾಟ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಮುಗಿದರೂ ಮೂರು-ನಾಲ್ಕು ದಶಕಗಳಿಂದ ತಮ್ಮ ಭೂಮಿಯ ಹಕ್ಕಿಗಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ರೈತರಿಗೆ ಬಗರ್ಹಕ್ಕುಂ ಸಾಗುವಳಿ ಸಕ್ರಮ ಮಾಡಲಿಲ್ಲ.
ಇμÉ್ಟಲ್ಲಾ ಸಮಸ್ಯೆಗಳು ಜಿಲ್ಲೆಯ ಜನರನ್ನು ಬಾದಿಸುತ್ತಿದ್ದರು. ಆಡಳಿತರೂಡ ಕಾಂಗ್ರೆಸ್ ಪಕ್ಷದ ಶಾಸಕರು ಭಿನ್ನಾಭಿಪ್ರಾಯ, ಗುಂಪುಗಾರಿಕೆ ಹಾಗೂ ಒಳಜಗಳಗಳಲ್ಲಿ ಮುಳಗಿ ಅಭಿವೃದ್ಧಿಯ ಕೆಲಸಗಳಿಗೆ ತಿಲಾಂಜಲಿ ಇಟ್ಟು ಜನರು ಪ್ರಶ್ನೆಗಳನ್ನು ಮರೆತ್ತಿದ್ದಾರೆ. ವಿಶೇಷವಾಗಿ ಜಿಲ್ಲೆಯ ಜನರ ಸಮಸ್ಯೆಗಳನ್ನು ಮರೆತ್ತಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳ ಕಾರ್ಯವೈಖರಿಯ ಬಗ್ಗೆ ಸಿಪಿಐ(ಎಂ) ಪಕ್ಷ ಖಂಡಿಸುತ್ತಿದೆ ಎಂದರು.
ಸಿಪಿಐ(ಎಂ) ಪಕ್ಷದ ಕಾರ್ಯಕಾರಿ ಮಂಡಲಿ ಸದಸ್ಯರಾದ ಟಿ.ಎಂ.ವೆಂಕಟೇಶ್, ಪಿ.ಆರ್.ನವೀನ್ಕುಮಾರ್ ಇದ್ದರು.

