

ಶ್ರೀನಿವಾಸಪುರ : ಲ್ಯಾಪ್ಟಾಪ್ ಇರುವುದರಿಂದ ನಿಮ್ಮ ಕೆಲಸ ಕಾರ್ಯಗಳನ್ನ ಶೀಘ್ರವಾಗಿ ಮುಗಿಬಹುದು. ಇರುವ ಜಾಗದಲ್ಲಿಯೇ ಸಾರ್ವಜನಿಕರ ಕೆಲಸವನ್ನು ವಿಲೇವಾರಿ ಮಾಡುಬಹುದಾಗಿದೆ. ದಾಖಲೆಗಳಿಗೆ ಸಂಬಂದಿಸಿದಂತೆ ಜಟಿಲವಾದ ಸಮಸ್ಯೆಗಳನ್ನು ಸಾಧ್ಯವಾದಷ್ಟು , ಸುಲಭ ರೀತಿಯಲ್ಲಿ ಮಾಡುವ ವ್ಯವಸ್ಥೆ ಮಾಡಿಕೊಡಿ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಗ್ರಾಮ ಆಡಳಿತಗಾರರಿಗೆ ಸೂಚಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಗ್ರಾಮ ಆಡಳಿತಗಾರರಿಗೆ ಲ್ಯಾಪ್ಟ್ಯಾಪ್ಗಳನ್ನು ವಿತರಣೆ ಮಾಡಿ ಮಾತನಾಡಿದರು.
ಕ್ಷೇತ್ರದಲ್ಲಿ ಬಹುತೇಕ ಬಡ ಕುಟುಂಬಗಳ ಇದ್ದು, ರೈತಾಪಿ ವರ್ಗದವರ ಹಾಗು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಕಚೇರಿಗಳಿಗೆ ಅಲಿಸದೆ ಅತಿ ಶೀಘ್ರವಾಗಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡುವಂತೆ ಸೂಚಿಸಿದರು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ ಮಾತನಾಡಿ ತಾಲೂಕಿನ 22 ಗ್ರಾಮ ಆಡಳಿತ ಅಧಿಕಾರಿಗಳ ಪೈಕಿ 16 ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ಟಾಪ್ ವಿತರಣೆ ಮಾಡಿದ್ದು, ಉಳಿದವರಿಗೆ ಮುಂದಿನ ದಿನಗಳಲ್ಲಿ ವಿತರಿಸಲಾಗುವುದು ಎಂದರು.
ಆರ್ಐ ಗಳಾದ ಮುನಿರೆಡ್ಡಿ, ಗುರುರಾಜರಾವ್ ಹಾಗು ಗ್ರಾಮ ಆಡಳಿತಗಾರರು ಇದ್ದರು.

