

ಕುಂದಾಪುರ, ಜೂ.30; ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚಿನಲ್ಲಿ ಜೂನ್ 29 ರಂದು ಬಲಿಪೂಜೆ ಅರ್ಪಿಸುವ ಸಂದರ್ಭದಲ್ಲಿ ಆಚರಿಸುವ ದೇವಸ್ತುತಿ ಪ್ರಾರ್ಥನೆಗಳ ವಿಧಿವಿದಾನಗಳ ತರಬೇತಿ ಕಾರ್ಯಗಾರವು ನಡೆಯಿತು.
ಈ ಕಾರ್ಯಗಾರಕ್ಕೆ ಆಗಮಿಸಿದ ಮುಡುಬೆಳ್ಳೆಯ ಕರ್ನಾಟಕ ಪ್ರಾಂತೀಯ ಸೆಮಿನರಿ ‘ದಿವ್ಯಧಾಮ’ ದ ಅಧ್ಯಾತ್ಮಿಕ ನಿರ್ದೇಶಕರಾದ ವಂ।ದರ್ಮಗುರು ಬೊನಿಪಾಸ್ ಪಿಂಟೊ ಮೊದಲು ಪವಿತ್ರ ಸಭೆಯ ಮೊದಲ ಪೋಪ್ ಸಂತ ಪೆದ್ರು ಮತ್ತು ಪವಿತ್ರ ಸಭೆಯ ಮತ್ತೊಬ್ಬ ದಿಗಜ್ಜ ಸಂತ ಪಾವ್ಲ್ ಇವರ ಹಬ್ಬದ ಪವಿತ್ರ ಬಲಿದಾನವನ್ನು ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಅವರ ಜೊತೆ ಅರ್ಪಿಸಿ ಸಂತ ಪೆದ್ರು ಮತ್ತು ಸಂತ ಪಾವ್ಲ್ ಇವರು ಪವಿತ್ರ ಸಭೆಯ ಬಲವಾದ ಸ್ಥಂಭಗಳು ಎಂದು ಬಣ್ಣಿಸಿದರು. ತದ ನಂತರ ನಡೆದ ದೇವ ಸ್ತುತಿಯ ಕಾರ್ಯಾಗಾರವನ್ನು ನಡೆಸಿಕೊಟ್ಟು ಬಲಿದಾನದ ದೇವ ಸ್ತುತಿ ಎಂದರೇನು, ಅದರ ಮಹತ್ವಗಳನ್ನು ತಿಳಿಸಿದರು. ಎಷ್ಟು ವಿಭಾಗಳಿವೆ ಎಂದು ತಿಳಿಸಿ, ದೇವರ ವಾಕ್ಯ ವಾಚಿಸುವುದಲ್ಲ, ಅದನ್ನು ಭಕ್ತಿಕರಿಗೆ ಮನದಟ್ಟಾಗುವಂತೆ ಪ್ರಕಟಿಸಬೇಕು ಎಂದು ತಿಳಿಸಿ, ಬಲಿದಾನದ ವೇಳೆ ಸಲ್ಲಿಸುವ ಪ್ರಾರ್ಥನೆಗಳು, ಕೀರ್ತನೆಗಳು ಹಾಡುವ ವಿಧಾನಗಳನ್ನು ತಿಳಿಸಿ ಅದರ ಅಬ್ಯಾಸವನ್ನು ಮಾಡಿಸಿದರು.
ಪವರ್ ಪಾಂಯ್ಟ್ ಮೂಲಕ ಬಲಿದಾನದ ಸಂದರ್ಭ ಪ್ರಾರ್ಥನೆಗಳನ್ನು ಸಲ್ಲಿಸುವರು ಸಭ್ಯತೆ, ಶಿಸ್ತು, ಭಕ್ತಿಯಿಂದ ಕೂಡಿರಬೇಕು. ಅವರು ಧರಿಸುವ ವಸ್ತ್ರ ಶಿಸ್ತುಬದ್ದವಾಗಿರ ಬೇಕು, ಅಂಗಾಂಗ ಪ್ರದರ್ಶನ ಆಗುವಂತಹ, ಅಸಭ್ಯ ವಸ್ತ್ರಗಳನ್ನು ಧರಿಸಬಾರದೆಂದು ತಿಳಿಸಿದರು.
ಈ ದೇವ ಸ್ತುತಿಯ ತರಬೇತಿ ಕಾರ್ಯಗಾರವನ್ನು ಚರ್ಚಿನ ದೇವ ಸ್ತುತಿಯ ಆಯೋಗ ಹಮ್ಮಿಕೊಂಡಿತ್ತ. ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಸ್ವಾಗತಿಸಿದರು. ದೇವ ಸ್ತುತಿ ಆಯೋಗದ ಸಂಚಾಲಕಿ ವಿಕ್ಟೋರಿಯಾ ಡಿಸೋಜಾ, ಆಯೋಗದ ಸದಸ್ಯರು, ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷೆ, ಕಾರ್ಯದರ್ಶಿ, ಸರ್ವ ಆಯೋಗದ ಸಂಯೋಜಕಿ, ಧರ್ಮಭಗಿನಿಯರು, ವಾಳೆಯ ಗುರಿಕಾರರು, ಚರ್ಚ್ ಗಾಯನ ಮಂಡಳಿಯ ಸದಸ್ಯರು, ದೇವರ ವಾಕ್ಯ ಪ್ರಕಟಿಸುವರು, ಕೀರ್ತನೆಗಳನ್ನು ಹಾಡುವರು ಹಾಜರಿದ್ದು ಸುಮಾರು 180 ಜನರು ಈ ತರಬೇತಿಯ ಪ್ರಯೋಜನ ಪಡೆದರು.
























