

ಗಂಗೊಳ್ಳಿ ; ಕಥೊಲಿಕ್ ಸಭಾ ಉಡುಪಿ ಪ್ರದೇಶ್ ( ರಿ) ಗಂಗೊಳ್ಳಿ ಘಟಕದ ವತಿಯಿಂದ “ಶ್ರೀಸಾಮಾನ್ಯರ ದಿನಾಚರಣೆ”( Laity Day Celebration) ಯನ್ನು ರವಿವಾರ ಜೂನ್ 29 ರಂದು ಆಚರಿಸಲಾಯಿತು.
ಗಂಗೊಳ್ಳಿ ಕೊಸೆಸಾಂವ್ ಮಾತಾ ಚರ್ಚಿನ ಧರ್ಮಗುರುಗಳಾದ ವಂದನೀಯ ತೋಮಸ್ ರೋಶನ್ ಡಿಸೋಜರವರ ನೇತೃತ್ವದಲ್ಲಿ ದಿವ್ಯ ಬಲಿಪೂಜೆಯನ್ನು ಅರ್ಪಿಸಲಾಯಿತು. ದಿವ್ಯ ಬಲಿಪೂಜೆಯಲ್ಲಿ ಕಥೊಲಿಕ್ ಸಭೆಯ ಸದಸ್ಯರಾದ ಸೈಮನ್ ಡಿಸೋಜ, ಸೆಲಿನ್ ಲೋಬೊ, ಜಾನೆಟ್ ಡಾಯಸ್, ಗ್ಲೋರಿಯಾ ಡಿಸೋಜ, ಅಗಪಿತಾಸ್ ಫ್ರೆಂಕಿ ರೆಬೆರೊ, ವೆರೋನಿಕಾ ಲೋಬೊ ಹಾಗೂ ಶಲಿರಾ ರೆಬೆರೊ ವಾಚನಾ, ಗಾಯನ ಹಾಗೂ ಪ್ರಾರ್ಥನೆಗಳಲ್ಲಿ ಸಹಕರಿಸಿದರು.
ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಗಂಗೊಳ್ಳಿ ಘಟಕದ ಅಧ್ಯಕ್ಷರಾದ ಎಡ್ವರ್ಡ್ ಫೆರ್ನಾಂಡಿಸ್ ರವರು ಅಧ್ಯಕ್ಷತೆ ವಹಿಸಿದಂತಹ ಸಭಾಕಾರ್ಯಕ್ರಮದಲ್ಲಿ ಕುಂದಾಪುರದ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಜೋನ್ಸನ್ ಡಿ ಅಲ್ಮೇಡಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ” ಸಮಾಜದಲ್ಲಿ ನಾವು ಗುರುತಿಸುವಂತಹ ಸೇವೆಯನ್ನು ಉದ್ಯಮ, ಸಮಾಜಸೇವೆ ಹಾಗೂ ರಾಜಕೀಯದಲ್ಲಿ ನೀಡಬೇಕು. ಗಂಗೊಳ್ಳಿಯ ಕಥೊಲಿಕ್ ಸಭೆಯು ಹಿಂದಿನಿಂದ ಇಂದಿನವರೆಗೆ ಸಮಾಜಕ್ಕೆ ಬಹಳಷ್ಟು ನಾಯಕರನ್ನು ಹಾಗೂ ಸೇವೆಯನ್ನು ನೀಡಿದೆ. ಇಂತಹ ಸಂದರ್ಭದಲ್ಲಿ ತಮಗೆ ಜಿಲ್ಲಾ ಮಟ್ಟದಲ್ಲಿ ನಿಮ್ಮ ಸೇವೆಗೆ ಪ್ರಶಸ್ತಿ ಲಭಿಸಿರುವಂತಹುದು ಬಹಳ ಯೋಗ್ಯವಾಗಿದೆ” ಎ೦ದು ತಮ್ಮ ಸಂದೇಶದಲ್ಲಿ ನುಡಿದರು.
ಕಥೊಲಿಕ್ ಸಭಾ ಉಡುಪಿ ಪ್ರದೇಶ್ ( ರಿ) ಕೇಂದ್ರೀಯ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಗಂಗೊಳ್ಳಿ ಘಟಕದ ಮಾರ್ಗದರ್ಶಕರಾದ ಆಲ್ವಿನ್ ಕ್ವಾಡ್ರಸ್ ಮಾತನಾಡಿ ” ಸೇವೆ, ತ್ಯಾಗ ಹಾಗೂ ಪ್ರೀತಿಯಿಂದ ಮಾಡಿದ ಕಾರ್ಯಗಳನ್ನು ಎಲ್ಲರೂ ಮೆಚ್ಚುತ್ತಾರೆ, ಆ ಗುಣಗಳನ್ನು ನಾವು ಮೈಗೂಡಿಸಿಕೊಂಡು ಸಮಾಜಕ್ಕೆ ಸೇವೆ ಸಲ್ಲಿಸಿದಾಗ ನಮ್ಮ ಜೀವನ ಸಾರ್ಥಕ ವಾಗುತ್ತದೆ” ಎಂದರು. ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಧರ್ಮಗುರುಗಳಾದ ವಂದನೀಯ ತೋಮಸ್ ರೋಶನ್ ಡಿಸೋಜರವರು ಮಾತನಾಡಿ” ಕಷ್ಟದಲ್ಲಿರುವರಿಗೆ ಸಹಾಯ ಮಾಡುವಂತಹ ಗುಣಗಳು ಇಂತಹ ಸಂಘಟನೆಗಳಲ್ಲಿ ಸೇವೆ ಮಾಡಿದಾಗ ಬರುವಂತದು. ಉತ್ತಮ ನಾಯಕರುಗಳನ್ನು ಹೊಂದಿರುವಂತಹ ನಮ್ಮ ಗಂಗೊಳ್ಳಿ ಕಥೊಲಿಕ್ ಸಭೆಯು ಬಹಳಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸಿ , ತಮ್ಮ ಒಗ್ಗಟ್ಟಿನಿಂದ ಅವುಗಳನ್ನು ಯಶಸ್ವಿಗೊಳಿಸಿದೆ. ನಮ್ಮವರು ಮಾಡಿದಂತಹ ಕಾರ್ಯಕ್ರಮಗಳಿಗೆ ಅರ್ಹವಾಗಿಯೇ ಜಿಲ್ಲಾ ಮಟ್ಟದ ಪ್ರಶಸ್ತಿ ಲಭಿಸಿದೆ. ಮುಂದೆಯು ಈ ಸಂಘಟನೆಗೆ ನನ್ನ ಬೆಂಬಲ ಹಾಗೂ ಆಶೀರ್ವಾದವಿದೆಯೆಂದು ಶುಭ ಹಾರೈಸಿದರು”
ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದಂತಹ ಕಥೊಲಿಕ್ ಸ್ತ್ರಿ ಸಂಘಟನೆ ಉಡುಪಿ ಜಿಲ್ಲೆ ಹಾಗೂ ಸುಗಮ್ಯ ಮಹಿಳಾ ಒಕ್ಕೂಟದ ” ಮೊತಿಯಾಂ” ಪತ್ರದ ಸಂಚಾಲಕಿ ಹಾಗೂ ಸಹಸಂಪಾದಕಿಯಾದ ಪ್ರೀತಿ ಫೆರ್ನಾಂಡಿಸ್, ಗಂಗೊಳ್ಳಿ ಭಾರತೀಯ ಕಥೊಲಿಕ್ ಯುವ ಸಂಘಟನೆಯ ಅಧ್ಯಕ್ಷರಾದ ವಿನ್ಸಿಟಾ ಲೋಬೊ, ಗಂಗೊಳ್ಳಿ ಕಥೊಲಿಕ್ ಸ್ತ್ರಿ ಸಂಘಟನೆಯ ಅಧ್ಯಕ್ಷರಾದ ಅನಿತಾ ಫೆರ್ನಾಂಡಿಸ್, ಗಂಗೊಳ್ಳಿ ಸೆಕ್ಯೂಲರ್ ಪ್ರಾನ್ಸಿಸ್ಕನ್ ಸಭೆಯ ಅಧ್ಯಕ್ಷರಾದ ರೋಜಿ ಫೆರ್ನಾಂಡಿಸ್, ಗಂಗೊಳ್ಳಿ ವೈಸಿಎಸ್ ಸಂಘಟನೆಯ ಅಧ್ಯಕ್ಷರಾದ ಕ್ಯಾರಲ್ ರೆಬೆರೊ ಹಾಗೂ ಪವಿತ್ರ ಶಿಲುಬೆ ವಾಳೆಯ ಗುರಿಕಾರರಾದ ಐವನ್ ಕಾರ್ಡಿನ್ ರವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸಂಚಾಲಕರಾದ ಓವಿನ್ ರೆಬೆಲ್ಲೊರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಎಡ್ವರ್ಡ್ ಫೆರ್ನಾಂಡಿಸ್ ಸ್ವಾಗತಿಸಿದರೆ, ಆನ್ನಿ ಕ್ರಾಸ್ಟೊ 2024-25 ನೇ ವರ್ಷದಲ್ಲಿ ಮಾಡಿದ ಕಾರ್ಯಕ್ರಮಗಳ ವಿವರ ನೀಡಿದರು, ಕ್ಲೇರಾ ರೇಬೆರೊ ಮುಖ್ಯ ಅತಿಥಿಗಳ ಪರಿಚಯ ನೀಡಿದರೆ, ಘಟಕದ ಕಾರ್ಯದರ್ಶಿ ಸೈಮನ್ ಡಿಸೋಜ ಸನ್ಮಾನಿತರ ವಿವರ ನೀಡಿದರು. ರೆನಿಟಾ ಬಾರ್ನೆಸ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಜಾನೆಟ್ ಡಯಾಸ್ ಧನ್ಯವಾದ ನೀಡಿದರು. ಎಲ್ರೊಯ್ ಕಿರನ್ ಕ್ರಾಸ್ಟೊ, ಫೆಲಿಕ್ಸ್ ಫೆರ್ನಾಂಡಿಸ್, ಬಾಜಿಲ್ ಪಾಯಸ್, ರೋಶನ್ ಲೋಬೊ, ವಿಲ್ಸನ್ ರೆಬೆರೊ ಹಾಗೂ ಎಲೋಶಿಯಸ್ ಫೆರ್ನಾಂಡಿಸ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.












