

ಕುಂದಾಪುರ; ದಿನಾಂಕ 04-07-2025 ರ ಶುಕ್ರವಾರದಂದು ನಡೆಯಲಿರುವ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆ ಇಂದು 28 – 06 – 2025 ರಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನೆರವೇರಿತು.
ಈ ಸಭೆಯಲ್ಲಿ ಮಾಜಿ ಸಂಸದರು ಮಾಜಿ ಸಚಿವರಾದ ಶ್ರೀ ಜಯಪ್ರಕಾಶ್ ಹೆಗ್ಡೆ, ಕುಂದಾಪುರ ವಿಧಾನಸಭೆಯ ಕಾಂಗ್ರೆಸ್ ನಾಯಕರಾದ ದಿನೇಶ್ ಹೆಗ್ಡೆಯವರು, ಬ್ಲಾಕ್ ಅಧ್ಯಕ್ಷರಾದ ಶ್ರೀ ಹರಿಪ್ರಸಾದ್ ಶೆಟ್ಟಿ, ನಿಯೋಜಿತ ಅಧ್ಯಕ್ಷರಿಗೆ ಶುಭಾಶಯಗಳನ್ನು ತಿಳಿಸಿ, ಮಹಿಳೆಯರು ಪಕ್ಷವನ್ನು ಬಲಪಡಿಸುವ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಗೀತಾ ವಾಗ್ಲೆಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧಿಕಾರ ಸ್ವೀಕಾರ ಮಾಡಲಿರುವ ಶ್ರೀಮತಿ ಜ್ಯೋತಿ ಹೆಬ್ಬಾರ್ ಎಲ್ಲರನ್ನೂ ಜುಲೈ 4 ರಂದು ಉಡುಪಿ ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ನಡೆಯುವ ಪದಗ್ರಹಣ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿ, ತಾಲೂಕು ಕೆಡಿಪಿ ಸದಸ್ಯರಾದ ಜ್ಯೋತಿ ಪುತ್ರನ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಭೆಯಲ್ಲಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಚಂದ್ರಿಕಾ ಶೆಟ್ಟಿ, ಮಿನಾಕ್ಷಿ ಮಾದವ್, ಶಾಂತಿ ಪಿರೇರಾ, ಅನಿತಾ ಡಿಸೋಜ, ಸಂಧ್ಯಾ ತಿಲಕ್ ಹಾಗೂ ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರಾದ ವಾಣಿ ಆರ್ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ರೇವತಿ ಶೆಟ್ಟಿ, ಕುಂದಾಪುರ ದೇವಸ್ಥಾನ ಸಮಿತಿಯ ಸದಸ್ಯರಾದ ಗಿರಿಜಾ ಉದಯ್, ಪಂಚಾಯತ್ ಸದಸ್ಯರಾದ ಜಾನಕಿ ಬಿಲ್ಲವ, ಸವಿತಾ, ಜೆಸಿಂತಾ ಡಿಮೊಲ್ಲೊ ಹಾಗೂ ಪ್ರಭಾವತಿ ಶೆಟ್ಟಿ ಬೇಳೂರು, ಶಾಲೆಟ್ ರೆಬೆಲ್ಲೊ, ರಾಜೀವಿ, ಸುರೇಖಾ,, ಜಯ, ಮುತ್ತು, ಮೇಬಲ್ ಡಿಸೋಜ , ವೇಲಾ ಬ್ರಗಾಂಜ, ಮುಕಾಂಬಿಕಾ, ಶೋಭಾ, ಸುಶೀಲಾ, ಪುಷ್ಪಾ, ಲೀಲಾ, ಗಿರಿಜಾ ಶಂಕರ್ , ಲಲಿತಾ, ನಗರ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟೊ, ಕೆ. ವಿಜಯ್ ಪುತ್ರನ್ ಉಪಸ್ಥಿತರಿದ್ದರು.
ಕುಂದಾಪುರ ಬ್ಲಾಕ್ ಮಹಿಳಾ ಕಾಂಗ್ರೆಸ್ಸಿನ ಅಧ್ಯಕ್ಷರಾದ ಶ್ರೀಮತಿ ದೇವಕಿ ಸಣ್ಣಯ್ಯರವರು ಸ್ವಾಗತಿಸಿದರು. ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರಾದ ಆಶಾ ಕರ್ವಾಲ್ಲೊ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.









