ಕುಂದಾಪುರ : ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರವು ಕಮಲಶಿಲೆಯ ಮಾನಂಜೆಯ ಆಜ್ರಿ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3ಫೆಬ್ರವರಿಯಿಂದ 9ಫೆಬ್ರವರಿ 2025ರವರೆಗೆ ನಡೆಯಲಿದೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಯುದ್ದ ಫಾರ್ ಮೈ ಭಾರತ್ – ಯುಥ್ ಫಾರ್ ಡಿಜಿಟಲ್ ಲಿಟರಸಿ” ಎಂಬ ಶೀರ್ಷಿಕೆಯ ನೆಲೆಯಲ್ಲಿ ನಡೆಯಲಿರುವ ಈ ವಾರ್ಷಿಕ ಶಿಬಿರದಲ್ಲಿ ಶೈಕ್ಷಣಿಕ, ಆರೋಗ್ಯ, ಪರಿಸರ ಸಾಂಸ್ಕೃತಿಕ ಮತ್ತು ಮಾಹಿತಿಪೂರ್ಣ ಕಾರ್ಯಕ್ರಮಗಳು ನಡೆಯಲಿವೆ.
ದಿನಾಂಕ 3ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು ಉದ್ಘಾಟಕರಾಗಿ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ ಕಮಲಶಿಲೆ ಇಲ್ಲಿನ ಧರ್ಮದರ್ಶಿಗಳಾದ ಸಚ್ಚಿದಾನಂದ ಚಾತ್ರ ಆಗಮಿಸಲಿದ್ದಾರೆ.
ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ ಶಾಂತಾರಾಮ್ ಪ್ರಭು . ಬೈಂದೂರು ವಲಯದ ಶಿಕ್ಷಣಾಧಿಕಾರಿಗಳಾದ ನಾಗೇಶ್ ನಾಯಕ್ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಸತ್ಯನಾರಾಯಣ ಹತ್ವಾರ್, ಇಂದ್ರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಗೌರಿ ಬಾಯಿ, ಎಸ್.ಡಿ.ಎಮ್.ಸಿ ಅಧ್ಯಕ್ಷ ರಾಘವೇಂದ್ರ ಮಯ್ಯ, ಜೀವವಿಮಾ ಪ್ರತಿನಿಧಿ ರಾಜೀವ ಶೆಟ್ಟಿ, ಕಮಲಶಿಲೆ ದೇವಳದ ಅನುವಂಶಿಕ ಅರ್ಚಕರರಾದ ಕಮಲಶಿಲೆ ಶ್ರೀಧರ ಅಡಿಗ, ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಇದರ ಮಾಜಿ ಅಧ್ಯಕ್ಷ ಬಾಲಚಂದ್ರ ಭಟ್, ಅರುಣ್ ಕುಮಾರ್ ಕಮಲಶಿಲೆ ಇವರುಗಳು ಉಪಸ್ಥಿತರಿರುವರು. ಏಳು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ನಿತ್ಯವು ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.