HOLY ROSARY CHURCH, KUNDAPUR – 450 th JUBILEE SOUVENIR 2021

ಬೈಬಲ್ ಪ್ರದರ್ಶನ ಸಮಾರೋಪ “ಬೈಬಲ್ ಎಂದಿಗೂ ಖಾಲಿಯಾಗದನಿಧಿ” : ಶ್ರೇಷ್ಟಗುರು ವಂ. ಮ್ಯಾಕ್ಸಿಮ್ ನೊರೊನ್ಹಾ

ಮಂಗಳೂರು, ಜ 30: ಮಂಗಳೂರಿನ ಜೆಪ್ಪುವಿನ ಸಂತಅಂತೋನಿ ಆಶ್ರಮದಲ್ಲಿ ನಡೆದ ಮೂರು ದಿನಗಳ ಬೈಬಲ್ ಪ್ರದರ್ಶನ ಶನಿವಾರ ಮುಕ್ತಾಯಗೊಂಡಿತು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಟ ಗುರುವಂದನೀಯ ಮ್ಯಾಕ್ಸಿಮ್‍ಎಲ್. ನೊರೊನ್ಹಾ ಮಾತನಾಡಿ, “ಬೈಬಲ್ ಎಂದಿಗೂ ಅಕ್ಷಯ ಪಾತ್ರೆಯಂತೆ ಖಾಲಿಯಾಗದ ಸಂಪತ್ತು. ಇದು ಹೊಸತನ ಮತ್ತು ಜೀವ ನೀಡುವ ಪುಸ್ತಕವಾಗಿದೆ ಮತ್ತು ಯಾವುದೇ ಸಂದರ್ಭಕ್ಕೂ, ಕಾಲಕ್ಕೂ ಸಕಾಲವಾದುದು. ಬೈಬಲ್ ಅನೇಕರಿಗೆ ಸ್ಫೂರ್ತಿ ನೀಡಿದೆ, ಅನೇಕರ ಜೀವನವನ್ನು ಪರಿವರ್ತಿಸಿದೆ, ನಾಸ್ತಿಕರು ಆಸ್ತಿಕರಾಗಿದ್ದಾರೆ, ಏಕೆಂದರೆ ಇದು ದೇವರ ವಾಕ್ಯವಾಗಿದೆ” ಎಂದು ಹೇಳಿದರು.
ಪ್ರದರ್ಶನದ ಸಮರೋಪ ಕಾರ್ಯಕ್ರಮದಲ್ಲಿ, ಪ್ರಸ್ತುತ ಸಂವಹನ ವಿಧಾನಗಳನ್ನು ಬಳಸಿಕೊಂಡು ದೇವರ ವಾಕ್ಯವನ್ನು ಪ್ರಸರಿಸುವ ಗುರುಗಳ ಅನನ್ಯ ಮತ್ತು ನಿಸ್ವಾರ್ಥ ಕೊಡುಗೆಗಳನ್ನು ಗುರುತಿಸಿ,ಶ್ರೇಷ್ಟಗುರು ವಂದನೀಯ ಮ್ಯಾಕ್ಸಿಮ್ ನೊರೊನ್ಹಾ ಇವರಿಂದಶಾಲು ಹೊದಿಸಿ ಪುಷ್ಪಗುಚ್ಛಗಳನ್ನು ನೀಡಿ ಸನ್ಮಾನಿಸಲಾಯಿತು.
ವೆಬ್‍ಬ್ಲಾಗ್‍ನಲ್ಲಿ ಬೈಬಲ್ ಸಂದೇಶ ಮತ್ತು ಯೂಟ್ಯೂಬ್‍ ಚಾನೆಲ್‍ನಲ್ಲಿ ವಿಡಿಯೊಗಳ ಮೂಲಕ ದೇವರ ವಾಕ್ಯವನ್ನು ಪ್ರಸರಿಸುವ ಜೆಪ್ಪುವಿನ ಸಂತ ಜೋಸೆಫ್ ಸೆಮಿನರಿಯಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾದ ಹಾಗೂ ಜೆಪ್ಪುಇಗರ್ಜಿಯ ಧರ್ಮಗುರುಗಳಾದ ವಂದನೀಯ ಮ್ಯಾಕ್ಸಿಮ್‍ ಡಿಸೋಜಾರವರನ್ನು ಗೌರವಿಸಲಾಯಿತು.
ಪ್ರತಿದಿನ “ಶುಭ್‍ವರ್ತಮಾನ್” ಕಿರು ವೀಡಿಯೋ ಸರಣಿ ಮೂಲಕ ದೈನಂದಿನ ಸುವಾರ್ತೆ ವಾಚನಗಳ ಮೇಲೆ ಎರಡು ನಿಮಿಷಗಳ ಸಂದೇಶಗಳನ್ನು ನೀಡುವ, ಮತ್ತು ಹಳ್ಳಿಗಳಳ್ಳಿ ಬೈಬಲ್ ಆಧ್ಯಯನಕ್ಕೆ ತರಗತಿಗಳನ್ನು ಏರ್ಪಡಿಸಿದ ಮಂಗಳಜ್ಯೋತಿ ಕೇಂದ್ರದ ಸಹಾಯಕ ನಿರ್ದೇಶಕರಾದ, ಬೈಬಲ್ ಆಯೋಗದ ಕಾರ್ಯದರ್ಶಿ ಮತ್ತು ಸಂತ ಜೋಸೆಫ್ ಸೆಮಿನರಿಯಲ್ಲಿ ದೇವಶಾಸ್ತ್ರದ ಪ್ರಾಧ್ಯಾಪಕರಾದ ವಂದನೀಯಡಾ| ವಿನ್ಸೆಂಟ್ ಸಿಕ್ವೇರಾ ಅವರನ್ನು ಗೌರವಿಸಲಾಯಿತು.
ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ರಾಯ್‍ಕ್ಯಾಸ್ಟೆಲಿನೊ ಮತ್ತು ಆಶ್ರಮದ ಮಂಡಳಿಯ ಸದಸ್ಯರಾದಡಾ| ಜಾನ್ ಡಿಸಿಲ್ವಾ, ಅನೇಕ ಧರ್ಮಗುರುಗಳು , ಧಾರ್ಮಿಕ ಸಹೋದರಿಯರು, ವಿದ್ಯಾರ್ಥಿಗಳು ಮತ್ತು ಸಂತ ಅಂತೋನಿ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು.
ಎರಡನೆ ದಿನದ ಪ್ರದರ್ಶನಕ್ಕೆ ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಬಿಷಪ್‍ ಆತೀ ವಂದನೀಯಡಾ| ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಭೇಟಿ ನೀಡಿ ಪ್ರದರ್ಶನದ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದರು.
ಆಶ್ರಮದ ನಿರ್ದೇಶಕ ಮತ್ತು ಪ್ರದರ್ಶನದ ಸಂಚಾಲಕರಾದ ವಂದನೀಯ ಜೆ. ಬಿ.ಕ್ರಾಸ್ತಾ ಮಾತನಾಡಿ, “ಸಿಎಸ್‍ಐ ಚರ್ಚ್‍ನ ಸದಸ್ಯರು, ಧಾರ್ಮಿಕ ಸಹೋದರಿಯರು, ಉಡುಪಿ ಮತ್ತು ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರುಗಳು, ಸ್ಥಳೀಯ ಶಾಲಾ-ಕಾಲೇಜುಗಳ ಕ್ಯಾಥೋಲಿಕ್ ವಿದ್ಯಾರ್ಥಿಗಳು, ಗುರುಮಠದ ಸಹೋದರರು, ಕನ್ಯಾಮಠದ ಸಹೋದರಿಯರು ಸೇರಿದಂತೆ ಸುಮಾರು 2500 ಜನರು ಪ್ರದರ್ಶನಕ್ಕೆ ಭೇಟಿ ನೀಡಿದ್ದಾರೆ,” ಎಂದು ತಿಳಿಸಿದರು.
ಸೇಂಟ್‍ ಆಗ್ನೆಸ್‍ ಕಾನ್ವೆಂಟ್‍ನ ಸಿಸ್ಟರ್ ಜಾನೆಟ್ ಸಿಕ್ವೇರಾರವರು ತಮ್ಮಆನುಭವವನ್ನು ಹಂಚಿಕೊಳ್ಳುತ್ತಾ, “ಬೈಬಲ್ ಪ್ರದರ್ಶನದಿಂದ ನನಗೆ ಅದ್ಭುತಅನುಭವ ಸಿಕ್ಕಿದೆ. ಬೈಬಲಿನ ವಿವಿಧ ಭಾಷೆಗಳ ಆವೃತ್ತಿಗಳನ್ನು ನೋಡಿ, ನಾನು ಹೆಚ್ಚು ಅಧ್ಯಯನ ಮಾಡದಿರಬಹುದು, ಆದರೆ ಆ ಬೈಬಲ್‍ಗಳನ್ನು ಸ್ಪರ್ಶಿಸುವ ಒಂದು ಅನನ್ಯ ಅವಕಾಶ ನನಗೆ ಸಿಕ್ಕಿತು” ಎಂದು ಹೇಳಿದರು.
ಮೋರ್ಗಾನ್ಸ್‍ ಗೇಟ್‍ನ ಜೆನಿಟಾ ಡಿಸೋಜಾ ಮಾಧ್ಯಮಕ್ಕೆ ಪ್ರತಿಕ್ರಿಯಿಸುತ್ತಾ, “ಬೈಬಲ್ ಇಷ್ಟು ವಿಸ್ತಾರವಾಗಿದೆಎಂದು ನನಗೆ ಈವರೆಗೂ ತಿಳಿದಿರಲಿಲ್ಲ. ಈ ಪುಸ್ತಕಜ್ಞಾನ ಮತ್ತು ಬುದ್ಧಿವಂತಿಕೆಯ ದೊಡ್ಡ ನಿಧಿಯಾಗಿದೆ. ಇದು ಸ್ಫೂರ್ತಿಯ ಮೂಲವಾಗಿದೆ. ಚಿಕ್ಕ ಮಕ್ಕಳ ವರ್ಣಚಿತ್ರಗಳು ಸೇರಿದಂತೆ ಬೈಬಲ್ ವೈವಿಧ್ಯತೆಯ ಪ್ರಸ್ತುತಿಯಿಂದ ನಾನು ಪ್ರಭಾವಿತನಾಗಿದ್ದೇನೆ.” ಎಂದು ಹೇಳಿದರು.
ಮಂಗಳೂರು ಧರ್ಮಕ್ಷೇತ್ರದ ಬೈಬಲ್, ಸುವಾರ್ತ ಪ್ರಸಾರ, ಸಾಮಾಜಿಕ ಸಂಪರ್ಕ ಮತ್ತು ಕಿರುಕ್ರೈಸ್ತ ಸಮುದಾಯದ ಆಯೋಗಗಳ ಸಹಯೋಗದಲ್ಲಿ ಸಂತ ಅಂತೋನಿ ಆಶ್ರಮ, ಸಂತ ಜೋಸೆಫ್ ಸೆಮಿನರಿ, ಕಾಸ್ಸಿಯಾ, ಜೆಪ್ಪು ಮತ್ತು ವೆಲೆನ್ಸಿಯಾ ಚರ್ಚಗಳು ಜಂಟಿಯಾಗಿ ನಗರದ ಜೆಪ್ಪು, ಸಂತ ಅಂತೋನಿ ಆಶ್ರಮದಲ್ಲಿ ಜನವರಿ 26 ರಿಂದ 28 ರ ಸಂಜೆ ತನಕ ಆಯೋಜಿಸಿದ್ದ ಪ್ರದರ್ಶನವು ಯಶಸ್ವಿಯಾಗಿ ಪ್ರಸ್ತುತ ಪಡಿಸಲಾಯಿತು.
ಜೆಪ್ಪು, ಕಾಸ್ಸಿಯಾ ಮತ್ತು ವಾಲೆನ್ಸಿಯಾ ಇಗರ್ಜಿಗಳ ವತಿಯಿಂದ ಮೂರು ದಿನಗಳ ಕಾಲ ಸಂತ ಮಾರ್ಕನು ಬರೆದ ಯೇಸು ಕ್ರಿಸ್ತರ ಸುವಾರ್ತೆಯನ್ನು ಓದಿದರು.
ಪ್ರತಿದಿನ ಸಂಜೆ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ‘ಮೇರಿ ಮ್ಯಾಗ್ಡಲೀನ್’ (ಜೋಶಲ್‍ಡಿಸೋಜಾ), ‘ಜೋಸೆಫ್‍ ಆಫ್‍ ಅರಿಮಥಿಯಾ’ (ಸಹೋ. ಲಾಯ್ಡ್, ಜೆಪ್ಪು ಸೆಮಿಯನರಿ), ಮತ್ತು ‘ಬರಬ್ಬಾಸ್’ (ಅಲ್ವಿನ್ ಮಿರಾಂಡಾ, ಜೆಪ್ಪು) ಕುರಿತ ಬೈಬಲ್ ಏಕಪಾತ್ರ ಕಿರುನಾಟಕಗಳನ್ನು ಪ್ರಸ್ತುತಪಡಿಸಲಾಯಿತು.
ಬೈಬಲ್ ವಿಷಯಗಳ ಮೇಲೆ ವಿಶಿಷ್ಟವಾದ ಮ್ಯಾಜಿಕ್ ಪ್ರದರ್ಶನವನ್ನು ವಾಲೆನ್ಸಿಯಾದ ವಂದನೀಯ ಪಾವ್ಲ್ ಸೆಬಾಸ್ಟಿಯನ್ ಡಿಸೋಜಾ ಅವರು ಪ್ರಸ್ತುತ ಪಡಿಸಿದರು.ಜೊತೆಗೆ,ನಗರದ ಜೆಪ್ಪು ಹೋಲಿ ರೋಜರಿ ಕಾನ್ವೆಂಟ್, ಪಾನೀರ್ ‘ಸಮರ್ಪಣ್’ ಕಾನ್ವೆಂಟ್‍ ಆರ್ಸುಲಾ ಧರ್ಮಭಗಿನಿಯರಿಂದ ಹಾಗೂ ಮಂಗಳೂರಿನ ಆಶಾನಿಕೇತನ ಕಾನ್ವೆಂಟ್ ಮತ್ತು ಗ್ಲ್ಯಾಡ್ಸಮ್ ಹೋಮ್ ಮೈನರ್ ಸೆಮಿನರಿ ವಿದ್ಯಾರ್ಥಿಗಳಿಂದ ಬೈಬಲ್ ನೃತ್ಯ, ಬೈಬಲ್ ಹಾಡುಗಳು, ಹತ್ತು ಕನ್ಯೆಯರ ಸಾಮತಿ, ಬಿತ್ತುವವನ ಸಾಮತಿ, ಸ್ವರ್ಗದ ಸಾಮ್ರಾಜ್ಯದ ಸಾಮತಿ, ದಾರಿ ತಪ್ಪಿದ ಮಗ, ಒಳ್ಳೆಯ ಸಾಮಾರಿತನನ ಸಾಮತಿ ಮತ್ತು ಶಿಷ್ಯರ ಕರೆಯನ್ನು ತೋರ್ಪಡಿಸುವ ನೃತ್ಯ ನಾಟಕಗಳು ಪ್ರದರ್ಶನಗೊಂಡವು.
ಪ್ರದರ್ಶನವು 300 ವಿಧದ ಬೈಬಲ್‍ಗಳು, 150 ವರ್ಣಚಿತ್ರಗಳು, 20 ಬೈಬಲ್ ಮಾದರಿಗಳು, 30 ನಿಮಿಷಗಳ ಸಾಕ್ಷ್ಯಚಿತ್ರ ವೀಡಿಯೊ, ಪವರ್ ಪಾಯಿಂಟ್ ಪ್ರಸ್ತುತಿಗಳನ್ನು ಒಳಗೊಂಡಿತ್ತು.
ಪ್ರದರ್ಶನಕ್ಕೆ ಸಂಬಂದಿಸಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಬಹುಮಾನ ನೀಡಿ ಗೌರವಿಸಲಾಯಿತು.

ಬೀಜಾಡಿ ಮಿತ್ರ ಸಂಗಮಕ್ಕೆ ರಜತ ಮಹೋತ್ಸವದ ಸಂಭ್ರಮ
ಫೆ.3ರಂದು ನಾಡೋಜ ಡಾ.ಜಿ.ಶಂಕರ್ ಅವರಿಂದ ರಜತ ಮಹೋತ್ಸವ ಉದ್ಘಾಟನೆ


ಬೀಜಾಡಿ: ಜಿಲ್ಲಾ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ ಪುರಸ್ಕøತ ಬೀಜಾಡಿ ಗೋಪಾಡಿ ಮಿತ್ರ ಸಂಗಮದ ರಜತ ಮಹೋತ್ಸವವು ಫೆ.3ರಿಂದ ಫೆ.5 ತನಕ ಮೂರು ದಿನಗಳ ಕಾಲ ಬೀಜಾಡಿ ಮಿತ್ರಸೌಧದ ವಠಾರದಲ್ಲಿ ಸಂಭ್ರಮದಿಂದ ಜರುಗಲಿದೆ.
25 ಸಾರ್ಥಕ ವಸಂತಗಳ ಸಂಭ್ರಮಾಚರಣೆ “ರಜತಪಥ” ನೆರಳು-ಬೆಳಕಿನ ಸಹಯಾನವನ್ನು ಫೆ.3ರಂದು ಶುಕ್ರವಾರ ಬೆಳಿಗ್ಗೆ 10.30ಕ್ಕೆ ನಾಡೋಜ ಡಾ.ಜಿ.ಶಂಕರ್ ಉದ್ಘಾಟಿಸಲಿದ್ದು, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ರಜತ ಮಹೋತ್ಸವದ ನೆನಪಿಗಾಗಿ ಸ್ವಉದ್ಯೋಗಕ್ಕಾಗಿ ಗೋ(ದನ) ಒಂದನ್ನು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿತರಣೆ ಮಾಡಲಿದ್ದಾರೆ. ರಾಜ್ಯ ಆಹಾರ ನಿಗಮ ಉಪಾಧ್ಯಕ್ಷ ಕಿರಣ್‍ಕುಮಾರ್ ಕೊಡ್ಗಿ ಸಂಸ್ಥೆಯ ವೆಬ್‍ಸೈಟ್ ಲೋಕಾರ್ಪಣೆಗೊಳಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಂಸ್ಥೆಯ ಆರಾಧ್ಯ ದೇವರಾದ ಮಠದಕೆರೆ ಶ್ರೀ ಗೋಪಾಲಕೃಷ್ಣ ದೇವರಿಗೆ ಬೆಳ್ಳಿಯ ಕವಚ ಮತ್ತು ಪ್ರಭಾವಳಿ ಸಮರ್ಪಣೆ ನಡೆಯಲಿದೆ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಗಾಯಕರಾದ ಸುಷ್ಮಾ ಆಚಾರ್ಯ, ಮಾಧವ ಬೀಜಾಡಿ ಇವರಿಂದ ಸಂಗೀತ ಸುಧೆ ನಡೆಯಲಿದೆ.
ಫೆ.4ರಂದು ಶನಿವಾರ ಸಂಜೆ 6.30ಕ್ಕೆ ನಡೆಯುವ 2ನೇ ದಿನ ಸಮಾರಂಭದಲ್ಲಿ 25 ಮಂದಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 25 ಮಂದಿ ಸಾಧಕರಿಗೆ ಸನ್ಮಾನ, ರಜತಪಥ ಸ್ಮರಣ ಸಂಚಿಕೆ ಬಿಡುಗಡೆ, ವಿಕಲಚೇತನರಿಗೆ ಗಾಲಿಕುರ್ಚಿ ವಿತರಣೆ ನಡೆಯಲಿದ್ದು, ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ, ಮಾಜಿ ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ, ಬರಮಸಾಗರ ಡಿ.ವಿ.ಎಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಪ್ರದೀಪ್ ಡಿವಿಎಸ್, ಉದ್ಯಮಿಗಳಾದ ಗೋಪಾಡಿ ಶ್ರೀನಿವಾಸ ರಾವ್, ಸುಗ್ಗಿ ಸುಧಾಕರ ಶೆಟ್ಟಿ, ಪ್ರಗತಿಪರ ಕೃಷಿಕರು ರಾಮಕೃಷ್ಣ ಬಾಯರಿ ಮೊದಲಾದವರು ಆಗಮಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕೋಟ ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ ಸಿ.ಕುಂದರ್ ವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀಜಾಡಿ ಮೂಡು ಮತ್ತು ಅಂಗನವಾಡಿ ಪುಟಾಣಿಗಳಿಂದ ವಿವಿಧ ವಿನೋದಾವಳಿ ಹಾಗೂ ಉಡುಪಿಯ ಅಭಿನಯ ಕಲಾವಿದರಿಂದ ನಾಟಕ ಶಾಂಭವಿ ಜರುಗಲಿದೆ.
ಫೆ.5ರಂದು ಸಂಜೆ 6.30ಕ್ಕೆ ರಜತ ಮಹೋತ್ಸವ ಸಮರೋಪ, ಅಶಕ್ತರಿಗೆ ಸಹಾಯಧನ ವಿತರಣೆ, ಸ್ವ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ, ಊರ ಗೌರವದ ನಮ್ಮೂರ ಪ್ರಶಸ್ತಿ ಪ್ರದಾನ, ಸಾಧಕ ಸಂಸ್ಥೆಗಳಿಗೆ ಪುರಸ್ಕಾರ, ಸಂಸ್ಥೆಯ 26ನೇ ವಾರ್ಷಿಕೋತ್ಸವ ಜರುಗಲಿದ್ದು, ಸಚಿವರಾದ ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಆಗಮಿಸಲಿದ್ದಾರೆ.
ಅಧ್ಯಕ್ಷತೆಯನ್ನು ಕೋಟೇಶ್ವರ ಶ್ರೀ ಕೋಟಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಸುರೇಶ್ ಬೆಟ್ಟಿನ್ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಹೋಟೆಲ್ ಉದ್ಯಮಿಗಳಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರ, ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಕೋಟೇಶ್ವರದ ವೈದ್ಯ ಡಾ.ಶ್ರೀಪಾದ ಹೆಗ್ಡೆ ಅವರಿಗೆ ಊರ ಗೌರವದ ನಮ್ಮೂರ ಪ್ರಶಸ್ತಿ ಪ್ರದಾನ ನಡೆಯಲಿದೆ. ಅಲ್ಲದೇ
ಶ್ರೀ ರಾಮ ಭಜನಾ ಮಂಡಳಿ, ಬೀಜಾಡಿ-ಗೋಪಾಡಿ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ಹೆಲ್ಪಿಂಗ್‍ಹ್ಯಾಂಡ್ ಕುಂದಾಪುರ ಈ ಮೂರು ಸಾಧಕ ಸಂಸ್ಥೆಗಳಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ಬೀಜಾಡಿ ಮೂಡು ಇಲ್ಲಿನ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು, ಕೆ.ನವೀನಚಂದ್ರ ಕೊಪ್ಪ ನೇತ್ವತ್ವದ ಶಿವಾನಿ ಮ್ಯೂಸಿಕಲ್ಸ್ ಆರ್ಕೆಸ್ಟ್ರಾ ಇವರಿಂದ ಅದ್ದೂರಿ ಯ
ಸಂಗೀತ ರಸಮಂಜರಿ ನಡೆಯಲಿದೆ.
ಬಾಕ್ಸ್ ಮಾಡಿ ಹಾಕಿ
1997ರಲ್ಲಿ ಬೀಜಾಡಿ ಪರಿಸರದಲ್ಲಿ ಸುಮ್ಮನೆ ಸರಿದು ಹೋಗುತ್ತಿದ್ದ ಸಂಜೆಗಳನ್ನು ಫಲಪ್ರದಗೊಳಿಸಬೇನ್ನುವ ಉದ್ದೇಶದಿಂದ ಬೀಜಾಡಿ-ಗೋಪಾಡಿಯಲ್ಲಿ ಆಟವಾಡುತ್ತಾ ಕಳೆಯುತ್ತಿದ್ದ ಸಮಾನ ಮನಸ್ಕರ ತರುಣ ಮನಸ್ಸುಗಳು ಮಿತ್ರ ಸಂಗಮವಾಗಿ ರೂಪಗೊಂಡ ಬೆರಗಿಗೆ ಇದೀಗ 25 ವರ್ಷಗಳು ತುಂಬಿದೆ! ಸಾಮಾಜಿಕ, ಸಾಂಸ್ಕøತಿಕ, ಶೈಕ್ಷಣಿಕ, ಧಾರ್ಮಿಕ ಸಂಗತಿಗಳಿಂದಾಗಿ ಪರಿಸರದ ಜನಮಾನಸದಲ್ಲಿ ಜಾಗ ಪಡೆದು ತನ್ನ ಧ್ಯೇಯೋದ್ದೇಶಗಳಿಗೆ ಕಟಿಬದ್ದವಾಗಿ ಈ ಸತ್ಪರತೆಯನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಉತ್ಸುಕವಾಗಿದೆ. ಸಂಸ್ಥೆಯ ದಶಮಾನೋತ್ಸವದ ಸಂದರ್ಭದಲ್ಲಿ ಸುಂದರವಾದ ದಶಮಾನೋತ್ಸವ ಭವನ ಮಿತ್ರಸೌಧವನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಲಾಗಿದ್ದು, ಇದೀಗ ಮಿತ್ರಸೌಧ ಊರಿನ ಸಾಂಸ್ಕøತಿಕ ಕೇಂದ್ರವಾಗಿ ರೂಪಗೊಂಡಿರುವುದು ನಮಗೆ ಹೆಮ್ಮೆ ಎನಿಸಿದೆ. ಜಿಲ್ಲಾ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ, ಜಿಲ್ಲಾ ಕಸಾಪದಿಂದ ವಿಶೇಷ ಸನ್ಮಾನ ಸಹಿತ ಅನೇಕ ಪ್ರಶಸ್ತಿಗಳು ಸಂಸ್ಥೆಗೆ ಸಂದಿದೆ. ಬೃಹತ್ ಆಧರ್ ಕಾರ್ಡ್ ಅಭಿಯಾನ, ಆರೋಗ್ಯ ಶಿಬಿರ ಸಹಿತ ವರ್ಷಪೂರ್ತಿ ಸಮಾಜಪರ ಕಾರ್ಯಕ್ರಮಗಳನ್ನು ಸಂಘಟಿಸಿ ಸೈ ಎನಿಸಿಕೊಂಡ ಸಂಸ್ಥೆಯಾಗಿದ್ದು, ಇದೀಗ ಸಂಸ್ಥೆ ಎರಡೂವರೆ ದಶಕಗಳನ್ನು ಹಾದು ಹೋದ ಹಾದಿಯ ಸಾರ್ಥಕತೆಯನ್ನು ಅರ್ಥಪೂರ್ಣವಾಗಿ ಸಂಭ್ರಮಿಸುವರೆ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿದ್ದು, ಎಲ್ಲರ ಸಹಕಾರ ಬಯಸಿದೆ. ಈಗ ಮಿತ್ರ ಸಂಗಮದ ಗೌರವಾಧ್ಯಕ್ಷರಾಗಿ ಬಿ.ವಾದಿರಾಜ ಹೆಬ್ಬಾರ್, ಅಧ್ಯಕ್ಷರಾಗಿ ಚಂದ್ರಶೇಖರ ಬೀಜಾಡಿ, ಉಪಾಧ್ಯಕ್ಷ ನಾಗರಾಜ ಬೀಜಾಡಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಆಚಾರ್ಯ ಬೀಜಾಡಿ,ಜೊತೆ ಕಾರ್ಯದರ್ಶಿ ಪ್ರದೀಪ್ ದೇವಾಡಿಗ, ಕೋಶಾಧಿಕಾರಿ ರಾಜೇಶ್ ಆಚಾರ್ಯ ಗೋಪಾಡಿ, ಹಾಗೂ ರಜತ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾಗಿ ಶಂಕರನಾರಾಯಣ ಬಾಯರಿ, ಗೌರವಾಧ್ಯಕ್ಷರಾಗಿ ವಿಶ್ವನಾಥ ಹೆಗ್ಡೆ, ಅಧ್ಯಕ್ಷರಾಗಿ ದೀಪಾನಂದ ಉಪಾಧ್ಯ, ಉಪಾಧ್ಯಕ್ಷರಾಗಿ ಅನುಪಕುಮಾರ್ ಬಿ.ಆರ್, ಪ್ರಧಾನ ಕಾರ್ಯದರ್ಶಿ ಚಂದ್ರ ಬಿ.ಎನ್, ಕೋಶಾಧಿಕಾಧಿ ಬಿ.ಜಿ.ನಾಗರಾಜ ಕಾರ್ಯನಿರ್ವಹಿಸುತ್ತಿದ್ದಾರೆ.

Golden Jubilee Celebration of Religous life of Sr Benignus BS

January 28th 2023 the Golden Jubilee of Religious Profession of Sr Benignus BS belonging to St Joseph’s Convent, Shubadha, Suralpady was celebrated at Ozanam Home for the Aged, Santhekatte, Kallianpur. The thanksgiving Eucharistic Celebration was held at 11.00am. it was officiated by Rev Fr Valerian Mendonca the Rector of Milagres Cathedral, Kallianpur and co-officiated by Rev Fr Charles Menezes, Rev Fr Elias Martis, Rev Fr Patrick  and Rev Fr Aloysius Lewis. In his homily Fr Charles Menezes highlighted the faith response of Sr Benignus to commit herself to God through Religious life. He appreciated her committed life of 50 years in the service of the Lord and His people in different parts of India and Africa.

After the Mass there was felicitation programme held in the Ozanam Campus. Mr Charles Gomes, the nephew of Sr Benignus welcomed the guests and the gathered members on the occasion. Along with Sr Benignus, Mr Thomas Aranha, her brother, Rev Fr Valerian Mendonca, Sr Herita Monthi BS, the Superior of St Joseph’s Convent, Shubadha, Suralpady were present on the dais. Sr Benignus carved the Jubilee cake. She was felicitated with greeting song by St Joseph’s Community members. Later she was honoured with shawl and garland along with citation. Mr Jerald Aranha the nephew of Sr Benignus shared the reminiscences of her life in the family. Sr Anna Maria BS acknowledged the compassionate services of Sr Benignus in Bethany Family and her compassionate service towards humanity. Rev Fr Valerian Mendonca applauded her notable service in the Church and int he Society. He acknowledged her accompaniment at Ozanam Old age home with the inmates. At the outset the programme began with Prayer dance by Sharal Lobo. The programme was winded with the grateful note by the Jubilarian appreciating the role played by the parents, family members and the members of the Congregation in shaping her life. She also thanked all the members responsible to hold the day’s programme. It was followed by fellowship meal arranged by the family. Her family members, friends, Bethany Sisters and the inmates of Ozanam Old Age Home graced the occasion.

Report by; Sr Anna Maria BS, St Joseph’s Convent, Shubadha, Suralpady

ಕುಂದಾಪುರದ ಆರ್. ಎನ್. ಶೆಟ್ಟಿ‌ ಪದವಿ ಪೂರ್ವ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಣೆ

ಕುಂದಾಪುರ: ‘ರಾಷ್ಟ್ರದಲ್ಲಿ ಆಗಬೇಕಾದ ಇನ್ನೂ ಹೆಚ್ಚಿನ ಸಾಧನೆಗೆ, ಅಭಿವೃದ್ಧಿಗೆ ಅಗತ್ಯವಿದ್ದಾಗ ಪ್ರತಿಯೊಬ್ಬರೂ ತಮ್ಮಿಂದಾದ ಸೇವೆ, ಕೊಡುಗೆಗಳನ್ನು ನೀಡಬೇಕು. ಆ ಮೂಲಕ ನಾವು ನಿಜವಾದ ಅರ್ಥದಲ್ಲಿ ಒಳ್ಳೆಯ ನಾಗರೀಕರಾಗಬೇಕು’ ಎಂದು ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಗಣರಾಜ್ಯೋತ್ಸವ‌ ದಿನಾಚರಣೆಯಲ್ಲಿ ಧ್ವಜಾರೋಹಣವನ್ನು ನೆರವೇರಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಕರೆ ನೀಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ‌.ಬಿ ಯವರು ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ರಾಮ್ ಶೆಟ್ಟಿಯವರು ಧ್ವಜಾರೋಹಣ ಕಾರ್ಯಕ್ರಮವನ್ನು ನಿರ್ವಹಿಸಿದರು. ಹಿಂದಿ ವಿಭಾಗ ಮುಖ್ಯಸ್ಥೆಯಾದ ಶ್ರೀಮತಿ ಜಯಶೀಲಾ ಪೈಯವರು ವಂದನಾರ್ಪಣೆಗೈದರು.  

ದಿಂಬಾಲ:ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಶ್ರೀದೇವಿ, ಭೂದೇವಿ ಸಮೇತ ವೆಂಕಟರಮಣಸ್ವಾಮಿ ನೂತನ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ

ಶ್ರೀನಿವಾಸಪುರ: ದಿಂಬಾಲ ಗ್ರಾಮದ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಗುರುವಾರ ಶ್ರೀದೇವಿ, ಭೂದೇವಿ ಸಮೇತ ವೆಂಕಟರಮಣಸ್ವಾಮಿ ನೂತನ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಏರ್ಪಡಿಸಲಾಗಿತ್ತು.
ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಹಲವಾರು ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸ್ಥಳೀಯ ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ದೇವರ ದರ್ಶನ ಪಡೆದರು. ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಿಸಲಾಗಿತ್ತು. ಸಾಮೂಹಿಕ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಡಾ. ವೈ.ವಿ.ವೆಂಕಟಾಚಲ ಹರಾಜಿನಲ್ಲಿ ದೇವರ ಲಾಡು ಖರೀದಿಸಿ ವಿತರಿಸಿದರು.
ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಶಾಸಕ ಕೆ.ಆರ್.ರಮೇಶ್ ಕುಮಾರ್ ಮತ್ತಿತರ ಮುಖಂಡರು ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು.

ಶಾಂತಿಯುತ ಸಹಬಾಳ್ವೆಗೆ ಈ ನೆಲದ ಕಾನೂನು ಪಾಲಿಸಬೇಕು : ತಹಶೀಲ್ದಾರ್ ಶಿರಿನ್ ತಾಜ್

ಶ್ರೀನಿವಾಸಪುರ: ಶಾಂತಿಯುತ ಸಹಬಾಳ್ವೆಗೆ ಈ ನೆಲದ ಕಾನೂನು ಪಾಲಿಸಬೇಕು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ಏರ್ಪಡಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಡಾ. ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿ ಹಾಗೂ ಪರಿಶ್ರಮದ ಫಲವಾಗಿ ದೇಶಕ್ಕೆ ಸಶಕ್ತ ಹಾಗೂ ಸರ್ವಮಾನ್ಯ ಸಂವಿಧಾನ ದೊರೆತಿದೆ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆಯಿಂದಾಗಿ ಮಾದರಿ ಆಡಳಿತ ವ್ಯವಸ್ಥೆ ರೂಪಗೊಂಡಿದೆ. ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಸಹಾಯಕವಾಗಿದೆ ಎಂದು ಹೇಳಿದರು.
ಶಾಸಕ ಕೆ.ಆರ್.ರಮೇಶ್ ಕುಮಾರ್ ಗಣರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿದರು. ಧ್ವಜ ವಂದನೆ ಸ್ವೀಕರಿಸಿದರು.
ತಾಲ್ಲೂಕಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಪತ್ನಿಯರಾದ ವನಜಾಕ್ಷಮ್ಮ, ಲಕ್ಷ್ಮಮ್ಮ, ಪಾಪಮ್ಮ, ಕ್ರಿಷ್ಣಮ್ಮ ಅವರನ್ನು ಸನ್ಮಾನಿಸಲಾಯಿತು. ಕಳೆದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ್ದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಪಥ ಸಂಚಲನ ಏರ್ಪಡಿಸಲಾಗಿತ್ತು. ಶಾಲಾ ಕಾಲೇಜು ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕøತಿ ಕಾರ್ಯಕ್ರಮ ನಡೆಸಿಕೊಟ್ಟರು.
ಉಪ ತಹಶೀಲ್ದಾರ್ ಕೆ.ಸಿ.ಜಯರಾಂ, ಶಿರಸ್ತೇದಾರರಾದ ಮನೋಹರ ಮಾನೆ, ಬಲರಾಮಚಂದ್ರೇಗೌಡ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ಎಪಿಎಂಸಿ ಕಾರ್ಯದರ್ಶಿ ಉಮಾ, ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್, ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಕಂದಾಯ ಅಧಿಕಾರಿ ನಾಗರಾಜ್, ಉಪ ಪ್ರಾಂಶುಪಾಲ ಶ್ರೀಧರ್, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಮಂಜುನಾಥರೆಡ್ಡಿ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸನ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಜಿ.ಮಂಜುನಾಥ್, ಪೊಲೀಸ್ ಇನ್ಸ್‍ಪೆಕ್ಟರ್ ಜೆ.ಸಿ.ನಾರಾಯಣಸ್ವಾಮಿ, ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಎ.ಈಶ್ವರ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜ್, ವಿವಿಧ ಇಲಾಖೆ ಅಧಿಕಾರಿಗಳಾದ ರಾಮಪ್ಪ, ಮಂಜುನಾಥ್, ಸುಲೋಚನ, ವಸಂತ, ಸುಬ್ರಮಣಿ, ವೆಂಕಟರಮಣಪ್ಪ ಇದ್ದರು.

Conference of Catholic Bishops of India “Spread the Message of Love” Urges Cardinal: Antonio LuisTagle/ಭಾರತದ ಕ್ಯಾಥೋಲಿಕ್ ಬಿಷಪ್‌ಗಳ ಸಮ್ಮೇಳನ “ಪ್ರೀತಿಯ ಸಂದೇಶವನ್ನು ಹರಡಿ” ಕಾರ್ಡಿನಲ್ ಆಂಟೋನಿಯೊ ಲೂಯಿಸ್ ಒತ್ತಾಯ

Bangalore 25 January 2023 (CCBI): Inaugurating the 34th Plenary Assembly of the Conference of Catholic Bishops of India (CCBI) of the Latin Church, in Bangalore on Tuesday, 24 January 2023, His Eminence Antonio Luis Cardinal Tagle, the Pro-Prefect of the Dicastery for Evangelization, exhorted the Bishops in India to promote the message of love.

Cardinal Tagle encouraged the Bishops to tell the story of love in order to promote communion and participation in the Church and the society. He reminded that it is the duty of each person to transform our society into a peaceful society through the message of love.

His Eminence Filipe Neri Cardinal Ferrão, the President of the CCBI and the Archbishop of Goa and Daman, presided over the inaugural function. He highlighted the beautiful diversity of India in his presidential address. He said that “Our country is a loom holding diverse threads of religions, spiritualities, cultures, traditions, languages and social strata that blend together to form a complex and beautiful tapestry. Alongside a profound spirituality, social and economic disparities deeply fragment the fabric of this nation.”

The 34th Plenary Assembly began with solemn Eucharistic Celebration presided over by His Eminence Cardinal Antonio Tagle. His Eminence Filipe Neri Ferrão, the President, CCBI, His Excellency Leopoldo Girelli, Apostolic Nuncio to India and Nepal, His Eminence Oswald Cardinal Gracias, His Eminence Anthony Poola, Archbishop George Antonysamy, Vice President CCBI, Archbishop Anil Couto, Secretary General, CCBI, Archbishop Peter Machado of Bangalore and Rev. Dr. Stephen Alathara, Deputy Secretary General of the CCBI were the main concelebrants. More than 130 Bishops and 200 priests concelebrated the inaugural Holy Mass.

The inaugural meeting began with the prayer to the Holy Spirit by chanting the traditional hymn ‘Veni Creator Spiritus’. Then the dignitaries lighted the traditional Indian lamp as a symbolic sign of the beginning of the Assembly, while the choir chanted Shanti Mantra (asato mā sadgamaya – Mantra of Peace).

Most Rev. Peter Machado welcomed the gathering. Archbishop Leopoldo Girelli delivered the benedictory message. The message of His Holiness Pope Francis was read by Archbishop George Antonysamy.The annual report of the CCBI was presented by Most Rev. Anil Couto, Secretary General, CCBI and the Archbishop of Delhi. Rev. Dr. Paul Parathazham, Director of St. John’s,provided some relevant information about the accommodation and other facilities.Rev. Dr. Stephen Alathara, the Deputy Secretary General of the CCBI, proposed the vote of thanks. The inaugural session concluded with the prayer led by His Eminence Anthony Cardinal Poola, Archbishop of Hyderabad.

His Eminence Antonio Cardinal Tagle was felicitated as it was the first time he participated at the Plenary Assembly of the CCBI. Abp. Anil Couto honoured him with a Kashmiri shawl, Abp. George Antonysamy garlanded him with the traditional sandal wood garland, a wooden statute of St. Anthony was given to him by Abp. Leopoldo Girelli and the painting of the Indian saints was gifted to him by Cardinal Filipe Neri Ferrão.

The recently appointed Bishop-Designate Sebastião Mascarenhas, S.F.X., former Superior General of the Missionaries of St. Francis Xavier (Pilar Fathers), was accorded a warm welcome as member of the Conference. Pope Benedict XVI who passed away on 31 December 2022 and Bp. Alphonse Bilung, SVD, Bishop Emeritus of Rourkela Diocese in Odisha who passed away on 11 November 2022 weregratefully remembered. A moment of silence was observed in their memory.

The Guidelines for the Basic Ecclesial Communities were released by Cardinal Tagle handing over its first copy to Cardinal Filipe Neri Ferrão. The Guideline have been prepared by the CCBI Commission for Basic Ecclesial Communities.

The theme of the Plenary Assembly is “Telling the Story of Jesus in our Context: The Synodal Way.”In the afternoon, in two sessions of the first dayHis Eminence Luis Antonio Cardinal Tagle addressed the Bishops on the theme.

Late in the evening of the day a cultural evening was organized in honour of Cardinal Tagle. Mount Carmel, Jyoti Nivas, St. John’s Medical College and the musical group of Dr. Maya Mascarenhas put up various cultural items.

The 34th Plenary Assembly will conclude on 30 January 2023 at 1pm. The Conference of Catholic Bishops of India consists of 132 dioceses and 190 Bishops. The CCBI animates the Church in India through its 16 Commissions, 6 Departments and 4 Apostolates. Its main Secretariat is in Bangalore with extensions in Goa, Delhi and Pachmarhi (MP). The Conference of Catholic Bishops of India (CCBI), which is the Canonical National Episcopal Conference, is the largest in Asia and the fourth largest in the world.

Report, Photo : Rev. Dr. Stephen Alathara, Deputy Secretary General, CCBI

ಭಾರತದ ಕ್ಯಾಥೋಲಿಕ್ ಬಿಷಪ್‌ಗಳ ಸಮ್ಮೇಳನ “ಪ್ರೀತಿಯ ಸಂದೇಶವನ್ನು ಹರಡಿ” ಕಾರ್ಡಿನಲ್ ಆಂಟೋನಿಯೊ ಲೂಯಿಸ್ ಒತ್ತಾಯ

ಬೆಂಗಳೂರು: 25 ಜನವರಿ 2023 (CCBI): ಲ್ಯಾಟಿನ್ ಚರ್ಚ್‌ನ ಕ್ಯಾಥೋಲಿಕ್ ಬಿಷಪ್ಸ್ ಆಫ್ ಇಂಡಿಯಾ (CCBI) ಯ 34 ನೇ ಪ್ಲೀನರಿ ಸಮ್ಮೇಳನ ಬೆಂಗಳೂರಿನಲ್ಲಿ ಮಂಗಳವಾರ, 24 ಜನವರಿ 2023 ರಂದು ಬೆಂಗಳೂರಿನಲ್ಲಿ ನಡೇಯಿತು, ಸಭೆಯ ಪ್ರಧಾನ ಕಾರ್ಡಿನಲ್  ಆಂಟೋನಿಯೊ ಲೂಯಿಸ್ ಕಾರ್ಡಿನಲ್ ಟ್ಯಾಗ್ಲೆ ಧರ್ಮಪ್ರಚಾರಕ್ಕಾಗಿ ಡಿಕ್ಯಾಸ್ಟರಿ, ಪ್ರೀತಿಯ ಸಂದೇಶವನ್ನು ಪ್ರಚಾರ ಮಾಡಲು ಭಾರತದಲ್ಲಿನ ಬಿಷಪ್‌ಗಳನ್ನು ಉತ್ತೇಜಿಸಿದರು

  ಚರ್ಚ್ ಮತ್ತು ಸಮಾಜದಲ್ಲಿ ಕಮ್ಯುನಿಯನ್ ಮತ್ತು ಭಾಗವಹಿಸುವಿಕೆಯನ್ನು ಉತ್ತೇಜಿಸುವ ಸಲುವಾಗಿ ಪ್ರೀತಿಯ ಕಥೆಯನ್ನು ಹೇಳಲು ಕಾರ್ಡಿನಲ್ ಟ್ಯಾಗ್ಲೆ ಬಿಷಪ್‌ಗಳನ್ನು ಪ್ರೋತ್ಸಾಹಿಸಿದರು. ಪ್ರೀತಿ ಸಂದೇಶದ ಮೂಲಕ ನಮ್ಮ ಸಮಾಜವನ್ನು ಶಾಂತಿಯುತ ಸಮಾಜವನ್ನಾಗಿ ಪರಿವರ್ತಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ನೆನಪಿಸಿದರು.

  CCBI ಅಧ್ಯಕ್ಷರಾದ ಹಿಸ್ ಎಮಿನೆನ್ಸ್ ಫಿಲಿಪ್ ನೇರಿ ಕಾರ್ಡಿನಲ್ ಫೆರೋ ಮತ್ತು ಗೋವಾ ಮತ್ತು ದಮನ್ ಆರ್ಚ್ ಬಿಷಪ್ ಅವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಭಾರತದ ಸುಂದರ ವೈವಿಧ್ಯತೆಯನ್ನು ಎತ್ತಿ ತೋರಿಸಿದರು. ನಮ್ಮ ದೇಶವು ಧರ್ಮಗಳು, ಆಧ್ಯಾತ್ಮಿಕತೆಗಳು, ಸಂಸ್ಕೃತಿಗಳು, ಸಂಪ್ರದಾಯಗಳು, ಭಾಷೆಗಳು ಮತ್ತು ಸಾಮಾಜಿಕ ಸ್ತರಗಳ ವೈವಿಧ್ಯಮಯ ನೂಲುಗಳನ್ನು ಹೊಂದಿರುವ ಮಗ್ಗವಾಗಿದ್ದು ಅದು ಸಂಕೀರ್ಣ ಮತ್ತು ಸುಂದರವಾದ ವಸ್ತ್ರವನ್ನು ರೂಪಿಸುತ್ತದೆ ಎಂದು ಅವರು ಹೇಳಿದರು. ಆಳವಾದ ಆಧ್ಯಾತ್ಮಿಕತೆಯ ಜೊತೆಗೆ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳು ಈ ರಾಷ್ಟ್ರದ ರಚನೆಯನ್ನು ಆಳವಾಗಿ ವಿಭಜಿಸುತ್ತವೆ.

ಹಿಸ್ ಎಮಿನೆನ್ಸ್ ಕಾರ್ಡಿನಲ್ ಆಂಟೋನಿಯೊ ಟ್ಯಾಗ್ಲೆ ಅವರ ಅಧ್ಯಕ್ಷತೆಯಲ್ಲಿ 34 ನೇ ಪ್ಲೀನರಿ ಅಸೆಂಬ್ಲಿಯು ಗಂಭೀರವಾದ ಯೂಕರಿಸ್ಟಿಕ್ ಆಚರಣೆಯೊಂದಿಗೆ ಪ್ರಾರಂಭವಾಯಿತು. ಹಿಸ್ ಎಮಿನೆನ್ಸ್ ಫಿಲಿಪ್ ನೆರಿ ಫೆರ್ರೊ, ಅಧ್ಯಕ್ಷರು, CCBI, ಹಿಸ್ ಎಕ್ಸಲೆನ್ಸಿ ಲಿಯೋಪೋಲ್ಡೊ ಗಿರೆಲ್ಲಿ, ಭಾರತ ಮತ್ತು ನೇಪಾಳದ ಅಪೋಸ್ಟೋಲಿಕ್ ನನ್ಸಿಯೋ, ಹಿಸ್ ಎಮಿನೆನ್ಸ್ ಓಸ್ವಾಲ್ಡ್ ಕಾರ್ಡಿನಲ್ ಗ್ರೇಸಿಯಸ್, ಹಿಸ್ ಎಮಿನೆನ್ಸ್ ಆಂಥೋನಿ ಪೂಲಾ, ಆರ್ಚ್ ಬಿಷಪ್ ಜಾರ್ಜ್ ಆಂಟೋನಿಸಾಮಿ, ಉಪಾಧ್ಯಕ್ಷ CCBI, ಆರ್ಚ್ ಬಿಷಪ್, ಆರ್ಚ್ ಬಿಷಪ್ , ಬೆಂಗಳೂರಿನ ಆರ್ಚ್ ಬಿಷಪ್ ಪೀಟರ್ ಮಚಾಡೋ ಮತ್ತು ಸಿಸಿಬಿಐನ ಉಪ ಪ್ರಧಾನ ಕಾರ್ಯದರ್ಶಿ ರೆ.ಡಾ. ಸ್ಟೀಫನ್ ಅಲತ್ತಾರ ಪ್ರಮುಖರು. 130 ಕ್ಕೂ ಹೆಚ್ಚು ಬಿಷಪ್‌ಗಳು ಮತ್ತು 200 ಪಾದ್ರಿಗಳು ಉದ್ಘಾಟನಾ ಪವಿತ್ರ ಬಲಿದನವನ್ನು ಅರ್ಪಿಸಿದರು.

    Veni Creator Spiritus ಎಂಬ ಸಾಂಪ್ರದಾಯಿಕ ಸ್ತೋತ್ರವನ್ನು ಪಠಿಸುವ ಮೂಲಕ ಪವಿತ್ರಾತ್ಮದ ಪ್ರಾರ್ಥನೆಯೊಂದಿಗೆ ಉದ್ಘಾಟನಾ ಸಭೆಯು ಪ್ರಾರಂಭವಾಯಿತು. ನಂತರ ಗಣ್ಯರು ಸಭೆಯ ಆರಂಭದ ಸಾಂಕೇತಿಕ ಸಂಕೇತವಾಗಿ ಭಾರತೀಯ ಸಾಂಪ್ರದಾಯದಂತೆ ದೀಪವನ್ನು ಬೆಳಗಿಸಿದರು, ಜೊತೆಗೆ  ಗಾಯಕರು ಶಾಂತಿ ಮಂತ್ರ (ಅಸತೋ ಮಾ ಸದ್ಗಮಯ – ಶಾಂತಿ ಮಂತ್ರ) ಪಠಿಸಿದರು.

    ಧರ್ಮಗುರು ಪೀಟರ್ ಮಚಾದೊ ಸ್ವಾಗತಿಸಿದರು. ಆರ್ಚ್ ಬಿಷಪ್ ಲಿಯೋಪೋಲ್ಡೊ ಗಿರೆಲ್ಲಿ ಅವರು ಆಶೀರ್ವಚನ ನೀಡಿದರು. ಪೋಪ್ ಫ್ರಾನ್ಸಿಸ್ ಅವರ ಸಂದೇಶವನ್ನು ಆರ್ಚ್ ಬಿಷಪ್ ಜಾರ್ಜ್ ಆಂಟೋನಿಸಾಮಿ ಅವರು ಓದಿದರು. CCBI ಯ ವಾರ್ಷಿಕ ವರದಿಯನ್ನು CCBI ಪ್ರಧಾನ ಕಾರ್ಯದರ್ಶಿ ಮತ್ತು ದೆಹಲಿಯ ಆರ್ಚ್ ಬಿಷಪ್ ಮೋಸ್ಟ್ ರೆವ್. ಅನಿಲ್ ಕೌಟೊ ಮಂಡಿಸಿದರು. ಸೇಂಟ್ ಜಾನ್ಸ್‌ನ ನಿರ್ದೇಶಕರಾದ ರೆ.ಡಾ. ಪೌಲ್ ಪರಾತಜಮ್ ಅವರು ವಸತಿ ಮತ್ತು ಇತರ ಸೌಲಭ್ಯಗಳ ಕುರಿತು ಕೆಲವು ಸೂಕ್ತ ಮಾಹಿತಿಯನ್ನು ಒದಗಿಸಿದರು. ಸಿಸಿಬಿಐನ ಉಪ ಪ್ರಧಾನ ಕಾರ್ಯದರ್ಶಿ ರೇ. ಡಾ. ಸ್ಟೀಫನ್ ಅಲತ್ತಾರ ವಂದಿಸಿದರು. ಹೈದರಾಬಾದಿನ ಆರ್ಚ್ ಬಿಷಪ್ ಆಂಥೋನಿ ಕಾರ್ಡಿನಲ್ ಪೂಲಾ ಅವರ ನೇತೃತ್ವದಲ್ಲಿ ಪ್ರಾರ್ಥನೆಯೊಂದಿಗೆ ಉದ್ಘಾಟನಾ ಅಧಿವೇಶನವು ಮುಕ್ತಾಯವಾಯಿತು.

ಪರಮ ಪೂಜ್ಯ ಆಂಟೋನಿಯೊ ಕಾರ್ಡಿನಲ್ ಟ್ಯಾಗ್ಲೆ ಅವರು CCBI ಯ ಪ್ಲೀನರಿ ಅಸೆಂಬ್ಲಿಯಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದರಿಂದ ಅವರನ್ನು ಗೌರವಿಸಲಾಯಿತು. ಎಬಿಪಿ ಅನಿಲ್ ಕೂಟೊ ಅವರಿಗೆ ಕಾಶ್ಮೀರಿ ಶಾಲು ಹೊದಿಸಿ ಗೌರವಿಸಿದರು. ಜಾರ್ಜ್ ಆಂಟೋನಿ ಸಾಮಿ ಅವರಿಗೆ ಸಾಂಪ್ರದಾಯಿಕ ಶ್ರೀಗಂಧದ ಮರದ ಮಾಲೆಯಿಂದ ಮಾಲೆಯನ್ನು ಹಾಕಿದರು, ಸೇಂಟ್ ಅಂತೋನಿಯ ಮರದ ಪ್ರತಿಮೆಯನ್ನು ಅಬ್ ಅವರಿಗೆ ನೀಡಲಾಯಿತು. ಲಿಯೋಪೋಲ್ಡೊ ಗಿರೆಲ್ಲಿ ಮತ್ತು ಭಾರತೀಯ ಸಂತರ ವರ್ಣಚಿತ್ರವನ್ನು ಕಾರ್ಡಿನಲ್ ಫಿಲಿಪ್ ನೇರಿ ಫೆರೋ ಅವರಿಗೆ ಉಡುಗೊರೆಯಾಗಿ ನೀಡಿದರು.

   ಇತ್ತೀಚೆಗೆ ನೇಮಕಗೊಂಡ ಬಿಷಪ್-ನಿಯೋಜಿತ ಸೆಬಾಸ್ಟಿಯೊ ಮಸ್ಕರೇನ್ಹಸ್, S.F.X., ಮಿಷನರೀಸ್ ಆಫ್ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ (ಪಿಲಾರ್ ಫಾದರ್ಸ್) ಮಾಜಿ ಸುಪೀರಿಯರ್ ಜನರಲ್ ಅವರನ್ನು ಸಮ್ಮೇಳನದ ಸದಸ್ಯರಾಗಿ ಆತ್ಮೀಯ ಸ್ವಾಗತವನ್ನು ನೀಡಲಾಯಿತು. 31 ಡಿಸೆಂಬರ್ 2022 ರಂದು ನಿಧನರಾದ ಪೋಪ್ ಬೆನೆಡಿಕ್ಟ್ XVI ಮತ್ತು ಬಿಪಿ. 11 ನವೆಂಬರ್ 2022 ರಂದು ನಿಧನರಾದ ಒಡಿಶಾದ ರೂರ್ಕೆಲಾ ಡಯಾಸಿಸ್ನ ಬಿಷಪ್ ಎಮೆರಿಟಸ್ ಅಲ್ಫೋನ್ಸ್ ಬಿಲುಂಗ್, SVD ಅವರನ್ನು ಕೃತಜ್ಞತೆಯಿಂದ ಸ್ಮರಿಸಲಾಯಿತು. ಅವರ ಸ್ಮರಣೆಯಲ್ಲಿ ಒಂದು ಕ್ಷಣ ಮೌನ ಆಚರಿಸಲಾಯಿತು.

   ಕಾರ್ಡಿನಲ್ ಟ್ಯಾಗ್ಲ್ ಅವರು ಕಾರ್ಡಿನಲ್ ಫಿಲಿಪೆ ನೇರಿ ಫೆರ್ರೊ ಅವರಿಗೆ ಮೊದಲ ಪ್ರತಿಯನ್ನು ಹಸ್ತಾಂತರಿಸುವ ಮೂಲಕ ಮೂಲಭೂತ ಚರ್ಚ್ ಸಮುದಾಯಗಳ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದರು. ಮೂಲ ಎಸ್ಸೆಸ್ಸೆಲ್ಸಿ ಸಮುದಾಯಗಳಿಗಾಗಿ CCBI ಆಯೋಗವು ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ.

    ಪ್ಲೀನರಿ ಅಸೆಂಬ್ಲಿಯ ವಿಷಯವು “ನಮ್ಮ ಸನ್ನಿವೇಶದಲ್ಲಿ ಯೇಸುವಿನ ಕಥೆಯನ್ನು ಹೇಳುವುದು: ಸಿನೊಡಲ್ ವೇ.” ಮಧ್ಯಾಹ್ನ, ಮೊದಲ ದಿನದ ಎರಡು ಅವಧಿಗಳಲ್ಲಿ ಅವರ ಎಮಿನೆನ್ಸ್ ಲೂಯಿಸ್ ಆಂಟೋನಿಯೊ ಕಾರ್ಡಿನಲ್ ಟ್ಯಾಗ್ಲೆ ಬಿಷಪ್‌ಗಳನ್ನು ಉದ್ದೇಶಿಸಿ ಮಾತನಾಡಿದರು.ಅಂದು ಸಂಜೆ ಕಾರ್ಡಿನಲ್ ತಾಗ್ಲೆ ಅವರ ಗೌರವಾರ್ಥ ಸಾಂಸ್ಕೃತಿಕ ಸಂಜೆ ಆಯೋಜಿಸಲಾಗಿತ್ತು. ಮೌಂಟ್ ಕಾರ್ಮೆಲ್, ಜ್ಯೋತಿ ನಿವಾಸ, ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಹಾಗೂ ಡಾ.ಮಾಯಾ ಮಸ್ಕರೇನಸ್ ಅವರ ಸಂಗೀತ ತಂಡವು ವಿವಿಧ ಸಾಂಸ್ಕೃತಿಕ ವಸ್ತುಗಳನ್ನು ಹಾಕಿತು.

34 ನೇ ಪೂರ್ಣ ಸಭೆಯು 30 ಜನವರಿ 2023 ರಂದು ಮಧ್ಯಾಹ್ನ 1 ಗಂಟೆಗೆ ಮುಕ್ತಾಯಗೊಳ್ಳಲಿದೆ. ಭಾರತದ ಕ್ಯಾಥೋಲಿಕ್ ಬಿಷಪ್‌ಗಳ ಸಮ್ಮೇಳನವು 132 ಡಯಾಸಿಸ್‌ಗಳು ಮತ್ತು 190 ಬಿಷಪ್‌ಗಳನ್ನು ಒಳಗೊಂಡಿದೆ. CCBI ತನ್ನ 16 ಆಯೋಗಗಳು, 6 ಇಲಾಖೆಗಳು ಮತ್ತು 4 ಅಪೋಸ್ಟೋಲೇಟ್‌ಗಳ ಮೂಲಕ ಭಾರತದಲ್ಲಿ ಚರ್ಚ್ ಅನ್ನು ಅನಿಮೇಟ್ ಮಾಡುತ್ತದೆ. ಗೋವಾ, ದೆಹಲಿ ಮತ್ತು ಪಚ್ಮರ್ಹಿ (MP) ಗಳಲ್ಲಿ ವಿಸ್ತರಣೆಗಳೊಂದಿಗೆ ಇದರ ಮುಖ್ಯ ಕಾರ್ಯದರ್ಶಿ ಬೆಂಗಳೂರಿನಲ್ಲಿದೆ. ಕ್ಯಾನೊನಿಕಲ್ ನ್ಯಾಷನಲ್ ಎಪಿಸ್ಕೋಪಲ್ ಕಾನ್ಫರೆನ್ಸ್ ಆಗಿರುವ ಭಾರತದ ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ (CCBI), ಏಷ್ಯಾದಲ್ಲಿಯೇ ಅತಿ ದೊಡ್ಡದಾಗಿದೆ ಮತ್ತು ವಿಶ್ವದ ನಾಲ್ಕನೇ ದೊಡ್ಡದಾಗಿದೆ.

ವರದಿ ಮತ್ತು ಫೋಟೊಗಳು:ರೆ.ಡಾ. ಸ್ಟೀಫನ್ ಅಲತ್ತಾರ, ಸಿಸಿಬಿಐ ಉಪ ಪ್ರಧಾನ ಕಾರ್ಯದರ್ಶಿ.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಸುಭಾಸ್‍ಚಂದ್ರ ಬೋಸ್ ಅವರ 126ನೇ ಜನ್ಮದಿನಾಚರಣೆ


ಭಾರತ ಕಂಡ ಅಸಾಮಾನ್ಯ ಸ್ವಾತಂತ್ರ್ಯ ಹೋರಾಟಗಾರ, ‘ಆಜಾದ್ ಹಿಂದ್ ಫೌಜ’ ಎಂಬ ಸೇನೆಯನ್ನು ಕಟ್ಟಿ ‘ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ’ ಎಂದು ಬ್ರಿಟಿಷ್ ಸಾಮ್ರಾಜ್ಯಶಾಹಿ ಕನಸಿನಲ್ಲೂ ಬೆಚ್ಚಿಬೀಳುವಂತೆ ಮಾಡಿದ ಸುಭಾಸ್ ಚಂದ್ರ ಬೋಸ್ ಭಾರತೀಯರೆಲ್ಲರ ಪ್ರೀತಿಯ ‘ನೇತಾಜಿ’ ದೇಶಕಂಡ ಮಹಾನ್‍ನಾಯಕ ನಮಗೆ ಎಂದೆಂದಿಗೂ ಸ್ಪೂರ್ತಿ ಎಂದು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೆಹರು ಯುವ ಕೇಂದ್ರ ಉಡುಪಿ, ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಇದರ ಸಂಯುಕ್ತ ಆಶ್ರಯದಲ್ಲಿ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ರಂಗಮಂದಿರದಲ್ಲಿ ಸುಭಾಸ್ ಚಂದ್ರ ಬೋಸ್‍ರವರ 126ನೇ ಜನ್ಮದಿನಾಚರಣೆ ಮತ್ತು ‘ಪರಾಕ್ರಮ ದಿನ’ ಕಾರ್ಯಕ್ರಮ ಜರಗಿತು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಪೂವಾಧ್ಯಕ್ಷರಾದ ಸುರೇಶ್ ಕಾಸ್ರಬೈಲು ಮಾತನಾಡಿದವರು ಪಾದರಸದಂತೆ ಓಡಾಡಿ ಸ್ವರಾಜ್ಯ ಹೋರಾಟಕ್ಕೆ ಜೀವನವನ್ನೇ ಮುಡುಪಾಗಿಟ್ಟ ಧೀಮಂತ ನಾಯಕ ಇವರ ಜೀವನ ಆದರ್ಶಗಳು ನಮ್ಮಂತಹ ಯುವಕರಿಗೆ ಸ್ಪೂರ್ತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಲ ಲಲಿತಾ ಆಚಾರ್ಯ, ಜೊತೆ ಕಾರ್ಯದರ್ಶಿ ಸುದರ್ಶನ್ ಕುಂದರ್, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಅಬ್ಬನಡ್ಕ, ಅಬ್ಬನಡ್ಕ ಸ್ವಸಹಾಐ ಸಂಘದ ಅಧ್ಯಕ್ಷೆ ವೀಣಾ ಪೂಜಾರಿ, ಕಾರ್ಯದರ್ಶಿ ಪುಷ್ಪ ಕುಲಾಲ್, ಅಬ್ಬನಡ್ಕ ಭಜನಾ ಮಂಡಳಿ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್, ಕಾರ್ಯದರ್ಶಿ ಕೀರ್ತನ್ ಕುಮಾರ್, ಸಂಘದ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಸದಸ್ಯರಾದ ಮಂಜುನಾಥ ಆಚಾರ್ಯ, ಸುರೇಶ್ ಅಬ್ಬನಡ್ಕ, ಯಶವಂತ್ ಕುಲಾಲ್, ಆರತಿ ಕುಮಾರಿ ಮೊದಲಾದವರಿದ್ದರು.

ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ವರಕವಿ ಮುದ್ದಣನ 153ನೇ ವರ್ಷದ ಜನ್ಮ ದಿನಾಚರಣೆ

ನಂದಳಿಕೆ: ನೆಹರು ಯುವ ಕೇಂದ್ರ ಉಡುಪಿ, ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಇದರ ಸಹಯೋಗದಲ್ಲಿ ನಂದಳಿಕೆ ವರಕವಿ ಮುದ್ದಣನ 153ನೇ ವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ರಂಗಮಂದಿರದಲ್ಲಿ ಮಂಗಳವಾರ ನಡೆಸಲಾಯಿತು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಪ್ರಶಾಂತ್ ಪೂಜಾರಿ ಮುದ್ದಣನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದವರು ನಂದಳಿಕೆಯ ಪುಣ್ಯ ಮಣ್ಣಿನಲ್ಲಿ ಜನಿಸಿದ ಮುದ್ದಣ (ಲಕ್ಷ್ಮೀನಾರಾಯಣಪ್ಪ) ನಂದಳಿಕೆಯ ಹೆಸರನ್ನು ಸಾಹಿತ್ಯ ಲೋಕದಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರಿಸುವಂತೆ ಮಾಡಿದ ಮಹಾನ್ ಸಾಧಕ. ಜೀವನವಿಡಿ ಕಷ್ಟಗಳ ಕಹಿಯುಂಡ ಮುದ್ದಣ ಸಾರಸ್ವತ ಲೋಕಕ್ಕೆ ಮಹಾನ್ ಕೃತಿಗಳನ್ನು ನೀಡಿದ ಹಿರಿಮೆಯೊಂದಿಗೆ ಅವರ ಹೆಸರು ಚಿರಸ್ಥಾಯಿಯಾಗಿಸಿವೆ ಎಂದರು.
ಈ ಸಂದರ್ಭದಲ್ಲಿ ಸಂಘದ ಪೂರ್ವಾಧ್ಯಕ್ಷರಾದ ಸುರೇಶ್ ಕಾಸ್ರಬೈಲು, ಕಾರ್ಯದರ್ಶಿ ಲ ಲಲಿತಾ ಆಚಾರ್ಯ, ಜೊತೆ ಕಾರ್ಯದರ್ಶಿ ಸುದರ್ಶನ್ ಕುಂದರ್, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಅಬ್ಬನಡ್ಕ, ಅಬ್ಬನಡ್ಕ ಸ್ವಸಹಾಐ ಸಂಘದ ಅಧ್ಯಕ್ಷೆ ವೀಣಾ ಪೂಜಾರಿ, ಕಾರ್ಯದರ್ಶಿ ಪುಷ್ಪ ಕುಲಾಲ್, ಅಬ್ಬನಡ್ಕ ಭಜನಾ ಮಂಡಳಿ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್, ಕಾರ್ಯದರ್ಶಿ ಕೀರ್ತನ್ ಕುಮಾರ್, ಸಂಘದ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಸದಸ್ಯರಾದ ಮಂಜುನಾಥ ಆಚಾರ್ಯ, ಸುರೇಶ್ ಅಬ್ಬನಡ್ಕ, ಯಶವಂತ್ ಕುಲಾಲ್, ಆರತಿ ಕುಮಾರಿ ಮೊದಲಾದವರಿದ್ದರು.