HOLY ROSARY CHURCH, KUNDAPUR – 450 th JUBILEE SOUVENIR 2021

ಕ್ರೈಸ್ತ ಶಿಕ್ಷಣ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಫಾ|ಸ್ಟ್ಯಾನಿ ತಾವ್ರೊರವರ ಅಮ್ರತ ಮಹೋತ್ಸವ ಆಚರಣೆ


ಕುಂದಾಪುರ, ಆ.20: ಕುಂದಾಪುರ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊರವರ ಜನ್ಮ ದಿನವಾದ ಆಗೋಸ್ತ್ 20 ರಂದು ಭಾನುವಾರ ಎರಡನೇ ಬಲಿದಾನದ ಬಳಿಕ ಕ್ರೈಸ್ತ ಶಿಕ್ಷಣ ಶಿಕ್ಷಕರು ಮತ್ತು ವಿದ್ಯಾರ್ಥಿಗಳು 75 ನೇ ಜನ್ಮದಿನವನ್ನು ಪ್ರೀತಿ ಆಧಾರದಿಂದ ಆಚರಿಸಲಾಯಿತು.
ಕ್ರೈಸ್ತ ಶಿಕ್ಷಣ ಶಿಕ್ಷಕರ ಪರವಾಗಿ ವೀಣಾ ಡಿಸೋಜಾ, ಧರ್ಮಭಗಿನಿಯವರ ಪರವಾಗಿ ಭಗಿನಿ ತೆರೆಜಾ ಶಾಂತಿ, ವಿದ್ಯಾರ್ಥಿಗಳ ಪರವಾಗಿ ವಿಯೋಲಾ ಬರೆಟ್ಟು ಹೂ ಗುಚ್ಚ ನೀಡಿ ಶುಭಕೋರಿದರು. ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ, ಸಂತ ಜೋಸೆಫ್ ಕಾನ್ವೆಂಟಿನ ಧರ್ಮಭಗಿನಿಯರು, ಕ್ರೈಸ್ತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಹೆತ್ತವರು ಹಾಜರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿ ಪ್ರೀತಿ ಕ್ರಾಸ್ತಾ ನೆಡೆಸಿಕೊಟ್ಟರು.

ಸಂತ ಆಗ್ನೇಸ್ ಕಾಲೇಜಿನಲ್ಲಿ ಕೊಂಕಣಿ ಮಾನ್ಯತಾ ದಿನ ಆಚರಣೆ

ಮಂಗಳೂರು : ಸಂತ ಆಗ್ನೇಸ್ ಕಾಲೇಜಿನಲ್ಲಿ ಅಗಸ್ಟ್ 18 ರಂದು ‘ಕೊಂಕಣಿ ಮಾನ್ಯತಾ ದಿನ’ ಆಚರಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಕ್ಣೊಂ ಕೊಂಕಣಿ ಪತ್ರದ ಸಂಪಾದಕರಾದ ವಂ. ಫಾ. ರೂಪೇಶ್ ಮಾಡ್ತಾ, ಕೊಂಕಣಿ ಭಾಷೆಯನ್ನು ಪ್ರೀತಿಸಿ ಮನೆ ಮನಗಳಲ್ಲಿ ಮಾತನಾಡಲು ಕರೆ ನೀಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅ ತಿಥಿಯಾಗಿ ಆಗಮಿಸಿದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ರೋಯ್ ಕ್ಯಾಸ್ತಲಿನೋ ಕೊಂಕಣಿ ಭಾಷೆ ವಿವಿಧ ಹಂತಗಳಲ್ಲಿ ನಡೆದು ಬಂದ ರೀತಿಯನ್ನು ವಿವರಿಸಿ, ಮಾತೃ ಭಾಷೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಕೊಂಕಣಿ ಸಂಘದ “ಅಂಕರ್” ವಾರ್ಷಿಕ ಅಂಕೆಯನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಭಗಿನಿ ಡಾ. ವೆನಿಸ್ಸಾ ಎ.ಸಿ ಮಾತನಾಡಿ, ಕೊಂಕಣಿ ಸಂಘದಿಂದ ಆಯೋಜಿಸಿದ ವಿವಿದ ಕಾರ್ಯಗಳಿಗೆ ಅಭಿನಂದಿಸಿದರು ಹಾಗೂ ಕೊಂಕಣಿ ಭಾಷೆಯ ಮೇಲೆ ಇಟ್ಟ ಆಭಿಮಾನಕ್ಕೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಕೊಂಕಣಿ ಸಂಘದ ಸದಸ್ಯರಿಂದ ಕೊಂಕಣಿ ಸಂಸ್ಕೃತಿಯ ಗುಮ್ಟಾಂ ಗಾಯನ ನಡೆಯಿತು. ಸಂಯೋಜಕರಾದ ಎಲ್ಸನ್ ಹಿರ್ಗಾನ ಸ್ವಾಗತಿಸಿ, ಕಾರ್ಯದರ್ಶಿ ಗ್ಲೆನಿಟಾ ಡೇಸಾ ವಂದಿಸಿದರು, ಭಗಿನಿ ವೆಲೆಂಟಿನಾ ಕಾರ್ಯಕ್ರಮ ನಿರೂಪಿಸಿದರು.

ಕುಂದಾಪುರ ರೋಜರಿ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಗೆ 2022-23ನೇ ಸಾಲಿನ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಪ್ರಶಸ್ತಿ

ಕುಂದಾಪುರ: ಕುಂದಾಪುರದ ರೋಜರಿ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಗೆ 2022-23ನೇ ಸಾಲಿನ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಪ್ರಶಸ್ತಿ ಲಭಿಸಿದೆ. ಸಂಘವು ತನ್ನ ಕಾರ್ಯವ್ಯಾಪ್ತಿಯಲ್ಲಿ ಸಾಧಿಸಿರುವ ವಿಶಿಷ್ಠ ಸಾಧನೆಯನ್ನು ಗಮನಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಆ.19 ರಂದು ಮಂಗಳೂರಿನಲ್ಲಿ ಜಿಲ್ಲಾ ಬ್ಯಾಂಕಿನ ಉತ್ಕೃಷ್ಠ ಸಹಕಾರಿ ಸೌಧದಲ್ಲಿ ಜರಗಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪಾರ್ಷಿಕ ಮಹಾಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಮ್‌. ಎನ್‌. ರಾಜೇಂದ್ರ ಕುಮಾರ್‌ ಪ್ರಶಸ್ತಿಯನ್ನು
ಪ್ರದಾನ ಮಾಡಿದರು
.

`ರೋಜರಿ ಕ್ರೆಡಿಟ್ ಕೋ-ಆಪರೇಟಿವ್‌ ಸೊಸೈಟಿ ಅಧ್ಯಕ್ಷರಾದ ಜೋನ್ಸನ್ ಡಿಆಲ್ಮೇಡಾ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೇಬಲ್‌ ಡಿಆಲ್ಮೇಡಾ ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾದ ವಿನಯ ಕುಮಾರ್‌ ಸೂರಿಂಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್‌, ನಿರ್ದೇಶಕರಾದ ಎಸ್‌.ರಾಜು ಪೂಜಾರಿ, ಎಂ. ಮಹೇಶ ಹೆಗ್ಡೆ, ಬಿ.ನಿರಂಜನ್‌, ಟಿ.ಜಿ.ರಾಜಾರಾಮ
ಭಟ್‌, ಎಂ.ವಾದಿರಾಜ ಶೆಚ್ಚಿ, ಐಕಳಬಾವ ದೇವಿಪ್ರಸಾದ್‌ ಶಟ್ಟಿ ಬೆಳಪು, ಮೋನಪ್ಪ ಶೆಟ್ಟಿ ಎಕ್ಕಾರು, ಕೆ.ಹರಿಶ್ಚಂದ್ರ ಎಂ, ಜೈರಾಜ್‌ ಬಿ. ರೈ, ಬಿ.ಅಶೋಕ್‌ ಕುಮಾರ್‌ ಶಟ್ಟಿ, ರಾಜೇಶ್‌ ರಾವ್‌, ಸದಾಶಿವ ಉಳ್ಳಾಲ್‌ ಮತ್ತೀತರರು ಉಪಸ್ಥಿತರಿದ್ದರು.

ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಕೋಮಾದಲ್ಲಿರುವ ಗಣೇಶ ನಾವುಡರಿಗೆ ರೂ. ಹದಿನೈದು ಸಾವಿರ ದೇಣಿಗೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಘಟಕ, ಈ ದಿನ ಅಪಘಾತದಲ್ಲಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿರುವ ಗಣೇಶ ನಾವುಡ ಇವರ ಚಿಕಿತ್ಸೆ ಗಾಗಿ ರೂಪಾಯಿ ಹದಿನೈದು ಸಾವಿರ ವನ್ನು ನೀಡಲಾಯಿತು. ಕೇಟರಿಂಗ ಉದ್ಯೋಗದಲ್ಲಿರುವ ಇವರಿಗೆ ಕಾಲೇಜು ವ್ಯಾಸಂಗ ಮಾಡುತ್ತಿರುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಇವರು ರೋಗಿಯ ಪುತ್ರಿಗೆ ಚೆಕ್ ಹಸ್ತಾಂತರಿಸಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ ಮತ್ತು ಸತ್ಯನಾರಾಯಣ ಪುರಾಣಿಕ್ ಉಪಸ್ಥಿತರಿದ್ದರು.

ಶಿಸ್ತು, ಸಮಯ ಪಾಲನೆ ಹಾಗೂ ಪರಿಶ್ರಮ ಇದ್ದಲ್ಲಿ ಸಾಧನೆಯ ಹಾದಿಯಲ್ಲಿ ಸಾಗುವುದು ಸುಲಭ : ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಶಿಸ್ತು, ಸಮಯ ಪಾಲನೆ ಹಾಗೂ ಪರಿಶ್ರಮ ಇದ್ದಲ್ಲಿ ಸಾಧನೆಯ ಹಾದಿಯಲ್ಲಿ ಸಾಗುವುದು ಸುಲಭವಾಗುತ್ತದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಕಾಲೇಜುಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದೆ. ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷನಾಗಿ, ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಾದ ಸಹಕಾರ ನೀಡುತ್ತೇನೆ. ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು. ಕಾಲೇಜು ಹಾಗೂ ಪೋಷಕರಿಗೆ ಒಳ್ಳೆ ಹೆಸರು ತರಬೇಕು. ಶಿಕ್ಷಣವೇ ಶಕ್ತಿ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಸಣ್ಣೀರಯ್ಯ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಬಿ.ಪುಷ್ಪ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಸಮಾರಂಭದಲ್ಲಿ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಉತ್ತಮ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಪಾರಿತೋಷಕ ಹಾಗೂ ಬಹುಮಾನ ನೀಡಲಾಯಿತು.
ಕಾಲೇಜು ಅಭಿವೃದ್ಧಿ ಸಮತಿ ಹಾಗೂ ಸಾಂಸ್ಕøತಿಕ ಮತ್ತು ಕ್ರೀಡಾ ಸಮಿತಿ ಸದಸ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.

ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಸಂಚಾಲಕ ಫಾ|ಸ್ಟ್ಯಾನಿ ತಾವ್ರೊರವರ ಅಮೃತ ಮಹೋತ್ಸವ ಆಚರಣೆ


ಕುಂದಾಪುರ,20: ಸೈಂಟ್ ಮೇರಿಸ್ ಮತ್ತು ಹೋಲಿ ರೋಜರಿ ಸಮೂಹ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಶಾಲಾ ಸಂಚಾಲಕರು ಹಾಗೂ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ಗುರು ಸ್ಟ್ಯಾನಿ ತಾವ್ರೊರವರ ಜನ್ಮ ದಿನದ 75 ವರ್ಷಗಳ ಅಮೃತ ಮಹೋತ್ಸವವನ್ನು ಆ.19 ರಂದು ಸಂಭ್ರಮದಿಂದ ಸೈಂಟ್ ಮೇರಿಸ್ ಸಭಾಂಗಣದಲ್ಲಿ ಆಚರಿಸಲಾಯಿತು. ಪುಜ್ಯನೀಯ ಸಂಚಾಲಕರು ಕೇಕ್ಅನ್ನು ಕತ್ತರಿಸಿ ಸಿಹಿಯನ್ನು ಹಂಚಿಕೊಂಡರು. ಪೂಜ್ಯರ ಬಗ್ಗೆ ಹೋಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ಅಶ್ವಿನ್ ಅರಾನ್ನಾರವರು “ಅವರು 75ರ ಬದಲಾಗಿ ಅವರಿಗೆ 25 ವರ್ಷದ ಯುವಕರನ್ನು ನಾಚಿಸುವ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಹಾಗೂ ಅವರನ್ನು ನೋಡುವಾಗ ಗಂಭೀರವಾದ ಮುಖಭಾವವಿದ್ದರೂ ಕೂಡ ಅವರು ಮೃದುವಾದ ಸ್ವಾಭಾವದವರು ಹಾಗೂ ಬೇರೆಯವರ ನೋವು ನಲಿವುಗಳ ಬಗ್ಗೆ ತಿಳಿದವರು ದೊಡ್ಡ ದೊಡ್ಡ ಅಧಿಕಾರ ಹೊಂದಿದರೂ ಕೂಡ ಅವರು ಅದನ್ನು ತೋರಿಸದೆ, ಸಂಬಂಧಗಳನ್ನು ಒಳ್ಳೆಯ ರೀತಿಯಲ್ಲಿ ಮುಂದುವರಿಸುವ ಇವರು ತುಂಬಾ ಸರಳ ವ್ಯಕ್ತಿಯಾಗಿದ್ದು, ನಾವು ಇವರನ್ನು ಆದರ್ಶವನ್ನಾಗಿಸಿಕೊಂಡು, ನಮ್ಮಲ್ಲಿ ಅವರ ಒಳ್ಳೆಯ ಗುಣವನ್ನು ಬೇಳಸಿಕೊಳ್ಳಬೇಕು’ ಎಂದು ಸಂದೇಶವನ್ನು ನೀಡಿದರು.

ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ಕನ್ನಡ “ಉಪನ್ಯಾಸಕರಾದ ನಾಗರಾಜ್ ಶೆಟ್ಟಿಯವರು ಪೂಜ್ಯರು ಆಡುಮಟ್ಟದ ಸೊಪ್ಪಿಲ್ಲ ಹಾಗೆಯೇ ಅವರ ಅನುಭವವು ವಿಶಾಲವಗಿದೆ” ಎಂದು ತಿಳಿಸಿದರು. ಸಂಸ್ಥೆಯ ಎಲ್ಲಾ ಮುಖ್ಯ ಶಿಕ್ಷಕರು ಸಂಚಾಲಕರನ್ನು ಶಾಲು ಹೊದಿಸಿ, ಫಲ ಪುಷ್ಪ, ಸನ್ಮಾನ ಪತ್ರ ನೀಡಿ ಸನ್ಮಾನಿಸಲಾಯತು.ಪೂಜ್ಯರು ವಿದ್ಯಾ ಸಂಸ್ಥೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಹೂಗುಚ್ಚವನ್ನು ನೀಡಿ ಅಭಿನಂದಿಸಿ ಸಂಸ್ಥೆಯ ಕೀರ್ತಿ ಪತಾಕೆಯನ್ನು ಎಲ್ಲೆಡೆ ಸಾರಬೇಕು’ ಎಂದು ಶುಭ ಹರೈಸಿದರು. ಸೈಂಟ್ ಮೇರಿಸ್ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀಮತಿ ಡೊರ ಸುವಾರಿಸ್ ಸ್ವಾಗತ ಕೋರಿದರು. ಹೋಲಿ ರೋಜರಿ ಶಾಲೆಯ ಶಿಕ್ಷಕ ಲೂವಿಸ್ ಪ್ರಶಾಂತ್ ರೆಬೇರೋ ಧನ್ಯವಾದ ಸಮರ್ಪಿಸಿದರು. ಸೈಂಟ್ ಮೇರಿಸ್ ಪ್ರೌಢ ಶಾಲೆಯ ಪದವೀಧರ ಸಹ ಶಿಕ್ಷಕ ಶ್ರೀಯುತ ಚಂದ್ರ ಶೇಖರ್ ಬಿಜಾಡಿ ಕಾರ್ಯಕ್ರಮ ನಿರೂಪಿಸಿದರು.

ಉಡುಪಿ ಆ. 19: ಜಿಲ್ಲಾ ಲಯನ್ಸ್ 317C ಇದರ ಸಂಪುಟ ಮತ್ತು ಗವರ್ನರ್ ಪದ ಪ್ರಧಾನ ಸಮಾರಂಭ

ಉಡುಪಿ, ಆ. 19: ಜಿಲ್ಲಾ ಲಯನ್ಸ್ 317C ಇದರ ಸಂಪುಟ ಮತ್ತು ಗವರ್ನರ್ ಪದ ಪ್ರಧಾನ ಸಮಾರಂಭ ಆ.19ರಂದು ಮಧ್ಯಾಾಹ್ನ 3ಕ್ಕೆ ಉಡುಪಿಯ ಅಂಬಾಗಿಲಿನ ಅಮೃತ್ ಗಾರ್ಡನ್‌ನಲ್ಲಿ ಜರಗಲಿದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಲ. ಡಾ. ನೇರಿ ಕರ್ನೇಲಿಯೊ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉಡುಪಿ ಬಿಷಪ್ ಡಾ ಜೆರಾಲ್ಡ್ ಐಸಾಕ್ ಲೋಬೊ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಲಿದ್ದಾಾರೆ. ಲಯನ್ಸ್ ಕ್ಲಬ್‌ನ ಪ್ರಮುಖರಾದ ರಾಮಕೃಷ್ಣ ಮೂರ್ತಿ, ಕೆ. ವಂಶಿಧರ್ ಬಾಬು, ಜಿ. ಶ್ರೀನಿವಾಸ್ ಮೊದಲಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾಾರೆ. ಸಾಧಕರಿಗೆ ಸಮ್ಮಾಾನ, ವಿದ್ಯಾಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಲಯನ್ಸ್ ಜಿಲ್ಲೆ 317ಸಿ ವ್ಯಾಪ್ತಿಯಲ್ಲಿ ಉಡುಪಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಕಂದಾಯ ಜಿಲ್ಲೆಗಳಲ್ಲಿ ಒಳಗೊಂಡು 3 ಸಾವಿರ ಸದಸ್ಯರು ಇದ್ದಾರೆ. ಉಡುಪಿ ಜಿಲ್ಲೆಯಲ್ಲಿ ‘ಲೀವ್ ಟೂ ಲೀಡ್’ ಎಂಬ ಘೋಷಣೆಯೊಂದಿಗೆ ‘ಬೆಳಕು’ ಜಿಲ್ಲಾ ಕಾರ್ಯಕ್ರಮದಡಿಯಲ್ಲಿ ಹಲವಾರು ಸೇವಾ ಚಟುವಟಿಕೆಗಳ ಯೋಜನೆ ರೂಪಿಸಲಾಗಿದೆ. ಜಿಲ್ಲೆಗೆ ಈಗಾಗಲೆ ತುರ್ತು ನೆರೆ ಪರಿಹಾರ ನಿಧಿಯನ್ನು ವಿತರಿಸಿದ್ದೇವೆ. ಮುಂದಿನ ದಿನಗಳಲ್ಲಿ ಶಿಕ್ಷಣ, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗುವುದು. ಸೇವಾ ಮತ್ತು ಸಮಾಜಮುಖಿ ಚಟುವಟಿಕೆ ಕಾರ್ಯಕ್ರಮಗಳನ್ನು ಹೆಚ್ಚು ಹಮ್ಮಿಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಲಯನ್ಸ್ ಸಂಪುಟ ಕಾರ್ಯದರ್ಶಿ ಲ. ರವಿರಾಜ ನಾಯಕ್, ಖಜಾಂಚಿ ಲ. ರೀಚರ್ಡ್ ಡಯಾಸ್, ಮಾರ್ಕೇಟಿಂಗ್ ಸಂವಹನ-ಮಾಹಿತಿ ಅಧಿಕಾರಿಗಳಾದ ಲ. ಸಿದ್ಧರಾಜು, ಡಾ ಜಗದೀಶ್ ಹೊಳ್ಳ, ಲ. ಜಾರ್ಜ್ ಡಿ’ಸೋಜಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಒಳ್ಳೇಯ ಪೌಷ್ಟಿಕ ಆಹಾರ ಪಡೆದು ಯೋಗಬ್ಯಾಸ ಮಾಡಿ ಆರೋಗ್ಯವಂತ ಜೀವನ ನಡೆಸಿ – ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ 1 : ವಿದ್ಯಾರ್ಥಿಗಳು ಪ್ರತಿ ದಿನ ಒಳ್ಳೇಯ ಪೌಷ್ಟಿಕ ಆಹಾರವನ್ನು ಪಡೆದು ಯೋಗಬ್ಯಾಸವನ್ನು ಮಡುತ್ತಾ , ಆರೋಗ್ಯವಂತ ಜೀವನವನ್ನು ನಡೆಸುವಂತೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸಲಹೆ ನೀಡಿದರು.
ತಾಲೂಕಿನ ಲಕ್ಷ್ಮೀಪುರ ಪ್ರೌಡಶಾಲೆಯಲ್ಲಿ ಶುಕ್ರವಾರ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಕಾರ್ಯಕ್ರಮದಲ್ಲಿ ಮೊಟ್ಟೆ ವಿತರಣಾ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಕಡುಬಡತನದಿಂದ ಇರುವ ವಿದ್ಯಾಥಿಗಳು ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದು, ಆ ವಿದ್ಯಾಥಿಗಳ ಕುಟುಂಬಗಳು ಆರ್ಥಿಕವಾಗಿ ಹಿಂದುಳಿದ್ದು, ಆಹಾರಕ್ಕಾಗಿಯೂ ಪರದಾಡುತ್ತಿದ್ದು ಇದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿದೆ ಎಂದು ಕಳವಳ ಪಡೆದರು.
ಇಒ ಕೃಷ್ಣಪ್ಪ ಮಾತನಾಡಿ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಮುಂದಾಗಿದ್ದು, ವಾರದಲ್ಲಿ 3 ದಿನ ಮಕ್ಕಳಿಗೆ ಮೊಟ್ಟೆ / ಬಾಳೆಹಣ್ಣು, ಚುಕ್ಕಿ ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದು, ವಿದ್ಯಾರ್ಥಿಗಳು ಈ ಯೋಜನೆಯನ್ನು ಸದ್ಭಳಕೆ ಮಾಡಿಕೊಂಡು ಓದಿನೊಂದಿಗೆ ಆರೋಗ್ಯದ ಕಡೆ ಹೆಚ್ಚು ಗಮನಹರಿಸುವಂತೆ ತಿಳಿಸಿದರು.
ಬಿಇಒ ಭಾಗ್ಯಲಕ್ಷ್ಮಿ ಮಾತನಾಡುತ್ತಾ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಾಕವಾದ ಶಿಕ್ಷಣವನ್ನು ನೀಡುತ್ತಿದ್ದು, ವಿದ್ಯಾರ್ಥಿಗಳು ಓದಿನೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ತಿಳಿಸಿದರು.
ಮುಖಂಡರಾದ ಜಗದೀಶ್‍ಕುಮಾರ್, ತೂಪಲ್ಲಿ ಮಧುಸೂದನರೆಡ್ಡಿ, ಇಸ್ಮಾಯಿಲ್, ಉಪ್ಪರಹಳ್ಳಿ ಬಾರ್ ನಾರಾಯಣಸ್ವಾಮಿ, ಎಸ್‍ಡಿಎಂಸಿ ಸದಸ್ಯರು, ಕೊಂಡಸಂದ್ರ ಗಂಗರಾಜಣ್ಣ, ನಂಬುವಾರಿಪಲ್ಲಿ ಶಂಕರರೆಡ್ಡಿ, ಗ್ರಾ.ಪಂ ಸದಸ್ಯ ಪ್ರೇಮ, ಬಿಆರ್‍ಸಿ ಕೆ.ಸಿ.ವಸಂತ, ಅಕ್ಷರ ದಾಸೋಹ ನಿರ್ದೇಶಕಿ ಸುಲೋಚನ, ಪಿಡಿಒ ಗೌಸ್‍ಸಾಬ್, ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸಲು, ಎಸ್‍ಡಿಎಂಸಿ ಅಧ್ಯಕ್ಷ ಜಾಖೀರ್ ಹುಸೇನ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕಾಲಾಚಾರಿ ಇದ್ದರು.

ಮಣಿಪುರದಲ್ಲಿ ಪುನಹ ಭುಗಿಲೆದ್ದ ಹಿಂಸಾಚಾರ ಮೂವರ ಹತ್ಯೆ/Violence broke out again in Manipur killing three

(ಚಿತ್ರ ಸಾಂದರ್ಭಿಕ)

ಆ. 18:  ಇಂದು ಬೆಳ್ಳಂಬೆಳಗ್ಗೆ ಶಸ್ತ್ರಸಜ್ಜಿತ ದಾಳಿಕೋರರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಮಣಿಪುರದಲ್ಲಿ ನಡೆದಿದೆ. ಮಣಿಪುರ ಈಗಲೂ ಬೂದಿ ಮುಚ್ಚದ ಕೆಂಡದಂತಿದ್ದು, ಇಂದು ಮತ್ತೆ ಹಿಂಸಾಚಾರ ಭುಗಿಲೆದ್ದಿದೆಯೆಂದು ವಾರ್ತಾ ಸಂಸ್ಥೆಗಳು ವರದಿ ಮಾಡಿವೆ

ಮಣಿಪುರದ ಉಖ್ರುಲ್ ಜಿಲ್ಲೆಯ ತೊವೈ ಕುಕಿ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಸಮಯದಲ್ಲಿ ಗುಂಡಿನ ದಾಳಿ ನಡೆದಿದೆ. ದಾಳಿಯ ನಂತರ ಗ್ರಾಮಸ್ಥರು ಮೂರು ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ. ಮೃತರನ್ನು ಜಮ್‌ಖೋಗಿನ್ ಹಕಿಪ್ (26), ತಂಗ್‌ಖೋಕೈ ಹಕಿಪ್ (35) ಮತ್ತು ಹೊಲೆನ್ಸನ್ ಬೈಟ್ (24) ಎಂದು ಗುರುತಿಸಲಾಗಿದೆ. ಈ ಘಟನೆಯು ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಸಮಸ್ಯೆಗೆ ಸಂಬಂಧಿಸಿದ್ದು, ಕೆಲವು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗ್ರಾಮಕ್ಕೆ ಪ್ರವೇಶಿಸಿ, ಗ್ರಾಮದ ಕಾವಲು ಕಾಯುತ್ತಿದ್ದ ಈ ಮೂವರಿಗೆ ಗುಂಡು ಹಾರಿಸಿದ್ದಾರೆಂದು ತಿಳಿದು ಬಂದಿದೆ

ಮೇ 3ರಿಂದ ಮಣಿಪುರದಲ್ಲಿ ಘರ್ಷಣೆಗಳು ನಡೆಯುತ್ತಲೇ ಇವೆ. ಇದುವರೆಗೂ 120 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವುದಾಗಿ ಅಂದಾಜಿಸಲಾಗಿದ್ದು. ಹಿಂಸಾಚಾರ ಘಟನೆಗಳಲ್ಲಿ 3 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮಣಿಪುರ ರಾಜ್ಯದಲ್ಲಿ ಹಿಂಸಾಚಾರವನ್ನು ನಿಯಂತ್ರಿಸಲು ಮತ್ತು ಸಹಜ ಸ್ಥಿತಿಗೆ ಮರಳಲು ಸ್ಥಳೀಯ ಪೊಲೀಸರೊಂದಿಗೆ 40,000 ಕೇಂದ್ರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಲಾಗುತ್ತದೆ.

Violence broke out again in Manipur killing three


Ag.18: An incident took place in Manipur in which three people were killed in a firing attack by armed assailants in the wee hours of today. News agencies report that Manipur is still like an open pit and violence has broken out again today.

The firing took place in Towai Kuki village of Manipur’s Ukhrul district in the early hours of Friday. Villagers found three dead bodies after the attack. The deceased have been identified as Jamkhogin Hakip (26), Thangkhokai Hakip (35) and Hollenson Bait (24). This incident is related to the ongoing ethnic issue in the state and it is learned that some armed miscreants entered the village and shot the three men who were guarding the village.

Clashes have been going on in Manipur since May 3. It is estimated that more than 120 people have died so far. More than 3,000 people were injured in the incidents of violence. It is said that 40,000 central security personnel along with local police have been deployed to control the violence and restore normalcy in the state of Manipur.