HOLY ROSARY CHURCH, KUNDAPUR – 450 th JUBILEE SOUVENIR 2021

ಅನೇಕ ವಿಧಗಳಲ್ಲಿ ಪ್ರಯೋಜನೆಗಳನ್ನು ಪಡೆದು, ನನ್ನ ಸೋಲಿಸಿದ್ದೀರಿ : ಮಾಜಿ ಶಾಸಕ ಕೆ.ಆರ್.ರಮೇಶ್‌ಕುಮಾರ್ ಬೇಸರ

ಬೋರ್ ವೆಲ್ ಕೊರಿಸುವ ವೇಳೆ ಪಕ್ಕದ ಜಮೀನಿನ ವಾಸಿಗಳು ಹಲ್ಲೆ ನಡೆಸಿರುವ ಘಟನೆ ರಾಯಲ್ಪಾಡು ನೆಡೆದಿದೆ

ಕಲಾಕುಲ್: ಒಂದು ವರ್ಷದ ರಂಗ ತರಬೇತಿ ಡಿಪ್ಲೋಮಾ ಕೋರ್ಸ್/Kalakul: One-year Diploma Course in Theatre Training

ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಮಾಧ್ಯಮಗಳ ಮೇಲೆ ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ

ಕೋಲಾರ ಜಿಲ್ಲೆಯ 19 ಕೇಂದ್ರಗಳಲ್ಲಿ ಸಾಮಾನ್ಯ ಪರೀಕ್ಷೆ ಸುಗಮ -ಡಿಸಿ ಭೇಟಿಜೀವಶಾಸ್ತ್ರಕ್ಕೆ 1413 ಹಾಗೂ ಗಣಿತ ಶಾಸ್ತ್ರಕ್ಕೆ-438 ಮಂದಿ ಗೈರು-ರಾಮಚಂದ್ರಪ್ಪ

ಪ್ರತಿಷ್ಠಿತ ಮದರ್ ತೆರೇಸಾ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆಗೆ ಆದರ್ಶ ಶಿಕ್ಷಕ ರವಿದಾಸ್ ಶೆಟ್ಟಿ ಮುಖ್ಯಶಿಕ್ಷಕರಾಗಿ ನೇಮಕ

ಐಸ್‌ಕ್ರೀಂ ತಿಂದ ಬಳಿಕ ಅವಳಿ ಮಕ್ಕಳು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ: ಇದೀಗ ಬೆಳಕಿಗೆ ಬಂದಿದೆ ತಾಯಿಯೇ ವಿಷ ಉಣಿಸಿ ಸಾಯಿಸಿದ್ದಾಳೆ

ಮಂಡ್ಯ ಎ.18: ಐಸ್‌ಕ್ರೀಂ ತಿಂದ ಬಳಿಕ ಅವಳಿ ಮಕ್ಕಳು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ  ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿತ್ತು ಎಂಬ ಸುದ್ದಿ ಹರಡಿತ್ತು, ಆದರೆ ಇದೀಗ ತನಿಖೆಯಿಂದ ಅಘಾತಕಾರಿ ವಿಷಯ ತಿಳಿದು ಬಂದಿದೆ, ಮಕ್ಕಳ ತಾಯಿಯೇ ಪತಿಯ ಮೇಲಿನ ದ್ವೇಷದಿಂದ ತನ್ನ ಅವಳಿ ಜವಳಿ ಮಕ್ಕಳಿಗೆ ವಿಷ ಉಣಿಸಿದ್ದಲ್ಲದೆ ತಾನೂ ಆತ್ಮಹತ್ಯೆಗೆ ಯತ್ನಿಸಿದೆ ಎಂದು ತಿಳಿದು ಬಂದಿದೆ. ಹೀಗೆ ಏನೂ ಅರಿಯದ ಇಬ್ಬರು ಮುಗ್ಧ ಕಂದಮ್ಮಗಳು ಅಸುನೀಗಿವೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಪೂಜಾ ತನ್ನ ಪತಿ ಪ್ರಸನ್ನ ಮೇಲಿನ ಕೋಪದಲ್ಲಿ

ಮಕ್ಕಳಿಗೆ ವಿಷ ಉಜಿಸಿದ್ದಾಳೆ. ತ್ರಿಶುಲ್‌ ಮತ್ತು ತ್ರಿಶಾ ಎಂಬ ಅವಳಿ ಮಕ್ಕಳು ಹಾಗೂ ಇನ್ನೊಬ್ಬ ಮಗಳು ಬ್ಯಂದಾಗೆ ನಿನ್ನೆ ರಾತ್ರಿ ವಿಷ
ಉಣಿಸಿದ್ದಳು. ಇಂದು ಬೆಳಗ್ಗೆ ಇಬ್ಬರು ಮಕ್ಕಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ಐಸ್‌ ಕ್ರೀಂ ತಿಂದು ಮಕ್ಕಳು ಅಸುನೀಗಿದ್ದಾರೆ ಎಂದು.
ಸ್ಥಳೀಯವಾಗಿ ಸುದ್ದಿ ಹಬ್ಬಿತ್ತು. ಆದರೆ ಪೊಲೀಸ್‌ ವಿಚಾರಣೆ ವೇಳೆ ನಿಜ ವಿಚಾರ ಬಯಲಾಗಿದೆ.

ಪೂಜಾ ಮತ್ತು ಆಕೆಯ ಪತಿ ಪ್ರಸನ್ನ ಪದೇ ಪದೇ ಜಗಳವಾಡುತ್ತಿದ್ದರು. ಜಗಳದಿಂದ ಬೇಸತ್ತ ಪೂಜಾ ನಿನ್ನೆ ಮಕ್ಕಳಿಗೆ ವಿಷ ಉಣಿಸಿ ತಾನೂ
ತಿಂದಿದ್ದಳು. ಮನೆಯಲ್ಲಿ ಜಿರಳೆಗೆ ಹಾಕುತ್ತಿದ್ದ ಲಕ್ಷ್ಮಣ ರೇಖೆಯನ್ನು ಊಜಕ್ಕೆ ಹಾಕಿ ಮಕ್ಕಳಿಗೆ ತಿನ್ನಿಸಿದ್ದಳು. ಅಸ್ವಸ್ಥರಾಗಿದ್ದ ಪೂಜಾ ಮತ್ತು
ಮಕ್ಕಳನ್ನು ಮಂಡ್ಯ ಮಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಸ್ಪತ್ರೆಯಲ್ಲಿ ಅವಳಿ ಜವಳಿ ಕಂದಮ್ಮಗಳು ಸಾವನ್ನಪ್ಪಿದ್ದು ತಾಯಿ ಪೂಜಾ.
ಹಾಗೂ ಮೊದಲ ಮಗಳು ಬೃಂದಾಗೆ ಚಿಕಿತ್ಸೆ ನೀಡಲಾಗುತ್ತಿದೆ.

ಶ್ರೀರಂಗಪಟ್ಟಣದಲ್ಲಿ ತಳ್ಳುಗಾಡಿಯ ಐಸ್‌ಕ್ರೀಂ ತಿಂದ ಬಳಿಕ ಅವಳಿ ಮಕ್ಕಳು ಸಾವು

ಲೋಕಸಭಾ ಚುನಾವಣೆಗೆ ಮತದಾನ ದಿನ ಮೊದಲು ಮತದಾನ ಮಾಡಿ ತದನಂತರ ಕಾರ್ಯಕ್ರಮಕ್ಕೆ ಭಾಗವಹಿಸಿ-ಕಥೊಲಿಕ್ ಸಭಾ ಮಂಗ್ಳುರ್ ಕೇಂದ್ರಿಯ ಅಧ್ಯಕ್ಷ ಆಲ್ವಿನ್ ಡಿಸೋಜ