

Oct 4, Crossed Israel border, Jericho , Mount Temptation, Cable car, Mass at Good Shepard church, Stay at Nazareth.









































































ಕುಂದಾಪುರ: ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶದೊಂದಿಗೆ ಜೂನ್ 30, 2024 ರಂದು ಬಡಾಕೆರೆ ಹುಟ್ಟಿಕೊಂಡ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ ಇಂದು ಕುಂದಾಪುರ ತಾಲೂಕಿನಲ್ಲೇ ಉತ್ತಮ ಕ್ರೀಡಾ ಅಕಾಡೆಮಿಯಾಗಿ ಬೆಳೆಯುತ್ತಿದೆ. ಈ ಶುಭ ಸಂದರ್ಭದಲ್ಲಿ ಸಂಸ್ಥೆಯ ಮಾಲೀಕರಾದ ಅಜಿತ್ ಕೋಸ್ಟಾ ಇಂದು ಅವರು ತಾನು ಕಲಿತ ಬಡಾಕೆರೆ ಸರಕಾರಿ ಪ್ರಾಥಮಿಕ ಶಾಲೆಯ ಸುಮಾರು 20 ಮಕ್ಕಳಿಗೆ ಉಚಿತ ಬ್ಯಾಡ್ಮಿಂಟನ್ ತರಬೇತಿ ನೀಡುತಿದ್ದಾರೆ.
ಆರಂಭದಲ್ಲಿ 40 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಮೂರು ವಾರಗಳ ತರಬೇತಿ ನೀಡಲಾಯಿತು. ಈಗ ಈ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ 20 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು. ಅವರಿಗೆ ಉಚಿತ ತರಬೇತಿ, ಬ್ಯಾಟ್, ಟಿ ಶರ್ಟ್, ಶೂ ಹಾಗೂ ಲಘು ಉಪಹಾರ ನೀಡಿ ಪ್ರೋತ್ಸಾಹಿಸುತ್ತದೆ. ಕುಂದಾಪುರ ವಲಯ ಬಡಾಕೆರೆ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸೀತರಾಮ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಸಹಾಯ ಮಾಡಿದರು. ನಾಲ್ಕು ತಿಂಗಳ ಕಾಲ ನಡೆಯುವ ಈ ತರಬೇತಿ ಶಿಬಿರದಲ್ಲಿ ಸೆಪ್ಟೆಂಬರ್ ಕೊನೆಯ ಎರಡು ಭಾನುವಾರ ಮತ್ತು ಅಕ್ಟೋಬರ್ ಮೊದಲ ಎರಡು ಭಾನುವಾರ ಆಯ್ಕೆ ಟ್ರಯಲ್ಸ್ ನಡೆಯಿತು. ಇಲ್ಲಿ ಊತ್ತಮ 20 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದ ಅವರಿಗೆ ನಾಲ್ಕು ತಿಂಗಳ ಕಾಲ ತರಬೇತಿ ನೀಡಲಾಗುತ್ತಿದೆ. ಈ ಆಟಗಾರರನ್ನು ವಲಯ, ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಟೂರ್ನಿಗಳಿಗೆ ಕಳುಹಿಸಿಕೊಡಲಾಗುವುದು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಯರಾದ ಸೀತಾರಾಮ ಶೆಟ್ಟಿ ಅವರು, “ಅಜಿತ್ ನಮ್ಮ ಶಾಲೆಯ ಹೆಮ್ಮೆಯ ಹಳೆ ವಿದ್ಯಾರ್ಥಿ. ದೂರದ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರೂ ಇಲ್ಲಿರುವ ಮಕ್ಕಳ ಬಗ್ಗೆ ಅವರು ತೋರಿಸಿರುವ ಕಾಳಜಿ ಗಮನಾರ್ಹ. ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ ಆರಂಭಗೊಂಡು ಕೆಲವು ತಿಂಗಳು ಕಳೆಯುವಷ್ಟರಲ್ಲಿಯೇ ಅವರಿಗೆ ತಾನು ಕಲಿತ ಶಾಲೆಗೆ ಏನಾದರೂ ಮಾಡಬೇಕೆಂಬ ಆಶಯ ವ್ಯಕ್ತವಾಗಿರುವುದು ಖುಷಿಯ ವಿಚಾರ. ಗ್ರಾಮೀಣ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ಇಲ್ಲಿ ಮಕ್ಕಳು ಉತ್ತಮ ರೀತಿಯಲ್ಲಿ ಕಲಿತು ರಾಜ್ಯ ಮತ್ತು ದೇಶವನ್ನು ಪ್ರತಿನಿಧಿಸಿದರೆ ಅದೇ ಸ್ಮರಣೀಯ. ಸುಮಾರು 40 ಮಕ್ಕಳನ್ನು ಆಯ್ಕೆ ಮಾಡಿಕೊಟ್ಟಿದ್ದೇವೆ. ಅದರಲ್ಲಿ ಉತ್ತಮ ರೀತಿಯಲ್ಲಿ ಆಟಕ್ಕೆ ಹೊಂದಿಕೊಳ್ಳುವ 20 ಮಕ್ಕಳಿಗೆ ಉಚಿತ ಆಹಾರ, ಟಿ ಶರ್ಟ್, ಬ್ಯಾಟ್ ಮತ್ತು ಶೂ ನೀಡಿ ಅವರನ್ನು ಸಜ್ಜುಗೊಳಿಸುವ ಜವಾಬ್ದಾರಿ ಹೊತ್ತಿರುವ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ಗೆ ಯಶಸ್ಸು ಸಿಗಲಿ. ತಾನು ಕಲಿತ ಶಾಲೆಯನ್ನು ಮರೆಯದೆ ಇಲ್ಲಿಯ ಮಕ್ಕಳ ಬಗ್ಗೆ ಅವರು ತೋರಿದ ಕಾಳಜಿಗೆ ನಾವು ಯಾವಾಗಲೂ ಚಿರಋಣಿ”ಎನ್ನುತ್ತಾರೆ.
ಕುಂದಾಪುರದ ಮಕ್ಕಳು ರಾಷ್ಟ್ರ ಮಟ್ಟದಲ್ಲಿ ಮಿಂಚಬೇಕು: ಅಜಿತ್ ಡಿ ಕೋಸ್ಟಾ

ಕುಂದಾಪುರದ ಮಕ್ಕಳು ರಾಷ್ಟ್ರ ಮಟ್ಟದಲ್ಲಿ ಮಿಂಚಬೇಕು ಅಜಿತ್ ಡಿ ಕೋಸ್ಟಾ ಎಂದು ಅವರು ಹೇಳುತ್ತಾರೆ, ನನಗೆ ಚಿಕ್ಕಂದಿನಲ್ಲಿ ಆಡಲು ಯಾವುದೇ ಸೌಲಭ್ಯ ಇರಲಿಲ್ಲ. ಆಡುವ ಹಂಬಲವಿದ್ದರೂ ಹಳ್ಳಿಯ ಶಾಲೆಯಾದ ಕಾರಣ ಉತ್ತಮ ಸೌಲಭ್ಯದ ಕೊರತೆ ಇದ್ದಿತ್ತು. ಯಾವ ಸೌಲಭ್ಯವಿದೆಯೋ ಅದೇ ಆಟವನ್ನಾಡುವುದು ಅನಿವಾರ್ಯವಾಗಿತ್ತು. ಉದ್ಯೋಗ ಅರಸಿ ಕೊಲ್ಲಿ ರಾಷ್ಟ್ರಕ್ಕೆ ಹೋದ ಬಳಿಕ ಊರಿನಲ್ಲಿ ಒಂದು ಬ್ಯಾಡ್ಮಿಂಟನ್ ಅಕಾಡೆಮಿ ಸ್ಥಾಪಿಸಬೇಕು. ಅಲ್ಲಿ ನಮ್ಮೂರ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡಬೇಕೆಂದು ಕನಸು ಕಂಡಿದ್ದರು. ಈಗ ಅಜಿತ್ ಡಿ ಕೋಸ್ಟಾ ಅವರ ಕನಸು ನನಸಾಗಿದೆ.
ಇಂದು ಕುಂದಾಪುರ ಪರಿಸರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದಿಂದ ಕೂಡಿದ ಅಕಾಡೆಮಿ ಎದ್ದು ನಿಂತಿದೆ.

“ನಾವು ಅನುಭವಿಸಿದ ಕಷ್ಟವನ್ನು ನಮ್ಮೂರ ಈಗಿನ ಮಕ್ಕಳು ಅನುಸರಿಸಬಾರದು. ಅದರಲ್ಲೂ ನಾನು ಕಲಿತ ಶಾಲೆಗೆ ಏನಾದೂ ಕೊಡುಗೆ ನೀಡಬೇಕೆಂಬ ಹಂಬಲವಿದ್ದಿತ್ತು. ಉತ್ತಮ ಕ್ರೀಡಾಪಟುಗಳನ್ನು ಹುಟ್ಟುಹಾಕುವ ಉದ್ದೇಶ ನನ್ನದಾಗಿದೆ. ಈ ಹಿನ್ನೆಲೆಯಲ್ಲಿ ನಾನು ಕಲಿತ ಶಾಲೆಯ ಮಕ್ಕಳಿಗೆ ಉಚಿತ ತರಬೇತಿ ನೀಡಿ, ನಮ್ಮ ಕುಂದಾಪುರ ಮಕ್ಕಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ದಿನ ಬರಬೇಕೆಂಬುದು ಗುರಿ. ಆ ನಿಟ್ಟಿನಲ್ಲಿ ಬಡಾಕೆರೆ ಶಾಲೆಯನ್ನು ಆಯ್ಕೆ ಮಾಡಿಕೊಂಡಿರುವೆ, ಅದಕ್ಕೆ ಸೂಕ್ತ ತರಬೇತುದಾರರನ್ನೂ ಕೂಡ ನಿಯೋಜಿಸಲಾಗಿದೆ” ಎಂದು ಅಜಿತ್ ಡಿಕೋಸ್ಟಾ ಅವರು ಹೇಳಿದ್ದಾರೆ.

ಅಕಾಡೆಮಿಗೆ ನೂತನ ಕೋಚ್:

ಇದೇ ಸಂದರ್ಭದಲ್ಲಿ ಅಕಾಡೆಮಿಗೆ ನೂತನ ಕೋಚ್ ಆಗಿ ಕೊಡಗಿನ ಸೋಮಣ್ಣ ನಂಜಪ್ಪ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಮಡಿಕೇರಿಯ ಸೋಮವಾರ ಪೇಟೆಯ ಇಗ್ಗೊಡ್ಲಿನ ಮಾದಾಪುರದವರಾದ ಸೋಮಣ್ಣ ಅವರು ರಾಷ್ಟ್ರಮಟ್ಟದ ಹಾಕಿ ಆಟಗಾರರಾಗಿ ಈಗ ಬ್ಯಾಡ್ಮಿಂಟನ್ನಲ್ಲಿ ತಮ್ಮನ್ನು ತೊಡಗಿಸಿಕೊಂಡು ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ಇಲ್ಲಿರುವ ಮಕ್ಕಳಿಗೆ ಉತ್ತಮ ತರಬೇತಿ ನೀಡಿ ಅವರನ್ನು ಒಂದು ಹಂತಕ್ಕೆ ಕೊಂಡೊಯ್ಯುವ ಉದ್ದೇಶ ಇದೆ. ಚಿಕ್ಕಮಕ್ಕಳನ್ನು ಉತ್ತಮ ರೀತಿಯಲ್ಲಿ ಪಳಗಿಸಿದರೆ ಅವರು ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ ಉತ್ತಮ ಯೋಜನೆಗೆ ಮುಂದಾಗಿದೆ. ಇದರಲ್ಲಿ ಭಾಗಿಯಾಗಿ ಕಾರ್ಯನಿರ್ವಹಿಸಲು ಹೆಮ್ಮೆ ಅನಿಸುತ್ತಿದೆ,” ಎಂದು ಸೋಮಣ್ಣ ಹೇಳಿದ್ದಾರೆ. ಕುಂದಾಪುರದ ನಿಧಿಶ್ ಆಚಾರ್ಯ ಅವರು ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬ್ಯಾಡ್ಮಿಂಟನ್ ಸೆಂಟರ್ ರೂಪಿಸುವಲ್ಲಿ ಮಂಗಳೂರಿನ ಕ್ರೀಡಾಪಟು ರಾಯಲ್ ಡಿ ಸಿಲ್ವಾ ಅವರ ಕೊಡುಗೆ ಪ್ರಮುಖವಾದುದು.
ಈ ಯೋಜನೆಗೆ ನಮ್ಮ ಕುಟುಂಬದ ಬೆಂಬಲ ಆಶಿರ್ವಾದ ಇದೆ; ಅಜಿತ್ ಡಿ ಕೋಸ್ಟಾ

ಅಜಿತ್ ಡಿ ಕೋಸ್ಟಾ ಮೂಲತಹ ಕುಂದಾಪುರದ ಹಳೆಅಳ್ವೆಯವರಾಗಿದ್ದು, ಇವರು ಹಳೆಅಳ್ವೆಯ ದಿ. ಕಾಜಿಥಾನ್ ಡಿಕೋಸ್ಟಾ ಮತ್ತು ಕೊಸೆಸ್ ಡಿ ಕೋಸ್ಟಾ ಪುತ್ರರಾಗಿದ್ದಾರೆ. ಈ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ ಅರಾಲುಗುಡ್ಡೆ ಸಮೀಪದಲ್ಲಿದೆ. ಮಹತ್ವಾಕಾಂಕ್ಷೆಯ ಈ ಕೋಸ್ಟಾ ಬ್ಯಾಡ್ಮಿಂಟನ್ ಅಕಾಡೆಮಿಗೆ ಕುಟುಂಬದ ಸಂಪೂರ್ಣ ಬೆಂಬಲ ಇದೆಯೆಂದು ಹೇಳುತ್ತಾರೆ. ತಂದೆಯ ತಾಯಿಯ ಆಶಿರ್ವಾದಿಸಿದ್ದಾರೆ, ದಿ. ತಂದೆಯವದ ಆಶಿರ್ವಾದ ನಮ್ಮ ಮೇಲೆ ಇದೆಯೆಂದು ಧ್ರಡವಾಗಿ ನಂಬಿರುವ ಇವರಿಗೆ ಇವರ ಪತ್ನಿ ರೇಶ್ಮಾ ಡಿಕೋಸ್ಟಾ ಸಂಪೂರ್ಣ ಬೆಂಬಲ ನೀಡಿದ್ದಾರೆ ಹಾಗೇ ಮಕ್ಕಳಾದ ಅನೀಶಾ ಹಾಗೂ ಅಮನ್ ಸ್ವತ ಬ್ಯಾಡ್ಮಿಂಟನ್ ಆಟಗಾರರಾಗಿದ್ದು ಈ ಅಕಾಡೆಮಿಯ ಬಗ್ಗೆ ಅಭಿಮಾನ ಹೂಂದಿರುತ್ತಾರೆ.

ಮಹತ್ವದ ಕನಸು ಕಟ್ಟಿಕೊಂಡು, ಮಹತ್ವಾಕಾಂಕ್ಷೆ ಇಟ್ಟುಕೊಂಡು ಅಜಿತ್ ಡಿ ಕೋಸ್ಟಾರವರು ಹುಟ್ಟು ಹಾಕಿದ ಈಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ ಉತ್ತಮ ಕ್ರೀಡಾ ಅಕಾಡೆಮಿಯಾಗಿ ಬೆಳೆದು. ಈ ಸಂಸ್ಥೆಯಲ್ಲಿ ತರಬೇತಿ ಪಡೆದ ಕ್ರೀಡಾಳುಗಳು ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ, ಅಂತರಾಅಷ್ಟ್ರೀಯ ಮಟ್ಟದಲ್ಲಿ ಮಿಂಚಲಿ ಎಂದು, ಹಾಗೇ ಒಳ್ಳೆಯ, ಉದಾರ ಮನಸ್ಸಿನಿಂದ ಆರಂಭಿಸಿದ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿ ಎಂದು ‘ಜನನುಡಿ ಸುದ್ದಿ’ ಸಂಸ್ಥೆ ಹಾರೈಸುತ್ತದೆ – ಬರ್ನಾಡ್ ಜೆ.ಡಿಕೋಸ್ತಾ, ಕುಂದಾಪುರ. (ಸಂಪಾದಕರು)




ದಾವಣಗೆರೆ: ನ್ಯಾಮತಿಯ ಎಸ್ಬಿಐ ಬ್ಯಾಂಕ್ನಲ್ಲಿದ್ದ 12.95 ಕೋಟಿ ರೂ. ಮೌಲ್ಯದ 17.705 ಕೆಜಿ ಚಿನ್ನಾಭರಣವನ್ನು ಕಳ್ಳರು ಹೊತ್ತೊಯ್ದಿದ್ದಾರೆ ಎಂದು ಬ್ಯಾಂಕ್ ಮ್ಯಾನೇಜರ್ ಸುನೀಲ್ ಕುಮಾರ್ ಯಾದವ್ ಮಾಹಿತಿ ನೀಡಿದ್ದಾರೆ.
ನಗರದ ನೆಹರು ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಕಿಟಕಿ ಸರಳುಗಳನ್ನು ಮುರಿದು ಲಾಕರ್ನಲ್ಲಿದ್ದ ನಗದು ಹಾಗೂ ಚಿನ್ನಾಭರಣವನ್ನು ಕಳ್ಳರು ಹೊತ್ತೊಯ್ದಿದ್ದರು. ಎರಡು ದಿನಗಳ ಹಿಂದೆ ಕಳ್ಳರು ಈ ಕೃತ್ಯ ಎಸಗಿರುವ ಬಗ್ಗೆ ನ್ಯಾಮತಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಶನಿವಾರ ಹಾಗೂ ಭಾನುವಾರ ಎರಡು ದಿನ ಬ್ಯಾಂಕ್ ರಜೆ ಇದ್ದ ಕಾರಣ ಶುಕ್ರವಾರ ರಾತ್ರಿ ಕಳ್ಳರು ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.
ಕಳ್ಳರು ಗುರುತು ಪತ್ತೆಯಾಗದಂತೆ ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಸಮೇತ ಪರಾರಿಯಾಗಿದ್ದರು. ಅಲ್ಲದೇ ಶ್ವಾನದಳದ ಶ್ವಾನಗಳಿಗೆ ವಾಸನೆ ಗ್ರಹಿಸಲು ಸಾಧ್ಯವಾಗದಂತೆ ಬ್ಯಾಂಕ್ನ ಒಳಗಡೆ ಖಾರದ ಪುಡಿ ಎರಚಿದ್ದಾರೆ. ಕಳ್ಳರನ್ನು ಹಿಡಿಯಲು ಎಎಸ್ಪಿ ಸ್ಯಾಮ್ ವರ್ಗೀಸ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ.


ಶ್ರೀನಿವಾಸಪುರ : ತಾಲ್ಲೂಕಿನ ಯಲವಳ್ಳಿ ಯಿಂದ ಕೋಲಾರ ಶ್ರೀನಿವಾಸಪುರ ಮುಖ್ಯ ರಸ್ತೆಯ ತನಕ ಬಂಡಿದಾರಿಯಿದ್ದು ರಸ್ತೆ ಬದಿಯ ಜಮೀನು ಮಾಲೀಕರು ರಸ್ತೆಯನ್ನು ಸೋಮವಾರ ಸರ್ವೆ ಮಾಡಿ ಒತ್ತುವರಿ ತೆರವುಗೊಳಿಸಲಾಯಿತು.
ಹಲವು ವರ್ಷಗಳಿಂದ ಗ್ರಾಮಸ್ಥರು ಹಾಗೂ ಅಕ್ಕ ಪಕ್ಕದ ಜಮೀನು ಮಾಲೀಕರು ರಸ್ತೆ ಸಮಸ್ಯೆಯನ್ನು ಬಗೆಹರಿಸುವಂತೆ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು ಸಹ ಸಮಸ್ಯೆ ಬಗೆಹರಿದಿಲ್ಲ ಕಳೆದ ಏಳು ದಿನಗಳ ಹಿಂದೆ ಗ್ರಾಮಸ್ಥರು ಪುನಃ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದು ಸ್ಥಳಕ್ಕೆ ತಾಲೂಕು ದಂಡಾಧಿಕಾರಿಗಳು ಕಂದಾಯ ಇಲಾಖೆ ಹಾಗು ಸರ್ವೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸರ್ವೇ ಮಾಡಿ ಒತ್ತುವರಿಯಾಗಿದ್ದ ಜಮೀನು ಹೆಬ್ಬಟ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯ ಆನಂದ್ ರವರ ಮುಂದಾಳತ್ವದಲ್ಲಿ ಬಿಗಿ ಪೆÇಲೀಸ್ ಭದ್ರತೆಯಲ್ಲಿ ಒತ್ತುವರಿ ತೆರವುಗೊಳಿಸಿ ರಸ್ತೆ ಸಮಸ್ಯೆಯನ್ನು ಬಗೆಹರಿಸಿದ್ದರು ಗ್ರಾಮಸ್ಥರು ಸಹ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಆನಂದ್ ರವರಿಗೆ ಧನ್ಯವಾದಗಳು ತಿಳಿಸಿದರು.


ಶ್ರೀನಿವಾಸಪುರ : ನನ್ನ ಕ್ಷೇತ್ರಕ್ಕೆ ಸಂಬಂದಿಸಿದ ಗ್ರಾಮಗಳಲ್ಲಿ ಬಡಕುಟುಂಬಗಳ ಸಂಖ್ಯೆಯೇ ಹೆಚ್ಚಾಗಿದ್ದು , ಅವರ ಅಭಿವೃದ್ದಿಯೇ ನನ್ನ ಗುರಿ . ಅವರಿಗೆ ಸರ್ಕಾರದ ಯೋಜನೆಗಳಿಂದ ಸಿಗುವ ಸವಲತ್ತುಗಳನ್ನು ಪಕ್ಷಾತೀತವಾಗಿ ಮನೆಯ ಬಾಗಿಲಿಗೆ ನೀಡುವ ವ್ಯವಸ್ಥೆ ಮಾಡಲು ಇಚ್ಚಿಸಿದ್ದೇನೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತಿ ಕಚೇರಿಯ ಆವರಣದ ಮುಂಭಾಗದಲ್ಲಿ ಸೋಮವಾರ ಕೃಷಿ ಇಲಾಖೆಯಿಂದ ಕೃಷಿ ಪರಿಕರಗಳನ್ನು ಅರ್ಹ ಫಲಾನುಭವಿಗಳಿಗೆ ವಿವಿಧ ಯಂತ್ರೋಪಕರಣಗಳನ್ನು ವಿತರಿಸಿ ಮಾತನಾಡಿದರು.
ಜನತೆ ನನ್ನ ಮೇಲಿನ ಪ್ರೀತಿ ವಿಶ್ವಾಸಕ್ಕೆ ಮತ ಹಾಕಿ ನನ್ನನ್ನು ಗೆಲ್ಲಿಸಿಕೊಟ್ಟಿದ್ದಾರೆ ಅದಕ್ಕಾಗಿ ಇಂದು ನಾನು ಅವರ ಋಣ ತೀರಿಸುವ ಉದ್ದೇಶದಿಂದ ಕ್ಷೇತ್ರದಾದ್ಯಂತ ಬಡವರಿಗೆ ಮನೆಗಳ ನಿರ್ಮಾಣ ಸೇರಿದಂತೆ ಸಾರ್ವಜನಿಕರಿಗೆ ಬೇಕಾದ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡಲು ಶ್ರಮಿಸುತ್ತಿದ್ದೇನೆ ಎಂದರು.
ಕೃಷಿ ಯಂತ್ರೋಪಕರಣಗಳನ್ನು ರಿಯಾಯತಿ ಧರದಲ್ಲಿ ನೀಡಲಾಯಿತು. ಹಾಗು ಎನ್ಎಂಎಸ್ಎ ಆರ್ಎಡಿ ಯೋಜನೆಯಡಿಯಲ್ಲಿ ಜಾನುವಾರು ಘಟಕದ ಅಡಿಯಲ್ಲಿ ಮಂಜೂರಾತಿ ಪತ್ರವನ್ನು ವಿತರಿಸಿದರು.
ರೈತರಿಗೆ ಹಾಗು ಸಾರ್ವಜನಿಕರಿಗೆ ಸಂಬಂದಿಸಿದಂತೆ ಇರುವ ಸಮಸ್ಯೆಗಳನ್ನು ಅತಿ ಶೀಘ್ರವಾಗಿ ಇತ್ಯರ್ಥ ಮಾಡಿಕೊಡುವಂತೆ ತಹಶೀಲ್ದಾರ್, ಇಒ ರವರಿಗೆ ಸೂಚಿಸಿದರು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಇಒ ಎ.ಎನ್.ರವಿ, ಅಂಬೇಡ್ಕರ್ ನಿಗಮದ ನಿರ್ದೇಶಕಿ ಪ್ರತಿಮಾ, ಪುರಸಭೆ ಉಪಾಧ್ಯಕ್ಷೆ ಸುನಿತಾ, ಸದಸ್ಯ ಬಿ.ವಿ.ರೆಡ್ಡಿ ಮಾಜಿ ಅಧ್ಯಕ್ಷ ಶ್ರೀನಿವಾಸ್, ಕೃಷಿ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್, ಕೃಷಿ ಅಧಿಕಾರಿ ಈಶ್ವರ್, ಜಿ.ಪಂ.ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ, ಮುಖಂಡರಾದ ತೂಪಲ್ಲಿ ಮಧುಸೂದನರೆಡ್ಡಿ, ಕೊತ್ತೂರು ಅಮರನಾಥರೆಡ್ಡಿ , ಪೂಲ್ಶಿವಾರೆಡ್ಡಿ, ಮುನೆಪ್ಪ, ಅಂಬೇಡ್ಕರ್ಪಾಳ್ಯ ರವಿ, ಒಳಗೇರನಹಳ್ಳಿ ಎಸ್.ರಮೇಶ್ಕುಮಾರ್,ಶ್ರೀನಾಥ್, ಮನು, ಶಫಿವುಲ್ಲಾ ಇದ್ದರು.



ಕೋಲಾರ.ಅ.28: ಗಡಿಭಾಗಗಳಲ್ಲಿ ರೈತರ ಬೆಳೆ ನಾಶಮಾಡುತ್ತಿರುವ ಕಾಡಾನೆಗಳು ಹಾಗೂ ಕಾಡಂದಿಗಳ ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡಿ ನಷ್ಟವಾಗಿರುವ ಪ್ರತಿ ಎಕರೆಗೆ 5 ಲಕ್ಷ ಪರಿಹಾರ ಘೋಷಣೆ ಮಾಡಬೇಕೆಂದು ರೈತ ಸಂಘದಿಂದ ಉಪ ಸಂರಕ್ಷಣಾಧಿಕಾರಿಗಳಾದ ಏಡುಕೊಂಡಲು ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಕಳ್ಳರು ಬಂದು ಊರು ದೋಚಿದ ಮೇಲೆ ಊರ ಬಾಗಿಲು ಹಾಕಿದರೂ ಎಂಬ ಗಾದೆಯಂತೆ ಕಾಡಾನೆಗಳಿಂದ ರೈತರ ಬೆವರು ಸುರಿಸಿ ಬೆಳೆದ ಬೆಳೆ ನಾಶವಾದ ನಂತರ ಪತ್ತೆಯಾಗುವ ಅರಣ್ಯ ಅಧಿಕಾರಿಗಳ ರೈತ ವಿರೋಧಿ ದೋರಣೆ ಹಾಗೂ ಗಡಿಭಾಗದ ರೈತರ ಪಾಲಿಗೆ ಯಮಕಿಂಕರಾಗಿರುವ ಜನ ಪ್ರತಿನಿಧಿಗಳ ವಿರುದ್ದ ಗಡಿಭಾಗದ ನೊಂದ ರೈತ ಅಪೆÇ್ಪೀಜಿರಾವ್, ಶ್ರೀರಾಮಪ್ಪ ಆಕ್ರೋಷ ವ್ಯಕ್ತಪಡಿಸಿದರು.
ಮುಂಗಾರು ಮಳೆಯಿಲ್ಲದೆ ಬೆಳೆ ನಷ್ಟವಾಗಿ ಹಿಂಗಾರು ಮಳೆಯಿಂದ ಕೈಗೆ ಬಂದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ಜೊತೆಗೆ ಅಲ್ಪ ಸ್ವಲ್ಪ ಉಳಿದಿರುವ ಬೆಳೆಯನ್ನು ಕಾಡಾನೆಗಳು ರಾತ್ರೋ ರಾತ್ರಿ ನಾಶ ಮಾಡಿದರೆ ಉಳಿಕೆ ಇರುವ ಬೆಳೆಯನ್ನು ಕಾಡು ಹಂದಿಗಳು ಸಂಪೂರ್ಣವಾಗಿ ನಾಶಮಾಡಿ ರೈತರ ಬದುಕನ್ನು ಬೀದಿಗೆ ಬಿದ್ದಿದ್ದರೂ ಸರ್ಕಾರಗಳು ರೈತರ ಜೀವನದ ಜೊತೆ ಚಲ್ಲಾಟವಾಡಿದರೆ ಮತ್ತೊಂದಡೆ ಕಷ್ಟಾಪಟ್ಟು ರಾತ್ರಿ ಹಗಲು ಬೆವರು ಸುರಿಸಿ ಬೆಳೆದ ಬೆಳೆ ಕೈಗೆ ಬರುವ ಸಮಯದಲ್ಲಿ ರಾತ್ರೋರಾತ್ರಿ ಕಾಡಾನೆಗಳು ಸಂಪೂರ್ಣವಾಗಿ ನಾಶ ಮಾಡುತ್ತಿದ್ದು, ಬೆಳೆಯನ್ನು ರಕ್ಷಣೆ ಮಾಡದೆ ಪ್ರಾಣವನ್ನು ರಕ್ಷಣೆ ಮಾಡಿಕೊಳ್ಳದೆ ಅತಂತ್ರ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಗಡಿಭಾಗದ ರೈತರ ಕಾಡಾನೆಗಳ ಹಾವಳಿಗೆ ಶಾಶ್ವತ ಕೊಡುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪ ಮಾಡಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಗಡಿಭಾಗದ ರೈತರ ಪಾಲಿಗೆ ಕ್ಷೇತ್ರದ ಜನ ಪ್ರತಿನಿಧಿಗಳು ಅರಣ್ಯ ಅಧಿಕಾರಿಗಳು ಇದ್ದು, ಇಲ್ಲದಂತಾಗಿದ್ದಾರೆ. ಕಾಡಾನೆಗಳ ಹಾಳಿಯಿಂದ ಬೆಳೆ ನಷ್ಟವಾಗುತ್ತಿದ್ದರೂ ಕನಿಷ್ಠ ಪಕ್ಷ ಸೌಜನ್ಯಕ್ಕಾದರೂ ರೈತರ ಕಷ್ಟಗಳಿಗೆ ಸ್ಪಂಧಿಸುತ್ತಿಲ್ಲ. ಒಂದು ಕಡೆ ಬೆಳೆಯು ಇಲ್ಲ ಮತ್ತೊಂದು ಕಡೆ ಪರಿಹಾರವು ಇಲ್ಲದೆ ಜಾತಕ ಪಕ್ಷಿಗಳಂತೆ ರೈತರು ಕಣ್ಣೀರು ಸುರಿಸುತ್ತಿದ್ದರೂ, ಮನ ಕರಗದ ಅಧಿಕಾರಿಗಳ ಜನ ಪ್ರತಿನಿಧಿಗಳ ರೈತ ವಿರೋಧಿ ದೋರಣೆಗೆ ಆಕ್ರೋಷ ವ್ಯಕ್ತಪಡಿಸಿದರು.
ಕೋಟ್ಯಾಂತರ ರೂಪಾಯಿ ಅನುದಾನದಲ್ಲಿ ಕಾಡಾನೆಗಳ ಹಾವಳಿಗೆ ಅಭಿವೃದ್ದಿಪಡಿಸಿರುವ ಸೋಲರ್ ನಿರ್ವಹಣೆ ಇದ್ದು ಇಲ್ಲದಂತಾಗಿದೆ. ಗಡಿಭಾಗದಲ್ಲಿ ಸೋಲಾರ್ ಕಂಬಗಳನ್ನೇ ನೆಲಕ್ಕೆ ಉರುಳಿಸಿ ಕಟಾವಿಗೆ ಬಂದಿದ್ದ, ರಾಗಿ, ಭತ್ತ ಮತ್ತಿತರ ವಾಣಿಜ್ಯ ಬೆಳೆಗಳನ್ನು ನಾಶ ಮಾಡಿದ್ದರೂ ಸ್ಥಳಕ್ಕೆ ಬೇಟಿ ನೀಡದ ತಾಲ್ಲೂಕಾಡಳಿತದ ವಿರುದ್ದ ಕಿಡಿ ಕಾರಿದರು.
ಒಂದು ವಾರದೊಳಗೆ ಕಾಡಾನೆ ಹಾಗೂ ಕಾಡು ಹಂದಿಗಳ ಹಾವಳಿಯಿಂದ ನಷ್ಟವಾಗಿರುವ ಪ್ರತಿ ಎಕರೆಗೆ 5 ಲಕ್ಷ ಪರಿಹಾರ ವಿತರಣೆ ಮಾಡಿ ಕಾಡಾನೆಗಳನ್ನು ನಿಯಂತ್ರಿಸಲು ವಿಶೇಷ ತಂಡ ರಚನೆ ಮಾಡಿ ಸರ್ಕಾರದ ಮೇಲೆ ಒತ್ತಡ ಹಾಕಿ ಶಾಶ್ವತ ಪರಿಹಾರ ಕೊಡಿ ಇಲ್ಲವೆ ಆನೆ ಹಿಡಿಯಲು ಆದೇಶವನ್ನಾದರೂ ಕೊಡಿ ಸ್ವಾಮಿ ಇಲ್ಲವಾದರೆ ಬುಡ್ಡಿ ದೀಪಗಳೊಂದಿಗೆ ಶಾಸಕರ ಮತ್ತು ಅರಣ್ಯ ಅಧಿಕಾರಿಗಳ ಮನೆ ಮುಂದೆ ಹೋರಾಟ ಮಾಡುವ ಮುಖಾಂತರ ನ್ಯಾಯ ಪಡೆದುಕೊಳ್ಳುವ ಎಚ್ಚರಿಕೆಯ ಜೊತೆಗೆ ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಏಡುಕೊಂಡಲು ಗಡಿಭಾಗದ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕಾಡಾನೆಗಳಿಂದ ರೈತರ ಬೆಳೆ ಪ್ರಾಣ ರಕ್ಷಣೆ ಮಾಡುವ ಜೊತೆಗೆ ದ್ವನಿವರ್ದಕ ಮುಖಾಂತರ ರೈತರಲ್ಲಿ ಜಾಗೃತಿ ಮೂಡಿಸಿ ಬೆಳೆ ಪರಿಹಾರವನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ, ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಗೊಲ್ಲಹಟ್ಟಿ ಲಕ್ಷಣ್, ಗೋವಿಂದಪ್ಪ, ಸುರೇಶ್, ಕಾಮುಸಮುದ್ರ ಹೋ.ಅ ಮುನಿಕೃಷ್ಣ, ಹಸಿರು ಸೇನೆ ಜಿಲ್ಲಾದ್ಯಕ್ಷ ಕಿರಣ್, ಜಿಲ್ಲಾ ಉಪಾಧ್ಯಕ್ಷ ಚಾಂದ್ಪಾಷ, ಯಾರಂಘಟ್ಟ ಗೀರಿಶ್, ಶೈಲಜ, ರಾಧ, ಶೋಭ, ಚೌಡಮ್ಮ, ಲಕ್ಷಮ್ಮ, ಸುಗುಣ, ಮುಂತಾದವರಿದ್ದರು.




ಶಂಕರನಾರಾಯಣ: ದಿನಾಂಕ 28/10/2024 ರಂದು ಮೈಸೂರಿನ ಶಾರದಾ ವಿಲಾಸ್ ಶಿಕ್ಷಣ ಸಂಸ್ಥೆಗಳ ಶತಮಾನೋತ್ಸವ ಭವನದಲ್ಲಿ ನಡೆದ ಮೈಸೂರು ವಿಭಾಗಮಟ್ಟದ ಟಿ ಸಿ ಎಸ್ ಗ್ರಾಮೀಣ ಮಾಹಿತಿ ತಂತ್ರಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಮದರ್ ತೆರೇಸಾಸ್ ಪದವಿ ಪೂರ್ವ ಕಾಲೇಜು ಶಂಕರನಾರಾಯಣ ಇಲ್ಲಿನ ದ್ವಿತೀಯ ಪಿ. ಯು. ಸಿ ವಿಜ್ಞಾನ ವಿಭಾಗದ ಮಾಸ್ಟರ್ ಸುಜನ್ ಶೆಟ್ಟಿ ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿ ತುಮಕೂರಿನಲ್ಲಿ ನಡೆಯುವ ರಾಜ್ಯಮಟ್ಟದ ಟಿ ಸಿ ಎಸ್ ಗ್ರಾಮೀಣ ತಂತ್ರಜ್ಞಾನ ರಸಪ್ರಶ್ನೆ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ
ಅತ್ಯಂತ ಪೈಪೋಟಿಯಿಂದ ಕೂಡಿದ ಈ ಸ್ಪರ್ಧೆಯಲ್ಲಿ ಚಾಣಾಕ್ಷತನದಿಂದ ಉತ್ತರಿಸಿ ಆಯ್ಕೆ ಯಾಗಿರುತ್ತಾನೆ
ಮಾಹಿತಿ ತಂತ್ರಜ್ಞಾನದಲ್ಲಿ ವಿಶೇಷ ನೈಪುಣ್ಯತೆಯನ್ನು ಹೊಂದಿರುವ ಪ್ರತಿಭಾವಂತ ವಿದ್ಯಾರ್ಥಿಯ ಅಪ್ರತಿಮ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ & ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿರುತ್ತಾರೆ.




ಕುಂದಾಪುರ (ಅ.28): ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ಎಂಎಂ ಹಾಗೂ ವಿಕೆಆರ್ ಶಾಲೆಗಳ ಟೀಚರ್ ಟ್ರೈನಿಂಗ್ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ನಿರೂಪಣೆಯ ಕೌಶಲ್ಯದ ಕುರಿತು ಕಾರ್ಯಾಗಾರ ನೆರವೇರಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕಿಯರಾದ ಸ್ವಪ್ನ ಹಾಗೂ ಶ್ವೇತಾ ಇವರು ನಿರೂಪಣಾ ಕೌಶಲ್ಯದ ಕುರಿತು ಹಲವು ಮಾಹಿತಿಗಳನ್ನು ಪ್ರಾತ್ಯಕ್ಷಿತೆಯ ಮೂಲಕ ನೀಡಿದರು.
ಪ್ರಾಂಶುಪಾಲೆ ಡಾ. ಚಿಂತನ ರಾಜೇಶ್ ಹಾಗೂ ಸಂಯೋಜಕಿ ರಜನಿ ಉಪಸ್ಥಿತರಿದ್ದರು. ಶಿಕ್ಷಕ ವಿದ್ಯಾರ್ಥಿನಿಯರಾದ ಸುಶ್ಮಿತಾ, ಮಾಲತಿ, ಹಾಗೂ ಜ್ಯೋತಿ ಕಾರ್ಯಕ್ರಮವನ್ನು ನಿರೂಪಿಸಿದರು.


