HOLY ROSARY CHURCH, KUNDAPUR – 450 th JUBILEE SOUVENIR 2021

ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಗೆ ಧರ್ಮಾಧ್ಯಕ್ಷರ ಭೇಟಿ : ಗುರುಹಿರಿಯಗೆ ಗೌರವ ನೀಡಿ

JANANUDI NETWORK

ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಗೆ ಧರ್ಮಾಧ್ಯಕ್ಷರ ಭೇಟಿ : ಗುರುಹಿರಿಯಗೆ ಗೌರವ ನೀಡಿ


ಕುಂದಾಪುರ:ವಿದ್ಯಾರ್ಥಿಗಳು ಗುರುಹಿರಿಯಗೆ ಗೌರವ ನೀಡಿ ಆದರ್ಶ ವಿದ್ಯಾರ್ಥಿಗಳಾಗಿ, ಒಳ್ಳೆಯ ನಡತೆಯಿಂದ ಬದುಕಬೇಕಾಗಿದೆ.ನೆಲ ಜಲ ರಕ್ಷಣೆಗೆ ಆಧ್ಯತೆ ನೀಡಬೇಕಾಗಿದ್ದು,ಒಳ್ಳೆಯ ಕಾರ್ಯದಿಂದ ದೇವರ ಆಶೀರ್ವಾದ ಲಭಿಸುತ್ತದೆ ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪರಮಪೂಜ್ಯ ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅವರು ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಗೆ ಅಧಿಕೃತ ಭೇಟಿಯ ಸಂದರ್ಭದಲ್ಲಿ ಆಶೀರ್ವಾಚನ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ನಮ್ಮ ಸುತ್ತಮುತ್ತ ಪರಿಸರದ ಸ್ವಚ್ಚತೆಯ ಕಡೆಗೆ ಗಮನಕೊಡಬೇಕಾಗಿದೆ.ಮರಗಿಡಗಳನ್ನು ಬೆಳೆಸಬೇಕಾಗಿದೆ. ಇನ್ನೊಬ್ಬರಿಗೆ ಸಹಾಯ ಮಾಡುವ ಮನೋಭಾವನೆ ಬೆಳಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕ,ಕುಂದಾಪುರ ಹೋಲಿ ರೋಜರಿ ಇಗರ್ಜಿಯ ಪ್ರಧಾನ ಧರ್ಮಗುರು ಅತೀ ವಂ.ಫಾ.ಸ್ಟ್ಯಾನಿ ತಾವ್ರೊ,ಸಹಾಯಕ ಧರ್ಮಗುರು ಫಾ.ರೋಯ್ ಲೋಬೊ, ನೂತನ ಸಹಾಯಕ ಧರ್ಮಗುರು ಫಾ.ವಿಜಯ ಡಿ,ಸೋಜಾ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಅಸುಂತಾ ಲೋಬೊ ಸ್ವಾಗತಿಸಿ,ವರದಿ ವಾಚಿಸಿದರು.ಶಿಕ್ಷಕ ಭಾಸ್ಕರ್ ಗಾಣಿಗ ವಂದಿಸಿದರು.ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

ದಲಿತ ವ್ಯಕ್ತ್ತಿಯನ್ನು ಬೆತ್ತಲೆ ಮೆರವಣಿಗೆ ಮಾಡಿರುವ ಆರೋಪಿಗಳ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸಿ ಗಡಿಪಾರು ಮಾಡಿ –ರೈತ ಸಂಘ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ದಲಿತ ವ್ಯಕ್ತ್ತಿಯನ್ನು ಬೆತ್ತಲೆ ಮೆರವಣಿಗೆ ಮಾಡಿರುವ ಆರೋಪಿಗಳ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸಿ ಗಡಿಪಾರು ಮಾಡಿ –ರೈತ ಸಂಘ

ಕೋಲಾರ. ಗುಂಡ್ಲು ಪೇಟೆ ತಾಲ್ಲೂಕಿನಲ್ಲಿ ವೀರನ ಪುರ ಗ್ರಾಮದ ಪ್ರತಾಪ್ ಎಂಬ ದಲಿತ ವ್ಯಕ್ತ್ತಿಯನ್ನು ಬೆತ್ತಲೆ ಮೆರವಣಿಗೆ ಮಾಡಿರುವ ಆರೋಪಿಗಳ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸಿ ಗಡಿಪಾರು ಮಾಡಬೇಕು ಹಾಗೂ ಗ್ರಾಮದಲ್ಲಿ ಶಾಂ ತಿ ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ರೈತ ಸಂಘದಿಂದ ಉಪ ತಹಶೀಲ್ದಾರ್‍ರವರ ಮುಖಾಂತರ ಗೃಹ ಮಂತ್ರಿಗೆ ಮನವಿ ನೀಡಿ ಅಗ್ರಹಿಸಲಾಯಿತು
ಮನವಿ ನೀಡಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ದೇಶಕ್ಕೆ ಸ್ವ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಇನ್ನೂ ಜಾತಿ ಪದ್ದತಿ ಜೀವಂತವಾಗಿರುವುದು ಮಾನವ ಜನ್ಮಕ್ಕೆ ನಾಚಿಕೆಯಾಗಬೇಕು ಆದುನಿಕತೆ ಮುಂದುವರೆದು ಜೀವನ ಶೈಲಿ ಬದಲಾಗಿರುವ ಕಾಲದಲ್ಲಿ ಈ ರೀತಿ ಜಾತಿ ಜಾತಿಗಳ ನಡುವೆ ಸಂಘರ್ಷ ಇರುವುದು ನಂಬಲಾರದ ವಿಷಯವಾದರೂ ಇದು ಮನುಕುಲದ ಘೋರವಾದ ವಿಚಾರ. ತಾಯಿ ಗರ್ಭದಲ್ಲಿರುವಾಗ ಪರೀಕ್ಷೆ ಮಾಡುವ ವೈದ್ಯರು ಯಾವ ಜಾತಿ ಎಂದು ಕೇಳುವುದಿಲ್ಲ. ವಿದ್ಯಾಭ್ಯಾಸ ಕಲಿಸುವಾಗ ಗುರುಗಳ ಜಾರಿ ಕೇಳುವುದಿಲ್ಲ ಆದರೆ ಶಾಶ್ವತವಿಲ್ಲದ ಮೂರು ದಿನದ ಬದುಕಿನಲ್ಲಿ ಈ ರೀತಿ ಜಾತಿಗಳ ಹೆಸರಿನಲ್ಲಿ ಜೀವನ ಮಾಡುವ ಬದುಕು ಮಾತು ಬರದ ಮೂಕ ಪ್ರಾಣಿಗಳಿಗಿಂತ ಕೀಳಾಗಿದ್ದಾರೆ. ಅದರೆ ರಾಜಕಾರಣಿಗಳ ರಾಜಕೀಯ ಭವಿಷ್ಯಕ್ಕೆ ಇಂದು ಜಾತಿಗಳಲ್ಲಿ ವಿಗಂಡಣೆ ಮಾಡಿ ತಮ್ಮ ಬೇಳೆ ಒಂದು ಕಡೆ ಬೇಯಿಸುಕೊಳ್ಳುತ್ತಿದ್ದರೆ ಇವರ ರಾಜಕೀಯ ಭವಿಷ್ಯಕ್ಕೆ ಏನು ಅರಿಯದ ಜನಸಾಮಾನ್ಯರು ಬಲಿಯಾಗುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ ರಾಜ್ಯ ಸಮ್ಮೀಶ್ರ ಸರ್ಕಾರದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಜನ ಸಾಮಾನ್ಯರ ಸಮಸ್ಯೆ ಬಗೆಹರಿಸಬೇಕಾದ ಜನ ಪ್ರತಿನಿದಿಗಳು ಕೋಮ ಸ್ಥಿತಿಯಲ್ಲಿದ್ದಾರೆ. ಇನ್ನೂ ಗುಂಡ್ಲುಪೇಟೆ ತಾಲ್ಲೂಕಿನ ವೀರನಪುರ ಗ್ರಾಮದ ಪ್ರತಾಪ್ ಎಂಬ ದಲಿತ ಯುವಕನನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿರುವ ಆರೋಪಿಗಳ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸಿ ಅವರನ್ನು ಗಡಿಪಾರು ಮಾಡಿ ಮುಂದೆ ಈ ರೀತಿ ಯಾವುದೇ ಜಾತಿ ಸಂಘರ್ಷ ಮಾಡಲು ಭಯ ಬೀಳುವ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೆಕು, ಹಾಗೂ ಗ್ರಾಮದಲ್ಲಿ ಎಲ್ಲಾ ಸಮುದಾಯದ ಜನರನ್ನು ಒಗ್ಗೂಡಿಸಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕೆಂದು ಮಾನ್ಯ ಗೃಹ ಮಂತ್ರಿಗಳನ್ನು ಅಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪ ತಹಶೀಲ್ದಾರ್ ಸುಜಾತ ರವರು ನಿಮ್ಮ ಈ ಮನವಿಯನ್ನು ಅತೀಶೀಘ್ರವಾಗಿ ಗೃಹ ಮಂತ್ರಿಗಳಿಗೆ ಕಳುಹಿಸಿ ಕೊಡುವ ಭರವಸೆ ನೀಡಿದರು.
ಮನವಿ ನೀಡುವಾಗ ಜಿಲ್ಲಾದ್ಯಕ್ಷೆ ಎ,ನಳಿನಿ, ಪುರುಷೋತ್ತಮ್, ವೆಂಕಟೇಶಪ್ಪ, ಮಂಜುನಾಥ್, ನವೀನ್, ಮಂಜು, ಪುತ್ತೇರಿ ರಾಜು ಮುಂತಾದವರಿದ್ದರು.

ಸರ್ಕಾರದ ಮಹತ್ವಾಕಾಂಕ್ಷೆಯ ಸ್ವಚ್ಚ ಮೇವ ಜಯತೆ ಹಾಗೂ ಜಲಾಮೃತ ಯೋಜನೆಗಳಿಗೆ ಅಧಿಕೃತವಾಗಿ ಚಾಲನೆ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಸರ್ಕಾರದ ಮಹತ್ವಾಕಾಂಕ್ಷೆಯ ಸ್ವಚ್ಚ ಮೇವ ಜಯತೆ ಹಾಗೂ ಜಲಾಮೃತ ಯೋಜನೆಗಳಿಗೆ ಅಧಿಕೃತವಾಗಿ  ಚಾಲನೆ 

ಸರ್ಕಾರದ ಮಹತ್ವಾಕಾಂಕ್ಷೆಯ ಸ್ವಚ್ಚ ಮೇವ ಜಯತೆ ಹಾಗೂ ಜಲಾಮೃತ ಯೋಜನೆಗಳಿಗೆ ಅಧಿಕೃತವಾಗಿ ಇಂದು ಚಾಲನೆ ದೊರೆಕಿದೆ. ಯರ್ರಂವಾರಿಪಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಪಿ ಡಿ ಒ ಏಜಜ್ ಪಾಶಾ ಯರ್ರಂವಾರಿಪಲ್ಲಿ ಗ್ರಾಮ ಪಂಚಾಯತಿ ಗಿಡಗಳನ್ನು ನೆಡುವುದರ ಮೂಲಕ  ಈ ಯೋಜನೆಗೆ ಚಾಲನೆ ನೀಡಿದರು.

ಡಿಸೆಂಬರ್ ಅಂತ್ಯದೊಳಗೆ ಯರಗೋಳ್ ಡ್ಯಾಂ ಕಾಮಗಾರಿ ಪೂರ್ಣ -ಕೆ.ಆರ್ ರಮೇಶ್ ಕುಮಾರ್

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಡಿಸೆಂಬರ್ ಅಂತ್ಯದೊಳಗೆ ಯರಗೋಳ್ ಡ್ಯಾಂ ಕಾಮಗಾರಿ ಪೂರ್ಣ -ಕೆ.ಆರ್ ರಮೇಶ್ ಕುಮಾರ್

ಕೋಲಾರ: ಇದೇ ವರ್ಷದ ಡಿಸೆಂಬರ್ ಅಂತ್ಯದೊಳಗೆ ಯರಗೋಳ್ ಡ್ಯಾಂ ಕಾಮಗಾರಿಯನ್ನು ಪೂರ್ಣಗೊಳಿಸಿ ಜನವರಿ 01 ರಂದು ಡ್ಯಾಂ ಅನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಮಾನ್ಯ ವಿಧಾನಸಭಾಧ್ಯಕ್ಷರಾದ ಕೆ. ಆರ್ ರಮೇಶ್ ಕುಮಾರ್ ಅವರು ತಿಳಿಸಿದರು.

ಇಂದು ಜಿಲ್ಲೆಯ ಶಾಸಕರು ಹಾಗೂ ಸಂಸದರೊಂದಿಗೆ ಯರಗೋಳ್ ಜಲಾಶಯದ ಕಾಮಗಾರಿ ಸ್ಥಳವನ್ನು ಪರಿವೀಕ್ಷಣೆ ಮಾಡಿ ಮಾತನಾಡಿದ ಅವರು, ಈ ಡ್ಯಾಂ ಪೂರ್ಣಗೊಂಡರೆ 8 ಟಿ.ಎಂ.ಸಿ ನೀರನ್ನು ಸಂಗ್ರಹಣೆ ಮಾಡಬಹುದಾಗಿದೆ. 2016ರಲ್ಲಿ ನಾನು ಇಲ್ಲಿಗೆ ಬಂದಾಗ ಈ ಕಾಮಗಾರಿಯ ಸ್ಥಿತಿ ಶೋಚನೀಯವಾಗಿತ್ತು. ಈಗ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ ಎಂದರು. 

ಕೆ.ಸಿವ್ಯಾಲಿ ನೀರನ್ನು ತರಲು ಸಾಕಷ್ಟು ಅಡೆತಡೆಗಳು ಉಂಟಾದವು. ಅವುಗಳನ್ನು ನಿವಾರಿಸಿ ಜಿಲ್ಲೆಗೆ ನೀರು ಹರಿಸಲಾಗುತ್ತಿದೆ. ಒಳ್ಳೆಯ ಕೆಲಸಗಳನ್ನು ಮಾಡುವಾಗ ವಿಘ್ನಗಳು ಸಹಜ. ಈ ವರ್ಷದ ಅಂತ್ಯದ ವೇಳೆಗೆ 480 ಎಂಎಲ್‍ಡಿ ನೀರು ಜಿಲ್ಲೆಗೆ ಹರಿಯುತ್ತದೆ. ಕೆರೆಗಳ ಪುನಃಶ್ಚೇತನಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಕೆರೆ ಸಂಜೀವಿನಿ ಯೋಜನೆಯಲ್ಲಿ ಕೆಸಿ ವ್ಯಾಲಿ ನೀರು ಹರಿಯುವ ಪ್ರಮುಖ ಕೆರೆಗಳ ಹೂಳು ತೆಗೆಯಲಾಗುತ್ತದೆ. ನೀಲಗಿರಿ ಮತ್ತು ಜಾಲಿ ಮರಗಳನ್ನು ತೆಗೆಯಲು ಶಾಸನವನ್ನು ಮಾಡಲಾಗಿದೆ. ಅದರಂತೆ ಹಂತ ಹಂತವಾಗಿ ನೀಲಗಿರಿ ಮತ್ತು ಜಾಜಿ ಮರಗಳನ್ನು ತೆರವುಗೊಳಿಸಲಾಗುತ್ತಿದೆ ಎಂದರು. 

ಎತ್ತಿನ ಹೊಳೆ ಯೋಜನೆಯು 14 ಸಾವಿರ ಕೋಟಿ ರೂ.ಗಳ ಬೃಹತ್ ಯೋಜನೆ ಸಕಲೇಶಪುರದ ಬಳಿ 7 ಹೊಳೆಗಳಿಂದ ಹೋಗುವ ನೀರನ್ನು ತಡೆಗೋಡೆಗಳನ್ನು ನಿರ್ಮಿಸಿ ಪೈಪ್‍ಲೈನ್ ಮೂಲಕ ತರಲಾಗುತ್ತದೆ. ಇದರಲ್ಲಿ ಅಂದಾಜು 24 ಟಿಎಂಸಿ ನೀರು ಸಿಗುತ್ತದೆ. ತುಮಕೂರು, ಬೆಂಗಳೂರು ಜಿಲ್ಲೆಗಳಿಗೆ ನೀಡಿದ ನಂತರ 8 ಟಿ.ಎಂ.ಸಿ ನೀರು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ದೊರೆಯಲಿದೆ. ತಡೆಗೋಡೆಗಳ ಶೇ.90 ರಷ್ಟು ಕಾಮಗಾರಿ ಮುಗಿದಿದೆ. 260 ಕಿ.ಮೀ ದೂರದಿಂದ ನೀರನ್ನು ತರಬೇಕಿದ್ದು, ಶೇ.70 ರಷ್ಟು ಪೈಪ್‍ಲೈನ್ ಕಾಮಗಾರಿ ಮುಗಿದಿದೆ. 2021 ಜನವರಿ ವೇಳೆಗೆ ಎತ್ತಿನ ಹೊಳೆ ನೀರನ್ನು ಜಿಲ್ಲೆಗೆ ತರಲಾಗುವುದು ಎಂದರು. 

ಕೋಲಾರ ಸಂಸದರಾದ ಎಸ್.ಮುನಿಸ್ವಾಮಿ ಅವರು ಮಾತನಾಡಿ, ಮಾನ್ಯ ಸಭಾಧ್ಯಕ್ಷರಾದ ಕೆ.ಆರ್ ರಮೇಶ್ ಕುಮಾರ್ ಅವರ ಇಚ್ಛಾಶಕ್ತಿಯಿಂದ ಯರಗೋಳ್ ಡ್ಯಾಂ ನಿರ್ಮಾಣವಾಗುತ್ತಿದೆ. ಇವರು ಸತತವಾಗಿ ಕಾಮಗಾರಿಯ ಬೆನ್ನತ್ತಿ ವೇಗವಾಗಿ ಕಾಮಗಾರಿ ನಡೆಯುವಂತೆ ಮಾಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಶಾಸಕರು ಹಾಗೂ ನಾನು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು. 

ಕೋಲಾರ ಶಾಸಕರಾದ ಕೆ. ಶ್ರೀನಿವಾಸಗೌಡ ಅವರು ಮಾತನಾಡಿ,  ಧರ್ಮಸಿಂಗ್ ಅವರ ಸರ್ಕಾರದಲ್ಲಿ 105 ಕೋಟಿ ಅನುದಾನದಲ್ಲಿ ಈ ಯೋಜನೆಯನ್ನು ತರಲಾಯಿತು. ಅಂದು ನಾನು ಸಚಿವನಾಗಿದ್ದೆ. 10 ವರ್ಷಗಳ ನಂತರ ಪುನಃ ಡ್ಯಾಂ ಪೂರ್ಣಗೊಳಿಸುವ ಅವಕಾಶ ಸಿಕ್ಕಿದೆ. ಈ ಡ್ಯಾಂ ನಿರ್ಮಾಣದಿಂದ ಕೋಲಾರ, ಬಂಗಾರಪೇಟೆ, ಮಾಲೂರು ಹಾಗೂ ಕೆಜಿಎಫ್‍ಗಳಿಗೆ ಕುಡಿಯುವ ನೀರನ್ನು ಒದಗಿಸಬಹುದಾಗಿದೆ. ಇನ್ನು ಮುಂದೆ ಬೀಳುವ ಮಳೆಯ ನೀರು ಡ್ಯಾಂನಲ್ಲಿ ಸಂಗ್ರಹವಾಗುತ್ತದೆ ಎಂದರು. 

ಬಂಗಾರಪೇಟೆ ಶಾಸಕರು ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ 

ಎಸ್.ಎನ್ ನಾರಾಯಣಸ್ವಾಮಿ ಅವರು ಮಾತನಾಡಿ, ರಮೇಶ್ ಕುಮಾರ್ ಅವರು ಕೋಲಾರ ಜಿಲ್ಲೆಗೆ ನೀರು ತಂದ ಆಧುನಿಕ ಭಗೀರಥ. ಯರಗೋಳ್ ಯೋಜನೆಗೆ ಶ್ರೀನಿವಾಸಗೌಡರು ತಳಪಾಯ ಹಾಕಿದರು. ಈ ಯೋಜನೆಗೆ ಮುಳುಗಡೆಯಾಗುವ 124 ಎಕರೆ ಅರಣ್ಯ ಭೂಮಿ ಹಾಗೂ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಅಡತಡೆಗಳು ಉಂಟಾದವು. ಈ ಯೋಜನೆಯಿಂದ ಮುಳುಗಡೆಯಾಗುವ ರೈತರಿಗೆ ಪರ್ಯಾಯವಾಗಿ ಬಲಮಂದೆ ಸುತ್ತಮುತ್ತ ಇರುವ ಸರ್ಕಾರಿ ಜಮೀನನ್ನು ನೀಡುವುದಾಗಿ ಭರವಸೆ ನೀಡಿದ ನಂತರ ರೈತರು ಒಪ್ಪಿದರು. ಅರಣ್ಯ ಇಲಾಖೆ ಜಮೀನನ್ನು ಪಡೆಯಲು 3 ಬಾರಿ ದೆಹಲಿಗೆ ಹೋಗಿ ಬರಬೇಕಾಯಿತು. 13 ದಶಲಕ್ಷ ಲೀಟರ್ ನೀರನ್ನು ಶುದ್ಧೀಕರಿಸುವ ಘಟಕಕ್ಕೆ ಬಂಗಾರಪೇಟೆಯಲ್ಲಿ ಶಂಕುಸ್ಥಾಪನೆ ಮಾಡಲಾಗಿದೆ ಎಂದರು. 

ಮಾಲೂರು ಶಾಸಕರು ಹಾಗೂ ಕೋಚಿಮುಲ್‍ನ ಅಧ್ಯಕ್ಷರಾದ ಕೆ.ವೈ ನಂಜೇಗೌಡ ಅವರು ಮಾತನಾಡಿ, ಕೋಲಾರ ಹಿಂದುಳಿದ ಜಿಲ್ಲೆ. ಇಲ್ಲಿ ನೀರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನೀರು ದೊರೆತರೆ ಇಲ್ಲಿನ ರೈತರು ಆರ್ಥಿಕವಾಗಿ ಸದೃಢವಾಗುತ್ತಾರೆ. ಇರುವ ಕಡಿಮೆ ನೀರಿನಿಂದಲೇ ತರಕಾರಿ ಮಾವು, ರೇಷ್ಮೆಯನ್ನು ಉತ್ಪಾದನೆ ಮಾಡುತ್ತಾರೆ. ಕೆ.ಸಿ ವ್ಯಾಲಿ, ಯರಗೋಳ್ ಹಾಗೂ ಎತ್ತಿನಹೊಳೆ ಈ ಮೂರು ಯೋಜನೆಗಳು ಕೋಲಾರ ಜಿಲ್ಲೆಗೆ ವರದಾನವಾಗಿದೆ ಎಂದರು. 

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: 13ನೇ ವರ್ಷದ ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಪೂರ್ವಸಿದ್ಧತಾ ಸಭೆ

ವರದಿ: ವಾಲ್ಟರ್ ಮೊಂತೇರೊ

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್:
13ನೇ ವರ್ಷದ ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಪೂರ್ವಸಿದ್ಧತಾ ಸಭೆ

ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತ್ತು ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಸೆಪ್ಟೆಂಬರ್ 2 ರಂದು ಸೋಮವಾರ ಅಬ್ಬನಡ್ಕದ ಕುಂಟಲಗುಂಡಿಯಲ್ಲಿ ಜರಗಲಿರುವ 13ನೇ ವರ್ಷದ ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಪೂರ್ವಸಿದ್ಧತಾ ಸಭೆಯು ಅಬ್ಬನಡ್ಕದ ಕುಂಟಲಗುಂಡಿಯಲ್ಲಿರುವ ಸಂಘದ ಆಡಳಿತ ಕಚೇರಿಯಲ್ಲಿ ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಸತೀಶ್ ಪೂಜಾರಿ ಅಬ್ಬನಡ್ಕರವರ ಅಧ್ಯಕ್ಷತೆಯಲ್ಲಿ ಸಂಘದ ಅಧ್ಯಕ್ಷ ನಂದಳಿಕೆ ರಾಜೇಶ್ ಕೋಟ್ಯಾನ್‍ರವರ ಘನ ಉಪಸ್ಥಿತಿಯಲ್ಲಿ ಜರಗಿತು.
ಸಭೆಯಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ನಿಕಟ ಪೂರ್ವಾಧ್ಯಕ್ಷ ಕಾಸ್ರಬೈಲು ಸುರೇಶ್ ಪೂಜಾರಿ ಸಮಾರಂಭದ ರೂಪು ರೇಷೆಗಳ ಬಗ್ಗೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು. ಈ ಸಂಧರ್ಭದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಪೂರ್ವಾಧ್ಯಕ್ಷ ಬಿರೋಟ್ಟು ದಿನೇಶ್ ಪೂಜಾರಿ, ಕೋಶಾಧಿಕಾರಿ ಹರಿಪ್ರಸಾದ್ ಆಚಾರ್ಯ, ಭಜನಾ ಸಮಿತಿ ಅಧ್ಯಕ್ಷ ಮಂಜುನಾಥ ಆಚಾರ್ಯ, ಮಹಿಳಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಉಪಾಧ್ಯಕ್ಷ ಹರೀಶ್ ಪೂಜಾರಿ, ಹರಿಣಾಕ್ಷಿ ಪೂಜಾರಿ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಅಧ್ಯಕ್ಷ ವಿಠಲ ಮೂಲ್ಯ, ಉಪಾಧ್ಯಕ್ಷೆ ವೀಣಾ ಪೂಜಾರಿ, ಕಾರ್ಯದರ್ಶಿ ಹರಿಣಾಕ್ಷಿ ಪೂಜಾರಿ, ಜೊತೆ ಕಾರ್ಯದರ್ಶಿ ಬಾಲಕೃಷ್ಣ ಮಡಿವಾಳ, ಕೋಶಾಧಿಕಾರಿ ಲಲಿತಾ ಆಚಾರ್ಯ ಸದಸ್ಯರಾದ ಲೀಲಾ ಪೂಜಾರಿ, ಹರಿಣಿ ಪೂಜಾರಿ, ಸುಲೋಚನಾ ಕೋಟ್ಯಾನ್ ಮತ್ತಿತರಿದ್ದರು.
ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ನಂದಳಿಕೆ ರಾಜೇಶ್ ಕೋಟ್ಯಾನ್ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಶಾಂತ್ ಪೂಜಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕೊನೆಗೂ ಸಂಗಮ್ ಜಂಕ್ಷನ್ ಚಿಕ್ಕನಸಾಲು ಮತ್ತು ಆನಗಳ್ಳಿ ರಸ್ತೆ ತಡೆಗೋಡೆ ತೆರವು : ಆದರೂ ಅಪಾಯ ತಪ್ಪಿದ್ದಲ್ಲಾ – ಭವಿಸ್ಯದಲ್ಲಿ ಪ್ಲೈ ಒವರ್ ಬೇಕು- ಅಂಡರ್ ಪಾಸ್ ಆದಸ್ಟು ಬೇಗನೆ ಅಗತ್ಯವಿದೆ

JANANUDI NETWORK
ಕೊನೆಗೂ ಸಂಗಮ್ ಜಂಕ್ಷನ್ ಚಿಕ್ಕನಸಾಲು ಮತ್ತು ಆನಗಳ್ಳಿ ರಸ್ತೆ ತಡೆಗೋಡೆ ತೆರವು
 ಆದರೂ ಅಪಾಯ ತಪ್ಪಿದ್ದಲ್ಲಾ - ಭವಿಸ್ಯದಲ್ಲಿ ಪ್ಲೈ ಒವರ್ ಬೇಕು- ಅಂಡರ್ ಪಾಸ್ ಆದಸ್ಟು ಬೇಗನೆ ಅಗತ್ಯವಿದೆ

ಕುಂದಾಪುರ, ಜೂ.12: ರಾಷ್ಟ್ರ ಹೆದ್ದಾರಿ 66 ನವ ನಿರ್ಮಾಣದ ಭರಾಟೆಯಲ್ಲಿ ಹಲವಾರು ತೊಡಕುಗಳು ಆಗುತ್ತಲೆ ಇವೆ. ಅದರಲೊಂದು ಸಂಗಮ್ ಜಂಕ್ಷನಿನ ಚಿಕ್ಕನಸಾಲು ರಸ್ತೆ ಮತ್ತು ಆನಗಳ್ಳಿಗೆ ಹೋಗಿ ಬರುವ ರಸ್ತೆಯಲ್ಲಿ ಸಮರ್ಪಕವಾದ ಕ್ರಾಸಿಂಗ್ ಕೊಡದೆ, ವಾಹನಗಳು, ಪಾದಚಾರಿಗಳಿಗೆ ಚಿಕ್ಕನಸಾಲು ರಸ್ತೆಯಿಂದ, ಚಿಕ್ಕನಸಾಲು ರಸ್ತೆಯ ಮತ್ತು ಆನಗಳಿ ರಸ್ತೆಯ ನಿವಾಸಿಗಳಿಗೆ ಕುಂದಾಪುರಕ್ಕೆ ಬರಲು ಹೋಗಲು ಬಹಳ ತ್ರಾಸದಾಯಕವಾಗುತಿತ್ತು. ಅವಘಡಕ್ಕೆ ಕೂಡ ಅವಕಾಶವಾಗಿದ್ದರಿಂದ, ಹೆದ್ದಾರಿ ಇಲಾಖೆ ಸಂಗಮ್ ಜಂಕ್ಷನ್‍ನಲ್ಲಿ ಚಿಕ್ಕನಸಾಲು ರಸ್ತೆಗೆ ಎದುರಾಗಿ ಹೆದ್ದಾರಿಯಲ್ಲಿ ಬ್ರಹತ್ ಗಾತ್ರದ ತಡೆಗೋಡೆಗಳನ್ನು ಇಟ್ಟು, ಆನಗಳ್ಳಿ ಮತ್ತು ಹೆದ್ದಾರಿ ದಾಟಿದ ನಂತರ ಇರುವ ಚಿಕ್ಕನಸಾಲು ರಸ್ತೆಗೆ ಹೋಗಲು ಸುಮಾರು 1 ಕಿ.ಮಿ ದೂರ ಸಾಗಿ ಮತ್ತೊಂದು ಮುಗ್ಗಲಲ್ಲಿ ವಾಪಸು ಬರಬೇಕಿತ್ತು.


ಈ ಸಮಸ್ಯೆಯಿಂದ ಜನರಿಗೆ ಎಣ್ಣೆಯ ಕಾವಲಿಯಿಂದ ನೇರವಾಗಿ ಬೆಂಕಿಗೆ ಬೀಳುವಂತೆ ಆಗಿ, ಚಿಕ್ಕನಸಾಲು ಮತ್ತು ಆನಗಳ್ಳಿ ನಿವಾಸಿಗಳಿಗೆ ಸಂಗಂಮ್ ಜಂಕ್ಷನ್ ಬಹಳ ತೊಂದರೆಯುಂಟಾಗಿದ್ದು ಮಾತ್ರವಲ್ಲಾ, ಚಿಕ್ಕನಸಾಲು ರಸ್ತೆಯ ವ್ಯಾಪರಿಗಳಿಗೆ ತೀವ್ರ ಹೊಡೆತವೂ ಉಂಟಾಗಿತ್ತು.
ಈಗ ಸಹಾಯಕ ಕಮಿಷನರ್ ಡಾ|ಎಸ್.ಎಸ್.ಮಧುಕೇಶ್ವರ್ ಅವರು ಕಛೇರಿಯಲ್ಲಿ ಸಭೆ ನೆಡೆಸಿ ಗುತ್ತಿಗೆದಾರ ಕಡೆಯ ಅಧಿಕಾರಿಗಳಿಗೆ ಸಂಗಂ ಜಂಕ್ಷನ್‍ನಲ್ಲಿ ಇಟ್ಟಿರುವ ತಡೆಗೋಡೆಯನ್ನು ತೆರವುಗೊಳಿಸ ಬೇಕೆಂದು ಸ್ಪಷ್ಟ ಸೂಚನೆ ಮೇರೆಗೆ ತಡೆ ಗೋಡೆಯನ್ನು ತೆರವು ಗೊಳಿಸಿದ್ದಾರೆ.
ಹೆದ್ದಾರಿ ಇಲಾಖೆಯ ಗುತ್ತಿಗೆ ಅಧಿಕಾರಿಗಳೆ ಹೇಳಿಕೊಳ್ಳುವಂತೆ ಇಲ್ಲಿ ಅಂಡರ್ ಪಾಸ್ ಮಾಡ ಬೇಕಿತ್ತು ಆದರೆ ಯೋಜನೆಯಲ್ಲಿ ಇಲ್ಲಾ, ಈಗ ಯೋಜನೆಯನ್ನು ನವಿಕ್ರತ ಮಾಡಲು ಹೆಚ್ಚು ಸಮಯ ತಗಲುತ್ತದೆ ಎಂದು ಹೇಳುತ್ತಾರೆ. ಈ ಪರಿಸರದ ಜನ ಮೊದಲೇ ಎಚ್ಚೆತ್ತುಕೊಳ್ಳದಿದ್ದು ಆಶ್ಚರ್ಯವೇ ಸರಿ. ಮೂರು ಕೈಯ್ ಹತ್ತಿರ ಅಂಡರ್ ಪಾಸ್ ಇದ್ದದ್ದು ಫ್ಲೈ ಒವರ್ ಆಗಲು ಹೋರಾಟ ಆರಂಭಿಸಿದಾಗಲೆ, ಸಂಗಮ್ ಜಂಕ್ಷನ್ ಎನು ಬರುತ್ತೆ ಎಂದು ಎಚ್ಚೆತ್ತುಕೊಳ್ಳ ಬೇಕಿತ್ತು.
ಈಗ ಇಲ್ಲಿ ವಾಹನಗಳ ಕ್ರಾಸಿಂಗ್, ಪಾದಚಾರಿಗಳು ಈ ಜಂಕ್ಷನ್ ದಾಟುವುದೊಂದು ಜೀವಕ್ಕೆ ಅಪಾಯ ಒಡ್ಡುವ ಸ್ಥಿತಿ ನಿರ್ಮಾಣಾವಾಗಿದೆ. ಯೋಹನೆಗಳು ರೂಪಿಸುವಾಗ ಯಾರೂ ಕೂಡ ಭವಿಸ್ಯದ ದ್ರಷ್ಟಿಯಿಂದ ಚಿಂತಿಸುವುದಿಲ್ಲಾ, ಜನರೂ ಕೂಡ ಮುಂಜಾಗ್ರತೆ ವಹಿಸಿಕೊಳ್ಳುತ್ತಿಲ್ಲಾ, ಈಗ ಆನಗಳ್ಳಿಗೆ ಹೊಸ ಅಗಲವಾದ ಸೇತುವೆ ನಿರ್ಮಾಣವಾಗಿದೆ, ಒಂದು ವೇಳೆ ಆನಗಳ್ಳಿ ರಸ್ತೆ ಅಗಲಿಕರಣಗೊಂಡರೆ, ಬೈಂದೂರು ಕಡೆಯಿಂದ ಬರುವಂತಹ ಘನ, ಲಘು ವಾಹನಗಳೆಲ್ಲವೂ ಸಂಗಮ್ ಜಂಕ್ಷನ್‍ನಿಂದ ಆನಗಳ್ಳಿ ಮಾರ್ಗವಾಗಿ ಬಸ್ರೂರು, ಹಾಲಾಡಿ ಸಿದ್ದಾಪುರ, ನಗರ ಸಾಗರಕ್ಕೆ ತೆರಳುವುವು. ಆಗ ಇಲ್ಲಿನ ಸ್ಥಿತಿ ತೀವ್ರ ಅಪಾಯಕಾರಿ ಮಟ್ಟದಲ್ಲಿ ಬೆಳೆಯುವುದರಲ್ಲಿ ಸಂಷಯವೇ ಇಲ್ಲಾ. ಇಲ್ಲಿ ಅಂಡರ್ ಪಾಸ್ ಅಥವ ಸಿಗ್ನಲ್ ಲೈಟ್ ಅಥವ ದೋಹ ಖಟಾರ್‍ನಲ್ಲಿ ಇರುವಂತೆ ರೌಂಡ್ ಸರ್ಕಲ್ (ಸರ್ಕಲನಲ್ಲೆ ಸುತ್ತು ಹೊಡೆದು ನಿರ್ಗಮಿಸುವುದು. ಆದರೆ ವಾಹನ ಸಂಚಾರ ಜನ ಸಂಚಾರ ಮತ್ತು ವಾಹನಗಳ ಮತ್ತು ಪಾದಚಾರಿ ಜನರ ರಕ್ಷಣೆಗೆ ಅಂಡರ್ ಪಾಸ್ ಮಾಡುವುದೇ ಒಳಿತು. ಆದರೆ ಮುಂದಿನ ಹಲವು ವರ್ಷಗಳ ನಂತರ ಇಲ್ಲಿ ವಾಹನ ದಟ್ಟಣೆಗಳಿಂದ ಗೋವಾದಲ್ಲಿ ಇರುವಂತೆ, ಇಲ್ಲಿನ ಸಮೀಪದ ಗಂಗೊಳ್ಳಿ ನದಿಗೆ ಎರಡು ಅಂತಸ್ತಿನ ಸೇತುವೆ ಮತ್ತು ಪ್ಲೈ ಒವರ್ ಸೇತುವೆ ಒಟ್ಟಿಗೆ ನಿರ್ಮಿಸುವ ಅಗತ್ಯ ಕಂಡು ಬರುವುದರಲ್ಲಿ ಅನುಮಾನವಿಲ್ಲಾ.

ಶ್ರೀನಿವಾಸಪುರ: ಜನ್ಮಭೂಮಿ ಸೇವಾ ಟ್ರಸ್ಟ್‌ ವತಿಯಿಂದ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣೋತ್ಸವ ಸಮಾರಂಭ – ವಿಧಾನ ಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಶುಭ ಹಾರೈಸಿದರು.

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ಜನ್ಮಭೂಮಿ ಸೇವಾ ಟ್ರಸ್ಟ್‌ ವತಿಯಿಂದ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣೋತ್ಸವ ಸಮಾರಂಭ -ವಿಧಾನ ಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಶುಭ ಹಾರೈಸಿದರು.

ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರ್ಮಿಸಲಾಗಿದ್ದ ಭವ್ಯ ವೇದಿಕೆಯ ಮೇಲೆ ಜನ್ಮಭೂಮಿ ಸೇವಾ ಟ್ರಸ್ಟ್‌ ವತಿಯಿಂದ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣೋತ್ಸವ ಸಮಾರಂಭ ಏರ್ಪಡಿಸಲಾಗಿತ್ತು.

  ಭಾನುವಾರ ಬೆಳಿಗ್ಗೆ ಪಟ್ಟಣದ ಎಲ್ಲ ರಸ್ತೆಗಳಿಂದ ಜನ  ವೇದಿಕೆಯ ಮುಂದೆ ನಿರ್ಮಿಸಲಾಗಿದ್ದ ಬೃಹತ್‌ ಪೆಂಡಾಲ್‌ ಕೆಳಗೆ ಸೇರಿದವು. ಪಟ್ಟಣ ಹಾಗೂ ತಾಲ್ಲೂಕಿನ ವಿವಿಧ ಕಡೆಗಳಿಂದ ಆಗಮಿಸಿದ್ದ ಸಾವಿರಾರು ಜನರು ಪೆಂಡಾಲ್‌ ಕೆಳಗೆ ಹಾಕಲಾಗಿದ್ದ ಆಸನಗಳಲ್ಲಿ ಆಸೀನರಾಗಿದ್ದರು. ದೇವರ ಕಲ್ಯಾಣೋತ್ಸವ ಪ್ರಾರಂಭವಾಗುತ್ತಿದಂತೆ ಗೋವಿಂದನ ನಾಮಸ್ಮರಣೆ ಮುಗಿಲು ಮುಟ್ಟಿತು. ಇಡೀ ವಾತಾವರಣ ಭಕ್ತಿ ಭಾವದಲ್ಲಿ ಮಿಂದೆದ್ದಿತು. 

  ಆಂಧ್ರಪ್ರದೇಶದ ಸಿಂಹಾಚಲಂ ನಿಂದ ಆಗಮಿಸಿದ್ದ ಪಂಡಿತರು ವೇದಘೋಷದೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದರು. ಶಾಸ್ತ್ರೋಕ್ತವಾಗಿ ದೇವರ ಕಲ್ಯಾಣ ನೆರವೇರಿಸಿದರು. ಕಲ್ಯಾಣದ ಅಂತಿಮ ಘಟ್ಟದಲ್ಲಿ ಅರ್ಜಕರ ಹಾರ ಕುಣಿತ ನೋಡುಗರ ಗಮನ ಸೆಳೆಯಿತು. ವಿಧಾನ ಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಅವರು ಮಾತನಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಶುಭ ಹಾರೈಸಿದರು.

  ಇದಕ್ಕೂ ಮುನ್ನ ಕಲ್ಯಾಣ ಮೂರ್ತಿಗಳನ್ನು ಹೊರಗಡೆಯಿಂದ ಜನರು ಹೆಗಲ ಮೇಲೆ ಹೊತ್ತು ತಂದು ಕಲ್ಯಾಣ ವೇದಿಕೆಯ ಮೇಲಿಟ್ಟರು. ಪುರೋಹಿತರು ಮೂರ್ತಿಗಳಿಗೆ ಹಂತ ಹಂತವಾಗಿ ಅಲಂಕಾರ ಮಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಮೇಕಲ ನಾರಾಯಣಸ್ವಾಮಿ ಎಳನೀರು ತಟ್ಟೆ ಹೊತ್ತರು. 

  ಕಲ್ಯಾಣೋತ್ಸವ ಮುಗಿದ ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗು ಉಚಿತವಾಗಿ ಲಾಡು ವಿತರಣೆ ಮಾಡಲಾಯಿತು. ಸಾಮೂಹಿಕ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

  ಮಾಲೂರು ಶಾಸಕ ಜಂಜೇಗೌಡ, ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ. ಎಂ.ಆರ್‌.ಜಯರಾಮ್‌, ವಿಧಾನ ಪರಿಷತ್‌ ಸದಸ್ಯ ನಜೀರ್‌ ಅಹ್ಮದ್‌, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್‌, ರಾಯಲ್ಪಾಡ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂಜಯ್‌ ರೆಡ್ಡಿ, ಮುಖಂಡರಾದ ರೋಣೂರು ಚಂದ್ರಶೇಖರ್‌, ಕೆ.ಕೆ.ಮಂಜು, ಎನ್‌.ಜಿ.ಬ್ಯಾಟಪ್ಪ, ಬಿ.ಎಲ್‌.ರಾಮಯ್ಯ, ಹರ್ಷ ಇದ್ದರು.

  ಭವ್ಯ ಮೆರವಣಿಗೆ: ಶುಕ್ರವಾರ ಸಂಜೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಿಂಹಾಚಲಂ ನಿಂದ ತರಲಾಗಿದ್ದ ಲಕ್ಷ್ಮೀನರಸಿಂಹಸ್ವಾಮಿ ಉತ್ಸವ ಮೂರ್ತಿಗಳ ಭವ್ಯ ಮೆರವಣಿಗೆ ಏರ್ಪಡಿಸಲಾಗಿತ್ತು. ಮೆರವಣಿಗೆಯಲ್ಲಿ ವೀರಗಾಸೆ ಕುಣಿತ, ಡೊಳ್ಳು ಕುಣಿತ, ಸ್ತಬ್ಧ ಚಿತ್ರಗಳು ನೊಡುಗರ ಗಮನ ಸೆಳೆದವು. ಮೆರವಣಿಗೆಯ ಉದ್ದಕ್ಕೂ ಏರ್ಪಡಿಸಿದ್ದ ಬಾಣ ಬಿರುಸು ಪ್ರದರ್ಶನ ಜನರ ಕಣ್ತಣಿಸಿತು. ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ ಕುಮಾರ್‌ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

  ಒಟ್ಟಿನಲ್ಲಿ 6 ದಿನಗಳ ಕಾಲ ನಡೆದ ಶ್ರೀನಿವಾಸಪುರ ಹಬ್ಬ ಪಟ್ಟಣದ ನಾಗರನ್ನು ರಂಜಿಸಿದ್ದು ಮಾತ್ರವಲ್ಲದೆ, ಕೊನೆಯ ದಿನವಾದ ಭಾನುವಾರ ನಡೆದ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣೋತ್ಸವ ಭಕ್ತಿ ಸಾಗರದಲ್ಲಿ ಮುಳುಗುವಂತೆ ಮಾಡಿತ್ತು

ಗಂಗೊಳ್ಳಿ : ಅಮ್ರತ ಸ್ತ್ರೀ ಸಂಘಟನ್ ಪಂಗ್ಡಾ ಥಾವ್ನ್ ಹಡಾಂ ತಪಾಸ್ಣಿ ಶಿಬಿರ್

ಬಾತ್ಮಿ: ಪ್ರಕಾಶ್ ಅಂದ್ರಾದೆ, ಉಡುಪಿ

ಗಂಗೊಳ್ಳಿ : ಅಮ್ರತ ಸ್ತ್ರೀ ಸಂಘಟನ್ ಪಂಗ್ಡಾ ಥಾವ್ನ್ ಹಡಾಂ ತಪಾಸ್ಣಿ ಶಿಬಿರ್


ಗಂಗೊಳ್ಳಿ, ಜೂ.11 ಗಂಗೊಳ್ಳಿ ಫಿರ್ಗಜ್ ಸ್ತ್ರೀ ಆಯೋಗ್ (ಸ್ತ್ರಿ ಸಂಘಟನ್) ಆನಿ ಭಲಾಯ್ಕಿ ಆಯೋಗ್ ಹಾಂಚ್ಯಾ ಮುಖೇಲ್ಪಣಾರ್ ಉಚಿತ್ ಹಡಾಂ ತಪಾಸ್ಣಿ ಶಿಬಿರ್ ಫಿರ್ಗಜೆಚ್ಯಾ ಸಾಂ.ಜುಜೆ ಸಭಾಸಾಲಾಂತ್ ಜೂನಾಚ್ಯಾ 7 ತಾರೀಕೆರ್ ಚಲ್ಲೆಂ.
ಹ್ಯಾ ಕಾರ್ಯಾಕ್ ಫಿರ್ಗಜೆಚೊ ವಿಗಾರ್, ಸ್ತ್ರೀ ಸಂಘಟನಾಚೊ ಅತ್ಮಿಕ್ ನಿರ್ದೇಶಕ್ ಮಾ|ಬಾ|ಆಲ್ಬರ್ಟ್ ಕ್ರಾಸ್ತಾ ಹಾಣಿ ಅಧ್ಯಕ್ಷಪಣ್ ಘೆಂವ್ನ್ ಬರೆ ಮಾಗ್ಲೆಂ. ಸಂಪನ್ಮೂಲ್ ವ್ಯಕ್ತಿ ಜಾವ್ನ್ ಉಡುಪಿ ಫಿರ್ಗಜೆಚೊ ಪ್ರಕಾಶ್ ಅಂದ್ರಾದೆ ಹಾಣಿ ಹಡಾಂಚ್ಯಾ ಮಹತ್ವಾ ವಿಶಿಂ ಜಾಣ್ವಾಯ್ ದಿಂವ್ನ್ ‘ಆಮ್ಚೆ ಮಾಲ್ಘಡೆಂ ಕ್ರಷಿ ಕಾಮ್, ವಸ್ತುರ್ ಉಂಬಳ್ಚೆ, ಧರ್ಣ್ ಪುಸ್ಚಿಂ ಅಸಲಿಂ ಕಾಮಾ ಕರ್ನ್ ಕುಡಿಕ್ ಗರ್ಜ್ ಆಸ್ಲೆಂ ವ್ಯಾಯಮ್ ಜೋಡ್ನ್ ಘೆತಾಲೆಂ, ತಶೆಂ ಜಾಂವ್ನ್ ತಾಂಚಿಂ ಹಡಾಂ ಘಟ್ ಮೂಟ್ ಆಸ್ತೆಲಿಂ. ಪುಣ್ ಆತಾಂಚ್ಯಾ ಯಾಂತ್ರೀಕ್ ಜೀವನಾಂತ್ ಅಸಲಿಂ ಕಾಮಾ ಕರಿನಾತ್ಲ್ಯಾನ್ ಪ್ರಾಯ್ ಜಾತಾನಾ, ಹಡಾಂ ಥಂಯ್ ಗರ್ಜ್ ಆಸ್ಲೆಂ ಕ್ಯಾಲ್ಸಿಯಂ ಅಂಶ್ ಉಣೆ ಜಾಂವ್ನ್ ಅಪಾಯಾಚ್ಯಾ ಹಂತಾಕ್ ಪಾವ್ತಾ.ದೆಕುನ್ ಒಕ್ತಾಚಿಂ ಗರ್ಜ್ ಪಡ್ತಾಂ. ತಶೆಂಚ್ ಹ್ಯಾ ಶಿಬಿರಾಂತ್ ಕುಡಿಕ್ ಗರ್ಜ್ ಆಸ್ಚೆಂ ಕೊಲೆಸ್ಟ್ರೊಲ್‍ಯಿ ತಪಾಸ್ಣಿ ಕರ್ಯೆತ್. ಅಸಲ್ಯಾ ಶಿಬಿರಾಂ ದ್ವಾರಿ ಸಭಾರ್ ಜಣಾನಿಂ ಫಾಯ್ದೊ ಜೊಡ್ಲ್ಯಾ’ ಮ್ಹಣನ್ ತಾಣಿ ಕಳಯ್ಲೆಂ.
ಹ್ಯಾ ಸಂದರ್ಭಾರ್ ಫಿರ್ಗಜೆಚೊ ಉಪಾಧ್ಯಕ್ಷ್ ವಿವಿಯನ್ ಕ್ರಾಸ್ತಾ, ಕಾರ್ಯದರ್ಶಿ ರೆನಿಟಾ ಬಾರ್ನೆಸ್, 18 ಆಯೋಗಾಚಿಂ ಸಂಯೊಜಕಿ ಪ್ರೀತಿ ಫೆರ್ನಾಂಡಿಸ್, ಸ್ತ್ರೀ ಆಯೋಗಾಚಿ (ಸಂಘಟನಾಚಿ ಅಧ್ಯಕ್ಷಿಣ್) ಸಂಚಾಲಕಿ, ಭಲಾಯ್ಕಿ ಆಯೋಗಾಚಿ ಸಂಚಾಲಕಿ ಹಾಜರ್ ಆಸ್ಲಿಂ. ಶಿಬಿರಾಂತ್ ಹಡಾಂ ತಪಾಸ್ಣಿ ಪ್ರಕಾಶ್ ಅಂದ್ರಾದೆ ಹಾಂಚ್ಯಾ ನೀರ್ದೇಶನ ಖಾಲ್ ‘ಮೆಸಸ್ ಒರ್ಗಾಯ್ನಿಕ್ ಪೈ.ಲಿ.’ ಸಂಸ್ಥೆಚ್ಯಾ ಉಮೇಶ್ ಕಡೂರ್ ಮಠ್, ಸಂದೇಶ್ ಶೆಟ್ಟಿ ಆನಿ ಮಧುಕೇಶ್ವರ್ ಹಾಣಿ ಚಲವ್ನ್ ವೆಲೆಂ. ಕಾರ್ಯಕ್ರಮಾಂತ್ 110 ಜಣ್ ಹಾಜರ್ ಆಸೊನ್ ಹಾಚೊ ಫಾಯ್ದೊ 71 ಜಣಾನಿಂ ಜೋಡ್ನ್ ಘೆತ್ಲೊ.

ತ್ರಾಸಿ – ಸ್ತ್ರೀ ಸಂಘಟನಾ ಥಾವ್ನ್ ಹಡಾಂ ತಪಾಸ್ಣಿ ಶಿಬಿರ್

ಬಾತ್ಮಿ: ಪ್ರಕಾಶ್ ಅಂದ್ರಾದೆ, ಉಡುಪಿ

ತ್ರಾಸಿ – ಸ್ತ್ರೀ ಸಂಘಟನಾ ಥಾವ್ನ್ ಹಡಾಂ ತಪಾಸ್ಣಿ ಶಿಬಿರ್


ತ್ರಾಸಿ, ಜೂ.11: ತ್ರಾಸಿ ಫಿರ್ಗಜ್ ಸ್ತ್ರೀ ಆಯೋಗ್ (ಸ್ತ್ರೀ ಸಂಘಟನ್) ಆನಿ ಭಲಾಯ್ಕಿ ಆಯೋಗ್ ಮುಖೇಲ್ಪಣಾರ್ ಹಡಾಂ ತಪಾಸ್ಣಿ ಶಿಬಿರ್ ಜೂನಾಚ್ಯಾ 6 ತಾರೀಕೆರ್ ಫಿರ್ಗಜೆಚ್ಯಾ ಮಿಲೇನಿಯಮ್ ಸಭಾಸಾಲಾಂತ್ ಚಲ್ಲೆಂ.
ಹ್ಯಾ ಕಾರ್ಯಾಕ್ ಫಿರ್ಗಜೆಚೊ ವಿಗಾರ್, ಸ್ತ್ರೀ ಸಂಘಟನಾಚೊ ಅತ್ಮಿಕ್ ನಿರ್ದೇಶಕ್ ಮಾ|ಬಾ|ಚಾಲ್ರ್ಸ್ ಲೂವಿಸ್ ಹಾಣಿ ಅಧ್ಯಕ್ಷಪಣ್ ಘೆಂವ್ನ್ ಬರೆ ಮಾಗ್ಲೆಂ. ಸಂಪನ್ಮೂಲ್ ವ್ಯಕ್ತಿ ಜಾವ್ನ್ ಉಡುಪಿ ಫಿರ್ಗಜೆಚೊ ಪ್ರಕಾಶ್ ಅಂದ್ರಾದೆ ಹಾಣಿ ಹಡಾಂಚ್ಯಾ ಮಹತ್ವಾ ವಿಶಿಂ ಜಾಣ್ವಾಯ್ ದಿಂವ್ನ್ ‘ಆಮ್ಚೆ ಮಾಲ್ಘಡೆಂ ಕ್ರಷಿ ಕಾಮ್, ವಸ್ತುರ್ ಉಂಬಳ್ಚೆ, ಧರ್ಣ್ ಪುಸ್ಚಿಂ ಅಸಲಿಂ ಕಾಮಾ ಕರ್ನ್ ಕುಡಿಕ್ ಗರ್ಜ್ ಆಸ್ಲೆಂ ವ್ಯಾಯಮ್ ಜೋಡ್ನ್ ಘೆತಾಲೆಂ, ತಶೆಂ ಜಾಂವ್ನ್ ತಾಂಚಿಂ ಹಡಾಂ ಘಟ್ ಮೂಟ್ ಆಸ್ತೆಲಿಂ. ಪುಣ್ ಆತಾಂಚ್ಯಾ ಯಾಂತ್ರೀಕ್ ಜೀವನಾಂತ್ ಅಸಲಿಂ ಕಾಮಾ ಕರಿನಾತ್ಲ್ಯಾನ್ ಪ್ರಾಯ್ ಜಾತಾನಾ, ಹಡಾಂ ಥಂಯ್ ಗರ್ಜ್ ಆಸ್ಲೆಂ ಕ್ಯಾಲ್ಸಿಯಂ ಅಂಶ್ ಉಣೆ ಜಾಂವ್ನ್ ಅಪಾಯಾಚ್ಯಾ ಹಂತಾಕ್ ಪಾವ್ತಾ.ದೆಕುನ್ ಒಕ್ತಾಚಿಂ ಗರ್ಜ್ ಪಡ್ತಾಂ. ತಶೆಂಚ್ ಹ್ಯಾ ಶಿಬಿರಾಂತ್ ಕುಡಿಕ್ ಗರ್ಜ್ ಆಸ್ಚೆಂ ಕೊಲೆಸ್ಟ್ರೊಲ್‍ಯಿ ತಪಾಸ್ಣಿ ಕರ್ಯೆತ್. ಅಸಲ್ಯಾ ಶಿಬಿರಾಂ ದ್ವಾರಿ ಸಭಾರ್ ಜಣಾನಿಂ ಫಾಯ್ದೊ ಜೊಡ್ಲ್ಯಾ’ ಮ್ಹಣನ್ ತಾಣಿ ಕಳಯ್ಲೆಂ.
ಹ್ಯಾ ಸಂದರ್ಭಾರ್ ಕುಂದಾಪುರ್ ವಾರಾಡ್ಯಾ ಮಟ್ಟ್ಟಾಚಿ ಪ್ರೇರಕಿ ಪ್ರೀತಿ ಫೆರ್ನಾಂಡಿಸ್, ಸ್ತ್ರೀ ಆಯೋಗಾಚಿ ಸಂಚಾಲಕಿ, ಭಲಾಯ್ಕಿ ಆಯೋಗಾಚಿ ಸಂಚಾಲಕಿ, ಅಟ್ರಾ ಆಯೋಗಾಚಿ ಸಂಯೋಜಕಿ ಹಾಜರ್ ಆಸಲ್ಲಿಂ. ಶಿಬಿರಾಂತ್ ಹಡಾಂ ತಪಾಸ್ಣಿ ಪ್ರಕಾಶ್ ಅಂದ್ರಾದೆ ಹಾಂಚ್ಯಾ ನೀರ್ದೇಶನ ಖಾಲ್ ‘ಮೆಸಸ್ ಒರ್ಗಾಯ್ನಿಕ್ ಪೈ.ಲಿ.’ ಸಂಸ್ಥೆಚ್ಯಾ ಉಮೇಶ್ ಕಡೂರ್ ಮಠ್, ಸಂದೇಶ್ ಶೆಟ್ಟಿ ಆನಿ ಮಧುಕೇಶ್ವರ್ ಹಾಣಿ ಚಲವ್ನ್ ವೆಲೆಂ. 73 ಜಣಾನಿಂ ಹಾಚೊ ಫಾಯ್ದೊ ಜೋಡ್ನ್ ಘೆತ್ಲೊ.