HOLY ROSARY CHURCH, KUNDAPUR – 450 th JUBILEE SOUVENIR 2021

ಪರಿಸರ್ ಸಂರಕ್ಷಣೆ ಖಾತಿರ್ ಕಥೊಲಿಕ್ ಸಭೆ ಥಾವ್ನ್ ದಿಯೆಸಿಜಿಜ್ ಮಟ್ಟಾರ್ ಎಕಾಚ್ ಕಾಳಾರ್ ವನಮಹತ್ಸೋವ್ ಆಚರಣ್

JANANUDI NETWORK

ಪರಿಸರ್ ಸಂರಕ್ಷಣೆ ಖಾತಿರ್ ಕಥೊಲಿಕ್ ಸಭೆ ಥಾವ್ನ್ ದಿಯೆಸಿಜಿಜ್ ಮಟ್ಟಾರ್ ಎಕಾಚ್ ಕಾಳಾರ್ ವನಮಹತ್ಸೋವ್ ಆಚರಣ್

 


ಕುಂದಾಪುರ್, ಜು.23: ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಹಾಣಿ ಉಡುಪಿ ಧರ್ಮ್‍ಪ್ರಾಂತ್ಯಾಚಾ ಸರ್ವ್ ಫಿರ್ಗಜೆಂತ್ ಎಕಾಚ್ ಕಾಳಾರ್ ವನಮಹತ್ಸೋವ್ ಕರ್ಚ್ಯಾ ಮಹೋದ್ದೇಶಾನ್ ಜುಲಾಯ್ಚ್ಯಾ 21 ವೇರ್ ಶಂಕರಪುರ ಸಾಂತ್ ಜೋನ್ಸ್ ಇಗರ್ಜೆಚ್ಯಾ ವಠಾರಾಂತ್ ಝಡ್ ಲಾಂವ್ನ್ ವನಮಹತ್ಸೋವಾಕ್ ಚಾಲನ್ ಕೆಲೆಂ.
       “ಪರಿಸರ್ ಸಂರಕ್ಷಣೆಕ್ ಸಂಘ್ ಸಂಸ್ಥೆ ಎಕಾ ಮೆಕಾ ಮೆಳೊನ್ ಸಂಘಟಿತ್ ಜಾವ್ನ್ ವಾವ್ರ್ ಕೆಲ್ಯಾರ್ ನಿತಳ್ ಪರಿಸರ್ ಆಸಾ ಕರುಂಕ್ ಸಾಧ್ಯ್ ಜಾತಾಂ. ಧರ್ಮ್ ಕೇಂದ್ರಾಚಿಂ ಪರಿಸರ್‍ಯಿ ರೂಕಾಂ ಝಡಾನಿಂ ಭರೊನ್  ಪ್ರಕ್ರತಿ ಸೊಭಿತ್ ಜಾವ್ನ್ ಸೊಭಾಜೆ” ವನಮಹತ್ಸೋವಾಕ್ ಚಾಲನ್ ಕೆಲ್ಯಾ ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಹಾಚೊ ಅಧ್ಯಕ್ಷ್ ಅಲ್ವಿನ್ ಕ್ವಾಡ್ರಸ್ ಹಾಣಿ ಸಂದೇಶ್ ದಿಲೊ. ‘ಪರಿಸರಾ ಖಾತಿರ್ ಆಮಿ ಸದಾಂಚ್ ಮ್ಹಳ್ಯಾ ಬರಿ ಸಂರಕ್ಷಣ್ ಕರ್ಚಿಂ ಗರ್ಜ್ ಆಸಾ, ನಾ ತರ್ ಪ್ರಕ್ರತೆಕ್ ಅಪಾಯ್ ಚುಕ್ಚೆಂ ನಾ. ಚಡ್ ಆನಿ ಚಡ್ ರೂಕಾಂ ಝಡಾಂ ಲಾಂವ್ನ್ ತಾಂಕಾಂ ವಾಡೊಂವ್ಚೆಂಚ್ ವನಮಹತ್ಸೋವಾಚೊ ಮುಖ್ಯ್ ಉದ್ದೇಶ್. ಹರ್ಯೆಕ್ಲ್ಯಾನಿಂ ಪರಿಸರ್ ಸಂರಕ್ಷಣೆಚೊ ನೀಚೆವ್ ಕರಿಜೆ’
      ‘ರೂಕಾಂಚೊ ನಾಶ್, ಪ್ಲಾಸ್ಟಿಕ್ ಉಪಯೋಗ್ ಚಡಾಚ್ ಗೆಲ್ಯಾನ್ ಪರಿಸರಾಂತ್ ಹುನ್ಸಾಣ್ ಚಡೊನ್ ಯೆತೆಂ ಆಸಾ, ದೆಕುನ್ ಪ್ರಕ್ರತಚಿ ಸಮಾತೋಲನ್ ಸಾಂಬಾಳ್ಚ್ಯಾ ಖಾತಿರ್ ಹರ್ಯೆಕ್ಲ್ಯಾನಿಂ ಜಾಗ್ರತ್ ಜಾವ್ನ್ ಪರಿಸರ ಸಂರಕ್ಷಣ್ ಕಾರ್ಯ ರೂಪಾಕ್ ಹಾಡ್ಚ್ಯಾ ಖಾತಿರ್ ಆತ್ಮವಲೋಕನ್ ಕರುಂಕ್ ಜಾಯ್’ ಮ್ಹಣನ್ ತಾಣಿ ಕಳಯ್ಲೆಂ.
ಹ್ಯಾ ಸಂದರ್ಭಾರ್ ಫಿರ್ಗಜೆಚೊ ವಿಗಾರ್ ಮಾ|ಬಾ|ಫರ್ಡಿನಾಂಡ್ ಗೊನ್ಸಾಲ್ವಿಸ್ ಉಪಸ್ಥಿತ್ ಆಸೊನ್ ತಾಣಿಯಿ ವನಮಹತ್ಸೋವಾಕ್ ಸಾಂಗಾತ್ ದಿಲೊ.

     ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಹಾಂಚ್ಯಾ ಯೆವ್ಜಣೆ ಪರ್ಮಾಣೆ ಉಡುಪಿ ಧರ್ಮ್‍ಪ್ರಾಂತ್ಯಾಚಾ ಸರ್ವ್ ಫಿರ್ಗಜೆಚ್ಯಾ ವಠಾರಾಂತ್ 600 ಚ್ಯಾಕಿ ಚಡ್ ಝಡಾಂ ಲಾಯ್ಲಿ ಮಾತ್ರ್ ನ್ಹಯ್ 10 ಹಜಾರಾಕ್‍ಯಿ ಚಡ್ ಝಡಾಂ ದಿಯೆಸಿಜೆಚ್ಯಾಂ ಕ್ರಿಸ್ತಿ ಪರ್ಜಾಂಕ್ ವಾಂಟುನ್ ಹೊ ವಿಶಿಶ್ಠ್ ವನಮಹತ್ಸೋವ್ ಯಶಸ್ವಿ ಕೆಲೊ. ಕಲ್ಯಾಣ್‍ಪುರ್ ವಾರಾಡ್ಯಾಂತ್ 2000, ಶಿರ್ವಾ ವಾರಾಡ್ಯಾಂತ್ 1500, ಕುಂದಾಪುರ್ ವಾರಾಡ್ಯಾಂತ್ 2000, ಕಾರ್ಕಳ್ ವಾರಾಡ್ಯಾಂತ್ 1000, ಉಡುಪಿ ವಾರಾಡ್ಯಾಂತ್ 1500 ಝಡಾಂ ವಿತರಣ್ ಕೆಲಿ. ಲೋಕಾನಿಂ ಘರಾ ವೆಲ್ಲಿಂ ಝಡಾಂ ಲಾಂವ್ನ್ ತಾಂಚೊ ಪೋಷಣ್ ಕರಿಜೆ ಆನಿ ಪ್ರಮಾಣಿಕ್ ಥರಾನ್ ಹೆಂ ವಿಶಿಷ್ಠ್ ಯೋಜನ್ ಜ್ಯಾರಿ ಕರ್ಚ್ಯಾ ದಿಶ್ಯಾನ್ ಝಡಾಂಚ್ಯಾ ವಾಡವಳೆಚಿ ಮಾಹೆತ್ ಮಹಿನ್ಯಾವಾರ್ ಘಟಕಾನಿಂ ದಿಂವ್ಕ್ ಜಾಯ್ ಮ್ಹಣನ್ ನಿರ್ಣಯ್ ಕೆಲ್ಯಾ. ಮ್ಹಣನ್ ಕಳಯ್ಲ್ಯಾ. 

 

ಕುಂದಾಪುರ  ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕ – ಶಿಕ್ಷಕ ಸಭೆ

JANANUDI NETWORK

 

ಕುಂದಾಪುರ  ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕ – ಶಿಕ್ಷಕ ಸಭೆ

 

ಕುಂದಾಪುರ,ಜು.23: ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜುಲೈ 20 ರಂದು ಕುಂದಾಪುರ ಶಾಲಾ ಪೋಷಕ ಶಿಕ್ಷಕ ಸಭೆ ಜರುಗಿತು. ಇದರ ಅಧ್ಯಕ್ಷತೆಯನ್ನು  ಶಾಲಾ ಸಂಚಾಲಕರಾದ ಅತೀ ವಂದನೀಯ ಧರ್ಮಗುರು ಸ್ಟ್ಯಾನಿ ತಾವ್ರೊ ವಹಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗುವಲ್ಲಿ ಪೋಷಕರು ಮತ್ತು  ಶಿಕ್ಷಕರು ಸಮಾನ ಪಾತ್ರವನ್ನು ವಹಿಸಿಕೊಳ್ಳುತ್ತಾರೆಂದು  ಪೋ|ಷಕರಿಗೆ ಅಮೂಲ್ಯ ಮಾಹಿತಿ ನೀಡಿ,  ಪೋಷಕರಿಂದಲೂ ಮಾಹಿತಿ ಕಲೆ ಹಾಕಿದರು.

     ” ಪೋಷಕರಿಗೆ ತಮ್ಮ ಮಕ್ಕಳ ಬಗ್ಗೆ ಕಾಳಜಿ ಇರಬೇಕು ಹಾಗೂ ಮಕ್ಕಳೊಂದಿಗೆ ಪೋಷಕರು ಸ್ನೇಹಿತರಂತೆ ಇರಬೇಕು. ಆಗ ಮಾತ್ರ ಮಕ್ಕಳು ಉತ್ತಮ ನಾಗರಿಕರಾಗಲು ಸಾಧ್ಯ”  ಎಂದು ವರಸಿದ್ದಿ ವಿನಾಯಕ ಪದವಿ ಕಾಲೇಜಿನ ಪ್ರೋಫೆಸರ್ ನಾಗರಾಜ ಹೆಮ್ಮಾಡಿ ಹೇಳಿದರು .  ಶಾಲಾ ಮುಖ್ಯ ಶಿಕ್ಷಕಿ ತೆರೇಜ್ ಶಾಂತಿಯವರು ಶಾಲೆಯ ನೀತಿ ನಿಯಮಗಳ ಬಗ್ಗೆ ಪೋಷಕರಿಗೆ ತಿಳಿಸಿದರು. ಶಾಲಾ ಆಯವ್ಯಯವನ್ನು ರೆಜೀನಾ ಸುನಿತಾರವರು ಮಂಡಿಸಿದರು. ಶಾಲಾ ಅಧ್ಯಾಪಕ ವೃಂದದವರು ತಮ್ಮ ತಮ್ಮ ವಿಷಯದ ಪ್ರಗತಿಯ ಬಗ್ಗೆ ತಿಳಿಸಿದರು. ಶಿಕ್ಷಕಿ ಪ್ರತಿಮಾ ಶೆಟ್ಟಿ, ಹಿಂದಿನ ವರ್ಷದ ವರದಿಯನ್ನು ವಾಚಿಸಿದರು. ಶಿಕ್ಷಕಿ ಮಮತಾರವರು ಕಾರ್ಯಕ್ರಮ ನಿರೂಪಿಸಿದರು. ರೇಣುಕಾರವರು ಸ್ವಾಗತಿಸಿದರು ಹಾಗೂ ಶಿಕ್ಷಕ ಲುವಿಸ್ ಪ್ರಶಾಂತ್ ರವರು ವಂದಿಸಿದರು.

 

ಕೋಲಾರ: ಶಾಲಾ ಹಂತದಲ್ಲಿ ಮಕ್ಕಳಿಗೆ ದೇಶ ಭಕ್ತಿ ಮತ್ತು ಶಿಸ್ತು ಮೂಡಿಸುವಲ್ಲಿ ಭಾರತ ಸೇವಾದಳದ ಪಾತ್ರ ದೊಡ್ಡದು – ಮದರ್ ಥೆರೆಸಾ ಶಾಲೆ ಸಂಸ್ಥಾಪಕ ಕಾರ್ಯದರ್ಶಿ ಶ್ರೀಕೃಷ್ಣ 

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ: ಶಾಲಾ ಹಂತದಲ್ಲಿ ಮಕ್ಕಳಿಗೆ ದೇಶ ಭಕ್ತಿ ಮತ್ತು ಶಿಸ್ತು ಮೂಡಿಸುವಲ್ಲಿ ಭಾರತ ಸೇವಾದಳದ ಪಾತ್ರ ದೊಡ್ಡದು – ಮದರ್ ಥೆರೆಸಾ ಶಾಲೆ ಸಂಸ್ಥಾಪಕ ಕಾರ್ಯದರ್ಶಿ ಶ್ರೀಕೃಷ್ಣ 
ಕೋಲಾರ: ಶಾಲಾ ಹಂತದಲ್ಲಿ ಮಕ್ಕಳಿಗೆ ದೇಶ ಭಕ್ತಿ ಮತ್ತು ಶಿಸ್ತು ಮೂಡಿಸುವಲ್ಲಿ ಭಾರತ ಸೇವಾದಳದ ಪಾತ್ರ ದೊಡ್ಡದು ಎಂದು ಮದರ್ ಥೆರೆಸಾ ಶಾಲೆ ಸಂಸ್ಥಾಪಕ ಕಾರ್ಯದರ್ಶಿ ಶ್ರೀಕೃಷ್ಣ ಹೇಳಿದರು. ನಗರದ ಮದರ್ ಥೆರೆಸಾ ಶಾಲೆಯಲ್ಲಿ ಭಾರತ ಸೇವಾದಳವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರ ಧ್ವಜ ಅಂಗೀಕಾರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಭಾರತ ದೇಶ ಸ್ವಾತಂತ್ಯ್ರಗಳಿಸುವ ನಿಟ್ಟಿನಲ್ಲಿ ದೇಶಾದ್ಯಂತ ಶಾಲಾ ಮಕ್ಕಳು, ಯುವಕ ಯುವತಿಯರನ್ನು ಹೋರಾಟಕ್ಕೆ ಧುಮುಕುವಂತೆ ಮಾಡುವಲ್ಲಿ ಭಾರತ ಸೇವಾದಳ ದೊಡ್ಡ ಪಾತ್ರವಹಿಸಿದ್ದು, ಈಗ ಶಾಲಾ ಮಕ್ಕಳಿಗೆ ಶಿಸ್ತು, ಸೌಹಾರ್ದತೆ, ಭಾವೈಕ್ಯತೆ, ಸಮಾನತೆ, ದೇಶ ಭಕ್ತಿ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಕುರಿತು ಅಭಿಮಾನ ಗೌರವ ಮೂಡಿಸುವ ಕಾರ್ಯದಲ್ಲಿ ಉತ್ತಮ ಕಾರ್ಯ ಸಲ್ಲಿಸುತ್ತಿದೆಯೆಂದರು.ಮೂವತ್ತು ವರ್ಷಗಳಹಿಂದೆ ತಾವು ಭಾರತ ಸೇವಾದಳದ ಆಕರ್ಷಣೆಗೊಳಗಾಗಿ ಸಮಾಜ ಸೇವಾ ಚಟುವಟಿಕೆಗಳನ್ನು ಮೈಗೂಡಿಸಿಕೊಂಡಿದ್ದು, ಅಂದಿನಿಂದ ಇಂದಿನವರೆವಿಗೂ ಬಿಳಿ ಬಟ್ಟೆಗಳನ್ನು ತೊಡುವಂತೆ ಪ್ರೇರೇಪಿಸಿದೆಯೆಂದರು.
ಮದರ್ ಥೆರೆಸಾ ಶಾಲೆಯಲ್ಲಿ ಭಾರತ ಸೇವಾದಳದ ಘಟಕವನ್ನು ಆರಂಭಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ಘೋಷಿಸಿದರು. ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಕರ್ನಾಟಕದ ನಾ.ಸು.ಹರ್ಡೀಕರ್‍ರಿಂದ ಸ್ಥಾಪಿಸಲ್ಪಟ್ಟ ಹಿಂದೂಸ್ತಾನ್ ಸೇವಾದಳ ಸಂಘಟನೆಯು ಸ್ವಾತಂತ್ರ್ಯ ನಂತರ ರಾಜಕೀಯ ರಹಿತ ಸಂಘಟನೆಯಾಗಿ ಭಾರತ ಸೇವಾದಳವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯಡಿ ಶಾಲಾ ಮಕ್ಕಳಲ್ಲಿ ರಾಷ್ಟ್ರಭಕ್ತಿಯನ್ನು ಮೂಡಿಸುವ ಚಟುವಟಿಕೆಗಳನ್ನು ಜಿಲ್ಲೆಯಾದ್ಯಂತ ನಡೆಸುತ್ತಿದೆಯೆಂದರು.
ಜಿಲ್ಲಾ ಭಾರತ ಸೇವಾದಳ ಉಪಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಸುಭಾಷ್ ಚಂದ್ರಬೋಸ್‍ರ ಸಹವರ್ತಿಯಾಗಿದ್ದ ಐ.ಎನ್.ಎ ರಾಮರಾವ್, ಜಾಫರ್ ಷರೀಫ್ ಮತ್ತಿತರರು ಭಾರತ ಸೇವಾದಳವನ್ನು ಕರ್ನಾಟಕದಲ್ಲಿ ಜನಪ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ವಿವರಿಸಿದರು.
ಶಾಲಾ ಮುಖ್ಯ ಶಿಕ್ಷಕ ಹನುಮಪ್ಪ ಮಾತನಾಡಿ, ಭಾರತ ಸೇವಾದಳವತಿಯಿಂದ ತಮ್ಮ ಶಾಲೆಯ ಮಕ್ಕಳಿಗೆ ರಾಷ್ಟ್ರಧ್ವಜ ಅಂಗೀಕಾರ ದಿನಾಚರಣೆ ಕುರಿತು ಮಾಹಿತಿ ನೀಡುತ್ತಿರುವುದು ಸಂತಸ ತಂದಿದೆಯೆಂದರು.
ಭಾರತ ಸೇವಾದಳದ ಸಂಘಟಕ ದಾನೇಶ್, ಶಾಲಾ ಮಕ್ಕಳಿಗೆ ಸುಮಾರು ಒಂದು ಗಂಟೆ ಅವ„ಯಲ್ಲಿ ರಾಷ್ಟ್ರ ಧ್ವಜವನ್ನು 1906 ರಿಂದ 1947 ರವರೆಗೂ ಸುಮಾರು 7 ಧ್ವಜಗಳನ್ನು ರಾಷ್ಟ್ರಧ್ವಜವಾಗಲು ಹಂತ ಹಂತವಾಗಿ ರೂಪಿಸಲಾಗಿದೆ. ಅಂತಿಮವಾಗಿ 1931 ರಲ್ಲಿ ಆಂಧ್ರಪ್ರದೇಶದ ಮಚಲೀಪಟ್ಟಣದ ಪಿಂಗಳಿ ವೆಂಕಯ್ಯ ಅವರು ತ್ರಿವರ್ಣ ಧ್ವಜ, ಮಧ್ಯ ಭಾಗದಲ್ಲಿ ನೂಲು ತೆಗೆಯುವ ಚರಕವನ್ನು ರೂಪಿಸಿದ್ದರು. ಆನಂತರ 1947 ಜುಲೈ 22 ರಂದು ತ್ರಿವರ್ಣ ಧ್ವಜ ಮಧ್ಯ ಭಾಗದಲ್ಲಿ ಅಶೋಕ ಚಕ್ರವುಳ್ಳ ಇಂದಿನ ರಾಷ್ಟ್ರಧ್ವಜವನ್ನು ಅಂಗೀಕರಿಸಲಾಯಿತೆಯೆಂದು ವಿವರಿಸಿದರು.
ರಾಷ್ಟ್ರ ಧ್ವಜವನ್ನು ಹಾರಿಸುವ, ಮಡಚುವ ವಿಧಾನ, ಸಂಗ್ರಹಿಸಿಡುವ ಪದ್ಧತಿ, ಆರೋಹಣ, ಅವರೋಹಣ ಸಂಪ್ರದಾಯ, ಹಾಡಬೇಕಾದ ಗೀತೆಗಳು ಮತ್ತಿತರ ವಿಚಾರಗಳನ್ನು ಮಕ್ಕಳಿಗೆ ತರಬೇತಿ ಮೂಲಕ ವಿವರಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತಾ„ಕಾರಿ ಜೈದೀಪ್ ಭಾಗವಹಿಸಿದ್ದರು.

ಕೋಲಾರ: ಉಚಿತ ಕಾನೂನು ನೆರವಿಗಾಗಿ ಕಕ್ಷಿದಾರರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನ್ಯಾಯಾಲಯದ ಆವರಣದಲ್ಲಿ `ಪ್ರೆಂಟ್ ಆಫೀಸ್’ ಆರಂಭ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ: ಉಚಿತ ಕಾನೂನು ನೆರವಿಗಾಗಿ ಕಕ್ಷಿದಾರರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನ್ಯಾಯಾಲಯದ ಆವರಣದಲ್ಲಿ `ಪ್ರೆಂಟ್ ಆಫೀಸ್’ ಆರಂಭ

ಕೋಲಾರ: ಉಚಿತ ಕಾನೂನು ನೆರವು ಬಯಸಿ ಬರುವ ಕಕ್ಷಿದಾರರಿಗೆ ನೆರವಾಗಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನ್ಯಾಯಾಲಯದ ಆವರಣದಲ್ಲಿ `ಪ್ರೆಂಟ್ ಆಫೀಸ್’ ವಿಭಾಗವನ್ನು ಆರಂಭಿಸಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ರೇಖಾ ಕರೆ ನೀಡಿದರು. ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಛೇರಿ ಆವರಣದಲ್ಲಿ  ಆಫೀಸ್‍ವಿಭಾಗವನ್ನು ಸಾರ್ವಜನಿಕ ಸೇವೆಗೆ ಸಮರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.

ಕರ್ನಾಟಕ ರಾಜ್ಯ ಕಾನೂನು ಪ್ರಾಧಿಕಾರದ ಆದೇಶದ ಮೇರೆಗೆ ಉಚಿತ ಕಾನೂನು ಬಯಸಿ ಬರುವ ಕಕ್ಷಿದಾರರಿಗೆ ತಮ್ಮ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವಶ್ಯಕವಿರುವ ಅರ್ಜಿಗಳನ್ನು ಕಾನೂನು ನೊಟೀಸುಗಳು, ನ್ಯಾಯಾಲಯದ ಮನವಿ ಪತ್ರಗಳು, ಅವಶ್ಯಕ ಅರ್ಜಿಗಳನ್ನು ಸಿದ್ದಪಡಿಸಿಕೊಡುವ ಮತ್ತು ಇತರೆ ಕಾನೂನು ಸೇವೆಗಳನ್ನು ಒದಗಿಸುವ ದೃಷ್ಟಿಯಿಂದ ಈ ಕಚೇರಿ ಆರಂಭಿಸಲಾಗಿದೆ ಎಂದು ತಿಳಿಸಿದರು. ಅನೇಕರು ಉಚಿತ ಕಾನೂನು ನೆರವು ಸಿಗುವ ಕಲ್ಪನೆಯೇ ಇಲ್ಲದೇ ಸಂಕಷ್ಟಕ್ಕಿಡಾಗಿರುವ ಪ್ರಸಂಗಗಳು ಇಲ್ಲದಿಲ್ಲ, ಅಂತಹವರಿಗೆ ಉಚಿತ ನೆರವಿನ ಕುರಿತು ಅರಿವು ಮೂಡಿಸುವ ಕೆಲಸವನ್ನು ಸುಶೀಕ್ಷಿತರು ಮಾಡಬೇಕು ಎಂದು ಸಲಹೆ ನೀಡಿದರು.

ಈಗಾಗಲೇ ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು, ಕಾರ್ಮಿಕರಿಗೆ ಕಾನೂನು ಸೇವಾ ಪ್ರಾಧಿಕಾರ ಕಾನೂನಿನ ಅರಿವು ನೆರವನ್ನು ಒದಗಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದು, ಇದರ ಪ್ರಯೋಜನ ಪಡೆಯಲು ಕಕ್ಷಿದಾರರು ಮುಂದಾಗಬೇಕು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶರಾದ ಸಿ.ಹೆಚ್.ಗಂಗಾದರ `ಪ್ರೆಂಟ್ ಆಫೀಸ್, ಕಛೇರಿ ಕಚೇರಿ ದಿನಗಳಲ್ಲಿ ಬೆಳಗ್ಗೆ 10:30 ರಿಂದ ಸಂಜೆ 6 ಗಂಟೆ ವರೆಗೂ ಕಾರ್ಯನಿರ್ವಹಿಸುವುದು ಈ ಕಛೇರಿಯಲ್ಲಿ ಒಬ್ಬರು ಪ್ಯಾನಲ್ ವಕೀಲರು ಸೇರಿದಂತೆ ಅರೆಕಾಲಿಕ ಕಾನೂನು ಸೇವಕರು ಇದ್ದು, ಅವರು ಕಕ್ಷಿದಾರರಿಗೆ ಅಥವಾ ಸಾರ್ವಜನಿಕರ ಪ್ರಕರಣಗಳಿಗೆ ಸಂಬಂಧಿಸಿದ ಅವಶ್ಯಕ ಅರ್ಜಿಗಳನ್ನು ನೋಟಿಸ್‍ಗಳನ್ನು ಉಚಿತವಾಗಿ ಸಿದ್ದಪಡಿಸಿಕೊಡುತ್ತಾರೆ. ಈ ಕಛೇರಿಯ ಸೇವೆಯನ್ನು ಬಳಸಿಕೊಳ್ಳಬೇಕೆಂದು ಸಾರ್ವಜನಕರಿಗೆ ಕಿವಿಮಾತು ಹೇಳಿದರು.

ನ್ಯಾಯ ಕೋರಿ ಬರುವವರಿಗೆ ಉಚಿತ ಕಾನೂನಿನ ನೆರವು ನೀಡುವ ಅಗತ್ಯವಿದೆ, ಅದರಲ್ಲೂ ಮಹಿಳೆಯರು, ವಿಕಲಚೇತನರು, ಆದಾಯದ ಮಿತಿಯೊಳಗೆ ಇರುವವರು ಸೇರಿದಂತೆ ಯಾರೇ ಬಂದರೂ ಈ ಕಚೇರಿಯಲ್ಲಿ ಸಿಗುವ ಸೌಲಭ್ಯ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಬಡತನ, ಆರ್ಥಿಕ ಹಿನ್ನಡೆಯಿಂದಾಗಿ ಅನೇಕರು ನ್ಯಾಯ ಪಡೆಯುವಲ್ಲಿ ವಿಫಲವಾದ ಪ್ರಕರಣಗಳು ಇವೆ, ಅಂತಹ ಸಂದರ್ಭದಲ್ಲಿ ಅಂತಹ ಸಂಕಷ್ಟದಲ್ಲಿರುವ ಕಕ್ಷಿದಾರರು ಪ್ರೆಂಟ್ ಆಫೀಸ್ ನೆರವು ಪಡೆಯಬಹುದು, ತಮ ಸಮಸ್ಯೆಗೆ ಪರಿಹಾರವನ್ನು ಉಚಿತವಾಗಿ ಹುಡುಕಿಕೊಳ್ಳಲು ನೆರವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಚ ಟಿ.ಆರ್.ಜಯರಾಮ್ ಪ್ಯಾನಲ್ ವಕೀಲರಾದ ಕೆ.ಆರ್.ಧನರಾಜ್,ಎಂ.ನಾರಾಯಣಸ್ವಾಮಿ ಸೋಮಶೇಖರ್,ವೆಂಕಟಾಚಲಪತಿ,ಶ್ರೀನಿವಾಸ್,ವಿಶಾಲಾಕ್ಷಿ ,ಸಂಧ್ಯಾ ಮುಂತಾದವರು ಹಾಜರಿದ್ದರು.

ಕೋಲಾರ – ರಾಜ್ಯದ ಜನರ ಜಲ್ವಂತ ಸಮಸ್ಯೆಗಳನ್ನು ಮರೆತು ರೆಸಾರ್ಟ್ ರಾಜಕೀಯ ಮಾಡುತ್ತಿರುವ 224 ಶಾಸಕರನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ – ರೈತ ಸಂಘ

ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ

ಕೋಲಾರ – ರಾಜ್ಯದ ಜನರ ಜಲ್ವಂತ ಸಮಸ್ಯೆಗಳನ್ನು ಮರೆತು ರೆಸಾರ್ಟ್ ರಾಜಕೀಯ ಮಾಡುತ್ತಿರುವ 224 ಶಾಸಕರನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ – ರೈತ ಸಂಘ

ಕೋಲಾರ: ಪವಿತ್ರವಾದ ವಿಧಾನಸೌಧದಲ್ಲಿ ಅಧಿಕಾರಕ್ಕಾಗಿ ಅಸಭ್ಯ, ಅವ್ಯಾಚ್ಯ ಶಬ್ದಗಳನ್ನು ಬಳಸಿ ಸಂವಿದಾನಕ್ಕೆ ದಕ್ಕೆ ತರುತ್ತಿರುವ ಹಾಗೂ ಬರ ಹಾಗೂ ರಾಜ್ಯದ ಜನರ ಜಲ್ವಂತ ಸಮಸ್ಯೆಗಳನ್ನು ಮರೆತು ರೆಸಾರ್ಟ್ ರಾಜಕೀಯ ಮಾಡುತ್ತಿರುವ 224 ಶಾಸಕರು ಶಾಸಕ ಸ್ಥಾನವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕೆಂದು ರೈತ ಸಂಘದಿಂದ ಬೀದಿ ಹಂದಿಗಳಿಗೆ ರಾಜಕಾರಣಿಗಳ ಮುಖವಾಡ ದರಿಸಿ ಅಣುಕು ಹೋರಾಟ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು..
ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ರಾಜ್ಯದಲ್ಲಿ ಕಾನೂನು ಎಂಬುದು ಬಡವರಿಗೆ ಮಾತ್ರ ಸೀಮಿತವಾಗಿದೆ. ಬಹುಮತ ಸಾಬೀತು ಮಾಡಲು ಎರಡು ಬಾರಿ ಸರ್ಕಾರಕ್ಕೆ ಮಾನ್ಯ ಗೌರವಾನ್ವಿತ ರಾಜ್ಯಪಾಲರು ಆದೇಶ ನೀಡಿದ್ದರೂ ಅದನ್ನು ಲೆಕ್ಕಿಸದೇ ನಾವೇ ರಾಜ ನಾವೇ ಮಂತ್ರಿ ಎಂಬಂತೆ ಮೆರೆದು ಜನಸಾಮಾನ್ಯರ ಸಮಸ್ಯೆಗಳನ್ನು ಮರೆತು ಬ್ರೀಟಿಷ್ ಆಳ್ವಿಕೆಯ ಜೊತೆಗೆ ಲಕ್ಷಾಂತರ ಕೂಲಿಕಾರ್ಮಿಕರು ಬೆವರು ಸುರಿಸಿ ಕಟ್ಟಿದಂತಹ ವಿದಾನಸೌಧದಲ್ಲಿ ಸಾವಿರಾರು ಮಹಾನಿಯರು ಉತ್ತಮ ಆಡಳಿತಮಾಡಿ ಸಂವಿದಾನಕ್ಕೆ ಗೌರವ ತಂದುಕೊಟ್ಟು ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸಿ ಜನರ ಕಷ್ಟಗಳಿಗೆ ಸ್ವಂದಿಸುತ್ತಿದ್ದ ವಿದಾನಸೌಧ ಇಂದು ರಾಜಕಾರಣಿಗಳ ಸ್ವಂತ ಆಸ್ತಿಯಾಗಿದೆ 6.5 ಕೋಟಿ ಜನಸಂಖ್ಯೆಯ ಕಷ್ಟಗಳಿಗೆ ಸ್ಪಂದಿಸಲು ಶ್ರಮಿಸಬೇಕಾದ ರಾಜಕಾರಣಿಗಳು ಅಧಿಕಾರದ ಖುರ್ಚಿಗಾಗಿ ಮಾತುಬಾರದ ಮೂಕಪ್ರಾಣಿಗಳಂತೆ ಮಾದ್ಯಮಗಳ ಹಾಗೂ ಸಾರ್ವಜನಿಕರ ಮುಂದೆ ಕಚ್ಚಾಡಿ ಪವಿತ್ರವಾದ ವಿದಾನಸೌಧಕ್ಕೆ ಕಳಂಕ ತರುತ್ತಿದ್ದಾರೆ ಒಂದು ಕಡೆ ಬೀಕರವಾದ ಬರಗಾಲ ಮತ್ತೊಂದುಕಡೆ ರೈತರು ಬೆಳೆದಂತಹ ಬೆಳೆಗೆ ಬೆಲೆ ಇಲ್ಲದೆ ಬೀದಿಗೆ ಬೀಳುವ ಜೊತೆಗೆ ಜನಸಾಮಾನ್ಯರ ಶಿಕ್ಷಣ, ಆರೋಗ್ಯ ಜಿಲ್ಲೆಗಳಲ್ಲಿ ನೀರು ಮೇವಿಗಾಗಿ ಪರಿತಪಿಸುತ್ತಿದ್ದಾರೆ ಅತಂತ್ರ ಸ್ಥಿತಿಯಲ್ಲಿರುವ ಸರ್ಕಾರದ ವೈಪಲ್ಯವನ್ನು ಮನಗೊಂಡಿರುವ ಅಧಿಕಾರಿಗಳು ಜನಸಾಮಾನ್ಯರ ಕೆಲಸಗಳಿಗೆ ನಯಾಪೈಸೆ ಬೆಲೆ ಕೊಡದೆ ಹಿಟ್ಲರ್‍ದೋರಣೆ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿದೆಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ ಮಾತನಾಡಿ ಆಯ ಕ್ಷೇತ್ರಗಳಲ್ಲಿ ಜಲ್ವಂತ ಸಮಸ್ಯೆಗಳನ್ನು ಬಗೆಹರಿಸಲು ಜನರ ಮದ್ಯೆ ಇರಬೇಕಾದ ಶಾಸಕರು ಕುದುರೆ ವ್ಯಾಪಾರಕ್ಕೆ ಬಲಿಯಾಗಿ ರೆಸಾರ್ಟ ಹಾಗೂ ಹೋಟೆಲ್‍ಗಳಲ್ಲಿ ಐಷಾರಾಮಿ ಜೀವನಕ್ಕೆ ಹೊಂದಿಕೊಂಡಿದ್ದರೆ ಇತ್ತ ಮತ ಹಾಕಿದೆ ಮತಬಾಂದವರು ಸಮಸ್ಯೆಗಳ ಸುಳಿಗೆ ಸಿಲುಕಿ ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದಾರೆ ಆದ್ದರಿಂದ ಮಾನ್ಯ ರಾಜ್ಯಪಾಲರು 15 ದಿನಗಳಿಂದ ವಿದಾನಸೌಧದ ಪವಿತ್ರತೆಯನ್ನು ಅರಾಜುಗಿಟ್ಟು ಡ್ರಾಮಜೂನಿಯರ್ಸ್‍ತರ ನಾಟಕವಾಡಿ ಜನಸಾಮಾನ್ಯರ ಜೀವನದ ಜೊತೆ ಚಲ್ಲಾಟವಾಡುವ ಜೊತೆಗೆ ತಮ್ಮ ಆಧೇಶವನ್ನು ಉಲ್ಲಂಘನೆ ಮಾಡಿ ಕಾನೂನಿನ ಭಯವಿಲ್ಲದೆ ವಿದಾನಸೌಧ ಹಾಗೂ ಸರ್ಕಾರ ಅವರ ಮನೆಯ ಸ್ವಂತ ಆಸ್ತಯಂತೆ ವರ್ತನೆ ಮಾಡಿ ಪ್ರಜಾಪ್ರಭುತ್ವವನ್ನು ಕಗ್ಗೋಲೆ ಮಾಡುತ್ತಿರುವ ಸಮ್ಮಿಶ್ರ ಸರ್ಕಾರವನ್ನು ಕೂಡಲೆ ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿ ರಾಜ್ಯದ ಮರ್ಯಾದೆ ಮತ್ತು ವಿದಾನಸೌಧದ ಪವಿತ್ರತೆಯನ್ನು ಕಾಪಾಡಬೇಕೆಂದು ಮಾನ್ಯರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ.
ಈ ಹೋರಾಟದಲ್ಲಿ ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್, ಹುಲ್ಕೂರ್ ಹರೀಕುಮಾರ್, ಮಂಗಸಂದ್ರ ವೆಂಕಟೇಶ್, ತಿಮ್ಮಣ್ಣ, ಪಾರುಕ್‍ಪಾಷ, ಈಕಂಬಳ್ಳಿ ಮಂಜುನಾಥ್, ಉದಯ್‍ಕುಮಾರ್, ರಂಜಿತ್, ಸಾಗರ್, ತೆರ್ನಹಳ್ಳಿ ಆಂಜಿನಪ್ಪ, ಪುರುಷೋತ್ತಮ್, ನಾರಾಯಣ್, ಶಿವ, ಜುಬೇದ್‍ಪಾಷ, ಸುಪ್ರೀಂಚಲ, ಮುನಿನಾರಾಯಣಪ್ಪ, ಮುಂತಾದವರಿದ್ದರು.

ಬೀಜಾಡಿ:ಉಚಿತ ಸಮವಸ್ತ್ರದ ಜೊತೆ ಪ್ರತಿ ಮಗುವಿಗೊಂದು ಸಸಿ ವಿತರಣೆ

ವರದಿ: ಚಂದ್ರಶೇಖರ, ಬೀಜಾಡಿ 

ಬೀಜಾಡಿ:ಉಚಿತ ಸಮವಸ್ತ್ರದ ಜೊತೆ ಪ್ರತಿ ಮಗುವಿಗೊಂದು ಸಸಿ ವಿತರಣೆ


ಕುಂದಾಪುರ:ಯುವ ಜನತೆ ಮನಸ್ಸು ಮಾಡಿದರೆ ಸಾಧನೆ ಸಾಧ್ಯ.ಊರಿನ ಅಭಿವೃದ್ಥಿಗೆ ಸಂಘ ಸಂಸ್ಥೆಗಳು ನೀಲನಕ್ಷೆ ಸಿದ್ದಪಡಿಸಿ ದಾನಿಗಳು ಮತ್ತು ಸರಕಾರದ ಗಮನ ತರಬೇಕು.ಆಗ ಅವರು ನೀಡುವ ಸಹಕಾರದಿಂದ ಊರನ್ನು ಅಭಿವೃದ್ಧಿ ಪಡಿಸಲು ಸಾಧ್ಯ. ಈ ನಿಟ್ಟಿ ಮಿತ್ರ ಸಂಗಮದ ಪ್ರಯತ್ನ ಶ್ಲಾಘನೀಯ ಎಂದು ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಶ್ರೀಧರ ಪಿ.ಎಸ್ ಹೇಳಿದರು.
ಅವರು ಭಾನುವಾರ ಬೀಜಾಡಿ ಗೋಪಾಡಿ ಮಿತ್ರ ಸಂಗಮದ ಆಶ್ರಯದಲ್ಲಿ ಬೀಜಾಡಿ ಮೂಡು ಶಾಲಾ ಅಂಗನವಾಡಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಹಾಗೂ ಪ್ರತಿ  ಮಗುವಿಗೊಂದು ಸಸಿ ವಿತರಣೆಯ ಸಮಾರಂಭದಲ್ಲಿ ಆಶಯ ಭಾಷಣ ಮಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬೀಜಾಡಿ ಮೂಡು ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿಯ ಸದಸ್ಯ ಬಿ.ವಾದಿರಾಜ ಹೆಬ್ಬಾರ್ ವಹಿಸಿದ್ದರು.ಇದೇ ಸಂದರ್ಭದಲ್ಲಿ ಸಮವಸ್ತ್ರದ ದಾನಿ,ಕುಂದಾಪುರದ ವಕೀಲರಾದ ಕೆ.ಪ್ರದೀಪಕುಮಾರ್ ಶೆಟ್ಟಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಿದರು.
ಶಿಕ್ಷಣ ಪ್ರೇಮಿ ಬೀಜಾಡಿ ಶೇಷಗಿರಿ ಗೋಟ, ಕುಂದಾಪುರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಮೇಲ್ವಿಚಾರಕಿ ರಾಜೇಶ್ವರೀ,ಬೀಜಾಡಿ ಮೂಡು ಅಂಗನವಾಡಿ ಕೇಂದ್ರದ ಶಿಕ್ಷಕಿ ಸುಜಾತ ಮೊದಲಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಮಿತ್ರ ಸಂಗಮದ ಮಾಜಿ ಅಧ್ಯಕ್ಷ ವೇದಮೂರ್ತಿ ಶಂಕರನಾರಾಯಣ ಬಾಯರಿ, ಪ್ರಧಾನ ಕಾರ್ಯದರ್ಶಿ ಚಂದ್ರ ಬಿ.ಎನ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಮಂಜುನಾಥ ಸ್ವಾಗತಿಸಿದರು. ಅನುಪ್ ಕುಮಾರ್ ಬಿ.ಆರ್.ವಂದಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

ಕುಂದಾಪುರದಲ್ಲಿ ಕಿರು ಕ್ರೈಸ್ತ ಸಮುದಾಯ ಶಿಬಿರ – ಪರರ ಸೇವೆ ಮಾಡುವುದೇ ನಿಜವಾದ ಕ್ರಿಶ್ಚಿನಿಯರ ಲಕ್ಷಣಗಳು – ಫಾ|ಹೆರಾಲ್ಡ್ ಪಿರೇರಾ

JANANUDI NETWORK

ಕುಂದಾಪುರದಲ್ಲಿ ಕಿರು ಕ್ರೈಸ್ತ ಸಮುದಾಯ ಶಿಬಿರ – ಪರರ ಸೇವೆ ಮಾಡುವುದೇ ನಿಜವಾದ ಕ್ರಿಶ್ಚಿನಿಯರ ಲಕ್ಷಣಗಳು – ಫಾ|ಹೆರಾಲ್ಡ್ ಪಿರೇರಾ


ಕುಂದಾಪುರ, ಜು.22: ‘ಪರರ ಸೇವೆ ಮಾಡುವುದೇ ನೀಜವಾದ ಕ್ರಿಶ್ಚಿನಿಯರ ಲಕ್ಷಣಗಳು, ಯೇಸುವಿಗಾಗಿ ಕಷ್ಟ, ಹಿಂಸೆ, ಅವಮಾನ, ಅನುಭವಿಸಿದಲ್ಲಿ ನೀವು ಯೇಸುವಿನ ನೀಜವಾದ ಅನುಯಾಯಿಗಳು. ಕಿರು ಕ್ರೈಸ್ತ ಸಮುದಾಯ ಇರುವುದು ಕೇವಲ ಇಗರ್ಜಿಯಲ್ಲಿ ಮಾತ್ರ sಸಕ್ರಿಯವಾಗುವುದಲ್ಲಾ ನಿಮ್ಮ ನಿಮ್ಮ ವಾಳೆಯಲ್ಲಿಯೂ ಸಕ್ರೀಯವಾಗಿರಬೇಕು, ದೇವರು ಇಗರ್ಜಿಯಲ್ಲಿ ಮಾತ್ರವಲ್ಲಾ ನಿಮ್ಮ ವಾಳೆಯಲ್ಲಿಯೂ ಇದ್ದು ವಾಳೆಯ ಸಮುದಾಯದಲ್ಲಿ ಕ್ರೈಸ್ತರು ಒಟ್ಟು ಸೇರಿ ಯೇಸುವಿನ ತತ್ವಗಳಂತೆ, ಯಾರು ಕಷ್ಟದಲ್ಲಿ ಇರುವರೋ ಅವರಿಗೆ ಸ್ಪಂದಿಸಿ, ನಿಸ್ಸಹಾಯಕರಿಗೆ,ವ್ರದ್ದರಿಗೆ, ರೋಗಿಗಳಿಗೆ ಸಹಾಯ ಹಸ್ತ ನೀಡಿರಿ’ ಎಂದು ಉಡುಪಿ ಧರ್ಮಪ್ರಾಂತ್ಯದ ಕಿರು ಕ್ರೈಸ್ತ ಸಮುದಾಯದ ನಿರ್ದೇಶಕರಾದ ವಂ|ಫಾ|ಹೆರಾಲ್ಡ್ ಪಿರೇರಾ ನುಡಿದರು.
‘ಯಾರನ್ನು ಕೀಳಾಗಿ ಕಾಣ ಬೇಡಿ, ಬಡವರು ಶ್ರೀಮಂತರು ಎಂಬ ಬೇಧ ಭಾವನೆ ಇಲ್ಲಾ, ಕಿರು ಸಮುದಾಯ ಅಂದರೆ ಕೇವಲ ಸಾಮಾಜಿಕ ಪಂಗಡದಂತೆ ಜೀವಿಸದೆ, ಪಿತಾ ಸುತ ಪವಿತ್ರಾತ್ಮನ ಜೊತೆ ನೀಜವಾದ ಕ್ರಿಸ್ತಿ ಸಮುದಾಯವಾಗಿರ ಬೇಕು’ ಎಂದು ಅವರು ತಿಳಿಸಿದರು ಕುಂದಾಪುರ ಪವಿತ್ರ ರೋಜರಿ ಮಾತಾ ಕಿರು ಕ್ರೈಸ್ತ ಸಮುದಾಯದ ಪ್ರೇರಕರ, ಗುರಿಕಾರರ, ವಾಳೆ ಸಮಿತಿಯ ಸದಸ್ಯರಿಗೆ, ಚರ್ಚ್ ಸಭಾ ಭವನದಲ್ಲಿ ಭಾನುವಾರ 21 ರಂದು ಎರ್ಪಡಿಸಿದ ಶಿಬಿರದಲ್ಲಿ ಅವರು ಮಾತನಾಡಿದರು.
ಕುಂದಾಪುರದ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ‘ಕಿರು ಕ್ರೈಸ್ತ ಸಮುದಾಯದಿಂದ ವಾಳೆಯಲ್ಲಿ ಪ್ರೀತಿ, ಒಗ್ಗಟ್ಟು ಉಂಟಾಗುತ್ತದೆ’ ಎಂದು ಅವರು ಶಿಬಿರಕ್ಕೆ ಶುಭ ಕೋರಿದರು. ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಪ್ರಾಂಶುಪಾಲರಾದ ವಂ|ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್ ಉಪಸ್ಥಿತರಿದ್ದರು. ಲೂಡ್ರ್ಸ್ ವಾಳೆಯಾ ಗ್ರೆಟ್ಟಾ ಡಿಸೋಜಾ ಶಿಬಿರವನ್ನು ಸಂಯೋಜಿಸಿದ್ದರು. ಕಾರ್ಮೆಲ್ ವಾಳೆಯ ಪ್ರೇರಕಿ ಸಂಗೀತ ಪಾಯ್ಸ್ ವಂದಿಸಿದರು. ಸಂತ ಜೋಸೆಫ್ ವಾಜ್ ವಾಳೆಯ ವಿನಯಾ ಡಿಕೋಸ್ತಾ ಸ್ವಾಗತಿಸಿ, ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಕುಂದಾಪುರಾಂತ್ ದುಸ್ರ್ಯಾ ಹಂತಾಚ್ಯಾ ಲಾಯಿಕ್ ಮುಖೇಲ್ಪಾಣಾಚಿ ತರ್ಭೆತಿ ಶಿಬಿರ್

JANANUDI NETWORK

ಕುಂದಾಪುರಾಂತ್ ದುಸ್ರ್ಯಾ ಹಂತಾಚ್ಯಾ ಲಾಯಿಕ್ ಮುಖೇಲ್ಪಾಣಾಚಿ ತರ್ಭೆತಿ ಶಿಬಿರ್


ಕುಂದಾಪುರ್, ಜು.21 ಆಮ್ಚ್ಯಾ ಸಮಾಜೆಚೊ ಮುಖ್ಲೊ ವಾವ್ರ್ ಮುಂದುರುನ್ ವ್ಹರ್ಚ್ಯಾ ಖಾತಿರ್ ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ 28 ವರ್ಸಾಂ ಥಾವ್ನ್ 45 ವರ್ಸಾಂಚ್ಯಾ ಲಾಯಿಕಾಂಕ್ ತರ್ಭೆತಿ ಶಿಬಿರ್ ಆಸಾ ಕೆಲೆಂ.
ವಿಗಾರ್ ಭೋ|ಮಾ|ಬಾಸ್ಟ್ಯಾನಿ ತಾವ್ರೊನ್ ‘ಆಮಿ ಅಲ್ಪಸಂಖ್ಯಾಕ್ ಜಾವ್ನಾಸಾಂವ್, ಅತಾಂ ಆಮ್ಚೆಂ ಮಾಲ್ಘಡೆಂ ಆಮ್ಚ್ಯಾ ಸಮಾಜೆಚ್ಯಾ ಮುಖೇಲ್ಪಣಾಚೊ ವಾವ್ರ್ ಕರ್ನ್ ಆಸಾತ್, ಮುಕಾರ್ ಆಮ್ಚ್ಯಾ ಸಮಾಜೆಚೊ ವಾವ್ರ್ ಆಮಿ ರಾವೊಂಕ್ ನಜೊ, ಸಮಾಜೆಂತ್ ಆಮ್ಚೆ ಅಸ್ಥಿತ್ವ್ ಉರೊಂಕ್ ಜಾಯ್, ತೆಂ ಅಳ್ವೊನ್ ವಸಾನಾಯೆ, ಆಮ್ಚೆ ಸಮಾಜೆ ಮುಕಾರ್ ಮುಖೇಲ್ಪಣ್ ಘೆಂವ್ನ್ ಚಲವ್ನ್ ವ್ಹರ್ತೆಲ್ಯಾಂಚಿ ಗರ್ಜ್ ಆಸಾ. ದೆಕುನ್ ದುಸ್ರ್ಯಾ ಹಂತಾಚ್ಯಾ ಮುಖೇಲ್ಯಾನಿಂ ಮುಖೇಲಿ ಜಾಂವ್ಕ್ ಮುಕಾರ್ ಸರಾಜೆ, ದೆಕುನ್ ಹೆಂ ಶಿಬಿರ್ ಮಾಂಡುನ್ ಹಾಡ್ಲ್ಯಾ ಹಾಚೊ ಉಪಯೋಗ್ ತುಮಿ ಬರ್ಯಾ ಥರಾನ್ ಗಳ್ಸುನ್ ಘೆಜೆ’ ಮ್ಹಣನ್ ತಾಣಿ ಶಿಬಿರಾಕ್ ಬರೆ ಮಾಗ್ಲೆಂ.
ಹ್ಯಾ ಶಿಬಿರಾಕ್ ಸಂಪನ್ಮೂಲ್ ವ್ಯಕ್ತಿ ಜಾಂವ್ನ್ ಉಡುಪಿ ಧರ್ಮ್ ಪ್ರಾಂತ್ಯಾಚೊ ಕುಟ್ಮಾ ಆಯೋಗಾಚೊ ನಿರ್ದೇಶಕ್ ಲೆಸ್ಲಿ ಆರೋಜಾನ್ ಶಿಬಿರ್ ಚಲವ್ನ್ ವೆಲೆಂ. ಸಹಾಯಕ್ ವಿಗಾರ್ ಮಾ|ಬಾ|ವಿಜಯ್ ಡಿಸೋಜಾ, ಲಾಯಿಕ್ ಆಯೋಗಾಚೊ ಅಧ್ಯಕ್ಷ್, ಸಾಂದೆ, ಕುಟ್ಮಾ ಆಯೋಗಾಚಿ ಅಧ್ಯಕ್ಷಿಣ್ ಆನಿ ಸಾಂದೆ, ಕಥೊಲಿಕ್ ಸಭಾಚೆಂ ಪದಾಧಿಕಾರಿ ಆನಿ ಸಾಂದೆ ಹಾಜರ್ ಆಸ್ಲೆಂ. ಹ್ಯಾ ಶಿಭಿರಾಕ್ ಸುಮಾರ್ 50 ಜಣ್ ದುಸ್ರ್ಯಾ ಹಂತಾಚ್ಯಾ ಮುಖೇಲ್ಯಾನಿಂ ವಾಂಟೊ ಘೆತ್ಲೊ.

ಕುಂದಾಪುರ ರೋಟರಿ : ವಿದ್ಯಾರ್ಥಿಗಳ ಭವಿಷ್ಯದ ಭದ್ರ ಬುನಾದಿಗೆ ಕಾರ್ಪೋರೇಶನ್  ಬ್ಯಾಂಕಿನ ವಿದ್ಯಾಸಾಲದ ಮಾಹಿತಿ ಶಿಬಿರ

JANANUDI NETWORK

ಕುಂದಾಪುರ ರೋಟರಿ : ವಿದ್ಯಾರ್ಥಿಗಳ ಭವಿಷ್ಯದ ಭದ್ರ ಬುನಾದಿಗೆ ಕಾರ್ಪೋರೇಶನ್  ಬ್ಯಾಂಕಿನ ವಿದ್ಯಾಸಾಲದ ಮಾಹಿತಿ ಶಿಬಿರ


ಕುಂದಾಪುರ, ಜು.20: ‘ಪದವಿಪೂರ್ವ ಶಿಕ್ಷಣದ ಹಂತ ಅಂದರೆ, ತುಂಬ ಕ್ಲಿಷ್ಠಕರವಾದುದು, ಆದರೆ ಪದವಿಪೂರ್ವ ಶಿಕ್ಷಣದ ನಂತರ ವಿದ್ಯಾರ್ಥಿಗಳು ಆರ್ಥಿಕತೆಯ ಸಲುವಾಗಿ ಯಾವತ್ತೂ ಶಿಕ್ಷಣವನ್ನು ಮೊಟುಕು ಗಳಿಸ ಬೇಡಿ, ಸಾಲ ಪಡೆದುಕೊಂಡು, ನೀವು ಅಂದುಕೊಂಡಹ ಶಿಕ್ಷಣ ಪಡೆದು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು’ ಎಂದು ಡೇಲಿಯಾ ಡಯಾಸ್, ಡೆಪ್ಯುಟಿ ಜನರಲ್ ಮೇನೆಜರ್ ಹಾಗೂ ವಲಯ ಮುಖ್ಯಸ್ಥೆ ಕಾರ್ಪೋರೇಶನ್  ಬ್ಯಾಂಕ್ ಉಡುಪಿ ಇವರು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅವರು ಕಾರ್ಪೋರೇಶನ್  ಬ್ಯಾಂಕ್, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ರೋಟರಿ ಲಕ್ಶ್ಮೀನರಸಿಂಹ ಕಲಾಮಂದಿರದಲ್ಲಿ ಜುಲೈ 20 ರಂದು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ‘ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮುಂದೆ ಉನ್ನತ ಶಿಕ್ಷಣವನ್ನು ಮುಂದುವರೆಸಲಿಕ್ಕಾಗಿ ಕಾರ್ಪೋರೇಶನ್  ಬ್ಯಾಂಕ್ ತುಂಬ ಸರಳವಾದ ಸಾಲವದ ಸೌಲಭ್ಯವನ್ನು ನೀಡುತ್ತದೆ, ವಿದ್ಯಾ ಸಾಲವು ನಾಲ್ಕು ಲಕ್ಷದ ವರೆಗೆ ಯಾವ ಭದ್ರತೆಯೂ ಇಲ್ಲದೆ ಸಾಲವನ್ನು ಬ್ಯಾಂಕುಗಳು ನೀಡುತ್ತವೆ, ಸಾಲವನ್ನು ನಿಮಗೆ ಉದ್ಯೋಗ ದೊರೆತ ಮೇಲೆಯೆ ಸಾಲವನ್ನು ತೀರಿಸ ಬಹುದಾತಂತ ಸಾಲ ವಿದ್ಯಾ ಸಾಲವಾಗಿದೆ, ಹಾಗಾಗಿ ಆರ್ಥಿಕ ಸ್ಥಿತಿ ಉತ್ತಮ ಇಲ್ಲದಿದ್ದರೂ ತಾವು ಅಂದುಕೊಂಡ ಶಿಕ್ಷಣ ಪಡೆಯಬಹುದೆಂದು’ ಅವರು ವಿದ್ಯಾ ಸಾಲದ ಅರಿವು ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕುಂದಾಪುರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಭುಜಂಗ ಶೆಟ್ಟಿ ಶುಭ ಹಾರೈಸಿದರು. ಕಾರ್ಪೋರೇಶನ್  ಬ್ಯಾಂಕ್ ಸಹಾಯಕ ಮೇನೆಜರಗಳಾದ ಬಸವರಜ್ ಕಟ್ಟಿ, ಅರುಣ್ ಕುಮಾರ್ ಶೆಟ್ಟಿ. ಇವರುಗಳು ವಿದ್ಯಾಸಾಲದ ಬಗ್ಗೆ ವಿವರಣೆ ನೀಡಿದರು. ರೋ| ಯು.ಎಸ್.ಶೆಣೈ ಪ್ರಸ್ತಾವಿಕ ಮಾತುಗಳನ್ನಾಡಿರು, ರೋ|ಸದಾನಂದ ಛಾತ್ರ ಸಾಲ ತೆಗೆದುಕೊಂಡು ಶಿಕ್ಷಣ ಮುಂದುವರೆಸುವ ವಿದ್ಯಾರ್ಥಿಗಳ ಉದಾರಹಣೆ ನೀಡಿದರು. ರೋ|ಸಂತೋಷ್ ಕುಮಾರ್ ಶೆಟ್ಟಿ ಮುಖ್ಯ ಅಥಿಗಳ ಪರಿಚಯ ನೀಡಿದರು. ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇದರ ಕಾರ್ಯದರ್ಶಿ ಶೋಭಾ ಭಟ್ ಮತ್ತು ಸ.ಪ.ಪೂ. ಪ್ರಾದ್ಯಪಕಿ ಸಂದ್ಯಾ ಎಮ್. ನಾಯ್ಕ್ ಉಪಸ್ಥಿತರಿದ್ದರು. ವಿವಿಧ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ಆಗಮಿಸಿದ ಈ ಕಾರ್ಯಕ್ರಮಕ್ಕೆ ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇದರ ಅಧ್ಯಕ್ಷ ದೇವರಾಜ್ ಕೆ. ಸ್ವಾಗತ ಕೋರಿದರು, ಸ.ಪ.ಪೂ. ಕಾಲೇಜಿನ ಪ್ರಾಧ್ಯಪಕರಾದ ಉದಯಕುಮಾರ್ ಶೆಟ್ಟಿ ಕಾಳಾವರ ಕಾರ್ಯಕ್ರವನ್ನು ನಡೆಸಿ ವಂದನೆಗಳನ್ನು ಸಲ್ಲಿಸಿದರು.