HOLY ROSARY CHURCH, KUNDAPUR – 450 th JUBILEE SOUVENIR 2021

ಕುಂದಾಪುರ್ ಕಥೊಲಿಕ್ ಸಭಾ ಘಟಕಾ ಥಾವ್ನ್ ಭಾಷಣ್ ಸ್ಪಧ್ರ್ಯಾಚೆಂ ಫಲಿತಾಂಶ್

JANANUDI.COM NETWORK

ಕುಂದಾಪುರ್ ಕಥೊಲಿಕ್ ಸಭಾ ಘಟಕಾ ಥಾವ್ನ್ ಭಾಷಣ್ ಸ್ಪಧ್ರ್ಯಾಚೆಂ ಫಲಿತಾಂಶ್


ಕುಂದಾಪುರ್, ಆ26: ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಹಾಣಿ ಆಸಾ ಕೆಲ್ಯಾ ಫಿರ್ಗಜ್ ವಾರ್ ಕೊಂಕಣಿ ಭಾಷಣ್ ಸ್ಪರ್ಧೊ ಆನಿ ಕನ್ನಡ ಭಾಷಣ್ ಸ್ಪರ್ಧೊ ಕುಂದಾಪುರ್ ಘಟಕಾ ಥಾವ್ನ್ ಭಾಗೆವೊಂತ್ ರೊಜಾರ್ ಮಾಯೆಚ್ಯಾ ಫಿರ್ಗಜ್ ಭುರ್ಗ್ಯಾಂಕ್ ಆನಿ 16-25 ವರ್ಸಾಂ ಪ್ರಾಯೆಚ್ಯಾಂಕ್ ಮಾಂಡುನ್ ಹಾಡ್ಲೊ ಸ್ಪರ್ಧೊ ಚಲ್ಲೊ. ಹಾಂಗಾಸರ್ ಜಿಕುನ್ ಆಯ್ಲ್ಯಾಂಕ್ ವಾರಾಡ್ಯಾ ಮಟ್ಟಾಚ್ಯಾ ಸ್ಪರ್ಧ್ಯಾಂಕ್ ಭಾಗ್ ಘೆಂವ್ಕ್ ಅಹರ್ತಾ ಮೆಳ್ತೆಲಿ.
ಸ್ಪಧ್ರ್ಯಾಕ್ ಸಹಾಯ ವಿಗಾರ್ ಮಾ|ಬಾ|ವಿಜಯ್ ಡಿಸೋಜಾನ್ ಬರೆ ಮಾಗ್ಲೆಂ. ವರಯ್ಣಾರ್ ಜಾವ್ನ್ ಜೆನ್ನಿ ಡೆಸಾ, ನವೀನ್ ಸಾಲಿನ್ ಆನಿ ದಿವ್ಯಾ ನಜರೇತ್ ಜಾವ್ನಾಸೊನ್ ತಾಣಿ ಆಪ್ಲಿ ಭೊಗ್ಣಾ ವ್ಯಕ್ತ್ ಕೆಲಿ. ಕಥೊಲಿಕ್ ಸಭಾ ಅಧ್ಯಕ್ಷ್ ವಾಲ್ಟರ್ ಡಿಸೋಜಾ, ಖಜನ್ದಾರ್ ಪ್ರೇಮಾ ಡಿಕುನ್ಹಾ, ನಿರ್ಗಮನ್ ಅಧ್ಯಕ್ಷ್ ಶೈಲಾ ಡಿಆಲ್ಮೇಡಾ ಆನಿ ಕಾರ್ಯಾಚೆ ಸಂಚಾಲಕ್ ಡಾ|ಸೋನಿ ಡಿಕೋಸ್ತಾ ಹಾಜರ್ ಆಸ್ಲಿ. ಸ್ಪರ್ಧ್ಯಾಂತ್ ಜಿಕಲ್ಯಾಂಚೊ ವಿವರ್ ಅಸೊ ಆಸಾ.

ಕೊಂಕ್ಣಿ ಭಾಷಣ್ ಸ್ಪರ್ಧ್ಯಾಂತ್ ಜಿಕಲ್ಲೆಂ

1 ಥಾವ್ನ್ 4 ಕ್ಲಾಸ್
ಪ್ರಥಮ್ –ವಿಲೀಶಾ ಡಿಆಲ್ಮೇಡಾ (ಸಾಂ,ಜುಜೆ)
ದುಸ್ರೆಂ – ಕಿಯಾರ ಪಾಯ್ಸ್ (ಸಾಂ.ಸಾಬೆಸ್ಟಿಯನ್)
ತಿಸ್ರೆಂ- ಒಜ್ಲಿನ್ ಡಿಸೋಜಾ (ನಿತ್ಯಾದರ್)

5 ಥಾವ್ನ್ 7 ಕ್ಲಾಸ್
ಪ್ರಥಮ್- ನೇಹಾ ರೆಚೆಲ್ ಕ್ರಾಸ್ತಾ (ಫಾತಿಮಾ)
ದುಸ್ರೆಂ- ರೀಯಾ ಡಿಸೋಜಾ (ನಿತ್ಯಾದರ್)
ತಿಸ್ರೆಂ- ಈಥನ್ ಡಿಸೋಜಾ (ನಿತ್ಯಾದರ್) ಆನಿ ಮೆಲ್ರಿಯಾ ಫೆರ್ನಾಂಡಿಸ್ (ರೊಜಾರಿ ಬಿ)

8 ಥಾವ್ನ್ 10 ಕ್ಲಾಸ್
ಪ್ರಥಮ್ – ರಿಶಿಕಾ ಮೊಂತೇರೊ (ಲೂಡ್ರ್ಸ್)
ದುಸ್ರೆಂ- ಶೈನಾ ವಾಜ್ (ಕಾರ್ಮೆಲ್)

16 ಥಾವ್ನ್ 25 ವರ್ಸಾಂ ವಿಭಾಗಾಂತ್
ಪ್ರಥಮ್- ವೆನೀಶಾ ಡಿಸೋಜಾ (ಸಾಂ,ಜುಜೆ)
ದುಸ್ರೆಂ- ಪ್ರಮಿತಾ ಡಿಸೋಜಾ (ಪವಿತ್ರ್ ಕಾಳ್ಜಾಚೊ)

ಕನ್ನಡ ಭಾಷಣ್ ಸ್ಪರ್ಧ್ಯಾಂತ್ ಜಿಕಲ್ಲೆಂ

5 ಥಾವ್ನ್ 7 ಕ್ಲಾಸ್
ಪ್ರಥಮ್- ಸ್ಟೆನಿಲ್ಲಾ ಡಿಸೋಜಾ (ನಿತ್ಯಾದರ್)
ದುಸ್ರೆಂ- ಇಂಚರಾ (ಸಾಂ,ಜುಜೆ)
ತಿಸ್ರೆಂ- ಡೇಲ್ವಿಯಾ ಬಾರೆಟ್ಟೊ (ಸಾಂ,ಜುಜೆ)

8 ಥಾವ್ನ್ 10 ಕ್ಲಾಸಿಚ್ಯಾ ಕೊಂಕ್ಣಿ ಭಾಷಣ್ ಸ್ಪರ್ಧ್ಯಾಂತ್
ಪ್ರಥಮ್- ವೆನೀಶಾ ಡಿಸೋಜಾ (ನಿತ್ಯಾದರ್)
ದುಸ್ರೆಂ- ರೆಹಾ ಕ್ರಾಸ್ತಾ (ಫಾತಿಮಾ)

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರೂರು ಸರ್ಕಾರದ ಉಚಿತ ಸಮವಸ್ತ್ರ ವಿತರಣ- ಭೋಜನ ಕೂಟ

JANANUDI.COM NETWORK

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರೂರು ಸರ್ಕಾರದ ಉಚಿತ ಸಮವಸ್ತ್ರ ವಿತರಣ- ಭೋಜನ ಕೂಟ

ಕುಂದಾಪುರ, ಆ.೨೫:  ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ (ಉರ್ದು ) ಬಸ್ರೂರು ಎಲ್ಲಾ ವಿದ್ಯಾರ್ಥಿಗಳಿಗೂ ಸಮವಸ್ತ್ರ  ವಿತರಿಸಲಾಯಿತು. ಮತ್ತು ಶಾಲೆಯ ಎಲ್ಲಾ ಮಕ್ಕಳಿಗೂ ಮೊಹಮ್ಮದ್ ಹನೀಫ್ ಶೇಕ್ ರವರು ವಿಶೇಷ ಭೋಜನ ವ್ಯವಸ್ಥೆ ಮಾಡಿದ್ದರು. ’ಭಗವಂತ ಅವರಿಗೆ ಇನ್ನಷ್ಟು ಶಕ್ತಿ ಕರುಣಿಸಲಿ’ ಎಂದು ಶಾಲೆಯ ವತಿಯಿಂದ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಲಾಯಿತು

    ಮೊಹಮ್ಮದ್  ಹನೀಫ್ ಶೇಖ್, ಎಸ್.ಡಿ. ಎಮ್.ಅಧ್ಯಕ್ಷ  ಅಬ್ದುಲ್ ಅಜೀಜ಼್,  ಶಾಲಾ ಮುಖ್ಯೋಪಾಧ್ಯಾಯಿನಿ ವಿಶಾಲಾಕ್ಷಿ ಶೆಟ್ಟಿ ಹಾಗೂ ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.

 

ಕುಂದಾಪುರ್ ಮರಿಯಾಳ್ ಮೇಳ್ ಭಯ್ಣಿಚೊ ದೀಸ್ ಆಚರಣ್

JANANUDI.COM NETWORK

ಕುಂದಾಪುರ್ ಮರಿಯಾಳ್ ಮೇಳ್ ಭಯ್ಣಿಚೊ ದೀಸ್ ಆಚರಣ್


ಕುಂದಾಪುರ್, ಆ.25: ಕುಂದಾಪುರ್ ರೊಜಾರ್ ಮಾಯ್ ಫಿರ್ಗಜೆಚ್ಯಾ ಮರಿಯಾಳ್ ಮೇಳ್ ಹಾಣಿ ಆಪ್ಲ್ಯಾ ಮೇಳಾಚೊ ದೀಸ್ ಆಚರಣ್ ಕೆಲೊ. ‘ಮರಿಯಾಳ್ ಸೊಡೆಲಿಟಿ ಥಾವ್ನ್ ಜಾಯ್ತಿ ಸೆವಾ ಮೆಳ್ತಾ, ಮರಿಯಾಳ್ ಸೊಡೆಲಿಟಿಚೆ ಮುಖ್ಯ್ ಉದ್ದೇಶ್ ಮಾಗ್ಣೆ, ಅಸಲ್ಯಾ ಮಾಗ್ಣ್ಯಾನಿಂ ಜಾಯ್ತೊ ಪ್ರಭಾವ್ ಆಸ್ತಾಂ, ಆಮ್ಕಾಂ ತೆಂ ಕಳನಾ. ತೇರ್ಸಾ ವರ್ವಿಂಚ್ ದುಸ್ಮಾನ್ ಪಾಡವ್ ಜಾಂವ್ನ್ ಧಾಂವೊನ್ ಗೆಲ್ಲೆಂ ದಾಖ್ಲೆ ಆಸಾತ್ ಹ್ಯಾ ಮಾಗ್ಣ್ಯಾ ಮಾರಿಮಾತ್ ಫಿರ್ಗಜೆಕ್, ಫಿರ್ಗಜೆಂಚ್ಯಾ ಲೋಕಾಂಕ್ ಕಳಾನಾಸ್ತಾಂ ಬರೆಪಣ್ ಮೆಳ್ತಾ,ಗುಪ್ತಿ ಥರಾನ್ ಕರ್ಚೆಂ ಹೆಂ ಮರಿಯೆಚೆ ಭಕ್ತಿಪಣ್ ತುಮಿ ಮುಂದರ್ಸುನ್ ವರುಂಕ್ ಜಾಯ್’ ಮ್ಹಣ್ತಾ ಹ್ಯಾ ಕಾರ್ಯಾಕ್ ಅಧ್ಯಕ್ಷ್ ಪಣ್ ಘೆತ್ಲ್ಯಾ ವಿಗಾರ್ ಮಾ|ಬಾ|ಸ್ಟ್ಯಾನಿ ತಾವ್ರೊನ್ ಶುಭಾಷಯ್ ಪಾಠಯ್ಲೆಂ.
ಕೊವೆಂತಾಚಿ ವ್ಹಡಿಲ್ನ್ ವಾಯ್ಲೆಟ್ ತಾವ್ರೊ ಹಿಣೆ ಶುಭಾಷಯ್ ಪಾಠಯ್ಲೆ. ವೇದಿರ್ ಸಹಾಯಕ್ ವಿಗಾರ್ ಮಾ|ಬಾ|ವಿಜಯ್ ಡಿಸೋಜಾ, ಪ್ರಾಂಶುಪಾಲ್ ಮಾ|ಬಾ| ಪ್ರವೀಣ್ ಅಮ್ರತ್ ಮಾರ್ಟಿಸ್, ಗೊವ್ಳಿಕ್ ಮಂಡಳಿ ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾನ್ 18 ಆಯೋಗಾಚಿ ಸಂಚಾಲಕಿ ಪ್ರೇಮಾ ಡಿಕುನ್ಹಾ, ಲ್ಹಾನ್ ಸಮುದಾಯ್ ಪ್ರೇರಕ್ ಸಂಚಾಲಕಿ ಎಲಿಜಾ ಡಿಸೋಜಾ ಹಾಜರ್ ಆಸ್ಲಿ.
ಮೇಳಾಚಿ ಅಧ್ಯಕ್ಷಿಣ್ ಭಯ್ಣ್ ಶಾಲೆಟ್ ಬಾರೆಟ್ಟೊ ಹಿಣೆ ಸ್ವಾಗತ್ ಮಾಗ್ಲೊ. ವಿಕ್ಟೋರಿಯಾ ಡಿಸೋಜಾನ್ ಹಿಣೆ ವರ್ದಿ ವಾಚನ್ ಕೆಲಿ. ಖಜನ್ದಾರ್ ಭಯ್ಣ್ ಮೇರಿ ಲೋಬೊ ಹಿಣೆ ಧನ್ಯವಾದ್ ಪಾಠಯ್ಲೆಂ, ಭಯ್ಣ್ ಜೂಲಿಯೆಟ್ ಪಾಯ್ಸ್ ಹಿಣೆ ಕಾರ್ಯೆ ಚಲವ್ನ್ ವೆಲೆಂ.

ಕುಂದಾಪುರ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾವಳಿ – ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ

JANANUDI.COM NETWORK 

ಕುಂದಾಪುರ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾವಳಿ – ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ

 

ಕುಂದಾಪುರ, ಆ. 24: ಕುಂದಾಪುರ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ತ್ರೋಬಾಲ್  ಪಂದ್ಯಾವಳಿಯು ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಛೇರಿ ಇವರ ನಿರ್ದೇಶನದಲ್ಲಿ ಬೆಳ್ವೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಆಗೋಸ್ತ್ 24 ರಂದು ಶಾಲಾ ಮೈದಾನದಲ್ಲಿ ನಡೆದ ಪಂದ್ಯಾಟದಲ್ಲಿ ಕುಂದಾಪುರದ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕೆ ಆಯ್ಕೆಯಾಯಿತು.

    ವಿಜೇತ ತಂಡಕ್ಕೆ ದೈಹಿಕ ಶಿಕ್ಷಕಿ ಶಾಂತಿ ರಾಣಿ  ಬಾರೆಟ್ಟೊ ತರಬೇತಿ ನೀಡಿದ್ದರು. ಶಾಲಾ ಜಂಟಿ ಕಾರ್ಯದರ್ಶಿ ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಶಾಲಾ ಮುಖ್ಯಶಿಕ್ಷಕಿ ಡೋರಾ ಸುವಾರಿಸ್ ಅಭಿನಂದಿಸಿದ್ದಾರೆ

ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ ವಿ.ವಿ. ಟೇಬಲ್ ಟೆನಿಸ್ ಟೂರ್ನಾಮೆಂಟ್ ನಲ್ಲಿ ಪೂರ್ಣಪ್ರಜ್ಞ ಸಂಜೆ ಕಾಲೇಜು ಉಡುಪಿ ಅತ್ಯುತ್ತಮ ಪ್ರದರ್ಶನ

JANANUDI.COM NETWORK

ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ ವಿ.ವಿ. ಟೇಬಲ್ ಟೆನಿಸ್ ಟೂರ್ನಾಮೆಂಟ್ ನಲ್ಲಿ ಪೂರ್ಣಪ್ರಜ್ಞ ಸಂಜೆ ಕಾಲೇಜು ಉಡುಪಿ ಅತ್ಯುತ್ತಮ ಪ್ರದರ್ಶನ


ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶನಾಲಯದ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಮಟ್ಟದ ಪುರುಷ ಮತ್ತು ಮಹಿಳಾ 2019-20 ರ ಆಗಸ್ಟ್ 21 ರಂದು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ ಟೇಬಲ್ ಟೆನಿಸ್ ಟೂರ್ನಾಮೆಂಟ್ ನಲ್ಲಿ ಪೂರ್ಣಪ್ರಜ್ಞ ಸಂಜೆ ಕಾಲೇಜು ಉಡುಪಿ ಅತ್ಯುತ್ತಮ ಪ್ರದರ್ಶನ ನೀಡಿತು.
ಫಲಿತಾಂಶದ ವಿವರ
ಪುರುಷರ ವಿಭಾಗ; ಪ್ರಥಮ ಪೂರ್ಣಪ್ರಜ್ಞ ಸಂಜೆ ಕಾಲೇಜು ಉಡುಪಿ
ದ್ವಿತೀಯ; ಮಿಲಾಗ್ರೀಸ್ ಕಾಲೇಜು, ಕಲ್ಯಾಣಪುರ
ತೃತೀಯ; ಪೂರ್ಣಪ್ರಜ್ಞ ಕಾಲೇಜು ಉಡುಪಿ
ಮಹಿಳಾ ವಿಭಾಗ
ಪುರುಷರ ವಿಭಾಗ; ಪ್ರಥಮ ಪೂರ್ಣಪ್ರಜ್ಞ ಸಂಜೆ ಕಾಲೇಜು ಉಡುಪಿ


ದ್ವಿತೀಯ; ಸೇಂಟ್ ಆಗ್ನೆಸ್ ಕಾಲೇಜು, ಮಂಗಳೂರು
ತೃತೀಯ; ಮಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್ ಮಂಗಳೂರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ರಾಷ್ಟ್ರೀಯ ಟೇಬಲ್ ಟೆನಿಸ್ ಆಟಗಾರ ವಿಪ್ಲವ್ ರಾವ್ ಕುಂದಾಪುರದ ಟೋರ್ಪಡಸ್ ಸ್ಪೋಟ್ರ್ಸ್ ಕ್ಲಬ್‍ನ ಅಶ್ವಿನ್ ಕುಮಾರ್ ಪಡುಕೋಣೆ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಮ್.ಗೊಂಡ, ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಐಕ ನಿರ್ದೇಶಕರಾದಡಾ.ಜೆರಾಲ್ಡ್ ಸಂತೋಷ್ ಡಿಸೋಜಾ, ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ಜೇಮ್ಸ್ ಒಲಿವೆರಾ ಮತ್ತು ಭಂಡಾರ್ಕಾರ್ಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶಂಕರನಾರಾಯಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲೆಯ ಅಂಗನವಾಡಿ, ಶಾಲೆ, ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ – ಎನ್. ಕೃಷ್ಣಮೂರ್ತಿ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಜಿಲ್ಲೆಯ ಅಂಗನವಾಡಿ, ಶಾಲೆ, ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ – ಎನ್. ಕೃಷ್ಣಮೂರ್ತಿ

ಕೋಲಾರ : 3 ದಿನಗಳ ಕಾಲ ಜಿಲ್ಲೆಯ ಅಂಗನವಾಡಿ, ಶಾಲೆ, ನ್ಯಾಯಬೆಲೆ ಅಂಗಡಿಗಳು, ಗೋಡನ್‍ಗಳು ಹಾಗೂ ಹಾಸ್ಟೆಲ್‍ಗಳಿಗೆ ಭೇಟಿ ನೀಡಿ ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಲಾಗಿದ್ದು, ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಎನ್. ಕೃಷ್ಣಮೂರ್ತಿ ಅವರು ತಿಳಿಸಿದರು. 

 ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಹಾರ ಆಯೋಗವು 2017 ಜುಲೈ 5 ರಂದು ಅಸ್ತಿತ್ವಕ್ಕೆ ಬಂದಿದ್ದು, 5 ಜನ ಸದಸ್ಯರನ್ನು ಒಳಗೊಂಡಿದೆ. ಇದರವರೆಗೂ 19 ಜಿಲ್ಲೆಗಳಿಗೆ ಭೇಟಿ ನೀಡಿ ಜಿಲ್ಲೆಗಳ ಆಹಾರ ಸುರಕ್ಷತೆ, ಸರಬರಾಜು ಹಾಗೂ ಆಹಾರ ಭದ್ರತೆ ಬಗ್ಗೆ ಪರಿಶೀಲಿಸಿದೆ. ಆಯೋಗವು ಜಾರಿಗೆ ಬಂದ ನಂತರ ಗೋಡನ್‍ಗಳಲ್ಲಿ ಕೊಳೆಯುತ್ತಿದ್ದ ಕೋಟಿಗಟ್ಟಲೆ ಆಹಾರ ಪದಾರ್ಥಗಳನ್ನು ಸಂರಕ್ಷಿಸಿ, ಸರ್ಕಾರಕ್ಕೆ ಆಗುತ್ತಿದ್ದ ನಷ್ಟವನ್ನು ತಪ್ಪಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ಸರ್ಕಾರವು ಜಾರಿಗೆ ತಂದಿರುವ ಬಿಸಿ ಊಟ ಯೋಜನೆ, ಹಾಸ್ಟೆಲ್‍ಗಳ ಸೌಲಭ್ಯ, ಅಂಗವಾಡಿಗಳಲ್ಲಿ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ, ಗರ್ಭಿಣಿ ಮತ್ತು ತಾಯಂದಿರಿಗೆ ನೀಡುವ ಪೌಷ್ಟಿಕ ಆಹಾರ, ನ್ಯಾಯಬೆಲೆ ಅಂಗಡಿಗಳಲ್ಲಿ ನೀಡುವ ಅನ್ನಭಾಗ್ಯ ಯೋಜನೆ ಸರಿಯಾಗಿ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಲಾಗಿದೆ ಎಂದರು. 

ಅಪೌಷ್ಟಿಕ ಮಕ್ಕಳನ್ನು (ಸ್ಯಾಮ್ ಚಿಲ್ಡ್ರನ್ಸ್) ಪೋಷಿಸಲು ಪ್ರತಿ ಜಿಲ್ಲೆಗೆ 10 ಬೆಡ್‍ಗಳ ಆಸ್ಪತ್ರೆ ಕಲ್ಪಿಸಲಾಗಿದ್ದು, ತಾಯಿ ಮತ್ತು ಮಗುವಿನ ಪೋಷಣೆಗೆ ತಲಾ 125 ರೂ. ಹಾಗೂ ಮಗುವಿನ ಔಷಧಿ ಖರ್ಚಿಗೆ 125 ರೂಗಳನ್ನು ನೀಡಿ 14 ದಿನಗಳು ಪೋಷಣೆ ಮಾಡಿ ಮಕ್ಕಳ ತೂಕವನ್ನು ಹೆಚ್ಚಿಸಲಾಗುತ್ತದೆ. ಈ ಯೋಜನೆಯು ಜಿಲ್ಲೆಯ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಉತ್ತಮವಾಗಿ ನಡೆಯುತ್ತಿದೆ ಎಂದು ಶ್ಲಾಘಿಸಿದರು. 

          ಆಯೋಗದ ಸದಸ್ಯರಾದ ಹೆಚ್.ಬಿ ಶಿವಶಂಕರ್ ಅವರು ಮಾತನಾಡಿ, ಜಿಲ್ಲೆಯಲ್ಲಿ 6 ಅಂಗನವಾಡಿಗಳು, 4 ಮಧ್ಯಾಹ್ನ ಬಿಸಿಯೂಟ ಶಾಲೆಗಳು ಹಲವಾರು ಹಾಸ್ಟೆಲ್‍ಗಳು, ಗೋಡನ್‍ಗಳಿಗೆ ಭೇಟಿ ನೀಡಿ ಲೋಪದೋಷಗಳನ್ನು ವರದಿ ಮಾಡಲಾಗಿದೆ. ಕೋಲಾರ ತಾಲ್ಲೂಕಿನ ಗದ್ದೆಕಣ್ಣೂರು ಗ್ರಾಮದಲ್ಲಿ 2 ಅಂಗನವಾಡಿಗಳಿದ್ದು, ಇದರಲ್ಲಿ ಒಂದು ಅಂಗನವಾಡಿಯನ್ನು ಸ್ಥಳೀಯ ಮುಖಂಡರು ಕೇವಲ ಪರಿಶಿಷ್ಟ ಜಾತಿಯ ಮಕ್ಕಳಿಗೆ ಮೀಸಲಿಟ್ಟಿರುವುದು ಕಾನೂನು ಬಾಹಿರ. ಇಲ್ಲಿ ಕೇವಲ ಪರಿಶಿಷ್ಟ ಜಾತಿಯ ಮಕ್ಕಳು ದಾಖಲಾಗಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಮಾಡಿದ್ದು, ಇಂದು ಸಂಜೆಯೊಳಗೆ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ವರದಿ ತರಿಸಿಕೊಂಡು ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು. 

           ಆಯೋಗದ ಸದಸ್ಯರಾದ ಬಿ.ಬಿ. ಹಸಬಿ ಅವರು ಮಾತನಾಡಿ, 3 ದಿನಗಳಲ್ಲಿ 8 ರಿಂದ 10 ನ್ಯಾಯಬೆಲೆ ಅಂಗಡಿಗಳಿಗೆ,  3 ಹಾಸ್ಟೆಲ್‍ಗಳಿಗೆ ಭೇಟಿ ನೀಡಲಾಗಿದೆ. ಶ್ರೀನಿವಾಸಪುರದ ಬಾಲಕರ ಹಾಸ್ಟೆಲ್‍ನ ಸ್ಥಿತಿಯು ಹದಗೆಟ್ಟಿದ್ದು, ಕಟ್ಟಡವು ಶಿಥಿಲಾವಸ್ಥೆಯಲ್ಲಿದೆ. ಪಕ್ಕದಲ್ಲೇ ಕೆರೆ ಇರುವುದರಿಂದ ಸೊಳ್ಳೆಗಳು ಹೆಚ್ಚಿವೆ. ಜಿಲ್ಲೆಯಲ್ಲಿ ಹಾಸ್ಟೆಲ್‍ಗಳಿಗೆ ವಿದ್ಯಾರ್ಥಿಗಳು ಕಡಿಮೆ ಸಂಖ್ಯೆಯಲ್ಲಿ ದಾಖಲಾಗಿದ್ದಾರೆ ಎಂದರು. 

         ಈ ಸಂದರ್ಭದಲ್ಲಿ ಆಯೋಗದ ಸದಸ್ಯರಾದ ಮಂಜುಳಾಬಾಯಿ, ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್, ಆಹಾರ ಇಲಾಖೆಯ ಉಪನಿರ್ದೇಶಕರಾದ ನಾಗರಾಜಯ್ಯ ಕೆಳಗಿನಮನಿ ಅವರು ಉಪಸ್ಥಿತರಿದ್ದರು.

ಕೋಲಾರ ಆಲ್-ಅಮೀನ್ ಡಾ.ಎಂ.ಎ.ಕೆ ಪದವಿ ಕಾಲೇಜು ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಯುವ ದಿನಾಚರಣೆ 2019ರ ಅಂಗವಾಗಿ ರಕ್ತದಾನ ಶಿಬಿರ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ ಆಲ್-ಅಮೀನ್ ಡಾ.ಎಂ.ಎ.ಕೆ ಪದವಿ ಕಾಲೇಜು ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಯುವ ದಿನಾಚರಣೆ 2019ರ ಅಂಗವಾಗಿ ರಕ್ತದಾನ ಶಿಬಿರ

ಕೋಲಾರ.ಆ.23: ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ, ಜಿಲ್ಲಾ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಕೋಲಾರ, ಜಿಲ್ಲಾ ಏಡ್ಸ್ ನಿಯಂತ್ರಣಾ ಘಟಕ, ಆಲ್-ಅಮೀನ್ ಡಾ.ಎಂ.ಎ.ಕೆ ಪದವಿ ಕಾಲೇಜು ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಯುವ ದಿನಾಚರಣೆ 2019ರ ಅಂಗವಾಗಿ ಕಾಲೇಜಿನ ಆವರಣದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಏಡ್ಸ್ ನಿಯಂತ್ರಣಾ ಘಟಕದ ವೈದ್ಯಾಧಿಕಾರಿ ಜಗದೀಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ರಕ್ತದಾನ ಮಾಡುವುದರಿಂದ ಬೇರೋಬ್ಬರ ಪ್ರಾಣ ಉಳಿಸಬಹುದು. ಇಂದಿನ ಯುವಕ ಯುವತಿಯರು ರಕ್ತದಾನ ಮಾಡುವುದರಿಂದ ಆಗುವ ಉಪಯೋಗಗಳ ಬಗ್ಗೆ ತಿಳಿಸಿಕೊಟ್ಟರು.
ಆಲ್-ಅಮೀನ್ ಡಾ.ಎಂ.ಎ.ಕೆ ಪದವಿ ಕಾಲೇಜು ಪ್ರಾಂಶುಪಾಲೆ ಶಮೀಮ್ ಸಲ್ಮಾ ಅಧ್ಯಕ್ಷತೆ ವಹಿಸಿದ್ದರು. ರಕ್ತನಿಧಿ ವೈದ್ಯಾಧಿಕಾರಿ ಡಾ. ರೇವತಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಇಕ್ಬಾಲ್‍ಸಾಬ್, ಯೂಸಫ್‍ಸಾಬ್, ಸ್ಯಯದ್‍ಯೂನುಸ್, ರಜನಿ, ಡಾ.ಎಂ.ವೆಂಕಟರಾಮೇಗೌಡ, ಶಾಹೀನ್‍ತಾಜ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಶ್ರೀನಿವಾಸಪುರ: ಕ್ರೀಡೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಬಹಳ ಮುಖ್ಯ – ತಾಲ್ಲೂಕು ದಂಡಾಧಿಕಾರಿ ಬಿ.ಎಸ್.ರಾಜೀವ್

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ಕ್ರೀಡೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಬಹಳ ಮುಖ್ಯ – ತಾಲ್ಲೂಕು ದಂಡಾಧಿಕಾರಿ ಬಿ.ಎಸ್.ರಾಜೀವ್ 


ಶ್ರೀನಿವಾಸಪುರ: ತಾಲ್ಲೂಕಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಏಪರ್ಡಿಸಿದ್ದ ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಗಳ ವಿದ್ಯಾರ್ಥಿ ನಿಲಯಗಳ ತಾಲ್ಲೂಕು ಮಟ್ಟದ ಕ್ರೀಡಾ ಕೂಟವನ್ನು ಉದ್ಗಾಟಿಸಿ ಮಾತನಾಡಿದ ರಾಜೀವ್ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ, ಮಾನಸಿಕ ಆರೋಗ್ಯದ ಜೊತೆಗೆ ನಾಯಕತ್ವ ಗುಣ ರೂಪುಗೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಕ್ರೀಡೆಗಿಂತ ತಂತ್ರಜ್ಞಾನದೊಂದಿಗೆ ಹೆಚ್ಚು ತೊಡಗಿಸಿಕೊಂಡಿದ್ದಾರೆ ಮೊಬೈಲ್, ಕಂಪ್ಯೂಟರ್ ಮೂಲಕ ವಿವಿಧ ರೀತಿಯ ಆಟಗಳನ್ನು ಆಡುತ್ತಿದ್ದಾರೆ ಆದರೆ ವಿದ್ಯಾರ್ಥಿಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಇದು ಪೂರಕವಾಗಲ್ಲ ಇದನ್ನು ಮೊದಲು ವಿದ್ಯಾರ್ಥಿಗಳು ಬಿಡಬೇಕು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕ್ರೀಡೆಗಳಲ್ಲಿ ಹೆಚ್ಚು ಭಾಗವಹಿಸಬೇಕು ಜೀವನದಲ್ಲಿ ಕ್ರೀಡಾಕೂಟಗಳಲ್ಲಿ ಹೆಚ್ಚಿನ ಮಹತ್ವವಿದೆ ವಿದ್ಯಾರ್ಥಿ ದಸೆಯಲ್ಲಿಯೇ ಕ್ರೀಡಾಕೂಟವನ್ನು ಬೆಳೆಸಿಕೊಳ್ಳುವುದರಿಂದ ದೇಹದ ಆರೋಗ್ಯ ಮಾನಸಿಕ ಮತ್ತು ಭೌತಿಕ ಸ್ಥಿಮಿತ ಕಾಪಾಡಿಕೊಳ್ಳಬಹುದು ಜಾಗತಿಕ ಮಟ್ಟದಲ್ಲಿ ಕ್ರೀಡೆಗಳಿಗೆ ಮಹತ್ವವಾದ ಅವಕಾಶಗಳಿದ್ದು ವಿದ್ಯಾರ್ಥಿಗಳು ಪಠ್ಯಕ್ರಮದ ಜೊತೆಗೆ ಕ್ರೀಡೆಗಳಲ್ಲಿ ಸಹಾ ಹೆಚ್ಚಿನ ಮಹತ್ವ ಕೊಡಬೇಕೆಂದರು.
ನಮ್ಮ ರಾಜ್ಯದಲ್ಲಿ ನಮ್ಮ ಶ್ರೀನಿವಾಸಪುರ ತಾಲ್ಲೂಕು ಫಲಿತಾಂಶದಲ್ಲಿ 2 ನೇ ಸ್ಥಾನದಲ್ಲಿದೆ ತುಂಬಾ ಸಂತೋಷವಾಗಿದೆ ಮುಂದಿನ ಫಲಿತಾಂಶದಲ್ಲಿ ಜಿಲ್ಲೆಯಲ್ಲಿಯೇ ಸಮಾಜ ಕಲ್ಯಾಣ ಇಲಾಖೆಯ ಹಾಸ್ಪಲ್‍ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಫಲಿತಾಂಶ 1 ನೇ ಸ್ಥಾನದಲ್ಲಿರಬೇಕು ವಸತಿ ಶಾಲೆಯ ಮಕ್ಕಳು ಯಾವುದೇ ಶಾಲೆಗಳಿಗಿಂತ ಕಡಿಮೆ ಇರಬಾರದು ವಸತಿ ಶಾಲೆಯಲ್ಲಿ ಓದಿರುವಂತಹ ವಿದ್ಯಾರ್ಥಿಗಳು ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ ಅವರಂತೆ ನೀವು ಸಹ ಬರಬೇಕು ಭಾರತರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಕನಸು ನನಸಾಗಬೇಕು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು ತಾಲ್ಲೂಕಿಗೆ ನಿಮ್ಮ ಪೋಷಕರಿಗೆ ಈ ಇಲಾಖೆಗೆ ಒಳ್ಳೆಯ ಹೆಸರನ್ನು ತರಬೇಕೆಂದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಎನ್.ರಾಜಣ್ಣ ರವರು ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣ ಜೊತೆಗೆ ಉತ್ತಮ ಆರೋಗ್ಯಕ್ಕೆ ಕ್ರೀಡಾ ಚಟುವಟಿಕೆಗಳು ತುಂಬಾ ಅವಶ್ಯಕವಾಗಿವೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಪೂರಕವಾಗಿವೆ. ಕ್ರೀಡೆಗಳಲ್ಲಿ ಸೋಲು ಗೆಲುವು ಸಾಮಾನ್ಯವಾಗಿರುತ್ತವೆ ಎಲ್ಲಾ ಕ್ರೀಡಾ ಪಟುಗಳು ಸ್ಪೂರ್ತಿಯಿಂದ ಆಟಗಳನ್ನು ಆಡಬೇಕು ಉತ್ತಮ ರೀತಿಯಲ್ಲಿ 2 ದಿನಗಳ ಕಾಲ ಕ್ರೀಡಾ ಪಟುಗಳು ಉತ್ಸಾಹದಿಂದ ಭಾಗವಹಿಸಿ ಉತ್ತಮ ರೀತಿಯಲ್ಲಿ ಪ್ರದರ್ಶನವನ್ನು ಮಾಡಬೇಕು ಎಂದರು.
ಪ್ರಥಮ ಭಾರಿಗೆ ವಸತಿ ನಿಲಯ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಕ್ರೀಡಾಕೂಟ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ ಡಾ.ಬಾಬಾಸೇಹೇಬ್ ಅಂಬೇಡ್ಕರ್ ರವರು ಕಂಡಂತಹ ಕನಸು ವಿದ್ಯಾರ್ಥಿಗಳು ನನಸಾಗಿಸಬೇಕು, ದೇಶಕ್ಕೆ ಸಂವಿಧಾನವನ್ನು ಕೊಟ್ಟಂತಹ ಕೀರ್ತಿ ಇವರಿಗೆ ಸಲ್ಲುತ್ತದೆ. ವಿದ್ಯಾರ್ಥಿಗಳು ಶಿಸ್ತು ಮತ್ತು ಸಂಯಮದಿಂದ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿಕೊಳ್ಳಲು ಒಂದು ಉತ್ತಮವಾದ ಕ್ರೀಡಾಕೂಟವಾಗಿದೆ ಎಂದರು.
ಯಾವುದೇ ಕಾರ್ಯಕ್ರಮ ಮಾಡಲಿ ನಮ್ಮ ತಾಲ್ಲೂಕು ದಂಡಾಧಿಕಾರಿಗಳು ನಮಗೆ ತುಂಬಾ ಸಹಕಾರ ಮಾಡುತ್ತಿದ್ದು, ಎಷ್ಟೇ ಕಾರ್ಯಕ್ರಮಗಳಿದ್ದರೂ ಈ ಒಂದು ಕ್ರೀಡಾ ಕೂಟಾ ಕಾರ್ಯಕ್ರಮಕ್ಕೆ ಬಂದು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ ಇವರಿಗೆ ಸಮಾಜ ಕಲ್ಯಾಣ ಇಲಾಖೆ ಪರವಾಗಿ ಹೃದಯಪೂರ್ವಕ ಕೃತಜ್ಞತೆಗಳನ್ನು ಈ ಸಂದರ್ಭದಲ್ಲಿ ಸಲ್ಲಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರಾದ ಆರ್.ವಿ.ಚಂದ್ರು, ಹಿಂದಿ ಶಿಕ್ಷಕರಾದ ನಾಗರಾಜ್, ವಿದ್ಯಾರ್ಥಿನಿಲಯದ ಮೇಲ್ವಿಚಾರಕರಾದ ಶ್ರೀನಿವಾಸ್, ಗಣೇಶ್, ಲಕ್ಷ್ಮೀ, ಬೈರೇಗೌಡ, ನರಸಿಂಹಯ್ಯ, ಕೆ.ಕೆ.ವೆಂಕಟರಮಣ, ಏಕಲವ್ಯ ವಸತಿ ಶಾಲೆಯ ಪ್ರಾಂಶುಪಾಲರಾದ ರಘು, ದಳಸನೂರು ಶಾಲೆಯ ಮುಖ್ಯಶಿಕ್ಷಕರಾದ ನಾರಾಯಣಸ್ವಾಮಿ, ದೈಹಿಕ ಶಿಕ್ಷಕರಾದ ಪ್ರಸಾದ್, ಹಾಗೂ ವಸತಿ ನಿಲಯ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಫಲಾನುಭವಿಗಳು ಕೂಡಲೇ ಸಾಲ ಮರುಪಾವತಿ ಮಾಡಿ: ಗಣೇಶ್

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಫಲಾನುಭವಿಗಳು ಕೂಡಲೇ ಸಾಲ ಮರುಪಾವತಿ ಮಾಡಿ: ಗಣೇಶ್

ಕೋಲಾರ: ಜಿಲ್ಲೆಯಲ್ಲಿ 2013 ಮೇ 13 ರಿಂದ ಇಲ್ಲಿಯವರೆಗೆ 6 ಸಾವಿರ ಫಲಾನುಭವಿಗಳಿಗೆ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಸಾಲಸೌಲಭ್ಯ ನೀಡಲಾಗಿದ್ದು ಇದನ್ನು ಕೂಡಲೇ ಮರುಪಾವತಿ ಮಾಡಬೇಕೆಂದು ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಗಣೇಶ್ ಅವರು ತಿಳಿಸಿದರು. 

ಮುಳಬಾಗಿಲು ಮತ್ತು ಕೋಲಾರ ತಾಲ್ಲೂಕಿನಲ್ಲಿ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಆಯೋಜಿಸಲಾಗಿದ್ದ ಸಾಲ ಮರುಪಾವತಿ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಮಾನುಸಾರ ಕನಿಷ್ಟ ಶೇ.15 ಸಾಲ ಮರುಪಾವತಿ ಸಂಗ್ರಹಣೆ ಕಡ್ಡಾಯವಾಗಿದೆ. ಆದರೆ ಜಿಲ್ಲೆಯಲ್ಲಿ ಕೇವಲ ಶೆ.8 ರಷ್ಟು ಮಾತ್ರ ಮರುಪಾವತಿ ಆಗಿದೆ. ಹಾಗಾಗಿ ಜಿಲ್ಲೆಯಾಧ್ಯಂತ ಮರುಪಾವತಿ ಆಂದೋಲನವನ್ನು ನಿರಂತರವಾಗಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಹಾಗಾಗಿ ಫಲಾನುಭವಿಗಳು ಕಡ್ಡಾಯವಾಗಿ ಸಾಲ ಮರುಪಾವತಿ ಮಾಡಿ ಇತರೆ ಹಿಂದುಳಿದ ವರ್ಗಗಳ  ಫಲಾನುಭವಿಗಳಿಗೆ ಸಾಲ ಸೌಲಭ್ಯ ಕಲ್ಪಿಸಲು ಸಹಕರಿಸಬೇಕೆಂದರು. 

ನಿಗಮದಿಂದ ಯಾವುದೇ ರೀತಿಯ ಕೃಷಿ ಸಾವಲವನ್ನು ನೀಡಿರುವುದಿಲ್ಲ. ಆದ್ದರಿಂದ ಸಾಲ ಮನ್ನಾ ಆಗುವ ಪ್ರಶ್ನೆಯೇ ಇರುವುದಿಲ್ಲ. ಹಾಗಾಗಿ ಫಲಾನುಭವಿಗಳು ನಿರ್ಲಕ್ಷ್ಯ ವಹಿಸದೆ ಸಾಲ ಮರುಪಾವತಿ ಮಾಡಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ವಹಿಸಲಾಗುವುದು. ಇಂತಹ ಕ್ರಮಕ್ಕೆ ಫಲಾನುಭವಿಗಳು ಅವಕಾಶ ನೀಡದೆ ಕೂಡಲೇ ಸಾಲ ಮರುಪಾವತಿ ಮಾಡಬೇಕು ಎಂದು ತಿಳಿಸಿದರು.