HOLY ROSARY CHURCH, KUNDAPUR – 450 th JUBILEE SOUVENIR 2021

ಕುಂದಾಪುರ ಐ.ಸಿವೈ.ಎಮ್ ವಲಯ ಮಟ್ಟದ ವಾಲಿಬಾಲ್, ತ್ರೊಬಾಲ್ ಪಂದ್ಯಾಟ: ಪಡುಕೋಣೆ, ಗಂಗೊಳ್ಳಿಗೆ ಪ್ರಶಸ್ತಿ

JANANUDI.COM NETWORK

 

ಕುಂದಾಪುರ ಐ.ಸಿವೈ.ಎಮ್ ವಲಯ ಮಟ್ಟದ ವಾಲಿಬಾಲ್, ತ್ರೊಬಾಲ್ ಪಂದ್ಯಾಟ: ಪಡುಕೋಣೆ, ಗಂಗೊಳ್ಳಿಗೆ ಪ್ರಶಸ್ತಿ

ಕುಂದಾಪುರ, ಸೆ.30: ಕುಂದಾಪುರ ಭಾರತೀಯ ಕಥೊಲಿಕ್ ಯುವ ಸಂಘಟನೇಯಿಂದ ವಲಯ ಮಟ್ಟದಲ್ಲಿ ಪುರುಷರಿಗೆ ವಾಲಿಬಾಲ್ ಮತ್ತು ಮಹಿಳೆಯರಿಗೆ ತ್ರೊಬಾಲ್ ಪಂದ್ಯಾವಳಿಯನ್ನು ಆಯೋಜಿಸಿತ್ತು. ಸೆ.19 ರಂದು ಸಂತ ಮೇರಿಸ್ ಶಿಕ್ಷಣ ಸಂಸ್ಥೆಗಳ ಮೈದಾನದಲ್ಲಿ ನಡೆದ ಪಂದ್ಯಾವಳಿಯನ್ನು ಕುಂದಾಪುರ ಚರ್ಚಿನ ಪ್ರಧಾನ ಮತ್ತು ವಲಂiÀi ಪ್ರಧಾನರಾದ ಅ|ವಂ|ಫಾ|ಸ್ಟ್ಯಾನಿ ತಾವ್ರೊ ಉದ್ಘಾಟಿಸಿ ಶುಭ ಕೋರಿದರು.
ಪುರುಷರ ವಾಲಿಬಾಲ್ ಪಂದ್ಯದಲ್ಲಿ ಪಡುಕೋಣೆ ತಂಡ ಪ್ರಥಮ, ಬಸ್ರೂರು ತಂಡಗಳು ದ್ವೀತಿಯ ಸ್ಥಾನ ಪಡೆದವು. ಮಹಿಳೆಯರ ತ್ರೊಬಾಲ್ ಪಂದ್ಯಟಾದಲ್ಲಿ ಗಂಗೊಳ್ಳಿ ಪ್ರಥಮ, ತಲ್ಲೂರು ದ್ವೀತಿಯ ಸ್ಥಾನ ಪಡೆದವು. ವಾಲಿವಾಲ್ ಪಂದ್ಯದಲ್ಲಿ ಉತ್ತಮ ಪಟುವಾಗಿ ಪಡುಕೋಣೆಯ ಗ್ಲೆವನ್ ಡಿಸೋಜಾ, ತ್ರೊಬಾಲ್ ಪಂದ್ಯಾಟದಲ್ಲಿ ಪ್ರೀತಿ ಉತ್ತಮ ಪಟು ಪ್ರಶಸ್ತಿ ಪಡೆದರು. ಈ ಸಂದರ್ಭದಲ್ಲಿ ಸಂತ ಮೇರಿಸ್ ಕಾಲೇಜಿನ ಪ್ರಾಂಶುಪಾಲ ವಂ|ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್, ಪಾ.ಮಂ. ಉಪಾಧ್ಯಕ್ಷ ಜೇಕಬ್ ಡಿಸೋಜಾ, ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಕುಂದಾಪುರ ಐ.ಸಿವೈ.ಎಮ್ ಸಂಚಾಲಕಿ ರೇಶ್ಮಾ ಫೆರ್ನಾಂಡಿಸ್, ಅಧ್ಯಕ್ಷ ಆ್ಯಲನ್ ತಾವ್ರೊ, ಕಾರ್ಯದರ್ಶಿ ನಿತಿನ್ ಬಾರೆಟ್ಟೊ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶೈನಾ ಡಿಸೋಜಾ ಮತ್ತು ಸ್ಯಾಮುವೇಲ್ ಲುವಿಸ್ ನಡೆಸಿಕೊಟ್ಟರು. ದೈಹಿಕ ಶಿಕ್ಷಕ ರತ್ನಾಕರ ಶೆಟ್ಟಿ ತೀರ್ಪುದಾರರಾಗಿ ಕರ್ತವ್ಯ ನಿರ್ವಹಿಸಿದರು

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಧನ ಸಹಾಯ ಹಸ್ತಾಂತರ

ವರದಿ: ವಾಲ್ಟರ್ ಮೊಂತೇರೊ

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಧನ ಸಹಾಯ ಹಸ್ತಾಂತರ


ನಂದಳಿಕೆ ಗ್ರಾಮದ ಕುಂಟಲಗುಂಡಿ ಬಳಿಯ ನಿವಾಸಿ ಕೃಷ್ಣ ಮೂಲ್ಯ ಮತ್ತು ಸುನಂದ ಮೂಲ್ಯ ದಂಪತಿಗಳ ಪುತ್ರ ಸುದೇಶ್ ಕುಲಾಲ್ ಎನ್ನುವ ಯುವಕನೋರ್ವ ಗೆಳೆಯರೊಂದಿಗೆ ವಿಹಾರಕ್ಕೆಂದು ಸ್ವಾತಂತ್ರ್ಯ ದಿನದಂದು ನಿಟ್ಟೆ ಸಮೀಪದ ಅರ್ಬಿ ಜಲಪಾತಕ್ಕೆ ಹೋಗಿದ್ದ ಸಂದರ್ಭದಲ್ಲಿ ಆಯತಪ್ಪಿ ಕಾಲುಜಾರಿ ಬಿದ್ದು ಮೃತಾಗಿರುತ್ತಾನೆ. ಬಡ ಹುಟ್ಟಿದ ಇಬ್ಬರು ಸಹೋದರಿಯರ ಏಕೈಕ ಸಹೋದರನಾಗಿದ್ದ ಸುದೇಶನ ಅಕಾಲಿಕ ಮರಣ ಹೆತ್ತವರಿಗೆ ಬರಸಿಡಿಲು ಬಡಿದಂತಾಗಿ ದಿಕ್ಕು ತೊಚದೆ ಕಂಗಾಲಾಗಿದ್ದಾರೆ.
ಮಗನನ್ನು ಕಳೆದುಕೊಂಡ ಕುಟುಂಬಕ್ಕೆ ಸಾಂತ್ವನದ ಮಾತುಗಳನ್ನಾಡಿ ಸಾಂತ್ವಾನದ ಜೊತೆಗೆ ಸಣ್ಣ ಪ್ರಮಾಣದ ಆರ್ಥಿಕ ಸಹಾಯವನ್ನು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ವತಿಯಿಂದ ಹಸ್ತಾಂತರಿಸಲಾಯಿತು.
ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ, ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ನಿಕಟ ಪೂರ್ವಾಧ್ಯಕ್ಷ ನಂದಳಿಕೆ ರಾಜೇಶ್ ಕೋಟ್ಯಾನ್, ಸ್ಥಾಪಕಾಧ್ಯಕ್ಷ ವಿಠಲ ಮೂಲ್ಯ, ಪೂರ್ವಾಧ್ಯಕ್ಷ ರಘುವೀರ್ ಶೆಟ್ಟಿ, ಕಾಸ್ರಬೈಲು ಸುರೇಶ್ ಪೂಜಾರಿ, ಉಪಾಧ್ಯಕ್ಷ ಬಾಲಕೃಷ್ಣ ಮಡಿವಾಳ, ಕೋಶಾಧಿಕಾರಿ ಹರಿಪ್ರಸಾದÀ ಆಚಾರ್ಯ, ಮಾಜಿ ಉಪಾಧ್ಯಕ್ಷ ಹರೀಶ್ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ವೀಣಾ ಪೂಜಾರಿ, ಹರೀಶ್ ಪೂಜಾರಿ, ಲಲಿತಾ ಆಚಾರ್ಯ, ಸುನೀತಾ ಪಿಂಟೋ, ಪುಷ್ಪ ಕುಲಾಲ್, ಹರಿಣಿ ಪೂಜಾರಿ, ಅಶ್ವಿನಿ ಪ್ರಭಾಕರ್, ಸುಲೋಚನಾ ಕೋಟ್ಯಾನ್ ಮೊದಲಾದವರಿದ್ದರು.

ಶ್ರೀನಿವಾಸಪುರ: ವಿದ್ಯಾರ್ಥಿಗಳು ಬಾಹ್ಯಾಕಾಶ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು : ಇಸ್ರೋದ ಮಾಜಿ ಅಧ್ಯಕ್ಷ ಡಾ. ಎ.ಎಸ್‌.ಕಿರಣ್‌ ಕುಮಾರ್‌ 

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ವಿದ್ಯಾರ್ಥಿಗಳು ಬಾಹ್ಯಾಕಾಶ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು : ಇಸ್ರೋದ ಮಾಜಿ ಅಧ್ಯಕ್ಷ ಡಾ. ಎ.ಎಸ್‌.ಕಿರಣ್‌ ಕುಮಾರ್‌ 

  ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ  ನ್ಯಾಷನಲ್‌ ಇಂಗ್ಗೀಷ್‌ ಹೈಯರ್‌ ಪ್ರೈಮರಿ ಸ್ಕೂಲ್‌ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಬಾಹ್ಯಾಕಾಶ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ದೇಶದಲ್ಲಿ ವೈಜ್ಞಾನಿಕ ಚಿಂತನೆ ಬಿತ್ತುವ ಕಾರ್ಯ ನಿರಂತರವಾಗಿ ನಡೆಯಬೇಕು. ಈ ಕಾರ್ಯದಲ್ಲಿ ಶಿಕ್ಷಕ ಸಮುದಾಯ ಮುಖ್ಯ ಪಾತ್ರ ವಹಿಸಬೇಕು ಎಂದು ಅಭಿಪ್ರಾಯಪಟ್ಟರು.
  ಭಾರತ ತನ್ನ ಮೊದಲ ಚಂದ್ರಯಾನದಲ್ಲಿ, ಚಂದ್ರನ ಮೇಲೆ ನೀರಿನ ಕಣಗಳು ಇರುವುದನ್ನು ಪತ್ತೆಹಚ್ಚಿತು. ಎರಡನೆ ಯಾನವೂ ಯಶಸ್ವಿಯಾಗಿದ್ದರೂ, ಅಂತಿಮ ಘಟ್ಟದಲ್ಲಿ ಸ್ವಲ್ಪ ಸಮಸ್ಯೆ ಉಂಟಾಯಿತು. ಆದರೂ ನಾವು ಧೃತಿಗೆಡಬೇಕಾದ ಅಗತ್ಯವಿಲ್ಲ. ಸಾಹಸ ಕಾರ್ಯ ಕೈಗೊಂಡಾಗ ಏನೆಲ್ಲಾ ಸಂಭವಿಸಬಹುದು ಅದಕ್ಕೆ ಸಿದ್ಧರಾಗಿರಬೇಕು. ಮತ್ತು ಗೆಲುವಿನ ಮೆಟ್ಟಲು ಹತ್ತಲು ಪ್ರತ್ನಿಸಬೇಕು ಎಂದು ಹೇಳಿದರು.
   ನ್ಯಾಷನಲ್‌ ಎಜ್ಯುಕೇಷನ್ ಸೊಸೈಟಿ ಆಫ್‌ ಕರ್ನಾಟಕದ ಅಧ್ಯಕ್ಷ ಡಾ. ಎ.ಎಚ್‌.ರಾಮರಾವ್‌ ಮಾತನಾಡಿ, ಡಾ.ಎ.ಎಸ್‌.ಕಿರಣ್‌ಕುಮಾರ್‌ ದೆಶ ಕಂಡ ಅಪ್ರತಿಮ ಬಾಹ್ಯಾಕಾಶ ವಿಜ್ಞಾನಿ. ಇವರು ಸ್ಥಳೀಯ ನ್ಯಾಷನಲ್ ಹೈಸ್ಕೂಲ್‌ನ ಹಳೆ ವಿದ್ಯಾರ್ಥಿಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿಗಳು ಹಿರಿಯಣ್ಣನಿಂದ ಸ್ಫೂರ್ತಿ ಪಡೆದು ವೈಜ್ಞಾನಿಕ ಕ್ಷೇತ್ರದಲ್ಲಿ ಮುನ್ನಡೆಯಬೇಕು. ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಗತ್ಯವಾದ ಎಲ್ಲ ನೆರವು ನೀಡಲಾಗುವುದು ಎಂದು ಹೇಳಿದರು.
  ಸಮಾರಂಭದಲ್ಲಿ ಜಿಲ್ಲಾ ಮಟ್ಟದ ಕ್ರಿಡಾ ಸ್ಪರ್ಧೆಯಲ್ಲಿ ವಿಜೇತರಾಗಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು. ಇಸ್ರೋದ ಮಾಜಿ ಅಧ್ಯಕ್ಷ ಡಾ. ಎ.ಎಸ್‌.ಕಿರಣ್‌ ಕುಮಾರ್‌, ನ್ಯಾಷನಲ್‌ ಎಜ್ಯುಕೇಷನ್ ಸೊಸೈಟಿ ಆಫ್‌ ಕರ್ನಾಟಕದ ಅಧ್ಯಕ್ಷ ಡಾ. ಎ.ಎಚ್‌.ರಾಮರಾವ್‌ ಹಾಗೂ ಕಾರ್ಯದರ್ಶಿ ಪ್ರೊ. ಎಸ್‌.ಎನ್‌.ನಾಗರಾಜರೆಡ್ಡಿ ಅವರನ್ನು ಸನ್ಮಾನಿಸಲಾಯಿತು.
  ಮುಖ್ಯ ಶಿಕ್ಷಕ ಎಚ್‌.ಎಂ.ರಾಮಾಂಜಿನಪ್ಪ, ಶಿಕ್ಷಕರಾದ ಡಿ.ವಿ.ಸಿದ್ದಾರೆಡ್ಡಿ, ಕೆ.ಪ್ರಕಾಶಯ್ಯ, ಲೋಕನಾಥ್‌, ದಕ್ಷಿಣಾಮೂರ್ತಿ, ಪಿ.ವಿ.ರೇಖಾ, ಬಾಬು ಇದ್ದರು.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶುಭ ನವರಾತ್ರಿಗಾಗಿ ಉಡುಪಿಯ “ಸ್ಯಾoಡ್ ಥೀಮ್” ತಂಡದಿಂದ ಕುಂಕುಮಾoಕಿತೆ ದೇವಿಯ ಮರಳಶಿಲ್ಪಾಕೃತಿ

JANANUDI.COM NETWORK

ಶುಭ ನವರಾತ್ರಿಗಾಗಿ ಉಡುಪಿಯ “ಸ್ಯಾoಡ್ ಥೀಮ್” ತಂಡದಿಂದ ಕುಂಕುಮಾoಕಿತೆ ದೇವಿಯ ಮರಳಶಿಲ್ಪಾಕೃತಿ

ಕುಂದಾಪುರ, ಸೆ.೨೯: ಸೆಪ್ಟಂಬರ್ ೨೮ ರಂದು ಮಹಾಲಸೆ ಅಮಾವಸೆಯಂದು ಶುಭ ನವರಾತ್ರಿ ಎಂಬ ಧ್ಯೇಯದಡಿಯಲ್ಲಿ ನವರಾತ್ರಿಯ ಪ್ರಯುಕ್ತ  ಶಂಖ , ಚಕ್ರ, ಪದ್ಮದೊಂದಿಗೆ ಅಭಯ ಹಸ್ತಲಾಗಿ ಕುಂಕುಮಾoಕಿತೆ ದೇವಿಯ ಮರಳಶಿಲ್ಪಾಕೃತಿಯನ್ನು ಹಳೆ ಅಳಿವೆ, ಕೋಟೇಶ್ವರ -ಕುಂದಾಪುರದ ಕಡಲ ತೀರದಲ್ಲಿ.
ಉಡುಪಿಯ “ಸ್ಯಾoಡ್ ಥೀಮ್” ತಂಡದವರು ರಚಿಸಲಾಯಿತು. ಖ್ಯಾತ ಮರಳು ಶಿಲ್ಪಾ ಕಲಾವಿದರಾದ ಹರೀಶ್ ಸಾಗಾ, ರಾಘವೇಂದ್ರ, ಪ್ರಸಾದ್ ಆರ್. ಇವರುಗಳು ತಂಡದಲ್ಲಿದ್ದು ಜನಾಕರ್ಷಣೆಯಿಂದ ಮೆಚ್ಚುಗೆ ಪಡೆಯಿತು.

ಕುಂದಾಪುರ್ ಸಹಾಯಕ್ ವಿಗಾರ್ ಬಾಪ್ ವಿಜಯ್ ಜೊಯ್ಸನ್ ಡಿಸೋಜಾ ಜಲ್ಮಾ ದೀಸ್ ಆಚರಣ್

JANANUDI.COM NETWORK 

ಕುಂದಾಪುರ್ ಸಹಾಯಕ್ ವಿಗಾರ್ ಬಾಪ್ ವಿಜಯ್ ಜೊಯ್ಸನ್ ಡಿಸೋಜಾ ಜಲ್ಮಾ ದೀಸ್ ಆಚರಣ್


ಕುಂದಾಪುರ್, ಸೆ.29: ಕುಂದಾಪುರ್ ಸಹಾಯಕ್ ಯಾಜಕ್ ಬಾಪ್ ವಿಜಯ್ ಜೊಯ್ಸನ್ ಡಿಸೋಜಾನ್ ಜಲ್ಮಾ ದಿವಸ್ ಆಜ್ ಫಿರ್ಗಜ್ ಲೊಕಾಂ ಸವೆಂ ಆನಿ ಆಯ್ಚ್ಯಾ ದಿಸಾ ಜಲ್ಮಾಲ್ಯಾ ಫಿರ್ಗಜ್‍ಗಾರಂ ಸವೆಂ ಸಾದ್ಯಾ ರೀತಿನ್ ಆಚರಣ್ ಕೆಲೊ. ಸಕಾಳಿ ಅರ್ಗಾಂ ಬಲಿದಾನ್ ಭೆಟಯ್ಲ್ಯಾ ಉಪ್ರಾಂತ್ ಯಾಜಕಾಂಚ್ಯಾ ಘರಾ ಮುಖಾರ್ ಕೇಕ್ ಕಾತರ್ನ್ ಆಚರಣ್ ಜಲ್ಮಾ ದೀಸ್ ಕೆಲೊ ಬಾಪ್ ವಿಜಯ್ ಜೊಯ್ಸನ್ ಡಿಸೋಜಾಕ್ ಲಾಂಭ್ ಆವ್ಕ್ ಬಳ ಭಲಾಯ್ಕಿ ಮಾಗೊನ್, ಯಾಜಕಿ ಜಿಣಿ ಸುಫಳ್ ಭರಿತ್ ಜಾಂವ್ದಿ ಮ್ಹಣನ್ ಸರ್ವಾಂಚ್ಯಾ ತರ್ಫೆನ್ ಗೊ.ಮಂ. ಉಪಾಧ್ಯಕ್ಷ್ ಜೇಕಬ್ ಡಿಸೋಜಾನ್ ಬೊರೆ ಮಾಗ್ಲೆಂ.


ಬಾಪ್ ವಿಜಯ್ ಹಾಣಿ ‘ಹಾಂವೆ ಯಾಜಕಿ ಭೆಸ್ ಅಪ್ಣಾಯ್ಲ್ಯಾನ್ ಆಜ್ ಹಾಂವ್ ಫಿರ್ಗಜೆಂತ್ ಜಲ್ಮಾ ದೀಸ್ ಆಚರಣ್ ಕರ್ಚೆಂ ಭಾಗ್ ಫಾವೊ ಜಾಲಾಂ. ಹಾಚ್ಯಾ ಪಾಟಿಂ ಮೊಜಿ ಆವಯ್ ಬಾಪಯ್ ಆಸಾತ್, ತಾಂಕಾಂ ಅಭಾರಿ ಜಾವ್ನಾಸಾ, ಇತ್ಲ್ಯಾ ವ್ಹಡಾ ಸಂಖ್ಯಾನ್ ಮ್ಹಾಕಾ ಶುಭಾಷಯ್ ಪಾಠಂವ್ಕ್ ಎಕ್ಟಾಯ್ ಜಾಲ್ಯಾ ಫಿರ್ಗಜ್‍ಗಾರಾಂಚೊ ಉಪ್ಕಾರ್ ಆಟಯ್ತಾ, ತಶೆಂಚ್ ಹಾಂವ್ ಯಾಜಕ್ ಜಾಂವ್ಕ್ ಮ್ಹಜಿಂ ವ್ಹಡಿಲಾ ಕಾರಣ್ ತಾಂಚೊ ಹಾಂವ್ ಉಪ್ಕಾರ್ ಆಟಯ್ತಾ, ಸಭಾರ್ ಸಂಗ್ತಿನಿಂ ಮ್ಹಾಕಾ ದೆವಾನ್ ರಾಕ್ಲಾ. ದೆವಾಕ್ ಅರ್ಗಾಂ. ತಶೆಂಚ್ ವಿಗಾರ್ ಮಾ|ಬಾ|ಸ್ಟ್ಯಾನಿ ತಾವ್ರೊ ಆನಿ ಪ್ರಾಂಶುಪಾಲ್ ಬಾಪ್ ಮ್ಹಾಕಾ ಮೊಗಾನ್ ಪಳೆತಾತ್ ತಾಂಚೊಯಿ ಉಪ್ಕಾರ್ ಭಾವುಡ್ತಾ’ ಮ್ಹಣನ್ ಉಪ್ಕಾರ್ ಆಟಯ್ಲೊ.
ವಿಗಾರ್ ಮಾ|ಬಾ|ಸ್ಟ್ಯಾನಿ ತಾವ್ರೊ ಹಾಜರ್ ಆಸೊನ್ ತಾಣಿ ಉಪ್ಕಾರ್ ಆಟಯ್ಲೊ ಬಾಪ್ ಪ್ರವೀಣ್ ಅಮ್ರತ್ ಮಾರ್ಟಿಸ್ ಹಾಣಿ ಕಾರ್ಯೆ ಚಲವ್ನ್ ವೆಲೆಂ. ಹ್ಯಾ ಕಾರ್ಯಾಕ್ ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ, 18 ಆಯೋಗಾಚಿ ಸಂಚಾಲಕಿ ಪ್ರೇಮಾ ಡಿಕುನ್ಹಾ, ಕೊವೆತಾಂಚಿ ಸಿಸ್ಟರಾಂ, ಗುರ್ಕಾರ್, ಪ್ರತಿನಿಧಿ ತಶೆಂ ಅಧಿಕ್ ಸಂಖ್ಯಾನ್ ಫಿರ್ಗಜ್ ಪರ್ಜಾ ಹಾಜರ್ ಆಸ್ಲಿ.

ಶ್ರೀನಿವಾಸಪುರದಲ್ಲಿ  ಬಿಜೆಪಿ ಯುವ ಮೋರ್ಚಾ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರದಲ್ಲಿ  ಬಿಜೆಪಿ ಯುವ ಮೋರ್ಚಾ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಶ್ರೀನಿವಾಸಪುರ: ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವುದರ ಮೂಲಕ ಅನಿವಾರ್ಯ ಸಂದರ್ಭದಲ್ಲಿ ಜೀವ ಉಳಿಸಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಹೇಳಿದರು.
  ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ಅವರ ಜನ್ಮ ದಿನಾಚರಣೆ ಪ್ರಯುಕ್ತ  ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಬಿಜೆಪಿ ವತಿಯಿಂದ ನಾಲ್ಕು ವರ್ಷಗಳಿಂದ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ, ರಾಷ್ಟ್ರೋತ್ಥಾನ ರಕ್ತನಿಧಿಗೆ ರಕ್ತ ಸಂಗ್ರಹಿಸಿ ಕೊಡಲಾಗುತ್ತಿದೆ ಎಂದು ಹೇಳಿದರು.
  ಡಾ. ಕೆ.ಎನ್‌.ವೇಣುಗೋಪಾಲ್‌ ಮಾತನಾಡಿ, ದೇಶದಲ್ಲಿ ರಕ್ತದ ಕೊರತೆ ಕಾಡುತ್ತಿದೆ. ಸಮಯಕ್ಕೆ ಸರಿಯಾಗಿ ಅಗತ್ಯವಾದ ರಕ್ತ ಸಿಗದೆ ಸಾವನ್ನಪ್ಪುವ ಸಂದರ್ಭಗಳೂ ಇರುತ್ತವೆ. ಇಂಥ ಪರಿಸ್ಥಿತಿಯನ್ನು ತಪ್ಪಿಸಲು ಯುವ ಸಮುದಾಯ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಹೇಳಿದರು.
  ಡಾ. ವೈ.ವಿ.ವೆಂಕಟಾಚಲ ಮಾತನಾಡಿ, ಸಾರ್ವಜನಿಕರು ರಕ್ತದಾನ ಮಾಡುವುದರ ಬಗ್ಗೆ ಇರುವ ತಪ್ಪು ತಿಳುವಳಿಕೆ ಬಿಡಬೇಕು. ಆರೋಗ್ಯವಂತ ಅರ್ಹ ವ್ಯಕ್ತಿ ರಕ್ತದಾನ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಕೊಟ್ಟಷ್ಟು ರಕ್ತ ಮತ್ತೆ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಅಪಘಾತ ಸಂಭವಿಸಿದಾಗ ಅಥವಾ ಇತರ ಅನಿವಾರ್ಯ ಸಂದರ್ಭದಲ್ಲಿ ಅಗತ್ಯ ಗುಂಪಿನ ರಕ್ತ ಸಿಗದಿದ್ದರೆ ಜೀವ ರಕ್ಷಣೆ ಕಷ್ಟವಾಗುತ್ತದೆ ಎಂದು ಹೇಳಿದರು.
  ಬಿಜೆಪಿ ಮುಖಂಡರಾದ ಎಂ.ಲಕ್ಷ್ಮಣಗೌಡ, ಜಯರಾಮರೆಡ್ಡಿ, ವೆಂಕಟೇಗೌಡ, ರಾಮಾಂಜಿ, ನಾಗರಾಜ್‌, ಸುರೇಶ್‌, ನಾರಾಯಣಸ್ವಾಮಿ, ಯಲ್ದೂರು ಪದ್ಮನಾಭ್‌, ಸುನಿಲ್‌ ಇದ್ದರು.
  ಶಿಬಿರದಲ್ಲಿ 100ಕ್ಕೂ ಹೆಚ್ಚು ಮಂದಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.

ನಗರದಲ್ಲಿ ಹದಗೆಟ್ಟ ರಸ್ತೆಗಳ ನಿರ್ಮಾಣಕ್ಕೆ ಶೀಘ್ರ ಕ್ರಮ: ಜೆ.ಮಂಜುನಾಥ್

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ನಗರದಲ್ಲಿ ಹದಗೆಟ್ಟ ರಸ್ತೆಗಳ ನಿರ್ಮಾಣಕ್ಕೆ ಶೀಘ್ರ ಕ್ರಮ: ಜೆ.ಮಂಜುನಾಥ್

ಕೋಲಾರ : ನಗರದಲ್ಲಿ ರಸ್ತೆಗಳು ಸಾಕಷ್ಟು ಹದಗೆಟ್ಟಿದ್ದು ಇವುಗಳನ್ನು ಶೀಘ್ರವಾಗಿ ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರು ತಿಳಿಸಿದರು. 

ಇಂದು ವಿವಿಧ ಸಂಘಟನೆಗಳ ಮುಖಂಡರು ಹಾಗೂ ಅಧಿಕಾರಿಗಳ ಜೊತೆಯಲ್ಲಿ ರಂಗಮಂದಿರ ರಸ್ತೆ, ಕಾಳಿಕಾಂಬ ರಸ್ತೆ, ನೂತನ ಸರ್ಕಾರಿ ಬಸ್ ನಿಲ್ದಾಣ ರಸ್ತೆ, ಕ್ಲಾಕ್‍ಟವರ್ ರಸ್ತೆ, ಶಾರದ ಚಿತ್ರ ಮಂದಿರ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸ್ಥಿತಿಗತಿಗಳನ್ನು ವೀಕ್ಷಿಸಿ ನಂತರ ಅವರು ಮಾತನಾಡಿದರು. 

ನಗರದಲ್ಲಿ ರಸ್ತೆಗಳ ದುರಸ್ಥಿ ಕಾಮಗಾರಿಗಳು ನಡೆಯುತ್ತಿದೆ. ಕೆಲವು ಕಾರಣಗಳಿಂದ ಕಾಮಗಾರಿಗಳು ತಡವಾಗಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಇದನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ನಗರಸಭೆ ಮತ್ತು ಪಿ.ಡಬ್ಲ್ಯೂ.ಡಿ. ಇಲಾಖೆಗಳಿಗೆ ಸೂಚಿಸಲಾಗಿದೆ ಎಂದರು. 

ಕಸದ ರಾಶಿಗಳು ನಗರದಲ್ಲಿ ಕಾಣುತ್ತಿವೆ. ಕಸ ವಿಲೇವಾರಿ ಮಾಡಬೇಕಾದ ಕೆಲಸವನ್ನು ಸೂಕ್ತವಾಗಿ ನಿರ್ವಹಿಸಲು ನಗರಸಭೆಯವರಿಗೆ ಸೂಚನೆ ನೀಡಲಾಗಿದೆ. ಅದೇ ರೀತಿ ಕೆಲವು ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್‍ಗಳನ್ನು ಮಾರಾಟ ಮಾಡಲಾಗುತ್ತಿದೆ. ಇದನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಹಾಗಾಗಿ ಪ್ಲಾಸ್ಟಿಕನ್ನು ಬಳಕೆ ಮಾಡಬಾರದು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಶಾಸಕರಾದ ಕೆ.ಶ್ರೀನಿವಾಸಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಕಾರ್ತೀಕ್ ರೆಡ್ಡಿ, ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿಯಾದ ಜಾಹ್ನವಿ, ನಗರಸಭೆ ಅಧಿಕಾರಿಗಳು ಹಾಗೂ ಪಿ.ಡಬ್ಲ್ಯೂ.ಡಿ ಅಧಿಕಾರಿಗಳು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರುಗಳು ಹಾಜರಿದ್ದರು.

ಪೋಲಿಯೋ ಹನಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶ ಹರಡುತ್ತಿರುವ ಬಗ್ಗೆ.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಪೋಲಿಯೋ ಹನಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶ ಹರಡುತ್ತಿರುವ ಬಗ್ಗೆ.

ಕೋಲಾರ : ಸಾಮಾಜಿಕ ಜಾಲ ತಾಣಗಳಲ್ಲಿ ವಾಟ್ಸ್ ಆಫ್‍ನಲ್ಲಿ  ಸೆ. 20  ರಂದು “ ದಯಮಾಡಿ ಬೇಗ ಶೇರ್ ಮಾಡಿ ನಾಳೆ 5 ವರ್ಷದ ಒಳಗೆ ಇರುವ ಮಕ್ಕಳಿಗೆ ಪೋಲಿಯೋ ಕೊಡಿಸಬೇಡಿ. ಅದರಲ್ಲಿ ವೈರಸ್ ಬೆರೆಸಿರುತ್ತದೆ. ಪೋಲಿಯೋ ತಯಾರು ಮಾಡಿದ ಆ ಕಂಪನಿಯ ಯಜಮಾನರನ್ನು ಅರೆಸ್ಟ್ ಮಾಡಿದ್ದಾರೆ. ದಯಮಾಡಿ ಎಲ್ಲರಿಗೂ ತುರ್ತು ಶೇರ್ ಮಾಡಿ ಸತ್ಯ. ಸತ್ಯ. ಸತ್ಯ.” ಎಂಬ ಸುಳ್ಳು ಮಾಹಿತಿಯ ಸಂದೇಶಗಳನ್ನು ಹರಡುತ್ತಿದ್ದು, ಇಂತಹ ವದಂತಿಗಳಿಗೆ  ಸಾರ್ವಜನಿಕರು ಕಿವಿ ಕೊಡಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪೋಲಿಯೋ ಹನಿಯನ್ನು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ನಿಯಮಾನುಸಾರ ಕ್ರಮವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡುತ್ತಾ ಬಂದಿದ್ದು ಪೋಲಿಯೋ ಹನಿಯಿಂದ ಯಾವುದೇ ತರಹದ ಅಹಿತಕಾರ ಘಟಣೆ ಸಂಭವಿಸಿರುವುದಿಲ್ಲ, ನಮ್ಮ ಆರೋಗ್ಯ ಇಲಾಖೆಯಲ್ಲಿ ನಿಯಮಾನುಸಾರ ನೀಡುತ್ತಾ ಬರುವ ಪೋಲಿಯೋ ಹನಿ ಶೇ.100% ರಷ್ಟು ಸುರಕ್ಷಿತವಾಗಿದೆ.  ಯಾವುದೇ ಸುಳ್ಳು ಮಾಹಿತಿಗಳಿಗೆ, ವದಂತಿಗಳಿಗೆ ಸಾರ್ವಜನಿಕರು ಕಿವಿ ಕೊಡಬಾರದು ಎಂದು ಅವರು ತಿಳಿಸಿದ್ದಾರೆ. 

ಪೋಲಿಯೋ ನಿರ್ಮೂಲನೆಯಲ್ಲಿ ನಮ್ಮ ಭಾರತ ದೇಶವು ಗಣನೀಯ ಪ್ರಗತಿಯನ್ನು ಸಾಧಿಸಿದ್ದು, ಜನವರಿ 2011 ರಿಂದ ಯಾವುದೇ ಹೊಸ ಪೋಲಿಯೊ ಪ್ರಕರಣ ಕಂಡು ಬಂದಿರುವುದಿಲ್ಲ ಹಾಗೂ ಭಾರತ ದೇಶವು ಈಗ ವಿಶ್ವ ಆರೋಗ್ಯ ಸಂಸ್ಥೆಯ ವತಿಯಿಂದ “ಪೋಲಿಯೋ ಮುಕ್ತ ರಾಷ್ಟ್ರ “ ಎಂಬ ಪೋಲಿಯೋ ನಿರ್ಮೂಲನೆಯ ಪ್ರಮಾಣ ಪತ್ರವನ್ನು  ಮಾರ್ಚ್ 27, 2014  ರಂದು ಪಡೆದಿದೆ. 04 ಡಿಸೆಂಬರ್ 2018 ಕ್ಕೆ ಕೇವಲ ಎರಡು ದೇಶಗಳು ಪಾಕಿಸ್ತಾನ, ಆಘ್ಟಾನಿಸ್ತಾನ ಮಾತ್ರ ಪೋಲಿಯೋ ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿವೆ. ವಿಶ್ವದಾದ್ಯಂತ ಒಟ್ಟಾರೆ 2017 ರಲ್ಲಿ 16 ಪೋಲಿಯೋ ಪ್ರಕರಣಗಳು ಕಂಡುಬಂದಿದ್ದು, 2018 ರಲ್ಲಿ 28 ಪ್ರಕರಣಗಳು ವರದಿಯಾಗಿರುತ್ತವೆ. 

ಈ ಹಿನ್ನೆಲೆಯಲ್ಲಿ ಪಾಕಿಸ್ತಾನ, ಆಘ್ಟಾನಿಸ್ತಾನ ಪೋಲಿಯೋ ಪ್ರಕರಣಗಳು ಕಂಡು ಬಂದಿರುವುದರಿಂದ ಹಾಗೂ ಮತ್ತೆ ಸಾಂಕ್ರಾಮಿಕವಾಗಿ ಹರಡುವ ಸಾಧ್ಯತೆ ಇರುವುದರಿಂದ ಪೋಲಿಯೋ ಲಸಿಕೆಯನ್ನು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಗಳನ್ನು ಹಾಗೂ ಎ.ಎಫ್.ಪಿ ಸರ್ವೆಕ್ಷಣೆ ಕಾರ್ಯಕ್ರಮಗಳನ್ನು ಅತ್ಯಂತ ಜಾಗರೂಕತೆಯಿಂದ ಮತ್ತು ಜವಾಬ್ದಾರಿಯುತವಾಗಿ ನಿರ್ವಹಿಸಬೇಕಾಗಿರುತ್ತದೆ.

ಕರ್ನಾಟಕದಲ್ಲಿ ಕೊನೆಯ ಪೋಲಿಯೋ ಪ್ರಕರಣ ನವೆಂಬರ್ 3, 2007 ರಂದು ರಾಜ್ಯಕ್ಕೆ ವಲಸೆ ಬಂದಿರುವ ಗುಂಪಿನಲ್ಲಿ ಪತ್ತೆಯಾಗಿದ್ದು, ಆನಂತರ ಇಲ್ಲಿಯವರೆಗೆ ಯಾವುದೇ ಪೋಲಿಯೋ ಪ್ರಕರಣ ಪತ್ತೆಯಾಗಿರುವುದಿಲ್ಲ. “ ಪೋಲಿಯೊ ಖಾಯಿಲೆ ನಿರ್ಮೂಲನೆ ಮಾಡಲು ಹಲವಾರು ಇಲಾಖೆಗಳ ಅಧಿಕಾರಿಗಳು, ನೌಕರರು, ಸ್ವಯಂ ಸೇವಕರು ಸಾಕಷ್ಟು ಉತ್ತಮ ಕೆಲಸ ನಿರ್ವಹಿಸುತ್ತಿರುವುದು ಪ್ರಶಂಸನೀಯವಾಗಿರುತ್ತದೆ”.

 ಭಾರತ ಸರ್ಕಾರದ ನಿರ್ದೇಶನದಂತೆ ಪೋಲಿಯೋ ನಿರ್ಮೂಲನೆಯ ಅಂಗವಾಗಿ ಈ ವರ್ಷ ಒಂದು ಸುತ್ತಿನ ಫಲ್ಸ್ ಪೋಲಿಯೋ ಕಾರ್ಯಕ್ರಮವನ್ನು 10 ನೇ ಮಾರ್ಚ್ 2019 ರಲ್ಲಿ  bಔPಗಿ ನೀಡುತ್ತಿರುವ ಲಸಿಕೆಯನ್ನು ಹಾಕಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 1800-425-4325 ಗೆ ಅಥವಾ ಹತ್ತಿರ ಸರ್ಕಾರಿ ಆಸ್ಪತ್ರೆಗಳಿಗೆ ಅಥವಾ ಉಚಿತ ದೂರವಾಣಿ 104ಕ್ಕೆ ಅಥವಾ ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಯ ಆವರಣದಲ್ಲಿರುವ ಡಿಜಿಟಲ್ ಆರೋಗ್ಯ ವಾಣಿ ಉಚಿತ ಕರೆಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ವೈದ್ಯಕೀಯ ಚಿಕ್ಸಿತೆಗೆ ಸಹಾಯ ಧನ ಹಸ್ತಾಂತರ

ವರದಿ: ವಾಲ್ಟರ್ ಮೊಂತೇರೊ

 

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ವೈದ್ಯಕೀಯ ಚಿಕ್ಸಿತೆಗೆ ಸಹಾಯ ಧನ ಹಸ್ತಾಂತರ

ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ವತಿಯಿಂದ ಮಹಡಿಯಿಂದ ಬಿದ್ದು ಅಫಘಾತಕ್ಕೊಳಗಾದ ಬೋಳ ಮಂಜುನಾಥ ಆಚಾರ್ಯರಿಗೆ ವೈದ್ಯಕೀಯ ಚಿಕ್ಸಿತೆಗೆ ಧನ ಸಹಾಯ ಹಸ್ತಾಂತರಿಸಲಾಯಿತು.
ಈ ಸಂಧರ್ಭದಲ್ಲಿ ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ನಿಕಟ ಪೂರ್ವಾಧ್ಯಕ್ಷ ನಂದಳಿಕೆ ರಾಜೇಶ್ ಕೋಟ್ಯಾನ್, ಪೂರ್ವಾಧ್ಯಕ್ಷ ರಘುವೀರ್ ಶೆಟ್ಟಿ, ಕಾಸ್ರಬೈಲು ಸುರೇಶ್ ಪೂಜಾರಿ, ಉಪಾಧ್ಯಕ್ಷ ಬಾಲಕೃಷ್ಣ ಮಡಿವಾಳ, ಕೋಶಾಧಿಕಾರಿ ಹರಿಪ್ರಸಾದÀ ಆಚಾರ್ಯ, ಮಹಿಳಾ ಸಂಘಟನಾ ಕಾರ್ಯದರ್ಶಿ ವೀಣಾ ಪೂಜಾರಿ, ಹರೀಶ್ ಪೂಜಾರಿ, ಲಲಿತಾ ಆಚಾರ್ಯ, ಸುನೀತಾ ಪಿಂಟೋ, ಪುಷ್ಪ ಕುಲಾಲ್ ಮೊದಲಾದವರಿದ್ದರು.