HOLY ROSARY CHURCH, KUNDAPUR – 450 th JUBILEE SOUVENIR 2021

ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು ಹಾಗೂ ಬ್ಯಾಂಕ್‍ಗಳಿಂದ ರೈತರಿಗೆ ನೋಟಿಸ್ ನೀಡಬಾರದೆಂದು ರೈತ ಸಂಘದಿಂದ ಒತ್ತಾಯ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು ಹಾಗೂ ಬ್ಯಾಂಕ್‍ಗಳಿಂದ ರೈತರಿಗೆ ನೋಟಿಸ್ ನೀಡಬಾರದೆಂದು ರೈತ ಸಂಘದಿಂದ ಒತ್ತಾಯ

 

 

 

ಕೋಲಾರ, ಡಿ.02: ಸರ್ಕಾರದಿಂದ ರೈತರಿಗೆ ಬರುವ ಸಬ್ಸಿಡಿ, ಪಿಂಚಣಿ ಹಾಗೂ ಹಾಲಿನ ಬಿಲ್ ಹಣವನ್ನು ಕಾರಣಕ್ಕೂ ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು ಹಾಗೂ ಬ್ಯಾಂಕ್‍ಗಳಿಂದ ರೈತರಿಗೆ ನೋಟಿಸ್ ನೀಡಬಾರದೆಂದು ರೈತ ಸಂಘದಿಂದ ಲೀಡ್ ಬ್ಯಾಂಕ್ ಮ್ಯಾನೇಜರ್‍ಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಮನವಿ ನೀಡಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಸಾವಿರಾರು ಕೋಟಿ ಬ್ಯಾಂಕ್‍ಗಳಲ್ಲಿ ಸಾಲ ಮಾಡಿ ದೇಶ ಬಿಟ್ಟು ಹೋಗುವ ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪನಿ ಮಾಲೀಕರ ಮೇಲೆ ತಮ್ಮ ಪ್ರತಾಪ ತೋರಿಸದ ಬ್ಯಾಂಕ್ ಅಧಿಕಾರಿಗಳು ಗುಬ್ಬಚ್ಚಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಕೂಲಿ ಕಾರ್ಮಿಕರ ರೈತರ ವಿದವೆಯರಿಗೆ ಸರ್ಕಾರದಿಂದ ಬರುವ ಅಲ್ಪ ಸ್ವಲ್ಪ ಸಬ್ಸಿಡಿ ಹಾಗೂ ಮತ್ತಿತರ ಹಣವನ್ನು ಬ್ಯಾಂಕ್ ಅಧಿಕಾರಿಗಳು ಸಾಲಕ್ಕೆ ಜಮಾ ಮಾಡಿಕೊಳ್ಳುವ ಜೊತೆಗೆ ಇರುವ ಅಲ್ಪ ಸ್ವಲ್ಪ ಸಾಲಕ್ಕೆ ನೂರೊಂದು ಬಾರಿ ನೋಟಿಸ್ ಜಾರಿ ಸ್ವಾಭಿಮಾನಿ ರೈತರ ಜೀವನದ ಜೊತೆ ಚೆಲ್ಲಾಟವಾಡುವ ಜೊತೆಗೆ ಒಡವೆ, ಮತ್ತಿತರ ಸಾಲಗಳನ್ನು ಪಡೆಯಲು ವರ್ಷಾನುಗಟ್ಟಲೆ ಬ್ಯಾಂಕಿಗೆ ರೈತರು ಅಲೆದಾಡಿಸುವುದು ಒಂದುಕಡೆಯಾದರೆ ಮತೊಂದು ಕಡೆ ಸರ್ಕಾರ ಯಾವುದೇ ಕಾರಣಕ್ಕೂ ರೈತರಿಗೆ ನೋಟಿಸ್ ನೀಡಬಾರದು ವಿವಿಧ ಸರ್ಕಾರದಿಂದ ಬರುವ ರೈತರ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳಬಾರದೆಂದು ಆದೇಶವಿದ್ದರೂ ನೋಟಿಸ್ ಜಾರಿ ಮಾಡಿ ಬರುವ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಂಡು ರೈತ ವಿರೋದಿ ದೋರಣೆ ಅನುಸರಿಸುತ್ತಿರುವ ಬ್ಯಾಂಕ್ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಕೊಡಿಸಬೇಕೆಂದು ಅಗ್ರಹಿಸಿದರು
ಮನವಿ ಸ್ವೀಕರಿಸಿ ಮಾತನಾಡಿದ ವ್ಯವಸ್ಥಾಪರು ಸರ್ಕಾರದಿಂದ ರೈತರು ಕೂಲಿ ಕಾರ್ಮಿಕರು, ವಿಧವೆಯರಿಗೆ ಬರುವ ಹಣ ಹಾಗೂ ಹಾಲಿನ್ ಬಿಲ್ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳಬಾರದೆಂಬ ಸರ್ಕಾರದ ಆದೇಶದ ಬಗ್ಗೆ ಎಲ್ಲಾ ಬ್ಯಾಂಕ್‍ಗಳಿಗೆ ನೋಟಿಸ್ ಜಾರಿ ಮಾಡಿದ್ದೇವೆ. ಆದರೂ ನೋಟಿಸ್ ಹಾಗೂ ಸಾಲಕ್ಕೆ ಸಬ್ಸಿಡಿ ಹಣವನ್ನು ಜಮಾ ಮಾಡಿಕೊಳ್ಳುವ ಬ್ಯಾಂಕ್ ವ್ಯವಸ್ಥಾಪಕರ ವಿರುದ್ದ ಕ್ರಮ ಕೈಗೊಳ್ಳುವ ಭರವಸೆ ನೀಡಿದರು
ಮನವಿ ನೀಡುವಾಗ ಜಿಲ್ಲಾದ್ಯಕ್ಷೆ ಎ.ನಳಿನಿ, ವಕ್ಕಲೇರಿ ಹನುಮಯ್ಯ, ಈಕಂಬಳ್ಳಿ ಮಂಜುನಾಥ್, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ಮುಂತಾದವರಿದ್ದರು.

 

 

 

 

 

 

 

 

 

OBITUARY Anna Gracy D’Almeida (84) (Rtd School Teacher Gangolli) –        ಅನ್ನಾ ಗ್ರೇಸಿ ಡಿಆಲ್ಮೇಡಾ ಟೀಚರ್ ಇವರಿಗೆ ನಮನಗಳು

OBITUARY

Anna Gracy D’Almeida (84)

(Rtd School Teacher Gangolli)

 

Born 17-7-1935

Kundapur (passed away 4-12-2019)

 

 

W/o Thimothy Almedida

M/O-: Juliet/ late Edward Pias, Johnson/ lavina D’almeida, Sharmila/ Tyran Suvaris,   Sandhya/ Jeevan D’souza

 

funeral cortege leaves residence 6-12-2019 at 3:30pm fಹ್ರ್rom residence to Holy Rosary church, Kundapura,  followed by mass at 4 pm.

 

         ಅನ್ನಾ ಗ್ರೇಸಿ ಡಿಆಲ್ಮೇಡಾ ಟೀಚರ್ ಇವರಿಗೆ ನಮನಗಳು

     ಮೂಲತ ಕನ್ನಡ ಕುದ್ರು ಗಂಗೊಳ್ಳಿಯವರಾದ ಶ್ರೀಮತಿ ಅನ್ನಾ ಗ್ರೇಸಿ ಟೀಚರ್ ದಿನಾಂಕ ಡಿಸೆಂಬರ್ 4 ರಂದು ಕೆಲೆವೇ ಕ್ಷಣದ ಅನಾರೋಗ್ಯದಿಂದ ಹ್ರದಯಾಘಾತದಿಂದ 84 ರ ಪ್ರಾಯದಲ್ಲಿ ಮ್ರತ ಪಟ್ಟಿದ್ದಾರೆ. ಆನಾರೋಗ್ಯಕ್ಕೆ ತುತ್ತಾದ ತಕ್ಷಣ ಮನೆಯವರು ಆಸ್ಪತ್ರೆಗೆ ಕೊಂಡಯ್ದರು ಅವರನ್ನು ಉಳಿಸಲಾಗಲಿಲ್ಲಾ.

   ಅವರು ತಮ್ಮ ಪತಿ ತಿಮೋತಿ ಡಿಆಲ್ಮೇಡಾ, ಒರ್ವ ಪುತ್ರ ಮತ್ತು ಮೂವರು ಪುತ್ರಿಯರು, 8 ಮೊಮ್ಮಕ್ಕಳು, 4 ಮರಿಮಕ್ಕಳನ್ನುಅಗಲಿದ್ದಾರೆ.

    ಗ್ರೇಸಿ ಟೀಚರ್ ಎಂದೆ ಖ್ಯಾತ ನಾಮರಾದ ಅವರು ಎಸ್.ವಿ. ಪ್ರಾಥಮಿಕ ಶಾಲೆಯ ಅಧ್ಯಾಕಿಯಾಗಿದ್ದು ಜನಾನುರಾಗಿದ್ದರು. ಅವರ ಜೀವನದಲ್ಲಿ  ಸಾಕಷ್ಟು ಮಕ್ಕಳಿಗೆ ವಿದ್ಯೆಗಾಗಿ ದಾನ ಮಾಡುತಿದ್ದರು. ಹಾಗೇ ಸಮಾಜ ಮುಖಿ ಸೇವೆ ನೀಡುತಿದ್ದರು. ಜಾತಿ ಧರ್ಮ ಮೀರಿ ಅವರ ಸಹಾಯ ಹಸ್ತ ನೀಡುತಿದ್ದರು. ನಾನು ಅವರ ಮನೆಗೆ ಇಂದು ಭೇಟಿ ನೀಡಿದಾಗ ದೂರದಿಂದ ಇತರ ಧರ್ಮದವರು ಬಂದು ಗೌರವಾರ್ಥ ನೀಡಿದನ್ನು ಕಂಡೆ.

     ನಮ್ಮಲ್ಲಿ ಸಹಹ್ರದಯಿಯಾಗಿದ್ದ ಗ್ರೇಸಿ ಟೀಚರ್ಗೆ ನಮ್ಮ ಸುದ್ದಿ ಸಂಸ್ಥೆ jananudi.com ಮನಾದಳದಿಂದ ಶ್ರದ್ದಾಂಜಲಿಯನ್ನು ಅರ್ಪಿಸುತ್ತದೆ.

ಸಾಂಸ್ಕøತಿಕ ಸ್ಪರ್ಧೆಗಳಲ್ಲಿ  ಆರ್. ಎನ್. ಶೆಟ್ಟಿ ಪದವಿಪೂರ್ವ ಕಾಲೇಜು:  ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

JANANUDI.COM NETWORK

 

 

ಸಾಂಸ್ಕøತಿಕ ಸ್ಪರ್ಧೆಗಳಲ್ಲಿ  ಆರ್. ಎನ್. ಶೆಟ್ಟಿ ಪದವಿಪೂರ್ವ ಕಾಲೇಜು:  ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

 

ತಾ- 30-11-19 ರಂದು ಚಿಕ್ಕಮಗಳೂರಿನಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ವಲಯ ಮಟ್ಟದ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಬಹುಮಾನಗಳಿಸಿ ರಾಜ್ಯಮಟ್ಟದ ಸ್ಫರ್ಧೆಯಲ್ಲಿ ಭಾಗವಹಿಸುವ ಅರ್ಹತೆಗಳಿಸಿದ್ದಾರೆ. ಅಭಿಲಾಷ್ ಹತ್ವಾರ್ ಹಾಗೂ ಭರತ್ ಬಿ. ದ್ವಿತೀಯ ಪಿ.ಯು.ಸಿ. ಕ್ವಿಜ್‍ನಲ್ಲಿ ಪ್ರಥಮ, ಶಾನಲ್ ಪ್ರಜ್ವಲ್ ಸಾಲಿನ್ಸ್ ಹಾಗೂ ಸ್ತುತಿ ಪ್ರಥಮ ಪಿ.ಯು.ಸಿ. ಕ್ವಿಜ್‍ನಲ್ಲಿ ತೃತೀಯ, ರೋಹಿತ್ ಆಚಾರ್ಯ ಡ್ರಾಯಿಂಗ್‍ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಕಾಲೇಜಿನ ಸಂಚಾಲಕರಾದ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ. ಬಿ.ಎಂ. ಸುಕುಮಾರ ಶೆಟ್ಟಿಯವರು, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು & ಅದ್ಯಾಪಕರು ಇವರನ್ನು ಅಭಿನಂದಿಸಿದ್ದಾರೆ.

ಸಂವಿಧಾನ ಓದುವ ಮೊದಲು ಅಂಬೇಡ್ಕರ್ ಜೀವನ ಚರಿತ್ರೆ ಓದಬೇಕು

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

ಸಂವಿಧಾನ ಓದುವ ಮೊದಲು ಅಂಬೇಡ್ಕರ್ ಜೀವನ ಚರಿತ್ರೆ ಓದಬೇಕು

 

ಕೋಲಾರ : ಸಂವಿಧಾನವನ್ನು ಓದುವವರಿಗೆ ಅದರಲ್ಲಿನ ವಿಧಿಗಳು, ಭಾಗಗಳು, ಅನುಚ್ಛೇದಗಳು ಮಾತ್ರ ಕಾಣುತ್ತದೆ. ಹಾಗಾಗಿ ಸಂವಿಧಾನ ಓದುವ ಮೊದಲು ಅಂಬೇಡ್ಕರ್ ರವರ ಜೀವನ ಚರಿತ್ರೆಯನ್ನು ಓದಿ ನಂತರ ಸಂವಿಧಾನವನ್ನು ಓದಿದಾಗ ಸಂವಿಧಾನ ಅರ್ಥವಾಗುತ್ತದೆ ಎಂದು ಯುವಸೇನೆ ಕರುನಾಡು ಸಂಘಟನೆಯ ರಾಜ್ಯಾಧ್ಯಕ್ಷರಾದ ಯುವಸೇನೆ ಕಲ್ಯಾಣ್‍ಕುಮಾರ್ ತಿಳಿಸಿದರು.
ಯುವಸೇನೆ ಕರುನಾಡು ಸಂಘಟನೆಯ ವತಿಯಿಂದ ಹಮ್ಮಿಕೊಂಡಿರುವ ಭಾರತ ರತ್ನ ಡಾ|| ಬಿ.ಆರ್.ಅಂಬೇಡ್ಕರ್ ರವರ ಡಿಸೆಂಬರ್ 6ರ ಪರಿನಿರ್ವಾಣದ ಪ್ರಯುಕ್ತ ಡಿಸೆಂಬರ್ 04 ರಂದು ಕೋಲಾರದಿಂದ ಬಾಂಬೆ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿಯ ಶುದ್ಧೀಕರಣ ಹಾಗೂ ಪುತ್ತಳಿಗೆ ಮಾಲಾರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬಂಗಾರಪೇಟೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ಸಂವಿಧಾನದಲ್ಲಿ ದಲಿತ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ನೀಡಿರುವ ಮೀಸಲಾತಿಯನ್ನು ಪ್ರಶ್ನಿಸುವ ಜನರು ಒಮ್ಮ ತಮ್ಮನ್ನು ಅವಲೋಕನ ಮಾಡಿಕೊಳ್ಳಬೇಕಾಗಿದೆ. ನಿಮ್ಮ ಪೂರ್ವಜರು ಸಾವಿರಾರು ವರ್ಷಗಳಿಂದ ತುಳಿತಕ್ಕೆ ಒಳಪಡಿಸಿದ ಜನಾಂಗಕ್ಕೆ ನೀವು ನೀಡುವ ಒಂದೆರಡು ತಲಮಾರು ಪಶ್ಚಾತಾಪವೆಂದು ಭಾವಿಸಬೇಕಾಗಿದೆ.
ಎಲ್ಲಾ ಪ್ರಜೆಗಳಿಗೆ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯವನ್ನು ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಗಳನ್ನು ದೊರಕಿಸಲು ನಮ್ಮ ಸಂವಿಧಾನದ ಮೂಲಕ ಅಂಬೇಡ್ಕರ್ ರವರು ಮಾಡಿದ ಕಾರ್ಯವು ಅಮೋಘವಾದದ್ದು, ಅಂತಹ ದೀಮಂತ ನಾಯಕನ ಪರಿನಿವಾರ್ಹಣಾ ದಿನದಂದು ಪುಣ್ಯಭೂಮಿಗೆ ತೆರಳಿ ನಾವೆಲ್ಲರೂ ಅವರಿಗೆ ನಮನ ಸಲ್ಲಿಸುವುದು ನಮ್ಮ ಕರ್ತವ್ಯವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಮ್ಮ ಯುವ ಸೇನೆ ಕರುನಾಡು ಸಂಘಟನೆ ಸಂಸ್ಥಾಪಕರು ಆದ ಚಿನ್ನಾಪುರ ಅನಿಲ್ ಕುಮಾರ್. ರಾಜ್ಯ ಉಪಾಧ್ಯಕ್ಷರಾದ ಯತೀಶ್ ಸತ್ಯಪ್ಪನವರ್, ಪ್ರದೀಪ್ ಕೋಲಾರ ತಾಲ್ಲೂಕು ಅಧ್ಯಕ್ಷರು ಆದ ಈಕಂಬಳ್ಳಿ ಮಂಜುನಾಥ್ ವಿದ್ಯಾರ್ಥಿ ಘಟಕದ ಅಧ್ಯಕ್ಷ ಶಿವರಾಜ್, ವೇಮಗಲ್ ಹೋಬಳಿ ಅಧ್ಯಕ್ಷ ಅನಂತು, ಟೇಕಲ್ ಹೋಬಳಿಯ ಶ್ರೀಕಾಂತ್, ಬೀರಮಾನಹಳ್ಳಿ ಶಿವು, ಬಂಗಾರಪೇಟೆ ಶ್ರೀಧರ್ ದೇಶಿಹಳ್ಳಿ ಆಕಾಶ್, ಹುಣಸನಹಳ್ಳಿ ರಮೇಶ್, ಶ್ರೀಮಾನ್, ವಿನೋದ್, ಗಾಯಕರಾದ ಉಪೇಂದ್ರ ಭಾಗವಹಿಸಿದ್ದರು

Mumboyant ontor rajy konkonni yuvosom’mell – ಮುಂಬಯಾಂತ್ ಅಂತರ್ ರಾಜ್ಯ್ ಕೊಂಕಣಿ ಯುವಸಮ್ಮೇಳ್

JANANUDI.COM

 

Mumboyant ontor rajy konkonni yuvosom’mell

 

 

(kandivoli, mumboi) 1 disembr: poilem ontor rajy konkonni yuvosohomilonant gõyche toxench mumboiche yuvozonn dosembr 1 tariker aitara kandivolichea osompxon igorjechea sobhasalant axavadi prokaxon ani xri mol’likarzuno kolejin osompxon konkonni songhottonachea  mozoten manddun haddlem. Kovitapatth – ek odhyoin, mumboi dorxon – mumboi konkonnivixim ek mottvi zhollok, xoilendro mehtachea odhyokx‌ponnakhal konkonni kovigoxtti, toxench rong‌manchi ani songit xetant mohotvacho vaur kel’lea manest fransis fernanddis kassia toxench songit samratt henri ddi’sozasovem somvad karyem, ani ’sangat’ konkonni songit koullechem mokllik karyem hea sohomilonacho vantto zaunaslo.

 

Proxant pireran hea kareachem udhghatton korun oplea uloupant konkonni yuvozonnamni oplea jivitacho xevott somzuncheadhim poilem aplem mull ani ople soktek somzunchi bhovo chodd gorz asa mhonnalo. Fransis fernanddis kassia, henri ddi’soz, xri mol’likarzuno kolejichea konkonni vibhagaoch mukhest dotor purnnanondo cheari mukhel soire zaun hazor asle. Vedicher e.Ke.Es.Songhottonachi odhyokx bai hildda pirera hazor asli.

 

Mumboichea moladd mullacho sod’deak bahreynant vaur korun aschea sttiun ddi’sozachi songit koulli ’sangat’ hech vellar henri ddi’soz ani dotor purnnanondo cheari hannim mokllik keli.

 

’mumboi dorxon’ kareant vol’li kvaddrosan mumboyant suru zal’lea konkonni potrikodhyom’, songit, rong‌manch, chollvollevixim mottvo punn sovistar mahet divun mumboyant prostut konkonni bhaxechi porigotecher ople vichar prostut kele.

 

’kolakaramsovem somvad’ kareant vol’li kvaddrosan fransis fernanddis kassia ani songit samratt henri ddi’sozachi sovistar vollok korun konkonni rong‌manchi ani songit xetant tannim kel’lea vauracher ujvadd fankoun ditoch, dotor purnnadondo chearin somvad choloum’ velo.

 

2003-4 isvent kuveyttant vol’li kvaddrosathaun survat zal’lea ’kovitapatth’vixim mottvo vivor dil’lea roiddon minezosan kovitapatthavixim toxench hea odhyoin lekhonank porgott kel’lea bukamvixim mahet attapchim prostavik utram ucharlim. ’orunn sakhor‌dandde ek somajecho kovi, somajechea ekeka monxachea naddink parkil’lo kovi. Dekun tachea kovitemni somajeche attevitte opurbhayen utraunni kel’lem disun yeta zal’lean to samany monxancho kovi’ kovitapatthacher bab orunn sakhor‌danddechea ’kaulleachem xrad’d’ toxench ’mog kinari’ kovitazomeantlea vinchnnar kovitenk vinchun vol’li kvaddrosan boroyil’lem odhyoin lekhon bai linett ddi’sozan vachun sanglem.

 

“eka kovichi mullavi orhota zaunasa ’somvedon‌xilota’, ani somvedon‌xilota nat‌l’lo konn‌yisahit‌kar zaunko favo nhoi, protyek‌ponnim kovi. Kovigoxttichem odhyokx‌ponn ghet‌l’lea bab xoilendro mehtan ople vichar vekt korun kovigoxttichi survat korun cha.Fra.De’kostachea kovitechem sadorikoronn kelem tor dotor purnnanondo chearin bab orunn sakhor‌danddechea ani heranchea kovitencher toxench gannancher uloilo. Gõychea babhu vellipan ani dotor mitil pal‌desai hannim aplim kovita vachlim, xarol ddi’sozan vol’li kvaddrosachea ’bozar’ kovitazomeantli ’pois pois’ kovita sador keli.

 

Sompnnechea kareant ovreliyos pirera, jems ddi’soz, xoilendro mehta, dotor purnnanondo cheari vedicher hazor asle. 2019 isvechea soptembr moineant mumboyant vevegllea pranteamni chol‌l’lea konkonni kovita sador sortent vantto ghet‌l’lea somestank xifaros potram vanttlim. Toxench yuvosohomilonant bhag ghet‌l’lea somestank xifaros potr ani inamam vanttlim. Sohomilonachea somyozokan vol’li paisan dhinvas pattoile.

 

Xarol ddi’soz kandivoli ani roiddon minezos jerimeri hannim kareachem sunkann ghetlem.

 

ಮುಂಬಯಾಂತ್ ಅಂತರ್ ರಾಜ್ಯ್ ಕೊಂಕಣಿ ಯುವಸಮ್ಮೇಳ್

(ಕಾಂದಿವಲಿ, ಮುಂಬಯ್) 1 ದಿಸೆಂಬ್ರ್: ಪಯ್ಲೆಂ ಅಂತರ್ ರಾಜ್ಯ್ ಕೊಂಕಣಿ ಯುವಸಹಮಿಲನಾಂತ್ ಗೊಂಯ್ಚೆ ತಶೆಂಚ್ ಮುಂಬಯ್ಚೆ ಯುವಜಣ್
ದಸೆಂಬ್ರ್ 1 ತಾರಿಕೆರ್ ಆಯ್ತಾರಾ ಕಾಂದಿವಲಿಚ್ಯಾ ಅಸಂಪ್ಶನ್ ಇಗರ್ಜೆಚ್ಯಾ ಸಭಾಸಾಲಾಂತ್ ಆಶಾವಾದಿ ಪ್ರಕಾಶನ್ ಆನಿ ಶ್ರೀ ಮಲ್ಲಿಕಾರ್ಜುನ
ಕೊಲೆಜಿನ್ ಅಸಂಪ್ಶನ್ ಕೊಂಕಣಿ ಸಂಘಟನಾಚ್ಯಾ ಮಜತೆನ್ ಮಾಂಡುನ್ ಹಾಡ್ಲೆಂ. ಕವಿತಾಪಾಠ್ – ಏಕ್ ಅಧ್ಯಯನ್, ಮುಂಬಯ್ ದರ್ಶನ್ –
ಮುಂಬಯ್ ಕೊಂಕಣಿವಿಶಿಂ ಏಕ್ ಮಟ್ವಿ ಝಳಕ್, ಶಯ್ಲೇಂದ್ರ ಮೆಹ್ತಾಚ್ಯಾ ಅಧ್ಯಕ್ಷ್‌ಪಣಾಖಾಲ್ ಕೊಂಕಣೀ ಕವಿಗೋಶ್ಟಿ, ತಶೆಂಚ್
ರಂಗ್‌ಮಾಂಚಿ ಆನಿ ಸಂಗೀತ್ ಶೆತಾಂತ್ ಮಹತ್ವಾಚೊ ವಾವ್ರ್ ಕೆಲ್ಲ್ಯಾ ಮಾನೆಸ್ತ್ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ತಶೆಂಚ್ ಸಂಗೀತ್
ಸಾಮ್ರಾಟ್ ಹೆನ್ರಿ ಡಿ’ಸೋಜಾಸವೆಂ ಸಂವಾದ್ ಕಾರ್ಯೆಂ, ಆನಿ ’ಸಾಂಗಾತ್’ ಕೊಂಕಣಿ ಸಂಗೀತ್ ಕೊವ್ಳೆಚೆಂ ಮೊಕ್ಳಿಕ್ ಕಾರ್ಯೆಂ ಹ್ಯಾ ಸಹಮಿಲನಾಚೊ
ವಾಂಟೊ ಜಾವ್ನಾಸ್ಲೊ.
ಪ್ರಶಾಂತ್ ಪಿರೇರಾನ್ ಹ್ಯಾ ಕಾರ್ಯಾಚೆಂ ಉಧ್ಘಾಟನ್ ಕರುನ್ ಅಪ್ಲ್ಯಾ ಉಲವ್ಪಾಂತ್ ಕೊಂಕಣಿ ಯುವಜಣಾಂನಿ ಅಪ್ಲ್ಯಾ ಜಿವಿತಾಚೊ ಶೆವೊಟ್
ಸಮ್ಜುಂಚ್ಯಾಧಿಂ ಪಯ್ಲೆಂ ಆಪ್ಲೆಂ ಮೂಳ್ ಆನಿ ಅಪ್ಲೆ ಸಕ್ತೆಕ್ ಸಮ್ಜುಂಚಿ ಭೋವ್ ಚಡ್ ಗರ್ಜ್ ಆಸಾ ಮ್ಹಣಾಲೊ. ಫ್ರಾನ್ಸಿಸ್ ಫೆರ್ನಾಂಡಿಸ್
ಕಾಸ್ಸಿಯಾ, ಹೆನ್ರಿ ಡಿ’ಸೋಜ್, ಶ್ರೀ ಮಲ್ಲಿಕಾರ್ಜುನ ಕೊಲೆಜಿಚ್ಯಾ ಕೊಂಕಣಿ ವಿಭಾಗಾಒಚ್ ಮುಖೇಸ್ತ್ ದೊತೊರ್ ಪೂರ್ಣಾನಂದ ಚ್ಯಾರಿ ಮುಖೆಲ್
ಸಯ್ರೆ ಜಾವ್ನ್ ಹಾಜರ್ ಆಸ್ಲೆ. ವೆದಿಚೆರ್ ಎ.ಕೆ.ಎಸ್.ಸಂಘಟನಾಚಿ ಅಧ್ಯಕ್ಷ್ ಬಾಯ್ ಹಿಲ್ಡಾ ಪಿರೇರಾ ಹಾಜರ್ ಆಸ್ಲಿ.
ಮುಂಬಯ್ಚ್ಯಾ ಮಲಾಡ್ ಮುಳಾಚೊ ಸದ್ದ್ಯಾಕ್ ಬಾಹ್ರೇಯ್ನಾಂತ್ ವಾವ್ರ್ ಕರುನ್ ಆಸ್ಚ್ಯಾ ಸ್ಟೀವನ್ ಡಿ’ಸೋಜಾಚಿ ಸಂಗೀತ್ ಕೊವ್ಳಿ ’ಸಾಂಗಾತ್’
ಹೆಚ್ ವೆಳಾರ್ ಹೆನ್ರಿ ಡಿ’ಸೋಜ್ ಆನಿ ದೊತೊರ್ ಪೂರ್ಣಾನಂದ ಚ್ಯಾರಿ ಹಾಣಿಂ ಮೊಕ್ಳಿಕ್ ಕೆಲಿ.
’ಮುಂಬಯ್ ದರ್ಶನ್’ ಕಾರ್ಯಾಂತ್ ವಲ್ಲಿ ಕ್ವಾಡ್ರಸಾನ್ ಮುಂಬಯಾಂತ್ ಸುರು ಜಾಲ್ಲ್ಯಾ ಕೊಂಕಣಿ ಪತ್ರಿಕೋಧ್ಯಮ್, ಸಂಗೀತ್,
ರಂಗ್‌ಮಾಂಚ್, ಚಳ್ವಳೆವಿಶಿಂ ಮಟ್ವೊ ಪುಣ್ ಸವಿಸ್ತಾರ್ ಮಾಹೆತ್ ದಿವುನ್ ಮುಂಬಯಾಂತ್ ಪ್ರಸ್ತುತ್ ಕೊಂಕಣಿ ಭಾಶೆಚಿ ಪರಿಗತೆಚೆರ್ ಅಪ್ಲೆ
ವಿಚಾರ್ ಪ್ರಸ್ತುತ್ ಕೆಲೆ.
’ಕಲಾಕಾರಾಂಸವೆಂ ಸಂವಾದ್’ ಕಾರ್ಯಾಂತ್ ವಲ್ಲಿ ಕ್ವಾಡ್ರಸಾನ್ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಆನಿ ಸಂಗೀತ್ ಸಾಮ್ರಾಟ್ ಹೆನ್ರಿ ಡಿ’ಸೋಜಾಚಿ
ಸವಿಸ್ತಾರ್ ವಳೊಕ್ ಕರುನ್ ಕೊಂಕಣಿ ರಂಗ್‌ಮಾಂಚಿ ಆನಿ ಸಂಗೀತ್ ಶೆತಾಂತ್ ತಾಣಿಂ ಕೆಲ್ಲ್ಯಾ ವಾವ್ರಾಚೆರ್ ಉಜ್ವಾಡ್ ಫಾಂಕವ್ನ್ ದಿತಚ್,
ದೊತೊರ್ ಪೂರ್ಣಾದಂದ ಚ್ಯಾರಿನ್ ಸಂವಾದ್ ಚಲವ್ಮ್ ವೆಲೊ.
೨೦೦೩-೪ ಇಸ್ವೆಂತ್ ಕುವೆಯ್ಟಾಂತ್ ವಲ್ಲಿ ಕ್ವಾಡ್ರಸಾಥಾವ್ನ್ ಸುರ್ವಾತ್ ಜಾಲ್ಲ್ಯಾ ’ಕವಿತಾಪಾಠ್’ವಿಶಿಂ ಮಟ್ವೊ ವಿವರ್ ದಿಲ್ಲ್ಯಾ ರೋಯ್ಡನ್
ಮಿನೇಜಸಾನ್ ಕವಿತಾಪಾಠಾವಿಶಿಂ ತಶೆಂಚ್ ಹ್ಯಾ ಅಧ್ಯಯನ್ ಲೇಖನಾಂಕ್ ಪರ್ಗಟ್ ಕೆಲ್ಲ್ಯಾ ಬುಕಾಂವಿಶಿಂ ಮಾಹೆತ್ ಆಟಾಪ್ಚಿಂ ಪ್ರಸ್ತಾವಿಕ್ ಉತ್ರಾಂ
ಉಚಾರ್ಲಿಂ. ’ಅರುಣ್ ಸಾಖರ್‌ದಾಂಡೆ ಏಕ್ ಸಮಾಜೆಚೊ ಕವಿ, ಸಮಾಜೆಚ್ಯಾ ಎಕೆಕಾ ಮನ್ಶಾಚ್ಯಾ ನಾಡಿಂಕ್ ಪಾರ್ಕಿಲ್ಲೊ ಕವಿ. ದೆಕುನ್ ತಾಚ್ಯಾ
ಕವಿತೆಂನಿ ಸಮಾಜೆಚೆ ಆಟೆವಿಟೆ ಅಪುರ್ಭಾಯೆನ್ ಉತ್ರಾವ್ಣಿ ಕೆಲ್ಲೆಂ ದಿಸುನ್ ಯೆತಾ ಜಾಲ್ಲ್ಯಾನ್ ತೊ ಸಾಮಾನ್ಯ್ ಮನ್ಶಾಂಚೊ ಕವಿ’ ಕವಿತಾಪಾಠಾಚೆರ್
ಬಾಬ್ ಅರುಣ್ ಸಾಖರ್‌ದಾಂಡೆಚ್ಯಾ ’ಕಾವ್ಳ್ಯಾಚೆಂ ಶ್ರಾದ್ದ್’ ತಶೆಂಚ್ ’ಮೋಗ್ ಕಿನಾರಿ’ ಕವಿತಾಜಮ್ಯಾಂತ್ಲ್ಯಾ ವಿಂಚ್ಣಾರ್ ಕವಿತೆಂಕ್ ವಿಂಚುನ್
ವಲ್ಲಿ ಕ್ವಾಡ್ರಸಾನ್ ಬರಯಿಲ್ಲೆಂ ಅಧ್ಯಯನ್ ಲೇಖನ್ ಬಾಯ್ ಲಿನೆಟ್ ಡಿ’ಸೋಜಾನ್ ವಾಚುನ್ ಸಾಂಗ್ಲೆಂ.
"ಎಕಾ ಕವಿಚಿ ಮುಳಾವಿ ಅರ್ಹತಾ ಜಾವ್ನಾಸಾ ’ಸಂವೇದನ್‌ಶೀಲತಾ’, ಆನಿ ಸಂವೇದನ್‌ಶೀಲತಾ ನಾತ್‌ಲ್ಲೊ ಕೊಣ್‌ಯೀ ಸಾಹಿತ್‌ಕಾರ್
ಜಾಂವ್ಕ್ ಫಾವೊ ನ್ಹಯ್, ಪ್ರತ್ಯೇಕ್‌ಪಣಿಂ ಕವಿ. ಕವಿಗೋಶ್ಟಿಚೆಂ ಅಧ್ಯಕ್ಷ್‌ಪಣ್ ಘೆತ್‌ಲ್ಲ್ಯಾ ಬಾಬ್ ಶಯ್ಲೇಂದ್ರ ಮೆಹ್ತಾನ್ ಅಪ್ಲೆ ವಿಚಾರ್
ವೆಕ್ತ್ ಕರುನ್ ಕವಿಗೋಶ್ಟಿಚಿ ಸುರ್ವಾತ್ ಕರುನ್ ಚಾ.ಫ್ರಾ.ದೆ’ಕೊಸ್ತಾಚ್ಯಾ ಕವಿತೆಚೆಂ ಸಾದರೀಕರಣ್ ಕೆಲೆಂ ತರ್ ದೊತೊರ್ ಪೂರ್ಣಾನಂದ ಚ್ಯಾರಿನ್
ಬಾಬ್ ಅರುಣ್ ಸಾಖರ್‌ದಾಂಡೆಚ್ಯಾ ಆನಿ ಹೆರಾಂಚ್ಯಾ ಕವಿತೆಂಚೆರ್ ತಶೆಂಚ್ ಗಾಣಾಂಚೆರ್ ಉಲಯ್ಲೊ. ಗೊಂಯ್ಚ್ಯಾ ಬಾಭು ವೆಳಿಪಾನ್ ಆನಿ
ದೊತೊರ್ ಮಿತಿಲ್ ಪಾಲ್‌ದೇಸಾಯ್ ಹಾಣಿಂ ಆಪ್ಲಿಂ ಕವಿತಾ ವಾಚ್ಲಿಂ, ಶಾರಲ್ ಡಿ’ಸೋಜಾನ್ ವಲ್ಲಿ ಕ್ವಾಡ್ರಸಾಚ್ಯಾ ’ಬಜಾರ್’
ಕವಿತಾಜಮ್ಯಾಂತ್ಲಿ ’ಪಯ್ಸ್ ಪಯ್ಸ್’ ಕವಿತಾ ಸಾದರ್ ಕೆಲಿ.
ಸಂಪ್ಣೆಚ್ಯಾ ಕಾರ್ಯಾಂತ್ ಅವ್ರೇಲಿಯಸ್ ಪಿರೇರಾ, ಜೇಮ್ಸ್ ಡಿ’ಸೋಜ್, ಶಯ್ಲೇಂದ್ರ ಮೆಹ್ತಾ, ದೊತೊರ್ ಪೂರ್ಣಾನಂದ ಚ್ಯಾರಿ ವೆದಿಚೆರ್
ಹಾಜರ್ ಆಸ್ಲೆ. 2019 ಇಸ್ವೆಚ್ಯಾ ಸಪ್ತೆಂಬ್ರ್ ಮಯ್ನ್ಯಾಂತ್ ಮುಂಬಯಾಂತ್ ವೆವೆಗ್ಳ್ಯಾ ಪ್ರಾಂತ್ಯಾಂನಿ ಚಲ್‌ಲ್ಲ್ಯಾ ಕೊಂಕಣಿ ಕವಿತಾ ಸಾದರ್
ಸರ್ತೆಂತ್ ವಾಂಟೊ ಘೆತ್‌ಲ್ಲ್ಯಾ ಸಮೇಸ್ತಾಂಕ್ ಶಿಫಾರಸ್ ಪತ್ರಾಂ ವಾಂಟ್ಲಿಂ. ತಶೆಂಚ್ ಯುವಸಹಮಿಲನಾಂತ್ ಭಾಗ್ ಘೆತ್‌ಲ್ಲ್ಯಾ ಸಮೇಸ್ತಾಂಕ್
ಶಿಫಾರಸ್ ಪತ್ರ್ ಆನಿ ಇನಾಮಾಂ ವಾಂಟ್ಲಿಂ. ಸಹಮಿಲನಾಚ್ಯಾ ಸಂಯೋಜಕಾನ್ ವಲ್ಲಿ ಪಾಯ್ಸಾನ್ ಧಿನ್ವಾಸ್ ಪಾಟಯ್ಲೆ.
ಶಾರಲ್ ಡಿ’ಸೋಜ್ ಕಾಂದಿವಲಿ ಆನಿ ರೋಯ್ಡನ್ ಮಿನೇಜಸ್ ಜೆರಿಮೆರಿ ಹಾಣಿಂ ಕಾರ್ಯಾಚೆಂ ಸುಂಕಾಣ್ ಘೆತ್ಲೆಂ.

 

मुंबयांत अंतर राज्य कोंकणी युवसम्मेळ

(कांदिवली, मुंबय) १ दिसेंबर: पयलें अंतर राज्य कोंकणी युवसहमिलनांत गोंयचे तशेंच मुंबयचे युवजण
दसेंबर १ तारिकेर आयतारा कांदिवलिच्या असंपशन इगर्जेच्या सभासालांत आशावादी प्रकाशन आनी श्री
मल्लिकार्जून कोलेजीन असंपशन कोंकणी संघटनाच्या मजतेन मांडून हाडलें. कवितापाठ – एक अध्ययन,
मुंबय दर्शन – मुंबय कोंकणिविशीं एक मटवी झळक, शयलेंद्र मेहताच्या अध्यक्ष‌पणाखाल कोंकणी
कविगोश्टी, तशेंच रंग‌मांची आनी संगीत शेतांत महत्वाचो वावर केल्ल्या मानेसत फ्रान्सीस फेर्नांडीस
कास्सिया तशेंच संगीत साम्राट हेनरी डी’सोजासवें संवाद काऱ्यें, आनी ’सांगात’ कोंकणी संगीत कोवळेचें
मोकळीक काऱ्यें ह्या सहमिलनाचो वांटो जावनासलो.
प्रशांत पिरेरान ह्या काऱ्याचें उधघाटन करून अपल्या उलवपांत कोंकणी युवजणांनी अपल्या जिविताचो
शेवोट समजुंच्याधीं पयलें आपलें मूळ आनी अपले सक्तेक समजुंची भोव चड गर्ज आसा म्हणालो.
फ्रान्सीस फेर्नांडीस कास्सिया, हेनरी डी’सोज, श्री मल्लिकार्जून कोलेजिच्या कोंकणी विभागाओच मुखेसत
दोतोर पूर्णानंद च्यारी मुखेल सयरे जावन हाजर आसले. वेदिचेर ए.के.एस.संघटनाची अध्यक्ष बाय हिलडा
पिरेरा हाजर आसली.
मुंबयच्या मलाड मुळाचो सद्द्याक बाह्रेयनांत वावर करून आसच्या स्टीवन डी’सोजाची संगीत कोवळी
’सांगात’ हेच वेळार हेनरी डी’सोज आनी दोतोर पूर्णानंद च्यारी हाणीं मोकळीक केली.
’मुंबय दर्शन’ काऱ्यांत वल्ली क्वाड्रसान मुंबयांत सुरू जाल्ल्या कोंकणी पत्रिकोध्यम, संगीत, रंग‌मांच,
चळवळेविशीं मटवो पूण सविसतार माहेत दिवून मुंबयांत प्रसतूत कोंकणी भाशेची परिगतेचेर अपले विचार
प्रसतूत केले.
’कलाकारांसवें संवाद’ काऱ्यांत वल्ली क्वाड्रसान फ्रान्सीस फेर्नांडीस कास्सिया आनी संगीत साम्राट हेनरी
डी’सोजाची सविसतार वळोक करून कोंकणी रंग‌मांची आनी संगीत शेतांत ताणीं केल्ल्या वावराचेर उज्वाड
फांकवन दितच, दोतोर पूर्णादंद च्यारीन संवाद चलवम वेलो.
२००३-४ इस्वेंत कुवेयटांत वल्ली क्वाड्रसाथावन सुर्वात जाल्ल्या ’कवितापाठ’विशीं मटवो विवर दिल्ल्या
रोयडन मिनेजसान कवितापाठाविशीं तशेंच ह्या अध्ययन लेखनांक पर्गट केल्ल्या बुकांविशीं माहेत
आटापचीं प्रसतावीक उत्रां उचारलीं. ’अरूण साखर‌दांडे एक समाजेचो कवी, समाजेच्या एकेका मनशाच्या
नाडिंक पार्किल्लो कवी. देकून ताच्या कवितेंनी समाजेचे आटेविटे अपुर्भायेन उत्रावणी केल्लें दिसून येता

जाल्ल्यान तो सामान्य मनशांचो कवी’ कवितापाठाचेर बाब अरूण साखर‌दांडेच्या ’कावळ्याचें श्राद्द’ तशेंच
’मोग किनारी’ कविताजम्यांतल्या विंचणार कवितेंक विंचून वल्ली क्वाड्रसान बरयिल्लें अध्ययन लेखन बाय
लिनेट डी’सोजान वाचून सांगलें.
"एका कविची मुळावी अऱ्हता जावनासा ’संवेदन‌शीलता’, आनी संवेदन‌शीलता नात‌ल्लो कोण‌यी
साहीत‌कार जावंक फावो न्हय, प्रत्येक‌पणीं कवी. कविगोश्टिचें अध्यक्ष‌पण घेत‌ल्ल्या बाब शयलेंद्र
मेहतान अपले विचार वेक्त करून कविगोश्टिची सुर्वात करून चा.फ्रा.दे’कोसताच्या कवितेचें सादरीकरण
केलें तर दोतोर पूर्णानंद च्यारीन बाब अरूण साखर‌दांडेच्या आनी हेरांच्या कवितेंचेर तशेंच गाणांचेर
उलयलो. गोंयच्या बाभू वेळिपान आनी दोतोर मितील पाल‌देसाय हाणीं आपलीं कविता वाचलीं, शारल
डी’सोजान वल्ली क्वाड्रसाच्या ’बजार’ कविताजम्यांतली ’पयस पयस’ कविता सादर केली.
संपणेच्या काऱ्यांत अवरेलियस पिरेरा, जेम्स डी’सोज, शयलेंद्र मेहता, दोतोर पूर्णानंद च्यारी वेदिचेर हाजर
आसले. २०१९ इस्वेच्या सप्तेंबर मयन्यांत मुंबयांत वेवेगळ्या प्रांत्यांनी चल‌ल्ल्या कोंकणी कविता सादर
सर्तेंत वांटो घेत‌ल्ल्या समेसतांक शिफारस पत्रां वांटलीं. तशेंच युवसहमिलनांत भाग घेत‌ल्ल्या समेसतांक
शिफारस पत्र आनी इनामां वांटलीं. सहमिलनाच्या संयोजकान वल्ली पायसान धिन्वास पाटयले.
शारल डी’सोज कांदिवली आनी रोयडन मिनेजस जेरिमेरी हाणीं काऱ्याचें सुंकाण घेतलें.

ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಕುಂದಾಪುರ ಇವರಿಂದ ಶಾಸ್ತ್ರಿ ವ್ರತ್ತದದಲ್ಲಿ ಬ್ರಹತ್ ಹೋರಾಟ ಸಭೆ

JANANUDI.COM NETWORK

 

ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಕುಂದಾಪುರ ಇವರಿಂದ ಶಾಸ್ತ್ರಿ ವ್ರತ್ತದದಲ್ಲಿ ಬ್ರಹತ್ ಹೋರಾಟ ಸಭೆ 

 

ಕುಂದಾಪುರ, ನ.3. ರಾಷ್ಟ್ರೀಯ ಹೆದ್ದಾರಿ ಪೂರ್ತಿ ಗೊಳಿಸುವ ಸಮಯ ಎಷ್ಟೊ ದಾಟಿ ವರ್ಷಗಳೇ ಕಳೆದರೂ ಇನ್ನೂ ಕೂಡ ಪೂರ್ಣಗೊಳ್ಳದೆ, ಆಮೆ ಗತಿಯಲ್ಲಿ ನಡೆಯುವ ಕಾರಣ ಹಮ್ಮಿಕೊಂಡಿದ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಕುಂದಾಪುರ ಇವರಿಂದ ಶಾಸ್ತ್ರಿ ವ್ರತ್ತದದಲ್ಲಿ ಬ್ರಹತ್ ಹೋರಾಟ ಸಭೆ ಯಶಸ್ವಿಯಾಗಿ ನಡೆಯಿತು. ಈ ಹೋರಾಟದಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಕುಂದಾಪುರ ಇದರ ಅಧ್ಯಕ್ಷ ಸೋಮಶೇಖರ್ ಶೆಟ್ಟಿ, ಹೋರಾಟ ಸಮಿತಿಯ ಬಿ,ಕೆ ಕೀಶೊರ್, ಸಿ.ಪಿಎಮ್. ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಅಧ್ಯಕ್ಷ ಪ್ರತಾಪ್ ಶೆಟ್ಟಿ ವಕೀಲರಾದ ಗೋಪಾಲ್ ಕ್ರಷ್ಣ ಶೆಟ್ಟಿ, ಎ.ಎಸ್.ಎನ್ ಹೆಬ್ಬಾರ್, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ  ಶಶಿಧರ್ ಹೆಮ್ಮಾಡಿ ಮುತಾಂದವರು ಹೆದ್ದಾರಿ ಮತ್ತು ಪ್ಲೈ ಒವರ್ ಆಗದ ಇದ್ದಕ್ಕೆ ವಿರೋಧ ವ್ಯಕ್ತ ಪಡಿಸಿದರು. ಹೆದ್ದಾರಿ ಅಸಮರ್ಕವಾಗಿ ನಡೆಯುತ್ತಿದ್ದರಿಂದ ನೂರಾರು ಜನರ ಪ್ರಾಣ ಹೋಗಿದೆ, ಎಷ್ಟೊ ಜನರಿಗೆ ಇದರಿಂದ ಅನಾನುಕೂಲವಾಗಿದೆಯೆಂದು ತಿಳಿಸಿ ಬಹು ಬೇಗನೇ ಕಾಮಾಗಾರಿ ಪೂರ್ಣಗೊಳ್ಳ ಬೇಕೆಂದು ಆಗ್ರಹಿಸಿದರು. ಹೋರಾಟದ ಸುದ್ದಿ ತಿಳಿದು ಮಾಜಿ ಸಂಸದ ಜಯಪ್ರಕಾಶ್ ಶೆಟ್ಟಿ ಆಗಮಿಸಿ, ಹೆದ್ದಾರಿಯ ಕಾಮಾಗಾರಿಯ ವಿವರ ನೀಡಿ, ಇದರ ಬಗ್ಗೆ ಮಾತನಾಡಲು ದೆಹಲಿಗೆ ತೆರೆಳೋಣ ಎಂದು ಸಲಹೆ ನೀಡಿದರು. ಸಂಬಂಧ ಪಟ್ಟ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಯವರು ಬರದೆ ಇದ್ದರೆ ರಸ್ತೆ ತಡೆ ನಡೆಸಲಾಗುವುದೆಂದು ಆಗ್ರಹಿಸಿದಾಗ. ನವಯುಗ ಕಂಪೆನಿಯ ಇಂಜಿನಿಯರ್ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಯವರು ಬಂದು ಮಾರ್ಚ್ 30 ರೊಳಗೆ ಕಾಮಾಗಾರಿಯನ್ನು ಪೂರ್ತಿಗೊಳಿಸುತ್ತೇವೆಂದು ಸ್ರಷ್ಟಿಕರಣ ನೀಡಿದರು. ಆ ಬಳಿಕ ಸಭೆ ಮುಂದೆ ಗಡವು ಕೊಟ್ಟ ಸಮಯದಲ್ಲಿ ಕಾಮಾಗಾರಿ ಪೂರ್ಣಗೊಳಿಸದಿದ್ದಲ್ಲಿ ಉಗ್ರ ಹೋರಾಟ ಮಾಡುತ್ತೇವೆಯೆಂದು ತಿರ್ಮಾನ ತಗೆದುಕೊಂಡಿತು, ಸಹಾಯಕ ಕಮಿಶನರ್ ಆಗಮಿಸಿ ವಾರಕ್ಕೊಂದು ಭಾರಿ ಕಾಮಾಗಾರಿಯ ಪ್ರಗತಿಯ ಬಗ್ಗೆ ನವಯುಗ ಕಂಪೆನಿ ನನಗೆ ವರದಿಯನ್ನು ನೀಡಬೇಕೆಂದು ಆದೇಶಿಸಿದರು. ಪೊಲೀಸ್ ಇಲಾಖೆಯ ಪ್ರಕಾರ ವರ್ಷಕ್ಕೆ 100 ಅಪಘಾತಗಳಾಗುತ್ತವೆ, ಸುಮಾರು 10 ಜನ ಸಾಯುತಿದ್ದಾರೆ, 80 % ಜನ ಗಂಭೀರ ಘಾಯಗಳಾಗಿ ಜೀವನವಿಡಿ ಘಾಷಿಗೊಳ್ಳುತ್ತಾರೆಂದು ಹೋರಾಟ ಸಮಿತಿ ಹೇಳಿತು.

   ರಾಷ್ಠ್ರೀಯ ಹೆದ್ದಾರಿ ಹೋರಾಟ ಸಮಿತಿ ಕುಂದಾಪುರದ ಸದಸ್ಯ ರಾಜೇಶ್ ಕಾವೇರಿ ಕಾರ್ಯಕ್ರಮ ನಿರೂಪಿಸಿದರು

ಶ್ರೀನಿವಾಸಪುರದಲ್ಲಿ ಜಿಲ್ಲಾ ಕನ್ನಡಸಿರಿ ಸಾಹಿತ್ಯ ಪರಿಷತ್ತಿನ  ವರ್ಷದ ಅವಲೋಕನ ಕಾರ್ಯಕ್ರಮ ಪ.ಪೂ. ಕಾ.ಕನ್ನಡ ಉಪನ್ಯಾಸಕರ ವೇದಿಕೆ ಜಿಲ್ಲಾಧ್ಯಕ್ಷ ಜೆ.ಜಿ.ನಾಗರಾಜ್‌ ಉದ್ಘಾಟಿಸಿ ಮಾತನಾಡಿದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

ಶ್ರೀನಿವಾಸಪುರದಲ್ಲಿ ಜಿಲ್ಲಾ ಕನ್ನಡಸಿರಿ ಸಾಹಿತ್ಯ ಪರಿಷತ್ತಿನ  ವರ್ಷದ ಅವಲೋಕನ ಕಾರ್ಯಕ್ರಮ ಪ.ಪೂ. ಕಾ.ಕನ್ನಡ ಉಪನ್ಯಾಸಕರ ವೇದಿಕೆ ಜಿಲ್ಲಾಧ್ಯಕ್ಷ ಜೆ.ಜಿ.ನಾಗರಾಜ್‌ ಉದ್ಘಾಟಿಸಿ ಮಾತನಾಡಿದರು.

 

 

ಶ್ರೀನಿವಾಸಪುರ: ಜನರು ನಾಡ ಗೀತೆ ಹಾಗೂ ರಾಷ್ಟ್ರ ಗೀತೆಯ ಆಶಯಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ವೇದಿಕೆಯ ಜಿಲ್ಲಾಧ್ಯಕ್ಷ ಜೆ.ಜಿ.ನಾಗರಾಜ್‌ ಹೇಳಿದರು.

  ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ  ಜಿಲ್ಲಾ ಕನ್ನಡಸಿರಿ ಸಾಹಿತ್ಯ ಪರಿಷತ್ತಿನ ವತಿಯಿಂದ ಶನಿವಾರ ಏರ್ಪಡಿಸಿದ್ದ ಪರಿಷತ್ತಿನ ವರ್ಷದ ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಡಗೀತೆಯಲ್ಲಿ ಪ್ರತಿ ದಿನ ಸರ್ವ ಜನಾಂಗದ ಸುಂದರ ತೋಟ ಎಂದು ಹಾಡುವ ನಾವು, ಎಲ್ಲರಲ್ಲೂ ಪ್ರೀತಿಯನ್ನು ಕಾಣುತ್ತೇವೆ. ಇದು ಸಮರಸದ ಜೀವನಕ್ಕೆ ಅತ್ಯಗತ್ಯ ಎಂದು ಹೇಳಿದರು.

    ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಶೇ.27 ರಷ್ಟು ಕನ್ನಡಿಗರಿದ್ದಾರೆ. ಸರ್ಕಾರ ಕನ್ನಡ ಶಾಲೆಗಳ ಅಭಿವೃದ್ಧಿಗೆ ಇನ್ನಷ್ಟು ಗಮನ ನೀಡಬೇಕು. ಮಕ್ಕಳು ಸರ್ಕಾರಿ ಶಾಲೆ ಸೇರುವಂಥ ವಾತಾವರಣ ನಿರ್ಮಾಣ ಮಾಡಬೇಕು. ಸರ್ಕಾರ ಹಾಗೂ ಕನ್ನಡ ಪರ ಸಂಘಟನೆಗಳು ನಾಡು ನುಡಿಯ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಹೇಳಿದರು.

  ಕನ್ನಡ ಸಿರಿ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಕೆ.ನರಸಿಂಹಮೂರ್ತಿ ಆಶಯ ಭಾಷಣ ಮಾಡಿದರು. ವಿಜ್ಞಾನ ಲೇಖಕ ಎಚ್‌.ಎನ್‌.ಪುರುಷೋತ್ತಮರಾವ್‌ ಕನ್ನಡ ಭಾಷೆಯ ಸಮಸ್ಯೆಗಳು ಎಂಬ ವಿಷಯದ ಬಗ್ಗೆ ಮಾತನಾಡಿದರು. ಕನ್ನಡ ಸಿರಿ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಖಜಾಂಚಿ ಕೆ.ಎನ್‌.ಪರಮೇಶ್ವರನ್‌ ಕನ್ನಡ ಅಂದು, ಇಂದು, ಮುಂದೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾಧ್ಯಕ್ಷ ಟಿ.ಸುಬ್ಬರಾಮಯ್ಯ ಪರಿಷತ್ತಿನ ಸಾಧನೆ ಕುರಿತು ಮಾತನಾಡಿದರು.

  ಕಾಲೇಜಿನ ಪ್ರಾಂಶುಪಾಲ ಎಂ.ನಾರಾಯಣಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಪರ ಸಂಘಟನೆಗಳು ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಬೇಕು. ನಾಡು ನುಡಿ ಸೇವೆಯಲ್ಲಿ ತೊಡಗಬೇಕು. ಸಮಾಜಕ್ಕೆ ನೀಡುವ ಕೊಡುಗೆ ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳಿದರು.

  ತಾಲ್ಲೂಕು ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಎನ್‌.ಮುನಿವೆಂಕಟೇಗೌಡ, ಭಾರತ ಸೇವಾ ದಳದ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಆರ್‌.ರವಿಕುಮಾರ್‌, ಪ್ರಾಂಶುಪಾಲ ಶ್ರೀನಿವಾಸಯ್ಯ, ಜನಪದ ಗಾಯಕ ದೊಡಮಲದೊಡ್ಡಿ ನಾರಾಯಣಸ್ವಾಮಿ, ದಲಿತ ಮುಖಂಡ ಕೂಸಂದ್ರ ರೆಡ್ಡಪ್ಪ, ಕರ್ನಾಟಕ ರಕ್ಷಣಾ ವೇದಿಕೆಯ , ಹರೀಶ್‌, ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಎಂ.ಚಂದ್ರಶೇಖರ್‌ ಇದ್ದರು.

ಮೂಲ ಸಾಕ್ಷರತಾ ಬೋಧಕರಿಗೆಗೌರವಧನ ವಿತರಣೆ

 

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

ಮೂಲ ಸಾಕ್ಷರತಾ ಬೋಧಕರಿಗೆಗೌರವಧನ ವಿತರಣೆ

 

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ ಬಿ.ಸಿ. ಟ್ರಸ್ಟ್ (ರಿ) ಮತ್ತುಜಿಲ್ಲಾ ಪಂಚಾಯತ್‍ನ ಮೂಲಕ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ನಡೆದ 2018-19ನೇ ಸಾಲಿನ ಮೂಲ ಸಾಕ್ಷರತಾಕಾರ್ಯಕ್ರಮದ ಲಿಂಕ್‍ಡಾಕ್ಯುಮೆಂಟ್‍ ಅನುದಾನದಡಿಯಲ್ಲಿಕರ್ತವ್ಯ ನಿರ್ವಹಿಸಿದ ಬೋಧಕರುಗಳಿಗೆ ಗೌರವಧನವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯಜಿಲ್ಲಾ ಸಮನ್ವಯಾಧಿಕಾರಿಯಾದ ಶ್ರೀ ಶಿವಕುಮಾರ್.ಸಿ.ಕೆ. ರವರು ನೀಡಿದರು.ಈ ಕಾರ್ಯಕ್ರಮದಲ್ಲಿಮಾನ್ಯ ಯೋಜನಾಧಿಕಾರಿಗಳು ಸುರೇಶ್‍ಗೌಡಎಸ್,ಕಛೇರಿಯ ಪ್ರಬಂಧಕರಾದದತ್ತಾತ್ರೇಯಟಿ.ಕೆ ಹಾಗೂ ಜ್ಞಾನವಿಕಾಸ ಸಮನ್ವಯಾಧಿಕಾರಿಯಾದಈರಮ್ಮ ನಾಗರಾಳ ರವರುಉಪಸ್ಥಿತರಿದ್ದರು.