HOLY ROSARY CHURCH, KUNDAPUR – 450 th JUBILEE SOUVENIR 2021

ಮಂಗಳೂರಿನಲ್ಲಿ  ಪ್ರತಿಭಟನೆಯ ಗೋಳಿಬಾರ್ ನಲ್ಲಿ  ಮೃತಪಟ್ಟುಪಟ್ಟವರ ಕುಟುಂಬಕ್ಕೆ, ಘಾಯಾಉಗಳಿಗೆ ಸಾಂತ್ವನ ಹೇಳಲು ಹೋರಟ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಕಾಂಗ್ರೇಸ್ ಮುಖಂಡರನ್ನು ವಿಮಾನ ನಿಲ್ದಾಣದಲ್ಲಿ ಬಂದಿಸಿದಕ್ಕೆ ಪ್ರತಿಭಟನೆ.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

ಮಂಗಳೂರಿನಲ್ಲಿ  ಪ್ರತಿಭಟನೆಯ ಗೋಳಿಬಾರ್ ನಲ್ಲಿ  ಮೃತಪಟ್ಟುಪಟ್ಟವರ ಕುಟುಂಬಕ್ಕೆ, ಘಾಯಾಉಗಳಿಗೆ ಸಾಂತ್ವನ ಹೇಳಲು ಹೋರಟ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಕಾಂಗ್ರೇಸ್ ಮುಖಂಡರನ್ನು ವಿಮಾನ ನಿಲ್ದಾಣದಲ್ಲಿ ಬಂದಿಸಿದಕ್ಕೆ ಪ್ರತಿಭಟನೆ.

 

 

ಶ್ರೀನಿವಾಸಪುರ – ಡಿಸೆಂಬರ್ 20 ಪೌರತ್ವವನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆಯಲ್ಲಿ ಇಬ್ಬರು ಮೃತಪಟ್ಟು ಹಲವಾರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವವರ ಯೋಗಕ್ಷೇಮವನ್ನು ವಿಚಾರಿಸಲು ಹೋಗುತ್ತಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಕಾಂಗ್ರೇಸ್ ಮುಖಂಡರನ್ನು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಂದಿಸಿರುವುದನ್ನು ಖಂಡಿಸಿ ಶ್ರೀನಿವಾಸಪುರ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಬಸ್ ನಿಲ್ದಾಣದ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದಲ್ಲಿ 144 ಸೆಕ್ಷನ್ ಜಾರಿ ಇದ್ದರೂ ಪ್ರತಿಭಟನೆ ನಡೆಸಿದ ಕಾಂಗ್ರೇಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು. ಪ್ರತಿಭಟನಾಕಾರನ್ನು ಉದ್ದೇಶಿಸಿ ಮಾತನಾಡಿದ ಪಿ.ಎಲ್.ಡಿ. ಬ್ಯಾಂಕ್ ಅದ್ಯಕ್ಷ ದಿಂಬಾಲ ಅಶೋಕ್ ಪ್ರತಿಭಟನೆ ನಡೆಸುವುದು ಸಾರ್ವಜನಿಕರ ಹಕ್ಕು ವಿನಾಕಾರಣ ಪೊಲೀಸರು 144 ಸೆಕ್ಷನ್‌ನನ್ನು ಜಾರಿಗೊಳಿಸಿ ಮೌನವಾಗಿ ಪ್ರತಿಭಟನೆ ನಡೆಸುವವರ ಮೇಲೆ ಹಲ್ಲೆ ನಡೆಸಿ ಮನಬಂದAತೆ ಗುಂಡು ಹಾರಿಸಿದ ಹಿನ್ನಲೆಯಲ್ಲಿ ಇಬ್ಬರು ಮೃತಪಟ್ಟು ಅನೇಕರು ಗಾಯಗೊಂಡು ಅಸ್ಪತ್ರೆಗೆ ದಾಖಲಾಗಿದ್ದಾರೆ.

ಮುಖಂಡರು ಎನಿಸಿಕೊಂಡವರು ಅವರ ಯೋಗಕ್ಷೇಮವನ್ನು ವಿಚಾರಿಸುವುದು ಅವರ ಕರ್ತವ್ಯ ಅದಕ್ಕಾಗಿ ಮಂಗಳೂರಿಗೆ ಹೋಗಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಅವರನ್ನು ಬಂಧಿಸಿರುವುದು ಬಿ.ಜೆ.ಪಿ. ಸರ್ಕಾರದ ತೊಘಲಕ್ ದರ್ಬಾರವಾಗಿದೆ. ಹೀಗೆಯೇ ಗಲಭೆಗಳು ಮುಂದುವರೆದರೆ ಅದಕ್ಕೆ ಸರ್ಕಾರ ಹಾಗೂ ಪೊಲೀಸರೆ ಹೊಣೆಗಾರರಾಗುತ್ತಾರೆ. ಮೌನವಾಗಿ ಪ್ರತಿಭಟನೆ ನಡೆಸುವುದಕ್ಕೆ ಯಾಕೆ ಅವಕಾಶ ನೀಡಬಾರದು ಪ್ರತಿಭಟನೆಯ ಹಕ್ಕನ್ನು ಮೊಟಕುಗೊಳಿಸುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ರಾಯಲ್ಪಾಡು ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಸಂಜಯ್‌ರೆಡ್ಡಿ ಮಾತನಾಡಿ ಮಂಗಳೂರಿನ ಗಲಭೆಗೆ ಕಾಂಗ್ರೇಸ್ ಕಾರಣ ಹಾಗೂ ಕಾಂಗ್ರೇಸ್ ಪಕ್ಷವನ್ನು ಭಯೋತ್ಪಾದನೆಗೆ ಹೋಲಿಸಿರುವ ಬಿ.ಜೆ.ಪಿ. ಶಾಸಕ ರೇಣುಕಾಚಾರ್ಯರವರ ಹೇಳಿಕೆಯನ್ನು ಖಂಡಿಸಿ ಕಾಂಗ್ರೇಸ್ ಪಕ್ಷಕ್ಕೆ ಇತಿಹಾಸ ಇದೆ. ಎಲ್ಲ ಮತೀಯರನ್ನು ಗೌರವಿಸುವ ಏಕೈಕ ಪಕ್ಷ ಕಾಂಗ್ರೇಸ್. ರೇಣುಕಾಚಾರ್ಯರವರಿಗೆ ನರ್ಸ್ ಕೇಸ್ ಸಾಕ್ಷಿ ಅಂತಹವರಿAದ ಕಾಂಗ್ರೇಸ್ ಪಕ್ಷ ಕಲಿಯಬೇಕಾಗಿಲ್ಲ ನಾಲಿಗೆ ಬಿಗಿ ಹಿಡಿದು ಮಾತನಾಡುವುದನ್ನು ರೇಣುಕಾಚಾರ್ಯ ಕಲಿಯಬೇಕು ಎಂದು ಒತ್ತಾಯಿಸಿದರು.

ಈ ಸಂಧರ್ಭದಲ್ಲಿ ಕಾಂಗ್ರೇಸ್ ಮುಖಂಡರಾದ ಸೋಮಯಾಜಪಲ್ಲಿ ಮಂಜುನಾಥರೆಡ್ಡಿ, ವಿ. ಅಯ್ಯಪ್ಪ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಆಲಂಬಗಿರಿ ಮನೋಹರ್, ಕೆ.ಕೆ. ಮಂಜುನಾಥರೆಡ್ಡಿ, ಪಾಳ್ಯಗೋಪಾಲ್‌ರೆಡ್ಡಿ, ಕಲ್ಲೂರು ವೆಂಕಟರೆಡ್ಡಿ, ಜಾಮಶೆಟ್ಲು ಶ್ರೀನಿವಾಸರೆಡ್ಡಿ, ಗಂಗಾಧರ್, ವರ್ತನಹಳ್ಳಿ ವೆಂಕಟೇಶ್, ಈರಪ್ಪ, ವೆಂಕಟಮ್ಮ ಸೇರಿದಂತೆ 500ಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಕುಂದಾಪುರ: ರೆಡ್‌ಕ್ರಾಸ್‌ಎನ್ನುವುದು ಸೇವೆಗಾಗಿಯೇಇರುವ ಸಂಸ್ಥೆ. ಸೇವೆಯೇ ಅದರ ಮೂಲ ಧ್ಯೇಯಎಂದು ಕು0ದಾಪುರತಾಲೂಕಾ ಉಪವಿಭಾಗಾಧಿಕಾರಿ ರಾಜು ಕೆ. ಅಭಿಪ್ರಾಯಪಟ್ಟರು.

JANANUDI.COM NETWORK 

 

 

ಕುಂದಾಪುರ: ರೆಡ್‌ಕ್ರಾಸ್‌ಎನ್ನುವುದು ಸೇವೆಗಾಗಿಯೇಇರುವ ಸಂಸ್ಥೆ. ಸೇವೆಯೇ ಅದರ ಮೂಲ ಧ್ಯೇಯಎಂದು ಕು0ದಾಪುರತಾಲೂಕಾ ಉಪವಿಭಾಗಾಧಿಕಾರಿ ರಾಜು ಕೆ. ಅಭಿಪ್ರಾಯಪಟ್ಟರು.

 

ಅವರುಡಿಸೆಂಬರ್ ೨ರಂದು ಇಲ್ಲಿನ ಭಂಡಾಕಾರ‍್ಸ್ಕಾಲೇಜಿನಲ್ಲಿಯುಥ್‌ರೆಡ್‌ಕ್ರಾಸ್ ವಿಂಗ್, ಇಂಡಿಯನ್‌ರೆಡ್‌ಕ್ರಾಸ್ ಸೊಸೈಟಿಉಡುಪಿ ವಿಬಾಗ ಮತ್ತುಇಂಡಿಯನ್‌ರೆಡ್‌ಕ್ರಾಸ್ ಸೊಸೈಟಿ, ಕುಂದಾಪುರತಾಲೂಕುಅವರ ಸಹಯೋಗದಲ್ಲಿ“ಸಾಮಾಜಿಕ ತುರ್ತುಪರಿಸ್ಥಿತಿಯಲ್ಲಿ ಸ್ವಯಂಸೇವಕರಜವಾಬ್ದಾರಿ”ಕುರಿತುಎರಡು ದಿನಗಳ ಕಾಲ ನಡೆಯಲಿರುವತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವಕರನ್ನು ಗಮನಿಸಿದರೆ ತುಂಬಾ ಸಂತೋಷವಾಗುತ್ತದೆ. ಅವರಲ್ಲಿನಆತ್ಮವಿಶ್ವಾಸ, ಸೇವಾ ಮನೋಭಾವಗಳು ನಿಜಕ್ಕೂ ಶ್ಲಾಘನೀಯಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಭಂಡಾಕಾರ‍್ಸ್ಕಾಲೇಜಿನ ಪ್ರಾಂಶುಪಾಲರಾದಡಾ.ಎನ್.ಪಿ.ನಾರಾಯಣ ಶೆಟ್ಟಿ ಮಾತನಾಡಿ ನಮ್ಮ ಮುಂದೆ ಜವಾಬ್ದಾರಿಗಳಿವೆ. ಅದನ್ನುಅರಿಯಬೇಕು. ಅಲ್ಲದೇ ವಿಶೇಷ ಸಂದರ್ಭಗಳಲ್ಲಿ ನಮ್ಮ ಜವಾಬ್ದಾರಿಗಳನ್ನು ಅರಿತು ಮುನ್ನಡೆಯಬೇಕುಎಂದು ಹೇಳಿದರು.
ಕಾರ್ಯಕ್ರಮದಅಧ್ಯಕ್ಷತೆಯನ್ನುಇಂಡಿಯನ್‌ರೆಡ್‌ಕ್ರಾಸ್ ಸೊಸೈಟಿ, ಕುಂದಾಪುರತಾಲೂಕುಘಟಕದಅಧ್ಯಕ್ಷರಾದಎಸ್.ಜಯಕರ ಶೆಟ್ಟಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿಇಂಡಿಯನ್‌ರೆಡ್‌ಕ್ರಾಸ್ ಸೊಸೈಟಿ, ಕುಂದಾಪುರತಾಲೂಕುಘಟಕದ ಕಾರ್ಯದರ್ಶಿಗಳಾದ ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಸಂಯೋಜಕರಾದ ಮುತ್ತಯ್ಯ ಶೆಟ್ಟಿ, ಸಂಪನ್ಮೂಲ ವ್ಯಕ್ತಿಗಳಾದ ಶಕೀಬ್ ಎಂ.ಎ, ಎಸ್.ಇ.ಆರ್.ವಿ ತರಬೇತುದಾರ, ಬಳ್ಳಾರಿ, ಮತ್ತುಡಾ.ಕೀರ್ತಿಪಾಲನ್ , ಎಸ್.ಇ.ಆರ್.ವಿ ತರಬೇತುದಾರಡಾ. ಮಲ್ಲಿ, ಗಣೇಶ್‌ಆಚಾರ್ ಉಪಸ್ಥಿತರಿದ್ದರು.
ಇಂಡಿಯನ್‌ರೆಡ್‌ಕ್ರಾಸ್ ಸೊಸೈಟಿ, ಕುಂದಾಪುರತಾಲೂಕುಘಟಕದಉಪಾಧ್ಯಕ್ಷರಾದಡಾ.ಉಮೇಶ್ ಪುತ್ರನ್ ಸ್ವಾಗತಿಸಿದರು. ಕಾಲೇಜಿನಯುಥ್‌ರೆಡ್‌ಕ್ರಾಸ್ ವಿಂಗ್‌ನಕಾರ್ಯಕ್ರಮಾಧಿಕಾರಿಯಾದ ಪ್ರೊ.ಸತ್ಯನಾರಾಯಣ ವಂದಿಸಿದರು. ಕಾಲೇಜಿನಯುಥ್‌ರೆಡ್‌ಕ್ರಾಸ್ ವಿಂಗ್‌ನಕಾರ್ಯಕ್ರಮಾಧಿಕಾರಿಣಿಯಾದ ವಿದ್ಯಾರಾಣಿಕಾರ್ಯಕ್ರಮ ನಿರ್ವಹಿಸಿದರು.

ಭಂಡಾಕಾರ್ಸ್ ಕಾಲೇಜಿನಲ್ಲಿ ಶಿಕ್ಷಕರ ಸಂಘ ಮತ್ತು ಫ್ರಾಂಕ್ಲಿನ್‌ಟೆ೦ಪಲ್ಟನ್ ಮ್ಯೂಚ್ಯುವಲ್ ಫಂಡ್‌ಇವರ ಸಹಯೋಗದಲ್ಲಿ ಬಂಡವಾಳದಾರರ ಜಾಗೃತಿಕಾರ್ಯಕ್ರಮ

JANANUDI.COM NETWORK

 

 

ಭಂಡಾಕಾರ್ಸ್ ಕಾಲೇಜಿನಲ್ಲಿ ಶಿಕ್ಷಕರ ಸಂಘ ಮತ್ತು ಫ್ರಾಂಕ್ಲಿನ್‌ಟೆ೦ಪಲ್ಟನ್ ಮ್ಯೂಚ್ಯುವಲ್ ಫಂಡ್‌ಇವರ ಸಹಯೋಗದಲ್ಲಿ ಬಂಡವಾಳದಾರರ ಜಾಗೃತಿಕಾರ್ಯಕ್ರಮ

 

 

ಕುಂದಾಪುರ: ಇತ್ತೀಚೆಗೆಕಾಲೇಜಿನ ವಾಣಿಜ್ಯ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಷಯ ಶಿಕ್ಷಕರ ಸಂಘ ಮತ್ತು ಫ್ರಾಂಕ್ಲಿನ್‌ಟೆ೦ಪಲ್ಟನ್ ಮ್ಯೂಚ್ಯುವಲ್ ಫಂಡ್‌ಇವರ ಸಹಯೋಗದಲ್ಲಿ ಬಂಡವಾಳದಾರರ ಜಾಗೃತಿಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ನಾವುಂದಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜಿ.ಎಸ್. ಹೆಗಡೆ ಬಂಡವಾಳ ಹೂಡುವಿಕೆಯ ಪ್ರಾಮುಖ್ಯತೆಯಕುರಿತು ತಿಳಿಸಿದರು. ಫ್ರಾಂಕ್ಲಿನ್‌ಟೆAಪಲ್ಟನ್ ಮ್ಯೂಚ್ಯುವಲ್ ಫಂಡ್‌ಇದರ ಬ್ರಾಂಚ್ ವ್ಯವಸ್ಥಾಪಕರಾದ ಲಿಯೋಅಮಲ್ ಬಂಡವಾಳವನ್ನು ಯಾವರೀತಿಯಲ್ಲಿ ಹೂಡುವುದು ಮತ್ತುಅದರಿಂದಾಗುವ ಪ್ರಯೋಜನಗಳನ್ನು ತಿಳಿಸಿದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದಡಾ.ಎನ್.ಪಿ ನಾರಾಯಣ ಶೆಟ್ಟಿ ಸಮಯದ ಮಹತ್ವವನ್ನುಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಷಯ ಶಿಕ್ಷಕರ ಸಂWದಅಧ್ಯಕ್ಷರಾದಪ್ರೊ. ಬಾಲಕೃಷ್ಣ ಪೈ , ಕಾರ್ಯದರ್ಶಿಗಳಾದ ಪ್ರೊ.ಮನೋಜ್ ಲೂಯೀಸ್, ವಾಣಿಜ್ಯ ವಿಭಾಗ ಮುಖ್ಯಸ್ಥರಾದಅರುಣ್‌ಎ.ಎಸ್ ಮತ್ತು ಬಿ.ಬಿ.ಎ ವಿಭಾಗ ಮುಖ್ಯಸ್ಥರಾದಅರ್ಚನಾಅರವಿಂದ್ ಉಪಸ್ಥಿತರಿದ್ದರು.

ಕುಂದಾಪುರ:ಇತ್ತೀಚೆಗೆಇಲ್ಲಿನ ಭಂಡಾಕಾರ‍್ಸ್ಕಾಲೇಜಿನಲ್ಲಿ ಮಹಿಳಾ ವೇದಿಕೆ ಮತ್ತು ಯುತ್‌ ರೆಡ್‌ಕ್ರಾಸ್‌ಘಟಕದ ಸಹಯೋಗದಲ್ಲಿಉಪನ್ಯಾಸಕಾರ್ಯಕ್ರಮ ನಡೆಯಿತು.

JANANUDI.COM NETWORK

 

ಕುಂದಾಪುರ:ಇತ್ತೀಚೆಗೆಇಲ್ಲಿನ ಭಂಡಾಕಾರ‍್ಸ್ಕಾಲೇಜಿನಲ್ಲಿ ಮಹಿಳಾ ವೇದಿಕೆ ಮತ್ತು ಯುತ್‌ ರೆಡ್‌ಕ್ರಾಸ್‌ಘಟಕದ ಸಹಯೋಗದಲ್ಲಿಉಪನ್ಯಾಸಕಾರ್ಯಕ್ರಮ ನಡೆಯಿತು.

 

ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಭಾಗವಹಿಸಿಸದ್ದ ಕುಂದಾಪುರದ ಮನಿಷ್ ಆಸ್ಪತ್ರೆಯ ವೈದ್ಯರಾದ ಡಾ.ಪ್ರಮೀಳಾ ನಾಯಕ್ ಮಾತನಾಡಿ ಜಾಗತಿಕ ವ್ಯವಸ್ಥೆಯಲ್ಲಿ ಪರಿಸರಮಾಲಿನ್ಯ, ಪ್ಲಾಸ್ಟಿಕ್ ನಿರ್ಮೂಲನೆ ಮತ್ತು ಮಾದಕ ದ್ರವ್ಯಗಳ ದುಷ್ಪರಿಣಾಮ ಮತ್ತು ಮಹಿಳಾ ಆರೋಗ್ಯದಕುರಿತು ವಿಶೇಷ ಮಾಹಿತಿ ನೀಡಿದರು.
ನಮ್ಮ ನಮ್ಮಲ್ಲಿಜಾಗೃತಿ ಮೂಡಬೇಕು. ಪ್ರಸ್ತುತ ಜಗತ್ತಿನಲ್ಲಿ ಪರಿಸರ ಮಾಲಿನ್ಯದಿಂದಾಗಿ ಶುದ್ಧಆಹಾರ ವಾಯು ಮತ್ತು ನೀರು ಸಿಗುವುದು ದುಸ್ತರವಾಗಿದೆ. ಇಂತಹ ವಿಷಮ ಸ್ಥಿತಿಯಲ್ಲಿ ನಾವಿರುವಾಗ ನಾವು ಪರಿಸರ ಉಳಿಸಿಕೊಳ್ಳುವತ್ತ ಗಮನಹರಿಸಬೇಕಾಗಿದೆ. ಅದಕ್ಕಾಗಿ ಹಲವು ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಅನಿವಾರ್ಯತೆ ಇದೆಎಂದು ತಿಳಿಸಿದರಲ್ಲದೇ ಮಹಿಳೆಯರು ತಮ್ಮಆರೋಗ್ಯವನ್ನು ಕಾಯ್ದುಕೊಳ್ಳುವುದು ಮತ್ತು ಕೆಲವು ಸರಳ ಮಾರ್ಗಗಳನ್ನು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಹಿಳಾ ವೇದಿಕೆಯ ಸಂಚಾಲಕರಾದ ಡಾ.ಯಶವ೦ತಿ ಕೆ. ಮತ್ತು ಸದಸ್ಯರು ಮತ್ತುಯುತ್‌ ರೆಡ್‌ಕ್ರಾಸ್‌ ಘಟಕದಕಾರ್ಯಕ್ರಮಾಧಿಕಾರಿಣಿ ವಿದ್ಯಾರಾಣಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕೀರ್ತಿ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿ ವಂದಿಸಿದರು.

ಕುಂದಪ್ರಭ ಕೋ.ಮ ಕಾರಂತ ಪ್ರಶಸ್ತಿಗೆ : ಪ್ರೊ| ಎಂ.ಎಸ್.ಶೆಟ್ಟಿ ಕೋಟೇಶ್ವರ ಆಯ್ಕೆ

JANANUDI.COM NETWORK 

 

 

ಕುಂದಪ್ರಭ ಕೋ.ಮ ಕಾರಂತ ಪ್ರಶಸ್ತಿಗೆ : ಪ್ರೊ| ಎಂ.ಎಸ್.ಶೆಟ್ಟಿ ಕೋಟೇಶ್ವರ ಆಯ್ಕೆ

 

ಕುಂದಾಪುರ ನಂಟು ಹೊಂದಿದ್ದು, ಜೀವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಕುಂದಪ್ರಭ ಪ್ರತಿಷ್ಠಾನ ಪ್ರತಿವರ್ಷ ನೀಡುತ್ತಿರುವ ಕೋ.ಮ.ಕಾರಂತ ಪ್ರಶಸ್ತಿಗೆ “ಫಾದರ್ ಆಫ್ ಕಾಂಕ್ರಿಟ್” ಎಂದೇ ಬಿರುದಾಂಕಿತರಾದ ಪ್ರೊ.ಎಂ.ಎಸ್.ಶೆಟ್ಟಿ ಕೋಟೇಶ್ವರ ಆಯ್ಕೆಯಾಗಿದ್ದಾರೆ. ಹಿರಿಯ ಪತ್ರಕರ್ತ ದಿ.ಕೆ.ಎಂ. ಕಾರಂತರ ಸ್ಮರಣಾರ್ಥ ಈ ಪ್ರಶಸ್ತಿ ನೀಡಲಾಗುತ್ತದೆ. ವಕ್ವಾಡಿ, ಕೋಟೇಶ್ವರದಲ್ಲಿ ಪ್ರಾಥಮಿಕ ಶಿಕ್ಷಣ, ಕುಂದಾಪುರ ಬೋರ್ಡ್ ಹೈಸ್ಕೂಲ್‍ನಲ್ಲಿ ಪ್ರೌಢಶಿಕ್ಷಣ ಪಡೆದು ನಂತರ ಉನ್ನತ ಶಿಕ್ಷಣಕ್ಕೆ ತೆರಳಿದ ಎಂ.ಸುಬ್ಬಣ್ಣ ಶೆಟ್ಟಿಯವರು ಇಂಜಿಯರ್ ಆಗಿ ಕಾಲೇಜ್ ಆಫ್ ಮಿಲಿಟರಿ ಇಂಜಿನಿಯರಿಂಗ್ ಸೇರಿದ ಮೇಲೆ ಸಾಧಿಸಿರುವುದು ಅಪಾರ. ಎರಡು ಲಕ್ಷಕ್ಕೂ ಹೆಚ್ಚು ಆರ್ಮಿ ಇಂಜಿನಿಯರ್‍ರನ್ನು ತರಬೇತುಗೊಳಿಸಿದ ಖ್ಯಾತಿ ಪಡೆದಿರುವ ಇವರು ಉನ್ನತ ಶಿಕ್ಷಣ ಪಡೆಯುವ ಇಂಜಿನಿಯರ್‍ಗೂ ಮಾರ್ಗದರ್ಶನ ನೀಡಿದವರು.
ಇವರು ಬರೆದ “ಕಾಂಕ್ರಿಟ್ ಟೆಕ್ನಾಲಜಿ” ಪುಸ್ತಕ 50 ಬಾರಿ ಮರುಮುದ್ರಣಗೊಂಡು ವಿಶ್ವಾದ್ಯಂತ ಮಾರ್ಗದರ್ಶಕ ಪಠ್ಯವಾಗಿ ಪರಿಗಣಿಸಲ್ಪಟ್ಟಿದೆ. ದೇಶದಲ್ಲಿ ಹತ್ತು ಹಲವು ನಿರ್ಮಾಣ ಕಾರ್ಯಗಳಿಗೆ ಮಾರ್ಗದರ್ಶಕ, ಸಲಹೆಗಾರರಾಗಿ ಸೇವೆ ಸಲ್ಲಿಸಿದ ಇವರಿಗೆ “ಲೈಫ್ ಟೈಮ್ ಎಚೀವ್‍ಮೆಂಟ್ ಅವಾರ್ಡ್” ಎಂಬ ರಾಷ್ಟ್ರೀಯ ಪ್ರಶಸ್ತಿ ಇಂಡಿಯನ್ ಕಾಂಕ್ರಿಟ್ ಇನ್‍ಸ್ಟಿಟ್ಯೂಟ್ ನೀಡಿದೆ.
ಜನವರಿ 19 ರಂದು ಕುಂದಾಪುರ ಸರಕಾರಿ ಪ.ಪೂ.ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಸಮಾರಂಭ ನಡೆಯಲಿದೆ ಎಂದು ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ ತಿಳಿಸಿದ್ದಾರೆ.

ಸಂತ ಜೋಸೆಫ್ ಶಾಲಾ ವಾರ್ಷಿಕೋತ್ಸವ- ಮಕ್ಕಳ ಅಭಿರುಚಿಯ ಶಿಕ್ಷಣವನ್ನು ಪ್ರೋತ್ಸಾಹಿಸಿ ಪೋಶಿಸಿ

JANANUDI.COM NETWORK

 

 

ಸಂತ ಜೋಸೆಫ್ ಶಾಲಾ ವಾರ್ಷಿಕೋತ್ಸವ- ಮಕ್ಕಳ ಅಭಿರುಚಿಯ ಶಿಕ್ಷಣವನ್ನು ಪ್ರೋತ್ಸಾಹಿಸಿ ಪೋಶಿಸಿ

 

 

ಕುಂದಾಪುರ,ಡಿ.21: ’ಯಾವುದೇ ಮಗು ಕಲಿಯುದಿಲ್ಲವೆಂದು, ದೂಷಿಸಬೇಡಿ, ದಂಡಿಸಬೇಡಿ, ಅವರನ್ನು ಪ್ರೀತಿಯಿಂದ ವಿಧ್ಯೆಯ ಮಹತ್ವವನ್ನು ತಿಳಿಸಿ. ಮಕ್ಕಳಲ್ಲಿ ಯಾವ ವಿಷಯದಲ್ಲಿ ಅಭಿರುಚಿ ಇದೆಯೆಂದು ಮಕ್ಕಳಿಂದ ತಿಳಿದುಕೊಳ್ಳಿ, ಅವರ ಅಭಿರುಚಿಯಂತೆ ಅವರಿಗೆ ಪ್ರೋತ್ಸಾಹಿಸಿ ಪೋಶಿಸಿ ಎಂದು ಆಪೋಸ್ತಲಿಕ್ ಕಾರ್ಮೆಲ್ ಸಂಸ್ಥೆ ಅವಿಭಜಿತ ಉಡುಪಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಿಸ್ಟರ್ ಮರಿಯಾ ಶುಭಾ ಹೇಳಿದರು. ಅವರು ಕುಂದಾಪುರ ಕಾರ್ಮೆಲ್ ಸಂಸ್ಥೆಯ ಸಂತ ಜೋಸೆಫ್ ಹಿರಿಯ ಪ್ರಾರ್ಥಮಿಕ ಶಾಲಾ ಮೈದಾನದಲ್ಲಿ ನಡೆದ ವಾರ್ಷಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಿ ನುಡಿದರು. ‘ಬೆಳಿಗ್ಗೆ ಮಗು ಶಾಲೆಗೆ ಬರುವ ಮುಂಚೆ ಅವರಿಗೆ ಉತ್ತಮ ಆಹಾರ ಕೊಟ್ಟು ಕಳಿಸಿ, ಬೆಳಿಗ್ಗೆಯ ಸಮಯ ಕಲಿಸಿದ ವಿಧ್ಯೆ ನೆನಪಿನಲ್ಲಿ ಉಳಿಯುತ್ತದೆ, ಆದರೆ ಮಗು ಹಸಿವೆಯಲ್ಲಿದ್ದರೆ, ಮಕ್ಕಳ ಕಲಿಕೆಗೆ, ಗ್ರಹಿಕೆಗೆ ಅಡ್ಡಿಯಾಗುತ್ತದೆ’ ಎಂದು ತಿಳಿಸಿದರು. 

ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಆಶಿರ್ವಚನ ನೀಡಿ ಶುಭ ಹಾರೈಸಿದರು. ಮುಖ್ಯ ಅತಿಥಿ ಸಂದೀಪ್ ಕ್ವಾಡರ್ಸ್ ತಮ್ಮ ಸಂದೇಶ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ‘ಶಿಕ್ಷಣ ಕ್ಷೇತ್ರ ಸಮೂಹ ಸಂಪನ್ಮೂಲ ವ್ಯಕ್ತಿ ಕುಂದಾಪುರ ವಲಯ ಸುನೀತಾ ಬಾಂಜ್ ‘ಛಲ ಗುರಿ ಇದ್ದರೆ ಎನನ್ನೂ ಸಾಧಿಸಬಹುದು, ಟಿ.ವಿ.,ಮೊಬೈಲ್, ಅಂತರ್‍ಜಾಲಾ, ಕಂಪ್ಯೂಟರ್ ಇವುಗಳನ್ನು ನಿಮ್ಮ ಗುರುಗಳನ್ನಾಗಿಸಕೊಳ್ಳಬೇಡಿ, ನಿಮ್ಮ ಶಾಲಾಗುರುಗಳನ್ನು ನಿಮ್ಮ ನೈಜ್ಯ ಗುರುಗಳನ್ನಾಗಿಸಿಕೊಳ್ಳಿ, ಗುರು ನಿಮ್ಮ ಹಿಂದೆ ಇರುವಾಗ ಗುರಿ ಸುಲಭವಾಗಿ ಮುಟ್ಟಬಹುದು’ ಎಂದು ಅವರು ಹೇಳಿದರು.
ಸಂಸ್ಥೆಯ ಮುಖ್ಯಸ್ಥೆ ವೈಲೆಟ್ ತಾವ್ರೊ, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಕಿರಣ್ ಪಾಯ್ಸ್, ಸಿಸ್ಟರ್ ಮಾರಿ ಎವ್ಜಿನ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಬಹುಮಾನಗಳನ್ನು ಹಂಚಿದರರು. ಮುಖ್ಯ ಶಿಕ್ಷಕಿ ಸಿಸ್ಟರ್ ಕೀರ್ತನ ಶಾಲಾ ವರದಿಯನ್ನು ವಾಚಿಸಿದರು. ನಂತರ ಮಕ್ಕಳಿಂದ ನ್ರತ್ಯ, ಕಿರು ನಾಟಕ, ಟ್ಯಾಬ್ಲೊಗಳ ಪ್ರದರ್ಶನ ನೆಡೆಯಿತು. ಶಿಕ್ಷಕಿ ನವೀತಾ ಸ್ವಾಗತಿಸಿದರು. ವಿದ್ಯಾರ್ಥಿಗಳು ಶಿಕ್ಷಕರು ಕಾರ್ಯಕ್ರಮವನ್ನು ನೆಡೆಸಿಕೊಟ್ಟರು. ಶಿಕ್ಷಕಿ ಶಾರದ ವಂದಿಸಿದರು.

 

 

ಕುಂದಾಪುರ ಆಲ್ಫ್ರೆಡ್ ಲೋಬೊ ನಿಧನ – ಅಂತ್ಯಕ್ರಿಯೆ 21-12-19 ಸಂಜೆ 4 ಕ್ಕೆ

ಕುಂದಾಪುರ ಆಲ್ಫ್ರೆಡ್ ಲೋಬೊ ನಿಧನ – ಅಂತ್ಯಕ್ರಿಯೆ 21-12-19 ಸಂಜೆ 4 ಕ್ಕೆ

ಕುಂದಾಪುರ : ಸ್ಥಳೀಯ ಚರ್ಚ್ ರಸ್ತೆ ನಿವಾಸಿ ಆಲ್ಫ್ರೆಡ್ ಲೋಬೊ(75) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಡಿ.19ರಂದು ನಿಧನರಾಗಿದ್ದಾರೆ. ಖ್ಯಾತ ವೈದ್ಯ ಡಾ| ಎಸ್.ಆರ್. ಹೆಗ್ಡೆ ಕ್ಲಿನಿಕ್ ನಲ್ಲಿ ಕಂಪೌಂಡರ್ ಆಗಿದ್ದ ಅವರು ತದನಂತರ ಕುಂದಾಪುರದ ಪ್ಯಾಸ್ ಮೆಟಲ್ ಸ್ಟೋರ್ಸ್‍ನಲ್ಲಿ ಸರಿಸುಮಾರು 28ವರ್ಷಗಳ ಕಾಲ ಮೇಲ್ವೀಚಾರಕರಾಗಿ ಸೇವೆ ಸಲ್ಲಿಸಿದ್ದರು. ಅವಿವಾಹಿತರಾಗಿದ್ದ ಅವರು ನಾಲ್ವರು ಸಹೋದರರು ಹಾಗೂ ಇಬ್ಬರು ಸಹೋದರಿಯರರನ್ನು ಅಗಲಿದ್ದಾರೆ.

 

 

Passed away

ALFRED LOBO(75)
Brother of Gilbert , Feddy &
Late Jemie Lobo.( ex gurkar)
Sacred heart ward
Church Road
Kundapur.
Passed away on 19 th December
Funeral will be held at Holy Rosary church
Kundapur on Saturday 21.12 2019
Mass at 4.00 p.m

ರಾಜೇಂದ್ರ ಭಟ್ ಅವರಿಗೆ ಮುಂಬೈ ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನದ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ

ವರದಿ: ವಾಲ್ಟರ್ ಮೊಂತೇರೊ

 

 

ರಾಜೇಂದ್ರ ಭಟ್ ಅವರಿಗೆ ಮುಂಬೈ ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನದ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ

 

 

ಪೇಜಾವರ ಶ್ರೀಯವರಿಂದ ಉದ್ಘಾಟನೆಗೊಂಡಿರುವ ಮುಂಬೈ ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನದ 22ನೇ ವಾರ್ಷಿಕ ಧಾರ್ಮಿಕ ಮತ್ತು ಸಾಂಸ್ಕøತಿಕ ಉತ್ಸವವು ಡಿ. 21ರಂದು ಮಂಬೈಯ ಅಂಧೇರಿ ಪಶ್ಚಿಮದ ಎಸ್.ವಿ.ರೋಡ್ ಸಮೀಪದ ಪೆಟ್ರೋಲ್ ಪಂಪ್ ಮತ್ತು ಫಾಯರ್ ಬ್ರಿಗೇಡ್ ಸಮೀಪದ ಶ್ರೀ ಅದಮಾರು ಮಠದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜೇಂದ್ರ ಭಟ್ ಕೆ. ಅವರಿಗೆ ಪ್ರತಿಷ್ಠಿತ ಪ್ರಶಸ್ತಿಯೊಂದಿಗೆ ಗೌರವಿಸಲಿದ್ದಾರೆ.
ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ, ವಿಕಸನ ರಾಷ್ಟ್ರ ಮಟ್ಟದ ತರಬೇತುದಾರು, ಭಾರತೀಯ ಜೇಸಿಐನ ವಲಯ 15ರ ಪೂರ್ವವಲಯಾಧ್ಯಕ್ಷರು, ಟಿವಿ ನಿರೂಪಕರು, ಪ್ರಬುದ್ಧ ಭಾಷಣಕಾರರು, ಕಾರ್ಕಳ ತಾಲೂಕು ಇನ್ನ ಗ್ರಾಮದ ಎಂ.ವಿ.ಶಾಸ್ತ್ರೀ ಫ್ರೌಢಶಾಲೆಯ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಇವರ ಸಾಧನೆಯನ್ನು ಪರಿಗಣಿಸಿ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್‍ರವರ ಅಧ್ಯಕ್ಷತೆಯ ಪ್ರತಿಷ್ಠಾನದಿಂದ ಈ ಗೌರವವನ್ನು ಸ್ವೀಕರಿಸುತ್ತಿದ್ದಾರೆ.

ಕೋಲಾರ :ಮಕ್ಕಳ ಆರೋಗ್ಯ ಹಾಗೂ ಶಿಕ್ಷಣದಲ್ಲಿ ಪರಿಪೂರ್ಣತೆ ತನ್ನಿ ; ಜಿ.ಪಂ. ಅಧ್ಯಕ್ಷರು

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

ಕೋಲಾರ :ಮಕ್ಕಳ ಆರೋಗ್ಯ ಹಾಗೂ ಶಿಕ್ಷಣದಲ್ಲಿ ಪರಿಪೂರ್ಣತೆ ತನ್ನಿ ; ಜಿ.ಪಂ. ಅಧ್ಯಕ್ಷರು

 

 

ಕೋಲಾರ ಡಿ.18 : ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯವರು ರುಚಿ-ಶುಚಿಯಾದ ಆಹಾರ ತಯಾರಿಸಿ ಮಕ್ಕಳ ಆರೋಗ್ಯ ಹಾಗೂ ಶಿಕ್ಷಣದಲ್ಲಿ ಪರಿಪೂರ್ಣತೆ ತರಬೇಕೆಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ತಿಳಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿಂದು ತಾಲ್ಲೂಕು ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಆಶ್ರಯದಲ್ಲಿ ನಡೆದ ‘ಶುಚಿ-ರೂಚಿ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಕ್ಷರ ದಾಸೋಹದಲ್ಲಿ ಸುಚಿತ್ವ, ಸ್ವಚ್ಚತೆ, ಪರಿಕರಗಳ ಸ್ವಚ್ಚತೆ, ಆಹಾರ ಧಾನ್ಯಗಳ ಪರಿಷ್ಕರಣೆ ಅಡುಗೆ ಮಾಡುವ ಸಿಬ್ಬಂದಿಗಳ ವೈಯುಕ್ತಿಕ ಸ್ವಚ್ಚತೆ ಹಾಗೂ ಶುಚಿತ್ವದ ಕಡೆ ಹೆಚ್ಚು ಗಮನಿಸಿ ಆರೋಗ್ಯ ಪೂರ್ಣ ಸಮಾಜ ನಿರ್ಮಿಸಲು ನೆರವಾಗಬೇಕು ಎಂದರು.
ಗುಣಮಟ್ಟದ ಆಹಾರ ತಯಾರಿಸಿ ಮಕ್ಕಳ ಆರೋಗ್ಯ ಸುಧಾರಣೆ ಮಾಡಲು ಹಾಗೂ ಮಕ್ಕಳ ಹಾಜರಾತಿ ಮತ್ತು ಗುಣಮಟ್ಟ ಹೆಚ್ಚಿಸಲು ಇಂತಹ ಕಾಯಾಗಾರಗಳನ್ನು ಅವಶ್ಯಕತೆಯಿದೆ ಎಂದರು.
ಜಿಲ್ಲಾ ಪಂಚಾಯಿತಿ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ ಮಾತನಾಡಿ ಶಾಲೆಯ ಪ್ರತಿ ಮಕ್ಕಳಿಗೆ ಅಕ್ಷರ ದಾಸೋಹದ ಅಡುಗೆ ಸಿಬ್ಬಂದಿ ತಾಯಿ ಇದ್ದಂತೆ ಮಕ್ಕಳಿಗೆ ಅದೇ ಪ್ರೀತಿ, ವಿಶ್ವಾಸವನ್ನು ನೀಡುವಂತಾಗಬೇಕು ಎಂದರು.
ಅಡುಗೆ ತಯಾರಿಸಿ ಬಡಿಸುವವರೆಗೆ ಸರ್ಕಾರದ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಮಕ್ಕಳ ಸುರಕ್ಷತೆ, ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ನಾಗರಾಜಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲುಕು ಪಂಚಾಯಿತಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಾಲಾಜಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಜಿ. ಶ್ರೀನಿವಾಸ್, ಅಕ್ಷರ ದಾಸೋಹ ವಿಭಾಗದ ರಾಜಣ್ಣ., ಶಶಿ, ಅಶೋ ಮುತ್ತಿತರರು ಉಪಸ್ಥಿತರಿದ್ದರು.