ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ


ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ


ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ
ಜಂತುಹುಳು ನಿವಾರಣೆಗಾಗಿ ವೈಯಕ್ತಿಕ ಸ್ವಚ್ಚತೆಗೆ ಹೆಚ್ಚಿನ ಮಹತ್ವ ನೀಡಿ – ಸಿ.ಎಸ್ ವೆಂಕಟೇಶ್


ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

JANANUDI.COM NETWORK
ಕುಂದಾಪುರಾಂತ್ ಲೂರ್ಡ್ಸ್ ಮಾಯೆಚ್ಯಾ ಫೆಸ್ತಾಚೆ ಆಚರಣ್

ಕುಂದಾಪುರ್,ಫೆಬ್ರವರಿಚ್ಯಾ 11 ವೇರ್ ಲೂರ್ಡ್ಸ್ ಮಾಯೆಚ್ಯಾ ಗ್ರೊಟ್ಟೊ ಮುಕಾರ್ ಫಿರ್ಗಜೆ ಮಟ್ಟಾರ್ ಲೂರ್ಡ್ಸ್ ಮಾಯೆಚ್ಯಾ ಫೆಸ್ತಾಚೆ ಆಚರಣ್ ಚಲ್ಲೆಂ . ಸಾಂಜೆರ್ ತೇರ್ಸಾಚೆ ಭಕ್ತಿಪಣ್ ಚಲ್ಲೆಂ. ‘ಲೂರ್ಡ್ಸ್ ಶಹರಾಂತ್ ಬರ್ನಡೆಟ್ ಮೇರಿ ಹ್ಯಾ ಚಲಿಯೆಕ್ 18 ಪಾವ್ಟಿಂ ದಿಶ್ಟಿಕ್ ಪಡ್ಲಿಂ. ಥಂಯ್ಸರ್ ಸಭಾರ್ ಜಣಾಂಚಿ ಪೀಡಾ ಗೂಣ್ ಜಾತಾಂ. ಲೂಡ್ರ್ಸಾಂತ್ ಕಿತ್ಲೊ ಕಠೋರ್ ಕಾಳ್ಜಾಚೊ ಗೆಲ್ಯಾರಿಯಿ, ಥಂಯ್ಸರ್ ತೊ ಮೊವಾಳ್ ಜಾತಾ, ಆನಿ ತೊ ಪರಿವರ್ತನ್ ಜಾತಾಂ. ಲೂರ್ಡ್ಸ್ ಸಾಯ್ಬಿಣಿಕ್ ಜಾಂವ್ ರೊಜಾಯ್ ಮಾಯೆನ್ ಆಮ್ಕಾ ಫಾವೊ ಕೆಲ್ಲೆಂ ಕೊಂತಾಚೆ ಭಕ್ತಿಪಣ್ ವಾಡಾಂವ್ಯಾ, ಭಕ್ತಿನ್ ಮಾಗ್ಲ್ಯಾರ್ ಮರಿ ಉಪ್ಕಾರ್ ಫಾವೊ ಕರ್ತಾಂ’ ಮ್ಹಣನ್ ವಿಗಾರ್ ಮಾ|ಬಾ|ಸ್ಟ್ಯಾನಿ ತಾವ್ರೊನ್ ಸಂದೇಶ್ ದಿಲೊ.
ತೇರ್ಸ್ ಜಾಲ್ಯಾ ಉಪ್ರಾಂತ್ ರಂಗಾಳ್ ವಾತಿ ಘೆಂವ್ನ್ ಪುರ್ಶಾಂವ್ ಕಾಡ್ಲೊ. ಉಪ್ರಾಂತ್ ವಿಗಾರ್ ಮಾ|ಬಾ|ಸ್ಟ್ಯಾನಿ ತಾವ್ರೊನ್ ಭಕ್ತಿಕಾಂಕ್ ಆಶಿರ್ವಾದ್ ಪಾಟಯ್ಲೆ, ಲೂರ್ಡ್ಸ್ ವಾಡ್ಯಾಗಾರಾನಿಂ ತೇರ್ಸ್ ಆನಿ ಮಾಗ್ಣ್ಯಾ ವಿಧಿ ಚಲವ್ನ್ ವೆಲಿ. ಲೂರ್ಡ್ಸ್ ವಾಡ್ಯಾಚೊ ಗುರ್ಕಾರ್ ವಾಲ್ಟರ್ ಡಿಸೋಜಾನ್ ಧನ್ಯವಾದ್ ಪಾಟಯ್ಲೆಂ.

JANANUDI.COM NETWORK
ಕುಂದಾಪುರದಲ್ಲಿ ಇಂಧನ ಉಳಿಸಿ, ನೀರು ಉಳಿಸಿ, ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಎಂಬ ಸಾಮಾಜಿಕ ಹಿತ ಚಿಂತನೆಯೊಂದಿಗೆ ಸೈಕಲೋಥನ್ ರ್‍ಯಾಲಿ

ಕುಂದಾಪುರ ಸೈಕ್ಲಿಂಗ್ ಕ್ಲಬ್, ಜೆಸಿಐ ಕುಂದಾಪುರ ಸಿಟಿ , ಕ್ಲೀನ್ ಕುಂದಾಪುರ ಪ್ರೊಜೆಕ್ಟ್ ಇವರು ಆಯೋಜಿಸಿದ ಹಾಗೂ ಆಂಜನೇಯ ಗ್ಯಾಸ್ ಏಜೆನ್ಸಿ ಕುಂದಾಪುರ , ಸಂಗೀತ ಮೊಬೈಲ್ಸ್ ,ಶ್ರೀ ಗಜಾನನ ಸೈಕಲ್ ಸ್ಟೋರ್ಸ್ ಕುಂದಾಪುರ ಇವರ ಪ್ರಾಯೋಜಕತ್ವದಲ್ಲಿ ಇಂಧನ ಉಳಿಸಿ ,ನೀರು ಉಳಿಸಿ, ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಎಂಬ ಸಾಮಾಜಿಕ ಹಿತ ಚಿಂತನೆಯೊಂದಿಗೆ cyclothon 2020 rally ಕುಂದಾಪುರದಲ್ಲಿ ನಡೆಯಿತು ಇನ್ನೂರಕ್ಕೂ ಹೆಚ್ಚು ಮಕ್ಕಳು ಹಾಗೂ ನಾಗರಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು . ಬೆಳಿಗ್ಗೆ 7:00 ಗೆ ಶಾಸ್ತ್ರಿ ಸರ್ಕಲ್ ಇಂದ ಪ್ರಾರಂಭಗೊಂಡು 15 km cyclothon ಚರ್ಚ್ ರೋಡ್ ಮುಖೇನ ಕೋಡಿ ಕಡಲ ಕಿನಾರೆ ಮೂಲಕ ಪುನಹ ಕುಂದಾಪುರದ ಬೋರ್ಡ್ ಹೈಸ್ಕೂಲ್ ವಟಾರದಲ್ಲಿ ಮುಕ್ತಾಯಗೊಂಡಿತು ಮಕ್ಕಳಿಗೆ ಹಾಗೂ ನಾಗರಿಕರಿಗೆ ಇಂಧನ ಉಳಿತಾಯ ನೀರಿನ ಉಳಿತಾಯ ಪ್ಲಾಸ್ಟಿಕ್ ಬಳಕೆಯ ನಿಷೇಧ ಹಾಗೂ ಸ್ವಚ್ಛತೆಯ ಬಗ್ಗೆ ಪ್ರಮಾಣವಚನವನ್ನು ಬೋಧಿಸಲಾಯಿತು ನಂತರ ನಡೆದ ಲಕ್ಕಿ ಡ್ರಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹೊಸ ಸೈಕಲ್ಲನ್ನು ನೀಡಲಾಯಿತು ಪಾಲ್ಗೊಂಡ ಎಲ್ಲರಿಗೂ ಉಪಹಾರ ಹಾಗೂ ಲಘುಪಾನೀಯ ವ್ಯವಸ್ಥೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ಸೈಕ್ಲಿಂಗ್ ಕ್ಲಬ್ ಅಧ್ಯಕ್ಷರು ಹಾಗೂ ಸದಸ್ಯರು ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷರು ಹಾಗೂ ಸದಸ್ಯರು ಕ್ಲಿನ್ ಕುಂದಾಪುರ ಪ್ರಾಜೆಕ್ಟ್ ಇದರ ಪದಾಧಿಕಾರಿಗಳು ಇಂಡಿಯನ್ ಆಯಿಲ್ ಇದರ ಆಫೀಸರ್ ಆದ ಶ್ರೀ ರಾಜ, ಸಂಗೀತ ಮೊಬೈಲ್ಸ್ ಮ್ಯಾನೇಜರ್ ಆದ ಶ್ರೀ ಗೋಪಾಲಕೃಷ್ಣ ಹೆಗಡೆ, ಶ್ರೀ ಗಜಾನನ ಸೈಕಲ್ ಸ್ಟೋರ್ಸ್ ನ ಮಾಲಕರಾದ ಶ್ರೀ ದೀಪಕ್ ಉಪಸ್ಥಿತರಿದ್ದರು ಇಂಡಿಯನ್ ಸೈಕ್ಲಿಂಗ್ ಕ್ಲಬ್ ಇದರ ಸದಸ್ಯರಾದ ಡಾಕ್ಟರ್ ಗುರುರಾಜ್ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದರು.

ವರದಿ: ವಾಲ್ಟರ್ ಮೊಂತೇರೊ
ಭಾರತೀಯ ಸಂಸ್ಕøತಿ-ಏಕತೆ ಸ್ವಾಮೀಜಿಗಳ ಕೈಯಲ್ಲಿದೆ -ಸ್ವಸ್ತಿ ಶ್ರೀ ಭಟ್ಟಾರಕ ಪಂಡಿತಾಚರ್ಯವರ್ಯ

ಬೆಳ್ಮಣ್ಣು: ಜೈನ, ಬೌಧ, ಹಿಂದೂ ಧರ್ಮಗಳು ಭಾರತೀಯ ಸಂಸ್ಕøತಿಯ ಮೂರು ಕವಲುಗಳು. ಧಾರ್ಮಿಕ ಸಂತರಿಂದ ಭಾರತೀಯ ಸಂಸ್ಕøತಿ ಉಳಿದಿದ್ದು, ಸಂಸ್ಕøತಿಯ ಏಕತೆ ಸಾಧಿಸುವುದು ಸ್ವಾಮೀಜಿಗಳ ಕೈಯಲ್ಲಿದೆ. ಮನುಷ್ಯ ತಾಮಸ ಗುಣಗಳನ್ನು ಬಿಟ್ಟು ಸನ್ನಡತೆಯ ಜೀವನ ನಡೆಸಿದಲ್ಲಿ ಮಾತ್ರ ದೇವರು ಪ್ರಸನ್ನರಾಗಲು ಸಾಧ್ಯ ಎಂದು ಮೂಡಬಿದ್ರೆ ಜೈನ ಮಠದ ಭಾರತ ಭೂಷಣ ಸ್ವಸ್ತಿ ಶ್ರೀ ಭಟ್ಟಾರಕ ಪಂಡಿತಾಚರ್ಯವರ್ಯ ಮಹಾ ಸ್ವಾಮೀಜಿ ಹೇಳಿದರು.
ಅವರು ಸಚ್ಚೇರಿಪೇಟೆಯಲ್ಲಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸೇವಾ ಟ್ರಸ್ಟ್ ಹಾಗೂ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ವತಿಯಿಂದ ಶನಿವಾರ ನಡೆದ 16ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಮಹೋತ್ಸವದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಮಂಡ್ಯ ಜಿಲ್ಲೆಯ ಆರತಿಪುರ ಜೈನ ಮಠದ ಸ್ವಸ್ತಿ ಶ್ರೀ ಸಿದ್ಧಾಂತ ಕೀರ್ತಿ ಶ್ರೀಗಳು ಆಶೀರ್ವಚನ ನೀಡಿ ಪ್ರತಿಯೊಬ್ಬರೂ ತಮ್ಮ ತಂದೆ-ತಾಯಿಯಲ್ಲಿ ದೇವರನ್ನು ಕಾಣಲು ಸಾದ್ಯ ಎಂದರು.
ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕರಾದ ಕೊಡೆತ್ತೂರು ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು.
ತುಳು ಜಾನಪದ ವಿಧ್ವಾಂಸ ಕೆ.ಕೆ ಪೇಜಾವರ ಮಾತನಾಡಿ ತುಳುನಾಡಿನ ಬದುಕಿನಲ್ಲಿ ಅದೆಷ್ಟೋ ಅದ್ಬುತ ವಿಚಾರಗಳಿದ್ದು, ನಮ್ಮ ಬದುಕು ಎಲ್ಲಾ ಕಡೆಗಳಿಗಿಂತ ಭಿನ್ನವಾಗಿದೆ ಎಂದರು.
ವಾಗ್ಮಿ ಚೈತ್ರಾ ಕುಂದಾಪುರ ದಿಕ್ಸೂಚಿ ಭಾಷಣ ಮಾಡಿದ್ದು, ಬದುಕಿಗೆ ದಾರಿ ತೋರುವುದೇ ಧರ್ಮ. ಧರ್ಮಕ್ಕಾಗಿ ಎಲ್ಲರೂ ಒಂದಾಗುವ ಅನಿವಾರ್ಯತೆಯನ್ನು ಸದ್ಯದ ಪರಿಸ್ಥಿತಿ ತಂದೊಡ್ಡಿದೆ. ಸಂಸ್ಕøತಿ ಹೀನ ಬದುಕು ಯಾರಿಗೂ ಒಳಿತಲ್ಲ. ದೇಶದ ನೆಲದ ಮಣ್ಣಿನ ಮತ್ತು ಪರಂಪರೆಯ ಜೊತೆ ಬದುಕು ಸಾಗಿಸುವುದೇ ನಿಜವಾದ ಸಂಸ್ಕøತಿ ಬದುಕಿಗೆ ಸಂಸ್ಕøತಿ-ಸಂಪ್ರದಾಯಗಳೇ ಗುರಿಯಾಗಬೇಕು. ಎಲ್ಲಾ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅತ್ಯತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರಾದ ಸಚ್ಚೇರಿಪೇಟೆ ಸುಧೀರ್ ನಾಯಕ್ ಮತ್ತು ಕಾರ್ಯಕ್ರಮದ ಮಹದಾನಿ ಬೋಜ ಸುವರ್ಣ ದಂಪತಿಯನ್ನು ಸನ್ಮಾನಿಸಲಾಯಿತು.
ಬಜರಂಗದಳ ಪ್ರಮುಖರಾದ ಮಹೇಶ್ ಶೆಣೈ ಬೈಲೂರು, ಚೇತನ್ ಪೇರಲ್ಕೆ, ವಿಶ್ವ ಹಿಂದೂ ಪರಿಷತ್‍ನ ಬೆಳ್ಮಣ್ ವಲಯದ ಅಧ್ಯಕ್ಷ ಪ್ರಸಾದ್ ಶೆಟ್ಟಿ, ವಿಜಯ ಮುಕ್ಕಡಪ್ಪು, ಜಿತೇಂದ್ರ ಪೇರೂರು ಉಪಸ್ಥಿತರಿದ್ದರು. ಟ್ರಸ್ಟ್‍ನ ಅಧ್ಯಕ್ಷ ಹರೀಶ್ ಸಚ್ಚೇರಿಪೇಟೆ ಸ್ವಾಗತಿಸಿ ವಂದಿಸಿದರು. ಸತೀಶ್ ಹೊಸ್ಮಾರ್ ಕಾರ್ಯಕ್ರಮ ನಿರೂಪಿಸಿದರು.
ಬಾಕ್ಸ್
ಸ್ವಾಮೀಜಿಗಳಿಂದಲೇ ಬಡ್ಡಿ ವ್ಯವಹಾರ-ಕೇಮಾರು ಶ್ರೀ
ಸಭೆಯಲ್ಲಿ ದಾರ್ಮಿಕ ಪ್ರವಚನ ನೀಡಿದ ಟ್ರಸ್ಟ್‍ನ ಗೌರವಾಧ್ಯಕ್ಷ ಕೇಮಾರು ಈಶ ವಿಠ್ಠಲದಾಸ ಶ್ರೀಗಳು ನಕಲಿ ಸಂತರಿಂದ ಧರ್ಮ ಉಳಿಯಲು ಸಾದ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ಹಿಂದೂ ಸಮಾಜ ದಾರ್ಮಿಕ ಮೌಲ್ಯಗಳಿಗೆ ಬೆಲೆ ಕೊಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾವಿ ಹಾಕಿರುವ ಸ್ವಾಮೀಜಿಗಳೂ ಹಣದ ಆಸೆಗಾಗಿ ದೇವರ ಗುಡಿ ಮುಂದೆ ಆವೇಶ ಬಂದಂತೆ ವರ್ತಿಸಿ, ಭಕ್ತರನ್ನ ಮರುಳು ಮಾಡುವ ಜೊತೆ ಹಣ ಸಂಪಾದನೆಯಲ್ಲಿ ತೊಡಗಿದ್ದಾರೆ.
ಸಂಪಾದನೆಯಾದ ಹಣವನ್ನು ಬಡ್ಡಿ ದಂದೆಗೆ ಬಳಸಿಕೊಂಡು ಮಠ ದೇವಸ್ಥಾನ ನಿರ್ಮಿಸುವ ಕಾವಿಗಳ ಬಗ್ಗೆ ಜನ ಎಚ್ಚರವಹಿಸಬೇಕೆಂದ ಅವರು, ಮಹಾನ್ ಸಂತರುಗಳ ಮೈ ಮೇಲೆ ದೇವರು ಬಂದ ನಿರ್ದರ್ಶನಗಳಿಲ್ಲ. ನಡೆದಾಡುವ ದೇವರೆನಿಸಿಕೊಂಡ ಸಿದ್ದಗಂಗಾ ಶ್ರೀ, ಉಡುಪಿ ಅಷ್ಟಮಠಗಳ ಇತಿಹಾಸ ಸೇರಿರುವ 245 ಸಂತರು ಯಾರೂ ಕೂಡ ಮೈ ನಡುಗಿಸಿ ಭಕ್ತರನ್ನು ಮರುಳು ಮಾಡಿಲ್ಲ. ಇತ್ತೀಚೆಗೆ ಕೆಲ ಸ್ವಾಮಿಗಳು ಆವೇಶದ ನಾಟಕವಾಡಿ, ಮೈಮೇಲೆ ದರ್ಶನ ಬಂದಂತೆ ವರ್ತಿಸಿ ಆಸ್ತಿ ಜೊತೆ ಹಣ ಸಂಪಾದನೆಯಲ್ಲಿ ತೊಡಗಿರುವುದು ಸಂತ ಪರಂಪರೆಗೆ ಕಳಂಕ ಎಂದರು.
JANANUDI.COM NETWORK
ಸೌರಚಾಲಿತ ಹಾಗೂ ವಿದ್ಯುತ್ ಚಾಲಿತ ಸೈಕಲ್‍ನ್ನು ತಯಾರಿಸಿ ಆರ್.ಎನ್.ಶೆಟ್ಟಿ ಪ. ಕಾಲೇಜು ಪಿಯು ವಿದ್ಯಾರ್ಥಿ ಶ್ರೀಶ ಎಸ್. ಶೆಟ್ಟಿಯ ದೊಡ್ಡ ಸಾಧನೆ

ಕುಂದಾಪುರ: ಆರ್.ಎನ್.ಶೆಟ್ಟಿ ಪದವಿಪೂರ್ವ ಕಾಲೇಜು ಕುಂದಾಪುರದ ಪ್ರಥಮ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿ ಶ್ರೀಶ ಎಸ್. ಶೆಟ್ಟಿ ಸೌರಚಾಲಿತ ಮತ್ತು ವಿದ್ಯುತ್ ಚಾಲಿತ ಸೈಕಲ್ ನ್ನು ತಯಾರಿಸಿ ದೊಡ್ಡ ಸಾಧನೆÀಯನ್ನು ಮಾಡಿದ್ದಾನೆ.
ಗ್ರಾಮೀಣ ಪ್ರದೇಶದ ಊರು ವಂಡ್ಸೆಯ ಶ್ರೀಧರ ಶೆಟ್ಟಿ ಹಾಗೂ ಶ್ಯಾಮಲ ಶೆಟ್ಟಿಯವರ ಪುತ್ರನಾದ ಈತ ಹೈಸ್ಕೂಲಿನಲ್ಲಿ ವ್ಯಾಸಂಗಮಾಡುತ್ತಿದ್ದಾಗಲೇ ವಿಜ್ಞಾನ ಮಾಡೆಲ್ ತಯಾರಿಕೆÀಯಲ್ಲಿ ಆಸಕ್ತಿ ತೋರಿ ಪ್ರಶಸ್ತಿಗಳನ್ನು ಗಳಿಸಿದ್ದಾನೆ.
30 ಸೆಪ್ಟೆಂಬರ್ 2019ರಂದು ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಭಟ್ಕಳದಲ್ಲಿ ನಡೆದ ಮಾಡೆಲ್ ಎಕ್ಸಪೋದಲ್ಲಿ ಪ್ರಥಮ ಪ್ರಶಸ್ತಿಗಳಿಸಿ ಎಲ್ಲರ ಪ್ರಶಂಸಗೆ ಒಳಗಾಗಿದ್ದಾನೆ.
ಸೈಹಾದ್ರಿ ಇಂಜಿನಿಯರಿಂಗ್ ಕಾಲೇಜು ಮಂಗಳೂರುನವರು ನಡೆಸಿದ ಸೈಹಾದ್ರಿ ಸಾಯನ್ಸ್ ಟ್ಯಾಲೆಂಟ್ ಹಂಟ್ 2019 ನವೆಂಬರ್ 16ರಂದು ನಡೆದಿದ್ದು ಈತ ಅದರಲ್ಲಿ ಪಾಲುಗೊಂಡು ತನ್ನ ಸೌರಚಾಲಿತ ಮತ್ತು ವಿದ್ಯುತ್ ಚಾಲಿತ ಸೈಕಲ್ ನ್ನು ಮಾಡಿ 400 ವಿಜ್ಞಾನ ಮಾಡೆಲ್‍ಗಳಲ್ಲಿ ಟಾಪ್ 5ರಲ್ಲಿ ಆಯ್ಕೆಗೊಂಡು ಮುಂದಿನ ಸಂಶೋಧನೆಗೆ ಸೈಹಾದ್ರಿ ಕಾಲೇಜಿನಿಂದ ನೆರವಿನ ಭರವಸೆಯನ್ನು ಪಡೆದುಕೊಂಡಿದ್ದಾನೆ.
ತನ್ಮದ್ಯೆ ಈತ ಇದೇ ವಿಜ್ಞಾನ ಮಾದರಿಯನ್ನು ಮಂಗಳೂರಿನ ಅಲೋಶಿಯಸ್ ಕಾಲೇಜು, ಬಂಟಕಲ್ ಮಧ್ವ ಇಂಜಿನಿಯರಿಂಗ್ ಕಾಲೇಜು, ಧರ್ಮಸ್ಥಳ ಎಸ್.ಡಿ.ಎಂ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾಡಿ ಎಲ್ಲರ ಪ್ರಶಂಸಗೆ ಪಾತ್ರನಾಗಿದ್ದಾನೆ.
ಆರ್.ಎನ್.ಶೆಟ್ಟಿ ಪಿಯು ಕಾಲೇಜಿನಲ್ಲಿ ನಡೆದ ಸಾಯನ್ಸ್ ಮಾಡೆಲ್ ಮೇಕಿಂಗ್ ಕಾಂಪಿಟೇಶನ್‍ನಲ್ಲೂ ಪ್ರಥಮ ಸ್ಥಾನ ಗಳಿಸಿರುತ್ತಾನೆ. ಈ ಎಲ್ಲಾ ಸಾಧನೆಗೆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಬೈಂದೂರು ಶಾಸಕರಾದ ಶ್ರೀ. ಬಿ.ಎಂ. ಸುಕುಮಾರ ಶೆಟ್ಟಿಯವರು, ಆಡಳಿತ ಮಂಡಳಿಯ ಇತರ ಪದಾದಿಕಾರಿಗಳು, ಹಾಗೂ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಈತನ ಭವಿಷ್ಯಕ್ಕೆ ಶುಭಕೋರಿದ್ದಾರೆ.
JANANUDI.COM NETWORK
450 ವರ್ಷದ ಸಂಭಮ್ರನದಲ್ಲಿರುವ ಕುಂದಾಪುರ ರೋಜರಿ ಚರ್ಚ್ ದುರಸ್ಥಿ ಮತ್ತು ನವ್ಯ ಮಾರ್ಪಾಡು ಯೋಜನೆಗಳು ಶ್ರಮದಾನದ ಮೂಲಕ ಆರಂಭ



ಕುಂದಾಪುರ, ಫೆ.9: ಉಡುಪಿ ಧರ್ಮ ಪ್ರಾಂತ್ಯದ ಅತ್ಯಂತ ಹಿರಿಯ ಇಗರ್ಜಿಯಾದ ಕುಂದಾಪುರ ಹೋಲಿ ರೋಜರಿ ಚರ್ಚ್ ತನ್ನ 450 ನೇ ವರ್ಷದ ಸಂಭ್ರಮಾಚಣೆಯ ವರ್ಷದಲ್ಲಿರುವಾಗ, ಚರ್ಚ್ ದುರಸ್ಥಿ ಹಾಗೂ ಚರ್ಚಿನ ನವ್ಯ ಮಾರ್ಪಾಡು ಯೋಜನೆಗಳ ಪ್ರಯುಕ್ತ ಚರ್ಚಿನ ಮೆಲ್ಛಾವಣಿ ದುರಸ್ಥಿಯನ್ನು ಭಾನುವಾರ ಫೆ. 9 ರಂದು ಶ್ರಮದಾನದ ಮೂಲಕ ಆರಂಭಿಸಿ, ನವ್ಯ ಮಾರ್ಪಾಡು ಯೋಜನೆಗೆ ಚಾಲನೆಯನ್ನು ನೀಡಲಾಯಿತು.
ಭಾನುವಾರದ ಪವಿತ್ರ ಬಲಿದಾನದ ಬಳಿಕ ಚರ್ಚಿನ ಪ್ರಧಾನ ಧರ್ಮಗುರು ಅ| ವಂ| ಸ್ಟ್ಯಾನಿ ತಾವ್ರೊ ಅವರು ಪ್ರಾರ್ಥನೆಯ ಮೂಲಕ ಶ್ರಮದಾನ ಆರಂಭಗೊಂಡಿತು. 450 ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಇಗರ್ಜಿಯ ಪೀಠದ ಶೈಲಿಯನ್ನು ಉನ್ನತಿಕರಣ ಗೊಳಿಸಿ ನೂತನ ಶೈಲಿಯಲ್ಲಿ ನಿರ್ಮಾಣ ಮತ್ತು ಹಲವಾರು ನೂತನ ಯೋಜನೆಗಳ ಮೂಲಕ ನವ್ಯ ಮಾರ್ಪಾಡುಗಳಿಂದ ಉನ್ನತಿ ಗೊಳಿಸು ಯೋಜನೆಗಳು ಹಮ್ಮಿಕೊಂಡಿದ್ದು, ಇದಕ್ಕಾಗಿ ಆರಂಭಗೊಂಡ ಶ್ರಮದಾನದಕ್ಕೆ ಕುಂದಾಪುರ ಕ್ರೈಸ್ತ ಸಮಾಜದವರು ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಿ ಸಹಕಾರ ನೀಡಿದರು. ಈ ಸಂದರ್ಭದಲ್ಲಿ ಉಪಾಧ್ಯಾಕ್ಷ ಎಲ್.ಜೆ.ಫೆರ್ನಾಂಡಿಸ್ ಶ್ರಮಾದಾನದ ರೂಪು ರೇಖೆಗಳನ್ನು ವಿವರಿಸಿದರು. ಸಹಾಯಕ ಧರ್ಮಗುರು ವಂ|ವಿಜಯ್ ಜೊಯ್ಸನ್ ಡಿಸೋಜಾ, ಪ್ರಾಂಶುಪಾಲ ಪ್ರವೀಣ್ ಅಮ್ರತ್ ಮಾರ್ಟಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ. 13 ವಾಳೆಯ ಗುರಿಕಾರರು, ಪ್ರತಿನಿಧಿಗಳು, ಆರ್ಥಿಕ ಮಂಡಳಿಯ ಸದಸ್ಯರು, ಚರ್ಚಿನ ವಿವಿಧ ಸಂಘಟನೇಯ ಸದಸ್ಯರು ಶ್ರಮದಾನದಲ್ಲಿ ಭಾಗಿಯಾದರು. ಕುಂದಾಪುರ ಕಥೋಲಿಕ್ ಸ್ತ್ರೀ ಸಂಘಟನೇಯ ಮಹಿಳೆಯರು ಭೋಜನವನ್ನು ಏರ್ಪಡಿಸಿದ್ದರು.

