HOLY ROSARY CHURCH, KUNDAPUR – 450 th JUBILEE SOUVENIR 2021

ಕುಂದಾಪುರ ವ್ಯಾಸರಾಜ ಮಠಕ್ಕೆ ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀಗಳ ಭೇಟಿ

JANANUDI.COM NETWORK

 

 

ಕುಂದಾಪುರ ವ್ಯಾಸರಾಜ ಮಠಕ್ಕೆ ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀಗಳ ಭೇಟಿ 

 

ಕುಂದಾಪುರ: ಗಾಣಿಗ ಸಮಾಜ ಕುಲಗುರು ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀಪಾದರು ತಮ್ಮ ಮೂಲ ಮಠವಾದ ಕುಂದಾಪುರದ ವ್ಯಾಸರಾಜ ಮಠದ ಭೇಟಿ ನೀಡಿದರು.
ಗುರುವಾರದಿಂದ ಭಾನುವಾರದ ವರೆಗೆ ಶ್ರೀ ಮಠದಲ್ಲಿ ಚಿತ್ತೈಸಿದ ಶ್ರೀಗಳು ಭಿಕ್ಷೆ, ಪಾದುಕೆ ಪೂಜೆ, ಮುದ್ರಾ ಧಾರಣೆ, ಪ್ರವಚನ, ಮಹಾಪೂಜೆ ನಡೆಸಿದರು. ಇದೇ ಸಂದರ್ಭದಲ್ಲಿ ಅನ್ನ ಸಂತರ್ಪಣೆ, ಪ್ರಸಾದ ವಿತರಣೆ, ಭಜನೆ ಮುಂತಾದ ಕಾರ್ಯಕ್ರಮ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಗೌರವಾಧ್ಯಕ್ಷ ಕೆ.ಎಂ.ಲಕ್ಷ್ಮಣ, ಅಧ್ಯಕ್ಷ ಪ್ರಭಾಕರ ಬಿ.ಕುಂಭಾಶಿ, ಪ್ರಧಾನ ಕಾರ್ಯದರ್ಶಿ ನಾಗರಾಜ ಗಾಣಿಗ ಬಸ್ರೂರು, ಕೋಶಾಧಿಕಾರಿ ನಾಗರಾಜ ಗಾಣಿಗ ಹಿಲ್ಮೋಡು, ಶ್ರೀ ವ್ಯಾಸರಾಜ ಸೇವಾ ಟ್ರಸ್ಟ್ ಕಾರ್ಯದರ್ಶಿ ಶ್ರೀನಿವಾಸ ಗಾಣಿಗ ಕನ್ಯಾಣ, ಕೋಶಾಧಿಕಾರಿ ಗಣಪಯ್ಯ ಗಾಣಿಗ ಉಪ್ಪುಂದ ಹಾಗೂ ತಾಲೂಕು ಗಾಣಿಗ ಸಂಘದ ಪದಾಧಿಕಾರಿಗಳು, ವಿವಿಧ ಸಂಘಟನೆಯ ಪದಾಧಿಕಾರಿಗಳು, ಸಮಾಜ ಬಾಂಧವರು ಉಪಸ್ಥಿತರಿದ್ದರು.

ಬೆಳ್ಮಣ್ಣು ವಿಶ್ವ ಮಹಿಳಾ ದಿನಾಚರಣೆ 

ವರದಿ: ವಾಲ್ಟರ್ ಮೊಂತೇರೊ

 

ಬೆಳ್ಮಣ್ಣು ವಿಶ್ವ ಮಹಿಳಾ ದಿನಾಚರಣೆ 

 

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಇಂದು ಬೆಳ್ಮಣ್ಣು ಶಾಂತಿಕೆರೆ ನಿವಾಸಿ ಹಾಗೂ
ಬೆಳ್ಮಣ್ಣು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ‘ಚಿಕ್ಕಿ’ ಮತ್ತು ಕೃಷಿಕರಾದ ಶತಾಯುಷಿ ಬೆಳ್ಮಣ್ಣು ಮಜಲಕೋಡಿ ಎಂಬಲ್ಲಿಯ ನಿವಾಸಿ ಶ್ರೀಮತಿ ’ಜೂಲಿಯಾನ ರೇಬೆಲ್ಲೊ’ ರವರನ್ನು ಅವರವರ ಮನೆಗೆ ತೆರಳಿ ಗೌರವಿಸಲಾಯಿತು. ಈ ಇಬ್ಬರು ಹಿರಿಯರ ಜೀವನದ ಸಾಧನೆ ಎಲ್ಲಾ ಯುವಜನತೆಗೂ ಪ್ರೇರಣೆಯಾಗಲಿ ಮತ್ತು ಭಗವಂತನು ಇವರಿಗೆ ಇನ್ನಷ್ಟು ಆಯುರಾರೋಗ್ಯ ಕೊಡಲಿ ಎಂದು ಪ್ರಾರ್ಥಿಸಿ ಸನ್ಮಾನಿಸಲಾಯಿತು.

ನಮ್ಮ ಜೊತೆ ಇದ್ದ ಲ.ಎನ್.ಎಮ್ ಹೆಗ್ಡೆ, ವಿಶ್ವನಾಥ್ ಪಾಟ್ಕರ್, ಮಲ್ಲಿಕಾ ರಾವ್, ಅನಿತಾ
ಡಿಸೋಜ, ನಿತಿನ್ ರಾವ್, ಡೊರೊತಿ ಪಿಂಟೋ, ಚಂದ್ರಿಕಾ ತಂತ್ರಿ, ಗಣೇಶ್ ಆಚಾರ್ಯ ರವರಿಗೆ
ಧನ್ಯವಾದಗಳು.

 *ಸ್ವಚ್ಛ ಬೆಳ್ಮಣ್ಣು-ಸುಂದರ ಬೆಳ್ಮಣ್ಣು*  : *ಸ್ವಚ್ಚತಾ* *ತಂಡ* .

ಹೋಲಿ ರೋಜರಿ ಚರ್ಚಗೆ ದಾನಿಗಳಿಂದ ನೂತನ ಜನರೇಟರ್ ಕೊಡುಗೆ

JANANUDI.COM NETWORK

 

 

ಹೋಲಿ ರೋಜರಿ ಚರ್ಚಗೆ ದಾನಿಗಳಿಂದ ನೂತನ ಜನರೇಟರ್ ಕೊಡುಗೆ 

 

ಕುಂದಾಪುರ, ಮಾ.7: ಈ ವರ್ಷ ಕುಂದಾಪುರ ಹೋಲಿ ರೋಜರಿ ಚರ್ಚ್ ತನ್ನ 450 ನೇ ಸಂಭ್ರಮಾಚರಣೆ ಆಚರಿಸುವ ಪ್ರಯುಕ್ತ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಅದರಲ್ಲಿ ಒಂದಾಂದ ಯೋಜನೆ, ನೂತನ ಆಧುನಿಕ ಶೈಲಿಯ ಜನರೇಟರ್ ಅಳವಡಿಸುವುದಾಗಿತ್ತು. ಈ ಯೋಜನೆಯಂತೆ ಸುಮಾರು ನಾಲ್ಕು ಲಕ್ಷ ಬೆಲೆಬಾಳುವ ನೂತನ ಜನರೇಟರನ್ನು ದಾನಿಗಳು ಕೊಡುಗೆ ರೂಪದಲ್ಲಿ ನೀಡಿದ್ದರು.
ಇದರ ಉದ್ಘಾಟನೆಯನ್ನು ಭಾನುವಾರ ಬೆಳಗ್ಗಿನ ಬಲಿದಾನದ ಬಳಿಕ ಪ್ರಾಥನೆ ಮತ್ತು ಆಶಿರ್ವಚನದ ಮೂಲಕ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ನೇರವೆರಿಸಿದರು. ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಪ್ರಾಂಶುಪಾಲ ವಂ| ಪ್ರವೀಣ್ ಅಮ್ರತ್ ಮಾರ್ಟಿಸ್, ಪಾಲನ ಮಂಡಳಿ ಉಪಾಧ್ಯಕ್ಷ ಲುವಿಸ್ ಜೆ. ಫೆರ್ನಾಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ, 18 ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಧರ್ಮಭಗಿನಿಯರು, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು ಮತ್ತು ಭಕ್ತಾಧಿಗಳು ಹಾಜರಿದ್ದರು.

ಶ್ರೀನಿವಾಸಪುರ: ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಂಡು ಉತ್ತಮ ಫಲಿತಾಂಶ ಪಡೆದುಕೊಳ್ಳಬೇಕು : ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್‌

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ: ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಂಡು ಉತ್ತಮ ಫಲಿತಾಂಶ ಪಡೆದುಕೊಳ್ಳಬೇಕು : ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್‌
  ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ಧನದ ಚೆಕ್‌ ವಿತರಿಸಿ ಮಾತನಾಡಿ, ಪುರಸಭೆ ವತಿಯಿಂದ 91 ವಿದ್ಯಾರ್ಥಿಗಳಿಗೆ ರೂ.6.42 ಲಕ್ಷ ಸಹಾಯ ಧನ ವಿತರಿಸಲಾಗಿದೆ. ಫಲಾನುಭವಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ನೆರವು ನೀಡಲಾಗಿದೆ ಎಂದು ಹೇಳಿದರು.
  ಪುರಸಭೆಯ ಶೇ.5ರ ಯೋಜನೆಯಡಿ ಅಂಗವಿಕಲರಿಗೆ 4 ತ್ರಿಚಕ್ರ ಮೋಟಾರ್‌ ಸೈಕಲ್‌ಗಳನ್ನು ವಿತರಿಸಲಾಗಿದೆ. ಫಲಾನುಭವಿಗಳು ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಕೋಳರಿಮೆ ಬಿಟ್ಟು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಹೇಳಿದರು.
  ಪುರಸಭಾ ಸದಸ್ಯರಾದ ಬಿ.ವೆಂಕಟರೆಡ್ಡಿ, ಸರ್ದಾರ್‌, ಪರಿಸರ ಅಭಿಯಂತರ ಶೇಖರ್‌ ರೆಡ್ಡಿ, ಸಮುದಾಯ ಸಂಘಟನಾ ಅಧಿಕಾರಿ ಕೆ.ಎನ್‌.ರಾಜೇಶ್ವರಿ, ಕೋಲಾರ ನಗರ ಸಭೆಯ ಸಮುದಾಯ ಸಂಘಟನಾಧಿಕಾರಿ ಶಿವಪ್ರಕಾಶ್‌ ಇದ್ದರು. 

ದೇಶದ ಸಾಮಾನ್ಯ ನಾಗರೀಕನಿಗೂ ಉತ್ತಮವಾದ ಆರೋಗ್ಯ ಚಿಕಿತ್ಸೆಯನ್ನು ಒದಗಿಸುವುದು ಅತ್ಯಂತ ಪ್ರಮುಖವಾದ ಕಾರ್ಯ: ಗೋವಿಂದಸ್ವಾಮಿ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

ದೇಶದ ಸಾಮಾನ್ಯ ನಾಗರೀಕನಿಗೂ ಉತ್ತಮವಾದ ಆರೋಗ್ಯ ಚಿಕಿತ್ಸೆಯನ್ನು ಒದಗಿಸುವುದು ಅತ್ಯಂತ ಪ್ರಮುಖವಾದ ಕಾರ್ಯ: ಗೋವಿಂದಸ್ವಾಮಿ 

 

 

ಯಲ್ದೂರು, ಮಾ-06 ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದೇಶದ ಸಾಮಾನ್ಯ ನಾಗರೀಕನಿಗೂ ಉತ್ತಮವಾದ ಆರೋಗ್ಯ ಚಿಕಿತ್ಸೆಯನ್ನು ಒದಗಿಸುವುದು ಅತ್ಯಂತ ಪ್ರಮುಖವಾದ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಆಸ್ಪತ್ರೆಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳಾದ ನೀರಿನ ವ್ಯವಸ್ಥೆ, ಮೀನು ಸಾಕಾಣಿಕ ತೊಟ್ಟಿ, ಹೊಗಳಗೆರೆ ಗ್ರಾಮದಿಂದ ಆಸ್ಪತ್ರೆಯವರೆಗೂ ವಿದ್ಯುತ್ ದೀಪಗಳ ಅಳವಡಿಕೆ, ಅಗತ್ಯವಿರುವ ಸಿಬ್ಬಂಧಿ ನೇಮಕಾತಿಗೆ ತಮ್ಮ ಜಿಲ್ಲಾ ಪಂಚಾಯ್ತಿ ಅನುದಾನದಿಂದ ಒದಗಿಸುವುದಾಗಿ ಕೆ.ಪಿ.ಸಿ.ಸಿ. ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯ ಗೋವಿಂದಸ್ವಾಮಿ ತಿಳಿಸಿದರು.
ಅವರು ಇಂದು ಯಲ್ದೂರು ಹೋಬಳಿ, ಹೊಗಳಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕುಂದು ಕೊರತೆಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ, ಈಗಿನ ಭಯಾನಕ ಕೊರೋನಾ ವೈರಸ್‍ನಂತಹ ಕಾಯಿಲೆಗಳ ಭೀತಿಯಲ್ಲಿ ಬಡವರು ಬಗ್ಗರು ಎನ್ನದೇ ಎಲ್ಲಾ ರೀತಿಯ ರೋಗಿಗಳು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿದ್ದು, ಆಸ್ಪತ್ರೆ ಸಿಬ್ಬಂಧಿ ಅವರಿಗೆ ಸೂಕ್ತವಾಗಿ ಸ್ಪಂಧಿಸಿ ಚಿಕಿತ್ಸೆಯನ್ನು ನೀಡಬೇಕು. ಈ ನಿಟ್ಟಿನಲ್ಲಿ ಆಸ್ಪತ್ರೆಗೆ ಬೇಕಾಗಿರುವ ಎಲ್ಲಾ ರೀತಿಯ ವೈದ್ಯಕೀಯ ಉಪಕರಣಗಳ ಸೌಲಭ್ಯ, ಧ್ವಜಸ್ತಂಭ ಕಟ್ಟೆಯ ನಿರ್ಮಾಣ, ನೆಲಹಾಸಿಗೆ ಗ್ರಾನೈಟ್ ಅಳವಡಿಕೆ ಮುಂತಾದವುಗಳನ್ನು ಒದಗಿಸಿ ಸರ್ಕಾರಿ ಆಸ್ಪತ್ರೆಯು ಯಾವುದೇ ಖಾಸಗೀ ಆಸ್ಪತ್ರೆಗೆ ಕಡಿಮೆಇಲ್ಲದಂತೆ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು. ಆದ್ದರಿಂದ ನಾಗರೀಕರು ಈ ಸೌಲಭ್ಯಗಳನ್ನು ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ರಮಾವತಿ, ಪಿ.ಡಿ.ಒ. ಚಿನ್ನಪ್ಪ, ಎಸ್.ಡಿ.ಎ. ಶ್ರೀನಿವಾಸ್, ಗ್ರಾಮ ಪಂಚಾಯ್ತಿ ಸದಸ್ಯ ಕೃಷ್ಣಪ್ಪ, ವೈದ್ಯಾಧಿಕಾರಿ ಡಾ|| ಶಾಲಿನಿ, ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾದ ವೆಂಕಟಸ್ವಾಮಿ, ಆಸ್ಪತ್ರೆಯ ಸಿಬ್ಬಂಧಿ ರವೀಂದ್ರಬಾಬು, ನವೀನ್‍ಕುಮಾರ್, ಪಾರ್ವತಮ್ಮ, ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು.

 

 

 

 

ಭಂಡಾರ್ಕಾರ್ಸ್  ಯುಥ್ ರೆಡ್‍ಕ್ರಾಸ್ ವಿಂಗ್, ಎನ್.ಎಸ್.ಎಸ್, ಎನ್.ಸಿ.ಸಿ ರೆಡ್ ರಿಬ್ಬನ್ ಕ್ಲಬ್, ರೆಡ್‍ಕ್ರಾಸ್, ಕುಂದಾಪುರ ಕಸ್ತೂರ್ಬಾ ಆಸ್ಪತ್ರೆ  ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ

JANANUDI.COM NETWORK 

 

 

ಭಂಡಾರ್ಕಾರ್ಸ್  ಯುಥ್ ರೆಡ್‍ಕ್ರಾಸ್ ವಿಂಗ್, ಎನ್.ಎಸ್.ಎಸ್, ಎನ್.ಸಿ.ಸಿ ರೆಡ್ ರಿಬ್ಬನ್ ಕ್ಲಬ್, ರೆಡ್‍ಕ್ರಾಸ್, ಕುಂದಾಪುರ ಕಸ್ತೂರ್ಬಾ ಆಸ್ಪತ್ರೆ  ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ

 

 

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕಾಲೇಜಿನ ಯುಥ್ ರೆಡ್‍ಕ್ರಾಸ್ ವಿಂಗ್, ಎನ್.ಎಸ್.ಎಸ್, ಎನ್.ಸಿ.ಸಿ ರೆಡ್ ರಿಬ್ಬನ್ ಕ್ಲಬ್, ರೆಡ್‍ಕ್ರಾಸ್, ಕುಂದಾಪುರ ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ರೆಡ್‍ಕ್ರಾಸ್, ಕುಂದಾಪುರ ಇದರ ಸಬಾಪತಿಗಳಾದ ಜಯಕರ ಶೆಟ್ಟಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.
ಸುಮಾರು 371 ಯುನಿಟ್ ರಕ್ತವನ್ನು ರಕ್ತದಾನಿಗಳಿಂದ ಸಂಗ್ರಹಿಸಲಾಯಿತು. ಮುಖ್ಯವಾಗಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಯುಥ್ ರೆಡ್‍ಕ್ರಾಸ್ ವಿಂಗ್ ಅಧಿಕಾರಿ ಪ್ರೊ.ಸತ್ಯನಾರಾಯಣ, ಮತ್ತು ವಿದ್ಯಾರಾಣಿ ಮತ್ತು ಎನ್.ಎಸ್.ಎಸ್ ಅಧಿಕಾರಿ ಅರುಣ ಎ.ಎಸ್. ಮತ್ತು ರಾಮಚಂದ್ರ ಆಚಾರಿ, ಎನ್.ಸಿ.ಸಿ ಅಧಿಕಾರಿಗಳಾದ ಶರಣ್ ಎಸ್.ಜೆ, ಮತ್ತು ಅಂಜನ್ ಕುಮಾರ್, ಮಣಿಪಾಲದ ರಕ್ತಬ್ಯಾಂಕ್ ಇದರ ವೈಧ್ಯಾಧಿಕಾರಿ ಡಾ.ಶೀತಲ್ ಭಾಗವಹಿಸಿದ್ದರು.

ಭಂಡಾರ್ಕಾರ್ಸ್  ಕನ್ನಡ ವಿಭಾಗ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಸಹಯೋಗದಲ್ಲಿ “ ಮಾನವಿಕ ಶಾಸ್ತ್ರದಲ್ಲಿ ಸಾಹಿತ್ಯದ ಹೂರಣ” ಕುರಿತು ಉಪನ್ಯಾಸ 

JANANUDI.COM NETWORK

 

 

ಭಂಡಾರ್ಕಾರ್ಸ್  ಕನ್ನಡ ವಿಭಾಗ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಸಹಯೋಗದಲ್ಲಿ “ ಮಾನವಿಕ ಶಾಸ್ತ್ರದಲ್ಲಿ ಸಾಹಿತ್ಯದ ಹೂರಣ” ಕುರಿತು ಉಪನ್ಯಾಸ 

 

 

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಾರ್ಚ್ 4ರಂದು ಕನ್ನಡ ವಿಭಾಗ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಸಹಯೋಗದಲ್ಲಿ “ ಮಾನವಿಕ ಶಾಸ್ತ್ರದಲ್ಲಿ ಸಾಹಿತ್ಯದ ಹೂರಣ” ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸುರೇಂದ್ರ ಶೆಟ್ಟಿ ಮಾತನಾಡಿ ಮಾನವಿಕ ಶಾಸ್ತ್ರ ಎನ್ನುವುದು ಒಂದು ಅಧ್ಯಯನವಾಗಿರದೇ ಅದು ಕಲಿಯುವಿಕೆಯ ಆಸಕ್ತಿಯನ್ನು ಮೂಡಿಸಬೇಕು. ಇದರಲ್ಲಿ ಸಾಹಿತ್ಯದ ಮೇಳೈಸುವಿಕೆ ಇದ್ದಾಗ ಒಬ್ಬ ವಿದ್ಯಾರ್ಥಿಗೆ ಓದಿನ ರುಚಿಯನ್ನು ಅರ್ಥೈಸುವ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ಮಾನವಿಕ ಶಾಸ್ತ್ರದ ಕಲಿಯುವಿಕೆ ಜಟಿಲವಾಗದಂತೆ ಮತ್ತು ತಿಳಿದುಕೊಳ್ಳಲು ಸಾಹಿತ್ಯವೆನ್ನುವುದು ಬೇಕೆಬೇಕು. ಅದನ್ನು ನಾವು ಅಳವಡಿಸಿಕೊಳ್ಳಬೇಕು. ಸಾಹಿತ್ಯಕ್ಕೆ ಯಾವುದೇ ದೇಶ ಭಾಷೆ,ಸಮಸ್ಕøತಿ, ಶಾಸ್ತ್ರಗಳ ಮೇರೆ ಇಲ್ಲ್. ಎಲ್ಲೆಂದರಲ್ಲಿ ಸಾಹಿತ್ಯ ಸ್ಪುರಿಸುತ್ತದೆ. ಅದನ್ನು ನಾವು ಮೊದಲು ತಿಳಿದುಕೊಳ್ಳಬೇಕು. ಅಲ್ಲದೇ ಒಳ್ಳೆಯ ಸಾಹಿತ್ಯದ ಓದುಗರಾಗಬೇಕು. ಯಾಕೆಂದರೆ ನಮ್ಮ ಆಲೋಚನಾಲಹರಿ ಅದು ಚುರುಕನ್ನು ಮುಟ್ಟಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.
ಬಿ.ಬಿ.ಹೆಗ್ಡೆ ಕಾಲೇಜಿನ ಪ್ರಾಧ್ಯಾಪಕರಾದ ಚೇತನ್ ಕುಮಾರ್ ಕೋವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಕನ್ನಡ ವಿಬಾಗದ ಮುಖ್ಯಸ್ಥರಾದ ಡಾ.ರೇಖಾ ಬನ್ನಾಡಿ ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕರಾದ ಗಣಪತಿ ಭಟ್ ವಂದಿಸಿದರು. ವಿದ್ಯಾರ್ಥಿನಿ ಕೀರ್ತಿ ಕಾರ್ಯಕ್ರಮ ನಿರ್ವಹಿಸಿದರು.

ರಾಜ್ಯ ಬಜೆಟ್‍ನಲ್ಲಿ ಕೋಲಾರ ಜಿಲ್ಲೆಗೆ ಅನ್ಯಾಯ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

 

ರಾಜ್ಯ ಬಜೆಟ್‍ನಲ್ಲಿ ಕೋಲಾರ ಜಿಲ್ಲೆಗೆ ಅನ್ಯಾಯ

 

 

 

 

ಕೋಲಾರ : ಗುರುವಾರ ರಾಜ್ಯ ಬಜೆಟ್‍ನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಂಡಿಸಿದ್ದು, ಈ ಬಜೆಟ್‍ನಲ್ಲಿ ಕೋಲಾರ ಜಿಲ್ಲೆಯನ್ನು ಸಂಪೂರ್ಣವಾಗಿ ಕೈ ಬಿಟ್ಟಿರುವುದು ಬೇಸರದ ಸಂಗತಿ ಎಂದು ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ಮತ್ತು ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ ಟೀಕಿಸಿದ್ದಾರೆ.
ಕೋಲಾರ ಜಿಲ್ಲೆಯು ಬಿ.ಜೆ.ಪಿ.ಯ ಸಂಸದರು ಮತ್ತು ಉಸ್ತುವಾರಿ ಮಂತ್ರಿಗಳಿದ್ದರೂ ಸಹ ಕೋಲಾರ ಜಿಲ್ಲೆಯನ್ನು ಕಡೆಗಣಿಸಿದ್ದಾರೆ. ಕುಮಾರಸ್ವಾಮಿ ಕೋಲಾರ ನಗರಾಭಿವೃದ್ಧಿ ಬಿಡುಗಡೆ ಮಾಡಿದ ಅನುದಾನವನ್ನು ಈಗಿನ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಕೋಲಾರ ನಗರದ ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದ ಹಣವನ್ನು ನೆರೆ ಸಂತ್ರಸ್ಥರ ಹೆಸರಿನಲ್ಲಿ ವಾಪಸ್ಸು ಪಡೆದರು. ಆದರೆ 2020ರ ರಾಜ್ಯ ಬಜೆಟ್‍ನಲ್ಲಿ ಆ ಅನುಧಾವನ್ನು ವಾಪಸ್ಸು ನೀಡುವ ಕೋಲಾರದ ಜನರ ನಿರೀಕ್ಷೆಯನ್ನು ಉಸಿಮಾಡಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾವು, ಟೆಮೋಟೊ ಬೆಳೆಯುತ್ತಿದ್ದು, ಈ ರೈತರಿಗಾಗಿ ಸಂಸ್ಕರಣ ಘಟಕವನ್ನು ನೀಡುವರೆಂಬ ರೈತರ ಆಸೆಗೆ ತಣ್ಣೀರು ಎರೆಚಿದ್ದಾರೆ.
ಸುಮಾರು 15 ವರ್ಷಗಳಿಂದ ಬರ ಎದುರಿಸುತ್ತಿರುವ ಕೋಲಾರ ಜಿಲ್ಲೆಯ ರೈತರು ಹೈನುಗಾರಿಕೆಯನ್ನು ಅವಲಂಬಿಸಿದ್ದು, ಹಿಂಡಿ, ಬೂಸ, ಪೀಡ್ ಬೆಲೆಗಳು ಗಗನಕ್ಕೇರಿದ್ದು, ಹಾಲಿ ಬೆಲೆ ಯಥಾಸ್ಥಿತಿಯಲ್ಲಿರುವುದು ಲೀಟರ್ ಹಾಲಿನ ಬೆಲೆ ಸುಮಾರು 45 ರೂ ನೀಡಿದ್ದೇ ಆದರೆ ಹೈನುಗಾರಿಕೆಯನ್ನು ನಂಬಿರುವ ರೈತರಿಗೆ ಅನುಕೂಲವಾಗುತ್ತಿತ್ತು. ಆದರೆ ಈ ಬಜೆಟ್‍ನಲ್ಲಿ ಹೈನುಗಾರಿಯ ಹೆಸರೇ ಪ್ರಸ್ತಾಪ ಮಾಡದೆ ರೈತನನ್ನು ನಡು ನೀರಿನಲ್ಲಿ ಬಿಟ್ಟಂತಾಗಿದೆ.
ಪಕ್ಕದ ಅವಳಿ ಜಿಲ್ಲೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮುಂದಾಗಿದ್ದು, ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ಮೆಡಿಕಲ್ ಕಾಲೇಜು ಒಂದೂ ಇಲ್ಲದಿದ್ದರೂ ಸಹ ಕೋಲಾರ ಜಿಲ್ಲೆಯ ಹೆಸರನ್ನೇ ಪ್ರಸ್ತಾಪ ಮಾಡದೆ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಇಟ್ಟಂತಾಗಿದೆ ಎಂದು ಆರೋಪಿಸಿದ್ದಾರೆ.
ಕೋಲಾರ ಜಿಲ್ಲೆಯ ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರನ್ನು ಮೂರನೇ ಬಾರಿ ಶುದ್ಧೀಕರಣದ ಬಗ್ಗೆ ಬಜೆಟ್‍ನಲ್ಲಿ ಪ್ರಸ್ತಾಪಿಸದೆ, ಕೆ.ಸಿ.ವ್ಯಾಲಿ ನೀರು ಹರಿಸುವ ಕೆರೆಗಳ ಅಭವೃದ್ಧಿ ಮಾಡದೆ, ರಾಜಕಾಲುವೆ ಒತ್ತುವರಿಯನ್ನು ತೆರವು ಮಾಡುವ ಬಗ್ಗೆ ಬಜೆಟ್‍ನಲ್ಲಿ ಚಕಾರವೆತ್ತದೆ ಇರುವುದು ನೋವಿನ ಸಂಗತಿಯಾಗಿದೆ ಎಂದಿದ್ದಾರೆ.

 

 

ಈ ಬಜೆಟ್ ರೈತ ವಿರೋಧಿ, ವಿದ್ಯಾರ್ಥಿ ವಿರೋಧಿ ಹಾಗೂ ಕೋಲಾರ ಜಿಲ್ಲೆಯ ವಿರೋಧಿ ಬಜೆಟ್ ಆಗಿದ್ದು, ಈ ಬಜೆಟ್ ರಾಜ್ಯ ಅಭಿವೃದ್ಧಿ ಬಜೆಟ್ ಅಲ್ಲ. ಬಿ.ಎಸ್.ಯಡಿಯರಪ್ಪನವರ ಜಿಲ್ಲೆ ಶಿವಮೊಗ್ಗ ಜಿಲ್ಲೆಯ ಬಜೆಟ್ ಆಗಿದೆ ಎಂದು ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ಮತ್ತು ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ ಟೀಕಿಸಿದ್ದಾರೆ.

 

 

 

 

ಶ್ರೀನಿವಾಸಪುರ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ , ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲಿಯೇ ಮೃತರು. ಒಬ್ಬ ವ್ಯಕ್ತಿಗೆ ತೀವ್ರ ಗಾಯ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

ಶ್ರೀನಿವಾಸಪುರ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ , ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲಿಯೇ ಮೃತರು. ಒಬ್ಬ ವ್ಯಕ್ತಿಗೆ ತೀವ್ರ ಗಾಯ
ಶ್ರೀನಿವಾಸಪುರ: ತಾಲ್ಲೂಕಿನ ಶ್ರೀನಿವಾಸಪುರ ಹೊಗಳಗೆರೆ ರಸ್ತೆಯ ಸಮೀಪ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಒಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾನೆ.
  ಮೃತರನ್ನು ತಾಲ್ಲೂಕಿನ ಗಾಂಧಿನಗರ ಗ್ರಾಮದ ಯಶ್ವಂತ್‌ (20), ದೊಡ್ಡವೆಂಕಟೇಶಪ್ಪ (50), ಯಲ್ಲಪ್ಪ (18) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ತೀವ್ರವಾಗಿ  ಗಾಯಹೊಂಡಿರುವ ಮೋನಹ್‌ ಕುಮಾರ್‌ (23) ಅವರನ್ನು ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
  ಈ ನಾಲ್ವರು ಗುರುವಾರ ಬೆಳಿಗ್ಗೆ ಸುಮಾರು 5 ಗಂಟೆಯಲ್ಲಿ ಕಾರ್ಯನಿಮಿತ್ತ ಕೋಲಾರಕ್ಕೆ ಪಲ್ಸರ್‌ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ ರೆಡ್ಡಿ, ಹೆಚ್ಚುವರಿ ವರಿಷ್ಠಾಧಿಕಾರಿ ಜಾಹ್ನವಿ, ಡಿವೈಎಸ್‌ಪಿ ನಾರಾಯಣಸ್ವಾಮಿ, ಪೊಲೀಸ್ ಸರ್ಕಲ್‌ ಇನ್ಸ್‌ಪೆಕ್ಟರ್‌ ಎನ್‌.ಕೆ.ರಾಘವೇಂದ್ರ ಪ್ರಕಾಶ್, ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ವಿಠಲ್‌ ತಳವಾರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.