HOLY ROSARY CHURCH, KUNDAPUR – 450 th JUBILEE SOUVENIR 2021

ಕುಂದಾಪುರ ಸರಕಾರಿ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ 14 ಮಂದಿ ಕೊರೋನ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆ

JANANUDI.COM NETWORK

 

 

ಕುಂದಾಪುರ ಸರಕಾರಿ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ 14 ಮಂದಿ ಕೊರೋನ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆ 

 

 

 

 

ಕುಂದಾಪುರ: ಮೇ.31 ಕುಂದಾಪುರ ಸರಕಾರಿ ಕೋವಿಡ್-19 ಆಸ್ಪತ್ರೆಯಲ್ಲಿ ಕೊರೋನ ಸೋಂಕಿತರಾದ 14 ಮಂದಿ ಚಿಕಿತ್ಸೆ ಪಡೆದು ಗುಣಮುಖರಾದ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು. ಸರಕಾರಿ ಆಸ್ಪತ್ರೆಯಲ್ಲಿ ಕೊರೋನಾ ಸಂಬಂಧಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮರಳುತ್ತಿರುವ ಹೊಸ ಅಧ್ಯಾಯಕ್ಕೆ ಇಂದು ಭಾನುವಾರ ಕುಂದಾಪುರದ ಕೋವಿಡ್ ಆಸ್ಪತ್ರೆಯಲ್ಲಿ ನಾಂದಿಯಾದರು..

ಕುಂದಾಪುರ ಸಹಾಯಕ ಆಯುಕ್ತ ಕೆ. ರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ, ಕೋವಿಡ್ ನೋಡಲ್ ಅಧಿಕಾರಿ ಡಾ| ಪ್ರಶಾಂತ್ ಭಟ್, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಾರ್ಬಟ್ ರೆಬೆಲ್ಲೊ, ಪಿಜಿಶಿಯನ್ ಡಾ. ನಾಗೇಶ್, ಬೈಂದೂರು ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪ್ರೇಮಾನಂದ, ಕುಂದಾಪುರ ಪಿಎಸ್ಐ ಹರೀಶ್ ಆರ್. ಮೊದಲಾದವರು ಉಪಸ್ಥಿತಿಯಿದ್ದು  ಕೋವಿಡ್ ಆಸ್ಪತೆಯಲ್ಲಿ ಚಿಕಿತ್ಸೆ ಪಡೆದು ಕೊರೋನಗುಣ ಮುಕ್ತರಾದವರಿಗೆ ಗುಲಾಬಿ ಗಿಡಗಳನ್ನು ವಿತರಿಸಿದರು

   ಹಾಗೇ  ಮಕ್ಕಳಿಗೆ ಚಾಕಲೇಟ್ ನೀಡುವ ಮೂಲಕ ವಿಶೇಷ ರೀತಿಯಲ್ಲಿ ಬೀಳ್ಕೋದುಗೆಯನ್ನು ನಡೆಸಿಕೊಟ್ಟರು.. ಈ ಸಂದರ್ಭದಲ್ಲಿ  ಕುಂದಾಪುರ ಸಿಟಿ ಜೆಸಿಐ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ಕುಂದಾಪುರ ಸರಕಾರಿ ಆಸ್ಪತ್ರೆಯ ವೈದ್ಯರು, ಶುಶ್ರೂಷಕಿಯರು, ಸಿಬ್ಬಂದಿಗಳು ಹಾಜರಿದ್ದರು

    ಪ್ರಸ್ತುತ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಟ್ಟು 78 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಅದರಲ್ಲಿ ಏಳನೆ ದಿನಕ್ಕೆ 3 ವರ್ಷ, 8 ವರ್ಷ ಮತ್ತು 14ವರ್ಷದ ಮಕ್ಕಳು ಸಹಿತ 55 ವರ್ಷದವರೆಗಿನ ಒಟ್ಟು 14 ಮಂದಿಯ ಗಂಟಲು ದ್ರವದ  ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿಯ ಪ್ರಕಾರ  ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.

    ಇವರಲ್ಲಿ ಬಹುತೇಕ ಮಂದಿ ಮಹಾರಾಷ್ಟ್ರ ರಾಜ್ಯದಿಂದ ಆಗಮಿಸಿದವರಗಿದ್ದು ಕೆಲವರು ತೆಲಂಗಾಣದಿಂದ ಬಂದವರಾಗಿದ್ದು ಸೋಂಕಿನ ಯಾವುದೇ ಲಕ್ಷ್ಮಣಗಳಿಲ್ಲದವರಾಗಿದ್ದಾರೆ ಎಂದು ತಿಳಿದು ಬಂದಿದೆ.

 

 

ಮುಂಬೈ ಸಿಮನ್ಸ ಕಂಪೆನಿಯ ಚೀಫ್ ಇಂಜಿನಿಯರ್ ಆಗಿದ್ದ ಕೋಣಿ ರಮೇಶ್ ಹೆಬ್ಬಾರ್ ನಿಧನ

JANANUDI.COM NETWORK

 

 

ಮುಂಬೈ ಸಿಮನ್ಸ ಕಂಪೆನಿಯ ಚೀಫ್ ಇಂಜಿನಿಯರ್ ಆಗಿದ್ದ ಕೋಣಿ ರಮೇಶ್ ಹೆಬ್ಬಾರ್ ನಿಧನ. 

 

 

 

 

ಮುಂಬೈ ಸಿಮನ್ಸ ಕಂಪೆನಿಯ ಚೀಫ್ ಇಂಜಿನಿಯರ್ ಆಗಿ ಹಲವು ಮಹತ್ವದನಿರ್ಮಾಣ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಖ್ಯಾತಿ ಹೊಂದಿರುವ ಕುಂದಾಪುರ ಕೋ ಣಿ ಗ್ರಾಮದ ರಮೇಶ್ ಹೆಬ್ಬಾರ್(80) ಮೇ.30ರಂದು ರಾತ್ರಿ ನಿಧನರಾದರು.
ಕೋಣಿ ಪಂಚಾಯತ್ ಮಾಜಿ ಅಧ್ಯಕ್ಷ ಮಾಧವ ಹೆಬ್ಬಾರರ ಸಹೋದರರಾಗಿರುವ ಇವರುಸಮಾಜ ಸೇವಕರಾಗಿ,ದಾನಿಗಳಾಗಿ ಗ್ರಾಮದ ಅಭಿವೃಧ್ದಿಯಲ್ಲೂ ತೊಡಗಿಸಿಕೊಂಡಿದ್ದರು
ಪತ್ನಿ ನಿಧನರಾಗಿದ್ದು,ಮೂವರು ಸಹೋದರಿಯರನ್ನು ಅಗಲಿದ್ದಾರೆ.
ಖ್ಯಾತ ಲೇಖಕ,ಜೇಸಿ ರಾಷ್ಟ್ರೀಯ ತರಬೇತುದಾರ,ರಕ್ಷಣಾ ಇಲಾಖೆಯ ಡಿ ಆರ್ ಡಿ ಒ ಸಂಪರ್ಕಾಧಿಕಾರಿ ಕೆ.ಜಯಪ್ರಕಾಶ್ ರಾವ್ ಅವರ ಭಾವ.

ಅವಿಭಜಿತ ಜಿಲ್ಲೆಯ ಫ್ಯಾಕ್ಸ್‍ಗಳ ಗಣಕೀಕರಣಕ್ಕೆ ಜೂನ್ 30ರ ಕಾಲಮಿತಿ ತಪ್ಪಿದಲ್ಲಿ ಆರ್ಥಿಕ ಸೌಲಭ್ಯ ನಿಲುಗಡೆ-ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

 

ಅವಿಭಜಿತ ಜಿಲ್ಲೆಯ ಫ್ಯಾಕ್ಸ್‍ಗಳ ಗಣಕೀಕರಣಕ್ಕೆ ಜೂನ್ 30ರ ಕಾಲಮಿತಿ
ತಪ್ಪಿದಲ್ಲಿ ಆರ್ಥಿಕ ಸೌಲಭ್ಯ ನಿಲುಗಡೆ-ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ

 

 

 

ಕೋಲಾರ:- ಅವಿಭಜಿತ ಜಿಲ್ಲೆಯ ಎಲ್ಲಾ ಸೊಸೈಟಿಗಳ ಗಣಕೀಕರಣ ಕಾರ್ಯ ಜೂನ್ ಅಂತ್ಯದೊಳಗೆ ಮುಗಿಸಿರಬೇಕು ಇಲ್ಲವಾದಲ್ಲಿ ಯಾವುದೇ ಆರ್ಥಿಕ ಸೌಲಭ್ಯ ನೀಡುವುದಿಲ್ಲ ಎಂದು ಎಸ್‍ಎಫ್‍ಸಿಎಸ್ ಸಿಇಒಗಳಿಗೆ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ ನೀಡಿದರು.

ಶನಿವಾರ ನಗರದ ಸಹಕಾರಿ ಯೂನಿಯನ್ ಸಭಾಗಂಣದಲ್ಲಿ ನಡೆದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಫ್ಯಾಕ್ಸ್ ಹಾಗೂ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಕಾಲಮಿತಿಯಲ್ಲಿ ಗಣಕೀಕರಣ ಮುಗಿಸಲು ಇರುವ ತೊಂದರೆ ಏನು ಎಂದು ಪ್ರಶ್ನಿಸಿದ ಅವರು, ಸಹಕಾರಿ ವ್ಯವಸ್ಥೆ ಉಳಿಸಬೇಕು ಎಂದಿದ್ದರೆ ಕೆಲಸ ಮಾಡಿ ಇಲ್ಲವಾದಲ್ಲಿ ಹೊರ ಹೋಗಿ ಎಂದು ತಾಕೀತು ಮಾಡಿದ ಅವರು, ಗಣಕೀಕರಣವಾಗದಿದ್ದರೆ ಸಾಲ,ಬಡ್ಡಿಹಣ ಯಾವುದೇ ಫಂಡ್ಸ್ ಬ್ಯಾಂಕಿನಿಂದ ಬಿಡುಗಡೆ ಮಾಡುವುದಿಲ್ಲ ಎಂದರು.

ಗಣಕೀಕರಣಕ್ಕೆ ನಿರ್ಲಕ್ಷ್ಯ ಸಿಇಒಗಳು ತರಾಟೆಗೆ

ಗುಡಿಬಂಡೆ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ,ಮಾಲೂರು ಸೊಸೈಟಿಗಳ ಸಿಇಒಗಳನ್ನು ತರಾಟೆಗೆ ತೆಗೆದುಕೊಂಡ ಅಧ್ಯಕ್ಷರು ಜೂನ್ 5 ರೊಳಗೆ ಗಣಕೀಕರಣದ ಮೊದಲ ಹಂತ ಮುಗಿದರಬೇಕು, ಇದು ನಿಮಗೆ ಅಂತಿಮ ಎಚ್ಚರಿಕೆ ಎಂದು ತಿಳಿಸಿದರು.

ಈಗಾಗಲೇ ನಿಮಗೆ ತರಬೇತಿ ನೀಡಲಾಗಿದೆ, ಆದರೂ ನಿರ್ಲಕ್ಷ್ಯ ಏಕೆ, ನೀವು ಸರಿಹೋಗದಿದ್ದರೆ ಮತ್ತೆ ಸೊಸೈಟಿಗಳಿಗೆ ಹಳೆ ದಿವಾಳಿ ಸ್ಥಿತಿ ಬಂದರೂ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಸೊಸೈಟಿಗಳು ಹಿಂದಿನಂತಿಲ್ಲ, ಡಿಸಿಸಿ ಬ್ಯಾಂಕಿನಿಂದ ಕೋಟ್ಯಾಂತರ ರೂ ನಿಮ್ಮ ಮೂಲಕ ಸಾಲ ವಿತರಿಸಿದ್ದೇವೆ, ಇಷ್ಟೊಂದು ವಹಿವಾಟು ಇರುವಾಗ ಪಾರದರ್ಶಕತೆ ಬೇಕು, ರೈತರು, ಮಹಿಳೆಯರು ನಿಮ್ಮನ್ನು ಅನುಮಾನದಿಂದ ನೋಡಬಾರದು ಎಂದರು.

310 ಕೋಟಿ ರೂಠೇವಣಿ ಸಂಗ್ರಹ

ಸಾರ್ವಜನಿಕರಿಗೆ ಪಾರದರ್ಶಕ ಆಡಳಿತ ಸೇವೆ ಸಲ್ಲಿಸುವ ಉದ್ದೇಶದಿಂದ ಸೆಕ್ಷನ್ 11 ವ್ಯಾಪ್ತಿಯಲ್ಲಿದ್ದ ಬ್ಯಾಂಕನ್ನು ಹೊರಗೆ ತರಲಾಯಿತು, ನಂತರ ಎನ್‍ಪಿಎ ಕಡಿಮೆ ಮಾಡಲಾಯಿತು, ಹೀಗೆ ಹಂತಹಂತವಾಗಿ ಬ್ಯಾಂಕ್ ಹಣಕಾಸು ವಹಿವಾಟಿನಲ್ಲಿ ಚೇತರಿಕೆಯಾಗಿದ್ದು, 310 ಕೋಟಿ ರೂ ಠೇವಣಿ ಸಂಗ್ರಹಿಸಲಾಗಿದೆ ಎಂದರು.

ರೈತರಿಗೆ ಕೆಸಿಸಿ ಸಾಲ, ಮಹಿಳಾ ಸಂಘಗಳಿಗೆ ಸಾಲ ಸೇರಿದಂತೆ ವಿವಿಧ ರೀತಿಯ ಸಾಲ ನೀಡಿದ್ದು, ಪ್ರಾಮಾಣಿಕವಾಗಿ ಮರುಪಾವತಿ ಆಗುತ್ತಿದೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬ್ಯಾಂಕ್ ಖ್ಯಾತಿ ಗಳಿಸಿದೆ, ಬ್ಯಾಂಕಿನ ಕಿಸಾನ್ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಬಗ್ಗೆ ತಿಳಿಸಿ, ಬಡ್ಡಿದರ ನಮ್ಮಲ್ಲೇ ಹೆಚ್ಚು ಎಂದು ಮನವರಿಕೆ ಮಾಡಿ ಎಂದರು.

ಲಾಕ್‍ಡೌನ್ ಹಿನ್ನಲೆಯಲ್ಲಿ ಯವುದೇ ಸಾಲ ಕಟ್ಟುವಷ್ಟಿಲ್ಲ ಎಂದು ಸರ್ಕಾರ ಅಧಿಕೃತ ಆದೇಶ ಮಾಡಿಲ್ಲ, ಕೆಲವು ಮಂದಿ ಅಪಪ್ರಚಾರ ಮಾಡುತ್ತಿದ್ದಾರೆ, ಹಿಂದೆ ಪ್ರತಿ ತಿಂಗಳು 26 ಕೋಟಿ ರೂ ವಸೂಲಿ ಆಗುತ್ತಿತ್ತು, ಆದರೆ ಈ ಎರಡು ತಿಂಗಳಿಂದ ಕೇವಲ 3 ಕೋಟಿ ಮಾತ್ರ ವಸೂಲಿಯಾಗಿದೆ ಎಂದು ತಿಳಿಸಿ ಸಾಲಗಾರರ ಮನವೊಲಿಸಿ ಮರುಪಾವತಿ ಮಾಡಿಸಿ ಎಂದರು.

ನಿರ್ದೇಶಕ ಯಲವಾರ ಸೋಣ್ಣೇ ಗೌಡ ಮಾತನಾಡಿ, ಕಾರ್ಯದರ್ಶಿಗಳು, ಸಿಇಒಗಳು ಸಬೂಬುಗಳು ಹೇಳಿಕೊಂಡು ಕುಳಿತರೆ ಕೆಲಸ ಆಗುವುದಿಲ್ಲ, ಗಣಕೀಕರಣಗೊಳಿಸಬೇಕು ಎಂದು ಸತತವಾಗಿ 8 ತಿಂಗಳಿಂದ ಪ್ರಯತ್ನ ನಡೆಯುತ್ತಿದೆ, ನೀವು ಇನ್ನು ನೆಪ ಹೇಳಿಕೊಂಡು ಕುಳಿತರೆ ಹೇಗೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಬೆಳೆ ಬೆಳೆಯುವಂತ ರೈತರನ್ನು ಗುರುತಿಸಿ ಬೆಳೆ ಸಾಲ ನೀಡಬೇಕು, ಪಹಣಿ ಇರುವ ರೈತರಿಗೆಲ್ಲ ಸಾಲ ನೀಡಲು ಆಗುವುದಿಲ್ಲ, ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೆ ಅದನ್ನು ಪರಿಶೀಲಿಸಿ ಸಾಲ ಮಂಜೂರು ಮಾಡಬೇಕು, ಬಾಕಿ ಇರುವ ಬೆಳೆ ಸಾಲ ಸಂಪೂರ್ಣವಾಗಿ ವಸೂಲಿ ಮಾಡಿ, ಪಡಿತರದಿಂದ ಲಾಭ ಎನ್ನುವ ಮನೋಭಾವ ಬಿಡಿ ಎಂದರು.

ಸಭೆಯಲ್ಲಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ನೀಲಕಂಠೇಗೌಡ, ಬ್ಯಾಂಕಿನ ಉಪಾಧ್ಯಕ್ಷ ನಾಗರಾಜ್, ನಿರ್ದೇಶಕರಾದ ಕೆ.ವಿ.ದಯಾನಂದ್, ಬಿ.ವಿ.ವೆಂಕಟರೆಡ್ಡಿ,ಮೋಹನ್ ರೆಡ್ಡಿ, ನಾಗಿರೆಡ್ಡಿ, ನಾರಾಯಣರೆಡ್ಡಿ, ಹನುಮಂತರೆಡ್ಡಿ, ನಾಗನಾಳ ಸೋಮಣ್ಣ,ಗೋವೀಂದರಾಜ್, ಅನಿಲ್ ಕುಮಾರ್,ಚೆನ್ನರಾಯಪ್ಪ, ಎಂಡಿ ರವಿ, ಎಜಿಎಂಗಳಾದ ಶಿವಕಮಾರ್, ಖಲೀಂವುಲ್ಲಾ, ಬೈರೇಗೌಡ ಹಾಜರಿದ್ದರು.

ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಲಾಗುವುದು -ಎಸ್.ಸುರೇಶ್ ಕುಮಾರ್

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

 

ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಲಾಗುವುದು -ಎಸ್.ಸುರೇಶ್ ಕುಮಾರ್ 

 

 

 

 

ಕೋಲಾರ ; ಎಸ್.ಎಸ್.ಎಲ್.ಸಿ ಮಕ್ಕಳಿಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆಯನ್ನು ಜೂನ್ 25 ರಿಂದ ಜುಲೈ 4 ರವೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಫ್ರೌಡ ಶಿಕ್ಷಣ ಸಚಿವರು ಹಾಗೂ ಸಕಾಲ ಸಚಿವರಾದ ಎಸ್ ಸುರೇಶ್ ಕುಮಾರ್ ಅವರು ತಿಳಿಸಿದರು.

ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಎಸ್.ಎಸ್.ಎಲ್.ಸಿ ಪರೀಕ್ಷೆ ಕುರಿತ ಪೂರ್ವ ಸಿದ್ದತಾ ಸಭೆ ನಡೆಸಿ ಅವರು ಮಾತನಾಡಿದರು. ಪರೀಕ್ಷೆಯನ್ನು 8 ಲಕ್ಷದ 48 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಎಲ್ಲಾ ವಿದ್ಯಾರ್ಥಿಗಳಿಗೂ ಮಾಸ್ಕ್ ವಿತರಿಸಲಾಗುವುದು. ಸ್ಕೌಟ್ ಮತ್ತು ಗೈಡ್ಸ್ ಅವರು ಎಲ್ಲಾ ವಿದ್ಯಾರ್ಥಿಗಳಿಗೂ ಮಾಸ್ಕ್ ಅನ್ನು ಒದಗಿಸುವುದಾಗಿ ತಿಳಿಸಿದ್ದಾರೆ. ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು. ಯಾವುದೇ ವಿದ್ಯಾರ್ಥಿಗೆ ಆರೋಗ್ಯ ಸಮಸ್ಯೆ ಕಂಡುಬಂದರೂ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗುವುದು ಎಂದರು.

ಪರೀಕ್ಷೆ ನಡೆಸಲು ಶಿಕ್ಷಣ ತಜ್ನರಿಂದ ಅಭಿಪ್ರಾಯ ಪಡೆಯಲಾಗಿದೆ. ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಲು ತಜ್ನರು ತಿಳಿಸಿದ್ದಾರೆ. ಹೈ ಕೋರ್ಟ್ ಸಹ ನಾವು ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ಮೆಚ್ಚಿ ಪರೀಕ್ಷೆ ನಡೆಸಲು ಹಸಿರು ನಿಶಾನೆ ತೋರಿದೆ. ಕೇರಳ ರಾಜ್ಯದಲ್ಲಿ ಈಗಾಗಲೇ ಪರೀಕ್ಷೆ ನಡೆಯುತ್ತಿದೆ. ಈ ಹಿಂದೆ ಪ್ರತಿ ಕೊಠಡಿಗೆ 24 ವಿದ್ಯಾರ್ಥಿಗಳನ್ನು ಕೂರಿಸಲಾಗುತ್ತಿತ್ತು. ಈ ಸಂಖ್ಯೆಯನ್ನು 18 ರಿಂದ 20 ಕ್ಕೆ ಇಳಿಸಲಾಗುವುದು. ಇದರಿಂದ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ರಾಜ್ಯದ 4500 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಹಳ್ಳಿಗಳಿಂದ ಬರುವ ಪ್ರತಿ ಮಕ್ಕಳಿಗೂ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಇರುವ ವಾಹನಗಳನ್ನು ಸಹ ಮಕ್ಕಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆದುಕೊಂಡು ಹೋಗಲು ಬಳಸಿಕೊಳ್ಳಲಾಗುವುದು. ವಲಸೆ ಕಾರ್ಮಿಕರ ಮಕ್ಕಗಳಿಗೆ ಅವರು ಇರುವ ಹತ್ತಿರದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಅದೇ ರೀತಿ ವಸತಿ ಶಾಲೆಗಳು ಹಾಗೂ ಹಾಸ್ಟೆಲ್‍ಗಳನ್ನು ಕ್ವಾರಂಟೇನ್ ಕೇಂದ್ರಗಳಾಗಿ ಪಡೆದುಕೊಂಡಿದ್ದು, ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳಿಗೂ ತಾವು ಇರುವ ಹತ್ತಿರದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಕಂಟೈನ್ ಮೆಂಟ್ ಜೋನ್‍ಗಳಲ್ಲಿ ಪರೀಕ್ಷಾ ಕೇಂದ್ರಗಳಿದ್ದರೆ ಬೇರೆಡೆಗೆ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ ಶಿಪ್ಟ್ ಮಾಡಲಾಗುವುದು. ಅದಕ್ಕಾಗಿಯೇ ಪ್ರತಿ ತಾಲ್ಲೂಕಿನಲ್ಲಿ 2 ಪರೀಕ್ಷಾ ಕೇಂದ್ರಗಳನ್ನು ಹೆಚ್ಚುವರಿಯಾಗಿ ಗುರುತಿಸಿಕೊಳ್ಳಲಾಗಿದೆ. ಚಂದನ ವಾಹಿನಿಯಲ್ಲಿ ಪ್ರಕಟವಾದ ಪುನರ್ ಮನನ ತರಗತಿಗಳು ವಿದ್ಯಾರ್ಥಿಗಳಿಗೆ ಅನುಕೂಲವಾಗಿವೆ. ರಾಜ್ಯದಲ್ಲಿ 34 ಶೈಕ್ಷಣಿಕ ಜಿಲ್ಲೆಗಳಿದ್ದೂ ಎಲ್ಲಾ ಜಿಲ್ಲೆಗಳಿಗೂ ಬೇಟಿ ನೀಡಿ ಪರೀಕ್ಷಾ ಸಿದ್ದತೆ ವ್ಯವಸ್ಥೆಯನ್ನು ಪರಿಶೀಲಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕೆ.ಜಿ.ಎಫ್ ಶಾಸಕರಾದ ರೂಪಕಲಾ ಶಶಿದರ್, ಜಿಲ್ಲಾ ಪಂಚಾಯತ್ ಅದ್ಯಕ್ಷರಾದ ಸಿ.ಎಸ್.ವೆಂಕಟೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಹೆಚ್.ವಿ.ದರ್ಶನ್, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪೌಜಿಯಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರತ್ನಯ್ಯ ಸೇರಿದಂತೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಶಿಕ್ಷಣ ಇಲಾಖೆಯ ಸಿಬ್ಬಂಧಿಗಳು ಉಪಸ್ಥಿತರಿದ್ದರು.

ಕೋಲಾರ ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು, ರೈತರಿಗೆ ಅವಶ್ಯಕವಿರುವ ಬಿತ್ತನೆ ಬೀಜಗಳನ್ನು ಸಕಾಲದಲ್ಲಿ ವಿತರಣೆ ಮಾಡಿ: ಸಿ.ಎಸ್. ವೆಂಕಟೇಶ್

 

 

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

 

ಕೋಲಾರ ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು, ರೈತರಿಗೆ ಅವಶ್ಯಕವಿರುವ ಬಿತ್ತನೆ ಬೀಜಗಳನ್ನು ಸಕಾಲದಲ್ಲಿ ವಿತರಣೆ ಮಾಡಿ: ಸಿ.ಎಸ್. ವೆಂಕಟೇಶ್ 

 

 

 

 

ಕೋಲಾರ ; ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು, ರೈತರಿಗೆ ಅವಶ್ಯಕವಿರುವ ಬಿತ್ತನೆ ಬೀಜಗಳನ್ನು ಸಕಾಲದಲ್ಲಿ ವಿತರಣೆ ಮಾಡಿ ಇದರಿಂದ ಸಕಾಲದಲ್ಲಿ ಬಿತ್ತನೆ ಮಾಡಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಿ.ಎಸ್. ವೆಂಕಟೇಶ್ ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಿತ್ತನೆ ಬೀಜಗಳ ವಿತರಣೆಯಲ್ಲಿ ಯಾವುದೇ ಕೊರತೆ ಉಂಟಾಗಬಾರದು ಹಾಗೂ ಕಳಪೆ ಬಿತ್ತನೆ ಬೀಜಗಳು ವಿತರಣೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಶಿಥಲಗೊಂಡಿರುವ ಸುಮಾರು 50-60 ಓವರ್ ಹೆಡ್ ಟ್ಯಾಂಕರ್‍ಗಳಿದ್ದು, ಇವುಗಳು ಬಿದ್ದು ಪ್ರಾಣಹಾನಿ ಹಾಗೂ ಆಸ್ತಿ ಹಾನಿ ಆಗುವ ಸಂಭವವಿರುತ್ತದೆ. ಆದ್ದರಿಂದ ಶಿಥಿಲಗೊಂಡಿರುವ ಓವರ್ ಹೆಡ್ ಟ್ಯಾಂಕ್‍ಗಳನ್ನು ಸಂಬಂಧಿಸಿದ ಅಧಿಕಾರಿಗಳು ತೆರವುಗೊಳಿಸುವಂತೆ ಸೂಚಿಸಿದರು.

ಶಿಕ್ಷಣ ಇಲಾಖೆಯಲ್ಲಿ 2018-19ನೇ ಸಾಲಿನಲ್ಲಿ 30 ಲಕ್ಷ ಅನುದಾನ ಬಳಕೆ ಆಗದೆ ವಾಪಸ್ಸು ಹೋಗಿದೆ. ಇದಕ್ಕೆ ಕಾರಣರಾದವರ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ಶಿಕ್ಷಣ ಇಲಾಖೆಯಿಂದ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು, ಇನ್ನು ಮುಂದೆ ಯಾವುದೇ ಇಲಾಖೆಯಲ್ಲಿ ಅನುದಾನಗಳು ಬಳಕೆಯಾಗದೆ ವಾಪಸ್ಸು ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಲೋಕಸಭಾ ಸಂಸದರಾದ ಎಸ್.ಮುನಿಸ್ವಾಮಿ ಅವರು ಮಾತನಾಡಿ ಜಿಲ್ಲೆಯ ಮಾಲೂರು, ಬಂಗಾರಪೇಟೆ ಹಾಗೂ ಕೆ.ಜಿ.ಎಫ್. ತಾಲ್ಲೂಕುಗಳ ಗಡಿಗಳಲ್ಲಿ ಆನೆ ಮತ್ತು ಚಿರತೆ ಹಾವಳಿಗಳು ಹೆಚ್ಚಿದ್ದು, ಆನೆಗಳ ಹಾವಳಿಯಲ್ಲಿ ಶಾಶ್ವತ ಪರಿಹಾರ ಕಂಡು ಕೊಳ್ಳಲು ಆನೆ ಕಾರಿಡಾರ್ ನಿರ್ಮಿಸುವಂತೆ ಅರಣ್ಯ ಸಚಿವರಿಗೆ ಮನವಿ ಮಾಡಲಾಗಿದೆ. ಕರೋನಾ ತಡೆಯುವಲ್ಲಿ ಜಿಲ್ಲಾಡಳಿತ ಮತ್ತು ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, 48 ದಿನಗಳ ಕಾಲ ಜಿಲ್ಲೆಯೂ ಹಸಿರು ವಲಯದಲ್ಲಿದ್ದು, ನಂತರ ಹೊರ ರಾಜ್ಯಗಳಿಂದ ಹಾಗೂ ಹೊರ ಜಿಲ್ಲೆಗಳಿಂದ ಬಂದ 19 ಜನರಿಗೆ ಪಾಸಿಟಿವ್ ಬಂದಿದೆ. ಇದರಲ್ಲಿ ಹೆಚ್ಚಾಗಿ ಚಾಲಕರೇ ಇದ್ದಾರೆ ಎಂದರು.

ಕೃಷಿ ಹೊಂಡಗಳಲ್ಲಿ ಬಿದ್ದು ಸಾವುಗಳು ಸಂಭವಿಸುತ್ತಿದ್ದು, ಹೊಂಡಗಳ ಸುತ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಕೃಷಿ ಹೊಂಡಗಳಿಗೆ ಹಗ್ಗಗಳನ್ನು ಕಟ್ಟಿ ಬಿಡುವುದರಿಂದ ಆಕಸ್ಮಿಕವಾಗಿ ಬಿದ್ದವರು ಹಗ್ಗದ ನೆರವಿನಿಂದ ಮೇಲೆ ಬರಲು ಸಹಾಯವಾಗುತ್ತದೆ. ಸರ್ಕಾರಿ ಸವಲತ್ತುಗಳ ವಿತರಣೆ ಹಾಗೂ ಸರ್ಕಾರಿ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಶಿಷ್ಠಾಚಾರವನ್ನು ಪಾಲನೆ ಮಾಡಬೇಕು ಇಲ್ಲದಿದ್ದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸೂಚಿಸಿದರು.

ಕೆಲವು ಪಂಚಾಯಿತಿಗಳಲ್ಲಿ ಅವಶ್ಯಕತೆಗಿಂತ ಹೆಚ್ಚಿನ ವಾಟರ್‍ಮೆನ್ ಹುದ್ದೆಗಳು ಇದ್ದು, ಇವರಲ್ಲಿ ಯಾರನ್ನು ಕೆಲಸದಿಂದ ತೆಗೆದಿಲ್ಲ. ಇವರಿಗೆ ವರ್ಗ-1 ರಲ್ಲಿ ಸಂಬಳ ನೀಡಲಾಗುತ್ತಿದ್ದು, ಕೆಲವು ಪಂಚಾಯಿತಿಗಳಲ್ಲಿ ಕಂದಾಯ ವಸೂಲಾತಿ ಕಡಿಮೆ ಇರುವುದರಿಂದ ವೇತನ ವಿಳಂಬವಾಗಿದೆ. ಕನಿಷ್ಠ ವೇತನ 10,800/- ರೂ.ಗಳನ್ನು ನೀಡಲಾಗುತ್ತಿದೆ. ಜಿಲ್ಲೆಯ ಕಂಟೈನ್‍ಮೆಂಟ್ ಜೋನ್‍ಗಳಲ್ಲಿ ಜಾನುವಾರು ಮೇವು ಕೊರತೆ ಆಗದಂತೆ ಎಸ್.ಡಿ.ಆರ್.ಎಫ್. ಅನುದಾನದಲ್ಲಿ ಖರೀದಿಸಿ ಉಚಿತವಾಗಿ ವಿತರಿಸಲಾಗಿದೆ. ಶಿಷ್ಠಾಚಾರ ಪಾಲನೆ ಮಾಡಿ ಜನಪ್ರತಿನಿಧಿಗಳಿಗೆ ಆಹ್ವಾನ ನೀಡದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ನಾಗೇಶ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಯಶೋಧ ಕೃಷ್ಣಮೂರ್ತಿ, ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯರಾದ ತೂಪಲ್ಲಿ ಆರ್.ಚೌಡರೆಡ್ಡಿ, ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯತ್ ಸದಸ್ಯರು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕೋಲಾರ ಕೋವಿಡ್‍ನಿಂದ 5 ಜನ ಗುಣಮುಖರಾಗಿ ಬಿಡುಗಡೆ :ಸಂಸದರಾದ ಎಸ್.ಮುನಿಸ್ವಾಮಿ ಅವರು ಹಣ್ಣು ಹಂಪಲುಗಳನ್ನು ನೀಡಿ ಶುಭ ಹಾರೈಸಿದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

 

 

ಕೋಲಾರ ಕೋವಿಡ್‍ನಿಂದ 5 ಜನ ಗುಣಮುಖರಾಗಿ ಬಿಡುಗಡೆ :ಸಂಸದರಾದ ಎಸ್.ಮುನಿಸ್ವಾಮಿ ಅವರು ಹಣ್ಣು ಹಂಪಲುಗಳನ್ನು ನೀಡಿ ಶುಭ ಹಾರೈಸಿದರು.

 

 

 

ಕೋಲಾರ ; ಕೋವಿಡ್-19 ಪಾಸಿಟಿವ್ ಕಂಡುಬಂದು ಚಿಕಿತ್ಸೆ ಪಡೆಯುತ್ತಿದ್ದ ಕೋಲಾರ ಜಿಲ್ಲೆಯ ಮುಳಬಾಗಿಲಿನ ಐದು ಜನರು ಗುಣಮುಖರಾಗಿ ಇಂದು ಎಸ್.ಎನ್.ಆರ್. ಆಸ್ಪತ್ರೆಯಿಂದ ಬಿಡುಗಡೆಯಾದರು.

ಇವರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಬಕಾರಿ ಸಚಿವರಾದ ಹೆಚ್.ನಾಗೇಶ್ ಹಾಗೂ ಸಂಸದರಾದ ಎಸ್.ಮುನಿಸ್ವಾಮಿ ಅವರು ಹಣ್ಣು ಹಂಪಲುಗಳನ್ನು ನೀಡಿ ಶುಭ ಹಾರೈಸಿದರು.

ಸಚಿವರಾದ ಹೆಚ್.ನಾಗೇಶ್ ಅವರು ಮಾತನಾಡಿ ಜಿಲ್ಲೆಯಲ್ಲಿ ಪ್ರಥಮವಾಗಿ ಮುಳಬಾಗಿಲಿನ 5 ಜನರಿಗೆ ಕರೋನಾ ಪಾಸಿಟಿವ್ ಕಂಡುಬಂದಿತ್ತು. ಇವರು ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಕೋಲಾರ ಜಿಲ್ಲೆಗೆ ಆಗಮಿಸಿದ್ದರು. ಇವರಿಗೆ ಪಾಸಿಟಿವ್ ಬಂದ ತಕ್ಷಣ ಚಿಕಿತ್ಸೆಯನ್ನು ಪ್ರಾರಂಭಿಸಲಾಯಿತು. ಇವರ ಸ್ಲ್ಯಾಬ್‍ನ್ನು ಪರೀಕ್ಷಿಸಿ ನೆಗೆಟಿವ್ ಬಂದಿದ್ದರಿಂದ ಗುಣಮುಖರಾಗಿದ್ದು, ಇಂದು ಬಿಡುಗಡೆ ಮಾಡಲಾಗಿದೆ. ಕರೋನಾಗೆ ಯಾರು ಆತಂಕ ಪಡಬಾರದು. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು. ಜಿಲ್ಲೆಯಲ್ಲಿ 19 ಪ್ರಕರಣಗಳು ಕಂಡು ಬಂದಿದ್ದವು. ಇಂದು 5 ಜನ ಬಿಡುಗಡೆ ಆಗಿರುವುದರಿಂದ 14 ಪ್ರಕರಣಗಳಿವೆ. ಜಿಲ್ಲೆಯಲ್ಲಿ ಕಂಡು ಬರುವ ಎಲ್ಲಾ ಪ್ರಕರಣಗಳನ್ನು ಗುಣಮುಖಗೊಳಿಸಲಾಗುವುದು ಎಂದು ತಿಳಿಸಿದರು.

ಇಂದು ಪಿ-906, ಪಿ-906, ಪಿ-908, ಪಿ-909 ಮತ್ತು ಪಿ-910 ಪ್ರಕರಣಗಳು ಗುಣಮುಖರಾಗಿ ಬಿಡುಗಡೆ ಆದರು. ಈ ಸಂದರ್ಭದಲ್ಲಿ ಬಿಡುಗಡೆ ಆದವರಿಗೆ ಪುಷ್ಪ ಮಳೆ ಸುರಿಸಿ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಿ.ಎಸ್.ವೆಂಕಟೇಶ್, ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಹೆಚ್.ವಿ.ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ, ಅಪರ ಜಿಲ್ಲಾಧಿಕಾರಿಗಳಾದ ಶಿವಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಾಹ್ನವಿ, ಉಪವಿಭಾಗಾಧಿಕಾರಿಗಳಾದ ಸೋಮಶೇಖರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ|| ವಿಜಯ್ ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕರಾದ ನಾರಾಯಣಸ್ವಾಮಿ ಅವರು ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು..

 

ಕೆ.ಸಿ.ವ್ಯಾಲಿ ನೀರು ಕೋಲಾರದ ಕೆರೆಗಳಿಗೆ ಹರಿಸುವ ಮೊದಲು ಮುಂಜಾಗ್ರತಾ ಕ್ರಮ ಅಗತ್ಯ – ಎಸ್.ಆರ್.ಮುರಳಿಗೌಡ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

 

 

ಕೆ.ಸಿ.ವ್ಯಾಲಿ ನೀರು ಕೋಲಾರದ ಕೆರೆಗಳಿಗೆ ಹರಿಸುವ ಮೊದಲು ಮುಂಜಾಗ್ರತಾ ಕ್ರಮ ಅಗತ್ಯ – ಎಸ್.ಆರ್.ಮುರಳಿಗೌಡ

 

 

 

 

ಕೋಲಾರ ಮೇ 29: ಕೋಲಾರ ನಗರದ ಕುಡಿಯುವ ನೀರಿನ ಮೂಲವಾದ ಅಮ್ಮೇರಹಳ್ಳಿ, ಮಡೇರಹಳ್ಳಿ, ಕೋಡಿಕಣ್ಣೂರು ಮತ್ತು ಕೋಲಾರಮ್ಮ ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರನ್ನು ಹರಿಸುವ ಮೊದಲು ಕೆರೆಗಳಲ್ಲಿರುವ ಕೊಳವೆ ಬಾವಿಗಳ ಸುತ್ತ ಕಟ್ಟೆಕಟ್ಟಿ, ಅನುಪಯುತ್ತ ಕೊಳವೆಬಾವಿಗಳಿಗೆ ಮರಳು ತುಂಬಿಸುವ ಕೆಲಸವಾಗಬೇಕೆಂದು ನಗರಸಭಾ ಸದಸ್ಯ ಎಸ್.ಆರ್.ಮುರಳಿಗೌಡ ಒತ್ತಾಯಿಸಿದ್ದಾರೆ.
ಬಯಲು ಸೀಮೆಯ ಮಹತ್ವಪೂರ್ಣ ಯೋಜನೆಯಾದ ಬೆಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸಿ ನೀಡುತ್ತಿರುವ ಕೆ.ಸಿ.ವ್ಯಾಲಿ ಯೋಜನೆಯಿಂದ ಕೋಲಾರ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಕಾರ್ಯ ನಡೆಯುತ್ತಿದ್ದು. ಈಗಾಗಲೇ ಜಿಲ್ಲೆಯ ಹಲವಾರು ಕೆರೆಗಳಿಗೆ ನೀರು ಹರಿಸಲಾಗಿದೆ. ಈ ನೀರು ನೇರವಾಗಿ ಕುಡಿಯಲು ಯೋಗ್ಯವಲ್ಲವೆಂದು ಕೇವಲ ಅಂತರ್ಜಲ ಅಭಿವೃದ್ಧಿಯ ಮೂಲವೆಂದು ಎಲ್ಲರಿಗೂ ತಿಳಿದ ವಿಷಯವೆ.
ಕೋಲಾರ ನಗರಕ್ಕೆ ಕೊಳವೆ ಬಾವಿ ಮೂಲಕ ಕುಡಿಯುವ ನೀರು ಬಳಕೆ ಮಾಡುತ್ತಿರುವ ಅಮ್ಮೇರಹಳ್ಳಿ ಕರೆ, ಮಡೇರಹಳ್ಳಿಕರೆ, ಕೊಡಿಕಣ್ಣೂರು ಕೆರೆ ಮತ್ತು ಕೋಲಾರಮ್ಮ ಅಮಾನಿಕೆರೆ ಗಳಿಗೂ ಕೆ.ಸಿ.ವ್ಯಾಲಿ ನೀರನ್ನು ತುಂಬಿಸಲು ಹೊರಟಿದ್ದು, ಕೆರೆಗಳನ್ನು ಈಗಾಗಲೇ ಸ್ಚಚ್ಚಗೊಳಿಸುವ ಕಾರ್ಯ ನಡೆದಿದೆ. ಇದರೊಂದಿಗೆ ಈ ಕೆರೆಗಳಲ್ಲಿ ಅನುಪಯುಕ್ತ ಬೋರ್‍ವೆಲ್‍ಗಳಿಗೆ ಮರಳು ತುಂಬಿಸುವ ಕಾರ್ಯವಾಗಬೇಕು ಮತ್ತು ಬಳಕೆ ಮಾಡಲು ಯೋಗ್ಯವಿರುವ ಕೊಳವೆ ಬಾವಿಗಳಿಗೆ ಕಟ್ಟೆಕಟ್ಟಿ ರಿವೀಟ್‍ಮೆಂಟ್ ಕೆಲಸವಾಗಬೇಕು. ಆನಂತರ ಮೇಲ್ಕಂಡ ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿಸುವುದು ಸೂಕ್ತವಾಗಿದೆ.
ಈಗಾಗಲೇ ಮಡೇರಹಳ್ಳಿ ಕೆರೆ ತುಂಬಿ, ಅಮ್ಮೇರಹಳ್ಳಿ ಕೆರೆಗೆ ನೀರು ಹರಿದು ಬರುತ್ತಿದೆ. ಈ ನೀರು ಕೆರೆಗಳಲ್ಲಿ ಹಿಂಗದೆ ನೇರವಾಗಿ ಕೆರೆಯಲ್ಲಿರುವ ಕೊಳವೆ ಬಾವಿಗಳಗೆ ಸೇರಿದರೆ, ಅಂತರ್ಜಲ ಪೂರ್ಣ ಕಲುಶಿತವಾಗುತ್ತದೆ. ಈ ನೀರನ್ನು ಸಂಪರ್ಕವಿರುವ ಕೊಳವೆ ಬಾವಿ ಮೂಲಕ ಬಳಕೆ ಮಾಡಿದರೆ ಸಾಂಕ್ರಾಮಿಕ ಕಾಯಿಲೆಗಳು ಬರುವ ಸಾಧ್ಯತೆಗಳು ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಕೋಲಾರದ ನಗರದ ಜನತೆಯ ಆರೋಗ್ಯದ ಮೇಲೆ ವಿಪರೀತ ಪರಿಣಾಮ ಬೀಳುವ ಸಾಧ್ಯತೆ ಹೆಚ್ಚಾಗಿದೆ ಈ ವಿಚಾರದ ಬಗ್ಗೆ ಈಗಾಗಲೇ ಹಲವಾರು ಬಾರಿ ಕೋಲಾರ ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿರುವುದಿಲ್ಲ ಎಂದು ನಗರಸಭಾ ಸದಸ್ಯ ಎಸ್.ಆರ್.ಮುರಳಿಗೌಡ ಆರೋಪಿಸಿದ್ದಾರೆ.

ತಾರಸಿ ತೋಟದಲ್ಲಿ ಡ್ರಾಗನ್ ಹಣ್ಣು ಬೆಳೆಸಿ ಮಾದರಿಯಾದ ರೈತ

 

 

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ತಾರಸಿ ತೋಟದಲ್ಲಿ ಡ್ರಾಗನ್ ಹಣ್ಣು ಬೆಳೆಸಿ ಮಾದರಿಯಾದ ರೈತ

 

 

 

ಇತ್ತೀಚಿನ ದಿನಗಳಲ್ಲಿ ಸ್ಥಳದ ಅಭಾವದಿಂದ ಕೈತೋಟ ಮಾಡುವುದು ಕಡಿಮೆಯಾಗಿದ್ದು ತಾರಸಿ ತೋಟಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಗುತ್ತಿದೆ. ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ತಾರಸಿ ತೋಟಕ್ಕೆ ಹೆಚ್ಚಿನ ಮನ್ನಣೆ ಇದೆ. ತಾರಸಿ ತೋಟ ಮಾಡುವುದರಿಂದ ಒಂದು ಕುಟುಂಬಕ್ಕೆ ಬೇಕಾದಷ್ಟು ತರಕಾರಿಗಳನ್ನು ತಾವೇ ಬೆಳೆದುಕೊಂಡು ಗುಣಮಟ್ಟದ ಬೆಳೆಯಿಂದ ಅಪೌಷ್ಟಿಕತೆಯನ್ನು ನಿವಾರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೂ ಹೆಚ್ಚುವರಿಯಾಗಿ ಬಂದ ಫಸಲನ್ನು ಮಾರಿ ಹೆಚ್ಚುವರಿ ಆದಾಯ ಕೂಡ ಗಳಿಸಬಹುದಾಗಿದೆ.
ಈ ದಿಶೆಯಲ್ಲಿ ಕೋಲಾರದ ಕನಕಪಾಳ್ಯದ ನಿವಾಸಿ ಶಿವಣ್ಣ ರವರು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟದ ಹಣ್ಣು ವಿಜ್ಞಾನದ ಸಹಾಯಕ ಪ್ರಾಧ್ಯಾಪಕರಾದ ಡಾ. ಸತೀಶ ಪತ್ತೇಪೂರ ಹಾಗೂ ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ತೋಟಗಾರಿಕೆ ವಿಜ್ಞಾನಿ ಡಾ. ನಾಗರಾಜ ರವರ ಸಲಹೆ ಮೇರೆಗೆ ತಮ್ಮ ತಾರಸಿಯಲ್ಲಿ ವಿವಿಧ ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯುವುದರ ಜೊತೆಗೆ ಡ್ರಾಗನ್ ಹಣ್ಣು ಕೂಡ ಬೆಳೆದು ಉತ್ತಮ ಫಸಲನ್ನು ತೆಗೆದು ಹೆಚ್ಚಿನ ಆದಾಯ ಕಂಡುಕೊಂಡು ಇತರ ನಗರ ಪ್ರದೇಶ ನಿವಾಸಿಗಳಿಗೆ ಹಾಗೂ ರೈತರಿಗೆ ಮಾದರಿಯಾಗಿದ್ದಾರೆ.
ಇವರ ತಾರಸಿ ತೋಟದಲ್ಲಿ ಟೊಮ್ಯಾಟೊ, ಬದನೆ, ಮೆಣಸಿನಕಾಯಿ, ನುಗ್ಗೆ, ಹಸಿರು ಸೊಪ್ಪುಗಳು ಕುಂಬಳ ಜಾತಿಯ ಗಿಡಗಳು ಮತ್ತು ಹಣ್ಣಿನ ಬೆಳೆಯಾದ ದ್ರಾಕ್ಷಿ, ಪಪಾಯ ಮತ್ತು ಡ್ರಾಗನ್ ಹಣ್ಣು ಹಾಗೂ ಹೂವಿನ ಬೆಳೆಯಾದ ಕಣಗಿಲೆ, ಗುಲಾಬಿ ಮತ್ತು ಮಲ್ಲಿಗೆ ಹಾಗೂ ಇನ್ನಿತರ ಔಷಧಿಯ ಗಿಡಗಳು ಕೂಡ ಇವೆ. ಈ ಎಲ್ಲಾ ಬೆಳೆಗಳಿಗೆ ತಮ್ಮ ಮನೆಯ ತರಕಾರಿ ತ್ಯಾಜ್ಯಗಳಿಂದ ಸಾವಯವ ಗೊಬ್ಬರ ಮಾಡಿ ತಾರಸಿಯ ಗಿಡಗಳಿಗೆ ಬಳಸುತ್ತಾರೆ. ಹಾಗೂ ನೀರಿನ ನಿರ್ವಹಣೆಯಲ್ಲಿ ಮಳೆಗಾಲದಲ್ಲಿ ಮಾಳಿಗೆಯ ಮೇಲೆ ಬಿದ್ದ ನೀರನ್ನು ಪೈಪುಗಳ ಮೂಲಕ ಟ್ಯಾಂಕ್ ನಲ್ಲಿ ತುಂಬಿಸಿ ಬೆಳೆಗಳಿಗೆ ಉಪಯೋಗಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಮೂರು ಜೇನು ಪೆಟ್ಟಿಗೆಗಳನ್ನು ಕೂಡ ತಾರಸಿಯಲ್ಲಿಟ್ಟು ಉತ್ತಮ ಲಾಭಗಳಿಸುತ್ತಿದ್ದಾರೆ. ತಾರಸಿ ತೋಟವನ್ನು ಹವ್ಯಾಸವಾಗಿಸಿಕೊಂಡು ಶಿವಣ್ಣರವರು ಹೆಚ್ಚಿನ ಲಾಭಗಳಿಸಿ ಇತರರಿಗೆ ಮಾದರಿಯಾಗಿದ್ದಾರೆ.


ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟ ಮತ್ತು ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ಸಹಾಯದಿಂದ ಡ್ರಾಗನ್ ಹಣ್ಣು ಗಿಡಗಳನ್ನು ಶಿವಣ್ಣರವರಿಗೆ ವಿತರಿಸಿದು,್ದ ಈ ಗಿಡಗಳನ್ನು ಅವರು ತಾರಸಿಯಲ್ಲಿ ಬೆಳೆದು ಹೆಚ್ಚಿನ ಇಳುವರಿ ಪಡೆದು ಮಾರುಕಟ್ಟೆ ಮಾಡುವುದರ ಜೊತೆಗೆ ಗಿಡಗಳನ್ನು ಕೂಡ ತಯಾರು ಮಾಡಿ ಮಾರಿ ಲಾಭಗಳಿಸುತ್ತಿದ್ದಾರೆ- ಡಾ. ನಾಗರಾಜ ಕೆ.ಎಸ್. ತೋಟಗಾರಿಕೆ ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ, ಕೋಲಾರ

ಬೇತಮಂಗಲ : ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲು

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

 

 

ಬೇತಮಂಗಲ : ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲು

 

 

 

 

ಕೆಜಿಎಫ್., ಮೇ. 29 : ಕೆಜಿಎಫ್ ಪೊಲೀಸ್ ಜಿಲ್ಲೆಯ ಬೇತಮಂಗಲ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ವರದಕ್ಷಿಣೆ ಕಿರುಕುಳದ ಪ್ರಕರಣವು ದಾಖಲಾಗಿದೆ.
ಬೇತಮಂಗಲ ಹೋಬಳಿ ಬರ್ಲಿ ಗ್ರಾಮದ ವಿಮಲ ಎಂಬಾಕೆಯು ರವಿ ಎಂಬುವರನ್ನು 2013ನೇ ಸಾಲಿನಲ್ಲಿ ವಿವಾಹವಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ಮದುವೆಯ ಸಂದರ್ಭದಲ್ಲಿ ತವರು ಮನೆಯವರು ನೀಡಿದ್ದ ವರದಕ್ಷಿಣೆಯು ಸಾಲದೆಂದು, ಇನ್ನೂ ತರುವಂತೆ ವಿಮಲಳನ್ನು ಪೀಡಿಸುತ್ತಿದ್ದುದಲ್ಲದೇ ಮಾನಸಿಕವಾಗಿ, ದೈಹಿಕವಾಗಿ ಹಿಂಸಿಸುತ್ತಿದ್ದು, ಪ್ರಸ್ತುತ ಒಡೆದು ಗಾಯಪಡಿಸಿ, ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುವುದಾಗಿ ದೂರು ನೀಡಿರುತ್ತಾರೆ.
ವಿಮಲ ದೂರಿನನ್ವಯ ಬೇತಮಂಗಲ ಪೊಲೀಸರು ವಿಮಲಳ ಗಂಡ ರವಿ ಸೇರಿದಂತೆ ಅವರ ಕುಟುಂಬಸ್ಥರಾದ ಮೂರ್ತಿ, ರಮೇಶಪ್ಪ, ಶ್ಯಾಮಲಮ್ಮ, ಕಲ್ಪನಾ, ಸುಬ್ರಮಣಿ ರವರುಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.