HOLY ROSARY CHURCH, KUNDAPUR – 450 th JUBILEE SOUVENIR 2021

ಕೊರೊನಾ ಭಯದ ಜೊತೆಗೆ ಪರೀಕ್ಷೆಯ ಭಯದೊಡನೆ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭ

JANANUDI.COM NETWORK

 

ಕೊರೊನಾ ಭಯದ ಜೊತೆಗೆ ಪರೀಕ್ಷೆಯ ಭಯದೊಡನೆ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭ

 

 

ಕುಂದಾಪುರ, ಜೂ.25: ಪ್ರಪಂಚದಲ್ಲಿ ಕಂಡೂ ಕಂಡರಿಯದ ವಾತವರಣ ಕೊರೊನಾ ಸಾಂಕ್ರಮಿಕ ಕಣ್ಣಿಗೆ ಕಾಣದ ಚಿಕ್ಕ ವೈರಸ್ ಆದರೆ ಅತಿ ಭಯಂಕರ ರಕ್ಕಸ ಕೊರೊನಾ ಕೋವಿಡ್ 19 (ಕೆಲವರಿಗೆ ಕೊರೊನಾ ಸೊಂಕು ತಗುಲಿದ ನಂತರ ಕೋವಿಡ್ 19 ಆಗಿ ರೋಗವಾಗಿ ಬದಲ್ಲುತ್ತೆ) ಬಿಂಬಿಸಿದ ಈ ಪೀಡೆಯ ಜೊತೆ ಇವತ್ತು ಕರ್ನಾಟಕ ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಯಿತು.
ಈ ಪರೀಕ್ಷೆಯಿಂದ ಯಾವ ಥರಹದ ಫಲಿತಾಂಶಗಳು ಬರಬಹುದೋ ಗೊತ್ತಿಲ್ಲ ಅಂದರೆ ಎಷ್ಟು ಜನ ವಿದ್ಯಾರ್ಥಿಗಳು ಫಾಸ್ ಆಗುತ್ತಾರೊ, ಫೇಲ್ ಆಗುತ್ತಾರೋ, ಎಷ್ಟು ವಿದ್ಯಾಥಿಗಳಿಗೆ ಸೊಂಕು ಹರಡುತ್ತೊ, ಎಷ್ಟು ಜನ ಪರೀಕ್ಷಾ ಮೇಲ್ವಿಚಾರಕರಿಗೆ ಹಾಗೂ ಇತರ ಸಿಬಂದಿಗೆ ಕೊರೊನಾ ಸೊಂಕಿನ ಪರಿಣಾಮ ತಟ್ಟುತ್ತೋ ಗೊತ್ತಿಲ್ಲಾ. ಬುದ್ದಿವಂತ ಮಕ್ಕಳಿಗೆ ಭಯವಿದ್ದರೆ ಅವರು ಹೇಗೆ ಬರೆಯುತ್ತಾರೊ ಗೊತ್ತಿಲ್ಲಾ, ಬುದ್ದಿವಂತರಲ್ಲ ಅಂತಾ ಹಣೆ ಪಟ್ಟಿಕೊಂಡ ವಿದ್ಯಾರ್ಥಿಗಳು, ಕೊರೊನಾದ ಭಯದ ಜೊತೆ ಹೇಗೆ ಬರೆಯುತ್ತಾರೋ ತಿಳಿಯದು. ಮಾನಸಿಕ ಸ್ತಿಮಿತ ಇದ್ದವರು ಮಾತ್ರ ಇಲ್ಲಿ ಗಟ್ಟಿಯಗಬಲ್ಲರೂ, ಕೊರೊನಾದ ಕುರಿತು ಮಾಧ್ಯಮದ ನಡೆಸುವ ಭಯಾನಕ ಸುದ್ದಿಯೂ ಇಲ್ಲಿ, ಪಾತ್ರವಹಿಸುತ್ತದೆ. ಈ ವಿಷಯದಲ್ಲಿ ಶಿಕ್ಷಣ ಮಂತ್ರಿ ಎಷ್ಟರ ಮಟ್ಟಿಗೆ ತೆರ್ಗಡೆ ಹೊಂದುತ್ತಾರೊ ತಿಳಿಯದು.
ಆದರೂ ಕೂಡ ಹಟದಂತೆ ನಡೆದ ಈ ಎಸ್.ಎಸ್.ಎಲ್.ಸಿ ಪರೀಕ್ಷೆ ಎಲ್ಲಾ ಕೇಂದ್ರಗಳಲ್ಲಿ ರಾಜ್ಯ ಸರಕಾರ ಅನುಸರಿಸಲು ಕೊಟ್ಟ ಮಾರ್ಗದರ್ಶನದಂತೆ ನಡೆಯಿತು.
ಮೊದಲೇ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಾನಿಟ್ಯಾಸ್ ಮಾಡಲಾಗಿತ್ತು. ಕುಂದಾಪುರದಲ್ಲಿ 8 ವಲಯದ 2457, ಬೈಂದೂರು 8 ವಲಯದ 2014 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲ್ಲಿದ್ದು, ಇವತ್ತು ಎಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆಂಬ ಅಂಕೆ ಸಂಖೆ ಮುಂದೆ ತಿಳಿಯ ಬೇಕಾಗಿದೆ.
ತಮ್ಮ ಶಾಲೆಯ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಾರೆಂದು ತಿಳಿದುಕೊಳ್ಳಲ್ಲು ಆಯಾಯ ಶಾಲೆಯ ಸಿಬಂದಿಗೆ ಪರೀಕ್ಷಾ ಕೇಂದ್ರದಲ್ಲಿ ಜವಾಬ್ದಾರಿಯನ್ನು ನೀಡಿತ್ತು. ಆ ಜವಾಬ್ದಾರಿ ಆದ ನಂತರ ವಿದ್ಯಾರ್ಥಿಗಳ ಮತ್ತು ಹೆತ್ತವರ ಸಂಪರ್ಕ ಆಗುವ ಸಾಧ್ಯತೆ ಇದ್ದುದರಿಂದ, ನಂತರ ಅವರು ಮನೆಗೆ ಹೋಗಿ ಸ್ನಾನ ಮಾಡಿಕೊಳ್ಳ ಬೇಕೆಂದು ತಾಕೀತು ಮಾಡಿದ್ದರು.
ಪರೀಕ್ಷೆ ಬರೆಯವ ವಿದ್ಯಾರ್ಥಿಗಳು ಮಾನವ ಅಂತರ ಕಾಯ್ದುಕೊಂಡು ಪರೀಕ್ಷಾ ಕೇಂದ್ರದಗಳ ಮೈದನದಲ್ಲಿ ನಿಲ್ಲಿಸಲಾಗಿತ್ತು. ಪ್ರತಿಯೊಂದು ವಿದ್ಯಾರ್ಥಿಗೆ, ಹಾಗೇ ಪ್ರತಿಯೊಂದು ಪರೀಕ್ಷಾ ಮೇಲ್ವಿಚಾರಕರಿಗೆ, ಸಿಬಂದಿಗೆ ಥರ್ಮಲ್ ಟೆಸ್ಟ್ ನಡೆಸಲಾಯಿತು. ವಿದ್ಯಾರ್ಥಿಗಳಿಗೆ, ಮೇಲ್ವಿಚಾರಕರಿಗೆ, ಸಿಬಂದಿ ಎಲ್ಲರಿಗೂ ಮಾಸ್ಕ್ ಕಡ್ಡಾಯವಾಗಿತ್ತು.
ಪರೀಕ್ಷೆ ಆರಂಭಗೊಳ್ಳುವ ಮುನ್ನ ಕ್ಷೇತ್ರ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ, ಆರೋಗ್ಯ ಇಲಾಖೆಯಿಂದ ಮೇಲ್ವಿಚಾರಕರಿಗೆ ಇತರ ಪರೀಕ್ಷಾ ಕೇಂದ್ರದ ಅಧಿಕಾರಿಗಳಿಗೆ ಸಲಹೆ ಸೂಚನೆ ಮರ್ಗದರ್ಶನದ ಕಾರ್ಯಕ್ರಮ ನಡೆಯಿತು.

 

ಮೋಗ್……..          ಕವಿತಾ  -> ರೇಷ್ಮಾ ಡಿಸಿಲ್ವಾ , ವಾಲೆನ್ಸಿಯಾ

ಮೋಗ್........          ಕವಿತಾ  -> ರೇಷ್ಮಾ ಡಿಸಿಲ್ವಾ , ವಾಲೆನ್ಸಿಯಾ                   

 

ಮೊಗಾವಿಣೆಂ ಜಿಣೆಂ

ಫುಲಾಂ ನಾತ್ಲೆಲ್ಯಾ ವಾಳಿಬರಿ

ಫಳ್ ದಿನಾತ್ಲೆಲ್ಯಾ ರುಕಾಬರಿ

ಝರ್ ನಾತಲ್ಯಾ ಬಾಂಯ್ ಬರಿ

 

 

 

ಮೋಗ್ ದೋನ್ ಕಾಳ್ಜಾಂಕ್ ಎಕ್ವೊಟ್ತಾ

ಸ್ವಪ್ಣಾ ಸಾಗೊರಾಂತ್ ಧಲಾಯ್ತಾ….

ಫುಲ್ಚ್ಯಾ ಫುಲಾ ಬರಿ ಕಾಳಿಜ್ ಫುಲಯ್ತಾ

ವ್ಹಾಳ್ಚ್ಯಾ ವ್ಹಾಳಾ ಉದ್ಕಾ ತಸೆಂ ನಿತ್ಳಯ್ತಾ

 

 

 

ಮೋಗ್ ಜಿಯೆಂವ್ಕ್ ಶಿಕಾಯ್ತಾ

ಮೋಗ್ ದಾದೊಸ್ಕಯ್ ದಿತಾ

ಮೋಗ್ ಅಪ್ಣೆಪಣಾಕ್ ಅಪ್ಣಾಯ್ತಾ

ಮೋಗ್ ಅವ್ಯಕ್ತ್ ಸಕತ್ ಭರಯ್ತಾ

 

 

ಮೊಗಾಕ್ ನಾಂತ್ ದೊಳೆ

ಮೊಗಾರ್ ಪಡ್ತಾನಾ ಚಿಂತೊನ್ ಪಳೆ

ಮೊಗಾರ್ ಫುಲ್ತಿತ್  ಕಳೆ …ಯಾ

ಮೊಗಾಕ್ ವೆಂಗ್ತಿತ್ ಕಳೆ

 

 

ಮೊಗಾ ಸಾಗೊರಾಂತ್  ದೆವ್ಲೆಲೊ

ಉಪ್ಯೆಂವ್ಕ್ ತರೀ ಶಿಕ್ತಾಲೊ

ನಾ ತರ್ ಎಕ್ ಬೊರೊ

ನಾವಿಕ್ ಖಂಡಿತ್ ಜಾತೊಲೊ

 

* ರೇಷ್ಮಾ ಡಿಸಿಲ್ವಾ , ವಾಲೆನ್ಸಿಯಾ .

[ರೇಶ್ಮಾ ಡಿಸಿಲ್ವಾ ಗಾಂವಾನ್ ಕುಂದಾಪುರಚಿ , ಆನಿಂ ಲಗ್ನ್ ಜಾಲ್ಯಾ ಉಪ್ರಾಂತ್ ಆತಾ  ಮಂಗಳೂರಾಂತ್ ವಸ್ತಿ ಕರ್ನ್ ಆಸಾ. ತಿ ಸಂತ ಜೆರೋಸಾ ಇಂಗ್ಲೀಷ್ ಮಧ್ಯಮ್ ಸ್ಕೂಲಾಂತ್ ಶಿಕ್ಷಕಿ ಜಾವ್ನ್ ವಾವ್ರ್ ದೀವ್ನ್ ಆಸಾ . ರೇಶ್ಮಾ ಡಿಸಿಲ್ವಾಕ್  ಕವಿತೆಂತ್ ಮಸ್ತ್ ಆಸಕ್ತ್, ತಿ ಸಭಾರ್ ಜಣ್ ಕವಿಚಿಂ ಕವಿತಾ ವಾಚ್ತಾ, ಆನಿ ಎಕ್ ಕವಿಯಿತ್ರಿ ಜಾಂವ್ಕ್ ಪ್ರಯತನ್ ಕರಿಚ್ ಆಸಾ. ತಿಚ್ಯಾ ಪ್ರಯತ್ನಾಕ್ ಆಮಿ ಪಾಟಿಂಬೊ ದಿತಾಂವ್. ಆನಿ ಬರೆ ಮಾಗ್ತಾಂವ್ : ಸಂಪಾದಕ್ ಬರ್ನಾಡ್ ಜೆ.ಕೋಸ್ತಾ]

ಪರೀಕ್ಷಾ ಕೇಂದ್ರದಲ್ಲಿ ಕೊಠಡಿಗಳಿಗೆ ಸ್ಯಾನಿಟೈಸರ್ ಸಿಂಪಡಿಸಲಾಯಿತು

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಪರೀಕ್ಷಾ ಕೇಂದ್ರದಲ್ಲಿ ಕೊಠಡಿಗಳಿಗೆ ಸ್ಯಾನಿಟೈಸರ್ ಸಿಂಪಡಿಸಲಾಯಿತು 
ರಾಯಲ್ಪಾಡು : ರಾಯಲ್ಪಾಡಿನ ಸರ್ಕಾರಿ ಪ್ರೌಡಶಾಲೆಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಬುಧುವಾರ ಕೇಂದ್ರದಲ್ಲಿನ ಎಲ್ಲಾ ಸಿಂಪಡಿಸಲಾಯಿತು. ಹಾಗು ವಿದ್ಯಾರ್ಥಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬಾಕ್ಸ್ ಗಳನ್ನು , ಎಲ್ಲಾ ಕೊಠಡಿಗಳಲ್ಲಿನ ಡೆಸ್ಕ್‍ಗಳಿಗೆ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಗಳನ್ನು ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ಪರೀಕ್ಷಾ ಮೇಲ್ವಿಚಾರಕರಾದ ಐಮಾರೆಡ್ಡಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು .
ಶಾಲೆಯ ಮುಖ್ಯ ಶಿಕ್ಷಕ ಪಿ.ಮಾರಣ್ಣ, ಮುದಿಮಡುಗು ಮುಖ್ಯ ಶಿಕ್ಷಕ ಸತ್ಯನಾರಾಯಣರೆಡ್ಡಿ ಹಾಗು ಇತರರಿದ್ದರು.

ಕೊರೊನಾ ಸೋಂಕಿತರ ಚಿಕಿತ್ಸೆಗೆ ಸರ್ಕಾರ ನಿಗಧಿಪಡಿಸಿದ ಧರ ರದ್ದು ಪಡಿಸಲು ರೈತಸಂಘದಿಂದ ಒತ್ತಾಯ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೊರೊನಾ ಸೋಂಕಿತರ ಚಿಕಿತ್ಸೆಗೆ ಸರ್ಕಾರ ನಿಗಧಿಪಡಿಸಿದ ಧರ ರದ್ದು ಪಡಿಸಲು ರೈತಸಂಘದಿಂದ ಒತ್ತಾಯ

 

ಕೋಲಾರ: ಕೊರೊನಾ ಸೋಂಕಿತರ ಚಿಕಿತ್ಸೆಗೆ ಸರ್ಕಾರ ನಿಗಧಿಪಡಿಸಿರುವ ಖಾಸಗಿ ಧರವನ್ನು ರದ್ದುಪಡಿಸಿ ತಾರತಮ್ಯ ಕೈಬಿಟ್ಟು, ವೈರಸ್ ನಿಯಂತ್ರಣಕ್ಕೆ ಬರುವವರೆಗೂ ಎಲ್ಲರಿಗೂ ಉಚಿತವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸೌಲಭ್ಯವನ್ನು ಕಲ್ಪಿಸಬೇಕೆಂದು ರೈತಸಂಘದಿಂದ ಮಾನ್ಯ ಮುಖ್ಯಮಂತ್ರಿಗಳನ್ನು ಒತ್ತಾಯಿಸಿ ಮಾನ್ಯ ತಹಶೀಲ್ದಾರ್‍ರವರ ಮುಖಾಂತರ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಸರ್ಕಾರ ಪ್ರತಿ ಹೊಸ ವೈರಾಣು ಬಂದಾಗ ವಿವಿಧ ಆರೋಗ್ಯ ಸೌಲಭ್ಯ ಯೋಜನೆಗಳನ್ನು ಜಾರಿಗೆ ತರುತ್ತಿರುತ್ತಾರೆ. ಆದರೆ ಇವುಗಳ ಉಪಯೋಗ ಖಾಸಗಿ ಆಸ್ಪತ್ರೆಗಳಿಗೆ ಹೊರತು ಯಾವುದೇ ರೋಗಿಗೆ ಅನುಕೂಲವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೋಗಿಗಳ ಹೆಸರಿನಲ್ಲಿ ಕೋಟಿ ಕೋಟಿ ಹಣವನ್ನು ಸರ್ಕಾರಿ ಕೆಲವು ಅಧಿಕಾರಿಗಳು ಮತ್ತು ಆಸ್ಪತ್ರೆಯ ಮಾಲೀಕರು ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಲೂಟಿ ಮಾಡುತ್ತಿರುವುದು ಹೊಸದೇನಲ್ಲ. ಜೊತೆಗೆ ಇಡೀ ವಿಶ್ವವನ್ನೇ ತಲ್ಲಣಗೊಳಿಸುತ್ತಿರುವ ಕೊರೊನಾ ವೈರಸ್ ಅಟ್ಟಹಾಸ ದಿನೇದಿನೇ ಹೆಚ್ಚಾಗುವ ಜೊತೆಗೆ ಸಮುದಾಯದತ್ತ ಕಾಲಿಟ್ಟಿರುವುದು ಸರ್ಕಾರಕ್ಕೆ ಹಾಗೂ ವೈದ್ಯಕೀಯ ಲೋಕಕ್ಕೆ ನುಂಗಲಾರದ ತುತ್ತಾಗಿದೆ.
ಈಗಾಗಲೇ ಈ ವೈರಸ್ ಹಾವಳಿಯಿಂದ ರೈತರು, ಕೃಷಿ ಕೂಲಿ ಕಾರ್ಮಿಕರು ಕೆಲಸಗಳಿಲ್ಲದೆ ಆದಾಯದ ಮೂಲವಿಲ್ಲದೆ ಜೀವನ ನಿರ್ವಹಣೆ ಕಷ್ಟಕರವಾಗಿರುವ ಸಮಯದಲ್ಲಿ ಸರ್ಕಾರ ಬಡವರ ಕೈಹಿಡಿಯುವುದನ್ನು ಬಿಟ್ಟು ಕೊರೊನಾ ವೈರಸ್ ಚಿಕಿತ್ಸೆ ನೆಪದಲ್ಲಿ ಖಾಸಗಿ ಆಸ್ಪತ್ರೆಗಳ ಹೆಸರಿನಲ್ಲಿ ಬಡವರ ಜೊತೆ ಚೆಲ್ಲಾಟವಾಡಲು ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಕೂಡಲೇ ಆದೇಶ ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ಸರ್ಕಾರ ಈಗಾಗಲೇ ನೊಂದಿರುವ ಜನರ ಜೀವನದಲ್ಲಿ ಕಣ್ಣಿಗೆ ಕಾಣದ ವೈರಸ್ ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಧ್ಯವಾಗುತ್ತಿಲ್ಲ ಎಂಬ ಕಾರಣದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ ಮೂರು ಹಂತದಲ್ಲಿ 3.80 ಲಕ್ಷ, 2.80 ಲಕ್ಷ, 1.60 ಲಕ್ಷರೂಗಳನ್ನು ನಿಗಧಿ ಮಾಡಿರುವ ಪಟ್ಟಿಯನ್ನು ನೋಡಿದರೆ ಕೊರೊನಾ ಸೋಂಕಿತರು ರೋಗದಿಂದ ಮೃತಪಡುವ ಬದಲು ಆತಂಕಕ್ಕೆ ಒಳಗಾಗಿ ಮೃತಪಡುವ ಸಾಧ್ಯತೆಗಳಿವೆ.
ಧರದ ಪಟ್ಟಿಯೇ ಜನ ಸಾಮಾನ್ಯರಿಗೆ ಹೊರೆಯಾಗುವಂತಿದ್ದು, ಅದರಲ್ಲೂ ಚಿಕಿತ್ಸೆಗೆ ಎಪಿಎಲ್, ಬಿಪಿಎಲ್ ಎಂದು ತಾರತಮ್ಯ ಮಾಡಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.ಪ್ರಸ್ತುತ ಪರಿಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಗುಂಡು ಸೂಜಿ ಚುಚ್ಚಿಕೊಂಡರೂ ಲಕ್ಷ ಬಿಲ್ ಮಾಡುವ ಆಸ್ಪತ್ರೆಗಳು ಇವೆ. ಇಂತಹ ಸಮಯದಲ್ಲಿ ಕೊರೊನಾ ಚಿಕಿತ್ಸೆ ಹೆಸರಿನಲ್ಲಿ ಜನಸಾಮಾನ್ಯರನ್ನು ಸುಲಿಗೆ ಮಾಡುವುದಿಲ್ಲ ಎನ್ನುವುದು ಯಾವ ಗ್ಯಾರೆಂಟಿ.ಹಾಗಾಗಿ ಮಾನ್ಯ ಮುಖ್ಯಮಂತ್ರಿಗಳು ಕೊರೊನಾ ಸೋಂಕಿತರ ಚಿಕಿತ್ಸೆಗೆ ನಿಗಧಿ ಮಾಡಿರುವ ಖಾಸಗಿ ಧರವನ್ನು ಸಂಪೂರ್ಣವಾಗಿ ರದ್ದು ಮಾಡಿ ಇಲ್ಲವೆ ವೈರಸ್ ನಿಯಂತ್ರಣಕ್ಕೆ ಬರುವವರೆಗೂ ಕಡ್ಡಾಯವಾಗಿ ಪ್ರತಿ ಸೋಂಕಿತರಿಗೂ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಕಲ್ಪಿಸಬೇಕು ಮತ್ತು ಎಪಿಎಲ್, ಬಿಪಿಎಲ್ ಕಾರ್ಡ್‍ದಾರರ ಕೈಬಿಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಶೋಬಿತರವರು ಆಯುಷ್‍ಮಾನ್ ಕಾರ್ಡ್ ಇರುವವರು ಕೋರೋನಾ ವೈರಸ್‍ಗೆ ಚಿಕಿತ್ಸೆ ಪಡೆಯಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಈ ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದರು.ಮನವಿ ನೀಡುವಾಗ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಈಕಂಬಳ್ಳಿ ಮಂಜುನಾಥ್, ನಳಿನಿ.ವಿ ಮುಂತಾದವರಿದ್ದರು.

ಏ ಚೆಡ್ವಾ ತುಂ …..  (ಸುರೇಶ್ ಸಲ್ದಾನ್ಹಾ, ಸಕಲೇಶ್ಪುರ್)

ಏ ಚೆಡ್ವಾ ತುಂ …..        (ಸುರೇಶ್ ಸಲ್ದಾನ್ಹಾ, ಸಕಲೇಶ್ಪುರ್)

***************                      

 

ಏ ಚೆಡ್ವಾ ತುಂ …..

ಮೊವಾಳ್ ಕಾಳ್ಜಾಚೆಂ
ನಿತಳ್ ಮ್ಹನಾಚೆಂ
ಫುಲ್ ತುಂ ಗುಲೊಬಾಚೆಂ
ಸರ್ವಾಂಕ್ ಮೊಗಾಚೆಂ…

 

 

 

ಆಪ್ಣಾಕ್ ದುಕ್ಲ್ಯಾರಿ ದಾಕಯ್ನಾಯ್
ಬೊಗ್ಸಿ  ಮ್ಹಳ್ಳೆಂಚ್ ಸರ್ವ್  ವಿಸ್ರಾತಾಯ್
ದುಸ್ರ್ಯಾಂಚ್ಯಾ ಕುಶೆಕ್ ಲಾಗೊನ್
ಆಪ್ಣಾಕಚ್ ಸಾಕ್ರಿಫಿಸ್ ದಿತಾಯ್…..

 

ಪ್ರಥ್ವಿ ಸಯ್ತ್ ತುಜಿಚ್ ಜಾಲಿ
ದೇಶಾಚಿ ತುಂ ಮಾತಾ ಜಾಲಿ….
ನ್ಹಂಯಾಂಕ್  ಸಯ್ತ್ ತುಜಿಂಚ್ ನಾಂವಾಂ
ಅಸಾತ್ ಸಬಾರ್ ತುಜಿಂಚ್ ಗಾಂವಾ

 

ಸದಾನಿತ್ ತುಜೆರ್ ಚಲ್ತಾ ಅತ್ಯಾಚ್ಯಾರ್
ಸಾಮೂಹಿಕ್ ಥರಾನ್ ಭಲಾತ್ಕಾರ್
ಕುಶಿನ್ ತುಜ್ಯಾ ಗುಂವ್ತಾತ್ ಲುಟ್ಕಾರ್
ಚಿಂತೊನ್ ಜಾಲಾಂಯ್ ಲಾಚ್ಯಾರ್…

 

ಚೆಡ್ವಾ ತುಜ್ಯಾ ಮೊಗಾಕ್ ನಾ ಮೊಲ್
ಸಗ್ಳ್ಯಾನಿಂ ಚಲೊನ್ ಅಸಾ ಗೊಲ್ ಮಾಲ್
ಥೊಡೆ ತುಕಾ ಪಳೆತಾಚ್ ಜಾತಾತ್ ಅಮಲ್
ಬಗರ್ ಚೆಡುಂ ತುಂ  ಎಕ್ದಮ್ ಕಮಲ್ ಅಹ್ವಲ್

 

 

   * ಸುರೇಶ್ ಸಲ್ದಾನ್ಹಾ, ಸಕಲೇಶ್ಪುರ್

[ಸುರೇಶ್ ಸಲ್ಡಾನ್ಹಾ, ಪ್ರಸ್ತುತ್ ಆಭುದಾಬಿಂತ್ ವಾವ್ರ್ ಕರ್ನ್ ಆಸ್ಚೊ ಗೂಂಡ್ ಚಿಂತ್ಪಾಚೊ ಕವಿ. ಮಾಂಯ್ ಗಾಂವಾಂತ್ ಸಕಲೇಶಪುರಾಚೊ. ಪಾಟ್ಲ್ಯಾ ವೀಸ್ ವರ್ಸಾಥಾವ್ನ್ ನವಿ ಮುಂಬಯಾತ್ಲ್ಯಾ ಪನ್ವೆಲಾಂತ್ ಆಪ್ಲ್ಯಾ ಕುಟ್ಮಾ ಸವೆಂ ವಸ್ತಿ ಕರ್ನ್ ಆಸಾ. ಹಾಚಿಂ ವಿಂಚ್ಣಾರ್ ಕವನಾಂ ಮಾಂಯ್ ಭಾಸ್.ಕೊಮ್, ಕೊಂಕ್ಣಿ ಲವ್, ಆಂಕ್ರಿ, ವೀಜ್ ಹಪ್ತ್ಯಾಳೆಂ ತಸಲ್ಯಾ ಜಾಳಿ ಜಾಗ್ಯಾನಿ೦ ಪರ್ಜಳ್ಳ್ಯಾಂತ್ ತರ್, ದಿವೊ, ಕುರೊವ್ ಆನಿಂ ಝೆಲೊ ತಸಲ್ಯಾ ಕೊಂಕ್ಣೆಚ್ಯಾ ಮಾಲ್ಘಡ್ಯಾ ಪತ್ರಾನಿಂ ಫಾಯ್ಸ್ ಜಾಲ್ಯಾಂತ್. ಕಾನಡಿ ಲಿಪಿಂತ್ ವರೆಗ್ ಕವನಾಂ ಬರಯ್ಲೆಲಿ ಹೊಗ್ಳಿಕ್ ಆನಿ ಕೀರ್ತ್ ಹಾಕಾ ಫಾವೊ. ಕೊಂಕಣಿಂತ್ ಆಯ್ಲೆವಾರ್ ಸರಾಗ್ ಬರೊಂವ್ಚ್ಯಾ ಕವಿ/ಲೇಖಕಾಂ ಪಯ್ಕಿ ಎಕ್ಲೊ ಜಾವ್ನಾಸಾ. ಫೇಸ್ ಬುಕ್, ಅಂತರ್ ಜಾಳಿ ಜಾಗೆ ಆನಿ ವಾಟ್ಸಾಪ್ ಪಂಗ್ಡಾಂನಿ ಪ್ರಸ್ತುತ್ ವಿಷಯಾಂ ವಯ್ರ್ ಬರಯ್ತಾ. ಕವಿತಾ ಕಾಮಾ ಶಾಳಾಂನಿ ಚುಕಾನಾಸ್ತಾಂ ಪಾತ್ರ್ ಕಾಣ್ಘೆತಾ. ಆಪುಟ್ ಕೊಂಕಣಿ ಮೊಗಿ ಜಾವ್ನಾಸಾ.
ಸುರೇಶ್ ಸಲ್ಡಾನ್ಹಾ,ಸಕಲೇಶ್ಪುರ್(ಪನ್ವೆಲ್)

 

 

PASSED AWAY NELLIE G D’SOUZA (73 YEARS) KUNDAPUR / ಸಂತ ಮೇರಿಸ್ ಪ್ರಾಥಮಿಕ ಶಾಲೆಯ  ನಿವ್ರತ್ತ ಮುಖ್ಯೋಪಾಧ್ಯಾಯಿನಿ ನೆಲ್ಲಿ ಟೀಚರ್ ನಿಧನ

              Passed away
Nellie G D’Souza (73 years) Kundapur

 

 

Born: 19-11-1947         Died ::23-6-2020

(Rtd.Head mistress St.Marys Primary school for 22years).
Daughter of Late Patrick/Late Alice D’Souza.
Sister of Precilla, Nancy,Victoria,Zeta,John/Felcy,Nora,Joseph/Glinis.
Aunt of Reema/Rynish, Sunny, Levin. 
Funeral rites will bestartedfrom home on 24 th June 2020, at 4.00 PM.  then after Holy Rosary Church, Kundapur.  

 

ಸಂತ ಮೇರಿಸ್ ಪ್ರಾಥಮಿಕ ಶಾಲೆಯ  ನಿವ್ರತ್ತ ಮುಖ್ಯೋಪಾಧ್ಯಾಯಿನಿ ನೆಲ್ಲಿ ಟೀಚರ್ ನಿಧನ

         ಕುಂದಾಪುರದ ಖ್ಯಾತ ಸಂತ ಮೇರಿಸ್ ಪ್ರಾಥಮಿಕ ಶಾಲೆಯ  ನಿವ್ರತ್ತ ಮುಖ್ಯೋಪಾಧ್ಯಾಯಿನಿ ನೆಲ್ಲಿ ಟೀಚರ್ ಎಂದೇ ಪ್ರಖ್ಯಾತಿ ಗಳಿಸಿದ ನೆಲ್ಲಿ ಜಿ.ಡಿಸೋಜಾ ಇದೇ ಜೂನ್ ೨೩ ರಂದು ಸ್ವಗ್ರಹದಲ್ಲಿ ನಿಧನ ಹೊಂದಿದರು. ಅವರು ೨೨ ವರ್ಷ ಮುಖ್ಯೋಪಾಧ್ಯಾಯಿನಿಯಾಗಿ ಒಟ್ಟು ೩೬ ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. 

    ಕುಂದಾಪುರ ಚರ್ಚಿನಲ್ಲಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿಕೊಂಡಿದ್ದರು. ಕುಂದಾಪುರ ಚರ್ಚ್ ಸಂಘಟನೆಯಾದ ಸಂತ ಫ್ರಾನ್ಸಿಸ್ಕನ್ ಸಹೋದರ ಮೇಳದಲ್ಲಿ ಹಲವಾರು ಸಲ ಅದರ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದ ಅವರು ಐವರು ಅಕ್ಕ ತಂಗಿ, ಇಬ್ಬರು ತಮ್ಮಂದಿರು ಹಾಗೂ ಹಲವಾರು ಶಿಸ್ಯ ಸಮುದಾಯವನ್ನು ಅಗಲಿದ್ದಾರೆ. 

ಕುಂದಾಪುರ ಆಯುಷ್ ಆಸ್ಪತ್ರೆಯಿಂದ ಪತ್ರಕರ್ತರಿಗೆ ರೋಗ ನಿರೋಧಕ ಶಕ್ತಿ ವರ್ಧಕ ಔಷಧಿಗಳ ವಿತರಣೆ

JANANUDI.COM NETWORK

ಕುಂದಾಪುರ ಆಯುಷ್ ಆಸ್ಪತ್ರೆಯಿಂದ ಪತ್ರಕರ್ತರಿಗೆ ರೋಗ ನಿರೋಧಕ ಶಕ್ತಿ ವರ್ಧಕ ಔಷಧಿಗಳ ವಿತರಣೆ 

 

ಕುಂದಾಪುರ: ಆಯುಷ್ ಆಸ್ಪತ್ರೆಯಿಂದ ಪತ್ರಕರ್ತರಿಗೆ ರೋಗನಿರೋಧಕ ಶಕ್ತಿ ವರ್ಧಕಗಳ ವಿತರಣೆ
ಕುಂದಾಪುರ: ಕೋವಿಡ್ ವಿರುದ್ಧದ ಸಮರದಲ್ಲಿ ಪತ್ರಕರ್ತರು ವಹಿಸಿದ ಪಾತ್ರ ಬಹಳ ಮಹತ್ತರವಾದದ್ದು. ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸುವಲ್ಲಿ ಪತ್ರಕರ್ತರ ಶ್ರಮ ಅಪಾರ’ ಎಂದು ಕುಂದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ನಾಗೇಶ್ ಹೇಳಿದ್ದಾರೆ. ಕುಂದಾಪುರದ ಸರ್ಕಾರಿ ಅಯುಷ್ ಆಸ್ಪತ್ರೆಯಲ್ಲಿ ಪತ್ರಕರ್ತರ ರೋಗ ನಿರೋಧಕ ಶಕ್ತಿ ವೃದ್ಧಿಗೆ ನೀಡಲಾದ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.

ಕೊರೋನಾದ ಪ್ರಭಾವ ಇನ್ನಷ್ಟು ಸಮಯ ಮುಂದುವರಿಯಲಿದೆ. ಲಾಕ್ ಡೌನ್ ಸಡಿಲಿಕೆಯ ಬಳಿಕ ಜನಸಾಮಾನ್ಯರು ಕೋವಿಡ್ ಕುರಿತು ಹೆಚ್ಚು ಕಾಳಜಿ ವಹಿಸುತ್ತಿಲ್ಲ. ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಮತ್ತು ಆಗಾಗ ಸ್ಯಾನಿಟೈಝರ್ ಬಳಕೆ ಕೋವಿಡ್ ತಡೆಗಟ್ಟುವಲ್ಲಿ ಬಹಳ ಸಹಕಾರಿ. ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಕಾರ ನೀಡಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಚಿಕಿತ್ಸೆ ನೀಡಿದ ಕಾರಣ ಕೋವಿಡ್ ರೋಗಿಗಳಲ್ಲಿ ಬಹುತೇಕರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇನ್ನುಳಿದ ರೋಗಿಗಳು ಸಹ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಡಾ. ನಾಗೇಶ್ ಹೇಳಿದರು. ಆಯುರ್ವೇದ ಔಷಧ ಪದ್ದತಿಯಲ್ಲಿ ಹೆಚ್ಚಿನ ಸಂಶೋಧನೆಗಳು ಅಗತ್ಯವಿದೆ, ಪ್ರತಿಯೊಬ್ಬರೂ ರೋಗ ನಿರೋಧ ಶಕ್ತಿ ವರ್ಧನೆಗೆ ಸೂಕ್ತ ಆಹಾರ ಪದ್ದತಿಯನ್ನು ಅನುಸರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅಶೋಕ ಆಚಾರ್ಯ ರೋಗ ನಿರೋಧಕ ಶಕ್ತಿ ವೃದ್ಧಿಸಲು ಪತ್ರಕರ್ತರಿಗೆ ನೀಡಲಾದ ಸಾಮಗ್ರಿಗಳ ಕುರಿತು ವಿವರಣೆ ನೀಡಿದರು. ಸರ್ಕಾರ ಕುಂದಾಪುರದಲ್ಲಿ ನಿರ್ಮಿಸಿರುವ ಆಯುಷ್ ಆಸ್ಪತ್ರೆಯ ಪ್ರಯೋಜನವನ್ನು ಕುಂದಾಪುರದ ಜನರು ಹೆಚ್ಚೆಚ್ಚು ಪಡೆಯುವಂತಾಗಬೇಕು ಎಂದು ಹೇಳಿದರು.

ಕುಂದಾಪುರದ ಆಯುಷ್ ಆಸ್ಪತ್ರೆಯಲ್ಲಿ ನಡೆದ ಈ ಸಾಂಕೇತಿಕ ಸಮಾರಂಭದಲ್ಲಿ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ, ಪ್ರಧಾನ ಕಾರ್ಯದರ್ಶಿ ನಾಗರಾಜ ರಾಯಪ್ಪನ ಮಠ, ಹಿರಿಯ ಪತ್ರಕರ್ತರಾದ ಕೆ.ಜಿ. ವೈದ್ಯ ಸೇರಿದಂತೆ ಹಲವಾರು ಪತ್ರಕರ್ತರು, ಆಯುಷ್ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರಿಂದ ಯೋಗ ದಿನಾಚರಣೆ

JANANUDI.COM NETWORK

 

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರಿಂದ ಯೋಗ ದಿನಾಚರಣೆ 

 

 

ಕುಂದಾಪುರ, ಜೂ.22: ಜೂನ್ 21 ರಂದು ವಿಶ್ವ ಯೋಗ ದಿನಾಚರಣೆಯಾಗಿದ್ದು, ಜೂನ್ 22 ರಂದು ಗ್ರಹಣದ ದಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ,ತನ್ನ ಬ್ಲಡ್ ಬ್ಯಾಂಕಿನಲ್ಲಿ ಯೋಗ ದಿನಚರಣೆಯನ್ನು ಆಚರಿಸಿ, ಆಸಕ್ತರಿಗಾಗಿ ಯೋಗ ತರಬೇತಿಯನ್ನು ನಡೆಸಿದರು
ಈ ತರಬೇತಿಯನ್ನು ರೆಡ್ ಕ್ರಾಸ್ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಡಾ. ಸೋನಿ ಡಿಕೋಸ್ತಾ ಇವರು ನಡೆಸಿಕೊಟ್ಟರು. ಸಭಾಪತಿ ಎಸ್.ಜಯಕರ ಶೆಟ್ಟಿ ಇವರು ದೀಪ ಬೆಳಗಿಸಿ ಕಾರ್ಯಗಾರವನ್ನು ಉದ್ಘಾಟಿಸಿದರು. ಕಾರ್ಯದರ್ಶಿ ವೈ.ಸೀತಾರಾಮ್ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಸದಸ್ಯರಾದ ಗಣೇಶ್ ಆಚಾರ್ಯಾ, ಜಿ.ಸಂತೋಶ್ ಕುಮಾರ್ ಶೆಟ್ಟಿ ಹಾಗೂ ಬ್ಲಡ್ ಬ್ಯಾಂಕ್ ಸಿಬಂದಿಗಳು ಪಾಲ್ಗೊಂಡಿದ್ದರು.
ಕಾರ್ಯದರ್ಶಿ ವೈ.ಸೀತಾರಾಮ್ ಶೆಟ್ಟಿ ಧನ್ಯವಾದಗಳನ್ನು ಅರ್ಪಿಸಿದರು.

ಕುಂದಾಪುರ ತಾಲೂಕು ಆಟೊ ರಿಕ್ಷಾ ಮತ್ತು ವಾಹನ ಚಾಲಕರ ಸಂಘದಿಂದ ಸ್ಥಾಪಕ ಸದಸ್ಯ ಉಮೇಶ್ ಗೆ ಆರೋಗ್ಯ ಪರಿಹಾರದ ಮೊತ್ತ

JANANUDI.COM NETWORK

 

ಕುಂದಾಪುರ ತಾಲೂಕು ಆಟೊ ರಿಕ್ಷಾ ಮತ್ತು ವಾಹನ ಚಾಲಕರ ಸಂಘದಿಂದ  ಸ್ಥಾಪಕ ಸದಸ್ಯ ಉಮೇಶ್ ಗೆ ಆರೋಗ್ಯ ಪರಿಹಾರದ ಮೊತ್ತ   

 

 

ಕುಂದಾಪುರ, ಜೂ.22: ಕುಂದಾಪುರ ತಾಲೂಕು ಆಟೊ ರಿಕ್ಷಾ ಮತ್ತು ವಾಹನ ಚಾಲಕರ ಸಂಘ (CITU) ಇದರ ಸ್ಥಾಪಕ ಸದಸ್ಯರಲ್ಲೊಬ್ಬರಾದ ಮತ್ತು ಸಂಘದ ಚಟುವಟಿಕೆಗಳಲ್ಲಿ ಇಂದಿಗು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಉಮೇಶ್ ಎನ್. ಅವರು ಇತ್ತೀಚೆಗೆ ಕಸ್ತುರ್ಬ ಆಸ್ಪತ್ರೆ ಮಣಿಪಾಲ ಇಲ್ಲಿ ಹ್ರದಯ ಚಿಕಿತ್ಸೆಗೆ ಒಳಗಾಗಿದ್ದು.ಅವರಿಗೆ ನಮ್ಮ ಸಂಘದವತಿಯಿಂದ ನೀಡುವ ಆರೋಗ್ಯ ಪರಿಹಾರದ ಮೊತ್ತ ರೂಪಾಯಿ 20,000/- ದ ಚೆಕ್ ನ್ನು ಇಂದು ಶಾಸ್ತ್ರಿ ಸರ್ಕಲ್ ರಿಕ್ಷಾ ನಿಲ್ದಾಣದಲ್ಲಿ ಸಂಘದ ಹಿರಿಯ ಸದಸ್ಯರಾದ ಕ್ರಷ್ಣರವರು ನೀಡಿದರು.

   ಸಂಘದ ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ,ಸಂಘಟನ ಕಾರ್ಯದರ್ಶಿ ರಮೇಶ್ ವಿ.,ರಮೇಶ ಬೆಟ್ಟಾಗರ ಹಾಗೂ ಮುಂತಾದ ಸದಸ್ಯರು ಪಾಲ್ಗೊಂಡಿದ್ದರು.