HOLY ROSARY CHURCH, KUNDAPUR – 450 th JUBILEE SOUVENIR 2021

ರೋಟರಿಯಿಂದ ಕುಂದಾಪುರ ಸರಕಾರಿ ಆಸ್ಪತ್ರೆಗೆ ಅತ್ಯಾಧುನಿಕ 2 ಶವ ಶೀತಲಿಕರಣಗಳು ಹಸ್ತಾಂತರ

JANANUDI.COM NETWORK

 

ರೋಟರಿಯಿಂದ ಕುಂದಾಪುರ ಸರಕಾರಿ ಆಸ್ಪತ್ರೆಗೆ ಅತ್ಯಾಧುನಿಕ 2 ಶವ ಶೀತಲಿಕರಣಗಳು ಹಸ್ತಾಂತರ

 

 

ಕುಂದಾಪುರ, ಜು,೧; ರೋಟರಿ ಅಂತರರಾಷ್ಟ್ರೀಯ ಜಿಲ್ಲೆಯ ಅನುದಾನದಿಂದ ರೋಟರಿ ಕ್ಲಬ್ ದಕ್ಷಿಣ ಕುಂದಾಪುರ ಮುಖಾಂತರ , ಕುಂದಾಪುರ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಎರಡು ಅತ್ಯಾಧುನಿಕ ತಂತ್ರಜ್ಞಾನದ ಎರಡು ಶವ ಸುರಕ್ಷತೆಯ ಶೀತಲಿಕರಣ ಯನಿಟುಗಳು ಉಪಲಬ್ಧವಾಗಿದ್ದು ಇವಗಳನ್ನು ಆಸ್ಪತ್ರೆಗೆ ಹಸ್ತಾಂತರ ಗಳಿಸುವ ಕಾರ್ಯಕ್ರಮ ಜೂನ್ 30 ರಂದು ಆಸ್ಪತ್ರೆಯ ಶವಗಾರದ ಮುಂದೆ ನಡೆಯಿತು.
ರೋಟರಿ ಜಿಲ್ಲೆಯ ಪೂರ್ವ ಗವರ್ನರ್ ಅಭಿನಂದನ್ ಎ ಶೆಟ್ಟಿ ಇದರ ಸ್ಮಾರಕ ಫಲಕದ ಪರದೆಯನ್ನು ಬಿಡಿಸುವ ಮೂಲಕ ಹಸ್ತಾಂತರ ಮಾಡಿ ‘ಈ ಆಸ್ಪತ್ರೆಗೆ ಬಹಳ ಸಮಯದಿಂದ ಶವ ಸುರಕ್ಷಿತೆಯ ಯುನಿಟ್ ಗಳನನ್ನು ನೀಡು ಬೇಕೆಂಬ ಆಶಯವಾಗಿತ್ತು.ನಮ್ಮದಾಗಿತ್ತು.   ನಮ್ಮ ಹತ್ತಿರ ಪರಿಸರದ ಶಾಲಾ ಮಕ್ಕಳು ಅಪಘಾತದಲ್ಲಿ ಮಡಿದಾಗ ಇಲ್ಲಿ ಶವ ಸುರಕ್ಷತೆಯ ಯುನಿಟ್ ಕಡಿಮೆಯಿದ್ದು. ಅವಾಗ ನನ್ನ ಲ್ಲಿ ಈ ಯೋಜನೆ ಹುಟ್ಟಿತು. ಅದು ಇಂದು ರೋಟರಿಯನ್ ಗಳ ಸಹಾಯದಿಂದ ಪೂರ್ಣ ಗೊಂಡಿದೆ’ ಎಂದು ತಿಳಿಸಿ. ’ರೋಟರಿ ಅಂತರರಾಷ್ಟ್ರೀಯ ಅನುದಾನದ ಮೂಲಕ ಇಂತಹ ಅನೇಕ ಯೋಜನೆಗಳನ್ನು ಸಮಾಜಕ್ಕೆ ರೋಟರಿ ನೀಡುತ್ತದೆ’ ಎಂದರು.
    ಸುಮಾರು 5.50 ಲಕ್ಷ ರೂಪಾಯಿ ಬೆಲೆಯ ಈ ಯುನಿಟ್ ಗಳನ್ನು ಸ್ವೀಕರಿಸಿದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ರೊಬರ್ಟ್ ರೆಬೆಲ್ಲೊ ‘ಇಂತಹ ಮೊರ್ಚರಿಗಳು ನಮಗೆ ಲಭಿಸಿದ್ದು ಬಹಳ ಉಪಕಾರದ ಕಾರ್ಯ. ಇದರ ಕೊರತೆ ನಮಗಿತ್ತು. ಇದು ನಮಗೆ ದಯಪಾಲಿಸಿದಕ್ಕೆ ರೋಟರಿಯನ್ ಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೆವೆ’ ಎಂದರು. ತಾಲೂಕು ಆರೋಗ್ಯ ಇಲಾಖಾ ವೈದ್ಯಾಧಿಕಾರಿ ಚಂದ್ರಶೇಖರ ಉಡುಪ ರೋಟರಿಯೆನವರ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿದರು.
   ರೋಟರಿ ದಕ್ಷಿಣ ಕುಂದಾಪುರದ 2019/20 ರ ಅಧ್ಯಕ್ಷ ಜಾನ್ಸನ್ ಡಿ ಆಲ್ಮೇಡ, ಅಂದಿನ ಕಾರ್ಯದರ್ಶಿ ರಾಮ್ ಪ್ರಸಾದ್ ಶೇಟ್, ಪಿ.ಡಿ.ಜಿ. ಸದಾನಂದ ಛಾತ್ರ,ಜಿಲ್ಲಾ ಉಪ ಗವರ್ನರ್ ರವಿರಾಜ್ ಶೆಟ್ಟಿ  2020/21 ರ ಅಧ್ಯಕ್ಷ ಡಾ.ಉತ್ತಮ್ ಕುಮಾರ್ ಶೆಟ್ಟಿ ಮತ್ತು  ಇನ್ನಿತರ ಹಲವಾರು ರೋಟರಿಯನ್ ಗಳು ಉಪಸ್ಥಿತರಿದ್ದರು.ಕುಂದಾಪುರ ದಕ್ಷಿಣದ ರೋಟರಿ ಅಧ್ಯಕ್ಷ ದೇವರಾಜಾ ಸ್ವಾಗತಿಸಿದರು. ಕಾರ್ಯದರ್ಶಿ ಶೋಭಾ ಭಟ್ ವಂದಿಸಿದರು

ರೋಟರಿ ಕುಂದಾಪುರ ದಕ್ಷಿಣ ಹಾಗೂ ರೋಟರಾಕ್ಟ್ ಕುಂದಾಪುರ ದಕ್ಷಿಣ ಇವರ ಸಹಯೋಗದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಅಧ್ಯಾಪಕರಿಗೆ ಲಕ್ಷ್ಮಣ ಫಲ ಗಿಡಗಳ ವಿತರಣೆ

JANANUDI.COM NETWORK

 

ರೋಟರಿ ಕುಂದಾಪುರ ದಕ್ಷಿಣ ಹಾಗೂ ರೋಟರಾಕ್ಟ್ ಕುಂದಾಪುರ ದಕ್ಷಿಣ ಇವರ ಸಹಯೋಗದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಅಧ್ಯಾಪಕರಿಗೆ ಲಕ್ಷ್ಮಣ ಫಲ ಗಿಡಗಳ ವಿತರಣೆ

 

 

 

ಕುಂದಾಪುರ,ಜು.೧; ರೋಟರಿ ಕುಂದಾಪುರ ದಕ್ಷಿಣ ಹಾಗೂ ರೋಟರಾಕ್ಟ್ ಕುಂದಾಪುರ ದಕ್ಷಿಣ ಇವರ ಸಹಯೋಗದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಅಧ್ಯಾಪಕರಿಗೆ ಲಕ್ಷ್ಮಣ ಫಲ ಗಿಡಗಳ ವಿತರಣೆ ಹಾಗೂ ಮಾಹಿತಿಯನ್ನು ನೀಡುವ ಕಾರ್ಯಕ್ರಮವನ್ನು ಜೂನ್ ೩೦ ರಂದು ನಡೆಸಲಾಯಿತು. ಕಾಲೇಜಿನ ಅಧ್ಯಾಪಕರ ಸಂಘದ ಅಧ್ಯಕ್ಷರಾದ ಶ್ರೀ ಶಂಕರನಾರಾಯಣ ಇವರು ನೆರೆದಿರುವ ಸಭೀಕರನ್ನು ಸ್ವಾಗತಿಸಿದರು. ರೋಟರಿಯ ನಿಯೋಜಿತ ಅಧ್ಯಕ್ಷರಾದ ರೋ. ಡಾ. ಉತ್ತಮ್ ಕುಮಾರ್ ಶೆಟ್ಟಿ ಇವರು ಗಿಡದ ಮಹತ್ವ ಹಾಗೂ ಉಪಯೋಗಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದರು. ರೋಟರಿ ಅಧ್ಯಕ್ಷರಾದ ರೋ. ದೇವರಾಜ್ ಇವರು ನೆರೆದಿರುವವರಿಗೆ ಗಿಡಗಳನ್ನು ವಿತರಿಸಿದರು. ರೋ. ಜುಡಿತ್ ಮೆಂಡೋನ್ಸಾ ಧನ್ಯವಾದ ಸಮರ್ಪಿಸಿದರು. ಈ ಸಂಧರ್ಭದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ನಾರಾಯಣ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎಮ್. ಗೊಂಡ, ರೋಟರಾಕ್ಟ್ ಅಧ್ಯಕ್ಷರಾದ ಆಲ್ಡ್ರಿನ್ ಡಿಸೋಜಾ, ರೋ. ಕೆ. ಕೆ. ಕಾಂಚನ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.


ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ಘಟಕದಿಂದ ವಿವಿಧ ಸಂಘ ಸಂಸ್ತೆಗಳಿಗೆ ಎನರ್ಜಿ ಡ್ರಿಂಕ್ ವಿತರಣೆ

JANANUDI.COM NETWORK

 

 ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ಘಟಕದಿಂದ ವಿವಿಧ ಸಂಘ ಸಂಸ್ತೆಗಳಿಗೆ ಎನರ್ಜಿ ಡ್ರಿಂಕ್ ವಿತರಣೆ

 

Handing over of 720 Energy Drink to PSI

 

ಕುಂದಾಪುರ,ಜು.1; ತಾರೀಕು 30-06-2020 ರಂದು ಭಾರತೀಯ ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ಘಟಕ ಈ ಕೆಳಗಿನ ಸಂಸ್ತೆಗಳಿಗೆ ಎನರ್ಜಿ ಡ್ರಿಂಕ್ ವಿತರಣೆ ಮಾಡಿದೆ.
ಕುಂದಾಪುರ ಸರಕಾರಿ ಆಸ್ಪತ್ರೆಯ ಕೊರೋನಾ ರೋಗಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ, ಒಳರೋಗಿಗಳಿಗೆ ಮತ್ತು ಕೋವಿಡ್ ವಾರಿಯರ್ಸ್ ಗಳಿಗೆ 960 ಬಾಟ್ಲಿ. ಇದನ್ನು ಮುಖ್ಯ ಆರೋಗ್ಯಾಧಿಕಾರಿ ಗಳಾದ ಡಾ. ರೋಬರ್ಟ್ ಸ್ವೀಕರಿಸಿದರು.
ಕುಂದಾಪುರ ಪೊಲೀಸ್ ಇಲಾಖೆಯ ಹೋಮ್ ಗಾಡ್ರ್ಸ್ ಇವರಿಗೆ 720 ಬಾಟ್ಲಿ. ಇದನ್ನು ಪಿ.ಎಸ್.ಐ. ಶ್ರಿ ಹರೀಶ್ ಸ್ವೀಕರಿಸಿದರು.
ತಾಲೂಕು ಆರೋಗ್ಯ ಅಧಿಕಾರಿಗಳಿಗೆ – ಎಲ್ಲಾ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು, ಕೊರೋನಾ ವಾರಿಯರ್ಸ್ ಇತ್ಯಾದಿ ಗಳಿಗೆ 720 ಬಾಟ್ಲಿ. ಇದನ್ನು ಡಾ. ನಾಗಭೂಷಣ್ ಉಡುಪರು ಸ್ವೀಕರಿಸಿದರು.
ಕುಂದಾಪುರ ಪುರಸಭೆಯ ಪೌರ ಕಾರ್ಮಿಕರಿಗೆ, ಮುಖ್ಯಾಧಿಕಾರಿಗಳ ಮುಖಾಂತರ 480 ಬಾಟ್ಲಿ ವಿತರಿಸಲಾಯಿತು.ಇದಲ್ಲದೇ, ರೆಡ್ ಕ್ರಾಸ್ ರಕ್ತ ನಿಧಿ ಕೇಂದ್ರದಲ್ಲಿ ರೋಟರಿ ಶಂಕರನಾರಾಯಣ ಇವರಿಂದ ರಕ್ತ ದಾನ ಶಿಭಿರ ನಡೆಸಲಾಯಿತು.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಭಾ ಪತಿಗಳಾದ ಶ್ರೀ ಎಸ್. ಜಯಕರ ಶೆಟ್ಟಿ, ಕಾರ್ಯದರ್ಷಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ, ಡಾ. ಸೋನಿ ಡಿಕೋಸ್ಟಾ ಮತ್ತು ರಕ್ತ ನಿಧಿ ಕೇಂದ್ರದ ಮೇಲ್ವಿಚಾರಕರಾದ ವೀರೇಂದ್ರ ಕುಮಾರ್ ಉಪಸ್ತಿತರಿದ್ದರು

Handing over of 960 energy drinks to Govt. Hospital Kundapura

 

 

ಕೆಸಿ ವ್ಯಾಲಿ,ಎತ್ತಿಹೋಳೆ ಯೋಜನೆಗಳ ಅಕ್ರಮಗಳ ಚೆರ್ಚೆಗೆ ಸಿದ್ದ ವೆಂಕಟಶಿವಾಡ್ಡಿ ಸವಾಲ್

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

ಕೆಸಿ ವ್ಯಾಲಿ,ಎತ್ತಿಹೋಳೆ ಯೋಜನೆಗಳ ಅಕ್ರಮಗಳ ಚೆರ್ಚೆಗೆ ಸಿದ್ದ ವೆಂಕಟಶಿವಾಡ್ಡಿ ಸವಾಲ್

 

 

 

ಶ್ರೀನಿವಾಸಪುರ:-ಕ್ಚೇತ್ರದ ಅಭಿವೃದ್ಧಿಯಲ್ಲಿ ನಮ್ಮದೂ ದೊಡ್ಡಪಾತ್ರ ಇದೆ ಇದನ್ನು ಹಾಲಿ ಶಾಸಕ ಹಾಗು ಮಾಜಿ ವಿಧಾನಸಭಾ ಅಧ್ಯಕ್ಷರಾಗಿದ್ದ ರಮೇಶಕುಮಾರ್ ಮನಗಾಣಬೇಕು ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಹಾಲಿ ಶಾಸಕ ರಮೇಶಕುಮಾರ್ ವಿರುದ್ದ ಗುಡಗಿದರು. ಅವರು ಇಂದು ತಾಲೂಕಿನ ಗೌವನಪಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ನಾನು ನಾಲ್ಕು ಬಾರಿ ಶಾಸಕನಾಗಿದ್ದೆ ನಾಲ್ಕು ಬಾರಿ ಸೋಲೂಂಡಿದ್ದೇನೆ ಹಾಗೇನೆ ರಮೇಶಕುಮಾರ್ ನಾಲ್ಕು ಬಾರಿ ಶಾಸಕರಾಗಿದ್ದರು ನಾಲ್ಕು ಬಾರಿ ಅವರನ್ನು ಕ್ಷೇತ್ರದ ಜನತೆ ತಿರಸ್ಕರಿಸಿದ್ದಾರೆ ಅಭಿವೃದ್ದಿ ಮಾಡಲು ಜನತೆ ಇಬ್ಬರಿಗೂ ಸಮಾನ ಅವಕಾಶ ಮಾಡಿಕೊಟ್ಟಿದ್ದಾರೆ ಆದರೆ ಹಾಲಿ ಶಾಸಕರು ಅಭಿವೃದ್ಧಿ ಮಾಡೋ ವಿಚಾರದಲ್ಲಿ ನನ್ನಿಂದ ಅವರಿಗೆ ಅಡ್ಡಿಯಾಗಿದೆ ಎಂದು ನೆಪವೊಡ್ಡಿ ನನ್ನ ಬಗ್ಗೆ ಸಾರ್ವಜನಿಕವಾಗಿ ಇಲ್ಲಸಲ್ಲದ ವಿಷಯ ಮಾತನಾಡಿರುತ್ತಾರೆ. ನನಗೆ ಕಡಿಮೆ ಮತ ನೀಡಿರಬಹುದು ಆದರೆ ಕ್ಷೇತ್ರದ ಜನತೆ ನನ್ನನ್ನು ಮರೆತಿಲ್ಲ ಗೌವರವದಿಂದ ಕಾಣುತ್ತಿದ್ದಾರೆ ನಾನು ಅಧಿಕಾರದಲ್ಲಿದ್ದಾಗ ಬಡವರ ದಲಿತರ ಅಲ್ಪಸಂಖ್ಯಾತರ ಹಿತ ಕಾಪಾಡಿದ್ದೇನೆ ಅವರಿಗೆ ಅನ್ಯಾಯವಾಗಲು ನಾನು ಬಿಟ್ಟಿಲ್ಲ ಬಿಡಲಾರೆ ಎಂದ ಅವರು ಇಲ್ಲಿ ಯಾರು ಯಾರಮನೆಯಿಂದಲೂ ಹಣ ತಂದು ಹಾಕುತ್ತಿಲ್ಲ ನಾನು ತಂದಿದ್ದು ಸರ್ಕಾರದ ಹಣವೆ ನೀನು ತರುತ್ತಿರುವುದು ಸರ್ಕಾರದ ಹಣವೆ ನನ್ನ ವಿರುದ್ದ ಅನಗತ್ಯವಾಗಿ ಅಪ ಪ್ರಚಾರ ಮಾಡುವುದನ್ನು ಬಿಟ್ಟು ಸಾರ್ವಜನಿಕವಾಗಿ ಮಾತನಾಡುವಾಗ ಸೌಜನ್ಯತೆಯಿಂದ ಮಾತನಾಡುವಂತೆ ಅಗ್ರಹಿಸಿದರು.
ಅತಿಕ್ರಮಣ ಮಾಡಿರುವ ಸರ್ಕಾರಿ ಜಮೀನುಗಳನ್ನು ತೆರವು ಮಾಡಿಸುವ ಬಗ್ಗೆ ಸಭೆಗಳಲ್ಲಿ ಹಾಲಿ ಶಾಸಕ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಸರ್ಕಾರಿ ಜಮೀನು ಅತಿಕ್ರಮಣದ ಬಗ್ಗೆ ಅವರ ಬಾಯಲ್ಲಿ ಹೇಳಿಕೆ ಕೇಳಿ ಖುಷಿಯಾಯಿತು ಅವರು ಒತ್ತುವರಿ ಮಾಡಿಕೊಂಡಿರುವ ಜಮೀನು ಸಹ ಸರ್ಕಾರದ್ದೆ ಅಲ್ಲವಾ ಎಂದರು
ಕೆಸಿ ವ್ಯಾಲಿ ಹಾಗು ಎತ್ತಿನ ಹೋಳೆ ಯೋಜನೆಗಳನ್ನು ರೂಪಿಸಿದ್ದು ದಿವಂಗತರವಿ
ಕೆಸಿ ವ್ಯಾಲಿ ಹಾಗು ಎತ್ತಿನ ಹೋಳೆ ಯೋಜನೆಗಳನ್ನು ರೂಪಿಸಿದ ಕೀರ್ತಿ ಕೋಲಾರ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ರವಿ ಅವರಿಗೆ ಸಲ್ಲಬೇಕು ಆತನೆ ರೂಪಿಸಿದ್ದ ನೀರಾವರಿ ಯೋಜನೆಗಳನ್ನು ತಮ್ಮದೇ ತಮ್ಮಿಂದಲೇ ಯೋಜನೆ ಜಾರಿಯಾಗಿದೆ ಎಂದು ಹಾಲಿ ಶಾಸಕರು ಪ್ರಚಾರ ಮಾಡಿಕೊಳ್ಳ್ಳುತ್ತಿದ್ದಾರೆ ಈ ನೀರಾವರಿ ಯೋಜನೆಗಳಲ್ಲಿ ನನ್ನ ಮಗನೇನು ಕಾಮಾಗಾರಿ ಗುತ್ತಿಗೆ ಪಡೆದುಕೊಂಡಿಲ್ಲ ಎಂದ ವೆಂಕಟಶಿವಾರೆಡ್ಡಿ ವ್ಯಂಗ್ಯವಾಗಿ ಹೇಳಿದರು ಗುತ್ತಿಗೆ ಪಡೆದುಕೊಂಡಿರುವ ವ್ಯಕ್ತಿ ಯಾರು ಎಂಬುದನ್ನು ಸ್ಪಷ್ಟಪಡಿಸಲಿ ಕೆಸಿವ್ಯಾಲಿಯೋಜನೆ ಸಂಪೂರ್ಣ ತಮ್ಮ ಕುಟುಂಬದ ಯೋಜನೆ ಎಂದು ಶಾಸಕರು ಹೇಳಿಕೊಂಡಿದ್ದಾರೆ ಇದರಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗೆ ಸಿದ್ದ ಎಂದು ಚಿಟಿಕೆ ಹೋಡೆದು ಸವಾಲು ಹಾಕಿದರು.
ಗೋಷ್ಠಿಯಲ್ಲಿ ಜಿಲ್ಲಾಪಂಚಾಯಿತಿ ಸದಸ್ಯ ತೂಪಲ್ಲಿನಾರಾಯಣಸ್ವಾಮಿ, ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಚ ಬಕ್ಷು,ರಾಮಮೊಹನ್ ರಜೇಂದ್ರಪ್ರಸಾದ್, ಕ್ಯಾಸೆಟ್ ಶ್ರೀನಿವಾಸ್ ಎಪಿಎಂಸಿ ನಿರ್ದೇಶಕನಕ್ಕಲಗಡ್ಡನಾರಯಣಸ್ವಾಮಿ. ಆವಲದೊಡ್ಡಿಜಯರಾಮ್ ತೂಪಲ್ಲಿಮಧು, ಪೂಲುಶಿವಾರೆಡ್ಡಿ ಕಾರ್ ಬಾಬು, ಕಲ್ಲೂರುಸುರೇಶ್ ಉಪಸ್ಥಿರಿದ್ದರು.

ರೋಟರಿ ಕುಂದಾಪುರ ದಕ್ಷಿಣ ಇವರಿಂದ ಕಿರಿಮಂಜೇಶ್ವರ ಸರಕಾರಿ ಪ್ರೌಢ ಶಾಲೆಗೆ  ಕೈ ಸ್ವಚತ ಬೇಸಿನ್ ಗಳನ್ನು ಹಸ್ತಾಂತರ

JANANUDI.COM NETWORK

 

ರೋಟರಿ ಕುಂದಾಪುರ ದಕ್ಷಿಣ ಇವರಿಂದ ಕಿರಿಮಂಜೇಶ್ವರ ಸರಕಾರಿ ಪ್ರೌಢ ಶಾಲೆಗೆ  ಕೈ ಸ್ವಚತ ಬೇಸಿನ್ ಗಳನ್ನು ಹಸ್ತಾಂತರ

 

ಕುಂದಾಪುರ, ಜೂ.30; ರೋಟರಿ ಕುಂದಾಪುರ ದಕ್ಷಿಣ ಇವರಿಂದ ರೋಟರಿ ಶಿಕ್ಷಾವಾಹಿನಿ ಕಾರ್ಯಕ್ರಮದ ಅಡಿಯಲ್ಲಿ  ಕಿರಿಮಂಜೇಶ್ವರ ಸರಕಾರಿ ಪ್ರೌಢ ಶಾಲೆಗೆ  ಕೈ ಸ್ವಚತ ಬೇಸಿನ್ ಹಸ್ತಾಂತರ ಗೊಳಿಸುವ ಕಾರ್ಯಕ್ರಮ ಸೋಮವಾರಂದು ಶಾಲೆಯಲ್ಲಿ ನೆಡೆಯಿತು.

ರೋಟರಿ ಕುಂದಾಪುರ ದಕ್ಷಿಣ ಇವರಿಂದ ಕಿರಿಮಂಜೇಶ್ವರ ಸರಕಾರಿ ಪ್ರೌಢ ಶಾಲೆಗೆ  ಕೈ ಸ್ವಚತ ಬೇಸಿನ್ ಗಳನ್ನು

ಅಸ್ಟಿಟೆಂಟ್ ಗವರ್ನರ್ ರೋ.ರವಿರಾಜ್ ಶೆಟ್ಟಿಯವರು ಇದನ್ನು ಶಾಲಾ ಮುಖ್ಯೋಪಾಧ್ಯಾಯ ಬೊಮ್ಮಯ್ಯ ಗಾಂವ್ಕರ್ ಇವರಿಗೆ ಹಸ್ತಾಂತರಿಸಿದರು. ಬೊಮ್ಮಯ್ಯ ಗಾಂವ್ಕರ್   ಈ ಕೊಡುಗೆಗಾಗಿ ರೋಟರಿ ಸಂಸ್ಥೆಗೆ ಕ್ರತ್ಜನತೆ ಸಲ್ಲಿಸಿದರು. ರೋಟರಿ ಕುಂದಾಪುರ ದಕ್ಷಿಣ ಇದರ ಅಧ್ಯಕ್ಷ ರೋ.ದೇವರಾಜ್ ಪ್ರಸ್ತಾವಿಕ ಮಾತುಗಳನ್ನಾಡಿದರು.

  ಈ ಸಂದರ್ಭದಲ್ಲಿ ರೋ.ಜುಡಿತ್ ಮೆಂಡೋನ್ಸಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಲಿಪ್, ಮೊಗವೀರ,ಪಂಚಾಯತ್ ಉಪಾಧ್ಯಕ್ಷ ಶೇಕರ ಖಾರ್ವಿ ,ಉಮೇಶ್ ನಾಯ್ರಿ,ಪದ್ಮಾನಾಭ ಹೆಬ್ಬಾರ್ ಮತ್ತು ಶಾಲಾ ಶಿಕ್ಷಕರು ಹಾಜರಿದ್ದರು.

ಕೋಲಾರದಲ್ಲಿ ಸಿಇಓ ಆಗಿ ಕಾರ್ಯನಿರ್ವಹಿಸಿ ಇತ್ತೀಚೆಗೆ ಉಡುಪಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಐಎಎಸ್ ಅಧಿಕಾರಿ ಜಗದೀಶ್​ ಅವರಿಗೆ ಸಂಕಷ್ಟ :ನ್ಯಾಯಾಲಯ ಕೋಲಾರ ತನಿಖೆಗೆ ಭ್ರಷ್ಟಾಚಾರ  ನಿಗ್ರಹದಳಕ್ಕೆ ಆದೇಶ ನೀಡಿದೆ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರದಲ್ಲಿ ಸಿಇಓ ಆಗಿ ಕಾರ್ಯನಿರ್ವಹಿಸಿ ಇತ್ತೀಚೆಗೆ ಉಡುಪಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಐಎಎಸ್ ಅಧಿಕಾರಿ ಜಗದೀಶ್​ ಅವರಿಗೆ ಸಂಕಷ್ಟ :ನ್ಯಾಯಾಲಯ ಕೋಲಾರ ತನಿಖೆಗೆ ಭ್ರಷ್ಟಾಚಾರ  ನಿಗ್ರಹದಳಕ್ಕೆ ಆದೇಶ ನೀಡಿದೆ

ಕೋಲಾರ : ಬೆಲೆ ಬಾಳುವ ಬೆಳ್ಳಿ ಗದೆ , ಕಿರೀಟ , ಚಿನ್ನದ ಉಂಗುರವನ್ನು ಉಡುಗೊರೆ ರೂಪದಲ್ಲಿ ಲಂಚವನ್ನು ನೀಡಿದ ಮತ್ತು ಸ್ವೀಕರಿಸಿದ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಕೋಲಾರ ಜಿಲ್ಲಾ ಪಂಚಾಯಿತಿಯ ಹಿಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಲಿ ಉಡುಪಿ ಜಿಲ್ಲಾಧಿಕಾರಿಯಾದ ಜಿ.ಜಗದೀಶ್ IAS,  9 ಪಿ.ಡಿ.ಓಗಳು ಮತ್ತು ಒಬ್ಬ ಇ.ಓ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ 1988 ರ ಅನ್ವಯ ತನಿಖೆ ನಡೆಸಿ ವರದಿ ನೀಡುವಂತೆ ಕೋಲಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಎಂ.ಎಲ್.ರಘುನಾಥ್‌ರವರು ಕೋಲಾರ ಭ್ರಷ್ಟಾಚಾರ ನಿಗ್ರಹದಳಕ್ಕೆ ಆದೇಶ ನೀಡಿದ್ದಾರೆ . 
ಹಿನ್ನಲೆ : ಈ ಹಿಂದೆ ಕೋಲಾರ ಜಿಲ್ಲಾ ಪಂಚಾಯಿತಿಯಲ್ಲಿ ಜಿ.ಜಗದೀಶ್ IAS ಇವರು 11 ತಿಂಗಳು ಸೇವೆ ಸಲ್ಲಿಸಿ ಉಡುಪಿ ಜಿಲ್ಲಾಧಿಕಾರಿಗಳಾಗಿ ಆಗಸ್ಟ್ 2019 ರಲ್ಲಿ ವರ್ಗಾವಣೆಯಾದಾಗ ದಿನಾಂಕ: 23-08-2019 ಬೀಳ್ಕೊಡುಗೆ ಸಮಾರಂಭವನ್ನು ಅದ್ದೂರಿಯಾಗಿ ಏರ್ಪಡಿಸಲಾಗಿತ್ತು . ಜಿಲ್ಲಾಧಿಕಾರಿ ಮಂಜುನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು . ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಕೆಲವು ಪಿ.ಡಿ.ಓ. ಗಳು ಹಾಗೂ ಇತರರಿಗೆ ಆಸರೆಯಾಗಿ ನಿಂತು ಭ್ರಷ್ಟಾಚಾರಕ್ಕೆ ನೀರೆರೆದು ಪೋಷಿಸಿದಕ್ಕೆ ಪ್ರತಿಯಾಗಿ ಲಂಚದ ರೂಪದಲ್ಲಿ ಹಿಂದಿನ ಸಿಇಓ ಜಿ ಜಗದೀಶ್ ಗೆ ಬೆಲೆ ಬಾಳುವ ಬೆಳ್ಳಿ ಕಿರೀಟ , ಬೆಳ್ಳಿ ಗದೆ , ಚಿನ್ನದ ಉಂಗುರ ಇನ್ನು ಏನೇನೋ ಉಡುಗೊರೆಯಾಗಿ ಬಹಿರಂಗವಾಗಿ ನೀಡಿದ್ದರು . ಕರ್ನಾಟಕ ಕೆ.ಸಿ.ಎಸ್ . ( ನಡತೆ ) ನಿಯಮಗಳು 1966 ರ ಅವಕಾಶವನ್ನು ಉಲ್ಲಂಘಿಸಿ ವಂತಿಗೆಯನ್ನು ಸ್ವೀಕರಿಸುವುದು ಅಥವಾ ಬೇರೆ ರೀತಿಯಲ್ಲಿ ನಿಧಿ ಸಂಗ್ರಹಿಸಲು , ಸಂಗ್ರಹಣಾ ಕಾರ್ಯದಲ್ಲಿ ಪಾಲ್ಗೊಳ್ಳುವುದು ಅಥವಾ ಇತರೆ ಸಂಗ್ರಹಣೆಗಳು ನಗದು ಅಥವಾ ಇತರೆ ರೀತಿಯಲ್ಲಿ ಪಡೆಯುವುದು ನಿಷೇಧಿಸಿದೆ . ಇದು ದಂಡಾರ್ಹ ಅಪರಾಧವಾಗಿರುತ್ತದೆ .
ಈ ಸಂಬಂಧ ಕೋಲಾರದ ಸಾಮಾಜಿಕ ಕಾರ್ಯಕರ್ತ ಎಸ್ . ನಾರಾಯಣಸ್ವಾಮಿ ಯವರು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು , ಭ್ರಷ್ಟಾಚಾರ ನಿಗ್ರಹ ದಳ , ಬೆಂಗಳೂರು ರವರಿಗೆ ದಾಖಲೆಗಳ ಸಮೇತ ದೂರನ್ನು ನೀಡಿ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲು ಕೋರಿದ್ದರು . ದಿನಾಂಕ : 17-06-2020 ರಂದು ಕೋಲಾರದ ಭ್ರಷ್ಟಾಚಾರ ನಿಗ್ರಹ ದಳದ ನ್ಯಾಯಾಲಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ತನಿಖೆಗೆ ಮನವಿ ಮಾಡಿಕೊಳ್ಳಲಾಗಿತ್ತು .
 ಈ ಸಂಬಂಧ ತನಿಖೆ ನಡೆಸಿ 25-08-2020 ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ನ್ಯಾಯಮೂರ್ತಿಗಳು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಆದೇಶ ನೀಡಿದ್ದಾರೆ .
 ಇದರನ್ವಯ ದಿನಾಂಕ : 25-06-2020 ರಂದು ( 1 ) ಹಿಂದಿನ ಸಿ.ಇ.ಓ. ಹಾಲಿ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ , IAS , ( 2 ) ನರಸಾಪುರ ಗ್ರಾಮ ಪಂಚಾಯಿತಿಯ ಪಿ.ಡಿ.ಓ. ಕೆ.ಮಹೇಶ್‌ಕುಮಾರ್ ( 3 ) ಮಾಸ್ತೇನಹಳ್ಳಿ ಗ್ರಾಮ ಪಂಚಾಯಿತಿಯ ಪಿ.ಡಿ.ಓ , ಪಿ.ನಾರಾಯಣಪ್ಪ ( 4 ) ಹರಟೆ ಗ್ರಾಮ ಪಂಚಾಯಿತಿಯ ಪಿ.ಡಿ.ಒ , ಎಂ.ರಾಮಕೃಷ್ಣ ( 5 ) ಮಾಗೊಂದಿ ಗ್ರಾಮ ಪಂಚಾಯಿತಿಯ ಪಿ.ಡಿ.ಒ , ವಿ.ಶಂಕರ್ ( 6 ) ಬೆಳ್ಳೂರು ಗ್ರಾಮ ಪಂಚಾಯಿತಿಯ ಪಿ.ಡಿ.ಓ. ಎನ್ ಸಂಪರಾಜ ( 7 ) ಸೂಲೂರು ಗ್ರಾಮ ಪಂಚಾಯಿತಿಯ ಪಿ.ಡಿ.ಓ , ಎಸ್.ಜಿ.ಹರೀಶ್‌ಕುಮಾರ್ ( 8 ) ಹೋಳೂರು ಗ್ರಾಮ ಪಂಚಾಯಿತಿಯ ಪಿ.ಡಿ.ಒ. ಎಂ.ಸೋಮಶೇಖರ್ ( 9 ) ಅಂಬ್ಲಿಕಲ್ ಗ್ರಾಮ ಪಂಚಾಯಿತಿಯ ಪಿಡಿಒ ಅಶ್ವಥನಾರಾಯಣ ( 10 ) ಅಗರ ಗ್ರಾಮ ಪಂಚಾಯಿತಿಯ ಪಿ.ಡಿ.ಒ , ಎಂ.ಸುರೇಶ್‌ಕುಮಾರ್‌ ( 11 ) ಶ್ರೀನಿವಾಸಪುರ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಆನಂದ್ ಇವರುಗಳ ವಿರುದ್ಧ ಐಪಿಸಿ ಕಲಂ 465 , 467 , 468 , 471 ರ ಅನ್ವಯ ಎಫ್.ಐ.ಆರ್ ನ್ನು ದಾಖಲಿಸಿಕೊಂಡು ಕೋಲಾರ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಉಪಾಧೀಕ್ಷಕರಾದ ಎಂ.ಎಲ್.ಪುರುಷೋತ್ತಮ ಮತ್ತು ಪೊಲೀಸ್ ನಿರೀಕ್ಷಕರಾದ ಜಿ.ಎನ್.ವೆಂಕಟಾಚಲಪತಿ ತನಿಖೆ ಕೈಗೊಂಡಿರುತ್ತಾರೆ . 
ಈ ಪ್ರಕರಣದಲ್ಲಿ ಹಿಂದಿನ ಜಿಲ್ಲಾಧಿಕಾರಿಯಾದ ಎಂ.ಮಂಜುನಾಥ್ ಸೇರಿದಂತೆ ಒಟ್ಟು 6 ಜನ ಅಧಿಕಾರಿಗಳನ್ನು ಸಾಕ್ಷಿಗಳನ್ನಾಗಿ ಗುರುತಿಸಲಾಗಿದೆ .

ಯುವ ಕಾಂಗ್ರೆಸ್ ಕುಂದಾಪುರ ವತಿಯಿಂದ ಡಿ ಕೆ ಶಿವಕುಮಾರ್ ಅವರ ಪ್ರತಿಜ್ಞಾ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು 

JANANUDI.COM NETWORK

 

 

ಯುವ ಕಾಂಗ್ರೆಸ್ ಕುಂದಾಪುರ ವತಿಯಿಂದ ಡಿ ಕೆ ಶಿವಕುಮಾರ್ ಅವರ ಪ್ರತಿಜ್ಞಾ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು 

 

 

 

 

ಕುಂದಾಪುರ, ಜೂ.28: ಅಧ್ಯಕ್ಷ ಇಚ್ಚಿತಾರ್ಥ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ , ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿಶನ್ ಹೆಗ್ಡೆ , ಬ್ಲಾಕ್ ಅಧ್ಯಕ್ಷರುಗಳಾದ ಶಂಕರ್ ಕುಂದರ್,  ಹರಿಪ್ರಸಾದ್ ಶೆಟ್ಟಿ ,ಡಿಜಿಟಲ್ ಯೂತ್ ಕಾಂಗ್ರೆಸ್ ಸಂಯೋಜಕರು ರೋಶನ್ ಶೆಟ್ಟಿ ಉಡುಪಿ ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕರಾದ ಯೋಗೀಶ್ ಇನ್ನಾ ,  ಅವರು ಕುಂದಾಪುರ ವಿಧಾನ ಸಭಾ ಕ್ಷೇತ್ರದ ಡಿಜಿಟಲ್ ಯೂತ್ ಗಳಿಗೆ ಪ್ರತಿಜ್ಞಾ ಕಾರ್ಯಕ್ರಮದ ಬಗ್ಗೆ ತರಬೇತಿ ಕಾರ್ಯಾಗಾರವನ್ನು ನಡೆಸಿ ಮಾತನಾಡಿದರು
      ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ , ಯುವ ಮುಖಂಡರಾದ ವಿಕಾಸ್ ಹೆಗ್ಡೆ , ವಿಶ್ವಾಸ್ ಶೆಟ್ಟಿ , ಸಂಪತ್ ಶೆಟ್ಟಿ ,ರಕ್ಷಿತ್ ಪೂಜಾರಿ , ಮುನಾಫ್ ಕೋಡಿ , ಗಣೇಶ ,ರೋಶನ ಬರೆಟ್ಟೋ,ಹೆಮಂತ ಕುಮಾರ ಕೆ,ಮಹಮದ ಸಲಾಮ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳಾದ ಚಂದ್ರಶೇಖರ ಖಾರ್ವಿ,ನಾರಾಯಣ ಆಚಾರಿ,ಕೇಶವ ಭಟ್,ಶಿವಕುಮಾರ್ ಅಣ್ಣಯ್ಯ ಪುತ್ರನ್,ಅಶೋಕ್ ಸುವರ್ಣ,ಸದಾನಂದ ಖಾರ್ವಿ ಮತ್ತು ಯುವ ಕಾಂಗ್ರೆಸ್ ಪದಾಧಿಕಾರಿಗಳು , ಪ್ರತೀ ಪಂಚಾಯತ್ ವ್ಯಾಪ್ತಿಯ ಯುವ ಕಾಂಗ್ರೆಸ್ ಸಮಿತಿ ನಾಯಕರು ಉಪಸ್ಥಿತರಿದ್ದರು .
ವಿಶ್ವಾಸ್ ಅಮೀನ್ , ಶಂಕರ್ ಕುಂದರ್ , ಕಿಶನ್ ಹೆಗ್ಡೆ ಸಮಯೋಚಿತ ಮಾತನಾಡಿದರು .
    ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೈ ಬಿ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.

 

ತಿಚೆಂ ರುದಾನ್/ಮಾಂಯ್ ತುಂ ಖಂಯ್ ಆಸಾಯ್?/ ಗಾಯ್/ ಕವಿ: ಜೋಸೆಫ್ ಲುವಿಸ್ ಸಾಸ್ತಾನ್

ತಿಚೆಂ ರುದಾನ್/ಮಾಂಯ್ ತುಂ ಖಂಯ್ ಆಸಾಯ್?/ ಗಾಯ್/  ಕವಿ: ಜೋಸೆಫ್ ಲುವಿಸ್ ಸಾಸ್ತಾನ್

 

 

[ಜೋಸೆಫ್ ಲುವಿಸ್ ಗಾಂವಾಂತ್ ಸಾಸ್ತಾಚೊ, ತಾಚಿಂ ಬರ್ಪಾಂ ಖ್ಯಾತ್ ಪತ್ರಾನಿಂ ಫಾಯ್ಸ್ ಜಾಲ್ಯಾತ್. ಅನೇಕ್ ಕಾಣಿಯೊಯಿ ಫಾಯ್ಸ್ ಜಾಲ್ಯಾತ್. ತಸೆಂಚ್ ಕವಿತಾ ಸರಳ್ ರೀತಿನ್ ಕವಿತಾ ಬರಂವ್ಚಿ ತಾಚಿ ಶೈಲಿ. ಜನನುಡಿ ಡಾಟ್ ಕಾಮ್ ಹಾಚೇರ್ ಹಾಚ್ಯಾ ಪಯ್ಲೆಯಿ ತಾಚಿಂ ಕವಿತಾ ಪ್ರಸಾರ್ ಜಾಲ್ಯಾತ್. ತಾಕಾ ಸಾಹಿತ್ಯ್ ಕ್ಷೇತ್ರಾಚಾ ವಾವ್ರಾಂತ್ ಜಯ್ತ್ ಮಾಗ್ತಾ – ಸಂಪಾದಕ್ ಬರ್ನಾಡ್ ಜೆ.ಕೋಸ್ತಾ]

 

 

*ರುದಾನ್ *

~~~~~~~~~~~~~~~~~

ಕಾಜಾರ್ ಜಾಲ್ಲಿ ಹಾಂವ್

ಭುರ್ಗಿಂ ನಾಸ್ತಾನಾ ಕರ್ಗಾತಾಲಿಂ.

 

ಬಾಳ್ಯಾಚೆಂ ರಡ್ಣೆಂ

ಆಯ್ಕುಂಕ್ ಕಾನ್

ಉಕ್ಲುಂಕ್ ತೆ ಹಾತ್

ಮ್ಹಜಾ ಬಾಳಾಕ್ ದೆಕ್ಚೆ ದೆೊಳೆ ಸ್ವಪ್ಣೆತಾಲೆ.

 

ತ್ಯಾ ಭುರ್ಗ್ಯಾಂಕ್ ಪಳೆವ್ನ್

ಕಾಳಿಜ್ ಮ್ಹಜೆಂ ಅಕ್ಲಾಸ್ತಾಲೆಂ.

ತಾಂತ್ಲಿ ಎಕ್ಲೀ ತರಿ

ಮ್ಹಜಿ ಧುವ್ ಯಾ ಪೂತ್ ಜಾವ್ನ್

ಮನ್ ಮ್ಹಜೆಂ ಚಾಳ್ವೈತಾಲೆಂ.

 

ಭಿಕಾರ್ಯಾಂಕ್ ಪಳೆ ಕಿತ್ಲಿಂ ಭುರ್ಗಿಂ,

ಗರ್ಭಾಪಾತ್ ಕರ್ತಲ್ಯಾಂಕ್ ಪಳೆ

ಕಿತ್ಲ್ಯಾ ಬಾಳಾಂಚೊ ಜೀವ್ ಕಾಡ್ತಾತ್

ಭುರ್ಗಿಂ ನಾಕಾ ಮ್ಹಣುನ್ ರಸ್ತ್ಯಾನಿಂ ಸೊಡ್ತಾತ್, ವಿಕ್ತಾತ್.

 

ತಸಲ್ಯಾಂಕ್ ಜಾತಾನಾ

ಮಾಕಾ ಕಿತ್ಯಾಕ್ ನಾ ???

 

ಮಾಕಾಂಯಿೂ ಆವಯ್ ಜಾಂವ್ಚಿ

 ಆಶಾ ನಾಂಗಿ ???

 

ಹ್ಯಾ ಮ್ಹಜಾ ವೆಂಗೆತ್

ಏಕ್ ಬಾಳಾಕ್ ಧರ್ಚೆಂ ಭಾಗ್ ನಾಂಗಿ ???

 

ದೆವಾ,

ಏಕ್ ಆವಯ್ ಜಾಂವ್ಚೆ ರುದಾನ್

ತುಜಾ ಕಾಳ್ಜಾಕ್ ಆಯ್ಕಾನಾಂಗಿ ???

 

ಕೊಣಾ ಕೊಣಾಕ್ ತುಂ ಫಾವೊ ಕರ್ತಾನಾ

ಹ್ಯಾ ಮ್ಹಜಾ ಗರ್ಭಾಂತ್ ಏಕ್ ಬಾಳ್……

 

ದುಕಾಂ ಗಳವ್ನ್ ಹಾತ್ ಜೊಡ್ತಾಂ…. ಧನಿಯಾ.

                 ✍️ ಜೋಸೆಫ್ ಲುವಿಸ್, ಸಾಸ್ತಾನ್.

 

 

ಮಾಂಯ್ ತುಂ ಖಂಯ್ ಆಸಾಯ್ ?

~~~~~~~~~~~~~~~~~~~~~~~~

ಪ್ರಾಯ್ ಉತ್ರಾಲ್ಲಿ, ಕಾತಿರ್ ಮಿರ್ಯೊ ಪಡ್ಲೆಲಿ

ದೊಳ್ಯಾಂಕ್ ದಿಷ್ಟ್ ನಾತ್ ಲ್ಲಿ ,

ಪಿಕ್ಲೆಲ್ಯಾ ಕೆಸಾಂಚಿ, ದಾಂತ್ ನಾತ್ಲಲಿ,

ಬೇತ್ ಘೆವ್ನ್ ಚಲ್ಚಿ,

ಕೂಲಿ ಕಾಮ್ ಕೆಲ್ಲಿ,

ಆವಯ್ ಆಟ್ ಭುರ್ಗ್ಯಾಂಚಿ  ,

ಫುಡಾರಾ ಖಾತಿರ್ ಕಶ್ಟಾಲ್ಲಿ, ಖಾಂವ್ಕ್ ಜೇಂವ್ಕ್ ಭುರ್ಗ್ಯಾಂಕ್ ದಿಲ್ಲಿ,

ನೀಸ್ ಪಿಯೆವ್ನ್ ನಿದ್ತೆಲಿ,  ಭುರ್ಗ್ಯಾಂಕ್ ಬರ್ಯಾ ಫುಡಾರಾಕ್ ಪಾವಯ್ಲೆಲ್ಯಾ ಮಾಂಯ್ಕ್,

ಭುರ್ಗಿಂ ಪೂರಾ ವಿಚಾರ್ತಾತ್,

ಮಾಂಯ್ ಆತಾಂ ತುಂ ಖಂಯ್ ಆಸಾಯ್ ?

 

ಘರ್ಕಾರ್ ಸರೊನ್ ವಿಧವ್ ಜಾಲ್ಲಿ,

ಬಾಪಯ್ಚೊ ಮೋಗ್ ದೀವ್ನ್ ಪೊಸ್ಲೆಲಿ,

ರೀಣ್ ಕಾಡ್ನ್ ಭುರ್ಗ್ಯಾಂಕ್ ಶಿಕಾಪ್ ದಿಲ್ಲಿ,

ವೆಳಾರ್ ಸಕ್ಡಾಂಕೀ ಕಾಜಾರ್ ಕರಯಿಲ್ಲಿ, ನಾತ್ರಾಂಚೊ ಸಾಂಗಾತ್ ಆಶೆಲ್ಲಿ,

ಭುರ್ಗಿಂಚ್ ಮುಜೊ ಆಧಾರ್ ಮ್ಹಣ್ ಚಿಂತ್ಲೆಲ್ಯಾ ಮಾಂಯ್ಕ್,

ಆಜ್ ಭುರ್ಗಿಂ ಸಕ್ಕಡ್ ವಿಚಾರ್ತಾತ್,

ಮಾಂಯ್ ತುಂ ಖಂಯ್ ಆಸಾಯ್..?

 

ಭುರ್ಗಿಂ ಫುಡಾರ್ ಮ್ಹುಣೊನ್ ಗಲ್ಫಾಕ್ ಉಡೊನ್,

ಹಳ್ಳೆಂತ್ ರಾವುಂಕ್ ನಾಕಾ ಮುಣೊನ್,

ಮಾತಾರಿ ಆವಯ್ಕ್ ಗಾವಾಂತ್ ಸೊಡ್ನ್ ಕೊಲ್ವಾಚ್ಯಾ ಘರಾಂತ್ ತಿಕಾ ಎಕ್ಸುರೆಂ ಕರ್ನ್,

ಆಟ್ ಭುರ್ಗಿಂ ಆಸೊನಿ ಅನಾಥ್ ಕರವ್ನ್,

ನಿಮಾಣೆಂ ತಿಕಾ ಆಶ್ರಾಮಾಂತ್ ಬಂಧಿ ಕರ್ನ್.

ಆತಾಂ ತಿಂಚ್ಚ್ ಭುರ್ಗಿಂ ರಡೊನ್ ವಿಚಾರ್ತಾತ್,

ಮಾಂಯ್ ತುಂ ಆತಾಂ ಖಂಯ್ ಆಸಾಯ್ ?

 

ನಿಮಾಣೆಂ ದಿಷ್ಟ್ ತಿಚೆರ್ ಲಾಯ್ಲಿನಾ,

ನಾತ್ರಾಂಕ್ ಪಳಂವ್ಚೆಂ ಭಾಗ್ ತಿಕಾ ಮೆಳ್ಳೆಂನಾ, ಸುನಾ ಜಾವ್ಯಾಂಚೊ ಸಾಂಗಾತ್ ಲಾಭಂವ್ಕ್ ನಾ,

ಪುತಾ ಧುವಾನಿಂ ಮೋಗ್ ದಿಲೊನಾ, ಫೋನಾರ್ ಉಲಯ್ಲಿಂ ಪುಣ್  ಗಾಂವಾಕ್ ಆಯ್ಲಿಂ ನಾಂ,

ಅನಾಥ್ ಜಾವ್ನ್ ಮೆಲ್ಲ್ಯಾ ಆಟ್ ಭುರ್ಗ್ಯಾಂಚ್ಯಾ ಮಾಂಯ್ಕ್,

ಆತಾಂ ಸಕ್ಕಡ್ ವಿಚಾರ್ತಾತ್,

ಮಾಂಯ್ ತುಂ ಖಂಯ್ ಆಸಾಯ್ …?

 

ಕೊರೊನಾನ್ ತಾಂಕಾ ಲಾಕ್ಡೌನ್ ಕರ್ತಾನಾಂ,

ಭುರ್ಗ್ಯಾಂಚಿ ಕಾಮಾಂ ಸಗ್ಳಿಂ ಉಸೊಳ್ತಾನಾಂ,

ಗಲ್ಫಾಂತ್ಲ್ಯಾ ಘರಾನಿಂ ಬಂಧಿ ಜಾತಾನಾಂ,

ಭುರ್ಗ್ಯಾಂಚಿ ಭಲಾಯ್ಕಿ ಭಿಗ್ಡೊನ್ ಯೆತಾನಾಂ,

ಗಾಂವಾಕ್ ವಸೊಂಕ್ ಸಯ್ತ್ ವಾಟ್ ನಾಸ್ತಾನಾಂ.

 

ಮಾಂಯ್ ಗಾಂವಾಕ್ ಧಿಕ್ಕಾರ್ಸುನ್ ಗೆಲ್ಲಿಂ,

ತ್ಯಾಚ್ ಮಾಂಯ್ಗಾವಾಕ್ ಯೇಂವ್ಕ್ ಆಶೆಂವ್ಚಿಂ,

ಜಲ್ಮ್ ದಿಲ್ಲ್ಯಾ ಮಾಂಯ್ಕ್ ಚ್ಚ್ ಅನಾಥ್ ಕೆಲ್ಲಿಂ,

ನಿಮಾಣೆಂ ತಿಂಚ್ ಅನಾಥ್ ಜಾತಾನಾಂ,

ಮಾಂಯ್ಚೊ ಉಗ್ಡಾಸ್ ಕಾಳ್ಜಾಂತ್ ಧೊಸ್ತಾನಾ,

ಬೊಬೊ ಘಾಲ್ನ್ ವಿಚಾರ್ತಾತ್ ತ್ಯಾ ಪರ್ದೆಶಿ ಗಾಂವಾ ಥಾವ್ನ್,

ಮಾಂಯ್ ತುಂ ಆತಾಂ ಖಂಯ್ ಆಸಾಯ್ .?

                  *ಜೋಸೆಫ್ ಲೂವಿಸ್, ಸಾಸ್ತಾನ್

 

 

*ಗಾಯ್ *

~~~~~~~~~~~~~~~~

ಅಂಬಾ ಅಂಬಾ ಕರುನ್,

ಮಾಂಯಿಕ್ ಮ್ಹಜ್ಯಾ,

ದುದ್ದು ಕಾಡುಂಕ್,

ಆಪಯ್ತಾ ಆಮ್ಚಿ ಗಾಯ್.

 

ಮಾಂಯ್ ಅಂಬಾಚೆ ದುದ್ದು ಕಾಡ್ತಾನಾ,

ತಿಚಾ ಬಾಬುಕ್ ಹಾಂವ್ ಧರ್ತಾಂ.

 

ಗಾಯ್ಚೆಂ ದುದ್ದು ಮಾಂಯ್ನ್ ಕಾಡ್ತೆರ್,

ತಿಚಾ ಬಾಬುಕ್ ಹಾಂವ್ ಲಾಗ್ಗಿಂ ಸೊಡ್ತಾಂ.

 

ಗಾಯ್ಚೆಂ ದುದ್ದು ಹ್ಹುನ್ ಕರ್ನ್,

ಮಾಂಯ್ ಮ್ಹಾಕಾಂ ದಿತಾ,

ಗುಟುಕ್ ಗುಟುಕ್ ಕರ್ನ್ ಹಾಂವ್,

ದುದ್ದು ಪೂರಾ ಖಾಲಿ ಕರ್ತಾಂ.

 

ಗಾಯ್ಚೆಂ ದೂದ್ ಪಿಯೆವ್ನ್ ಮ್ಹಾಕಾ,

ಸಕತ್ ಮೊಸ್ತ್ ಯೆತಾ,

ಮೊತ್ ಮ್ಹುಜಿ ಚುರುಕ್ ಜಾತಾ.

 

ಶಿಕಾಪ್ ಬರೆಂ ಕರ್ನ್ ಶಿಕ್ತಾಂ,

ಖೆಳ್ತಾಂ, ಜೆವ್ತಾಂ, ನಿದ್ತಾಂ.

 

ಗಾಯ್ಚೆಂ ದೂದ್ ಸದಾನೀತ್ ಪಿಯೆಯಾ,

ತೆದಾಳಾ ತುಂಮಿ ಸಕ್ತಿವಂತ್ ಜಾತಾಲ್ಯಾತ್.

              * ಜೋಸೆಫ್ ಲುವಿಸ್, ಸಾಸ್ತಾನ್.

ಶ್ರೀನಿವಾಸಪುರ ಹಣದ ಆಮಿಶಕ್ಕೆ ಶಿಕ್ಷಕರ ಸೇವಾ ಪುಸ್ತಕದಗೌರವವನ್ನು ಮೊಟುಕುಗೊಳಿಸಿ  ದುರುಪಯೋಗ ಪಡಿಸಿಕೊಂಡಿದ್ದಕ್ಕೆ ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದ ರೆಡ್ಡಿಯವರ ಆಕ್ರೋಶ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಶ್ರೀನಿವಾಸಪುರ ಹಣದ ಆಮಿಶಕ್ಕೆ ಶಿಕ್ಷಕರ ಸೇವಾ ಪುಸ್ತಕದಗೌರವವನ್ನು ಮೊಟುಕುಗೊಳಿಸಿ  ದುರುಪಯೋಗ ಪಡಿಸಿಕೊಂಡಿದ್ದಕ್ಕೆ ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದ ರೆಡ್ಡಿಯವರ ಆಕ್ರೋಶ 

 

 

 

 

ಶ್ರೀನಿವಾಸಪುರ: ಬಿ.ಇ.ಒ.ರವರ ಗಮನಕ್ಕೆ ತರದೆ ಶಿಕ್ಷಕರ ಸೇವಾ ಪುಸ್ತಕದಗೌರವವನ್ನು ಮೊಟುಕುಗೊಳಿಸಿ ಅಧೀಕ್ಷಕ ಮಾರಪ್ಪರೆಡ್ಡಿ ಹಣದ ಆಮಿಶಕ್ಕೆ ಒಳಗಾಗಿ ನೂರಾರು ಶಿಕ್ಷಕರ ಎಸ್.ಆರ್. ಪುಸ್ತಕಗಳನ್ನು ಜೆರಾಕ್ಸ್ ಅಂಗಡಿಗಳಿಗೆ ಕಳುಹಿಸಿ ಎಸ್.ಆರ್. ನ ಗೋಪ್ಯತೆಕಾಪಾಡದೆ ಹಣದ ಆಸೆಗಾಗಿ ಅಧೀಕ್ಷಕ ಮನ ಬಂದಂತೆತನ್ನಕರ್ತವ್ಯವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದುತಾಲ್ಲೂಕು ಪ್ರಾಥಮಿಕ ಶಾಲಾಶಿಕ್ಷಕರ ಸಂಘದಅಧ್ಯಕ್ಷಗೋವಿಂದರೆಡ್ಡಿಅಧೀಕ್ಷಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್.ಆರ್. ಪುಸ್ತಕಗಳುಜೆರಾಕ್ಸ್ ಅಂಗಡಿಗಳಲ್ಲಿ ಇರುವುದುಗೋವಿಂದರೆಡ್ಡಿ ಮನಗಂಡು ಬಿ.ಇ.ಒ. ಕಚೇರಿಗೆ ಆಗಮಿಸಿ ಅಧೀಕ್ಷಕರ ಮೇಳೆ ಕೆಂಡಾ ಮಂಡಲರಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದಇವರು, ತಾಲ್ಲೂಕಿನಲ್ಲಿ ಸುಮಾರು 786 ಶಿಕ್ಷಕರಿದ್ದು, ಪ್ರತಿಯೊಬ್ಬ ಶಿಕ್ಷಕರಸೇವಾ ಪುಸ್ತಕ ಬಹಳ ಮಹತ್ವವಾಗಿದ್ದು, ಶಿಕ್ಷಕರು ನೌಕರಿಗೆ ಸೇರಿದಂದಿನಿಂದ ನಿವೃತ್ತಿಯಾಗುವತನಕಎಸ್.ಆರ್. ನ ಮಹತ್ವ ಬಹಳ ಮುಖ್ಯವಾಗಿದ್ದುಇದನ್ನುಒಬ್ಬ ಶಿಕ್ಷಕ ಪಡೆಯಬೇಕಾದರೆ ಸಂಭಂಧಿಸಿದ ಬಿ.ಇ.ಒ.ರವರಿಗೆ ಮನವಿ ನೀಡಿಇವರಿಂದಅನುಮತಿ ಪಡೆದ ನಂತರಕಚೇರಿಯಗುಮಾಸ್ತ, ಶಿಕ್ಷಕರ ಜೊತೆಗೆ ಬಂದುಜೆರಾಕ್ಸ್ ಮಾಡಿಕೊಡುವುದು ನಿಯಮವಾಗಿದೆ.
6ತಿಂಗಳ ಹಿಂದೆ ಶಿಕ್ಷಣ ಅದಾಲತ್ ನಲ್ಲಿ ಪ್ರತಿಯೊಬ್ಬಶಿಕ್ಷಕರಿಗೂ ಸೇವಾ ಪುಸ್ತಕದ ನಕಲು ಅವಶ್ಯಕತೆಇದೆ. ಜೆರಾಕ್ಸ್‍ಮಾಡಿಕೊಡಲು ನಮ್ಮ ಸಂಘಕ್ಕೆ ಅನುಮತಿ ನೀಡಿದರೆಕಚೇರಿಯಿಂದ ಪಡೆದು ನಾವೆ ಜೆರಾಕ್ಸ್ ಮಾಡಿಸಿಕೊಡುತ್ತೇವೆಂದು ಮನವಿ ಮಾಡಿಕೊಂಡಾಗ, ಇದೆಅಧೀಕ್ಷಕಮಾರಪ್ಪರೆಡ್ಡಿ, ಯಾವುದೆಕಾರಣಕ್ಕೂ ಹೊರಗಡೆಕೊಡಲು ಅಗುವುದಿಲ್ಲ ಎಂದು ಹೇಳಿದ ಇವರು, ಶಿಕ್ಷಕರ ಮನವಿ ಇಲ್ಲದೆ ಬಿ.ಇ.ಒ. ಅನುಮತಿಪಡೆಯದೆನಾನೆ ಬಿ.ಇ.ಒ. ಎಂಬ ಅಹಂ ನಿಂದಇಂದು ಸುಮಾರು 50-ರಿಂದ 100 ಸೇವಾ ಪುಸ್ತಕಗಳು ಜೆರಾಕ್ಸ್ ಅಂಗಡಿಗಳಿಗೆ ಕಳುಹಿಸಿರುವುದು ಖಂಡನೀಯವಾಗಿದೆ. ಅಲ್ಲದೆಅಂಗಡಿಗಳಲ್ಲಿ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯತನಕಅಲೆದಾಡುತ್ತಿದ್ದವು.
ಅನೇಕ ಶಿಕ್ಷಕರು ತಮ್ಮ ಸೇವಾ ಅವಧಿಯಎಲ್ಲ ವಿವರಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಸೇವಾ ಪುಸ್ತಕದ ನಕಲು ನೀಡಬೇಕೆಂದು ಅನೇಕ ಶಿಕ್ಷಕರು ಸಹಿಯನ್ನು ಮಾಡಿರುವ ನಕಲಿನಲ್ಲಿ ಅನೇಕ ಲೋಪಗಳು, ಹೆಸರುಗಳನ್ನು ತಿದ್ದುಪಡಿ ಮಾಡಿರುವುದುಗೋಚರವಾಗುತ್ತಿವೆ. ಇವೆಲ್ಲವನ್ನು ಗಮನಿಸಿದಾಗ ಉದ್ದೇಶ ಪೂರ್ವಕವಾಗಿ ಹಣದ ಆಮಿಶಕ್ಕೊಳಗಾಗಿ ಎಸ್. ಆರ್. ಗಳನ್ನು ಮಾರಾಟಕ್ಕಿಡುವಂತಾಗಿದೆ.
ಬಿ.ಇ.ಒ. ಉಮಾದೇವಿಯವರನ್ನು ಈ ವಿಷಯದ ಬಗ್ಗೆ 11 ಗಂಟೆ ಸಮಯದಲ್ಲಿ ತಿಳಿಸಿದಾಗ ಇದರ ಬಗ್ಗೆ ನನಗೆ ಗೊತ್ತಿಲ್ಲ, ಕೂಡಲೆ 10 ನಿಮಿಷದ ಒಳಗಡೆ ಜೆರಾಕ್ಸ್‍ಅಂಗಡಿಯಿಂದ ವಾಪಸ್‍ತರಿಸುತ್ತೇನೆಂದು ಹೇಳಿದ ಇವರ ಮಾತಿಗೆಅಧೀಕ್ಷಕಕಿಮ್ಮತ್ತುಕೊಡದೆ ಮಧ್ಯಾಹ್ನ 2 ಗಂಟೆಯಾದರೂ ಸೇವಾ ಪುಸ್ತಕಗಳು ಕಚೇರಿಗೆ ಬರಲೇಇಲ್ಲ. ಜೆರಾಕ್ಸ್ ಮಾಡಿಸುವ ಸಂದರ್ಭದಲ್ಲಿಗುಮಾಸ್ತನೂ ಸ್ಥಳದಲ್ಲಿ ಇರುವುದಿಲ್ಲ. ನಮ್ಮ ಶಿಕ್ಷಕರ ಸೇವೆಗೆ ಅಪಮಾನ ಮಾಡಿದ್ದಾರೆ. ಗುಮಾಸ್ತಉಪೇಂದ್ರನನ್ನು ಪ್ರಶ್ನೆಮಾಡಿದಾಗಅಧೀಕ್ಷಕರಅನುಮತಿಯ ಮೇರೆಗೆಜೆರಾಕ್ಸ್‍ಅಂಗಡಿಗೆ ಪುಸ್ತಕಗಳು ಹೋಗಿದೆಎಂದುಉತ್ತರ ನೀಡುತ್ತಾನೆ. ಈ ವಿಷಯವನ್ನುಇಲ್ಲಿಗೆ ನಿಲ್ಲಿಸದೆ ಸಂಭಂಧಪಟ್ಟಆಯುಕ್ತರ ಗಮನಕ್ಕು ತಂದು ನಮಗೆ ಆಗಿರುವಅಪಮಾನದ ಬಗ್ಗೆ ಮತ್ತುಕಚೇರಿಯ ಸಿಬ್ಬಂದಿಯ ಮೇಲೆ ಸೂಕ್ತ ಕ್ರಮಜರುಗಿಸುವತನಕನಮ್ಮ ಶಿಕ್ಷಕರ ಸಂಘದಿಂದ ಹೋರಾಟ ನಿಲ್ಲಿಸುವುದಿಲ್ಲ ಎಂದುಗೋವಿಂದರೆಡ್ಡಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸ.ನೌ.ಸಂಘದ ಸಂ.ಕಾ. ಕೃಷ್ಣಾರೆಡ್ಡಿ, ಶಿವರಾಮೇಗೌಡ ಮತ್ತಿತರರು ಹಾಜರಿದ್ದರು.