HOLY ROSARY CHURCH, KUNDAPUR – 450 th JUBILEE SOUVENIR 2021

ಕುಂದಾಪ್ರ ಕನ್ನಡ ನಮ್ ಅಬ್ಬಿ ಇದ್ದಾಂಗೆ. ಅಬ್ಬಿ ಋಣ ಯಾವಾಗ್ಲೂ ತೀರ್ಸೋಕೆ ಆತಿಲ್ಲೆ,ವಿಶ್ವಕುಂದಾಪ್ರ ಕನ್ನಡ ದಿನ  “ಚಂದ್ಗೊಂಪಿ” ಕುಂದಾಪ್ರ ಕನ್ನಡ ಕಾರ್ಯಕ್ರಮದಲ್ : ಬಿ.ಅಪ್ಪಣ್ಣ ಹೆಗ್ಡೆ

JANANUDI.COM NETWORK

 

 

ಕುಂದಾಪುರ,”ಕುಂದಾಪ್ರ ಕನ್ನಡ ನಮ್ ಅಬ್ಬಿ ಇದ್ದಾಂಗೆ. ಅಬ್ಬಿ ಋಣ ಯಾವಾಗ್ಲೂ ತೀರ್ಸೋಕೆ ಆತಿಲ್ಲೆ. ಕುಂದಾಪ್ರ ಭಾಷಿ ಸಾವ್ರ ವರ್ಸದ ಗಟ್ಟಿ ಭಾಷೆ. ಈ ಭಾಷಿ ಒಗಟು, ಗಾದಿ, ಹಾಡ್, ಕುಣ್ತ ಜನಜೀವನ್‍ದೊಳಗೆ ಸೇರ್ಕಂಡೇ ಇತ್ತ್. ಊರಲ್ ಇರ್ಲಿ, ಪರಊರಲ್ ಇರ್ಲಿ ನಮ್ ಮಕ್ಳ್ ಕುಂದಾಪ್ರ ಭಾಷಿಯಲ್ಲೇ ಮಾತಾಡ್ಕ್ , ನಮ್ ಊರ್ ಸಂಸ್ಕøತಿ ಹೇಳಿಕೊಡ್ಕ” ಎಂದು ಮಾಜಿ ಶಾಸಕ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.
“ಕುಂದಪ್ರಭ” ಸಂಸ್ಥೆ ವಿಶ್ವಕುಂದಾಪ್ರ ಕನ್ನಡ ದಿನ ಅಂಗವಾಗಿ ಜುಲಾಯ್ 20 ರಂದು “ಚಂದ್ಗೊಂಪಿ” ಕುಂದಾಪ್ರ ಕನ್ನಡ ಕಾರ್ಯಕ್ರಮ ಉದ್ಘಾಟಿಸಿ ಹೇಳಿದರು.
ಹಲವು ರಾಜರ, ಬ್ರಿಟಿಷ್ , ಫ್ರೆಂಚ್, ಡಚರ್, ಪ್ರಭಾವವನ್ನು ಎದುರಿಸಿ ಉಳಿದು ಬೆಳೆದ ಈ ಕುಂದಾಪ್ರ ಕನ್ನಡ ತನ್ನದೇ ಶಬ್ದಗಳನ್ನು ಇತರ ಭಾಷೆಗಳಿಗೆ ನೀಡಿತೆ ವಿನಹ ಸೊರಗಲಿಲ್ಲ. ಇಂದೂ ನಮ್ಮ ಯುವಕರು ಸಂವಹನದ ಭಾಷಿಯಾಗಿ ಇದನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತಿರುವುದು ಅಭಿನಂದನಾರ್ಹವಾದುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಯು.ಎಸ್.ಶೆಣೈ ಮಾತನಾಡಿ” ಕೆಲವು ಮಂದಿ ಸಾಹಿತಿಗಳು, ಜಾನಪದ ಸಂಶೋಧಕರು, ಈ ಭಾಷೆಯ ಸೊಗಡು, ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ಗಾದೆ, ಹಾಡು, ಒಗಟು , ಸಂಗ್ರಹಿಸಿದರು. ಕತೆಗಳಲ್ಲಿ ಕುಂದಕನ್ನಡ ತಂದರು. ಪುಸ್ತಕ ಪ್ರಕಟಿಸಿದರು. ಆದರೆ ಅವರಿಗೆ ಸರಿಯಾದ ಪ್ರೋತ್ಸಾಹ ಸಿಕ್ಕಿರಲಿಲ್ಲ. ಆದರೆ ಇಂದು ಕುಂದಾಪ್ರ ಕನ್ನಡ ಎಲ್ಲ ಕ್ಷೇತ್ರದಲ್ಲಿ ಪ್ರಯೋಗವಾಗುತ್ತಿದೆ. ರಾಜ್ಯಮಟ್ಟದಲ್ಲಿ ಖ್ಯಾತಿ ಪಡೆದಿದೆ ಎಂದರು.
ಅಂಕಣಗಾರ ಕೋ.ಶಿವಾನಂದ ಕಾರಂತ, ಕುಂದಕನ್ನಡ ದ್ರಾವಿಡ ಭಾಷೆಯ ಮೂಲದ್ದಾಗಿದ್ದು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ವಿವರಿಸಿದರು. ಸಹಕಾರಿ ಧುರೀಣ ಎಸ್.ದಿನಕರ ಶೆಟ್ಟಿ ಕಾಳಾವರ, ಚಿತ್ರ ನಟ ನಿರ್ದೇಶಕ ರಾಜ್ ಬಲ್ಲಾಳ್ ಕುಂದಾಪ್ರ ಕನ್ನಡದ ಸೊಗಡನ್ನು ವಿವರಿಸಿದರು.
ಲೇಖಕ ಪಿ.ಜಯವಂತ ಪೈ, ಕೆ.ಜನಾರ್ಧನ್ ಶೆಣೈ ಕುಂದಾಪ್ರ ಕನ್ನಡ ಕವನ ವಾಚನ ಮಾಡಿದರು.
ಮದ್ದುಗುಡ್ಡೆ ವೆಂಕಟೇಶ ಪೈ ಹೊಯ್ಕ್‍ಬರ್ಕ್ ಪುಸ್ತಕ ಪ್ರಕಟಣೆಯ ಅನುಭವ ವಿವರಿಸಿದರು. ಹಂದಕುಂದ ಸೋಮಶೇಖರ ಶೆಟ್ಟಿ “ವಟಾವಟಾ ಅಂಬ್ಕೆ” ಗಾದೆಗಳು, ಒಗಟುಗಳನ್ನು ತಿಳಿಸಿದರು.
ಕಲಾವಿದ ಕೆ.ಕೆ.ರಾಮನ್ ಕುಂದಕನ್ನಡದಲ್ಲಿ ನಾಟಕದ ಸಂಭಾಷಣೆ ಹೇಳಿದರು. ಕವಿ ಡುಂಡಿರಾಜರ ಕುಂದಕನ್ನಡ ಕವಿತೆಗಳನ್ನು ವಾಚನ ಮಾಡಲಾಯಿತು.
ಕಾರ್ಯಕ್ರಮ ನಿರೂಪಿಸಿದ ಪ.ಪೂ.ಕಾಲೇಜು ಪ್ರಾಂಶುಪಾಲ ವಿಶ್ವನಾಥ ಕರಬ “ಕರುಹಾರ್ರು ತೊಡಮಿ ಕೆಳಗೆ” ಎಂಬ ಗಾದೆಯ ಅರ್ಥ ವಿವರಿಸಿದರು. ಸಂಗೀತ ಭಾರತಿ ಟ್ರಸ್ಟ್ (ರಿ) ಕಾರ್ಯದರ್ಶಿ ಕೆ. ನಾರಾಯಣ ವಂದಿಸಿದರು.

ಗೋಕುಲ ಮಿತ್ರಬಳಗದಿಂದ ಚಿತ್ರಮಂದಿರ ಕಾರ್ಮಿಕರಿಗೆ ದಿನಸಿ ಕಿಟ್ ಬಡವರ ನೆರವಿಗೆ ಉಳ್ಳವರು ಮುಂದಾಗಲಿ-ಬ್ಯಾಲಹಳ್ಳಿ ಗೋವಿಂದಗೌಡ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಕೋಲಾರ:- ಕೊರೋನಾ ಸಂಕಷ್ಟದಲ್ಲಿ ನಲುಗಿರುವ ಬಡವರ ನೆರವಿಗೆ ಬರಲು ಉಳ್ಳವರ ಮನಃಪರಿವರ್ತನೆಯಾಗಬೇಕು ಸಹಾಯ ಮಾಡುವ ಹೃದಯವಂತಿಕೆ ಬರಬೇಕು ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಭಿಪ್ರಾಯಪಟ್ಟರು.
ಸೋಮವಾರ ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಗೋಕುಲ ಮಿತ್ರಬಳಗದಿಂದ ಚಲನಚಿತ್ರಮಂದಿರ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು.
ಬಡವರು ಸ್ವಾಭಿಮಾನಿಗಳು, ಅವರೆಂದು ಸಹಾಯಕ್ಕಾಗಿ ಕೈಚಾಚೋದಿಲ್ಲ ದುಡಿದು ತಿನ್ನುವ ಅವರ ಆಶಯಕ್ಕೆ ಧಕ್ಕೆ ಬಂದಿದೆ, ಕೆಲಸವಿಲ್ಲದೇ ಕಣ್ಣೀರಿಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಶ್ರೀಮಂತರು ಕನಿಷ್ಟ ತಮ್ಮ ಸುತ್ತಮುತ್ತಲಿನ ಕೆಲವು ಮಂದಿಗಾದರೂ ನೆರವಾಗಬೇಕು ಎಂದು ಕೋರಿದರು.
ಜನ ಭಯದಲ್ಲಿ ಬದುಕು ಸಾಗಿಸುವಂತಾಗಿದೆ, ಬೀದಿಗೆ ಬಂದರೆ ಎಲ್ಲಿ ಸೋಂಕು ತಗಲುತ್ತದೋ ಎಂಬ ಆತಂಕವೂ ಇದೆ, ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಧೈರ್ಯ ತುಂಬುವ ಕೆಲಸವಾಗಲಿ ಎಂದ ಅವರು, ಗೋಕುಲ ಮಿತ್ರಬಳಗ ಕೆ.ಎಸ್.ಗಣೇಶ್, ಗೋಪಾಲ್,ಮುನಿವೆಂಕಟ,ಚಲಪತಿ ಮತ್ತಿತರರ ನೇತೃತ್ವದಲ್ಲಿ ಇಂತಹ ಸಾಮಾಜಿಕ ಕಾಳಜಿಗೆ ಮುಂದಾಗಿರುವುದು ಶ್ಲಾಘನೀಯ ಎಂದರು.
ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್, ಕೋವಿಡ್ ಮಹಾಮಾರಿಯಿಂದ ರೈತರ ಬೆಳೆಗಳಿಗೂ ಬೆಲೆಯಿಲ್ಲ, ಅಸಂಘಟಿತ ಕಾರ್ಮಿಕರ ಬದುಕು ಅತಂತ್ರವಾಗಿದೆ, ಹೈನುಗಾರಿಕೆ ಮಾತ್ರ ಸ್ವಲ್ಪಮಟ್ಟಿನ ಬದುಕು ನೀಡಿದೆ ಎಂದ ಅವರು, ಹೈನೋತ್ಪನ್ನಗಳ ಮಾರುಕಟ್ಟೆಗೂ ಸಂಕಷ್ಟವಿದೆ ಎಂದು ತಿಳಿಸಿ, ಗೋಕುಲ ಮಿತ್ರಬಳಗದ ಸಾಮಾಜಿಕ ಕಾರ್ಯಗಳಿಗೆ ನೆರವಾಗುವ ಭರವಸೆ ನೀಡಿದರು.
ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್, ಬಳಗದ ಗೋಪಾಲ್ ಹುಟ್ಟುಹಬ್ಬವನ್ನು ನೆಪವಾಗಿಟ್ಟುಕೊಂಡು ಉತ್ತಮ ಕೆಲಸ ಮಾಡಿದ್ದಾರೆ, ಚಿತ್ರಮಂದಿರ ಕಾರ್ಮಿಕರ ಸಂಕಷ್ಟದ ಬಗ್ಗೆ ಯಾರಿಗೂ ಅರಿವೇ ಇರಲಿಲ್ಲ, ಅದನ್ನು ಗಮನಕ್ಕೆ ತಂದುಕೊಂಡು ನೆರವಾಗಿದ್ದಾರೆ ಎಂದು ಅಭಿನಂದಿಸಿದರು.
ಕಾರ್ಮಿಕ ಇಲಾಖೆ
ನೆರವಿನ ಅರಿವು
ಕರ್ನಾಟಕ ಅಸಂಘಟಿತ ಪರಿಷತ್ ರಾಜ್ಯಾಧ್ಯಕ್ಷ ಕೆ.ವಿ.ಸುರೇಶ್‍ಕುಮಾರ್, ಸಿನಿಮಾಫೋಟೋಗ್ರಫಿ ಅಸೋಸಿಯೇಷನ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಇದೆ, ಚಿತ್ರಮಂದಿರ ಕಾರ್ಮಿಕರು ಜಿಲ್ಲಾ ಸಂಘ ರಚಿಸಿಕೊಳ್ಳಿ, ನಾನೇ ಒಂದು ವರ್ಷದ ಸದಸ್ಯತ್ವ ಶುಲ್ಕ ಕಟ್ಟಿ ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿ ಕೊಡಿಸುವೆ ಎಂದು ಭರವಸೆ ನೀಡಿ, ಇಲಾಖೆಯಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು.
ಮಿತ್ರಬಳಗದ ಕೆ.ಎಸ್.ಗಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಳಗ ಇತ್ತೀಚೆಗೆ ಬಡ ಹೆಣ್ಣು ಮಗಳ ಮದುವೆ ಮಾಡಿದ್ದು, ಅದಕ್ಕೆ ಸದಸ್ಯರ ಜತೆಗೆ ಶೇ.50 ರಷ್ಟು ನೆರವನ್ನು ಬ್ಯಾಲಹಳ್ಳಿ ಗೋವಿಂದಗೌಡರು ನೀಡಿದ್ದಾರೆ, ಇದಾದ ನಂತರವೂ ಕೆಲವು ಸದಸ್ಯರು ನೀಡಿದ ನೆರವನ್ನು ಕ್ರೋಢೀಕರಿಸಿ 4 ತಿಂಗಳಿಂದ ಸಂಬಳ,ಕೆಲಸವಿಲ್ಲದೆ ಪರದಾಡುತ್ತಿದ್ದ ಚಿತ್ರಮಂದಿರ ಕಾರ್ಮಿಕರಿಗೆ ದಿನಸಿ ಕಿಟ್ ನೀಡಲು ನಿರ್ಧರಿಸಲಾಯಿತು ಎಂದರು.
ವಕ್ಕಲೇರಿ ರಾಜಪ್ಪ, ವರದೇನಹಳ್ಳಿ ವೆಂಕಟೇಶ್, ಬಳಗದ ಆರ್.ಗೋಪಾಲ್, ಚಲಪತಿ, ರಾಮಯ್ಯ ಹುಟ್ಟುಹಬ್ಬ ಆಚರಿಸಿಕೊಂಡ ಆರ್.ಗೋಪಾಲ್‍ರನ್ನು ಸನ್ಮಾನಿಸಿ, ಮಿತ್ರಬಳಗದ ಕಾರ್ಯವನ್ನು ಶ್ಲಾಘಿಸಿ, ತಾವು ನೆರವಾಗುವ ಭರವಸೆ ನೀಡಿದರು.

ರಾಯಲ್ಪಾಡು ಹೋಬಳಿಯ ಅಡ್ಡಗಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ ನೂರಾರು ಜನ ಬಂದು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

ರಾಯಲ್ಪಾಡು : ಜೀವನವೆಂದ ಮೇಲೆ ಸುಖ, ಕಷ್ಟ, ಸ್ವಾಸ್ಥ್ಯ , ರೋಗರುಜಿನಗಳು ಇದ್ದೇ ಇರುತ್ತವೆ . ರೋಗಗಳು ಬಾಧಿಸಲು ಆರಂಭಿಸಿದಾಗ ಔಷಧವನ್ನು ಪರಮಶತ್ರುವಿನಂತೆ ಕಾಣುವ ಅದೆಷ್ಟೋ ಜನರಿರುತ್ತಾರೆ. ಇದಲ್ಲದೆ ಗ್ರಾಮೀಣ ಭಾಗದಲ್ಲಿ ಕೆಲವರು ಆಸ್ಪತ್ರೆಯನ್ನು ಸಹ ಪರಮಶತ್ರುವಿನಂತೆ ಕಾಣುವಂತವರು ಇದ್ದಾರೆ.
ಗ್ರಾಮೀಣ ಭಾಗದ ನಾಗರೀಕರಲ್ಲಿ ಆಸ್ಪತ್ರೆ ಎಂದರೆ ಇಂಜಕ್ಷನ್ ಕೊಡುವಂತಹ, ಆಪರೇಷನ್ ಮಾಡುವಂತಹ ಸ್ಥಳ ಎಂಬ ಭಯದ ವಾತವರಣ ಹಾಗು ಆಸ್ಪತ್ರೆಗೆ ಹೋದರೆ ಇಲ್ಲಸಲ್ಲದ ಪರೀಕ್ಷೆಗಳನ್ನು ಮಾಡಿ ಮಾನಸಿಕವಾಗಿ ಹಿಂಸೆಯಾಗುತ್ತದೆ ಹಾಗು ಜೇಬು ಖಾಲಿಯಾಗುತ್ತದೆ ಎನ್ನುವಂತಹ ಜನರು ಗ್ರಾಮೀಣ ಭಾಗದಲ್ಲಿದ್ದು, ಇನ್ನು ಕೆಲವರು ಆಕಸ್ಮಿಕವಾಗಿ ಖಾಯಿಲೆ ಬಂದರೆ ಹಳ್ಳಿಗಳಲ್ಲಿನ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದೆ , ನಗರ ಪ್ರದೇಶಕ್ಕೆ ಹೋಗಲು ಸಾಧ್ಯವಾಗದೆ ಖಾಯಿಲೆಯಿಂದ ಬಳಲುವ ಜನರಿದ್ದಾರೆ.
ಇಂತಹ ಸಮಯದಲ್ಲಿ ರಾಯಲ್ಪಾಡು ಹೋಬಳಿಯ ಅಡ್ಡಗಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ ನೂರಾರು ಜನ ಬಂದು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ರೋಗಿಗೆ ಚಿಕಿತ್ಸೆಯ ಜೊತೆಗೆ ಮಾನಸ್ಸಿಗೆ ನೆಮ್ಮದಿ ನೀಡುವಂತಹ ಅತ್ಯುತ್ತಮ ಪರಿಸರವು ಆವರಣದಲ್ಲಿ ಸೃಷ್ಟಿಯಾಗಿದೆ. ಉತ್ತಮ ವಾತವರಣವು ಸೃಷ್ಟಿಯಾಗಲು ಸ್ಥಳೀಯ ಆರೋಗ್ಯಕೇಂದ್ರ ಸಿಬ್ಬಂದಿಯು ಮನಸವಾಚ ಕಾರ್ಯನಿರ್ವಹಿಸುತ್ತಿದೆ.

ಇನ್ನು ವೈದ್ಯರು “ವೈದ್ಯೋ ನಾರಾಯಣ ಹರಿಃ” ಎಂಬಂತೆ ವೈದ್ಯರು ಆರೋಗ್ಯ ಕೇಂದ್ರಕ್ಕೆ ಬರುವ ಅನಾರೋಗ್ಯವಂತರಿಗೆ ಅಕ್ಕರೆಯಿಂದ ಉತ್ತಮ ಚಿಕಿತ್ಸೆಯನ್ನು ನೀಡುತ್ತಾ , ರೋಗಿಯ ಸಮಸ್ಯೆಯನ್ನು ಆಲಿಸಿ , ಪರಿಶೀಲಿಸಿ ಸಮಸ್ಯೆಗೆ ತಕ್ಕಂತೆ ಕಡಿಮೆ ವೆಚ್ಚದ ಪರಿಹಾರದ ಚಿಕಿತ್ಸೆಯನ್ನು ನೀಡುತ್ತಾ , ಈ ಭಾಗದ ನಾಗರೀಕರೆಲ್ಲರ ಮನೆಮಾತಾಗಿದ್ದಾರೆ.
ಸಾಮಾನ್ಯವಾಗಿ ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೊರತೆ ಎದ್ದು ಕಾಣುತ್ತದೆ ಆದರೆ ಅಡ್ಡಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾತ್ರ ವೈದ್ಯರು ಸಾದಾ ಸಾರ್ವಜನಿಕರ ಸೇವೆಯಲ್ಲಿ ನಿರತರಾಗಿರುತ್ತಾರೆ ಎಂಬ ಮಾತು ಈ ಭಾಗದ ನಾಗರೀಕರಲ್ಲಿ ಕೇಳಿಬುರುತ್ತದೆ.

ಕುಂದಾಪ್ರ ಕನ್ನಡ ಕವ್ನಾ *ಅವ್ಳ್ ಕಣ್ಣೀರ್ *

ಕುಂದಾಪ್ರ ಕನ್ನಡ ಕವ್ನಾ

 

*ಅವ್ಳ್ ಕಣ್ಣೀರ್ *

~~~~~~~~~~~

ಮದಿಯಾಯ್ ಮಕ್ಕಳಿಲ್ದೆ

ನಾನ್ ಮರ್ಕುದೆ ಆಯ್ತ್

ನನ್ಗ್ ಮಗು ಮರ್ಕುದು

ಕೇಂಬುಕ್ ಕಿವಿ,

ಎತ್ಕಳ್ಕ್ ಈ ಕೈ,

ನನ್ನ್ ಮಗಿನ್ ಕಾಂಬುಕೆ ಕಣ್ಣ್

ಕನ್ಸ್ ಕಾಣ್ತಿತ್

 

ಆ ಮಕ್ಳಿಗ್ ಕಂಡ್

ನನ್ ಏದಿ ಚುರ್ರ್… ಅಂತಿದಿತ್

ಆ ಮಕ್ಳ್ ಪೈಕಿ

ಒಂದ್ ಹೆಣ್ಣ್ ಅಥ್ವಾ ಒಂದ್ ಗಂಡ್

ನಂಗ್ ಆಪುಕೆ

ಮನ್ಸೊಳ್ಗೆ ಹುಚ್ಚಿಡಿತಿತ್

 

ಬೇಡುವರಿಗ್ ಕಾಣಿ ಎಷ್ಟ್ ಮಕ್ಳ್ !!!

ಬಸ್ರ್ ತೆಗಿವ ಡಾಕ್ಟ್ರನ್ ಕಾಣಿ

ಎಷ್ಟ್ ಕೂಸ್ಗಳ್ದ್ ಜೀವ ತೆಗಿತ್ರ್,

ಮಕ್ಳ್ ಬೇಡಂತ ರಸ್ತೆ ಬದಿ ಎಸಿತ್ರ್

ದಾರಿಲ್ ಬಿಡ್ರ್,ದುಡ್ಡಿಗೆ ಮಾರ್ತ್ ರ್ರ್

 

ಅಂತವ್ರಿಗೆ ಆಪೊತ್ತಿಗೆ ನನ್ಗ್ಯಾಕ್ ಮಕ್ಳ್ ಆತ್ತಿಲ್ಲೆ???

 

ನನ್ಗೂ ಅಬ್ಬಿ ಆಪೊ ಆಶಿ ಇಲ್ಯಾ ???

 

ಮಗಿಂಗೆ ಹಾಲ್ ಕೊಡದಷ್ಟು ನಾನ್ ಪಾಪಿಯಾ ???

 

ಮಗಿನ್ ಅಂಬರ್ಸಿ ಹಿಡುಕೆ ನಂಗ್ ಭಾಗ್ಯ ಇಲ್ಯಾ ???

 

 

ದೇವ್ರೇ…

ಒಂದ್ ಅಬ್ಬಿ ಆಪೊ ಆಶಿ ನಿನ್ಗ್ಯಾಕ್  ಕೇಂತಿಲ್ವಾ ???

 

ಯಾರ್ಯಾರಿಗೆ ನೀನ್ ಕೊಡ್ತಿ

ನನ್ ಹೊಟ್ಟೆಲ್ ಒಂದೇ ಒಂದ್ ಮಗು  ಬೇಕ್??? ….

 

ಮರ್ಕಿ ಮರ್ಕಿ ಕೈ ಜೋಡಿಸ್ಕಂಡ್

ಬೇಡ್ತೆ ದೇವ್ರೇ…..

 

✍️ ಜೋಸೆಫ್ ಲುವಿಸ್, ಸಾಸ್ತಾನ.

 

 

 

 

 

 

 

 

 

PÀÄAzÁ¥Àæ PÀ£ÀßqÀ PÀªÁß

 

Cªïî PÀtÂÚÃgï

 

ªÀÄ¢AiÀiÁAiÀiï ªÀÄPÀ̽¯ÉÝ

ªÀÄPÀðvÁ EzÉÝ

 

ªÀÄUÀÄ ªÀÄPÀÄðzÀÄ

PÉÃA§ÄPï Q« ……………

 

eÉÆÃ¸É¥sï ®Ä«¸ï,¸Á¸ÀÛ£ï

ನೂತನ ಸಿ.ಡಿ.ಪಿ.ಒ ರವರಿಗೆ ಪದವೀದರ ಅಂಗನವಾಡಿ ಸಮಿತಿಯಿಂದ ಸ್ವಾಗತ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಕೋಲಾರ ಜು.17 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ನೂತನ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನವರಾದ ವಿಜಯಕುಮಾರ್ ರವರನ್ನು ಬೆಂಗಳೂರು ನಗರ ಜಿಲ್ಲೆಯ ಯಲಹಂಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪದವೀಧರ ಅಂಗನವಾಡಿ ಕಾರ್ಯಕರ್ತೆಯರ ಕ್ಷೇಮಾಭಿವೃದ್ಧಿ ಸಮಿತಿಯ ರಾಜ್ಯ ಸಂಸ್ಥಾಪಕ ಅಧ್ಯಕ್ಷರಾದ ಕಲ್ವಮಂಜಲಿ ಸಿ. ಶಿವಣ್ಣ, ರಾಜ್ಯಾಧ್ಯಕ್ಷರಾದ ಮದ್ದೂರು ಬಿ.ಎನ್. ತಜುಜ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಯಲಹಂಕ ಯೋಜನೆಯ ಅಂಗನವಾಡಿ ಕಾರ್ಯಕರ್ತೆ ಮಂಗಳಗೌರಿರವರು ನೂತನ ಸಿ.ಡಿ.ಪಿ. ರವರನ್ನು ಹೂಗುಚ್ಚ ನೀಡಿ ಸ್ವಾಗತಿಸುತ್ತಾ ಮಾತನಾಡಿ ನೂತನ ಅಧಿಕಾರಿಯಾದ ವಿಜಯ ಕುಮಾರ್ ರವರು ಇಲಾಖೆಯಲ್ಲಿ ಉತ್ತಮ ಸೇವೆಯನ್ನು ಮಾಡುತ್ತಾ ಉತ್ತಮ ಹೆಸರನ್ನು ಗಳಿಸಿ ಆದಷ್ಟು ಶೀಘ್ರದಲ್ಲಿ ಇಲಾಖೆಯಲ್ಲಿ ಹಂತಹಂತವಾಗಿ ಮೇಲಾಧಿಕಾರಿಗಳಾಗಿ ಸೇವೆ ಸಲ್ಲಿಸಲು ಭಗವಂತ ಅವರಿಗೆ ಆರ್ಶೀವಾದ ನೀಡಲೆಂದು ಸಮಿತಿಯ ಮುಖಂಡರುಗಳು ಶುಭ ಕೋರಿದರು.

ಚಿತ್ರ : ಬೆಂಗಳೂರು ನಗರ ಜಿಲ್ಲೆಯ ಯಲಹಂಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪದವೀಧರ ಅಂಗನವಾಡಿ ಕಾರ್ಯಕರ್ತೆಯರ ಕ್ಷೇಮಾಭಿವೃದ್ಧಿ ಸಮಿತಿಯು ಸ್ವಾಗತಿಸಿದರು.

ಬೆಳ್ಮಣಿನಲ್ಲಿ ತಾಳೆ ಮರದಲ್ಲಿ ಮೂರ್ಛೆ ಹೋಗಿ ಎರಡು ಗಂಟೆಗಳ ಕಾಲ ಮರದ ದಂಡುಗಳ ನಡುವೆ ಸಿಲುಕಿ,ಆದರೂ ಪವಾಡಸದೃಶ್ಯವಾಗಿ ಬದುಕುಳಿದ ಘಟನೆ

JANANUDI.COM NETWORK

 

ಬೆಳ್ಮಣ್: ಸುಮಾರು 20 ವರ್ಷಗಳಿಂದ ಶೇಂದಿ ವ್ಯವಹಾರ ಮಾಡುತಿದ್ದ ವ್ಯಕ್ತಿಯೊಬ್ಬರು ತಾಳೆ ಮರಹತ್ತಿ ಶೇಂದಿ ತೆಗಿಯುವ ವೇಳೆ ತಾಳೆ ಮರದಲ್ಲಿ ಮೂರ್ಛೆ ಕಳೆದುಕೊಂಡು ಸುಮಾರು ಎರಡು ಗಂಟೆಗಳ ಕಾಲ ಮರದ ದಂಡುಗಳ ನಡುವೆ ಸಿಲುಕಿದ್ದರು, ಆದರೂ ಅವರು ಪವಾಡಸದೃಶ ರೀತಿಯಲ್ಲಿ ಬದುಕುಳಿದ ಘಟನೆ ಮಂಗಳವಾರ ಬೆಳ್ಮಣಿನ  ಕಡಂದಲೆಯಲ್ಲಿ ನಡೆದಿದೆ.

ಕಡಂದಲೆ ಕಲ್ಲೋಳಿಯ ಸಂತೋಷ್‌ ಎಂಬಾತರು ಎಂದಿನಂತೆ ಬೆಳಿಗ್ಗೆ 6.30ರ ಹೊತ್ತಿಗೆ ತಾಳೆ ಮರ ಎರಿದವರು ಯಾವುದೋ ಕಾರಣದಿಂದ ಮೂರ್ಛೆ ತಪ್ಪಿದ್ದು  8.30 ರ ವರೆಗೆ ಹಾಗೆಯೇ ತಾಳೆ ಮರದ ದಂಡುಗಳ ನಡುವೆ ಸಿಲುಕಿದ್ದರು. ಮರದ ಪಕ್ಕ ದಾರಿಯಲ್ಲಿ ಹೋಗುವವರು ಇವರನ್ನು ಕಂಡರೂ,ಅವರು ಮರದ ಮೇಲೆ ತಮ್ಮ ಕೆಲಸವನ್ನು ಮಾಡುತಿದ್ದಾರೆಂದು ತಿಳಿದು ಸುಮ್ಮನೆ ಹೋಗುತಿದ್ದರು.

   ನಂತರ ಅನುಮಾನ ಪಟ್ಟುಜನ ಸೇರ ತೊಡಗಿದರು,ಈ ಸಂದರ್ಭ ಸಂಕಲಕರಿಯ ಪೊರ್ಲು ಲಂಚ್ ಹೋಮ್ ಮಾಲಕರಾದ ಸುಧಾಕರ್ ಸಾಲ್ಯಾನ್ ಅವರು ಶೇಂದಿ ತರಲು ಎಂದಿನಂತೆ ತಮ್ಮ ಕಾರಿನಲ್ಲಿ ಬಂದಿದ್ದಾರೆ ಆಗ ಜನ ಸೇರಿದ್ದನ್ನು ಕಂಡ ಅವರು ವಿಷಯ ತಿಳಿದು ಕೂಡಲೇ ಆಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ,ಅದೇ ಊರಿನ ತಾಳೆ ಮರವೇರುವ ನಾರಯಣ,ದಿನೇಶ,ಅಶೋಕರನ್ನು ಮರವೇರಿಸಿ ಸಂತೋಷರನ್ನು ಕೆಳಗಿಳಿಸುವ ಪ್ರಯತ್ನ ಮಾಡಿದ್ದಾರೆ.ಅದೇ ಸಮಯಕ್ಕೆ ಅಗ್ನಿ ಶಾಮಕ ದಳದವರೂ ಬಂದು ಸಂತೋಷನ ಶರೀರಕ್ಕೆ ಬಳ್ಳಿ ಕಟ್ಟಿ ಕೆಳಗಿಳಿಸಿದ್ದಾರೆ.

ಕೆಳಗಿಸಿದ ನಂತರವೂ ಮುರ್ಛೆ ಅವಸ್ಥೆಯಲ್ಲಿದ್ದ ಸಂತೋಷನನ್ನು ಸುಧಾಕರ್ ಸಾಲ್ಯಾನ್ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಗೊಂಡಯುವಾಗ,ದಾರಿ ಮಧ್ಯೆ ಪವಾಡಸದ್ರಸ್ಯದಂತೆ ಎಚ್ಚರಗೊಂಡು ಚೇತರಿಸಿಕೊಂಡಿದ್ದಾರೆ.ಇದನ್ನು ತಿಳಿದು ಸಂತೋಷನ ಕುಟುಂಬವು ಸಂತೋಷದಲ್ಲಿ ತೇಲಿದ್ದಾರೆ. 

ಜೀವ ಉಳಿಯಲು ಕಾರಣರಾದ ಸುಧಾಕರ್ ಸಾಲ್ಯಾನ್,ನಾರಯಣ,ದಿನೇಶ,ಅಶೋಕ ಮತ್ತು ಅಗ್ನಿ ಶಾಮಕದಳದವ ಸಾಹಸಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಕೋವಿಡ್ ಮಹಾಮಾರಿಗೆ ಕುಂದಾಪುರದ ಕ್ರೀಡಾಪಟು  ಕುವೈಟ್ ನಲ್ಲಿ ಬಲಿ.

ವರದಿ: ಅನು ಮಝರ್ ಕುಂದಾಪುರ

 

 

ಕುಂದಾಪುರ : ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜಿನ ಮಾಜಿ ಅಥ್ಲೆಟಿಕ್ಸ್ ಚಾಂಪಿಯನ್,ಖ್ಯಾತ ಕಬ್ಬಡಿಮತ್ತು ವಾಲಿಬಾಲ್ ಆಟಗಾರ ಕುಂದಾಪುರ ಖಾರ್ವಿ ಕೇರಿ ನಿವಾಸಿ ಶೇಕ್ ಮಹ್ಮದ್ ಸಯೀದ್(56)ಅವರು ಕುವೈಟ್ ನಲ್ಲಿ ಜು.16ರಂದು ನಿಧನ ರಾಗಿದ್ದಾರೆ. ಕುವೈಟ್ ನ ಕೆ.ಆರ್. ಎಚ್. ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಇವರು ಕಳೆದ ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೀಡಾಗಿ ತಪಾಸಣೆ ನಡೆಸಿದಾಗ ಕೋವಿಡ್ ಸೋಂಕು ತಗಲಿರುವುದು ದೃಢ ಪಟ್ಟಿತೆನ್ನಲಾಗಿದೆ. ಕಳೆದ ಸುಮಾರು 22 ದಿನಗಳಿಂದಲೂ ಕುವೈಟ್ ನ ಆಸ್ಪತ್ರೆಯಲ್ಲಿ  ದಾಖಲಾಗಿದ್ದ ಇವರಿಗೆ ಚಿಕಿತ್ಸೆ ಫಲಕಾರಿಯಾಗಲಿಲ್ಲವೆನ್ನಲಾಗಿದೆ. ಮೃತ ದೇಹದ ಧಫನ ಕಾರ್ಯವನ್ನು ಕುವೈಟ್ ನಲ್ಲಿಯೇ ನಡೆಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.   80ರ ದಶಕದಲ್ಲಿ ಕುಂದಾಪುರದ ಖ್ಯಾತ ಕ್ರೀಡಾಪಟು ವಾಗಿ ಮಿಂಚಿದ ಇವರು ಯುವ ಆಟಗಾರರಿಗೆ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದರು. ಯು.ಎ. ಇ ಯಲ್ಲಿ ಹಲವು ವರ್ಷಗಳಿಂದ ಉದ್ಯೋಗದಲ್ಲಿದ್ದ ಇವರು ಕೆಲವು ವರ್ಷಗಳ ಹಿಂದೆ ಕುವೈಟ್ ನಲ್ಲಿ ಉದ್ಯೋಗದಲ್ಲಿದ್ದರು.

ಇವರು ಪತ್ನಿ, ಮೂವರು ಪುತ್ರಿಯರು,ತಾಯಿ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.ಇವರ ಅಗಲಿಕೆಗೆ ಹಲವೆಡೆಯಿಂದ ಸಂತಾಪ ವ್ಯಕ್ತವಾಗಿದೆ. 

Sad Demise MRS. FELCY PINTO (80)  (KUNDAPUR)

JANANUDI.COM NETWORK

 

Passed away

MRS. FELCY PINTO (80)  (KUNDAPUR)

Born 01-05-1940,  Died: 16-07-2020.

W/o Late Richard Pinto.

 

 

M/o Nabil/Mary, Amy/Russell, Tarek/Kathy, Samir/Sharan.

Grandmother of Marshal, Brittany, Bianca, Gabriel, Mia, Merina,Maya, Monique.

Funeral cortege leaves on 18-07-2020 at 4.00 PM  from residence Pinto compound, Church Road to Holy Rosary church, Kundapura. 

 

[Corpse will arrive home at 3 PM on 18-07-2020. As per the Government guidelines only 20 persons are allowed for the funeral rites (As informed by the parish priest)]    

Contact : Shalet Rebello :9449031034              

ಹಾಲನ್ನು ಶೀಥಲೀಕರಿಸಿ ಒಕ್ಕೂಟಕ್ಕೆ ಸರಬರಾಜು ಮಾಡಲು ಅಗತ್ಯವಾದ ವ್ಯವಸ್ಥೆಗೆ ಸಹಾಯ ಧನ ನೀಡಲಾಗುತ್ತಿದೆ : ಕೋಚಿಮುಲ್ ನಿರ್ದೇಶಕ ಎನ್‌.ಹನುಮೇಶ್‌

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ:  ಹಾಲನ್ನು ಶೀಥಲೀಕರಿಸಿ ಒಕ್ಕೂಟಕ್ಕೆ ಸರಬರಾಜು ಮಾಡುವ ಉದ್ದೇಶಕ್ಕೆ ಅಗತ್ಯವಾದ ವ್ಯವಸ್ಥೆ ಮಾಡಿಕೊಳ್ಳಲು ಸಹಾಯ ಧನ ನೀಡಲಾಗುತ್ತಿದೆ ಎಂದು ಕೋಚಿಮುಲ್ ನಿರ್ದೇಶಕ ಎನ್‌.ಹನುಮೇಶ್‌ ಹೇಳಿದರು.
  ಪಟ್ಟಣದ ಕೋಚಿಮುಲ್ ಶಿಬರ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಬಿಎಂಸಿ ಘಟಕ ಅಳವಡಿಸಲು ಸಿವಿಲ್‌ ಕಾಮಗಾರಿ ಕೈಗೊಳ್ಳಲು ಹಾಗೂ ವಿವಿಧ ಕಾರಣಗಳಿಂದ ಮರಣ ಹೊಂದಿದ ಹಸುಗಳ ಮಾಲೀಕರಿಗೆ ಆರ್ಥಿಕ ನೆರವಿನ ಚೆಕ್‌ ವಿತರಿಸಿ ಮಾತನಾಡಿ, ಚೌಡನಹಳ್ಳಿ, ಕೂಳುಗುರ್ಕಿ, ನಾರವಮಾಕಲಹಳ್ಳಿ, ದೊಡ್ಡ ಬಂದಾರ್ಲಹಳ್ಳಿ ಹಾಗೂ ಕೆ.ವಡಿಗೇಪಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಬಿಎಂಸಿ ಘಟಕ ಅಳವಡಿಸಲು ತಲಾ ರೂ.1 ಲಕ್ಷ ನೀಡಲಾಗಿದೆ ಎಂದು ಹೇಳಿದರು.
  ಒಕ್ಕೂಟದಲ್ಲಿ ಗುಂಪು ರಾಸು ವಿಮೆ ಚಾಲ್ತಿಯಲ್ಲಿದ್ದು, ಒಟ್ಟು ಪ್ರೀಮಿಯಂ ಮೊತ್ತದಲ್ಲಿ ಶೇ.50 ರಷ್ಟು ರಿಯಾಯಿತಿ ದರದಲ್ಲಿ ರಾಸುಗಳಿಗೆ ವಿಮೆ ಮಾಡಲಾಗುತ್ತಿದೆ. ಎಲ್ಲ ಹಾಲು ಉತ್ಪಾದಕರೂ ತಮ್ಮ ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು ಎಂದು ಹೇಳಿದರು.
  ಉಪ ಕಚೇರಿಯ ಉಪ ವ್ಯವಸ್ಥಾಪಕ ಡಾ. ವಿ.ಎನ್‌.ಶ್ರೀಕಾಂತ್‌, ಸಹಾಯಕ ವ್ಯವಸ್ಥಾಪಕ ಕೆ.ಎಸ್‌.ನರಸಿಂಹಯ್ಯ, ವಿಸ್ತರಣಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್‌, ಎನ್‌.ದೇವರಾಜ್‌, ಪಿ.ಕೆ.ನರಸಿಂಹರಾಜು, ಎನ್‌.ಗಣೇಶ್‌, ಎಸ್‌.ವಿನಾಯಕ, ಕೆ.ಪಿ.ಶ್ವೇತ, ಎ.ಎನ್‌.ಶ್ರೀನಿವಾಸ ಮೂರ್ತಿ ಇದ್ದರು.