HOLY ROSARY CHURCH, KUNDAPUR – 450 th JUBILEE SOUVENIR 2021

ದೇಶವನ್ನು ಕಾಪಾಡುವ ಸೈನಿಕರಂತೆ ವೈದರು ಶುಶ್ರೂಕಿಯರು, ಆಂಬುಲೆನ್ಸ್ ಚಾಲಕರು ಮತ್ತು ಸಿಬ್ಬಂದಿ ಕೊರೊನಾ ವಿರುದ್ದ ಹೋರಾಟ ಮಾಡುತಿದ್ದಾರೆ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ನಮ್ಮ ದೇಶವನ್ನು ಕಾಪಾಡಲಿಕ್ಕೆ ಸೈನಿಕರು ಯಾವ ರೀತಿ ಹೋರಾಟ ಮಾಡುತ್ತಿದ್ದಾರೋ ಆ ರೀತಿಯಲ್ಲಿ ಇವತ್ತು ಕರೋನ ವಿರುದ್ದ ಗೆಲ್ಲಲೇಬೇಕೆಂಬ ಪರಿಸ್ಥಿತಿಯಲ್ಲಿ ನೀವೆಲ್ಲರೂ ಹೋರಾಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ ಎಂದು ಮಾವು ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಶ್ರೀನಿವಾಸಪುರ ರೋಟರಿ ಸಂಸ್ಥೆಯ ಚಾರ್ಟರ್ಡ್ ಪ್ರಸಿಟೆಂಡ್ ಎಲ್. ಗೋಪಾಲಕೃಷ್ಣ ತಿಳಿಸಿದರು.
ರೋಟರಿ ಸಂಸ್ಥೆ, ಶ್ರೀನಿವಾಸಪುರ ಇವರಿಂದ ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಕೋವಿಡ್ ವಿರುದ್ದ ಹೋರಾಡುತ್ತಿರುವ ವೈಧ್ಯರು, ಶುಶ್ರೂಕಿಯರು, ಆಂಬುಲೆನ್ಸ್ ಚಾಲಕರು ಮತ್ತು ಸಿಬ್ಬಂದಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಎಲ್. ಗೋಪಾಲಕೃಷ್ಣ, ದೇಶದಲ್ಲಿ ಕೋವಿಡ್-19 ಬಗ್ಗೆ ಇಲ್ಲಿ ನಾವು ಮಾತ್ರ ಮಾತನಾಡಿಕೊಂಡರೆ ಅರ್ಥವಿಲ್ಲ, ಈ ವಿಷಯವನ್ನು ಸಾರ್ವಜನಿಕರಿಗೆ ತಿಳಿಸಬೇಕು. ಆಸ್ಪತ್ರೆಯ ಸಿಬ್ಬಂದಿಯಾದ ವೈಧ್ಯರು, ನರ್ಸುಗಳು ಸಿಬ್ಬಂದಿಯಾದ ತಾವುಗಳು ಹಗಲಿರುಳು ಮಾಡಿದಂತಹ ನಿಮ್ಮ ಸೇವೆಯನ್ನು ನಾವುಗುರ್ತಿಸಿ ನಿಮ್ಮನ್ನು ಗೌರವಿಸುವಂತಹುದು. ಪ್ರಾಣ ಕಾಪಾಡಿಕೊಳ್ಳುವಂತಹ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿಯು ಬಹಳ ಮೆಚ್ಚುಗೆಯ ರೀತಿಯಲ್ಲಿ ಸೇವೆಯನ್ನು ಮಾಡಿದ್ದೀರಿ. ಈ ದಿನ ನಿಮ್ಮನ್ನು ಗುರ್ತಿಸಿ ಸನ್ಮಾನ ಮಾಡುತ್ತಿರುವುದು ಬಹಳ ಅರ್ಥಪೂರ್ಣ ಕಾರ್ಯಕ್ರಮ ಎಂದರು. ಜೊತೆಗೆ ಕರೋನ ಬಂದವರಿಗೆ ಚಿಕಿತ್ಸೆ ನೀಡಿ ಅವರನ್ನುಗುಣಮುಖರಾಗಿ ಮಾಡುವುದರಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ವಿಚಾರ ಬಹಳ ಮುಖ್ಯ ಎಂದರು.
ಸಾರ್ವಜನಿಕ ಆಸ್ಪತ್ರೆಯ ಸರ್ಜನ್ ಡಾ: ರಂಗರಾವ್ ಮಾತನಾಡಿ, ಸಾರ್ವಜನಿಕ ಆಸ್ಪತ್ರೆ, ಶ್ರೀನಿವಾಸಪುರ ಅನೇಕ ರೀತಿಯಲ್ಲಿ ತನ್ನದೇ ಆದಂತಹ ಹೆಸರನ್ನು ಮಾಡಿದೆ, ಅದೆ ರೀತಿ ಕೋವಿಡ್ 19 ನಿಯಂತ್ರಣದಲ್ಲೂ ಸಹ ವಿಶೇಷವಾಗಿ ತಾಲ್ಲೂಕು ಮಟ್ಟದಲ್ಲಿ ಕರೋನ ನಿಯಂತ್ರಣಕ್ಕೆ ಮೊದಲು ರೋಗಿಯನ್ನು ದಾಖಲು ಮಾಡಿಕೊಂಡು ವ್ಯವಸ್ಥೆ-ಚಿಕಿತ್ಸೆ ಎಲ್ಲವನ್ನು ಒದಗಿಸಿದಂತಹ ಆಸ್ಪತ್ರೆ ಎಂದರೆ ಸರ್ಕಾರಿ ಆಸ್ಪತ್ರೆ, ಶ್ರೀನಿವಾಸಪುರ. ನಮ್ಮ ವೈಧ್ಯಕೀಯ ತಂಡವು ಆಡಳಿತ ವೈಧ್ಯರ ಸೂಚನೆ ಮೇರೆಗೆ ಕರೋನ ನಿಯಂತ್ರಿಸಲು ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಶ್ರೀನಿವಾಸಪುರ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಎಸ್. ಶಿವಮೂರ್ತಿ ಮಾತನಾಡಿ, ಕರೋನ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಇಲ್ಲಿನ ವೈಧ್ಯರಾದ ಉಮಾ ಶಂಕರ್ ತುಂಬಾ ಯುವಕರಾಗಿದ್ದಾರೆ. ಅವರ ಹೆಸರಲ್ಲೇ ಉಮಾ-ಶಂಕರ್ ಈ ಇಬ್ಬರು ಇರುವುದರಿಂದ ಇವರನ್ನು ಯಾರೂ ಏನೂ ಮಾಡಲಾಗುವುದಿಲ್ಲ. ಇಲ್ಲಿನ ವೈಧ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದೀರಿ. ನಿಮ್ಮ ಕಾರ್ಯಕ್ಕೆ ನಾವು ನೀಡುವ ಸನ್ಮಾನ ಏನೇನೂ ಇಲ್ಲ. ನಿಮ್ಮ ಮೇಲಿರುವ ಗೌರವ, ಪ್ರೀತಿಗೆ ರೋಟರಿ ಸಂಸ್ಥೆಯಿಂದ ಸನ್ಮಾನ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಾರ್ವಜನಿಕಆಸ್ಪತ್ರೆ, ಶ್ರೀನಿವಾಸಪುರ ಇಲ್ಲಿಯ ವೈಧ್ಯರುಗಳಾದ ರಂಗರಾವ್, ನಿರಂಜನ್, ಉಮ ಶಂಕರ್, ದೀಪ ಮತ್ತು ಕಮಲ ಹಾಗೂ ಸುಮಾರು 30 ಶುಶ್ರೂಕಿಯರು, ಆಂಬುಲೆನ್ಸ್ ಚಾಲಕರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಸನ್ಮಾನವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಜಿ.ಎಸ್.ಆರ್. ಎಸ್.ವಿ. ಸುಧಾಕರ್, ಶ್ರೀನಿವಾಸಪುರ ರೋಟರಿ ಸಂಸ್ಥೆಯ ಮಾಧ್ಯಮ ಕಾರ್ಯದರ್ಶಿ ಎನ್. ಕೃಷ್ಣಮೂರ್ತಿ, ನಿರ್ದೇಶಕರುಗಳಾದ ಎನ್. ಬೈರೇಗೌಡ, ಆನಂದ ಕುಮಾರ್ ಹಾಜರಿದ್ದರು.

ಬೆಳ್ಮಣ್ಣು ಬೆಳ್ಮಣ್ಣು ರೋಟರಿ ಕೃಷಿ ಕ್ರಾಂತಿ

ವರದಿ : ವಾಲ್ಟರ್ ಮೊಂತೇರೊ, ಬೆಳ್ಮಣ್ಣು

ಬೆಳ್ಮಣ್ಣು:ರೋಟರಿ ಕ್ಲಬ್ ಬೆಳ್ಮಣ್ ಒಂದಲ್ಲ ಒಂದು ವಿಶೇಷ ಸಾರ್ವಜನಿಕ ಕಾರ್ಯಕ್ರಮದಿಂದ ಕ್ಲಬ್ ಗುರುತಿಸಿಕೊಂಡಿದ್ದು, ಸಾರ್ವಜನಿಕ ರಂಗಮಂದಿರ, ಬಾಲವನ, ಸುಮಾರು ಲಕ್ಷದಲ್ಲಿ ಸುಸಜ್ಜಿತ ಪಾರ್ಕಿಂಗ್, ಸುಮಾರು  ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ರುದ್ರಭೂಮಿ, ರಸ್ತೆ ವಿಭಜಕದ ಅಳವಡಿಕೆ ಮುಂತಾದ ಶಾಶ್ವತ ಯೋಜನೆಯೊಂದಿಗೆ  ಮನೆಮಾತಾಗಿದೆ.     

2020- 21 ಸಾಲಿನ ಪ್ರಸ್ತುತ ವರ್ಷದ ಅಧ್ಯಕ್ಷರಾದ ರೋಟರಿಸುಭಾಷ್ ಕುಮಾರ್ ರವರ ನೇತೃತ್ವದಲ್ಲಿ ಕೃಷಿ ಕ್ರಾಂತಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ ಸುಮಾರು ಎಕರೆಗಟ್ಟಲೆ 20 ವರ್ಷಕ್ಕೂ ಮಿಕ್ಕಿ ಹಡಿಲು ಬಿದ್ದಭೂಮಿಯನ್ನು ಲಾಕ್ ಡೌನ್ ಸಂದರ್ಭದಲ್ಲಿ ಸಮಯವನ್ನು ವ್ಯರ್ಥ ಮಾಡದೆ ಕೃಷಿಭೂಮಿಯನ್ನು ಪುನಶ್ಚೇತನಗೊಳಿಸಿ ಈಗಲೇ ಬಿತ್ತನೆ ಕಾರ್ಯಕ್ಕೆ ಕೈ ಹಾಕಿದ್ದಾರೆ.ಇದರಿಂದ ಬಂದಂತಹ ಲಾಭಾಂಶವನ್ನು ಸಾರ್ವಜನಿಕ ಕಾರ್ಯಕ್ಕೆ ವಿನಿಯೋಗಿಸಲು ಚಿಂತನೆ ಮಾಡಿದ್ದಾರೆ.ಇವರಿಗೆ ಇರುವ ಕೃಷಿಯ ಆಸಕ್ತಿಯನ್ನು ಕಂಡು ಪರಿಸರದ ಜನರು ಕೂಡ ಕೈ ಜೋಡಿಸಿದ್ದಾರೆ.ರೋಟರಿ ಅಧ್ಯಕ್ಷರಾದ ಸುಭಾಷ್ ಕುಮಾರ್ ಅವರೇಸ್ವತಃ ಹಾರೆಯ ಹಿಡಿದು ಕೃಷಿಯಲ್ಲಿ ತನ್ನನ್ನು ಮತ್ತು ಕಾರ್ಯದರ್ಶಿಯಾದ¤ತಹ ರೋ.ರವಿರಾಜ್ ಶೆಟ್ಟಿ ಇವರು ಮತ್ತು ಸರ್ವ ಸದಸ್ಯರನ್ನು ತೊಡಗಿಸಿಕೊಂಡು ಕೃಷಿಯ ಕ್ರಾಂತಿ ಮೂಲಕ ಇತರ ರೈತರಿಗೆ ಪ್ರೇರಣೆಯಾಗಿದ್ದಾರೆ.

ಕೋವಿಡ್ -19 ನಿಯಂತ್ರಿಸಲು ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದೆ ಹೆಚ್.ನಾಗೇಶ್

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ಜಿಲ್ಲೆಯಲ್ಲಿ ಕೋವಿಡ್ -19 ನಿಯಂತ್ರಿಸಲು ಜಿಲ್ಲಾಡಳಿತವು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದೆ ಎಂದು ಅಬಕಾರಿ ಮತ್ತು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ನಾಗೇಶ್ ಅವರು ತಿಳಿಸಿದರು . ಇಂದು ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೋವಿಡ್ -19 ವೈರಸ್ ವಿಚಾರವಾಗಿ ನಡೆದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು . ಜಿಲ್ಲೆಯ ಎಲ್ಲಾ ಅಧಿಕಾರಿಗಳ ಕಾರ್ಯವೈಖರಿಯಿಂದ ಕರೋನವನ್ನು ನಿಯಂತ್ರಿಸಲು ಸಾಧ್ಯವಾಯಿತು ಎಂದರು . ಜಿಲ್ಲೆಯಲ್ಲಿ ಇದುವರೆಗೂ 1497 ಕೋವಿಡ್ ಸೋಂಕಿತರಿದ್ದು , 806 ಜನ ಗುಣಮುಖರಾಗಿದ್ದಾರೆ , 29 ಜನ ಕೋವಿಡ್ -19 ನಿಂದ ಮೃತ ಪಟ್ಟಿದ್ದು , 662 ಕೋವಿಡ್ -19 ಪ್ರಕರಣಗಳು ಸಕ್ರಿಯವಾಗಿವೆ ಎಂದ ಅವರು ಜಿಲ್ಲೆಯಲ್ಲಿ ಕೋವಿಡ್ -19 ರಿಂದ ಮೃತ ಪಟ್ಟವರ ಪ್ರಮಾಣ ಕಡಿಮೆ ಇದೆ ಎಂದು ತಿಳಿಸಿದರು . ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಅವಶ್ಯಕವಿರುವ ಉಪಕರಣಗಳ ಬಗ್ಗೆ ಮಾಹಿತಿ ನೀಡುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು .ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಆರ್ . ರಮೇಶ್ ಕುಮಾರ್ ಅವರು ಮಾತನಾಡಿ , ಕೋವಿಡ್ -19 ಸಾಂಕ್ರಮಿಕ ರೋಗದ ಬಗ್ಗೆ ಗ್ರಾಮೀಣ ಜನರಲ್ಲಿ ಅರಿವು ಕಡಿಮೆಯಿದ್ದು , ಮಾಧ್ಯಮಗಳ ಮೂಲಕ ಜನರಿಗೆ ಅರಿವನ್ನು ಮೂಡಿಸಬೇಕು ಎಂದರು . ಕೋವಿಡ್ ಅಲ್ಲದ ರೋಗಿಗಳು ಆಸ್ಪತ್ರೆಗೆ ಬಂದಂತಹ ಸಂದರ್ಭದಲ್ಲಿ ಕಡ್ಡಾಯವಾಗಿ ಕೋವಿಡ್ -19 ಟೆಸ್ಟ್ ಮಾಡುವಂತೆ ವೈದ್ಯರು ಒತ್ತಡ ಹೇರುತ್ತಿದ್ದು , ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಬೇಕು . ಜಿಲ್ಲಾ ಆಸ್ಪತ್ರೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿ , ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು ಎಂದು ಹೇಳಿದರು . ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹ್ಮದ್ ಅವರು ಮಾತನಾಡಿ ಕೋವಿಡ್ ಅಲ್ಲದ ರೋಗಿಗಳಿಗೆ ಪ್ರತ್ಯೇಕವಾಗಿ 100 ಹಾಸಿಗೆಗಳನ್ನು ಮೀಸಲಿಡಬೇಕೆಂದು ತಿಳಿಸಿದರು . ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ಅವರು ಮಾತನಾಡಿ ಜಿಲ್ಲೆಯಲ್ಲಿ ಕೋವಿಡ್ -19 ನಿಯಂತ್ರಿಸಲು ಅಧಿಕಾರಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ . ಕೋವಿಡ್ -19 ಸೋಂಕಿಗೆ ತುತ್ತಾದ ವ್ಯಕ್ತಿಯ ಮನೆಯ ಪ್ರದೇಶವನ್ನು ಕಂಟೈನ್‌ಮೆಂಟ್ ವಲಯವನ್ನಾಗಿ ಪರಿವರ್ತಿಸಲಾಗುತ್ತದೆ . ಕಂಟೈನ್‌ಮೆಂಟ್ ವಲಯಗಳಿಗೆ ಸರ್ಕಾರದಿಂದ ಯಾವುದೇ ರೀತಿಯ ಅನುದಾನ ಬರುವುದಿಲ್ಲ ಎಂದು ಮಾಹಿತಿ ನೀಡಿದರು . ಸಭೆಯಲ್ಲಿ ಶಾಸಕರಾದ ಕೆ.ವೈ.ನಂಜೇಗೌಡ , ವಿಧಾನ ಪರಿಷತ್ ಸದಸ್ಯರಾದ ಗೋವಿಂದ ರಾಜು , ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಸಿ.ಎಸ್ . ವೆಂಕಟೇಶ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ , ಕೆ.ಜಿ.ಎಫ್ . ಪೊಲೀಸ್ ವರಿಷ್ಠಾಧಿಕಾರಿಗಳಾದ ಇಲಕಿಯಾ ಕರಣಾಕರನ್ , ಅಪರ ಜಿಲ್ಲಾಧಿಕಾರಿಗಳಾದ ಶಿವಸ್ವಾಮಿ , ಉಪ ವಿಭಾಗಾಧಿಕಾರಿಗಳಾದ ಸೋಮಶೇಖರ್ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ | ವಿಜಯ್ ಕುಮಾರ್ , ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ | ನಾರಾಯಣಸ್ವಾಮಿ , ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಸಂಜೀವಪ್ಪ , ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ . ಚಾರಿಣಿ , ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು .

ಬೆರೆಳಚ್ಚು ಹುದ್ದೆಯಲ್ಲಿ 20 ವರ್ಷ ಸೇವೆ ಸಲ್ಲಿಸಿ ಬಡ್ತಿ ಹೊಂದಿದ ವಿ. ರಾಧಮ್ಮ ರವರಿಗೆ ಸ.ಪ್ರ.ದ.ಕಾಲೇಜಿ ಕಾಲೇಜಿಂದ ಬೀಳ್ಕೊಡುಗೆ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ : ಸ.ಪ್ರ.ದ.ಕಾಲೇಜಿನಲ್ಲಿ ಬೆರಳಚ್ಚು ಹುದ್ದೆಯಲ್ಲಿ 20 ವರ್ಷ ಸೇವೆ ಸಲ್ಲಿಸಿ   ಬೆಂಗಳೂರು ಕಮಿಷನರ್ ಕಛೇರಿಗೆ ಬಡ್ತಿ ಹೊಂದಿದ ವಿ. ರಾಧಮ್ಮ ರವರಿಗೆ ಕಾಲೇಜು ವತಿಯಿಂದ ಬೀಳ್ಕೊಡುಗೆ ಸರಳ ಕಾರ್ಯಕ್ರಮದಲ್ಲಿ  ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜಮ್ಮ ರವರು ಕೆಲಸ ಮಾಡುವ ಸಮಯದಲ್ಲಿ  ಒತ್ತಡದ ಕೆಲಸದ ನಡುವೆ ತಾಳ್ಮೆಯಿಂದ  ಕಾಲೇಜು ಕೆಲಸಗಳನ್ನು ಮಾಡಿಕೊಡುತ್ತಿದ್ದ ಬಗ್ಗೆ ಗುಣಗಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿಪ್ರಾಂಶುಪಾಲ ಕೆ. ವಿ. ವೆಂಕಟೇಶ್, ಉಪನ್ಯಾಸಕರಾದ  ವಿ. ನಾಗಪ್ಪ,ಮ್ಯಾನೇಜರ್ ವಿಜಯಕುಮಾರ್,
ಪದ್ಮ, ರಾಮಕೃಷ್ಣಯ್ಯ, ರಮೇಶ್, ಮಂಜುಳ, ರವಿಕುಮಾರ್, ಮೃತ್ಯುಂಜಯ ಇತರರು ಮಾತನಾಡಿದರು.
ಅದೇ ರೀತಿ ಸನ್ಮಾನ ಸ್ವೀಕರಿಸಿ ವಿ. ರಾದಮ್ಮ ರವರು ಮಾತನಾಡಿ ಕೆಲಸ ಮಾಡುವ ಸಮಯದಲ್ಲಿ ಒಳ್ಳೆಯ  ಸಹಕಾರ ನೀಡಿದ ಕಾಲೇಜಿನ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. 

ಶ್ರೀನಿವಾಸಪುರ: ರಾಮ ಮಂದಿರ ಭಾರತೀಯ ಸಂಸ್ಕೃತಿಯ ;ಎಂ.ವೇಮಣ್ಣ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ:  ರಾಮ ಮಂದಿರ ಭಾರತೀಯ ಸಂಸ್ಕೃತಿಯ ಪ್ರತೀಕವಾಗಲಿದೆ. ಜನರ  ಪ್ರಾರ್ಥನೆ ಫಲಿಸಿದೆ ಎಂದು ಜಿಲ್ಲಾ ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷ ಎಂ.ವೇಮಣ್ಣ ಹೇಳಿದರು.
  ಪಟ್ಟಣದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಡೆಸಲಾದ ಶಿಲಾನ್ಯಾಸ ಹಿನ್ನೆಲೆಯಲ್ಲಿ ಬುಧವಾರ ವಿಶ್ವ ಹಿಂದೂ ಪರಿಷತ್‌ ವತಿಯಿಂದ ಏರ್ಪಡಿಸಿದ್ದ ರಾಮ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ಶತಮಾನಗಳಷ್ಟು ಹಳೆಯದಾದ ವಿವಾದ ಶಾಂತಿಯುತವಾಗಿ ಕೊನೆಗೊಂಡು ಮಂದಿರ ನಿರ್ಮಾಣವಾಗುತ್ತಿರುವುದು ಸಂತೋಷ ಸಂಗತಿಯಾಗಿದೆ ಎಂದು ಹೇಳಿದರು.  ತಾಲ್ಲೂಕು ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷ ಕೆ.ದಿವಾಕರ್‌ ಮಾತನಾಡಿ, ರಾಮ ಮಂದಿರ ನಿರ್ಮಾಣ ಹಿಂದೂ ಸಮಾಜದ ಬಹುದಿಗಳ ಕನಸಕಾಗಿತ್ತು. ಈಗ ಅದು ನನಸಾಗುತ್ತಿದೆ. ಈ ಸಂಬಂಧ ನಡೆದ ಸುದೀರ್ಘ ಹೋರಾಟದಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ನೆನೆಯಬೇಕಾಗಿದೆ. ಆ ಭವ್ಯ ಮಂದಿರ ದೇಶದ ಹೆಮ್ಮೆಯಾಗಲಿದೆ ಎಂದು ಹೇಳಿದರು.  ಈ ಸಂದರ್ಭದಲ್ಲಿ ತಾಲ್ಲೂಕು ವಿಶ್ವ ಹಿಂದೂ ಪರಿಷತ್ತಿನ ವತಿಯಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ರೂ.5ಲಕ್ಷ ಮೌಲ್ಯದ ಚೆಕ್‌ ನೀಡಲಾಯಿತು.   ದೇವಾಲಯದ ಆವರಣದಲ್ಲಿ ನಿಲ್ಲಿಸಲಾಗಿದ್ದ ರಾಮನ ಭಾವ ಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಪುಷ್ಪಾರ್ಚನೆ ಮಾಡಲಾಯಿತು. ವಿಶ್ವ ಹಿಂದೂ ಪರಿತ್‌ ಹಾಗೂ ಆರ್‌ಎಸ್‌ಎಸ್‌ ಸದಸ್ಯರು ರಾಮನ ಪರ ಘೋಷಣೆ ಕೂಗಿ ಸಂಭ್ರಮಿಸಿದರು.   ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌, ಪಿಎಸ್‌ಐ ನಾರಾಯಣಪ್ಪ, ಬಿಜೆಪಿ ಮುಖಂಡರಾದ ಎಂ.ಲಕ್ಷ್ಮಣಗೌಡ, ಎ.ಅಶೋಕರೆಡ್ಡಿ, ಇ.ಶಿವಣ್ಣ, ಟಿ.ನಾರಾಯಣಸ್ವಾಮಿ, ಕೊಟ್ರಗುಳಿ ನಾರಾಯಣಸ್ವಾಮಿ, ಕಪಾಲಿ ಮೋಹನ್‌, ಶಿವಮೂರ್ತಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶ್ರೀನಿವಾಸಪುರ ತಾಲ್ಲೂಕಿನ ಗನಿಬಂಡ ಗ್ರಾಮದ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಬುಧವಾರ ದೇವರ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು

ಮುಂಜಾಗ್ರತೆ ಎಂಬ ಮೆಡಿಸಿನ್ “ಸೊಲನೇಸಿ ತರಕಾರಿ ಬೆಳೆಯಲ್ಲಿ ಸಮಗ್ರ ರೋಗ ನಿರ್ವಹಣೆ”

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ;ಕೋಲಾರ ತರಕಾರಿ ಬೆಳೆಯಲು ಪ್ರಸಿದ್ಧಿ ಹೊಂದಿದ್ದು, ಈಗ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು ಈ ಅವಧಿಯಲ್ಲಿ ತರಕಾರಿ ಬೆಳೆಗಳಿಗೆ ಬರುವಂತಹ ರೋಗಗಳ ಸಮಗ್ರ ನಿರ್ವಹಣೆಯ ಕುರಿತು ರೈತರಲ್ಲಿ ಅರಿವು ಮೂಡಿಸುವ ಅಂತರ್ಜಾಲ ಕಾರ್ಯಾಗಾರವನ್ನು ಕೃಷಿ ವಿಜ್ಞಾನ ಕೇಂದ್ರ, ಕೋಲಾರದಲ್ಲಿ ದಿನಾಂಕ 04.08.2020 ರಂದು “ಸೊಲನೇಸಿ ತರಕಾರಿ ಬೆಳೆಯಲ್ಲಿ ಸಮಗ್ರ ರೋಗ ನಿರ್ವಹಣೆ” ಬಗ್ಗೆ ಆಯೋಜಿಸಲಾಗಿತ್ತು.
ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನ ಸಸ್ಯ ರೋಗಶಾಸ್ತ್ರದ ಪ್ರಾಧ್ಯಾಪಕರಾದ ಡಾ. ಎನ್. ನಾಗರಾಜ್‍ರವರು ಮಾತನಾಡಿ ಸೊಲನೇಸಿ ತರಕಾರಿ ಬೆಳೆಗಳಲ್ಲಿ ಬರುವಂತಹ ಮುಖ್ಯವಾದ ರೋಗಗಳಾದ ಮೊದಲ ಅಂಗಮಾರಿ ರೋಗ, ಕೊನೆಯ ಅಂಗಮಾರಿ ರೋಗ, ದುಂಡಾಣು ಸೊರಗು ರೋಗ, ಶಿಲೀಂದ್ರದಿಂದ ಬರುವ ಸೊರಗು ರೋಗ, ನಂಜಾಣುವಿನಿಂದ ಮತ್ತು ಜಂತುಹುಳುವಿನಿಂದ ಬರುವ ರೋಗಗಳ ಬಗ್ಗೆ ಮತ್ತು ರೋಗಾಣುಗಳ ಹಾಗೂ ಅವುಗಳ ಹರಡುವಿಕೆ ಬಗ್ಗೆ ಮಾಹಿತಿ ನೀಡಿದರು
ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಲ್ಲಿ ಅವುಗಳೆಂದರೆ ಸ್ವಚ್ಚ ಬೇಸಾಯ ಕೈಗೊಳ್ಳುವುವದು, ತಾಕುವಿನ ಸುತ್ತಲೂ ಮೆಕ್ಕೆ ಜೋಳವನ್ನು ತಡೆಬೆಳೆಯಾಗಿ ಬೆಳೆಯವುದು, ಹಸಿರೆಲೆ ಗೊಬ್ಬರ, ಕೊಟ್ಟಿಗೆ ಗೊಬ್ಬರವನ್ನು ಬಳಸುವುದು. ಜೈವಿಕ ಪೀಡೆ ನಾಶಕಗಳಿಂದ ಮಣ್ಣನ್ನು ಉಪಚರಿಸುವುದರಿಂದ ಮಣ್ಣಿನಿಂದ ಬರುವಂತಹ ರೋಗಗಳನ್ನು ತಡೆಯಲು, ಬಲೆ ಬೆಳೆಯಾಗಿ 16 ಸಾಲಿನ ಮುಖ್ಯ ಬೆಳೆಯಲ್ಲಿ 1 ಸಾಲಿನಂತೆ ಚೆಂಡು ಹೂವನ್ನು ಬೆಳೆಯುವುದು, ಕಳೆ ಸಸಿಗಳನ್ನು ಕಿತ್ತು ಹಾಕುವುದು, ಬೆಳೆ ಪರಿವರ್ತನೆ ಮಾಡುವುದು, ಸ್ಪರ್ಶ ಮತ್ತು ಅಂತರ್‍ವ್ಯಾಪಿ ಶಿಲೀಂದ್ರ ನಾಶಕಗಳ ಬಳಕೆಯ ಬಗ್ಗೆ, ಭಾರತೀಯ ತೊಟಗಾರಿಕಾ ಸಂಶೋಧನಾ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಅರ್ಕಾ ಮೈಕ್ರೋಬಿಯಲ್ ಕನ್ಸಾರ್ಷಿಯಮ್ ಉಪಯೋಗ ಮತ್ತು ಬಳಕೆಯ ಬಗ್ಗೆ ವಿವರಿಸಿದರು.
ಅಂತರ್ಜಾಲ ಕಾರ್ಯಾಗಾರದಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ರೈತರು ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಸಂದೇಹವನ್ನು ನಿವಾರಿಸಿಕೊಂಡರು. ಡಾ. ಅಂಬಿಕಾ ಡಿ.ಎಸ್, ವಿಜ್ಞಾನಿ (ಸಸ್ಯ ಸಂರಕ್ಷಣೆ) ಕಾರ್ಯಾಗಾರವನ್ನು ಸಂಯೋಜಿಸಿದ್ದರು. ಕೃಷಿ ವಿಜ್ಞಾನ ಕೇಂದ್ರದ ಕೆ. ತುಳಸಿರಾಮ್, ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು, ಡಾ. ಅನಿಲ್‍ಕುಮಾರ್ ಎಸ್, ವಿಜ್ಞಾನಿ (ಮಣ್ಣು ವಿಜ್ಞಾನ), ಡಾ. ಜ್ಯೋತಿ ಕಟ್ಟೆಗೌಡರ್, ವಿಜ್ಞಾನಿ (ತೋಟಗಾರಿಕೆ), ಡಾ. ಶಶಿಧರ್ ಕೆ.ಆರ್, ವಿಜ್ಞಾನಿ (ರೇಷ್ಮೆ ಕೃಷಿ), ಡಾ. ಚಿಕ್ಕಣ್ಣ ಜಿ.ಎಸ್, ವಿಜ್ಞಾನಿ (ಗೃಹ ವಿಜ್ಞಾನ), ಸ್ವಾತಿ ಜಿ.ಆರ್, ಕೃಷಿ ಹವಾಮಾನ ತಜ್ಞೆ ಭಾಗವಹಿಸಿದ್ದರು.

ಪಿ.ಯು.ಸಿ ರಾಜ್ಯ ಮಟ್ಟದಲ್ಲಿ ರ್‍ಯಾಂಕ್ ಪಡೆದ ಸೋಹನ್ ಮತ್ತು ಭುವನ್ ಗೆ ಕುಂದಾಪುರ ವಲಯ ಕಥೊಲಿಕ್ ಸಭಾ – ಶೆವೊಟ್ ಪ್ರತಿಷ್ಠಾನದಿಂದ ಸನ್ಮಾನ

JANANUDI.COM NETWORK

ಕುಂದಾಪುರ,ಅ.5: 2019-20 ರ ಸಾಲಿನ ಪಿ.ಯು.ಸಿ.ಪರೀಕ್ಷೆಯಲ್ಲಿ ಶ್ರೀವೆಂಕಟರಮಣ ಪಿ.ಯು.ಕಾಲೇಜಿನ ವಿಜ್ಞಾನ ವಿಭಾಗದ ವಿಧ್ಯಾರ್ಥಿಗಳಾದ ರಾಜ್ಯ ಮಟ್ಟದಲ್ಲಿ 7ನೇ ರ್‍ಯಾಂಕ್ ಪಡೆದ ಸೋಹನ್ ಕುಮಾರ್ ಶೆಟ್ಟಿ ಮತ್ತು 8 ನೇ ರ್‍ಯಾಂಕ್ ಪಡೆದ ಭುವನ್ ಇವರನ್ನು ಅಗೋಸ್ಟ್ 4 ರಂದು ಕುಂದಾಪುರ ವಲಯ ಕಥೊಲಿಕ್ ಸಭಾ ಸಂಘಟನೆ ಮತ್ತು ಶೆವೊಟ್ ಪ್ರತಿಷ್ಠಾನ್ ಸಂಸ್ಥೆಯ ಪದಾಧಿಕಾರಿಗಳು ವಿದ್ಯಾರ್ಥಿಗಳ ಮನೆಗೆ ತೆರಳಿ ಅವರನ್ನು ಸನ್ಮಾನಿಸಿ ಅಭಿನಂದಿಸಿ ಅವರ ಮುಂದಿನ ಭವಿಸ್ಯವು ಉಜ್ವಲವಾಗಲೆಂದು ಹಾರೈಸಿದರು
ಈ ಸಂದರ್ಭದಲ್ಲಿ ಕುಂದಾಪುರ ವಲಯ ಕಥೊಲಿಕ್ ಸಭಾದ ಅಧ್ಯಕ್ಷೆ ಮೇಬಲ್ ಡಿಸೋಜಾ, ಕಾರ್ಯದರ್ಶಿ ಹೆನ್ರಿ ಮೆಲ್ವಿನ್ ಪುಟಾರ್ಡೊ, ಸರ್ಕಾರಿ ಸವಲತ್ತು ಸಂಚಾಲಕ ಹಾಗೂ ಶೆವೊಟ್ ಪ್ರತಿಷ್ಠಾನ
ದ ಅಧ್ಯಕ್ಷ ವಿನೋದ್ ಕ್ರಾಸ್ಟೊ, ಶೆವೊಟ್ ಪ್ರತಿಷ್ಠಾನದ ಮಾಜಿ ಅಧ್ಯಕ್ಷ ಕಿರಣ್ ಕ್ರಾಸ್ತಾ, ಕುಂದಾಪುರ ಕಥೊಲಿಕ್ ಸಭಾದ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ, ಕಾರ್ಯದರ್ಶಿ ಪ್ರೇಮಾ ಡಿಕುನ್ಹಾ, ಸೋಹನ್ ಕುಮಾರ್ ಇವರ ತಂದೆ ಪುರುಷತ್ತೋಮ್ ಶೆಟ್ಟಿ ತಾಯಿ ಮಮತಾ, ಭುವನ್ ಇವರ ತಂದೆ ರಮಾನಂದ ಕೆ., ತಾಯಿ ನಿಶಾ ಮತ್ತು ಶ್ರೀವೆಂಕಟರಮಣ ಪಿ.ಯು.ಕಾಲೇಜಿನ ಉಪನ್ಯಾಸಕಿ ಮಮತಾ ರೈ ಉಪಸ್ಥಿತರಿದ್ದರು.

ಕುಂದಾಪುರ ಶ್ರೀ ಮಹಾಕಾಳಿ ದೇವಸ್ಥಾನದ ವತಿಯಿಂದ ಸಮುದ್ರ ಪೂಜೆ.

ವರದಿ:ಅನು ಮಝರ್

ಕುಂದಾಪುರ : ಖಾರ್ವಿಕೇರಿಯ ಶ್ರೀಮಹಾಕಾಳಿ ದೇವಸ್ಥಾನದ ವತಿಯಿಂದ ಮತ್ಸ್ಯ ಸಂಪತ್ತು ಹಾಗೂ ಪ್ರಾಕೃತಿಕ ವಿಕೋಪಗಳಿಂದ ಯಾವುದೇ ಅವಘಡಗಳು ಜರಗದಂತೆ ವರ್ಷಂಪ್ರತಿ ಜರಗುವ ಸಮುದ್ರ ಪೂಜೆಯು    ದಿನಾಂಕ 3/8/2020 ರಂದು   ಕೋಡಿಯ ಸಮುದ್ರಕಿನಾರೆಯಲ್ಲಿ ವಿದ್ಯುಕ್ತವಾಗಿ ನೆರವೇರಿತು .  ದೇವಸ್ಥಾನದ  ಅಧ್ಯಕ್ಷರಾದ ಪ್ರಕಾಶ್.ಆರ್.ಖಾರ್ವಿ ಉಪಾಧ್ಯಕ್ಷ ರಾದ ಪೀತಾಂಬರ ಗಣಪತಿ ಖಾರ್ವಿ , ಮೊಕ್ತೇಸರರಾದ ಆನಂದ ನಾಯ್ಕ್, ಸಮುದ್ರ ಪೂಜೆ ಯ ವಿಧಿವಿಧಾನಗಳನ್ನು ಸಾಂಗವಾಗಿ ನೆರವೇರಿಸಿದರು. ಕಾರ್ಯಕ್ರಮದ ಉಸ್ತುವಾರಿಯನ್ನು ದೇವಸ್ಥಾನದ ಸಮಿತಿಯ ಸದಸ್ಯ ಸುನೀಲ್ ಖಾರ್ವಿ ತಲ್ಲೂರು ವಹಿಸಿದ್ದರು. ಸಮಿತಿಯ  ಸದಸ್ಯರು. ಮಹಾಕಾಳಿ ಮಹಿಳಾ ಮಂಡಳಿಯ ಅಧ್ಯಕ್ಷೆ  ವಸಂತಿ ಸಾರಂಗ  ಹಾಗೂ ಸಂಘದ ಸದಸ್ಯೆಯರ ಸಹಿತ ಹಲವಾರು ಸಮಾಜ ಭಾಂದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪುರಸಭಾ ಕಛೇರಿಯಲ್ಲಿ 36 ವರ್ಷಗಳಿಂದ ಸೇವೆ ಸಲ್ಲಿಸಿದ ಎಂ.ವನಜಾಕ್ಷಿಯವರಿಗೆ ಬೀಳ್ಕೊಡುಗೆ

ವರದಿ; ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ಪುರಸಭಾ ಕಛೇರಿಯಲ್ಲಿ  36 ವರ್ಷಗಳಿಂದ ಸೇವೆ ಸಲ್ಲಿಸಿ,  ವಯೋ ನಿವೃತ್ತಿಹೊಂದಿದ ಶ್ರೀಮತಿ ಎಂ.ವನಜಾಕ್ಷಿರವರನ್ನು ಪುರಸಭಾ ಮುಖ್ಯಾಧಿಕಾರಿ ಶ್ರೀ ವಿ.ಮೋಹನ್ ಕುಮಾರ್  ರವರ ನೇತೃತ್ವದಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಬೀಳ್ಕೊಡುಗೆ ಸಮಾರಂಭದಲ್ಲಿ  ಪುರಸಭಾ ಸದಸ್ಯ ಶ್ರೀ ಅನೀಸ್ ಅಹ್ಮದ್, ಪರಿಸರ ಅಭಿಯಂತರರಾದ ಶ್ರೀ ಎಂ.ಶೇಖರ್, ಸಮುದಾಯ ಸಂಘಟನಾಧಿಕಾರಿ ಶ್ರೀಮತಿ ಕೆ.ಎನ್.ರಾಜೇಶ್ವರಿ, ಹಿರಿಯ ಆರೋಗ್ಯ ನಿರೀಕ್ಷಕ ಶ್ರೀ ಕೆ.ಜೆ.ರಮೇಶ್ ಸೇರಿದಂತೆ ಪುರಸಭಾ ಸಿಬ್ಬಂದಿ ವರ್ಗದವರು ಹಾಜರಿದ್ದು, 36 ವರ್ಷಗಳ ಕಾಲ ಪ್ರಾಮಾಣಿಕವಾಗಿ  ಶ್ರೀಮತಿ ಎಂ.ವನಜಾಕ್ಷಿರವರು ಸೇವೆ ಸಲ್ಲಿಸಿರುವುದನ್ನು ಶ್ಲಾಘಿಸಿದರು.