HOLY ROSARY CHURCH, KUNDAPUR – 450 th JUBILEE SOUVENIR 2021

ರೋಟರಿ ಕುಂದಾಪುರ ದಕ್ಷಿಣದ ವತಿಯಿಂದ ನಾರಾಯಣ ವಿಶೇಷ ಚೇತನ ಶಾಲೆಗೆ ಗ್ಲೋಬಲ್ ಗ್ರ್ಯಾಂಟ್ ಯೋಜನೆಯ ಹಸ್ತಾಂತರ ಕಾರ್ಯಕ್ರಮ

JANANUDI.COM NETWORK

ಕುಂದಾಪುರ, ಸೆ.7: ತಾ06-09-20 ರೋಟರಿ ಕುಂದಾಪುರ ದಕ್ಷಿಣದ ವತಿಯಿಂದ ನಾರಾಯಣ ವಿಶೇಷ ಚೇತನ ಶಾಲೆಗೆ ಕೊಡಮಾಡಲ್ಪಟ್ಟ ಗ್ಲೋಬಲ್ ಗ್ರ್ಯಾಂಟ್ GG 1989053 ಯೋಜನೆಯ ಹಸ್ತಾಂತರ ಕಾರ್ಯಕ್ರಮ ತಲ್ಲೂರಿನ ನಾರಾಯಣ ವಿಶೇಷ ಮಕ್ಕಳ ಶಾಲೆಯಲ್ಲಿ ನೆರವೇರಿತು. ಈ ಕಾರ್ಯ ಕ್ರಮಕ್ಕೆ ಆಗಮಿಸಿದ ರೋಟರಿ ಜಿಲ್ಲಾ 3182 ರ ಗವರ್ನರ್ ರೋ. ಬಿ. ರಾಜಾರಾಮ ಭಟ್ ಶೌಚಾಲಯ, ಕಂಪ್ಯೂಟರ್, ಪೀಠೋಪಕರಣ ಹಾಗೂ ಪಿಸಿಯೋಥೆರಪಿ ಉಪಕರಣಗಳನ್ನು ಶಾಲೆಯ ಆಡಳಿತ ಟ್ರಸ್ಟಿ ಸುರೇಶ್ ರಿಗೆ ಹಸ್ತಾಂತರಿಸಿ ಮಾತನಾಡುತ್ತಾ ರೋಟರಿ ಸಂಸ್ಥೆಯ ಈ ಕೊಡುಗೆ ಸದುಪಯೋಗವಾಗಲಿ ಎಂದು ಹಾರೈಸಿದರು.

ಈ ಕಾರ್ಯ ಕ್ರಮಕ್ಕೆ ಪಿ ಡಿ ಜಿ ಸದಾನಂದ ಚಾತ್ರ, ಪಿ ಡಿ ಜಿ ಅಭಿನಂದನ್ ಶೆಟ್ಟಿ, ಸಹಾಯಕ ಗವರ್ನರ್ ರ್ಡಾ ನಾಗಭೂಷಣ ಉಡುಪ ಶುಭ ಹಾರೈಸಿದರು . ಈ ಯೋಜನೆಯ ಪ್ರಾಥಮಿಕ ಸಂಪರ್ಕ ವ್ಯಕ್ತಿ ರೊ ಶ್ರೀಧರ್ ಶೆಟ್ಟಿ ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ನೀಡುತ್ತಾ 28.5 ಲಕ್ಷದ ಈ ಯೋಜನೆಯಡಿಯಲ್ಲಿ ಶಾಲಾವಾಹನದ ಹಸ್ತಾಂತರ ಈ ಮೊದಲೇ ಆಗಿದ್ದು ಈಗ ಯೋಜನೆ ಸಂಪೂರ್ಣಗೊಂಡಿದೆ ಎಂದರು. ರೊ ಕೃಷ್ಣ ಕಾಂಚನ್, surgeon ಆಸ್ಪತ್ರೆಯ ರೊ ಡಾ ವಿಶ್ವೇಶ್ವರ್, ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಡಾ ಉತ್ತಮ ಕುಮಾರ್ ಶೆಟ್ಟಿ ,ನಾರಾಯಣ ವಿಶೇಷ ಚೇತನ ಶಾಲೆಯ ಟ್ರಸ್ಟಿ ಗಳಾದ ಶ್ರೀಯುತ ಸುರೇಶ್ ಹಾಗೂ ವಸಂತ ಶ್ಯಾನುಭಾಗ್ ಉಪಸ್ಥಿತರಿದ್ದರು. ರೋಟರಿ ಕುಂದಾಪುರ ದಕ್ಷಿಣದ ಕಾರ್ಯದಶಿ ರೊ ಜೂಡಿತ್ ಮೆಂಡೊನ್ಸಾ ಎಲ್ಲರನ್ನು ಸ್ವಾಗತಿಸಿ, ರೊ ವಾಸುದೇವ ಕಾರಂತ ಕಾರ್ಯಕ್ರಮ ನಿರ್ವಹಿಸಿದರು.

ಜ್ಞಾನ ಸಂಪಾದನೆ ವ್ಯಕ್ತಿಗೆ ಉನ್ನತ ಸ್ಥಾನಮಾನ ತಂದುಕೊಡುತ್ತದೆ ಎಂದು ಸಾವಿತ್ರಿಬಾಯಿ ಪುಲೆ ಬದ್ದವಾಗಿ ನಂಬಿದ್ದರು : ಕೆ.ಮಮತ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ರಾಯಲ್ಪಾಡು 4: ಜ್ಞಾನ ಸಂಪಾದನೆ ವ್ಯಕ್ತಿಗೆ ಉನ್ನತ ಸ್ಥಾನಮಾನ ತಂದುಕೊಡುತ್ತದೆ ಎಂದು ಸಾವಿತ್ರಿಬಾಯಿ ಪುಲೆ ಬದ್ದವಾಗಿ ನಂಬಿದ್ದರು ಎಂದು ಸಾವಿತ್ರಿಬಾಯಿ ಪುಲೆ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಮಮತ ಹೇಳಿದರು.
ಮುದಿಮಡುಗು ಸರ್ಕಾರಿ ಪ್ರೌಡಶಾಲಾವರಣದಲ್ಲಿ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ರಾಜ್ಯ ಸಂಘ(ರಿ) ಧಾರವಾಡ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶನಿವಾರ ತಾಲೂಕು ಮಟ್ಟದ ಉತ್ತಮ ಶಿಕ್ಷಕಿಯರಿಗೆ ಸನ್ಮಾನಿಸಿ ಮಾತನಾಡಿದರು.
ದೇಶದಲ್ಲಿ ಮೊದಲನೇ ಮಹಿಳಾ ಶಿಕ್ಷಕಿಯಾಗಿ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕಾಂತ್ರಿ ಮಾಡಿದ್ದಾರೆ . ಅಲ್ಲಿನ ಅನಕ್ಷರಸ್ಥ ಮಕ್ಕಳಿಗೆ ಕಲಿಸಿ ಮುನ್ನೆಲೆಗೆ ತರುವುದೇ ಅವರ ಉದ್ದೇಶವಾಗಿತ್ತು ಎಂದರು.
ಗ್ರಾಮೀಣ ಭಾಗದಲ್ಲಿ ಶಿಕ್ಷಕಿಯರು ಸಾವಿತ್ರಿಬಾಯಿ ಪುಲೆಯ ಆದರ್ಶಗಳನ್ನು ಪಾಲಿಸುತ್ತಾ , ಅಕ್ಷರ ಎಂಬ ಅನ್ನದ ತುತ್ತನ್ನು ನೀಡುವಂತೆ ಸಲಹೆ ನೀಡಿದರು. ಇದೇ ಮೊದಲ ಬಾರಿಗೆ ಸಾವಿತ್ರಿ ಬಾಯಿ ಪುಲೆ ಸಂಘದ ವತಿಯಿಂದ ಪುರಸ್ಕಾರಗಳನ್ನು ನೀಡಲಾಗಿದ್ದು, ಮುದಿಡಮುಗು ಪ್ರೌಡಶಾಲೆ ಹಿಂದಿ ಶಿಕ್ಷಕಿ ಶಾರದಮ್ಮ, ಮೊರಂಕಿಂದಪಲ್ಲಿ ಕಿರಿಯ ಪ್ರಾಥಮಿಕ ಶಾಲೆಯ ಕೆ.ಮಂಜುಳ ಈ ಪುರಸ್ಕಾರಕ್ಕೆ ಆಯ್ಕೆಯಾದ ಇಬ್ಬರು ಶಿಕ್ಷಕಿಯರಿಗೆ ಶುಭಕೊರಿದರು.
ತಾಲೂಕು ಕೋಶಾಧ್ಯಕ್ಷೆ ಕೆ.ವಿ.ಶಾರದಮ್ಮ,ಗೌರವಾಧ್ಯಕ್ಷೆ ಆದಿಲಕ್ಷ್ಮಮ್ಮ,ತಾಲೂಕು ಅಧ್ಯಕ್ಷೆ ವಿ.ಜಯಮ್ಮ, ಪ್ರತಿಭಾ ಪರಿಷತ್ ತಾಲೂಕು ಅಧ್ಯಕ್ಷ ಕೆ.ರಾಜಣ್ಣ,ಸಂಘಟನಾ ಕಾರ್ಯದರ್ಶಿ ಕೆ.ವೆಂಕಟಶಿವ, ಮುಖ್ಯ ಶಿಕ್ಷಕ ಕೆ.ಎಸ್.ಸತ್ಯನಾರಾಯಣರೆಡ್ಡಿ, ಸಂತೋಷ್ ಶಿರಾಗಾವೆ,ಜಿ.ವಿ.ಅಶೋಕ್,ಕೆ.ಜಿ.ಪ್ರದೀಪ್,ಈರಣ್ಣಗೌಡಪಾಟೀಲ್ ,ನವೀನ್ ಇದ್ದರು.
ಪೋಟು 4 : ಮುದಿಮಡುಗು ಸರ್ಕಾರಿ ಪ್ರೌಡಶಾಲಾವರಣದಲ್ಲಿ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ರಾಜ್ಯ ಸಂಘದ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ತಾಲೂಕು ಮಟ್ಟದ ಉತ್ತಮ ಶಿಕ್ಷಕಿಯರಾಗಿ ಆಯ್ಕೆಯಾದ ಎನ್. ಶಾರದಮ್ಮ,ಕೆ.ಮಂಜುಳರವರನ್ನು ಸನ್ಮಾನಿಸಲಾಯಿತು.

ಶಿಕ್ಷಣದ ವ್ಯವಸ್ಥೆಯಲ್ಲಿ ಶಿಕ್ಷಕನ ಪಾತ್ರ ಮುಖ್ಯ ಹಾಗೂ ಶ್ರೇಷ್ಠವಾದದ್ದು

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ರಾಯಲ್ಪಾಡು 1 : ಶಿಕ್ಷಣದ ವ್ಯವಸ್ಥೆಯಲ್ಲಿ ಶಿಕ್ಷಕನ ಪಾತ್ರ ಮುಖ್ಯ ಹಾಗೂ ಶ್ರೇಷ್ಠವಾದದ್ದು, ಶಿಕ್ಷಕನು ವಿದ್ಯಾರ್ಥಿಯ ಮನಸ್ಸಿನಲ್ಲಿ ಕಲಿಕೆಯ ಉತ್ಸಾಹ, ಜ್ಞಾನದ ಹಸಿವನ್ನು ಮೂಡಿಸಿ , ಸಚ್ಚಾರಿತ್ರ್ಯವಂತರಾಗಿಸಿ , ರಾಷ್ಟ್ರನಿರ್ಮಾಣದಲ್ಲಿ ಶಿಕ್ಷಕರ ಕೊಡುಗೆ ಅಮೂಲ್ಯವಾದದು ಎಂದು ಪ್ರಾಂಶುಪಾಲ ವಿ.ವೆಂಕಟರಮಣ ತಿಳಿಸಿದರು.
ರಾಯಲ್ಪಾಡಿನ ಸರ್ಕಾರಿ ಪ್ರೌಡಶಾಲೆ , ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆಯ ಸರಳ ಸಮಾರಂಭದಲ್ಲಿ ಮಾತನಾಡಿದರು .
ಮುಖ್ಯ ಶಿಕ್ಷಕ ಪಿ.ಮಾರಣ್ಣ ಮಾತನಾಡಿ ಭವ್ಯ ಭಾರತ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅತ್ಯಂತ ಮಹತ್ವವಾದುದು. ಶಿಕ್ಷಕನು ಪ್ರತಿ ಮಗುವಿನಲ್ಲಿನ ಅಂದಕಾರವನ್ನು ಹೋಗಲಾಡಿಸಿ ಬೆಳಕಿನಡೆಗೆ ಕರೆದುಯ್ಯುವ ಕೆಲಸವನ್ನು ಮಾಡುತ್ತಿದ್ದು, ಇದರಿಂದಾಗಿ ಆಧುನಿಕ ಪ್ರಪಂಚಕ್ಕೆ ಶಿಕ್ಷಕರ ಕೂಡುಗೆ ಮಹತ್ವ ಪೂರ್ಣವಾಗಿದೆ .
ಕೊರೋನಾ ಸಂಕಷ್ಟದ ಸಂದರ್ಭದಲ್ಲೂ ಅನೇಕ ಸವಾಲುಗಳನ್ನು ಮೆಟ್ಟುನಿಂತು ನವನವೀನ ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳ ಜ್ಞಾನದೀವಿಗೆ ಯಾಗುತ್ತಿರುವ ಶಿಕ್ಷಕರ ಸೇವೆ ಅವಸ್ಮರಣೀಯ ಗ್ರಾ.ಪಂ.ಮಾಜಿ ಸದಸ್ಯ ಸಿಮೆಂಟ್‍ನಾರಾಯಣಸ್ವಾಮಿ ಎಂದರು.
ಉಪನ್ಯಾಸಕರಾದ ಎ.ಎಸ್.ರಾಮಮೂರ್ತಿ, ಎಚ್.ಆಶಾ,ಎನ್.ಶಶಿಕುಮಾರ್,ಎನ್.ರಾಮಮೂರ್ತಿ,ಶಿಕ್ಷಕರಾದ ಟಿ.ಆರ್.ನಾರಾಯಣಸ್ವಾಮಿ,ಶ್ಯಾಮಲಮ್ಮ,ಎಸ್.ಎಂ.ದಿನಕರಪ್ಪ, ಅಶೋಕ್,ಜಿ.ಎಸ್.ನಾರಾಯಣಸ್ವಾಮಿ, ಶ್ರೀಶೈಲಹಲವಾರ್,ವಿರೇಶ್‍ಕೊಮ್ಮನೂರು,ಮಾರಪ್ಪ ಇದ್ದರು.

ಜ್ಞಾನ ಮತ್ತು ಧರ್ಮಗಳಿಂದಾಗಿ ಮನುಷ್ಯ ಇತರ ಪ್ರಾಣಿಗಳಿಗಿಂತ ಶ್ರೇಷ್ಠನಾದ : ಪ್ರಾಣೇಶ ತಂತ್ರಿ

ವರದಿ : ಕೆ.ಜಿ.ವೈದ್ಯ, ಕುಂದಾಪುರ

ಕುಂದಾಪುರ : ಜ್ಞಾನ ಮತ್ತು ಧರ್ಮಗಳಿಂದಾಗಿ ಮನುಷ್ಯ ಇತರ ಪ್ರಾಣಿಗಳಿಗಿಂತ ಶ್ರೇಷ್ಠನಾದ. ಜ್ಞಾನವಿಲ್ಲದೆ ಧರ್ಮಾಚರಣೆ ಅಸಾಧ್ಯ. ಮೊದಲು ಮಗುವಿಗೆ ಜ್ಞಾನ ನೀಡುವವರು ಅದರ ತಂದೆ – ತಾಯಿ, ನಂತರ ಗುರುಗಳು. ಆದರಿಂದ ಗುರು ಅಥವಾ ಶಿಕ್ಷಕರಿಗೆ ಸಮಾಜದಲ್ಲಿ ವಿಶೇಷ ಮಾನ್ಯತೆ ಇದೆ. ಮಗುವಿಗೆ ಜ್ಞಾನದ ಬೆಳಕು ನೀಡಿ, ಮನುಷ್ಯನನ್ನಾಗಿ ಮಾಡಿ, ಎಲ್ಲ ಸಾಧನೆಗಳಿಗೂ ಕಾರಣೀಭೂತರಾಗುವ ಗುರುಗಳನ್ನು ದೇವರೆಂದೇ ಪರಿಗಣಿಸಲಾಗುತ್ತದೆ –  ಎಂದು ಪುರೋಹಿತ ನೇರಂಬಳ್ಳಿ ಪ್ರಾಣೇಶ ತಂತ್ರಿ ಹೇಳಿದರು.
  ಕೋಟೇಶ್ವರ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ ವತಿಯಿಂದ ತಿಂಗಳ ಸರಣಿ ಕಾರ್ಯಕ್ರಮದಂಗವಾಗಿ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
   ನಿವೃತ್ತ ಹಿರಿಯ ಶಿಕ್ಷಕರಾದ ಹರಿಕೃಷ್ಣ ಹಂದೆ, ಸುಬ್ರಹ್ಮಣ್ಯ ಜೋಶಿ, ನಾಗಪ್ಪಯ್ಯ ಹೆಬ್ಬಾರ್, ರಾಮಕೃಷ್ಣ ವರ್ಣ, ಗಣಪಯ್ಯ ಚಡಗ, ಇಂದ್ರಾಕ್ಷಿ ಉಡುಪ ಮತ್ತು ಶೈಲಜಾ ವೈದ್ಯರನ್ನು ಪರಿಷತ್ ವತಿಯಿಂದ ಗೌರವಿಸಲಾಯಿತು. ನಾಗಪಾತ್ರಿ ರಾಜಶೇಖರ ಹೊಳ್ಳ, ಕೋಣಿ ಕೃಷ್ಣದೇವ ಕಾರಂತ, ಸೀತಾರಾಮ ಧನ್ಯ, ವಾದಿರಾಜ ಹೆಬ್ಬಾರ್, ವೆಂಕಟೇಶಮೂರ್ತಿ ಭಟ್, ಅರುಂಧತಿ ವೈದ್ಯ ಮತ್ತು ಕಲ್ಪನಾ ಐತಾಳರು ಶಿಕ್ಷಕರನ್ನು ಗೌರವಿಸಿದರು. 
   ಸನ್ಮಾನಿತರಾದ ಹರಿಕೃಷ್ಣ ಹಂದೆ ಮತ್ತು ಇಂದ್ರಾಕ್ಷಿ ಉಡುಪ ಮಾತನಾಡಿ, ಶಿಕ್ಷಕರನ್ನು ಗೌರವಿಸುವುದು ಭಾರತೀಯ ಸಂಸ್ಕೃತಿ. ಶಿಕ್ಷಕರು ಸೇವೆಯಿಂದ ನಿವೃತ್ತರಾದಮೇಲೂ ಅವರನ್ನು ಗುರುತಿಸಿ ಗೌರವಿಸುವುದರಿಂದ ಅವರಲ್ಲಿ ಇನ್ನಷ್ಟು ಜೀವನೋತ್ಸಾಹ ತುಂಬುತ್ತದೆ ಎಂದು ಹೇಳಿ ಪರಿಷತ್ ಕಾರ್ಯಗಳನ್ನು ಶ್ಲಾಘಿಸಿದರು. ಸ್ಥಳೀಯ ಸುಬ್ರಾಯ ಉಡುಪ ಕುಟುಂಬದವರಿಗೆ ಪರಿಷತ್ ವತಿಯಿಂದ ವೈದ್ಯಕೀಯ ನೆರವು ನೀಡಲಾಯಿತು. ವಲಯಾಧ್ಯಕ್ಷ ಬಿ. ಎನ್. ಪ್ರಕಾಶ್ ಉಪಾಧ್ಯ ಸಭಾಧ್ಯಕ್ಷತೆ ವಹಿಸಿದ್ದರು. ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ನಾಗೇಂದ್ರ ಬಿಳಿಯ, ರಾಮಚಂದ್ರ ವರ್ಣ, ರವೀಂದ್ರ ದೊಡ್ಮನೆ ಉಪಸ್ಥಿತರಿದ್ದರು. ಅಶೋಕ ಹೊಳ್ಳ ಮತ್ತು ನಾಗರತ್ನ ಉಡುಪ ಸನ್ಮಾನಿತರ ಪರಿಚಯ ನೀಡಿದರು. ಮಹಿಳಾ ವೇದಿಕೆ ಅಧ್ಯಕ್ಷೆ ವಾಣಿಶ್ರೀ ಹೆಬ್ಬಾರ್ ಸ್ವಾಗತಿಸಿದರು. ಖಜಾಂಚಿ ನಾಗೇಶ್ ಪಾಟಾಳಿ ಕಾರ್ಯಕ್ರಮ ನಿರೂಪಿಸಿ, ಕೌಶಿಕ್ ವಂದಿಸಿದರು.

ಶಿಕ್ಷಕಾಂಚ್ಯಾ ದಿಸಾಚೆ ಆಚರಣ್ – ಕೊಂಕಣಿ ಶಿಕ್ಷಕಾಂಚಿ ಕವಿಗೋಶ್ಟಿ

JANANUDI.COM NETWORK

ಸಪ್ತೆಂಬರ್ ೫ ತಾರಿಕೆರ್ ’ಶಿಕ್ಷಕಾಂಚೊ ದೀಸ್’ ಆಚರಣ್ ಕರ್ಚ್ಯಾ ದಿಸಾ, ಆಶಾವಾದಿ ಪ್ರಕಾಶನಾನ್ ’ಅಖಿಲ್ ಭಾರತೀಯ್ ಮಟ್ಟಾಚ್ಯಾ ಕೊಂಕಣಿ ಶಿಕ್ಷಕ್ ಕವಿಂಚಿ ಕವಿಗೋಶ್ಟಿ’ ಡಿಜಿಟಲ್ ಮಾಧ್ಯಮಾಚೆರ್ ಚಲಯ್ಲಿ. ಗೊಂಯ್, ಕರ್ನಾಟಕ್, ಮಹಾರಾಶ್ಟ್ರ್ ತಶೆಂಚ್ ಕೇರಳಾಥಾವ್ನ್ ವೀಸ್ ಕವಿಂನಿ ಹ್ಯಾ ಕವಿಗೋಶ್ಟಿಂತ್ ವಾಂಟೊ ಘೆತ್ಲೊ. ವಲ್ಲಿ ಕ್ವಾಡ್ರಸಾನ್ ಚಲವ್ನ್ ವೆಲ್ಲ್ಯಾ ಹ್ಯಾ ಕವಿಗೋಶ್ಟಿಂತ್, ಕೊಂಕಣಿ ಪರಿಶದ್ ಕುಮಟಾಚೊ ಅಧ್ಯಕ್ಷ್ ಬಾಬ್ ಅರುಣ್ ಉಭಯಕರ್ ಹಾಣಿಂ ಸ್ವಾಗತ್ ಗೀತ್ ’ಜಯ ಕೊಂಕಣಿ’ ಗಾಯ್ತಚ್, ದೆ|ಬೆನ್ನಾ ರುಜಾಯ್ ತಶೆಂಚ್ ದೆ|ಪಾವ್ಲ್ ಮೊರಾಸ್ ಹಾಂಚೆಪಾಸತ್ ಎಕ್ ಮುನುಟಾಂಚೆಂ ಮವ್ನ್ ಮಾಗ್ಣೆಂ ಕರ್ತಚ್; ದೊ|ಪ್ರಕಾಶ್ ವಜ್ರೀಕರ್ (ಪ್ರಾಧ್ಯಾಪಕ್) ಹಾಣಿಂ ಸುರ್ವಿಲಿಂ ಉತ್ರಾಂ ಉಲವ್ನ್ ’ಆಯ್ಚ್ಯಾ ಕಾಳಾರ್ ಶಿಕ್ಷಕಾಂನಿ ಡಿಜಿಟಲ್ ಮಾಧ್ಯಮ್ ಕಶೆಂ ಸತ್ ಆನಿ ನಯ್ತಿಕ್ ದಿಶೆನ್ ಗಳ್ಸುನ್ ಬರಿ ಸಮಾಜ್ ಮಾಂಡುನ್ ಹಾಡ್ಚೆದಿಶೆನ್ ವಾವ್ರ್ ಕರ್ಚಿ ಗರ್ಜ್’ ವಿಶ್ಯಾಂತ್ ಉಲಯ್ಲೊ. ಬಾಬ್ ಪ್ರಕಾಶ್ ಪಡ್ಗಾಂವ್ಕರ್ ಹಾಣಿಂ ಕವಿಗೋಶ್ಟಿಚಿ ಅಖೇರ್ಚಿಂ ಉತ್ರಾಂ ಉಚಾರ್ಲಿಂ.

ಪ್ರಕಾಶ್ ದ. ನಾಯ್ಕ್ (ಗೊಂಯ್), ಫ್ಲೇವಿಯಾ ಆಲ್ಬುಕರ್ಕ್ (ಪುತ್ತೂರ್), ಅರುಣ್ ಉಭಯಕರ್ (ಕುಮಟಾ), ರಾಜಶ್ರೀ ಸೈಲ್ (ಗೊಂಯ್), ಶೈಲೇಂದ್ರ ಮೆಹ್ತಾ (ಮುಂಬಯ್), ಗ್ಯಾನೇಶ್ವರ್ ಕಮಲಾಕಾಂತ್ ತಾರಿ (ಗೊಂಯ್), ಲಿನೆಟ್ ಡಿ’ಸೋಜ್ (ಮುಂಬಯ್), ಪ್ರೇಮ್ ಮೊರಾಸ್ (ಮಂಗ್ಳುರ್), ವೈಷ್ಣವಿ ಪ್ರಿತೇಶ್ ರಾಯ್ಕರ್ (ಗೊಂಯ್), ಜೋನ್ ಸುಂಟಿಕೊಪ್ಪ (ಕೂರ್ಗ್), ನ್ಯಾನ್ಸಿ ಫೆರ್ನಾಂಡಿಸ್ (ದಾವಣಗೆರೆ), ಮನೋಜ್ ಹಳರ್ನೆಕರ್ (ಗೊಂಯ್), ಎಲಿಜಾ ಮಾರ್ಟಿಸ್ (ಶಂಕರಪುರ), ಉರ್ಬನ್ ಡಿ’ಸೋಜ್ (ಬೆಂಗ್ಳುರ್), ದೊ|ಸುವರ್ಣ ಗಾಡ್ (ಹೊನ್ನಾವರ್), ದೊ|ಅರವಿಂದ ಶ್ಯಾನ್‌ಭಾಗ್ (ಕುಮಟಾ), ದೊ|ಡಿಂಪಲ್ ಫೆರ್ನಾಂಡಿಸ್ (ಪುತ್ತೂರ್), ಸ್ಮಿತಾ ಶೆಣಯ್ (ಮಂಗ್ಳುರ್) ಹಾಣಿಂ ಆಪ್ಲಿಂ ಕವಿತಾ ಸಾದರ್ ಕೆಲಿಂ.

ಗೊಂಯ್ ವಿಶ್ವ್‌ವಿಧ್ಯಾಲಯಾಚ್ಯಾ ಕೊಂಕಣಿ ವಿಭಾಗಾಚಿ ಆಧ್ಲಿ ಮುಖೇಸ್ತ್ ರಿಟಾಯರ್ಡ್ ಡೀನ್ ದೊ|ಚಂದ್ರಲೇಖ ಡಿ’ಸೋಜ್, ಅರ್ಥ ಪ್ರಕಾಶನಾಚಿಂ ಗವ್ರೀಶ್ ಆನಿ ಯೋಗಿತಾ ವರ್ಣೇಕರ್, ಕೊಚ್ಚಿನ್ ಥಾವ್ನ್ ಆರ್.ಎಸ್.ಭಾಸ್ಕರ್, ಮ್ಯಾಂಚೆಸ್ಟರ್ ಥಾವ್ನ್ ಲಾರೆನ್ಸ್ ವಿನೋದ್ ಬಾರ್ಬೋಜ್ ಅಶೆಂ ವೆವೆಗಳ್ಯಾ ಪ್ರಾಂತ್ಯಾಥಾವ್ನ್ ಹಾಜರ್ ಆಸ್ಲಿಂ.

ಶ್ರೀನಿವಾಸಪುರ: ಗುರು ಶಿಷ್ಯ ಸಂಬಂಧ ಮುಂದುವರಿಯಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಗುರು ಶಿಷ್ಯ ಸಂಬಂಧ ಮುಂದುವರಿಯಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಡಾ. ವೈ.ಎ.ನಾರಾಯಣಸ್ವಾಮಿ ಹೇಳಿದರು.
  ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ  ಶನಿವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಕ ಸಮುದಾಯ ಸಮಾಜಕ್ಕೆ ಆದರ್ಶಪ್ರಾಯವಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.    ಜ್ಞಾನಾರ್ಜನೆಗೆ ಶಿಕ್ಷಕರು ಪ್ರೇರಣ ಶಕ್ತಿಯಾಗಬೇಕು. ಎಲ್ಲ ಶಿಕ್ಷಕರಿಗೂ ಸಮಾನ ಗೌರವ ಪ್ರಾಪ್ತವಾಗಬೇಕು. ಶಿಕ್ಷಕರನ್ನು ವರ್ಗೀಕರಣ ಮಾಡಬಾರದು. ಶಿಕ್ಷಕರ ನಡೆ ನುಡಿ ಸಮಾಜವನ್ನು ತಿದ್ದುವಂತಿರಬೇಕು. ಈ ದೃಷ್ಟಿಯಿಂದಲೇ ಕೇಂದ್ರ ಸರ್ಕಾರ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಇದು ಬದಲಾದ ಪರಿಸ್ಥತಿಯಲ್ಲಿ ಸ್ವಾಗತಾರ್ಹ ಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟರು.  ಜಿಲ್ಲಾ ಪಂಚಾಯಿತಿ ಸದಸ್ಯ ತೂಪಲ್ಲಿ ಆರ್‌.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್‌.ಆನಂದ್‌  ಮಾತನಾಡಿದರು.  ಸಮಾರಂಭದಲ್ಲಿ  ನಿವೃತ್ತರಾದ  ಶಿಕ್ಷಕರು ಹಾಗೂ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು.  ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ಕೆ.ಎನ್‌.ವೇಣುಗೊಪಾಲ್‌, ಮಖಂಡ ಜಯರಾಮರೆಡ್ಡಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಜಯರಾಂ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ದಿಂಬಾಲ ಅಶೋಕ್‌, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜುನಾಥರೆಡ್ಡಿ, ತಾಲ್ಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಂ.ನಾಗರಾಜ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎನ್‌.ಗೋವಿಂದರೆಡ್ಡಿ, ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಎಚ್‌.ಸಂಪತ್‌ ಕುಮಾರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಅಧಿಕಾರಿಗಳಾದ ವಸಂತ, ಶ್ರೀನಿವಾಸ್‌, ಸುಬ್ರಮಣಿ, ಸುಲೋಚನ, ಬೈರೇಗೌಡ ಇದ್ದರು.

ಗೌನಿಪಲ್ಲಿ – ರಾಯಲ್ಪಾಡು ರಸ್ತೆಯ ಪುಟ್ ಪಾತ್ ಪೆಟ್ಟಿಗೆ ಅಂಗಡಿಗಳು, ಮುಂಬಾಗ ಛಾವಣಿಗಳನ್ನು ತೆರವು ಕಾರ್ಯಾಚರಣೆ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ರಾಯಲ್ಪಾಡು 2 : ಗೌನಿಪಲ್ಲಿ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಗೌನಿಪಲ್ಲಿ – ರಾಯಲ್ಪಾಡು ರಸ್ತೆ ಎರಡು ಬದಿಯಲ್ಲಿರುವ ಪುಟ್ ಪಾತ್ ಪೆಟ್ಟಿಗೆ ಅಂಗಡಿಗಳನ್ನು ಹಾಗೂ ಮುಂಬಾಗ ಛಾವಣಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಶನಿವಾರ ಯಶ್ವಸಿಯಾಗಿ ನಡೆಯಿತು.
ಈ ಪುಟ್‍ಪಾತ್ ಅಂಗಡಿಗಳನ್ನು ತೆರವುಗೊಳಿಸಲು ಹಲವು ವರ್ಷಗಳಿಂದ ತಕರಾರು ನಡೆಯುತ್ತಿತ್ತು ಇದರಲ್ಲಿ ರಾಜಕೀಯ ಹಸ್ತಕ್ಷೇಪವು ಬಳಕೆ ಮಾಡಿಕೊಂಡು ಕಾಲಕಳೆಯುತ್ತಿದ್ದರು. ಇದರಿಂದ ಸಾರ್ವಜನಿಕರು ಓಡಾಡಲು ಕಿರಿಕರಿ ಉಂಟು ಮಾಡಿದೆ ಎಂದು ದೂರುಗಳು ಗ್ರಾಮಪಂಚಾಯಿತಿ , ಲೋಕೋಪಯೋಗಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ದೂರುಗಳು ನೀಡಲಾಗಿತ್ತು.
ಇದರ ಹಿನ್ನಲೆಯಲ್ಲಿ ಅಂಗಡಿ ಮಾಲೀಕರಿಗೆ ಹಲವು ಬಾರಿ ನೋಟಿಸ್ ನೀಡಿದ್ದರೂ ತೆರವುಗೊಳಿಸದ ಕಾರಣ ಶನಿವಾರ ಬೆಳ್ಳಂಬೆಳಗ್ಗೆ ಗ್ರಾಮಪಂಚಾಯಿತಿ , ಲೋಕೋಪಯೋಗಿ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಎರಡು ಜೆಸಿಬಿ ಗಳನ್ನು ಕರೆ ತಂದು ಪುಟ್‍ಪಾತ್ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿತು.
ಲೋಕೋಪಯೋಗಿ ಇಲಾಖೆ ಎಇಇ ಎಲ್.ಕೆ.ಶ್ರೀನಿವಾಸಮೂರ್ತಿ,ಪಿಡಿಒ ಗೌಸ್‍ಸಾಬ್,ಜೆಇ ಎ.ಕೆ.ನಾಗರಾಜ್,ಗೋವಿಂದಪ್ಪ,ಪಿಎಸ್‍ಐ ವರಲಕ್ಷ್ಮಿ ಇತರರದಿದ್ದರು.

ಕುಂದಾಪುರ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ ಬಸ್ರೂರು ಶಾಖೆಯ ಸ್ವಂತ ಕಟ್ಟಡಕ್ಕೆ ಶಿಲಾನ್ಯಾಸ

JANANUDI.COM NETWORK

ಕುಂದಾಪುರ,ಸೆ.6:ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಬಸ್ರೂರು ಚರ್ಚಿನ ಧರ್ಮಗುರು ವಂ|ಚಾಲ್ರ್ಸ್ ನೊರೊನ್ಹಾ ಇವರುಗಳು ಕುಂದಾಪುರ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ ಬಸ್ರೂರು ಶಾಖೆಯ ಸ್ವಂತ ಕಟ್ಟಡಕ್ಕೆ ಆಶಿರ್ವಚನಗೈದು ಶಿಲಾನ್ಯಾಸ ನೆರವೇರಿಸಿದರು. ಈಸಂದರ್ಭದಲ್ಲಿ ಅವರುಗಳು ಶುಭ ಹಾರೈಸಿದರು. ಜೊತೆಯಲ್ಲಿ ಬ್ರದರ್ ದಿಯೊಕೋನ್ ಜೊಯ್ಸಟನ್ ಪಿಂಟೊ ಹಾಜರಿದ್ದರು.
ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ ಅಧ್ಯಕ್ಷರಾದ ಜಾನ್ಸನ್ ಡಿ ಆಲ್ಮೆಡಾ, ಉಪಾಧ್ಯಕ್ಷ ಕಿರಣ್ ಲೋಬೊ, ಬಸ್ರೂರು ಶಾಖೆಯ ಉಸ್ತುವಾರಿ, ಸೊಸೈಟಿ ನಿರ್ದೇಶಕ ಫಿಲಿಪ್ ಡಿಕೋಸ್ತಾ, ಶಿಲಾನ್ಯಸ ಗೈದರು. ಈ ಸಂದರ್ಭದಲ್ಲಿ ಸೊಸೈಟಿ ನಿರ್ದೇಶಕರಾದ ವಿನೋದ್ ಕ್ರಾಸ್ಟೊ, ವಿಲ್ಫ್ರೆಡ್ ಮಿನೇಜೆಸ್,ಪ್ರಕಾಶ್ ಲೋಬೊ, ಬ್ಯಾಪ್ಟಿಸ್ಟ್ ಡಾಯಸ್, ಸೊಸೈಟಿಯ ಪ್ರಧಾನ ನಿರ್ವಹಣ ವ್ಯವಸ್ಥಾಪಕ ಪಾಸ್ಕಲ್ ಡಿಸೋಜಾ, ಬಸ್ರೂರು ಚರ್ಚಿನ ಉಪಾಧ್ಯಕ್ಷ ಫ್ಲೈವನ್ ಡಿಸೋಜಾ, ಕುಂದಾಪುರ ವಲಯ ಕಥೊಲಿಕ್ ಸಭಾದ ಅಧ್ಯಕ್ಷೆ ಮೇಬಲ್ ಡಿಸೋಜಾ, ಎಮ್.ಸಿ.ಸಿ.ಬ್ಯಾಂಕಿನ ನಿರ್ದೇಶಕ ಕಿರಣ್ ಕ್ರಾಸ್ತಾ, ರೋಜರಿ ಸೊಸೈಟಿ ಶಾಖಾ ವ್ಯವಸ್ಥಾಪಕರು ಮತ್ತು ಸೊಸೈಟಿ ಸಿಬಂದಿ ವರ್ಗದವರು, ಕಥೊಲಿಕ್ ಸಭಾ ಪದಾಧಿಕಾರಿಗಳು ಮತ್ತು ಇನ್ನಿತರರು ಉಪಸ್ತಿತರಿದ್ದರು. ಸೊಸೈಟಿ ನಿರ್ದೇಶಕ ಜೇಕಬ್ ಡಿಸೋಜಾ ಪ್ರಸ್ತಾವಿಸಿದರು.

ಶ್ರೀನಿವಾಸಪುರ: ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ಪರಿಹಾರ ಧನವನ್ನು ಪಡೆಯುವ ಫಲಾನುಭವಿಗಳು ಉತ್ಪಾದನಾ ಚಟುವಟಿಕೆಯಲ್ಲಿ ತೊಡಗಿಸಬೇಕು.

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ಪರಿಹಾರ ಧನವನ್ನು ಪಡೆಯುವ ಫಲಾನುಭವಿಗಳು ಉತ್ಪಾದನಾ ಚಟುವಟಿಕೆಯಲ್ಲಿ ತೊಡಗಿಸಬೇಕು. ಎಂದು ತಹಶೀಲ್ದಾರ್ ಎಸ್‌.ಎಂ.ಶ್ರೀನಿವಾಸ್‌ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಾಗೂ ಸ್ಕೊಡ್‌ವೆಸ್‌ ಸಂಸ್ಥೆ ವತಿಯಿಂದ ಹೆದ್ದಾರಿ ಬದಿ ವ್ಯಾಪಾರಿಗಳಿಗಾಗಿ ಏರ್ಪಡಿಸಿದ್ದ ಆದಾಯ ಉತ್ಪನ್ನ ಚಟುವಟಿಕೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಚಿಂತಾಮಣಿಯಿಂದ ಆಂಧ್ರಪ್ರದೇಶದ ಗಡಿಯ ವರೆಗಿನ ಅಂತರ ರಾಜ್ಯ ಹೆದ್ದಾರಿ ಬದಿಯಲ್ಲಿ ವ್ಯಾಪಾರ ಚಟುವಟಿಕೆ ನಡೆಸುತ್ತಿದ್ದ 143 ಫಲಾನುಭವಿಗಳಿಗೆ ತಲಾ ರೂ.1.86 ಲಕ್ಷ ಪರಿಹಾರ ಧನ ನೀಡಲಾಗುವುದು ಎಂದು ಹೇಳಿದರು.
ಫಲಾನುಭವಿಗಳಿಗೆ ಆದಾಯ ಉತ್ಪನ್ನ ಚಟುವಟಿಕೆ ಕೈಗೊಳ್ಳುವ ಬಗ್ಗೆ ತರಬೇತಿ ನೀಡಲಾಗುವುದು. ಸಂಪನ್ಮೂಲ ವ್ಯಕ್ತಿಗಳು ನೀಡುವ ಸಲಹೆ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ಹೇಳಿದರು.
ಕೆನರಾ ಬ್ಯಾಂಕ್‌ ಗ್ರಾಮೀಣ ಕೈಗಾರಿಕಾ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ರಮಾಕಾಂತ್‌ ಯಾದವ್‌ ಫಲಾನುಭವಿಗಳಿಗೆ ಆದಾಯ ಉತ್ಪನ್ನ ಚಟುವಟಿಕೆ ಕೈಗೊಳ್ಳುವ ಕುರಿತು ತರಬೇತಿ ನೀಡಿದರು.
ಸಂಯೋಜಕ ಕೆ.ಈರಪ್ಪ, ನಿವೃತ್ತ ತಹಶೀಲ್ದಾರ್‌ ಶ್ರೀನಿವಾಸಶೆಟ್ಟಿ, ಜಯರಾಂ, ರವಿಕುಮಾರ್‌ ಇದ್ದರು.