HOLY ROSARY CHURCH, KUNDAPUR – 450 th JUBILEE SOUVENIR 2021

ಶ್ರೀನಿವಾಸಪುರ: ಪಟ್ಟಣದ ತಾಲ್ಲೂಕು ಕಚೇರಿ ಎದುರು ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರು ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಗುರುವಾರ ಧರಣಿ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪಟ್ಟಣದ ತಾಲ್ಲೂಕು ಕಚೇರಿ ಎದುರು ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರು ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಗುರುವಾರ ಧರಣಿ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
  ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್‌.ಸೂರ್ಯನಾರಾಯಣ ಧರಣಿ ನಿರತ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರು, ಕಾರ್ಮಿಕರು ಮತ್ತು ದಲಿತರಿಗೆ ಸಂಬಂಧಿಸಿದ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದೆ ಎಂದು ಹೇಳಿದರು.  ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಾತಕೋಟ ನವೀನ್‌ ಕುಮಾರ್‌ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಸಮಾಜದ ಎಲ್ಲ ವರ್ಗದ ಜನರೂ ಸಾಂಘಿಕ ಪ್ರತಿಭಟನೆ ನಡೆಸಬೇಕು. ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳು ಜಾರಿಗೆ ತರುವುದನ್ನು ತಡೆಯಬೇಕು ಎಂದು ಹೇಳಿದರು.  ನಿರಂತರವಾಗಿ ಪ್ರತಿಭಟನೆ ಮಾಡದ ಹೊರತು ಸರ್ಕಾರಗಳು ಗಮನ ಹರಿಸುವುದಿಲ್ಲ. ಸರ್ಕಾರಗಳ ಕಣ್ಣು ತೆರೆಸುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು  ಎಂದು ಹೇಳಿದರು.  ಅಂಗನವಾಡಿ, ಗ್ರಾಮ ಪಂಚಾಯಿತಿ, ಅಕ್ಷರ ದಾಸೋಹ, ಕಟ್ಟಡ, ಹಮಾಲಿ ಮತ್ತಿತರ ಸಂಘ ಸಂಸ್ಥೆಗಳ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಉಪ ತಹಶೀಲ್ದಾರ್‌ಗೆ ನೀಡಲಾಯಿತು.

ಕೊರೊನಾಚಿ ಶಿಮ್ಟಿ (ಕವಿತಾ)

JANANUDI.COM NETWORK

ಕೊರೊನಾ ತುಂ ಕೊಣಾಯ್ಕಿ ಭಿಯೆನಾ
ರಂಗ್ ನಾ ಆಂಗ್ ನಾ, ಭಿರ್ಮೊತ್ ನಾ ತುಕಾ ಕೊರೊನಾ
ಕಿತ್ಯಾಕ್ ತುಂ ಮನ್ಸ್ಯಾ ಥಾವ್ನ್ ಸೊಡ್ನ್ ವಚನಾ
ವಚ್ ವಚ್‍ತುಂ ಪಯ್ಸ್‍ಕೊವಿಡ್ ನೈಟಿನಾ

ಮೀಟಿಂಗಾ, ಮಿಲಾನಾಂ ನಾಂತ್ ಜಾಲ್ಯಾಂತ್ ಸಗ್ಳ್ಯಾನಿಂ
ಮಾರ್ಕಿಟ್ ಸರ್ಕಿಟಾಂ ಉಣಿಂಕೆಲ್ಲ್ಯಾಂತ್ ಲೊಕಾನಿಂ
ವಾಡ್ಯಾಜಮಾತಿಕ್ ಯೆಂವ್ಕ್ ನಾತಲ್ಲಿ ತಿಳ್ತಾತ್ ಭಾಯ್ರ್ ವಚುಂಕ್
ಗಾಯಾನಾಕ್ ತಾಳೊ ನಾತ್‍ಲ್ಲಿ ಗಾಯ್ತಾತ್ ಮಧುರ್ ತಾಳ್ಯಾನ್

ಖೊಟೆಪಣ್, ಖಾಲ್ತೆಪಣ್ ಬರೆಪಣ್ ಘೆವ್ಯಾಂ ವಳ್ಕೊನ್
ಆಧಾರ್ಸುನ್ ಫಾವೊತ್ಯೊ ಭಗ್ಸಾಣ್ಯಾಚೊ ವಾಟೊ ಗಳ್ಸುನ್
ಜಿಣಿ ಬದ್ಲುನ್ ಸೊಮ್ಯಾ ಸಂಗಿಂ ನವಿ ಜಿಣಿಜಿಯೆವ್ಯಾಂ
ಮಾಗ್ಣ್ಯಾಚ್ಯಾ ಹಾತೆರಾಂ ದ್ವಾರಿಂ ಕೊರೊನಾಕ್ ಧಾಂವ್ಡೊಯಾಂ


*ಸಿ. ಸಿಲ್ವಿಯಾ ಸುವಾರಿಸ್ ಎ.ಸಿ. ಕುಂದಾಪುರ್

ಬೀಜಾಡಿ: ಕೃಷಿ ಮಾಹಿತಿ ಕಾರ್ಯಗಾರ ಉದ್ಘಾಟನೆ

JANANUDI.COM NETWORK

ಬೀಜಾಡಿ: ಈ ಬಾರಿ ಕೊರೊನಾ ರೈತರ ಸಂಕಷ್ಟವನ್ನು ಹೆಚ್ಚಿಸಿದ್ದು, ಕೃಷಿ ಚಟುವಟಿಕೆ ಮಾತ್ರ ಬಹಳ ಉತ್ಸುಕತೆಯಿಂದಲೇ ಆರಂಭಗೊಂಡಿದೆ. ಈ ಸಂದರ್ಭದಲ್ಲಿ ಯುವ ಜನರು ಕೃಷಿ ಚಟುವಟಿಕೆಯಲ್ಲಿ ಹೆಚ್ಚು ತೊಡಗಿಕೊಂಡಿರುವುದು ಒಳ್ಳೆಯ ಬೆಳವಣೆಗೆ ಎಂದು ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್‍ನ ಮುಖ್ಯ ವ್ಯವಸ್ಥಾಪಕ ಮನೋಹರ್ ಕಟ್ಗೇರಿ ಹೇಳಿದರು.
ಅವರು ಗುರುವಾರ ಬೀಜಾಡಿ ಮಿತ್ರಸೌಧದಲ್ಲಿ ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್, ಬೀಜಾಡಿ-ಗೋಪಾಡಿ ಮಿತ್ರ ಸಂಗಮ, ರೋಟರಿ ಸಮುದಾಯ ದಳ ಬೀಜಾಡಿ ಇವರ ಆಶ್ರಯದಲ್ಲಿ ನಡೆದ ಕೃಷಿ ಮಾಹಿತಿ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಕೋಟೇಶ್ವರ ವ್ಯವಸಾಯಕ ಸೇವಾ ಸಹಕಾರಿ ಸಂಘದ ನಿರ್ದೇಶಕ, ಪ್ರಗತಿಪರ ಕೃಷಿಕ ಚಂದ್ರಶೇಖರ ಶೆಟ್ಟಿ ಕಾಳಾವರ ಕಾರ್ಯಗಾರ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಬೀಜಾಡಿ ಮಿತ್ರ ಸಂಗಮದ ಅಧ್ಯಕ್ಷ ಮಂಜುನಾಥ ವಹಿಸಿದ್ದರು.
ಕೋಟ ರೈತಧ್ವನಿ ಸಂಘಟನೆಯ ಅಧ್ಯಕ್ಷ ಜಯರಾಮ ಶೆಟ್ಟಿ ಭತ್ತ ಕಟಾವಿಗೂ ಮುನ್ನ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾತನಾಡಿದರು. ಕುಂಭಾಶಿಯ ತಾರಸಿ ಕೃಷಿ ಪರಿಣಿತೆ ಪ್ರೇಮ ಗಣೇಶ ಪೂಜಾರಿ ವೈಜ್ಞಾನಿಕ ತಾರಸಿ ಕೈತೋಟ ರಚನೆಯ ಬಗ್ಗೆ ಮಾಹಿತಿ ನೀಡಿದರು.
ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್‍ನ ಯೋಜನಾ ವ್ಯವಸ್ಥಾಪಕ ಅರುಣ್ ಪಟವರ್ಧನ್ ಸಮರೋಪ ಭಾಷಣ ಮಾಡಿದರು. ವೇದಿಕೆಯಲ್ಲಿ ಮಿತ್ರ ಸಂಗಮದ ಗೌರವಾಧ್ಯಕ್ಷ ಬಿ.ವಾದಿರಾಜ್ ಹೆಬ್ಬಾರ್, ಕಾರ್ಯದರ್ಶಿ ಚಂದ್ರ ಬಿ.ಎನ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬೆಂಗಳೂರು ಸೆಲ್ಕೋ ಫೌಂಡೇಶನ್ ವತಿಯಿಂದ ತರಕಾರಿ ಬೀಜವನ್ನು ವಿತರಿಸಲಾಯಿತು.
ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್‍ನ ಕಾರ್ಯಕ್ರಮ ಸಂಯೋಜಕ ರಾಘವೇಂದ್ರ ಆಚಾರ್ಯ ಸ್ವಾಗತಿಸಿದರು. ಬೀಜಾಡಿ ರೋಟರಿ ಸಮುದಾಯ ದಳದ ಅಧ್ಯಕ್ಷ ಗಿರೀಶ್ ಕೆ.ಎಸ್ ವಂದಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

ಶ್ರೀನಿವಾಸಪುರ, ಪೌರ ಕಾರ್ಮಿಕರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು: ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ಪೌರ ಕಾರ್ಮಿಕರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌ ಹೇಳಿದರು.  ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಳ್ಳಲು ತಲಾ ರೂ.7.5 ಲಕ್ಷ ಆರ್ಥಿಕ ನೆರವು ನೀಡಲಾಗುವುದು. ಪೌರ ಕಾರ್ಮಿಕರಿಗೆ ಉಚಿತ ನಿವೇಶನ ನೀಡಲು ಅಗತ್ಯವಾದ ಜಮೀನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳನ್ನು ಕೋರಲಾಗಿದೆ ಎಂದು ಹೇಳಿದರು.  ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್‌.ವೇಣುಗೋಪಾಲ್‌ ಮಾತನಾಡಿ, ಪೌರ ಕಾರ್ಮಿಕರ ಸೇವೆ ಅಮೂಲ್ಯವಾದುದು. ಕೊರೊನಾ ಸಂದರ್ಭದಲ್ಲಿ ತಮ್ಮ ಪ್ರಾಣದ ಮೇಲಿನ ಹಂಗು ತೊರೆದು ಸಾರ್ವಜನಿಕರ ಹಿತಕ್ಕಾಗಿ ದುಡಿಯುತ್ತಿದ್ದಾರೆ. ಸಮಾಜದ ಎಲ್ಲ ವರ್ಗದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಶ್ರಮ ಗೌರವಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು. ರೋಟರಿ ಸಂಸ್ಥೆ ಅಧ್ಯಕ್ಷ ಶಿವಮೂರ್ತಿ  ಹಿರಿಯ ಪೌರ ಕಾರ್ಮಿಕರನ್ನು ಸನ್ಮಾನಿಸಿದರು.  ಪುರಸಭೆ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್‌, ಪರಿಸರ ಅಭಿಯಂತರ ಶೇಖರರೆಡ್ಡಿ, ಕಂದಾಯ ನಿರೀಕ್ಷ ಶಂಕರ್‌, ನಾಗೇಶ್‌, ಸದಸ್ಯರಾದ ಅಪ್ಪೂರು ರಾಜು, ಬಿ.ಎಲ್‌.ಭಾಸ್ಕರ್‌, ಆನಂದ್‌, ಶ್ರೀನಿವಾಸ್‌, ನಾಗರಾಜ್‌, ಶಾರದ, ಸೀತಾರಾಮರೆಡ್ಡಿ, ರಾಜೇಶ್ವರಿ ಇದ್ದರು.

ಶ್ರೀನಿವಾಸಪುರ: ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎನ್‌.ಅರುಣ್‌ ಪ್ರಸಾದ್‌ ಭೇಟಿ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ  ಜಿಲ್ಲಾ ಪಂಚಾಯಿತಿ ಸಾಮಾಜಿಕ  ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎನ್‌.ಅರುಣ್‌ ಪ್ರಸಾದ್‌ ಭೇಟಿ ನೀಡಿ ಪರಿಶೀಲಿಸಿದರು.  ಕಡತಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ,  ಅಧಿಕಾರಿಗಳು ಟೆಂಡರ್‌ ಕರೆಯದೆ ಕಾಮಗಾರಿ ನಿರ್ವಹಿಸುವುದರ ಮೂಲಕ ಕೆಪಿಟಿಪಿ ಕಾಯ್ದೆ ಉಲಂಘಿಸಿದ್ದಾರೆ. ಕಾಮಗಾರಿ ಗುತ್ತಿಗೆ ನೀಡುವ ಮುನ್ನ ವಾರ್ತಾ ಪ್ರಚಾರ ಇಲಾಖೆ ಮೂಲಕ ಪತ್ರಿಕೆಗಳಲ್ಲಿ ಟೆಂಡರ್‌ ಕರೆದು, ಕಡಿಮೆ ಹಣಕ್ಕೆ ಕಾಮಗಾರಿ ನಿರ್ವಹಿಸುವ ವ್ಯಕ್ತಿಗಳಿಗೆ ಕಾಮಗಾರಿ ವಹಿಸಿಕೊಡುವುದು ನಿಯಮ. ಆದರೆ ಆ ನಿಯಮವನ್ನು ಗಾಳಿಗೆ ತೂರಲಾಗಿದೆ ಎಂದು ಹೇಳಿದರು.  ಎಸ್ಸಿ, ಎಸ್‌ಟಿ ಮೀಸಲಾತಿಗೆ ಮಾನ್ಯತೆ ನೀಡದೆ ಕಾಮಗಾರಿಗಳ ಬಿಲ್‌ ಪಾಸ್‌ ಮಾಡಲಾಗಿದೆ. ಅಧಿಕಾರಿಗಳು ಖರ್ಚು ವೆಚ್ಚದ ಮಾಹಿತಿ ನೀಡಲು ವಿಫಲರಾಗಿದ್ದಾರೆ.  ಎಂದು ಹೇಳಿದರು.  2018–19 ಹಾಗೂ 2019–20ನೇ ಸಾಲಿಗೆ ಸಂಬಂಧಿಸಿದಂತೆ ರಿಜಿಸ್ಪರ್‌ನಲ್ಲಿ ಸಹಾಯಕ ನಿರ್ದೇಶಕರ ಸಹಿ ಇಲ್ಲದೆ, ಸುಮಾರು ರೂ. 2 ಕೋಟಿ ಬಿಲ್‌ ಪಾಸ್‌ ಮಾಡಲಾಗಿದೆ. ಈ ರಿಜಿಸ್ಟರ್‌ ಅನ್ನು ವಶಕ್ಕೆ ಪಡೆಯಲಾಗಿದೆ. ಇಲಾಖೆಯಲ್ಲಿ ನಡೆಯುವ ಯಾವುದೇ ಅವ್ಯವಹಾರ ಸಹಿಸಲಾಗದು. ನಿಯಮ ಪಾಲಿಸದ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.   ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಮೇಗೌಡ, ಸಿಬ್ಬಂದಿ ರಾಜೇಶ್, ಅರುಣ್‌ ಕುಮಾರ್‌, ಲಕ್ಷ್ಮಿ, ನರಸಿಂಹಪ್ಪ ಇದ್ದರು

ನಗರ ಸ್ವಚ್ಚತೆಗೆ ಪೌರಕಾರ್ಮಿಕರ ಪಾತ್ರ ಅತ್ಯಂತ ಮುಖ್ಯ – ಶ್ರೀಕಾಂತ್

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ ; ಕಸ ಮುಕ್ತ ನಗರ, ಪ್ಲಾಸ್ಟಿಕ್ ಮುಕ್ತ ನಗರ ಮತ್ತು ನಗರದ ಸ್ವಚ್ಚತೆಯನ್ನು ಕಾಪಾಡಿಕೊಂಡು ಸುಂದರವಾಗಿ ಕಾಣುವಂತೆ ಮಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಮುಖ್ಯವಾಗಿದೆ ಎಂದು ಕೋಲಾರ ನಗರಸಭೆಯ ಪೌರಾಯುಕ್ತರಾದ ಶ್ರೀಕಾಂತ್ ಅವರು ತಿಳಿಸಿದರು.

ಇಂದು ಕೋಲಾರ ನಗರ ಸಭೆಯ ಆವರಣದಲ್ಲಿ ಹಮ್ಮಿಕೊಂಡಿದ್ದ, ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿಂದಿನ ದಿನಗಳಲ್ಲಿ ಪೌರಕಾರ್ಮಿಕರನ್ನು ನಿರ್ಲಕ್ಷಿಸುತ್ತಿದ್ದರು. ಆದರೆ ಇತ್ತಿಚಿನ ದಿನಗಳಲ್ಲಿ ಕೋವಿಡ್ ಸಂದರ್ಭದಲ್ಲಿ ಅವರ ಸೇವೆಯನ್ನು ಮನಗಂಡು ಅವರನ್ನು ಗೌರವಯುತವಾಗಿ ಕಾಣುತ್ತಿದ್ದಾರೆ. ಸರ್ಕಾರವು ಪೌರಕಾರ್ಮಿಕರನ್ನು ಆರ್ಥಿಕವಾಗಿ ಸದೃಡವಾಗುವಂತೆ ಮಾಡಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

17 ಜನ ಪೌರಕಾರ್ಮಿಕರಿಗೆ ನಗರಸಭೆ ವತಿಯಿಂದ ನಿವೇಶನ ಮತ್ತು ಮನೆಯನ್ನು ಕಟ್ಟಿಸಿಕೊಡಲಾಗುವುದು. ಮುಂದಿನ ದಿನಗಳಲ್ಲಿ ಪೌರಕಾರ್ಮಿಕ ನಿಧಿಯನ್ನು ಕ್ರೂಡಿಕರಿಸಿ ನಂತರ ನೇಮಕಾತಿ ಪ್ರಕ್ರಿಯೆಯನ್ನು ಮಾಡಲಾಗುವುದು ಎಂದು ತಿಳಿಸಿದರು.

ನಗರಸಭೆಯ ಸದಸ್ಯರಾದ ಅಂಬರೀಶ್ ಅವರು ಮಾತನಾಡಿ, ಪೌರಕಾರ್ಮಿಕರು ಅಸಂಘಟಿತ ಕಾರ್ಮಿಕರಾಗಿದ್ದರು ನಂತರ ಅವರನ್ನು ಸಂಘಟಿತರನ್ನಾಗಿ ಮಾಡಿದ ಕೀರ್ತಿ ಉಗ್ರಪ್ಪ ನವರಿಗೆ ಸಲ್ಲುತ್ತದೆ ಎಂದು ನೆನಸಿಕೊಂಡರು. ಕೆಲವು ಕಡೆ ಜನರು ಪೌರಕಾರ್ಮಿಕರನ್ನು ಅತ್ಯಂತ ಉದಾಸೀನತೆಯಿಂದ ನೋಡುತ್ತಿದ್ದಾರೆ. ಈ ಮನೋಭಾವನೆಯು ಜನರಲ್ಲಿ ಬದಲಾಗಬೇಕು ಎಂದು ತಿಳಿಸಿದರು.

ಕೇಂದ್ರ ಸರ್ಕಾರವು ಪೌರಕಾರ್ಮಿಕರ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ ಶೇ. 42 ರಷ್ಟು ಜನರು ಉಸಿರಾಟದ ತೊಂದರೆ ಹಾಗೂ ಶ್ವಾಸಕೋಶಗಳ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಲಜಿ ವಹಿಸಬೇಕು ಎಂದು ತಿಳಿಸಿದರು.

ನಗರಸಭೆಯ ಸದಸ್ಯರಾದ ಪ್ರಸಾದ್‍ಬಾಬು ಅವರು ಮಾತನಾಡಿ, ಪೌರಕಾರ್ಮಿಕರಿಗೆ ಮುಂದಿನ ದಿನಗಳಲ್ಲಿ ನಗರಸಭೆ ವತಿಯಿಂದ ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ವಾರಕೊಮ್ಮೆ ಅಗತ್ಯ ಸಲಕರಣೆಗಳಾದ ಶೂ, ಗ್ಲೌಸ್ ಗಳನ್ನು ಬದಲಾವಣೆ ಮಾಡಬೇಕು. ಮನೆ ಇಲ್ಲದ ಪೌರಕಾರ್ಮಿಕರು ನಗರಸಭೆಗೆ ಅರ್ಜಿ ಸಲ್ಲಿಸಿದರೆ ಅವರಿಗೆ ನಗರಸಭೆ ವತಿಯಿಂದ ಮನೆ ನೀಡಲಾಗುವುದು ಎಂದು ತಿಳಿಸಿದರು.

ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ವಿಜೇತರಾದ ಪೌರಕಾರ್ಮಿಕರಿಗೆ ಪ್ರಶಸ್ತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆಯ ಸದಸ್ಯರು, ನಗರ ಠಾಣೆಯ ಸಬ್ ಇನ್ಸ್‍ಪ್ಟರ್ ಅಣ್ಣಯ್ಯ, ನಗರಸಭೆಯ ನಾಮನಿರ್ದೇಶನ ಸದಸ್ಯರುಗಳಾದ ವೆಂಕಟೇಶ, ಲಾಲ್ ಚನ್ , ಅರುಣಮ್ಮ, ರಾಜೇಶ್, ನಗರಸಭೆಯ ಕಂದಾಯ ನಿರಿಕ್ಷಕರಾದ ತ್ಯಾಗರಾಜ್ ಸೇರಿದಂತೆ ಪೌರಕಾರ್ಮಿಕರು ಹಾಗೂ ಮತ್ತಿತರು ಉಪಸ್ಥಿತರಿದ್ದರು.

ಕೋಲಾರದಲ್ಲಿ ಪೊಲೀಸರು ಬರೋಬ್ಬರಿ 14 ಲಕ್ಷ ರೂ ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ : ರಾಜ್ಯದಲ್ಲಿ ಡ್ರಗ್ಸ್ ಪ್ರಕರಣದ ಸುದ್ದಿ ತೀವ್ರ ಚರ್ಚೆಗೆ ಗ್ರಾಸವಾಗಿರುವಂ ತೆಯೇ ಇತ್ತ ಕೋಲಾರದಲ್ಲಿ ಪೊಲೀಸರು ಬರೋಬ್ಬರಿ 14 ಲಕ್ಷ ರೂ ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ . ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಕುರಿತು ಖಚಿತ ಮಾಹಿತಿ ಪಡೆದ ಕೊಲಾರ ಎಸ್ ಪಿ ಕಾರ್ತಿಕ್ ರೆಡ್ಡಿ ಅವರ ನೇತೃತ್ವದ ಸೈಬರ್ ಅಪರಾಧ , ಆರ್ಥಿಕ ಮತ್ತು ನಾರ್ಕೋಟಿಕ್ ( ಸಿಇಎನ್ ) ವಿಭಾಗದ ವಿಶೇಷ ತಂಡ ಈ ಕಾರ್ಯಾಚರಣೆ ನಡೆಸಿದ್ದಾರೆ . ಪೊಲೀಸ್ ಮೂಲಗಳ ಪ್ರಕಾರ ಆಂಧ್ರ ಪ್ರದೇಶದ ಕಡಪದಿಂದ ಕೋಲಾರ ಶ್ರೀನಿವಾಸಪುರ ಮಾರ್ಗವಾಗಿ ಇನ್ನೋವಾ ಕಾರಿನಲ್ಲಿ ಗಾಂಜಾ ಸಾಗಿಸಲಾಗುತ್ತಿತ್ತು . ಈ ಬಗ್ಗೆ ಖಚಿತ ಮಾಹಿತಿ ಪಡೆದ ಇನ್ಸ್ ಪೆಕ್ಟರ್ ಎಸ್ ಆರ್ ಜಗದೀಶ್ ನೇತೃತ್ವದ ಅಧಿಕಾರಿಗಳ ತಂಡ ಓರ್ವನನ್ನು ಬಂಧಿಸಿ ಕಾರನ್ನು ವಶಕ್ಕೆ ಪಡೆದಿದ್ದಾರೆ . ಖಚಿತ ಮಾಹಿತಿ ಮೇರೆಗೆ ಕೋಲಾರದ ಶ್ರೀನಿವಾಸಪುರದ ತಾಡಿಗೋಲ್ ಕ್ರಾಸ್ ಬಳಿ ಇನ್ನೋವಾ ಕಾರನ್ನು ಅಡ್ಡಗಟ್ಟಲಾಯಿತು .ಈ ವೇಳೆ ಶೇಖ್ ಅಬ್ದುಲ್ ಎಂಬಾತನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ . ಬಂಧಿತ ಆಂಧ್ರಪ್ರದೇಶ ರಾಯಚೋಟಿ ಮೂಲದವ ನೆಂದು ತಿಳಿದುಬಂದಿದೆ . ಅಲ್ಲದೆ ಕಾರಿನಲ್ಲಿದ್ದ ಸುಮಾರು 14 ಲಕ್ಷದ ಗಾಂಜಾ ವಶಕ್ಕೆ ಪಡೆದಿ ದ್ದು , ಕಾರನನ್ನು ಕೂಡ ವಶಪಡಿಸಿಕೊಂ ಡಿ ದ್ದಾರೆ . ಪ್ರಸ್ತುತ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು , ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ . ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ತಂಡ ರಚನೆ ಮಾಡಿದ್ದು , ಬೆಂಗಳೂರಿನಲ್ಲಿ ಒಂದು ತಂಡ ಮತ್ತು ಆಂಧ್ರ ಪ್ರದೇಶದ ರಾಯಚೋಟಿಯಲ್ಲಿ ಮತ್ತೊಂದು ತಂಡ ತನಿಖೆ ನಡೆಸುತ್ತಿದೆ . ಕೆಜಿಎಫ್ , ಕೋಲಾರ , ರಾಮನಗರ , ಬೆಂಗಳೂರು , ಹಾಸನ ಮತ್ತು ಚಿಕ್ಕ ಬಳ್ಳಾಪುರ ಸೇರಿದಂತೆ ಮಧ್ಯ ಶ್ರೇಣಿಯ ಎಲ್ಲಾ ಆರು ಪ್ರದೇಶಗಳಲ್ಲಿ ಗಾಂಜಾ ಭೀತಿ ಹೆಚ್ಚಾಗಿದೆ . ಇಲ್ಲಿ ಈ ಗಾಂಜಾ ಸಮಸ್ಯೆಯನ್ನು ಬೇರು ಸಹಿತ ಕಿತ್ತೊಗೆಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ .

ಜನಪ್ರತಿಧಿನಿಗಳು ಅಧಿಕಾರಿಗಳ ಹಗ್ಗಜಗ್ಗಾಟ ಬಿಟ್ಟು ರಸ್ತೆಗಳನ್ನು ಸರಿಪಡಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ರೈತ ಸಂಘದಿಂದ ಜನಪ್ರತಿನಿದಿಗಳ ಅಣುಕು ಪ್ರದರ್ಶನ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ.ಸೆ.21, ನಗರಾದ್ಯಂತ ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸುವ ಜತೆಗೆ ಜನಪ್ರತಿಧಿನಿಗಳು ಅಧಿಕಾರಿಗಳ ಹಗ್ಗಜಗ್ಗಾಟ ಬಿಟ್ಟು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಡೂಮ್ ಲೈಟ್ ವೃತ್ತದ ಪೆಟ್ರೋಲ್ ಬಂಕ್ ಬಳಿ ಜನಪ್ರತಿನಿದಿಗಳ ಅಣುಕು ಪ್ರದರ್ಶನ ಮಾಡಿ ರಸ್ತೆಯಲ್ಲಿ ಬಿದ್ದಿರುವ ಹಳ್ಳದಲ್ಲಿ ಬಾಗೀನ ಅರ್ಪಿಸುವ ಮೂಲಕ ನಗರಸಭೆ ಅಧಿಕಾರಿ ಮಂಜುನಾಥ್‍ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಹೋರಾಟದ ನೇತೃತ್ವವಹಿಸಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಜಿಲ್ಲಾ ಕೇಂದ್ರ ಕೋಲಾರದಲ್ಲಿನ ರಸ್ತೆಗಳು ಇಂದು ಜನಸಾಮಾನ್ಯರ ಮರಣಶಾಸನ ಬರೆಯುವ ರಸ್ತೆಗಳಾಗಿ ಮಾರ್ಪಟ್ಟಿದ್ದು, ಒಂದೇ ಒಂದು ರಸ್ತೆಯಲ್ಲಿಯೂ ನೆಮ್ಮದಾಗಿ ಓಡಾಡಲು ಸಾಧ್ಯವಿಲ್ಲವಾಗಿದೆ. ನಗರಸಭೆ ಚುನಾವಣೆ ನಡೆದು ಒಂದು ವರ್ಷವೇ ಕಳೆದಿದ್ದರೂ ಆಡಳಿತ ಮಂಡಳಿಯಿಲ್ಲ. ಜತೆಗೆ ಅಮೃತ್‍ಸಿಟಿ, ಒಳಚರಂಡಿ ಯೋಜನೆಯ ಕಾಮಗಾರಿಗಳು ಸಂಪೂರ್ಣ ಕಳಪೆಯಾಗಿ ನಡೆಯುತ್ತಿವೆ. ಇದರಿಂದಾಗಿ ಅಭಿವೃದ್ಧಿ ಶೂನ್ಯ ಮಟ್ಟಕ್ಕೆ ಇಳಿದಿದೆ. ಇಂತಹ ಸಮಸ್ಯೆಗಳನ್ನು ಜನರು ಪ್ರತಿನಿತ್ಯ ಎದುರಿಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ತಮಗೆ ಸಂಬಂಧವೇ ಇಲ್ಲವೆನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಜತೆಗೆ ತಾಲೂಕಿನ ಎಸ್.ಅಗ್ರಹಾರ ಕೆರೆ ಬಾಗೀನ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಿಲ್ಲವೆಂದು ಮುನಿಸಿಕೊಂಡು ಅಧಿಕಾರಿಗಳ ಎತ್ತಂಗಡಿಗೆ ಪಣತೊಟ್ಟಿರುವುದು ಗುಬ್ಬಚ್ಚಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಅಧಿಕಾರಿಗಳ ಮೇಲೆ ಅಧಿಕಾರ ಚಲಾಯಿಸುತ್ತಿರುವುದು, ಡಿವೈಎಸ್ಪಿ ವರ್ಗಾವಣೆಯಾಗಿರುವುದು ಖಂಡನೀಯವಾಗಿದೆ. ಇನ್ನು ಸಂಸದರು ಬಂದಾಗ ಹೋದಾಗಲೆಲ್ಲಾ ಕೋಚಿಮುಲ್, ಡಿಸಿಸಿ ಬ್ಯಾಂಕ್‍ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿಕೊಂಡೇ ಇದ್ದಾರೆ ಹೊರತು ಅಭಿವೃದ್ಧಿ ಕಡೆಗೆ ಒತ್ತು ನೀಡುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಮಾತನಾಡಿ ಹದಗೆಟ್ಟಿರುವ ಸರ್ಕಾರಿ ಆಸ್ಪತ್ರೆಗೆ ಸಂಪರ್ಕವಿರುವ ಈ ರಸ್ತೆಗಳಲ್ಲಿ ಮಹಿಳೆಯರು ಹೆಣ್ಣುಮಕ್ಕಳು ಗರ್ಬಿಣಿ ಹೆಣ್ಣುಮಕ್ಕಳು ಸಂಚಾರ ನಡೆಸುವುದು ಹೇಗೆ ಈ ಎಲ್ಲಾ ಸಮಸ್ಯೆಗಳು ಜನಪ್ರತಿನಿದಿಗಳಿಗೆ ಕಾಣಿಸುತ್ತಿಲ್ಲವೇ, ಇನ್ನೂ ಕೋಲಾರ ಶಾಸಕರು, ಎಂಎಲ್‍ಸಿಯವರೂ ಅಭಿವೃದ್ಧಿ ವಿಚಾರದಲ್ಲಿ ಆಡಳಿತ ಸರಿಪಡಿಸುತ್ತೇವೆ ಎಂದು ಹೇಳಿಕೆಗಳಿಗಷ್ಟೇ ಸೀಮಿತರಾಗಿಬಿಟ್ಟಿದ್ದಾರೆ ಹೊರತು ಒಂದು ಹೆಜ್ಜೆಯೂ ಮುಂದಕ್ಕೆ ಇಡುತ್ತಿಲ್ಲ. ಹಾಗಾಗಿ ಸಮಸ್ಯೆಗಳು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ ಹೊರತು ನಿವಾರಣೆಯಾಗುತ್ತಿಲ್ಲ. ಅತ್ತ ಜಿಲ್ಲಾ ಪಂಚಾಯಿತಿಯಲ್ಲಿ ಸಿಇಒ ಹುದ್ದೆ ಖಾಲಿಯಾಗಿ 2 ತಿಂಗಳಾಗುತ್ತಾ ಬಂದಿದ್ದರೂ ಸಿಇಒ ನೇಮಕದ ಬಗ್ಗೆ ಮಾತನಾಡದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಕೆಸಿವ್ಯಾಲಿ ಯೋಜನೆಯಡಿ ಕೋಟಿಕೋಟಿ ಲೂಟಿಯಾಗಿದೆ. ಅಧಿಕಾರಿಗಳು ಶಿಷ್ಟಾಚಾರ ಪಾಲಿಸದೆ ತಮ್ಮನ್ನು ಕಡೆಗಣಿಸಿದ್ದಾರೆ ಎಂದು ಸಭೆಗಳಲ್ಲಿ ಸುದೀರ್ಘ ಚರ್ಚೆಗಳನ್ನು ನಡೆಸುತ್ತಿದ್ದಾರೆ. ಜಿಲ್ಲಾ ಕೇಂದ್ರ ಕೋಲಾರ ನಗರ ಸೇರಿದಂತೆ ಜಿಲ್ಲೆಯಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಯಾವ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸದಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, ಇನ್ನಾದರೂ ಜನಪ್ರತಿನಿಧಿಗಳು ಅಧಿಕಾರಿಗಳು ಸಮನ್ವಯತೆಯಿಂದ ನಗರ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಬೇಕಿದ್ದು, ಇಲ್ಲವಾದಲ್ಲಿ ಜನರೇ ಬೀದಿಗಿಳಿದು ತಕ್ಕಪಾಠ ಕಲಿಸುವ ಕಾಲ ಜೊತೆಗೆ ಉಗ್ರ ಹೋರಾಟ ರೂಪಿಸಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು
ಮನವಿ ಸ್ವೀಕರಿಸಿ ಮಾತನಾಡಿದ ನಗರಸಭೆ ಅಧಿಕಾರಿ ಮಂಜುನಾಥ್‍ರವರು ಕೆಲವು ರಸ್ತೆಗಳು ಲೋಕೋಪಯೋಗಿ ಮತ್ತು ನಮಗೆ ಬರುತ್ತವೆ ಮಳೆ ಕಡಿಮೆಯಾದ ನಂತರ ರಸ್ತೆಗಳನ್ನು ಸರಿಪಡಿಸುವ ಭರವಸೆ ನೀಡಿದರು.
ಈ ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಈಕಂಬಳ್ಳಿ ಮಂಜುನಾಥ್, ಐತಾಂಡಹಳ್ಳಿ ಮಂಜುನಾಥ್, ಬಂಗವಾದಿ ನಾಗರಾಜ್‍ಗೌಡ, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ಮಾಸ್ತಿ ವೆಂಕಟೇಶ್, ವಕ್ಕಲೇರಿ ಹನುಮಯ್ಯ, ಸುಬ್ರಮಣಿ, ರಾಮಸ್ವಾಮಿ ಸುಪ್ರೀಂಚಲ, ಜಗದೀಶ್, ಸುಧಾಕರ್, ಸಹದೇವಣ್ಣ, ಮೀಸೆ ವೆಂಕಟೇಶಪ್ಪ, ವಿನೋದ್, ರವಿ ಮುಂತಾದವರಿದ್ದರು.

ಪರಿಸರ ಮಾಲಿನ್ಯ ತಡೆಯಲು, ಸ್ವಚ್ಚ ಗಾಳಿಯನ್ನು ಪಡೆಯಲು ಗಿಡ ಮರಗಳನ್ನು ಬೆಳೆಸಬೇಕು : ಡಾ. ಕೆ.ಎನ್. ವೇಣುಗೋಪಾಲ್

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪರಿಸರ ಮಾಲಿನ್ಯ ತಡೆಯಲು ಹಾಗೂ ಸ್ವಚ್ಚ ಗಾಳಿಯನ್ನು ಪಡೆಯಲು ಪೂರಕವಾಗಿ ಗಿಡ ಮರಗಳನ್ನು ಬೆಳೆಸಬೇಕು, ಸ್ವಚ್ಚ ಪರಿಸರ ನಿರ್ಮಾಣಕ್ಕಾಗಿ ಸಮಾಜದ ಎಲ್ಲ ವರ್ಗದ ಜನರು ಸಹಕರಿಸಬೇಕು ಎಂದು ಬಿ.ಜೆ.ಪಿ. ಜಿಲ್ಲಾ ಅಧ್ಯಕ್ಷ ಡಾ. ಕೆ.ಎನ್. ವೇಣುಗೋಪಾಲ್ ತಿಳಿಸಿದರು.
ಪಟ್ಟಣದ ಪೆÇಲೀಸ್ ವಸತಿ ಗೃಹದ ಆವರಣದಲ್ಲಿ ಶ್ರೀನಿವಾಸಪುರ ರೋಟರಿ ಸಂಸ್ಥೆಯ ವತಿಯಿಂದ ಈಗಾಗಲೆ ಹಲವಾರು ತರಹದ ಗಿಡಗಳನ್ನು ನಾಟಿ ಮಾಡಿದ್ದು, ರೋಟರಿ ಸಂಸ್ಥೆ ಮತ್ತು ಗೊರವಿಮಾಕಲಹಳ್ಳಿ ಗ್ರಾಮದ ವಿನಾಯಕ ಯುವಕ ಸಂಘದ ವತಿಯಿಂದ ಗಿಡಗಳಿಗೆ ಪಾತಿ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ವೇಣುಗೋಪಾಲ್, ಉಸಿರಾಟಕ್ಕೆ ಶುದ್ದ ಗಾಳಿಯ ಅವಶ್ಯಕತೆ ಇದ್ದು, ಪರಿಸರ ಮಾಲಿನ್ಯ ಜನ ಹಾಗೂ ಜಾನುವಾರಗಳ ಅನಾರೋಗ್ಯಕ್ಕೆ ಕಾರಣವಾಗಿದೆ. ಗಿಡ ನೆಟ್ಟು ಪೆÇೀಷಿಸುವ ಕಾರ್ಯಕ್ಕೆ ಸಮಾಜದ ಎಲ್ಲರೂ ಕೈ ಜೋಡಿಸಬೇಕುಎಂದು ತಿಳಿಸಿದರು.
ಇದೆ ಸಮಯದಲ್ಲಿ ರೋಟರಿ ಸಂಸ್ಥೆಯ ವತಿಯಿಂದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನಾಟಿ ಮಾಡಲಾಯಿತು.
ಇದೆ ಸಂದರ್ಭದಲ್ಲಿ ಶ್ರೀನಿವಾಸಪುರ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಶಿವಮೂರ್ತಿ, ಮಾಧ್ಯಮ ಕಾರ್ಯದರ್ಶಿ ಎನ್. ಕೃಷ್ಣಮೂರ್ತಿ, ಸಬ್ ಇನ್ಸ್ ಪೆಕ್ಟರ್ ನಾರಾಯಣಪ್ಪ ಪರಿಸರ ಮಾಲಿನ್ಯದ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಎಂ. ಬೈರೇಗೌಡ, ಶ್ರೀಕಾಂತ್, ವಿನಾಯಕ ಯುವಕ ಸಂಘದ ಸುದರ್ಶನ್, ಮಂಜುನಾಥ ರೆಡ್ಡಿ, ರಾಜು ಮುಂತಾದವರು ಹಾಜರಿದ್ದರು.