HOLY ROSARY CHURCH, KUNDAPUR – 450 th JUBILEE SOUVENIR 2021

ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ 3 ದಿಸಾಂಚಿ ರೆತಿರ್

JANANUDI.COM NETWORK


ಕುಂದಾಪುರ್,ಫೆ.22; ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ 3 ದಿಸಾಂಚಿ ರೆತಿರ್ ಆರಂಭ್ ಜಾಲಿ. ಹಿ ರೆತಿರ್ ಚಲವ್ನ್ ವ್ಹರ್ತಾಂ, ಪ್ರಸಿದ್ದ ಪ್ರಸಂಗ್‍ದಾರ್, ಮಂಗಳ ಜ್ಯೋತಿಚೊ ನಿರ್ದೇಶಕ್ ಮಾ|ಬಾಪ್ ವಿಜಯ್ ಮಚಾದೊ.


ಆಜ್ ಸೊಮಾರಾ ಫೆಬ್ರೆರ್ 22 ವೆರ್ ರೆತಿರೆಚ್ಯಾ ಪಯ್ಲ್ಯಾ ದಿಸಾ, ತಾಣಿ ‘ಆಮಿ ಸಂತೋಷಾನ್ ಜಿಯೆಜೆ ಮ್ಹಣುನ್ ದೇವ್ ಆಶೆತಾಂ ಆನಿ ಹ್ಯಾ ಖಾತಿರ್ ಆಮಿ ಆಮ್ಕಾಂಚ್ ದೆವಾಕ್ ಸಮರ್ಪಣ್ ಕರಿಜೆ, ತಸೆಂಚ್ ದೇವ್ ಕಾಕುಳ್ದಾರ್,ತೊ ಆಮ್ಚೊ ಮೋಗ್ ಕರ್ತಾಂ’ ಮ್ಹಳ್ಯಾ ವಿಶಯಾಚೇರ್ ಶಿಕವ್ಣ್ ದಿಲಿ.
ಫಾಲ್ಯಾ ದುಸ್ರ್ಯಾ ದಿಸಾ, ‘ದೆವಾಚೊ ಮೋಗ್,ತಾಚೊ ಉಪದೇಶ್ ಪಾಳ್ಚ್ಯಾಂತ್ ಆಟಾಪುನ್ ಆಸಾ ಆನಿ ಪಾತಕ್ ಮ್ಹಳ್ಯಾರ್ ಕಿತೆಂ? ಆನಿ ಪಾತ್ಕಾಂಚೊ ಪರಿಣಾಮ್ ಆಮಿ ಸಮ್ಜೊಂಕ್ ಜಾಯ್, ತಸೆಂಚ್ ಕುಮ್ಸಾರ್ ಮ್ಹಳ್ಯಾರ್ ತಾಚೊ ಅರ್ಥ್ ಕಿತೆಂ? ಮ್ಹಳ್ಯಾ ವಿಶ್ಯಾಚೇರ್ ಶಿಕವ್ಣ್ ದಿತಾಲೊ.
ತಿಸ್ರ್ಯಾ ದಿಸಾ ದೇವ್ ಕುಟ್ಮಾಂತ್ ಜಿಯೆತಾ ಆನಿ ಭೊಗ್ಸಾಣ್ಯಾ ಮುಖಾಂತ್ರ್ ಕ್ರಿಸ್ತಾಕ್ ಪರ್ಗಟ್ ಕರ್ಯಾಂ’ ಮ್ಹಳ್ಯಾ ವಿಶ್ಯಾಚೇರ್ ಶಿಕವ್ಣ್ ದಿತಾಲೊ.
ಮಾ|ಬಾಪ್ ವಿಜಯ್ ಮಚಾದೊನ್ ಆನಿ ಕುಂದಾಪುರ್ ಫಿರ್ಗಜೆಚೊ ವಿಗಾರ್ ಬೊ|ಮಾ|ಬಾ| ಸ್ಟ್ಯಾನಿ ತಾವ್ರೊನ್ ರೆತಿರೆಕ್ ಚಡಿತ್ ಜಣಾನಿ ಯೆಂವ್ನ್ ಹ್ಯಾ ರೆತಿರೆಚೊ ಫಾಯ್ದೊ ಜೊಡ್ನ್ ಘೆಜೆ ಮ್ಹಣನ್ ವಿನಂತಿ ಕೆಲ್ಯಾ
.

ಐಸಿವೈಎಂ ಕ್ರೀಡಾ ಕೂಟದಲ್ಲಿ ಉದ್ಯಾವರ,ಕಡೆಕಾರು,ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷ – ಉಪಾಧ್ಯಕ್ಷರಿಗೆ ಸನ್ಮಾನ

ವರದಿ: ಸ್ಟೀವನ್  ಕುಲಾಸೊ, ಉದ್ಯಾವರ

ಉದ್ಯಾವರ : ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯ 46ನೇ ಕಾರ್ಯಕ್ರಮವಾದ ಕ್ರೀಡಾ ಕೂಟದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ರಾಧಾಕೃಷ್ಣ ಶ್ರೀಯಾನ್ ಬೊಳ್ಜೆ, ಉಪಾಧ್ಯಕ್ಷೆ ಮಧುಲತಾ ಶಶಿಧರ್, ಕಡೆಕಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷ ನವೀನ್ ಶೆಟ್ಟಿ, ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ, ಉಪಾಧ್ಯಕ್ಷ ಸುಧಾಕರ ಪೂಜಾರಿ ಇವರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಸನ್ಮಾನಿತರ ಪರವಾಗಿ ಮಾತನಾಡಿದ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್ ಬೊಳ್ಜೆ ಮಾತಾನಾಡಿ, ಐಸಿವೈಎಂ ಉದ್ಯಾವರ ಸಂಘಟನೆಯ ಕಾರ್ಯಕ್ರಮವನ್ನು ಮೆಚ್ಚಿ, ಈ ಸಂಘಟನೆಯು ಈ ಸಮಾಜಕ್ಕೆ ಹಲವಾರು ಕೊಡುಗೆ ನೀಡಿದೆ. ನಮ್ಮ 3ಪಂಚಾಯತ್ ಗಳಲ್ಲಿ ಈ ಸಂಘಟನೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಕುಲಪತಿ, ಸ್ಥಳೀಯ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಧಾನ ಧರ್ಮಗುರುಗಳಾದ ಅ. ವಂ. ಫಾ. ಸ್ಟ್ಯಾನಿ ಬಿ. ಲೋಬೊ, ಸಹಾಯಕ ಧರ್ಮಗುರುಗಳಾದ ಫಾ. ರೊಲ್ವಿನ್ ಅರಾನ್ನ, ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ನೊರೊನ್ಹಾ, ಪ್ರೆಸಿಲ್ಲಾ ಪಿರೇರಾ, ಸುವರ್ಣ ಮಹೋತ್ಸವದ ಅಧ್ಯಕ್ಷ ಮೈಕಲ್ ಡಿಸೋಜ, ಕಾರ್ಯದರ್ಶಿ ಡೋರಾ ಅರೋಜಾ, ಐಸಿವೈಎಂ ಅಧ್ಯಕ್ಷ ರೋಯಲ್ ಕಾಸ್ತಲಿನೊ, ಕಾರ್ಯದರ್ಶಿ ಜೇನ್ ಬೆಲಿಟಾ, ಕ್ರೀಡಾ ಸಂಚಾಲಕ ಜೋನ್ ಪ್ರಶಾಂತ್, ಪ್ರಮುಖರಾದ ರೋಯ್ಸ್, ಜೂಲಿಯಾ ಮತ್ತಿತರರು ಉಪಸ್ಥಿತರಿದ್ದರು.
ಐಸಿವೈಎಂ ಸದಸ್ಯೆ ಪ್ರತೀಕ್ಷಾ ಗೋಮ್ಸ್ ಸ್ವಾಗತಿಸಿ ನಿರೂಪಿಸಿದರೆ, ಮರ್ವಿನ್ ಅಲ್ಮೆಡಾ ಧನ್ಯವಾದ ಸಮರ್ಪಿಸಿದರು
.

ಶ್ರೀನಿವಾಸಪುರ ಈ ಭಾಗದ ರೈತರು ಮಾವಿನ ಜೊತೆಗೆ ಗೋಡಂಬಿ ಬೆಳೆಸಿದರೆ ಅಧಿಕ ಇಳುವರಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ; ಈ ಭಾಗದ ರೈತರು ಮಾವಿನ ಜೊತೆಗೆ ಗೋಡಂಬಿ ಬೆಳೆಸಿದರೆ ಅಧಿಕ ಇಳುವರಿ ಬರುವುದರ ಜೊತೆಗೆ ಹೆಚ್ಚಿನ ಲಾಭಾಂಶವು ಸಹ ಪಡೆಯಬಹುದು ಆಗಾಗಿ ಗೋಡಂಬಿ ಬೆಳೆಸಲು ರೈತರು ಮುಂದಾಗಿ ಎಂದು ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಆರ್. ಶಂಕರ್ ತಿಳಿಸಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ ತೋಟಗಾರಿಕಾ ಸಂಶೋದನಾ ಮತ್ತು ವಿಸ್ತರಣಾ ಕೇಂದ್ರ ಹೊಗಳಗೆರೆ ಅಖಿಲ ಭಾರತ ಸಮನ್ವಯ ಗೋಡಂಬಿ ಸಂಶೋಧನಾ ಯೋಜನೆ ಪುತ್ತೂರು ಇವರ ಸಂಯುಕಾಶ್ರಯದಲ್ಲಿ ರೈತರಿಗಾಗಿ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಆರ್. ಶಂಕರ್ ಈ ಭಾಗದಲ್ಲಿ ಮಾವಿನ ಬೆಳೆ ಪ್ರಸಿದ್ದಿಯಾಗಿದೆ. ಇಳುವರಿ ಮತ್ತು ಬೆಳೆಯಲ್ಲಿ ರೈತರು ಲಾಭಾಂಶ ಪಡೆಯಲು ಆಗಾದೆ ಇರುವುದರಿಂದ ಗೋಡಂಬಿ ಬೆಳೆಸಿದರೆ ಹೆಚ್ಚು ಲಾಭವನ್ನು ಪಡೆಯಬಹುದು ಇದರ ಜೊತೆಗೆ ಕಡಿಮೆ ನೀರಾವರಿ ಇರುವವರು ಮಿಶ್ರ ಬೇಸಾಯವನ್ನು ಮಾಡಿದರೆ ಹೆಚ್ಚು ಲಾಭವನ್ನು ಪಡೆಯಬಹುದು.
ಈ ಭಾಗದ ರೈತರು ಶ್ರಮ ಜೀವಿಗಳಾಗಿದ್ದು, ಅಂತರ್ ಜಲ ಕಡಿಮೆಯಾಗಿದ್ದರೂ ಇರುವ ಅಲ್ಪ-ಸ್ವಲ್ಪ ನೀರಿನಲ್ಲಿ ಬೆಳೆಗಳನ್ನು ಬೆಳೆಸಿ ತಮ್ಮ ಜೀವನವನ್ನು ಸಾಗಿಸುತ್ತಿರುವುದು ಸಂತೋಷದ ವಿಷಯ ಸರ್ಕಾರ ಕೃಷಿ ತೋಟಗಾರಿಕೆ ಬೆಳೆಗಳು ಬೆಳವಣಿಗೆಗಾಗಿ ಸಂಶೋಧನಾ ಕೇಂದ್ರಗಳು, ಆಧುನಿಕ ಬೇಸಾಯ ಪದ್ದತಿ, ತಂತ್ರಜ್ಞಾನ ಕೃಷಿ ಸಲಕರಣಿಗಳು ಇವುಗಳ ಜೊತೆಗೆ ವಿಜ್ಞಾನಿಗಳ ಮೂಲಕ ತರಬೇತಿ ಕಾರ್ಯಕ್ರಮಗಳು ಆಯೋಜನೆ ಮಾಡಲಾಗುತ್ತದೆ. ಸರ್ಕಾರ ¯ಕ್ಷಾಂತರ ರೂಗಳು ರೈತರಿಗಾಗಿ ವ್ಯಯ ಮಾಡುತ್ತಿದ್ದು, ಈ ಅವಕಾಶವನ್ನು ರೈತರು ಉಪಯೋಗಿಸಿಕೊಳ್ಳಬೇಕು ಎಂದರು.
ಈ ಭಾಗದ ರೈತರಿಗೆ ನೀರಾವರಿ ಸಂಪನ್ಮೂಲಗಳನ್ನು ನಮ್ಮ ಸರ್ಕಾರಗಳು ನೀಡಿದರೆ ಈ ಜಿಲ್ಲೆಯ ಜನ ಚಿನ್ನ ಬೆಳೆದು ನೋಡಿಸುತ್ತಾರೆ ಎಂಬ ವಿಶ್ವಾಸ ಮಾತನ್ನು ವ್ಯಕ್ತಪಡಿಸಿದರು. ಹಾಗೆಯೇ ಮಾವು ಬೆಳೆಗಾರರ ಮನವಿಯಂತೆ ಮಾವು ಸಂಸ್ಕರಣ ಘಟಕ ಜಿಲ್ಲೆಯಲ್ಲಿ ಸ್ಥಾಪಿಸಲು ಪಾಲುದಾರರು ಯಾರಾದೂ ಮುಂದೆ ಬಂದಲ್ಲಿ ಸರ್ಕಾರದಿಂದ 10 ಕೋಟಿ ಸಹಾಯಧನವನ್ನು ಮಂಜೂರು ಮಾಡಿಸಿಕೊಡುತ್ತೇವೆ. ಎಂದರು.
ಮಾವು ಬೆಳೆಗಾರರ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಮನವಿ ಮಾಡಿ ಮಾತನಾಡಿ ಈ ಭಾಗದಲ್ಲಿ ಅತಿ ಹೆಚ್ಚು ಮಾವು ಮತ್ತು ಟಮಾಟೋ ಬೆಳೆಯನ್ನು ಬೆಳೆಯುತ್ತೇವೆ. ಏಷ್ಯಾಖಂಡದಲ್ಲಯೆ ಈ ಎರಡು ಬೆಳೆಯನ್ನು ಬೆಳೆಯುತ್ತೇವೆ. ವಿದೇಶಗಳಿಗೆ ಸಹ ರಫ್ತು ಮಾಡುತ್ತೇವೆ. ನಮ್ಮ ಜನ ಪ್ರತಿನಿದಿಗಳು ಈ ಜಿಲ್ಲೆಯಲ್ಲಿ ಮಾವು ಮತ್ತು ಟಮಾಟೋ ಸಂಸ್ಕರಣ ಘಟಕಗಳು ತೆರೆದರೆ ನಮ್ಮ ರೈತರ ಬದಕು ಅಸನಾಗುತ್ತದೆ. ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಡಬೇಕು ಹಿಂದಿನ ವರ್ಷ ಅಕಾಲಿಕ ಮಳೆಯಿಂದ ಹೂವು, ತೋಟಗಾರಿಕೆ ಬೆಳೆಗಳು ನಾಶವಾಗಿದ್ದು, ಸಹಾಯಧನಕ್ಕಾಗಿ ಸಲ್ಲಿಸಿರುವ ಅರ್ಜಿಗಳು ಹಾಗೆಯೇ ಬಿದ್ದವೆ. ಸರ್ಕಾರ ಇಲ್ಲಿಯ ತನಕ ಹಣ ಬಿಡುಗಡೆ ಮಾಡದೆರುವುದು ನೋವಿನ ಸಂಗತಿಯಾಗಿದೆ. ಜೊತೆಗೆ ಡ್ರಿಪ್, ಕೃಷಿ ಹೂಂಡಗಳು, ಪ್ಯಾಕ್‍ಹೌಸ್, ನಿಲ್ಲಿಸಿದ್ದಾರೆ. ಎಂದು ಈ ಭಾಗದ ಸಮಸ್ಯೆಗಳನ್ನು ಸಚಿವರಲ್ಲಿ ಮನವಿ ಮಾಡಿದರು.
ಇದೆ ವೇಳೆಯಲ್ಲಿ ಮಾವು ಬೆಳೆಗಾರರ ಸಂಘ ಮತ್ತು ಹೊಗಳಗೆರೆ ಸಂಶೋಧನಾ ಕೇಂದ್ರ ಅಧಿಕಾರಿಗಳಿಂದ ಸಚಿವರನ್ನು ಸನ್ಮಾನಿಸಿ ಗೌರವಿಸಲಾಯಿತು
ಇದೇ ಸಮಯದಲ್ಲಿ ಮಾವು ಮಂಡಳಿಯ ಅಧ್ಯಕ್ಷ ಕೆ.ವಿ. ನಾಗರಾಜ್ ಬಿಜೆಪಿ ಜಿಲ್ಲಾದ್ಯಕ್ಷ ಡಾ|| ವೇಣುಗೋಪಾಲ್, ತಾಲ್ಲೂಕು ಅಧ್ಯಕ್ಷ ಆಶೋಕ್‍ರೆಡ್ಡಿ, ಬಿಜೆಪಿ ರೈತ ಮೋರ್ಚಾಅಧ್ಯಕ್ಷ ಶಾಗೂತ್ತೂರು ಡಾ|| ಆರ್. ನಾರಾಯಣಸ್ವಾಮಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಎಂ. ಗಾಯಿತ್ರಿ ತೋಟಗಾರಿಕೆಯ ಮಹಾ ವಿದ್ಯಾಲಯ ಟಮಕ ಡಾ|| ಬಿ.ಜಿ. ಪ್ರಕಾಶ್, ತೋಟಗಾರಿಕಾ ಸಂಶೋಧನಾ ವಿಸ್ತರಣಾ ಕೇಂದ್ರದ ಮುಖ್ಯಸ್ಥರಾದ ಡಾ|| ಆರ್.ಕೆ. ರಾಮಚಂದ್ರ ಹೊಗಳಗೆರೆ, ಡಾ|| ಬಿ. ಆಂಜನೇಯರೆಡ್ಡಿ, ರಾಜೇಂದ್ರ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಂ. ಶ್ರೀನಿವಾಸನ್ ಬೈರಾರೆಡ್ಡಿ, ಹಾಗೂ ರೈತರು ತೋಟಗಾರಿಕೆ ಸಂಶೋಧನಾ ಕೇಂದ್ರದ ವಿದ್ಯಾರ್ಥಿಗಳು ಮತ್ತು ಕಛೇರಿಯ ಸಿಬ್ಬಂದಿ ಉಪಸ್ಥಿತರಿದ್ದರು
.

ಕುಂದಾಪುರ ವಲಯ ಕಥೊಲಿಕ್ ಸಭಾ ಮತ್ತು ಶೆವೊಟ್ ಪ್ರತಿಷ್ಟಾನ: ಪ್ರತಿಭಾವಂತರಿಗೆ ಪುರಸ್ಕಾರ

JANANUDI.COM NETWORK


ಕುಂದಾಪುರ,ಫೆ.21: ಕಥೊಲಿಕ್ ಸಭಾ ಉಡುಪಿ ಪ್ರದೇಶ್ ರಿ. ಕುಂದಾಪುರ ವಲಯ ಸಮಿತಿ ಮತ್ತು ಶೆವೊಟ್ ಪ್ರತಿಷ್ಟಾನ ರಿ. ಕುಂದಾಪುರ ಇವರಿಂದ ಕಳೆದ ಶೈಕ್ಷಣಿಕ ವರ್ಷದಲ್ಲಿ ವಲಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಈ ಸಲದ ಪಂಚಾಯತ್ ಚುನಾವಣೆಯಲ್ಲಿ ವಿಜೇತರಿಗೆ ಸನ್ಮಾನ ಕಾರ್ಯಕ್ರಮವು ಫೆ.21 ರಂದು ಕುಂದಾಪುರ ಸಂತ ಮೇರಿಸ್ ಪಿ.ಯು.ಕಾಲೇಜಿನ ಸಭಾಭವನದಲ್ಲಿ ಜರಗಿತು
ಕಾರ್ಯಕ್ರಮವನ್ನು ಕಥೊಲಿಕ್ ಸಭಾ ಕುಂದಪುರ ವಲಯ ಸಮಿತಿಯ ಅಧ್ಯಾತ್ಮಿಕ ನಿರ್ದೇಶಕರಾದ ಅ|ವಂ|ಸ್ಟ್ಯಾನಿ ತಾವ್ರೊ ಉದ್ಘಾಟಿಸಿ ‘ಬೆಳಕು ಹೇಗೆ ಪರಿಸರಕ್ಕೆ ನಮಗೆ ಬೆಳಕು ನೀಡುತ್ತದೊ, ಹಾಗೇ ನೀವು ಪ್ರತಿಭಾವಂತ ಮಕ್ಕಳು ಮೇಲ್ದರ್ಜೆಯ ಶಿಕ್ಷಣವನ್ನು ಪಡೆದು, ಉನ್ನತ ಹುದ್ದೆಗಳನ್ನು ಅಲಂಕರಿಸಿ ಇತರರಿಗೆ ಸೇವೆ ನೀಡುವ ಮೂಲಕ ಸಮಾಜಕ್ಕೆ ಬೆಳಕಾಗಬೆಕು, ಅಂತೇಯೆ ಚುನಾವಣೆಯಲ್ಲಿ ಗೆದ್ದವರು ಜನರಿಗೆ ಉತ್ತಮವಾದ ಸೇವೆ ನೀಡಿ ನೀವೂ ಸಮಾಜಕ್ಕೆ ಬೆಳಕಾಗಬೇಕು’ ಎಂದು ಸಂದೇಶ ನೀಡಿದರು
ಮುಖ್ಯ ಅತಿಥಿಗಳಾದ ಮೂಡುಬೆಳ್ಳೆ ಸಂತ ಲಾರೆನ್ಸ್ ಪಿಯು ಕಾಲೇಜಿನ ಪ್ರಾಂಶುಪಾಲ ಎಡ್ವರ್ಡ್ ಲಾರ್ಸನ್ ಡಿಸೋಜಾ ‘ಮಕ್ಕಳು ತಮ್ಮ ಉನ್ನತಿಗೆ ಉನ್ನತ ಮಟ್ಟದ ಕನಸನ್ನು ಕಾಣಬೇಕು, ಕನಸು ಕಂಡರೆ ಸಾಲದು ಕಠಿಣ ಪ್ರಯತ್ನ ಪಡಬೇಕು, ಒಂದು ಚೆಂದದ ಮೂರ್ತಿ ಕೆತ್ತಬೇಕೆಂದು ನಿರ್ಣಯಿಸಿದರೆ, ಅದಕ್ಕೆ ಕೆತ್ತನೆಯ ಪೆಟ್ಟು ಬೀಳುವಾಗ ನೊವುಟಾಂಗುತ್ತದೆ ಎಂದು ಹಿಂಜರಿಯಬಾರದು, ಹಾಗೇ ಎಷ್ಟೇ ಬಂದರೂ, ಪ್ರಯತ್ನ ಪಟ್ಟು ನಾವು ಕಂಡ ಕನಸನ್ನು ಸಾಕಾರಗೊಳಿಸಬೇಕು’ ಎಂದು ಮನದಟ್ಟು ಮಾಡಿದರು. ಇನ್ನೊರ್ವ ಮುಖ್ಯ ಅಥಿತಿ ಕುಂದಾಪುರ ಪುರ ಸಭೆಯ ಆಫಿಸ್ ಮೆನೇಜರ್ ಮೆಬಲ್ ಡಿಸೋಜಾ ಪುರಸ್ಕಾರ,ಸನ್ಮಾನ ಗೊಂಡವರಿಗೆ ಶುಭ ಹಾರೈಸಿದರು. ಕುಂದಾಪುರ ವಲಯ ಕಥೊಲಿಕ್ ಸಭಾದ ಅಧ್ಯಕ್ಷೆ ಮೆಬಲ್ ಡಿಸೋಜಾ “ಕಥೊಲಿಕ್ ಸಭಾ ಸುಮಾರು 30 ವರ್ಷಗಳಿಂದ, ಪ್ರತಿಭಾವಂತರಿಗೆ, ರಾಜಕಾರಣಿಗಳಿಗೆ, ಮಾರ್ಗದರ್ಶನ, ಪೆÇ್ರೀತ್ಸಾಹ ನೀಡುತಾ ಬಂದಿದೆ’ ಅಂದರು.
ಎಸ್.ಎಸ್.ಎಲ್.ಸಿ. ಸಿ.ಬಿ.ಎಸ್.ಸಿ, ಪಿ.ಯು.ಸಿ. ಮತ್ತು ಎಲ್ಲಾ ರೀತಿಯ ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ, ಬಿ.ಸಿ.ಎ., ಬಿಎಡ್, ಎಂಜಿನಿಯರಿಂಗ್, ಮತ್ತು ಉನ್ನತ ವ್ಯಾಸಂಗ ಮಾಡಿದವರಿಗೆ, ಹಾಗೂ ಈ ಸಲದ ಪಂಚಾಯತ್ ಚುನಾವಣೆಯಲ್ಲಿ ಗೆದ್ದವರಿಗೆ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಪಡೆದವರಿಗೆ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಶೆವೊಟ್ ಪ್ರತಿಷ್ಟಾನದಿಂದ ಅಸಕ್ತರಿಗೆ ಧನಸಹಾಯ ನೀಡಲಾಯಿತು.

“ಇವತ್ತು ಚುನಾವಣೆಗೆ ಸ್ಫರ್ಧಿಸಲು ಹಿಂಜರಿಯುವ ಕಾಲದಲ್ಲಿ ಚುನಾವಣಾ ಸ್ಫರ್ಧಿಸಿ ಸೋತಿತ ಅಭ್ಯರ್ಥಿಗಳನ್ನು ಈ ಸಂದರ್ಭದಲ್ಲಿ ಪ್ರೋತ್ಸಾಹನೆಗಾಗಿ ಸನ್ಮಾನಿಸಿದ್ದು ವಿಶೇಷವಾಗಿತ್ತು”


ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ನಿರ್ಗಮನ ಅಧ್ಯಕ್ಷ ಅಧ್ಯಕ್ಷ ಹೆರಿಕ್ ಗೊನ್ಸಾಲ್ವಿಸ್, ಶೆವೊಟ್ ಪ್ರತಿಷ್ಟಾನದ ಅಧ್ಯಕ್ಷ ವಿನೋದ್ ಕ್ರಾಸ್ಟೊ, ಹೆಮ್ಮಾಡಿ ಪಂಚಾಯತ್ ಉಪಾಧ್ಯಕ್ಷೆ ಸ್ಥಾನ ಪಡೆದ ಶೈನಿ ಕ್ರಾಸ್ತಾ, ಕಥೊಲಿಕ್ ಸಭಾ ಸಹ ಕಾರ್ಯದರ್ಶಿ ಪ್ರೇಮಾ ಡಿಕುನ್ಹಾ, ಸಹ ಖಚಾಂಚಿ ಮೆಲ್ವಿನ್ ಡಿಮೆಲ್ಲೊ ಉಪಸ್ಥಿತರಿದ್ದರು. ನಿಯೋಜಿತ ಅಧ್ಯಕ್ಷೆ, ಕಾರ್ಯಕ್ರಮದ ಸಂಚಾಲಕಿ ಶಾಂತಿ ಪಿರೇರಾ ಸ್ವಾಗತಿಸಿದರು. ಕುಂದಾಪುರ ವಲಯದ ಎಲ್ಲಾ ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿ ಕಾರ್ಯದರ್ಶಿ ಮೆಲ್ವಿನ್ ಪುಟಾರ್ಡೊ ವಂದಿಸಿದರು. ಪ್ರಮೀಳಾ ಡೆಸಾ ಕಾರ್ಯಕ್ರವನ್ನು ನೆಡೆಸಿಕೊಟ್ಟರು
.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಫೆ.23 ವರೆಗೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ

JANANUDI.COM NETWORK


ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ಸೇರಿದಂತೆ ಫೆಬ್ರುವರಿ 23 ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ವಾಯುಭಾರ ಕುಸಿತದಿಂದ ಎರಡು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು ಮತ್ತು ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ದಾವಣಗೆರೆ, ಚಿತ್ರದುರ್ಗ, ಕೊಡಗು ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ನಿನ್ನೆ ಸುರಿದ ಭಾರಿ ಮಳೆಯಿಂದ ಹಲವೆಡೆ ಬೆಳೆ ನಾಶವಾಗಿದೆ.

Fr. Vasco do Rego, S.J. simple eco-friendly funeral service – ಫ್ರಾ. ವಾಸ್ಕೊ ಡೊ ರೆಗೊ, ಎಸ್.ಜೆ.ಶವಕ್ಕೆ ಗ್ಲಾವ್ಜ್, ಸಾಕ್ಸ್ ಇಲ್ಲ ಬಿದಿರು ಚಟ್ಟ ಪರಿಸರ ಸ್ನೇಹಿ ಅಂತ್ಯಕ್ರಿಯೆ

Report: Pratap Naik sj

Report ; Pratap Naik sj

Pune: Fr. Vasco do Rego, S.J. ( known as Guruji or Pitaji) left this world to go to his eternal abode on Ash Wednesday on 17th February at 9.45 pm at Ishaprema Niketan, Pune where he lived for the past a few years. The funeral ceremony took place at St. Xavier Church run by the Pune Province Jesuits at Camp, Pune on 19th at 4 pm. Pune Bishop Thomas Dabre was the main celebrant. 13 Jesuits joined the concelebration. Though Mass was in English, the first reading and a hymn was in Konknni. Pratapananda Naik, sj preached the homily. As per the will of Pitaji, everything was done as per his wish. There was no coffin, no socks, shoes, and gloves. His body was laid on the floor with three oil lamps representing the Holy Trinity. His body was carried on the bamboo bier. They speak for the entire simple eco-friendly funeral service, but highly appreciated and praised in the church even by the Pune Bishop.

ಫ್ರಾ. ವಾಸ್ಕೊ ಡೊ ರೆಗೊ, ಎಸ್.ಜೆ.ಶವಕ್ಕೆ ಗ್ಲಾವ್ಜ್, ಸಾಕ್ಸ್ ಇಲ್ಲ ಬಿದಿರು ಚಟ್ಟ ಪರಿಸರ ಸ್ನೇಹಿ ಅಂತ್ಯಕ್ರಿಯೆ

ಪುಣೆ:  ಫ್ರಾ. ವಾಸ್ಕೊ ಡೊ ರೆಗೊ, ಎಸ್.ಜೆ. (ಗುರುಜಿ ಅಥವಾ ಪಿತಾಜಿ ಎಂದು ಕರೆಯಲ್ಪಡುವ ಅವರು ಈ ಜಗತ್ತನ್ನು ಫೆಬ್ರವರಿ 17 ರಂದು ಬೂದಿ ಬುಧವಾರದಂದು ರಾತ್ರಿ 9.45 ಕ್ಕೆ ಪುಣೆಯ ಇಶಾಪ್ರೆಮಾ ನಿಕೇತನ್ ನಲ್ಲಿಂದ ಇಹ ಲೋಕ ತ್ಯಜಿಸಿದರು. ಅವರು  ಕಳೆದ ಕೆಲವು ವರ್ಷಗಳಿಂದ ಇಶಾಪ್ರೆಮಾ ನಿಕೇತನ್ ನಲ್ಲಿ ವಾಸಿಸುತ್ತಿದ್ದರು.  ಅಂತ್ಯಕ್ರಿಯೆ ಸಮಾರಂಭವು ಪುಣೆ ಪ್ರಾಂತ್ಯದ ಜೆಸ್ಯೂಟ್‌ಗಳು ನಡೆಸುತ್ತಿರುವ ಸೇಂಟ್ ಕ್ಸೇವಿಯರ್ ಚರ್ಚ್‌ನಲ್ಲಿ ಪುಣೆಯ ಕ್ಯಾಂಪಸ್ನಲ್ಲಿ 19 ರಂದು ಸಂಜೆ 4 ಗಂಟೆಗೆ ನಡೆಯಿತು. ಪುಣೆ ಬಿಷಪ್ ಥಾಮಸ್ ದಾಬ್ರೆ ಮುಖ್ಯಯಾಜಕರಾಗಿ ಅಂತ್ಯಕ್ರಿಯೆಯಲ್ಲಿ ಭಾಗವಹ್ಸ್ದರು. 13 ಜೆಸ್ಯೂಟ್‌ಗಳು ಈ ಅಂತ್ಯಕ್ರಿಯೆಯಲ್ಲ್ಲಿ ಭಾಗವಹಿಸಿದ್ದರು. ಪೂಜೆ ಇಂಗ್ಲಿಷ್ನಲ್ಲಿದ್ದರೂ, ಮೊದಲ ವಾಚನ ಮತ್ತು ಸ್ತೋತ್ರವು ಕೊಂಕಣಿಯಲ್ಲಿ ನಡೆಯಿತು. ಫಾ| ಪ್ರತಾಪಾನಂದ ನಾಯಕ್,  ಸಂದೇಶ ನೀಡುತ್ತಾ, ಫಾ|. ಪಿತಾಜಿಯ ಎಸ್.ಜೆ ಇವರ ಆಶಯವನ್ನು  ಈಡೇರಿಸಲಾಯಿತು. ಅವರ ಆಶಯದಂತೆ  ಅವರಿಗೆ ಶವಪೆಟ್ಟಿಗೆಯಿಲ್ಲಿ ಇಡಲಿಲ್ಲಾ,  ಸಾಕ್ಸ್, ಬೂಟುಗಳನ್ನು ಧರಿಸಿರಲಿಲ್ಲಾ ಹಾಗೆ ಕೈಗವಸುಗಳನ್ನು ಧರಿಸಿರಲಿಲ್ಲಾ. ಅವರ ದೇಹವನ್ನು ಹೋಲಿ ಟ್ರಿನಿಟಿಯನ್ನು ಪ್ರತಿನಿಧಿಸುವ ಮೂರು ತೈಲ ದೀಪಗಳೊಂದಿಗೆ ನೆಲದ ಮೇಲೆ ಇಡಲಾಗಿತ್ತು. ಅವರ ದೇಹವನ್ನು ಬಿದಿರಿನ ಚಟ್ಟದಲ್ಲಿ ಸಾಗಿಸಲಾಯಿತು.. ಅವರು ಸಂಪೂರ್ಣ ಸರಳ ಪರಿಸರ ಸ್ನೇಹಿ ಅಂತ್ಯಕ್ರಿಯೆಯನ್ನು ಅವರು ಬಯಸಿದ್ದರು. ಇವರ ಸರಳ ವ್ಯಕ್ತಿತ್ವ ಪುಣೆ ಬಿಷಪ್ ಅವರಿಂದ ಮತ್ತು ಚರ್ಚಗಳಲ್ಲಿ ಹೆಚ್ಚು ಮೆಚ್ಚುಗೆ ಮತ್ತು ಪ್ರಶಂಸೆಗೆ ಪಾತ್ರವಾಗಿತ್ತು.

ಹೈಕಾಡಿ ರಾಜೀವ್ ಶೆಟ್ಟಿಯವರ ಅಳಿಯನ ಕಾರು, ಅಪಘಾತ ಸ್ಥಳದಲ್ಲೆ ಸಾವು

JANANUD.COM NETWORK

ಕುಂದಾಪುರ,ಫೆ.20; ರೈತ ಸಂಘದ ಗೌರವನ್ವಿತ ಸದಸ್ಯರಾದ ಶಾಡಿಗುಂಡಿ ರಾಜೀವ ಶೆಟ್ಟಿಯವರ ಮಗಳು ಹಾಗೂ ಅಳಿಯ ಹಾಗೂ ಮಕ್ಕಳೊಂದಿಗೆ ಇಂದು ಮುಂಜಾನೆ ಬೆಂಗಳೂರಿಂದ ಊರಿಗೆ ಬರುವಾಗ ಹಾಸನ ಸಮೀಪ ಅಪಘಾತ ಉಂಟಾಗಿದ್ದು. ಈ ಅಪಘಾತದಲ್ಲಿ ಹೈಕಾಡಿ ರಾಜೀವ್ ಶೆಟ್ಟಿಯವರ ಅಳಿಯ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ. ಮಗಳಿಗೆ ಮತ್ತು ಮೊಮ್ಮಕ್ಕಳಿಗೆ ಗಂಭೀರ ಗಾಯಗಳು ಉಂಟಾಗಿದ್ದು ಅವರು ಹಾಸನದ ಖಾಸಗಿ ಜನಪ್ರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಅಪಘಾತದ ಭೀಕರತೆಗೆ ಕಾರು ತುಂಬಾ ಜಖಂಗೊಂಡಿದೆ.



ಜನರ ಸಮಸ್ಯೆ ಗ್ರಾಮಗಳಲ್ಲಿಯೇ ಆಲಿಸಿ ಶೀಘ್ರ ಪರಿಹರಿಸಲು, ಜನ ಕಛೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಗ್ರಾಮ ವಾಸ್ತವ್ಯ ಕಾರ್ಯಕ್ರಮ;ಜಿಲ್ಲಾಧಿಕಾರಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ : ಜನರ ಸಮಸ್ಯೆಗಳನ್ನು ಅವರ ಗ್ರಾಮಗಳಲ್ಲಿಯೇ ಆಲಿಸಿ ಶೀಘ್ರದಲ್ಲಿ ಪರಿಹರಿಸಲು ಹಾಗೂ ಜನರು ಕಛೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ | ಆರ್ . ಸೈಲಮಣಿ ಅವರು ತಿಳಿಸಿದರು . ಇಂದು ಕೋಲಾರ ತಾಲ್ಲೂಕಿನ ಕೆಂಬೋಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ , ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಕುರಿತು ಅವರು ಮಾತನಾಡಿದರು . ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 254 ಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ . ಇಂದು ಸಹ ಕುಂದು ಕೊರತೆಗಳ ಅಹವಾಲುಗಳನ್ನು ಸ್ವೀಕಾರ ಮಾಡಿ ಸಾಧ್ಯವಾದವನ್ನು ಸ್ಥಳದಲ್ಲಿಯೇ ಪರಿಹರಿಸಲಾಗುವುದು . ಉಳಿದ ಮನವಿಗಳನ್ನು ಸೀಮಿತ ಅವಧಿಯ ಕಾಲಮಿತಿಯೊಳಗೆ ಪರಿಹರಿಸಲಾಗುವುದು ಎಂದು ತಿಳಿಸಿದರು . ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಕುರಿತು ಪ್ರದರ್ಶನ ಏರ್ಪಡಿಸಲಾಗಿದೆ . ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ . ಇದರಲ್ಲಿ ಗರ್ಭಿಣಿ ಸ್ತ್ರೀಯರ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಸೇವಿಸಬೇಕಾದ ಪೌಷ್ಟಿಕ ಆಹಾರಗಳ ಬಗ್ಗೆ ತಿಳಿಸುವುದಲ್ಲದೆ , ಮಾತೃವಂದನಾ ಕಾರ್ಯಕ್ರಮದಡಿ 5 ಸಾವಿರ ರೂ.ಗಳ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು . ಗ್ರಾಮೀಣ ಭಾಗದಲ್ಲಿ ಇರುವ ಪಿಂಚಣಿ ಸೌಲಭ್ಯ , ಜಮೀನು ಸರ್ವೇ , ಸರ್ಕಾರಿ ಜಮೀನುಗಳ ಒತ್ತುವರಿ ತೆರವು , ವಸತಿ ರಹಿತರಿಗೆ ಮನೆ ನಿರ್ಮಾಣ , ನಿವೇಶನ ಮತ್ತು ವಸತಿ ರಹಿತರಿಗೆ ನಿವೇಶನ ಮತ್ತು ಮನೆ ಸೌಲಭ್ಯ , ಆಧಾರ್ ತಿದ್ದುಪಡಿ , ಬಿ.ಪಿ.ಎಲ್ ಕಾರ್ಡ್‌ಗಳಲ್ಲಿ ಹೆಸರು ಸೇರ್ಪಡೆ , ಹೆಸರು ತೆಗೆದು ಹಾಕುವುದು ಹಾಗೂ ಹೊಸದಾಗಿ ಬಿ.ಪಿ.ಎಲ್ ಕಾರ್ಡ್‌ಗೆ ಅರ್ಜಿ ಸ್ವೀಕಾರ ಮಾಡಲಾಗುವುದು ಎಂದು ತಿಳಿಸಿದರು . ಕುಂದು ಕೊರತೆಗಳ ಸ್ವೀಕಾರ ಸಭೆಯಲ್ಲಿ ಕೆಂಬೋಡಿ ಶಾಲೆಗೆ ಕ್ರೀಡಾಂಗಣ ವ್ಯವಸ್ಥೆ ಕಲ್ಪಿಸಬೇಕು ಎಂದು ಶಿಕ್ಷಕರು ಮನವಿ ಮಾಡಿದರು . ಇದಕ್ಕೆ ಕೂಡಲೇ ಸ್ಪಂದಿಸಿ 1 ವಾರದೊಳಗೆ ಜಾಗವನ್ನು ಗುರುತಿಸಿ ನೀಡಲಾಗುವುದು . ನರೇಗಾ ಯೋಜನೆಯಡಿ ಕ್ರೀಡಾಂಗಣ ನಿರ್ಮಾಣ ಮಾಡಿಸಿ ಕೊಡಲಾಗುವುದು ಎಂದು ತಿಳಿಸಿದರು . ವೆಂಕಟರತ್ನಮ್ಮ ಎಂಬುವವರು ನನಗೆ ನಿವೇಶನ ಮತ್ತು ಮನೆ ಇಲ್ಲಿ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು . ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು 1 ವಾರದೊಳಗೆ ವಸತಿ ರಹಿತರು ಮತ್ತು ನಿವೇಶನ ರಹಿತರ ಪಟ್ಟಿ ನೀಡುವಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು . ಇವರೆಲ್ಲರಿಗೂ ಅಗತ್ಯ ಜಮೀನನ್ನು ಗುರುತಿಸಿ ನಿವೇಶಗಳನ್ನು ಹಾಗೂ ಮನೆ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು . ಗ್ರಾಮಸ್ಥರು ಹೆಚ್.ಮಲ್ಲಂಡಹಳ್ಳಿ ಕೆರೆ ಒತ್ತುವರಿಯಾಗಿರುವುದನ್ನು ಒತ್ತುವರಿ ತೆರವುಗೊಳಿಸಬೇಕು ಎಂದು ಮನವಿ ಮಾಡಿದರು . ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸರ್ವೇ ಮಾಡಿಸಿ ಸರ್ಕಾರಿ ಜಮೀನನ್ನು ಯಾರೇ ಒತ್ತುವರಿ ಮಾಡಿಕೊಂಡಿದ್ದರೂ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು . ಅಹವಾಲು ಸ್ವೀಕಾರದಲ್ಲಿ ಪಿಂಚಣಿ ಸಮಸ್ಯೆ , ಜಮೀನಿನ ಖಾತೆ ಆರ್.ಟಿ.ಸಿ ಸಮಸ್ಯೆ , ನಿವೇಶನ ಇಲ್ಲದಿರುವುದು , ಮನೆ ಇಲ್ಲದಿರುವುದು ಮುಂತಾದ 100 ಕ್ಕೂ ಹೆಚ್ಚು ಅಹವಾಲುಗಳನ್ನು ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು . ನಂತರ ಗ್ರಾಮದಾದ್ಯಂತ ಸಂಚರಿಸಿ ಗ್ರಾಮದ ಕುಂದುಕೊರತೆಗಳನ್ನು ವೀಕ್ಷಿಸಿದರು , ಮನೆಮನೆಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಿದರು . ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್ , ಅಪರ ಜಿಲ್ಲಾಧಿಕಾರಿಗಳಾದ ಡಾ || ಸ್ನೇಹಾ , ವಿಭಾಗಾಧಿಕಾರಿಗಳಾದ ಸೋಮಶೇಖರ್ , ತಹಶೀಲ್ದಾರ್‌ರಾದ ಶೋಭಿತಾ , ವಡಗೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಜಣ್ಣ , ಉಪಾಧ್ಯಕ್ಷರಾದ ಗಿರಿಜಮ್ಮ , ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಾಬು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು .

ತೆಲಾಂಗಣ:ವಕೀಲ ದಂಪತಿಯನ್ನು ಮಾರಕ ಆಯುಧಗಳಿಂದ ನಡುರಸ್ತೆಯಲ್ಲೆ ಕೊಚ್ಚಿ ಕೊಚ್ಚಿ ಹತ್ಯೆ

JANANUDI.COM NETWORK

ತೆಲಂಗಾಣ: ವೈಯಕ್ತಿಯ ದ್ವೇಷದ ಹಿನ್ನೆಲೆಯಲ್ಲಿ ನಡುರಸ್ತೆಯಲ್ಲಿಯೇ ಕಾರನ್ನು ಅಡ್ಡ ಕಟ್ಟಿ ವಕೀಲ ದಂಪತಿಯನ್ನು ಮಾರಕ ಆಯುಧಗಳಿಂದ ಕೊಚ್ಚಿ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಮಂಘಾನಿ ಹಾಗೂ ಪೆದ್ದಪಲ್ಲಿ ಪಟ್ಟಣಗಳ ನಡುವಿನ ವಾಹನ ಮತ್ತು ಜನಜಂಗುಳಿ ಇರುವ ರಸ್ತೆಯಲ್ಲಿ ಜರುಗಿದೆ.
ಗಟ್ಟು ವಾಮನ್ ರಾವ್ ಹಾಗೂ ಅವರ ಪತ್ನಿ ಪಿ.ವಿ.ನಾಗಮಣಿ ಕೊಲೆಯಾದವರು. ವಾಮನ್ ರಾವ್ ಅವರನ್ನು ಹಂತಕರು ಕಾರಿನಿಂದ ಎಳೆದುನಡುರಸ್ತೆಯಲ್ಲೆ ಕೊಚ್ಚಿ ಆಮೇಲೆ ಹಂತಕರು ತಮ್ಮ ಕಾರನ್ನು ಅವರ ಮೇಲೆ ಹರಿದಿ ಪರಾರಿಯಾಗಿದ್ದಾರೆ. ಈ ದಂಪತಿ ತೆಲಂಗಾಣದ ಹೈಕೋರ್ಟ್‌ ವಕೀಲರಾಗಿದ್ದರು.ಗಂಭೀರ ಗಾಯಗೊಂಡಿದ್ದ ವಕೀಲ ದಂಪತಿಯನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ.
ವಾಮನ್ ರಾವ್ ಅವರ ತಂದೆ ಕೃಷ್ಣ ರಾವ್ ಅವರು ಕುಂಟಿ ಶ್ರೀನಿವಾಸ್ ಹಾಗೂ ಇತರರ ವಿರುದ್ದ ದೂರು ದಾಖಲಿಸಿದ ಅರ್ಧಗಂಟೆಯಲ್ಲೆ ಈ ಕೃತ್ಯ ಜರುಗಿದೆ ಎಂದು ತಿಳಿದುಬಂದಿದೆ. ವಾಮನ್‌ ರಾವ್‌ ಕೂಡ ಸಾಯುವ ಮುನ್ನ ಕುಂಟಿ ಶ್ರೀನಿವಾಸ್‌ ಹೆಸರು ಹೇಳಿದ್ದಾರೆ. ಅದನ್ನು ದಾರಿಹೋಕರು ತಮ್ಮ ಮೊಬ್ಯಲ್ ನಲ್ಲಿ ಚಿತ್ರೀಕರಿಸಿದ್ದಾರೆ. ವಿಡೀಯೊ ನೋಡಲು ಭೀಕರಾವಾಗಿದ್ದು,ಸ್ಥಳಿಯರು ಯಾರೊಬ್ಬರೂ ರಕ್ಷಣೆಗೆ ಮುಂದಾಗಲಿಲ್ಲವೆಂಬುದು ತಿಳಿದು ಬರುತ್ತದೆ. ಪತ್ನಿಯ ದೇಹ ಕಾರಳೊಗಿದ್ದುದು ಕಾಣಲು ಸಿಗುತ್ತದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಬಂಧಿಸಲಾಗಿದೆ. ಇವರೆಲ್ಲವೂ ಕುಂಟಿ ಶ್ರೀನಿವಾಸ್‌ ಎಂಬ್ಬವರ ಸಹಚರರಾಗಿದ್ದಾರೆಂದು ತಿಳಿದುಬಂದಿದೆ.
ಈ ಕೃತ್ಯದಲ್ಲಿ ಭಾಗಿಯಾಗಿರುವವರ ಶೋಧಕಾರ್ಯಕ್ಕೆ ಆರು ತಂಡಗಳನ್ನು ರಚಿಸಿರುವುದಾಗಿ ಪೊಲೀಸ್ ಕಮಿಷನರ್ ವಿ.ಸತ್ಯನಾರಾಯಣ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ
.