HOLY ROSARY CHURCH, KUNDAPUR – 450 th JUBILEE SOUVENIR 2021

ಕೊಂಕಣಿ ಸಂಘಟನ್, ಉಡುಪಿ ಜಿಲ್ಲೊ,ಅಕಾಡೆಮಿಚಾ ತರ್ಫೆನ್ ಆಸಾಕರ್ತಾ ಪ್ರಭಂದ್ ಸ್ಪರ್ದೊ

JANANUDI.COM NETWORK

ಕೊಂಕಣಿ ಸಂಘಟನ್, ಉಡುಪಿ ಜಿಲ್ಲೊ
(ಕೊಂಕಣಿ ಸಾಹಿತ್ಯ, ಕಲಾ ಆನಿ ಸಾಂಸ್ಕೃತಿಕ್ ಸಂಘಟನ್)
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಚಾ ತರ್ಫೆನ್ ಆಸಾಕರ್ತಾ ಪ್ರಭಂದ್ ಸ್ಪರ್ದೊ, ಹಾಂತು ಲ್ಹಾನಾನಿ ತಶೆಂ ವ್ಹಡಾನಿ ಪಾತ್ರ್ ಘೆವ್ಯೆತ್
ವಿಶಯ್: ಪ್ರಭಂದಾಜೊ ವಿಶಯ್ ಆಮ್ಚಿ ಕೊಂಕ್ಲಿ ಭಾಸ್ ಆನಿ ಸಂಸ್ಕೃತಿ ” ಆದಿಂ, ಆತಾಂ ಆನಿ ಮುಕಾರ್” ಕಶಿ ಆಸಲ್ಲಿ ಆನಿ ಕಶಿ ಆಸುಂಕ್ ಜಾಯ್.
ದೀಸ್: ಮಾರ್ಚ್ 11 ತಾರಿಕ್ ಬ್ರೆಸ್ತಾರಾ ಸಾಂಜೆರ್ 3.00 ವರಾಂಚೆರ್.
ಜಾಗೊ: ಡೊನ್ ಬೊಸ್ಕೊ ಫಿರ್ಗಜ್ ಸಾಲ್, ದುಕಿ ಸಾಯ್ಕಿಣಿಂಚಿ ಫಿರ್ಗಜ್, ಉಡುಪಿ


ಸೂಚನಾಂ:-
ಸ್ಫರ್ಧಿಕಾನಿ ತಾಂಚೆ ನಾಂವ್, ಸಮುದಾಯ್ ಆನಿ ಮೊಬಾಯ್ಲ್ ನಂಬರ್ ಪೆಪರಾಚಾ ದಾವ್ಯಾ ಕುಶಿನ್ ಬೊರೊಂವ್ಚೆ
ಪೆನ್ ಆನಿ ಪೆಪರ್ ಆಮ್ಚೆಂ ಥಾವ್ನ್ ಮೆಳ್ತಲೆ.
ಪ್ರಭಂದ್ 400 ಸಬ್ದ್ ಆಸೊನ್ ದೊನ್ ಪೇಜ್ ಆಸುಂಕ್ ಜಾಯ್.
ಪ್ರಭಂದ್ ಬೊರೊಂವ್ಕ್ ವೇಳ್ 45 ಮಿನುಟಾಂ.
ಇನಾಮಾಂ ದೋನ್ ಆಸ್ತೆಲಿಂ (ಪಯ್ಲೆಂ ಆನಿ ದುಸ್ರೆಂ ) ಆಸ್ತೆಲಿಂ, ನಗದ್ ರುಪಾರ್.
ಇನಾಮಾಂ ಮಾರ್ಚ್ 3 ತಾರಿಕೆರ್ ಮಣಿಪಾಲಾಂತ್ ಚಲ್ಟಾ ಸಾಹಿತ್ಯ
ಸಮ್ಮೆಳನಾಂತ್ ದಿತೆಲೆ.
ಭಾಗ್ ಘತಲ್ಯಾ ಸರ್ವಾಂಕ್ ಪ್ರಮಾಣ್ ಪತ್ರ್ ದಿತೆಲೆ.
ಸ್ಪರ್ದಿಕಾಂನಿ ತಾಂಚಿ೦ ನಾಂವಾ ಮಾರ್ಚ್ 9 ತಾರಿಕೆ ಭಿತರ್ ದಿಂವ್ಕ್ ವಿನಂತಿ

ಸಂಪರ್ಕ್ ಕರಾ
ಲುವಿಸ್ ಡಿಆಲ್ಮೇಡಾ, ಅಧ್ಯಕ್ಷ್, ಕೊಂಕಣಿ ಸಂಘಟನ್, 9481539722
ರೊಜಿ ಬಾರೆಟ್ಟೊ,ಕಾರ್ಯದರ್ಶಿ, ಕೊಂಕಣಿ ಸಂಘಟನ್,
ಡಾ|ಜೆರಾಲ್ಡ್ ಪಿಂಟೊ, ಕಾರ್ಯಾಚೊ ಸಂಜಾಲಕ್ 9448480248

ಆರ್. ಎನ್. ಶೆಟ್ಟಿ ಪಿ.ಯು. ಕಾಲೇಜಿನಲ್ಲಿ ‘ಮಹಿಳಾ ಉತ್ಸವ್-ಬಂಧನ್ -2021’ ಸಪ್ತಾಹದ ,ಮಾಹಿತಿ ಉಪನ್ಯಾಸ.

JANANUDI.COM NETWORK

“ಆತ್ಮರಕ್ಷಣಾ ಮಾರ್ಗಗಳ ನಿಖರವಾದ ತಿಳುವಳಿಕೆ ಪ್ರತಿಯೊಬ್ಬ ಹುಡುಗಿ ಅಥವಾ ಮಹಿಳೆಗೂ ಇರಬೇಕು‌. ಆತ್ಮ ರಕ್ಷಣೆಯ ಸ್ಪಷ್ಟ ಅರಿವು ದೇಹದಲ್ಲಿ ಶಕ್ತಿ, ಧೃಢತೆಯನ್ನು ಕಾಪಾಡುವಲ್ಲಿ ಸಹಕಾರಿಯಾಗುವುದು” ಎಂದು ಕುಂದಾಪುರ ಎ.ಎಸ್.ಐ ಶ್ರೀ ಸುಧಾಕರ್ ರವರು ಕುಂದಾಪುರದ ಆರ್. ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ  ಜೆಸಿಐ ಕುಂದಾಪುರ ಸಿಟಿಯ ಮಹಿಳಾ ಘಟಕ ಜೆಸಿರೆಟ್ ಕುಂದಾಪುರ ಸಿಟಿ  ಇದರ ಸಹಯೋಗದಲ್ಲಿ ‘ ಮಹಿಳಾದಿನ’ ದ ಪ್ರಯುಕ್ತ ಹಮ್ಮಿಕೊಂಡ  ಮಹಿಳಾ ಉತ್ಸವ್- ‘ಬಂಧನ್’-2021′- ಸಪ್ತಾಹದ ಅಂಗವಾಗಿ ನಡೆದ ಮಾಹಿತಿ ಉಪನ್ಯಾಸ ಕಾರ್ಯಕ್ರಮದಲ್ಲಿ ತಿಳಿಸಿದರು.  ಕಾರ್ಯಕ್ರಮದ ಮುಖ್ಯ ಅತಿಥಿ ಜೆ.ಸಿ.ಐ ವಲಯಾಧ್ಯಕ್ಷೆ ಶ್ರೀಮತಿ ಸೌಜನ್ಯ ಹೆಗ್ಡೆಯವರು
ಆತ್ಮರಕ್ಷಣೆಯೆಂದರೆ ಮಹಿಳೆಯರು ತಮ್ಮನ್ನು ರಕ್ಷಿಸಿಕೊಳ್ಳುವುದರ ಜೊತೆಗೇ ಅಗತ್ಯವಿದ್ದ ಇತರರಿಗೂ ಸಹಾಯ ಮಾಡುವುದಾಗಿರುತ್ತದೆ. ಈ ನಿಟ್ಟಿನಲ್ಲಿ ಮಹಿಳಾ ದಿನಾಚರಣಾ ಅಂಗವಾಗಿ  ಜೆ.ಸಿಐ ಕುಂದಾಪುರ ಸಿಟಿಯವರು ವಾರದುದ್ದಕ್ಕೂ ನಡೆಸುತ್ತಿರುವ ಮಾಹಿತಿ ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ ಶೆಟ್ಟಿಯವರು, ಮಹಿಳೆಯರಲ್ಲಿ ಆತ್ಮಸ್ಥೈರ್ಯವಿದ್ದು, ಸಮಸ್ಯೆಯನ್ನು ಇತರರೊಂದಿಗೆ ಹಂಚಿಕೊಂಡರೆ ಹಲವು ಸಂಘಸಂಸ್ಥೆಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು. ಜೆಸಿಐ ಕುಂದಾಪುರ ಸಿಟಿ ಇದರ ಸ್ಥಾಪಕಾಧ್ಯಕ್ಷರಾದ ಶ್ರೀ ಹುಸೇನ್ ಹೈಕಾಡಿ, ನಿಕಟಪೂರ್ವ ವಲಯಾಧ್ಯಕ್ಷರಾದ ಶ್ರೀ ಕಾರ್ತಿಕೇಯ ಮಧ್ಯಸ್ಥ, ಜೆಸಿಐ ಅಧ್ಯಕ್ಷರಾದ ಶ್ರೀ ವಿಜಯ ಭಂಡಾರಿ, ವಲಯಾಧಿಕಾರಿ ಶ್ರೀ ಪ್ರಶಾಂತ ಹವಾಲ್ದಾರ್, ಜ್ಯೂನಿಯರ್ ಜೆ.ಸಿಯ ಅಧ್ಯಕ್ಷರಾದ ಸ್ಯಾಮ್ಯುಯಲ್ ಲೂಯಿಸ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಜೆಸಿರೆಟ್ ಕುಂದಾಪುರ ಸಿಟಿ ಇದರ ಅಧ್ಯಕ್ಷರಾದ ಡಾ. ಸೋನಿಯವರು ಸ್ವಾಗತಿಸಿದರು.  ಜೆ.ಸಿಐ ಕುಂದಾಪುರ ಸಿಟಿಯ ಕಾರ್ಯದರ್ಶಿ ಶ್ರೀ ಗುರುರಾಜ್ ಕೋತ್ವಾಲ್ ರವರು ಧನ್ಯವಾದ ಸಲ್ಲಿಸಿದರು. ಜೆಸಿರೆಟ್ ಅಧ್ಯಕ್ಷೆ ಡಾ. ಸೋನಿ ಮತ್ತು ಕಾಲೇಜಿನ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕಿ‌ ಪ್ರೆಸಿಲ್ಲಾ ರವರು ಕಾರ್ಯಕ್ರಮ ನಿರ್ವಹಿಸಿದರು
.

ಸಮಾಜ ಸರಳ ವಿವಾಹ ಪದ್ಧತಿಯನ್ನು ಗೌರವಿಸಬೇಕು;ಶಾಸಕ ಕೆ.ಆರ್.ರಮೇಶ್ ಕುಮಾರ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಸಮಾಜ ಸರಳ ವಿವಾಹ ಪದ್ಧತಿಯನ್ನು ಗೌರವಿಸಬೇಕು. ಮದುವೆಗಾಗಿ ಸಾಲ ಮಾಡಿ ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಗುಮ್ಮರೆಡ್ಡಿಪುರ ಗ್ರಾಮದಲ್ಲಿ ಮಾರ್ಕೊಂಡಪ್ಪ ಸೇವಾ ಟ್ರಸ್ಟ್ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಧೂವರನ್ನು ಆಶೀರ್ವದಿಸಿ ಮಾತನಾಡಿದ ಅವರು, ಸರಳತೆಯಲ್ಲಿ ಸಂತೋಷವಿದೆ. ಹಿಂದೆ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದ್ದ ವಿವಾಹಗಳು ಎಲ್ಲ ಕಾಲಕ್ಕೂ ಮಾದರಿಯಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ 10 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಸಾಮೂಹಿಕ ವಿವಾಹ ಏರ್ಪಡಿಸಿದ್ದ ಸಮಾಜ ಸೇವಕರಾದ ಲಕ್ಷ್ಮೀನಾಯಕ, ಎಂ.ಮುನಿಶಾಮಿ ನಾಯಕ ಇದ್ದರು

ಆದಿ ಜಾಂಭವಂತಸ್ವಾಮಿ ಜಯಂತಿಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಘೋಷಿಸಬೇಕು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಕೇಂದ್ರ ಸರ್ಕಾರ ಆದಿ ಜಾಂಭವಂತಸ್ವಾಮಿ ಜಯಂತಿಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಘೋಷಿಸಬೇಕು ಎಂದು ಮಾದಿಗ ದಂಡೋರ ಸಂಘಟನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜೆ.ಎಂ.ದೇವರಾಜ್ ಆಗ್ರಹಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಆದಿ ಜಾಂಭವಂತಸ್ವಾಮಿ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಆದಿ ಜಾಂಭವಂತಸ್ವಾಮಿ ತಮ್ಮ ಹಿರಿತನ ಹಾಗೂ ಸಮದೃಷ್ಟಿಯಿಂದ ಸಮಾಜದ ಎಲ್ಲ ವರ್ಗದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರ ಸ್ಮರಣೆಯಿಂದ ಮಾನವ ಇತಿಹಾಸದ ದರ್ಶನವಾಗುತ್ತದೆ ಎಂದು ಹೇಳಿದರು.
ಸರ್ಕಾರ ಮಾದಿಗ ದಂಡೋರ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸಬೇಕು. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರಬೇಕು. ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಈಗಾಗಲೆ ಅತ್ಯಂತ ಹಿಂದುಳಿದಿರುವ ಈ ಸಮುದಾಯ ಇನ್ನಷ್ಟು ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ಸಂಘಟನೆಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ರಾಮು ಮಾತನಾಡಿ, ಮಾದಿಗ ಸಮುದಾಯ ಶೈಕ್ಷಣಿಕವಾಗಿ ಮುಂದೆ ಬರಬೇಕು. ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಪ್ರೋತ್ಸಾಹ ನೀಡಬೇಕು. ಶಿಕ್ಷಣ ಇಲ್ಲದೆ ಸಂಘಟನೆ ಹಾಗೂ ಹೋರಾಟ ಸಾಧ್ಯವಾಗುವುದಿಲ್ಲ. ಇದನ್ನು ಸಮುದಾಯದ ಪ್ರತಿಯೊಬ್ಬರು ಅರಿಯಬೇಕು ಎಂದು ಹೇಳಿದರು.
ಸಂಘಟನೆಯ ಮುಖಂಡರಾದ ಆರ್.ಬಿ.ನರಸಿಂಹಣ್ಣ, ರಘುನಾಥ, ಸಿ.ಎಂ.ಲಕ್ಷ್ಮಣ್, ನಾಗೇಶ್, ನಾಗರಾಜ್, ಶ್ರೀನಿವಾಸ್, ಮುನಿರಾಜು, ರವೀಂದ್ರ, ಚಂದ್ರಪ್ಪ, ಜೆ.ಶಂಕರ್, ರವಿಕುಮಾರ್, ಸುರೇಶ್, ಕೆ.ವೆಂಕಟೇಶ್, ಶಿವಮ್ಮ, ಮಂಜುಳ, ಸರಸ್ವತಮ್ಮ ಇದ್ದರು
.

ಜಿಲ್ಲೆಗೆ ಖಾಯಂ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ -ಕೃಷಿ ಆಧಾರಿತ ಕೈಗಾರಿಕೆಗಳಿಗೆ ಆದ್ಯತೆ ನೀಡಬೇಕು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ: ಜಿಲ್ಲೆಗೆ ಖಾಯಂ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಬಜೆಟ್‍ನಲ್ಲಿ ಕೋಲಾರ ಜಿಲ್ಲೆಗೆ ವಿದರ್ಭ ಪ್ಯಾಕೇಜ್ ನೀಡುವ ಜೊತೆಗೆ ಕೃಷಿ ಆಧಾರಿತ ಕೈಗಾರಿಕೆಗಳು ಮತ್ತು ಮಾವು ಸಂಸ್ಕರಣಾ ಘಟಕಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ರೈತಸಂಘದಿಂದ ನಗರದ ಬಸ್ ನಿಲ್ದಾಣ ವೃತ್ತದಲ್ಲಿ ತರಕಾರಿಯೊಂದಿಗೆ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಯಾವುದೇ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿಯಬೇಕಾದರೆ ಜಿಲ್ಲೆಯ ಮೂಡಣಬಾಗಿಲು ಕುರುಡುಮಲೆ ಗಣಪತಿ ದೇವರ ಆಶೀರ್ವಾದ ಬೇಕು. ಆದರೆ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ಮಾತ್ರ ಸಿಗುತ್ತಿಲ್ಲ.
ಒಂದು ಕಡೆ ಅತಿವೃಷ್ಠಿ, ಅನಾವೃಷ್ಠಿ ಮತ್ತೊಂದು ಕಡೆ ಭೀಕರವಾದ ಬರಗಾಲಕ್ಕೆ ಜಿಲ್ಲೆ ತುತ್ತಾಗಿದೆ. ಮತ್ತೊಂದೆಡೆ ಜಿಲ್ಲಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತುಂಬಿತುಳುಕುತ್ತಿದೆ. ಜನಸಾಮಾನ್ಯರು ಜನನ ಪ್ರಮಾಣಪತ್ರದಿಂದ ಮರಣ ಪ್ರಮಾಣ ಪತ್ರದವರೆಗೂ ಲಂಚ ಲಂಚ ಎಂಬ ಭೂತ ಬಡವರನ್ನು ಹಿಂಸೆ ಮಾಡುತ್ತಿದೆ. ಹದಗೆಟ್ಟಿರುವ ಜಿಲ್ಲಾಡಳಿತದ ವಿರುದ್ಧ ದೂರು ನೀಡಲು ಖಾಯಂ ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲದೆ ಅನಾಥವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಹಿಂದೆ ಇದ್ದಂತಹ ಪಕ್ಷೇತರ ಶಾಸಕರಾದ ಎಚ್.ನಾಗೇಶ್ ಸಚಿವ ಸಂಪುಟದಿಂದ ಕೈಬಿಟ್ಟ ನಂತರ ಸರ್ಕಾರ ಗಣರಾಜ್ಯೋತ್ಸವಕ್ಕೆ ಧ್ವಜಾರೋಹಣ ಮಾಡಲು ಸಿ.ಪಿ.ಯೋಗೇಶ್ವರ್ ಅವರನ್ನು ನೇಮಕ ಮಾಡಿ ಆದೇಶ ಮಾಡಿದ ನಂತರ ಧ್ವಜಾರೋಹಣ ಮಾಡಿ ಜಿಲ್ಲೆಯಿಂದ ನಾಪತ್ತೆಯಾಗಿರುವವರು ಇದುವರೆಗೂ ಜಿಲ್ಲೆಯ ಕಡೆ ಮುಖ ಮಾಡಿಲ್ಲ.
ಜಿಲ್ಲೆಯ 6 ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿಲ್ಲದ ಕಾರಣ ಹೊರ ಜಿಲ್ಲೆಯವರಿಗೆ ಜಿಲ್ಲಾ ಉಸ್ತುವಾರಿ ನೀಡಬೇಕಾದ ಅನಿವಾರ್ಯವಿದೆ. ಆದರೆ ಜಿಲ್ಲೆಯ ಗಂಧ ಗಾಳಿ ಗೊತ್ತಿಲ್ಲದ ಸರ್ಕಾರದ ಒತ್ತಡಕ್ಕೆ ಮಣಿದು ಜಿಲ್ಲೆಗೆ ಬರುವ ಉಸ್ತುವಾರಿ ಸಚಿವರು ನೆಪ ಮಾತ್ರಕ್ಕೆ ಬಂದ ಪುಟ್ಟ, ಹೋದ ಪುಟ್ಟ ಎಂಬಂತಾಗಿದೆ ಎಂದು ಜಿಲ್ಲೆಯ ಜನರು ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಮಾತನಾಡಿ, ಇದೇ ತಿಂಗಳು ಮಾರ್ಚ್ 8ರಂದು ಮಂಡನೆ ಮಾಡುತ್ತಿರುವ ರಾಜ್ಯ ಬಜೆಟ್‍ನಲ್ಲಿ ಬಯಲುಸೀಮೆಯ ಕೋಲಾರ ಜಿಲ್ಲೆಗೆ ವಿಧರ್ಭ ಪ್ಯಾಕೇಜ್ ನೀಡುವ ಜೊತೆಗೆ ಅತಿವೃಷ್ಠಿ ಅನಾವೃಷ್ಠಿ ಹಾಗೂ ಮಾವು ಸಂಸ್ಕರಣೆ ಮಾಡಲು ಸರ್ಕಾರ ಬಜೆಟ್‍ನಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳು ಮತ್ತು ಮಾವು ಸಂಸ್ಕರಣಾ ಘಟಕಗಳಿಗೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ರೇಷ್ಮೆ ಬೆಳೆಗಾರರ ರಕ್ಷಣೆಗೆ ಕೆಎಸ್‍ಎಂಬಿ ಪುನಶ್ಚೇತನಗೊಳಿಸಬೇಕು.

ಡಾ.ಬಸವರಾಜನ್ ವರದಿ ಜಾರಿ ಮಾಡುವ ಜೊತೆಗೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ, ಶಿಕ್ಷಣ, ಆರೋಗ್ಯ ಅಭಿವೃದ್ಧಿ ದೃಷ್ಠಿಯಿಂದ ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕು. ದುಬಾರಿಯಾಗುತ್ತಿರುವ ಜನಸಾಮಾನ್ಯರ ರಕ್ಷಣೆಗೆ ದಿನ ನಿತ್ಯದ ಬಳಕೆ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಹಾಗೂ ಕೃಷಿ ಯಂತ್ರೋಪಕರಣಗಳ ಬೆಲೆ, ಸ್ಥಗಿತಗೊಂಡಿರುವ ಹನಿ ನೀರಾವರಿ ಯೋಜನೆಯನ್ನು ಮುಂದುವರೆಸಿ ರೈತರ ರಕ್ಷಣೆಗೆ ನಿಲ್ಲುವ ಜೊತೆಗೆ ಒಟ್ಟಾರೆಯಾಗಿ ಜಿಲ್ಲೆಯ ಅಭಿವೃದ್ಧಿಗೆ ವಿದರ್ಭ ಪ್ಯಾಕೇಜ್ ಬಜೆಟ್‍ನಲ್ಲಿ ಘೋಷಣೆ ಮಾಡಬೇಕೆಂದು ಬಯಲು ಸೀಮೆಯ ಜಿಲ್ಲೆಯ ಸಮಸ್ತ ನಾಗರೀಕರ ಪರವಾಗಿ ಮನವಿ ಮಾಡುತ್ತಿರುವುದಾಗಿ ಹೇಳಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಶೋಭಿತಾ, ತಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಂಗಸಂದ್ರ ನಾಗೇಶ್, ವಡಗೂರು ಮಂಜುನಾಥ್, ಮಾಲೂರು ತಾಲೂಕು ಅಧ್ಯಕ್ಷ ಮಾಸ್ತಿ ವೆಂಕಟೇಶ್, ಶ್ರೀನಿವಾಸಪುರ ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ರಾಜ್ಯ ಸಂಚಾಲಕ ಅನಿಲ್, ಹಸಿರುಸೇನೆ ಜಿಲ್ಲಾಧ್ಯಕ್ಷ ಕಿರಣ್, ಚಲಪತಿ, ವಕ್ಕಲೇರಿ ಹನುಮಯ್ಯ, ಅಶ್ವತ್ಥಪ್ಪ., ಸುಪ್ರಿಂಚಲ, ರಾಮಕೃಷ್ಣಪ್ಪ, ಗಣೇಶ್, ಸಾಗರ್, ಹೆಬ್ಬಣಿ ಆನಂದರೆಡ್ಡಿ, ಹರೀಶ್, ಯಲ್ಲಪ್ಪ, ಮಹೇಶ್, ಕೇಶವ, ವೇಣು ಮತ್ತಿತರರು ಉಪಸ್ಥಿತರಿದ್ದರು
.

ಭಂಡಾರ್ಕಾರ್ಸ್ ಕಾಲೇಜಿನ ಪ್ರಾಧ್ಯಾಪಕಿ ಡಾ.ಗಾಯತ್ರಿ ಪೈಗೆ ಡಾಕ್ಟರೇಟ್ ಪದವಿ

JANANUDI.COM NETWORK


ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಮತ್ತು ಸಹಾಯಕ ಪ್ರಾಧ್ಯಾಪಕಿ ಡಾ.ಗಾಯತ್ರಿ ಪೈ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ದೊರೆತಿದೆ.
ಅವರುಮಂಗಳೂರು ವಿಶ್ವ ವಿದ್ಯಾನಿಲಯದಜೀವ ವಿಜ್ಞಾನ ವಿಭಾಗದ ಪ್ರೊ.ಚಂದ್ರ ಎಂ. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಐಸೋಲೇಶನ್, ಐಡೆಂಟಿಫಿಕೇಶನ್ ಆ್ಯಂಡ್ ಆ್ಯಂಟಿ ಮೈಕ್ರೋಬಿಯಲ್ ಆ್ಯಕ್ಟಿವೀಟೀಸ್ ಆಫ್ ಆಫೆಂಡೋಪೈಥಿಕ್ ಫಂಗಿ ಫ್ರಾಮ್ ಮೆಡಿಶಿನಲ್ ಪ್ಲಾಂಟ್ಸ್‍ಆಫ್‍ಉಡುಪಿ ಡಿಸ್ಟ್ರಿಕ್ಟ್” (Isolation,Identification and Antimicrobial Activities of Endophytic Fungi from Medicinal Plants of Udupi District)ಎಂಬ ಮಹಾಪ್ರಬಂಧವನ್ನು ಪಿಹೆಚ್.ಡಿ ಪದವಿಗಾಗಿ ಮಂಡಿಸಿರುತ್ತಾರೆ.
ಡಾ.ಗಾಯತ್ರಿ ಪೈಅವರು ದಿವಂಗತ ಕೆ.ಪಾಂಡುರಂಗ ಪೈ ಮತ್ತುರೋಹಿಣಿ.ಪಿ.ಪೈ ಅವರ ಪುತ್ರಿಯಾಗಿದ್ದು ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮದಲ್ಲಿಅಧಿಕಾರಿಯಾಗಿರುವ ಹೆಚ್.ಗಿರಿಧರ ಪೈಯವರ ಪತ್ನಿಯಾಗಿದ್ದಾರೆ.

ಬಿಎಂಸಿ ಘಟಕಗಳ ಸ್ಥಾಪನೆಯಿಂದ ಉತ್ತಮ ಗುಣಮಟ್ಟದ ಹಾಲು ;ಎನ್.ಹನುಮೇಶ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಬಿಎಂಸಿ ಘಟಕಗಳ ಸ್ಥಾಪನೆಯಿಂದ ಉತ್ತಮ ಗುಣಮಟ್ಟದ ಹಾಲು ಸಂಗ್ರಹಣೆ ಸಾಧ್ಯವಾಗಿದೆ ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು.
ತಾಲ್ಲೂಕಿನ ನಾರವಮಾಕಲಹಳ್ಳಿ ಗ್ರಾಮದಲ್ಲಿ ಗುರುವಾರ 3 ಸಾವಿರ ಲೀಟರ್ ಮಾಮಥ್ಯದ ನೂತನ ಬಿಎಂಸಿ ಘಟಕ ಉದ್ಘಾಟಿಸಿ ಮಾತನಾಡಿ, ಬಿಎಂಸಿ ಘಟಕಗಳಲ್ಲಿ ಹಾಲನ್ನು ಶೀಥಲೀಕರಣ ಮಾಡುವುದರಿಂದ ಹಾಲಿನ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ತಾಲ್ಲೂಕಿನಲ್ಲಿ ಪ್ರತಿ ದಿನ 55 ಸಾವಿರ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಹಾಲು ಉತ್ಪಾದಕರಿಗೆ ಲೀಟರ್ ಒಂದಕ್ಕೆ ರೂ.27 ನೀಡಲಾಗುತ್ತಿದೆ. ಪಶು ಆಹಾರವನ್ನು ಮೂಟೆಯೊಂದಕ್ಕೆ ರೂ.25 ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ರೈತರು ಇದರ ಪ್ರಯೋಜನ ಪಡೆದು ಉತ್ತಮ ಗುಣಮಟ್ಟದ ಹಾಲು ಉತ್ಪಾದಿಸಬೇಕು ಎಂದು ಹೇಳಿದರು.
ಹಾಲು ಉತ್ಪಾದಕರು ಯಾವುದೇ ಕಾರಣಕ್ಕೂ ಖಾಸಗಿ ಡೇರಿಗಳಿಗೆ ಹಾಲು ಮಾರಾಟ ಮಾಡಬಾರದು. ಹಾಗೆ ಮಾಡುವುದರಿಂದ ಹಾಲು ಒಕ್ಕೂಟದ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ ಎಂದು ಹೇಳಿದರು.
ಕ್ಯಾಂಪ್ ಕಚೇರಿಯ ಉಪ ವ್ಯವಸ್ಥಾಪಕ ಕೆ.ಎಸ್.ನರಸಿಂಹಯ್ಯ, ವಿಸ್ತರಣಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್, ಎಸ್.ವಿನಾಯಕ ಇದ್ದರು.

ದಕ್ಷಿಣ ಅಮೆರಿಕಾದ ಬೊಲಿವಿಯಾದಲ್ಲಿ ಕಾಲೇಜು ವಿದ್ಯಾರ್ಥಿಗಳ ಗುಂಪುಗಳ ಘರ್ಷಣೆ-ರಕ್ಷಣಾ ಗ್ರೀಲ್ ಕಳಚಿ ಕೆಳಕ್ಕೆ ಬಿದ್ದು 7 ವಿದ್ಯಾರ್ಥಿಗಳ ಸಾವು

JANANUDI.COM NETWORK

ದಕ್ಷಿಣ ಅಮೆರಿಕಾದ ಬೊಲಿವಿಯಾದಲ್ಲಿ ನಿನ್ನೆ ಕಾಲೇಜು ವಿದ್ಯಾರ್ಥಿಗಳ ಎರಡು ಗುಂಪುಗಳ ಮಧ್ಯೆ ಕಾಲೇಜಿನ ಕೋರಿಡೋರ್ ನಲ್ಲಿ ಘರ್ಷಣೆ ನಡೆಯುತ್ತಿದ್ದಾಗ ತಡೆ ಗೋಡೆಗೆ ಮಾಡಿದ ಕಬ್ಬಿಣದ ಪೈಪುಗಳಿಂದ ಮಾಡಿದ ರಕ್ಷಣಾ ಗ್ರಿಲ್ ತುಂಡಾಗಿ ನಾಲ್ಕನೇ ಮಹಡಿಯಿಂದ 12 ವಿದ್ಯಾರ್ಥಿಗಳು ಆಯತಪ್ಪಿ ಕೆಳಗೆ ಬಿದ್ದಿದ್ದು ಅದರಲ್ಲಿ 7 ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವಿಗೀಡಾಗಿದ್ದು ಐವರು ವಿದ್ಯಾರ್ಥಿಗಳು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚಿಕ್ಕ ವಿಷಯಕ್ಕೆ ನಡೆದ ಗಲಾಟೆ ಏಳು ವಿದ್ಯಾರ್ಥಿಗಳ ಜೀವವನ್ನು ಬಲಿ ಪಡೆದಿದ್ದು ದೇಶದಲ್ಲಿ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ

Bolivia – Barricade falls while students are clashed at Barricade – seven students died

In Bolivia, South America, yesterday, two groups of college students clashed with barricaded iron pipes in the college’s corridor, The Defence pipe Grill fell off the fourth floor with 12 students, seven of whom died on the spot. The uproar over a minor issue has claimed the lives of seven students and a national mourning has been declared in the country

ಭಂಡಾರ್ಕಾರ್ಸ್ – ಪ್ರದಾನ ಮಂತ್ರಿ ಜನೌಷಧಿ ಕೇಂದ್ರದ ಸಹಯೋಗದಲ್ಲಿ “ಸುವಿಧಾ ಪ್ಯಾಡ್ ಕ್ರಾಂತಿ ಆಚರಣೆ”

JANANUDI.COM NETWORK


ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್‍ಕಾಲೇಜಿನಲ್ಲಿ ಮಹಿಳಾ ವೇದಿಕೆ ಮತ್ತು ಕುಂದಾಪುರದ ಪ್ರದಾನ ಮಂತ್ರಿ ಜನೌಷಧಿ ಕೇಂದ್ರದದ (ಕುಮದಾಪುರ ರೆಡ್‍ಕ್ರಾಸ್ ಘಟಕ) ಸಹಯೋಗದಲ್ಲಿ“ಸುವಿಧಾ ಪ್ಯಾಡ್ ಕ್ರಾಂತಿ ಆಚರಣೆ” ಪ್ರಯುಕ್ತ ಉಚಿನ ಸ್ಯಾನಿಟರಿ ಪ್ಯಾಡ್ ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಂದಾಪುರ ರೆಡ್‍ಕ್ರಾಸ್ ಘಟಕ ಸಭಾಪತಿಗಳಾದ ಕೆ.ಜಯಕರ ಶೆಟ್ಟಿಅವರು ಮಹಿಳೆಯರಲ್ಲಿ ಪ್ಯಾಡ್ ಬಳಕೆ ಮುಖ್ಯವಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ಅದರ ಕುರಿತುಅರಿವು ಮೂಡಿಸಬೇಕುಎಂದು ಹೇಳಿದರು.
ಕುಂದಾಪುರದ ರೆಡ್‍ಕ್ರಾಸ್ ಘಟಕದ ಸದಸ್ಯೆ ಡಾ.ಸೋನಿ ಡಿಕೋಸ್ತಾ, ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ಪ್ಯಾಡ್ ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ಮಹಿಳಾ ವೇದಿಕೆಯ ಸಂಚಾಲಕರಾದ ಡಾ.ಯಶವಂತಿ ಕೆ. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಯಜುಶಾ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿ ವಂದಿಸಿದರು.