HOLY ROSARY CHURCH, KUNDAPUR – 450 th JUBILEE SOUVENIR 2021

ಕೋವಿಡ್ ಸೋಂಕಿತನೊಬ್ಬ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಭರ್ತಿ –ಆದರೆ ಆತನ ಶವ ಮಾತ್ರ ಚರಂಡಿಯಲ್ಲಿ ಪತ್ತೆ !

JANANUDI.COM NETWORK

ಮೈಸೂರು:ಮೇ. ಕೊರೋನಾ ಮಹಾಮಾರಿ ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದ್ದು,ಜನರು ನರಳಿನರಳಿ ಸಾಯುತಿದ್ದಾರೆ, ಇದೀಗ ಮೈಸೂರು ಚಾಮರಾಜ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಅಸಹಯಕರ ಘಟ್ನೆನಡೆದಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಹಲವಾರು ಜೀವಗಳು ಲೆಕ್ಕೆ ಇಲ್ಲದಷ್ಟು ಬಲಿಯಾಗುತ್ತಿರುವಾಗ,  ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಘಟನೆ ನಡೆದಿದ್ದು, ಮೋರಿಯಲ್ಲಿ ಕೊರೊನಾ ಸೋಂಕಿತನ ಶವ ಪತ್ತೆಯಾಗಿದ್ದು ಅಘಾತಕಾರಿ ಪ್ರಕರಣವಾಗಿದೆ. ಜಿಲ್ಲಾಸ್ಪತ್ರೆ ಸಿಬ್ಬಂದಿಗಳ ಇಂತಹ ಬೇಜವಾಬ್ಧಾರಿ ಕಾರ್ಯಕ್ಕೆ ಜನರು ಹಿಡಿಶಾಪ ಹಾಕುತ್ತಾ ಇದ್ದಾರೆ.

   ಕೋವಿಡ್  ಸೊಂಕಿನಿಂದ ಬಳಲುತ್ತಿದ್ದ ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದ ಸುರೇಶ್ ಎಂಬುವವರನ್ನು ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.ಆಸ್ಪತ್ರೆಯ ಬಿಜವಾಬ್ದಾರಿಯಲ್ಲಿ ಸುರೇಶ್ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರೆ, ಆದರೆ ಜಿಲ್ಲಾಸ್ಪತ್ರೆ ಸುರೇಶ್ ನಾಪತ್ತೆಯ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆದೆ. ಆದರೆ ಆತನು ಸತ್ತು ಶವಗಾಗಿ ಇಂದು ರಸ್ತೆ ಪಕ್ಕದ ಮೋರಿಯಲ್ಲಿ ಪತ್ತೆಯಾಗಿದೆ.

    ಮೋರಿಯಲ್ಲಿ ಶವ ಪತ್ತೆಯಾದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಅನಾಥ ಶವವೆಂದು ಶವಾಗಾರಕ್ಕೆ ಕೊಂಡೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

ಇದೀಗ ಕಲಬುರಗಿಯಲ್ಲಿಯೂ ಆಕ್ಸಿಜನ್ ಕೊರತೆಯಿಂದ ನಾಲ್ವರ ದುರ್ಮರಣ-ಇನ್ನೂ ಹಲವರು ಅಪಾಯದಲ್ಲಿ

JANANUDI.COM NETWORK

ಕಲಬುರಗಿ ,ಮೇ.4 : ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತದಲ್ಲಿ ೨೪ ಜನರ ದುರ್ಮರಣದ ಬೆನ್ನಲ್ಲೇ ಇದೀಗ ಕಲಬುರಗಿಯಲ್ಲಿಯೂ ಇಂತಹದೇ ದುರಂತ ಸಂಭವಿಸಿದೆ. ಆಕ್ಸಿಜನ್ ಸಿಗದೆ ನಾಲ್ವರು ಕೊರೊನಾ ಸೋಂಕಿತರು ಸಾವನ್ನಪ್ಪಿರುವ ಭೀಕರ ಘಟನೆ ಕಲಬುರಗಿಯ ಅಫಜಲ್ ಪುರ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.

        ಮುಂಜಾನೆ 4 ಗಂಟೆಗೆ ಆಕ್ಸಿಜನ್ ಕೊರತೆ ಎದುರಾಗಿದ್ದು. ಆದರೆ ಬೆಳಗ್ಗೆ 11 ಗಂಟೆ ಸಮೀಪಿಸುತ್ತಾ ಬಂದಿದ್ದರೂ ಕೂಡ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆಯಾಗಿಲ್ಲ. ಇದರಿಂದಾಗೊ ರೋಗಿಗಳು ಆಕ್ಸಿಜನ್ ಸಿಗದೆ ಪರದಾಡುತ್ತಿದ್ದಾರೆ.

    ಅಫಜಲ್ ಪುರ ತಾಲೂಕು ಆಸ್ಪತ್ರೆಯಲ್ಲಿ ಇನ್ನೂ 32 ಮಂದಿ ರೋಗಿಗಳು ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇದರಿಂದಾಗಿ 32 ರೋಗಿಗಳು ಕೂಡ ಆಕ್ಸಿಜನ್ ಸಿಗದೆ ಪರದಾಡುತ್ತಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ

ನಾಗರಿಕರು ಕೊರೊನಾ ನಿಯಮಗಳನ್ನು ಕಡ್ದಾಯವಾಗಿ ಪಾಲಿಸದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು; ಡಿ.ಶೇಖರರೆಡ್ಡಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪಟ್ಟಣದಲ್ಲಿ ನಾಗರಿಕರು ಕೊರೊನಾ ತಡೆ ನಿಯಮಗಳನ್ನು ಕಡ್ದಾಯವಾಗಿ ಪಾಲಿಸಬೇಕು. ಪಾಲಿಸದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಡಿ.ಶೇಖರರೆಡ್ಡಿ ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ನಾಗರಿಕ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಸಂಕಷ್ಟದ ನಡುವೆ ನಾಗರಿಕರಿಗೆ ಉತ್ತಮ ಸೇವೆ ಕಲ್ಪಿಸಲು ಪುರಸಭೆ ಪ್ರಯತ್ನಿಸುತ್ತಿದೆ. ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಲಾಗಿದೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ ಎಂದು ಹೇಳಿದರು.
ಪಟ್ಟಣದಲ್ಲಿ ಕೋವಿಡ್ ತಡೆ ನಿಯಮ ಪಾಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿತ್ತು. ಕೊರೊನಾ ತಡೆ ಕುರಿತು ಜಾಗೃತಿ ಮೂಡಿಸಲಾಯಿತು. ರಸ್ತೆಯಲ್ಲಿ ನಿಂತು ಮಾಸ್ಕ್ ರಹಿತರಿಗೆ ಮಾಸ್ಕ್ ಧರಿಸಿ ತಿಳುವಳಿಕೆ ನೀಡಲಾಯಿತು. ಆದರೂ ಕೆಲವರು ಮಾಸ್ಕ್ ಹಾಕದೆ ಸಂಚರಿಸುವುದು ಕಂಡುಬರುತ್ತದೆ. ಸಾಂಘಿಕ ಪ್ರಯತ್ನದ ಮೂಲಕ ಕೊರೊನಾ ಹರಡುವುದನ್ನು ತಡೆಯಬೇಕಾದ ಅಗತ್ಯವಿದೆ ಎಂದು ಹೇಳಿದರು.
ಕೊರೊನಾ ವೈರಾಣು ಹರಡದಂತೆ ತಡೆಯಲು ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು. ಜನನಿಬಿಡ ಪ್ರದೇಶದಲ್ಲಿ ಅಂತರ ಪಾಲನೆ ಮಾಡಬೇಕು. ಸ್ಯಾನಿಟೈಸರ್ ಬಳಸಬೇಕು. ಸಾಬೂನಿನಿಂದ ಕೈ ತೊಳೆಯಬೇಕು ಎಂದು ಸಲಹೆ ಮಾಡಿದರು.
ಪುರಸಭೆ ಆರೋಗ್ಯ ನಿರೀಕ್ಷಕ ಪೃಥ್ವಿರಾಜ್, ಸದಸ್ಯ ಅನ್ನೀಸ್ ಅಹ್ಮದ್, ಟಿ.ಎಂ.ಸಂತೋಷ್, ನಾಗೇಶ್, ಸಿಇಒ ರಾಜೇಶ್ವರಿ ಇದ್ದರು.

ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ.ಕೆ.ಇ ಕುಮಾರಸ್ವಾಮಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ,ಮೇ.3: ಕರ್ನಾಟಕ ರಾಜ್ಯ ಮಾಹಿತಿ ಆಯೋಗದ 6ನೇ ಪೀಠದ ಆಯುಕ್ತ ಡಾ.ಕೆ.ಇ ಕುಮಾರಸ್ವಾಮಿ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆ ಅಡಿ ಕ್ರಿಮಿನಲ್ ಪ್ರಕರಣವನ್ನು ವಿಧಾನಸೌಧ ಪೊಲೀಸರು ದಾಖಲೆ ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸುಮಾರು 1000 ಕೋಟಿ ರೂಪಾಯಿಗಳ ಗಂಗಾ ಕಲ್ಯಾಣ ಯೋಜನೆಯಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಬೆಂಗಳೂರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮ, ಬೆಂಗಳೂರು, ಡಾ. ದೇವರಾಜ್ ಅರಸು ಅಭಿವೃದ್ಧಿ ನಿಗಮ ಬೆಂಗಳೂರು, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಬೆಂಗಳೂರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಬೆಂಗಳೂರು, ಕರ್ನಾಟಕ ಬಂಜಾರ ಅಭಿವೃದ್ಧಿ ನಿಗಮ ಬೆಂಗಳೂರು, ಹಗರಣ ನಡೆದಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಹಿತಿ ಹಕ್ಕುಕಾಯ್ದೆ ನಿಗಮ 2005 ರಂತೆ ಕೋಲಾರ ಜಿಲ್ಲೆಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿ ಮಾಹಿತಿ ಕೇಳಲಾಗಿತ್ತು. ಆದರೆ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದೇ ಇರುವ ಕಾರಣ ರಾಜ್ಯ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು.
ಸದರಿ ಅರ್ಜಿ ವಿಚಾರಣೆ ಆಯೋಗದ 6ನೇ ಪೀಠದಲ್ಲಿ ವಿಚಾರ ನಡೆಯಿತು. ಈ ಸಂದರ್ಭದಲ್ಲಿ ಪೀಠ ಆಯುಕ್ತರಾದ ಡಾ.ಕೆ.ಇ ಕುಮಾರಸ್ವಾಮಿ ರವರು ಅಧಿಕಾರಿಗಳ ಪರ ಮಾತನಾಡುತ್ತಾ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಜಾತಿ ಪರಿಶಿಷ್ಟ ಜಾತಿಗೆ ಸೇರಿದ ನನ್ನನ್ನು ಜಾತಿ ನಿಂದನೆ ಮಾಡಿರುತ್ತಾರೆ. ಈ ಸಂಬಂಧ ವಿಧಾನಸೌಧ ಪೊಲೀಸರಿಗೆ ದೂರು ನೀಡಲಾಗಿ ಪೊಲೀಸರು ಒತ್ತಡಗಳಿಗೆ ಮಣಿದು ಪ್ರಕರಣವನ್ನು ದಾಖಲು ಮಾಡಿರುವುದಿಲ್ಲ.

ಈ ಹಿನ್ನಲೆಯಲ್ಲಿ ನಗರ ಸಿವಿಲ್ ಮತ್ತು ಸೆಷನ್ ಸತ್ರ ನ್ಯಾಯಾಲಯಕ್ಕೆ (ಸಿಸಿಹೆಚ್-71) ಮೊರೆ ಹೋದ ಹಿನ್ನಲೆಯಲ್ಲಿ ಸಹಾಯಕ ಪೊಲೀಸ್ ಕಮೀಷನರ್ ಅವರಿಗೆ ನ್ಯಾಯಾಲಯ ಆದೇಶ ನೀಡಿದ ಕಾರಣ ದಿನಾಂಕ 1-5-2021 ರಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿರುತ್ತಾರೆ. (ಪ್ರಕರಣದ ಸಂಖ್ಯೆ 0033/2021) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರಾದ ಶ್ರೀನಿವಾಸಪುರದ ಎನ್ ನಾರಾಯಣಸ್ವಾಮಿ ಪರವಾಗಿ ಖ್ಯಾತ ಕ್ರಮಿನಲ್ ವಕೀಲರಾದ ಬೈರಕೂರು ಬಿ.ಎನ್ ಶ್ರೀನಿವಾಸ್ ರವರು ವಾದ ಮಂಡಿಸಿರುತ್ತಾರೆ. ಸದರಿ ಸುದ್ಧಿಯೊಂದಿಗೆ ನ್ಯಾಯಾಲಯದ ಆದೇಶ ಮತ್ತು ಎಫ್.ಐ.ಆರ್ ಪ್ರತಿಯನ್ನು ಲಗತ್ತಿಸಲಾಗಿದೆ.

ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕ್ ಮುಖ್ಯ ನಿರ್ವಹಣ ಅಧಿಕಾರಿ ರವೀಂದ್ರನ್ ಡಿ ನಿಧನ – ನೇಣು ಬಿಗಿದ ಸ್ಥಿಯಲ್ಲಿ ಪತ್ತೆ

JANANUDI.COM NETWORK

ಧರ್ಮಸ್ಥಳ, ಮೇ. 3; ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕ್ ಮುಖ್ಯ ನಿರ್ವಹಣ ಅಧಿಕಾರಿ ರವೀಂದ್ರನ್ ಡಿ (57) ಇವರು ಮೇ 3 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ಇಂದು ಸೋಮವಾರ ಬೆಳಿಗ್ಗೆ 7.30 ಕ್ಕೆ ಕಚೇರಿಗೆ ಬಂದು ತಮ್ಮ ಹಾಜರಿಯನ್ನು ನಮೂದಿಸಿ, ಆದರೆ ಇಂದು ಮದ್ಯಾನ್ಹ ಸಂಘದ ಅಟಲ್ ಜಿ ಸಭಾಭವನದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ಮ್ರತ ಶರೀರ ಪತ್ತೆಯಾಗಿದೆ.
ಮ್ರತರು ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಮಾಜಿ ಶಾಸಕ ವಸಂತ ಬಂಗೇರಾ ಭೇಟಿ ನಿಡಿದ್ದು,ಅವರು ಸಮಗ್ರ ತನಿಕೆಗೆ ಆಗ್ರಹಿಸಿದ್ದಾರೆ

ಮೇ 17ರಿಂದ ಸೌದಿ ಅಂತರರಾಷ್ಟ್ರೀಯ ಪ್ರಯಾಣ ಪುನರಾರಂಭ ಆದರೆ ಭಾರತದಿಂದ ಪ್ರಯಾಣಿಸುವ ಪ್ರಯಾಣಿಕರ ಕುರಿತು ಅನಿಶ್ಚಿತತೆ ಮುಂದುವರಿಕೆ

JANANUDI.COM NETWORK

ಜೆದ್ದಾ, ಸರಿಸುಮಾರು ಕಳೆದ ಒಂದು ವರ್ಷದಿಂದ ನಿಷೇಧಿಸಲ್ಪಟ್ಟ ಸೌದಿ ಅರೇಬಿಯಾದ ಅಂತರರಾಷ್ಟ್ರೀಯ ರಸ್ತೆ, ಜಲ ಹಾಗೂ ವಿಮಾನ ಪ್ರಯಾಣವು ಮೇ 17ರ ಮುಂಜಾನೆ 1 ಗಂಟೆಯಿಂದ ಸಹಜ ಸ್ಥಿತಿಗೆ ಬರಲಿದ್ದು, ಅಂದು ಮುಚ್ಚಲ್ಪಟ್ಟ ತನ್ನೆಲ್ಲಾ ಅಂತರರಾಷ್ರೀಯ ಗಡಿಗಳನ್ನು ಸೌದಿ ಅರೇಬಿಯಾವು ತೆರವುಗೊಳಿಸಲಿದೆ ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯವು ತಿಳಿಸಿದೆ.

ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಸೌದಿ ಅರೇಬಿಯಾವು ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಪ್ರಯಾಣಿಕರು ಎರಡು ಡೋಸ್ ಕೊವಿಡ್ ಲಸಿಕೆಯನ್ನು ಪಡೆದಿರಬೇಕು ಅಥವಾ ಒಂದು ಡೋಸ್ ಲಸಿಕೆ ಪಡೆದು 14 ದಿವಸಗಳು ಪೂರ್ಣಗೊಂಡಿರಬೇಕು, ಪ್ರಯಾಣಿಕನು ಕೊವಿಡ್ ಸೋಂಕಿಗೆ ಒಳಗಾಗಿದ್ದರೆ ಗುಣಮುಖನಾಗಿ 6 ತಿಂಗಳು ಪೂರ್ಣಗೊಂಡಿರಬೇಕು ಹಾಗೂ ಇವುಗಳನ್ನು ಅಪ್ಡೇಟ್ ಮಾಡಿರಬೇಕು. 18 ವರ್ಷ ವಯಸ್ಸಿನೊಳಗಿನವರು ಪ್ರಯಾಣಿಸುವುದಾದರೆ ಸರಕಾರದ ಆರೋಗ್ಯ ವಿಮೆಯನ್ನು ಪಡೆದಿರಬೇಕು ಎಂದು ತಿಳಿಸಿದೆ.

   ಸೌದಿ ಪ್ರವೇಶಿದವರು ಏಳು ದಿನಗಳ ಕಾಲ ಹೋಂ ಕ್ವಾರೆಂಟೈನ್ ಗೆ ಒಳಗಾಗಬೇಕು ಆ ನಂತರ ಕೊವಿಡ್ ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು ಎಂಬ ನಿಯಮಗಳನ್ನು ಸೌದಿ ಆಂತರಿಕ ಸಚಿವಾಯವು ಪ್ರಕಟಿಸಿದೆ.
     ಆದರೆ ಭಾರತ ಸೇರಿದಂತೆ ಇತರ 20 ರಾಷ್ಚ್ರಗಳಿಂದ ಪ್ರಯಾಣಿಸುವ ಪ್ರಯಾಣಿಕರ ಕುರಿತು ಅನಿಶ್ಚಿತತೆ ಇನ್ನೂ ಮುಂದುವರಿದಿದ್ದು, ಈ ರಾಷ್ಟ್ರಗಳ ಪ್ರಯಾಣ ನಿಷೇಧದ ತೆರೆವಿನ ಕುರಿತು ಸಚಿವಾಲಯವು ಮುಂದೆ ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ.

ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಲಿ. ಕುಂದಾಪುರ ವ್ಯವಹಾರದ ಸಮಯ ಬದಲಾವಣೆ

JANANUDI.COM NETWORK

ಕೊರೊನಾ ವೈರಸ್ 2ನೇ ಅಲೆ ರಾಜ್ಯಾದ್ಯಂತ ಉಲ್ಬಣ ಗೊಳ್ಳುತ್ತಿದ್ದು, ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಲಾಕ್‍ಡೌನ್ ಮಾದರಿಯ ಕಪ್ರ್ಯೂ ವಿಧಿಸಿದು, ಸಂಘದ ಸದಸ್ಯ ಗ್ರಾಹಕರ ಆರ್ಥಿಕ ವ್ಯವಹಾರಕ್ಕೆ ಅನುಕೂಲವಾಗುವಂತೆ ಸರ್ಕಾರದ ಆದೇಶದ ವರೆಗೆ ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಎಲ್ಲಾ ಶಾಖೆಗಳ ವ್ಯವಹಾರದ ಸಮಯವನ್ನು ಇವತ್ತಿನಿಂದ (ಮೇ 3) ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸೀಮಿತ ಗೊಳಿಸಲಾಗಿದೆ. ಸದಸ್ಯರು ಮತ್ತು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ಸಂಘದ ಅಧ್ಯಕ್ಷರು ತಿಳಿಸಿರುತ್ತಾರೆ.

ಬೆಳಗಾವಿಯಲ್ಲಿ ಸತೀಶ್ ಜಾರಕಿ ಹೋಳಿಯ ವಿರೋಚಿತ ಸೋಲಿನ ಬಗ್ಗೆ –ಕೆ.ಪಿ.ಸಿ.ಸಿ. ಕಾರ್ಯದರ್ಶಿ ಡಾ| ಕಿರಣ್ ಜಿತ್ ರವರ ಅಭಿಪ್ರಾಯ

[ಕೆ.ಪಿ.ಸಿ.ಸಿ. ಕಾರ್ಯದರ್ಶಿ ಕಿರಣ್ ಜಿತ್  ರವರು ಬೆಳಗಾವಿಯ  ಪ್ರಭಾವಿ  ನಾಯಕರಲ್ಲಿ  ಒಬ್ಬರಾದ ಸತೀಶ್ ಜಾರಕಿ ಹೋಳಿಯ ಆತ್ಮೀಯ ಮಿತ್ರರು. ಸತೀಶ್ ಜಾರಕಿ ಹೋಳಿಯವರು ಜೀವನದಲ್ಲಿ ತಮ್ಮದೆ ಆದ ಆದರ್ಶ ತತ್ವಗಳನ್ನು ಅಳವಡಿಸಿಕೊಂಡವರು, ಅವರು ಮೌಢ್ಯವನ್ನು ನಂಬುವುದಿಲ್ಲಾ, ಅವರು ಗಳಿಗೆಯನ್ನು ನಂಬುದಿಲ್ಲಾ, ಅವರು ಬೆಳಗಾವಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿ ಪತ್ರವನ್ನು ಸಲ್ಲಿಸುವಾಗ ಬೇಕಂತ್ತಲೇ  ಅತ್ಯಂತ ಕೆಟ್ಟ ಗಳಿಗೆಯಲ್ಲಿ ನೀಡಿದ್ದರು, ಕಾರಣ ಇಂತಹ ಮೌಢ್ಯಗಳನ್ನು ಅವರು ನಂಬುದಿಲ್ಲವೆಂದು, ಇದು ಡಾ|  ಕಿರಣ್ ಜಿತ್ ತಿಳಿಸಿದ ವಿಷಯವಾಗಿದೆ. ಡಾ|ಕಿರಣ್ ಜಿತ್  ಕೆ.ಪಿ.ಸಿ.ಸಿ. ಕೊಟ್ಟ ಜವಾಬ್ದಾರಿಯಂತೆ ಬೆಳಗಾವಿಯಲ್ಲಿ ಸುಮಾರು 10 ದಿವಸಗಳು ಸತೀಶ್ ಜಾರಕಿ ಹೋಳಿಯ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದರು. ಇವರ ಪ್ರಕಾರ ಸತೀಶ್ ಜಾರಕಿ ಹೋಳಿಯವರು ಅಗಾಧ ಅಂತರದಲ್ಲಿ ಗೆಲ್ಲಬೇಕಿತ್ತು,ಆದರೆ ಕೊನೆಗಳಿಗೆಯಲ್ಲಿ ಬಿಜೆಪಿ ಯವರ ಹಣದೋಕುಳಿ ಹಾಗೂ ಹೆಂಡದೋಳೆಯಂತಹ ಆಮಿಷಗಳಿಂದ ಮತ್ತು ಅನುಕಂಪದಲ್ಲಿ ಬಿ.ಜೆ.ಪಿ. ಗೆಲುವು ಸಿಕ್ಕಿತು,  ಈ ಬಗ್ಗೆ,  ಕುಂದಾಪುರದ ಅಳಿಯನಾಗಿರುವ ಡಾ|ಕಿರಣ್  ಜಿತ್ ಅವರ ಅಭಿಪ್ರಾಯವನ್ನು ನೀಡಲಾಗಿದೆ. ಡಾ|ಕಿರಣ್ ಜಿತ್ ಯುವ ಸಮಾಜದ  ಮೇಲೆ ಪ್ರಭಂದ ಮಂಡನೆ ಮಾಡಿ ಡಾಕ್ಟರೇಟ್  ಪಡೆವರಾಗಿದ್ದಾರೆ]

ಬೆಂಗಳೂರು,ಮೇ.2 : ಬೆಳಗಾವಿ ಲೋಕಸಭಾ ಉಪಚುನಾವಣೆಯ ಪಲಿತಾಂಶ ಪ್ರಕಟಗೋಂಡಿದ್ದು, ನಮ್ಮ ನಾಯಕರಾದ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೋಳಿ ಮತ್ತು ಕಾಂಗ್ರೇಸ್ ಪಕ್ಷಕ್ಕೆ ಸುಮಾರು 4,35087 ಮತಗಳನ್ನು ನೀಡಿದ ಬೆಳಗಾವಿ ಜಿಲ್ಲಾ ಮತದಾರರುಗಳಿಗೆ ಧನ್ಯವಾದಗಳು.

ಸುಮಾರು 4 ಲಕ್ಷ ಮತಗಳ ಅಂತರದಲ್ಲಿ ಗೆದ್ದು ಬೀಗಿದ್ದ ಪಕ್ಷವನ್ನ ಕೇವಲ ನಾಲ್ಕೇ ಸಾವಿರ ಅಂತರಗಳಿಗೆ ಸೀಮಿತಗೋಳಿಸಿದ ನೀವೂ ಬಿಜೆಪಿ ಯವರ ಹಣದೋಕುಳಿ ಹಾಗೂ ಹೆಂಡದೋಳೆಯಂತಹ ಆಮಿಷಗಳ ನಡುವೆಯೂ ಮೌಲ್ಯಾಧಾರಿತ ಮತ್ತು ಸೈದ್ಧಾಂತಿಕ ರಾಜಕಾರಣವನ್ನ ಗೆಲ್ಲಿಸಿದ್ದೀರಿ.

ಆಮಿಷಗಳನ್ನೂಡ್ಡಿ ಮತದಾರರನ್ನು ಹಿಯಾಳಿಸದೆ ಸಂಸಧೀಯ ಪ್ರಜಾಪ್ರಭುತ್ವದಲ್ಲಿ ಅಂಕಿ ಅಂಶಗಳನ್ವಯ ನಮಗೆ ಹಿನ್ನಡೆಯಾಗಿರಬಹುದು ಆದರೆ ಚುನಾವಣಾ ರಾಜಕೀಯವನ್ನ ಕಲುಶಿತಗೋಳಿಸದೆ ಸಾಂವಿಧಾನಿಕ ಆಶಯಗಳನ್ನ ಏತ್ತಿ ಹಿಡಿದ ನಿಮಗೆ ಧನ್ನವಾದಗಳು.

ಸೋಲು ಗೆಲುವುಗಳನ್ನು ಲೆಕ್ಕಿಸದೆ, ಮೌಲ್ಯಾಧಾರಿತ ಚುನಾವಣೆಯೂ ತೃಪ್ತಿದಾಯಕ ಏಂಬ ಸಂದೇಶವನ್ನು ಈಡೀ ರಾಜ್ಯಕ್ಕೆ ಸಾರಿ ಉತ್ತಮ ಸಮಾಜ ನಿರ್ಮಾಣಕ್ಕೆ ಬುನಾದಿಯಾಕಿದ್ಧೀರಿ, ಇದು ಭ್ರಷ್ಟ ಮನುವಾದಿಗಳ ಎದೆಯಲ್ಲಿ ನಡುಕವೆಬ್ಬಿಸಿರುವುದಂತೊ ಐತಿಹಾಸಿಕ.

Dr. Kiran jith
Secretary K.P.C.C.

ಸತೀಶ್ ಜಾರಕಿ ಹೋಳಿಯ ಪುತ್ರ ರಾಹುಲ್ ಜಾರಕಿ ಹೋಳಿಯೊಂದಿಗೆ ಡಾ|ಕಿರಣ್ ಜಿತ್ ಮತ್ತಿತರರು

ಗುಜರಾತಿನ ಭರುಚ್ ನಲ್ಲಿ ಕೋವಿಡ್​ ಆಸ್ಪತ್ರೆಯಲ್ಲಿ ಬೆಂಕಿ: 18 ಕರೊನಾ ರೋಗಿಗಳ ದುರ್ಮರಣ

JANANUDI.COM NETWORK

ಗುಜರಾತ್‌ನ ಭರೂಚ್‌ನ ಆಸ್ಪತ್ರೆಯಲ್ಲಿ ಶನಿವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡ ನಂತರ ಕನಿಷ್ಠ 18 ಕರೋನ ವೈರಸ್ ರೋಗಿಗಳು ಸಾವನ್ನಪ್ಪಿದ್ದಾರೆ. ದುರಂತದ ಕರುಳು ಹಿಚುಕುವ ದೃಶ್ಯಗಳು ಕಾಣಸಿಗುತ್ತೇವೆ. ಕೆಲವು ರೋಗಿಗಳ ಅವಶೇಷಗಳನ್ನು ಸ್ಟ್ರೆಚರ್‌ಗಳು ಮತ್ತು ಹಾಸಿಗೆಗಳ ಮೇಲೆ ಜೀವಂತವಾಗಿ ಸುಟ್ಟು ಕರಕಲಾಗಿವೆ. ನಾಲ್ಕು ಅಂತಸ್ತಿನ ಕಲ್ಯಾಣ ಆಸ್ಪತ್ರೆಯಲ್ಲಿ ಮುಂಜಾನೆ 1 ಗಂಟೆಗೆ ಸಿಒವಿಐಡಿ -19 ವಾರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಸುಮಾರು 50 ಇತರ ರೋಗಿಗಳು ಇದ್ದರು. ಅವರನ್ನು ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    “ಬೆಳಿಗ್ಗೆ 6.30 ಕ್ಕೆ ಮಾಹಿತಿಯ ಪ್ರಕಾರ, ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 18 ರಷ್ಟಿದೆ. ಬೆಂಕಿಯ ನಂತರ, ನಾವು 12 ಮ್ರತ ದೇಹಗಳನ್ನು ಕಂಡಿದ್ದೆವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕೊವೀಡ್ ವಾರ್ಡ್‌ನ 12 ರೋಗಿಗಳು ಬೆಂಕಿ ಮತ್ತು ಹೊಗೆಯಿಂದ ಸಾವನ್ನಪ್ಪಿದ್ದಾರೆ ಎಂದು ಭರೂಚ್ ಎಸ್‌ಪಿ ರಾಜೇಂದ್ರಸಿಂಹ ಚುಡಾಸಮಾ ತಿಳಿಸಿದ್ದಾರೆ.

   ಉಳಿದ ಆರು ಮಂದಿ ಸಹ ಕಲ್ಯಾಣ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಯೇ ಅಥವಾ ಇತರ ಆಸ್ಪತ್ರೆಗಳಿಗೆ ಸ್ಥಳಾಂತರಗೊಳ್ಳುವಾಗ ಸ್ಪಷ್ಟವಾಗಿಲ್ಲ.COVID-19 ಗೊತ್ತುಪಡಿಸಿದ ಆಸ್ಪತ್ರೆ ರಾಜ್ಯ ರಾಜಧಾನಿ ಅಹಮದಾಬಾದ್‌ನಿಂದ 190 ಕಿ.ಮೀ ದೂರದಲ್ಲಿರುವ ಭರೂಚ್-ಜಂಬುಸರ್ ಹೆದ್ದಾರಿಯಲ್ಲಿದೆ ಮತ್ತು ಇದನ್ನು ಟ್ರಸ್ಟ್ ನಡೆಸುತ್ತಿದೆ. ಬೆಂಕಿಯ ಕಾರಣವನ್ನು ಇನ್ನೂ ಕಂಡುಹಿಡಿಯಬೇಕಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಇತ್ತೀಚೆಗೆ ಕೊವೀಡ್ ರೋಗಿಗಳು ಚಿಕಿತ್ಸೆ ಪಡೆಯವ ಆಸ್ಪತ್ರೆಗಳಿಗೆ ಬೆಂಕಿ ಅವಘಡವಾಗುವುದು ಚಿಂತಿಸಬೇಕಾದ ವಿಷಯ!