HOLY ROSARY CHURCH, KUNDAPUR – 450 th JUBILEE SOUVENIR 2021

ಕರ್ನಾಟಕದಲ್ಲಿ 1 ನೇ ಡೋಸ್​ ಪಡೆದಿರುವ 65ಲಕ್ಷಕ್ಕೂ ಹೆಚ್ಚು ಜನರಿಗೆ 2ನೇ ಡೋಸ್ ಕೊಡಲು ಲಸಿಕೆ ಕೊರತೆ

JANANUDI.COM NETWORK

ಬೆಂಗಳೂರು,ಮೇ.7೭.ಕರ್ನಾಟಕದಲ್ಲಿ ವ್ಯಾಕ್ಸಿನ್​ ಕೊರತೆ ಬಗ್ಗೆ  ಹೈ ಕೋರ್ಟ್ 06-05-2021 ರಂದು​ ಕಳವಳ ವ್ಯಕ್ತಪಡಿಸಿದ್ದು ಮೊದಲ ಡೋಸ್​ ಪಡೆದಿರುವ 65.83 ಲಕ್ಷ ಜನರಿಗೆ 2 ನೇ ಡೋಸ್ ನೀಡಲು ಲಸಿಕೆ ಕೊರತೆ ಇದೆ ಎಂದು ಹೇಳಿದೆ.

ಈಗ ರಾಜ್ಯ ಸರ್ಕಾರದ ಬಳಿ 7.76 ಲಕ್ಷ ಲಸಿಕೆ ಮಾತ್ರ ಇರುವುದು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್​ ಸೂಚಿಸಿದೆ. 3 ದಿನಗಳೊಳಗೆ ಕೇಂದ್ರ ಸರ್ಕಾರ, ರಾಜ್ಯದ ಮನವಿಯನ್ನು ಸ್ವೀಕರಿಸಿ ಸ್ಪಂದಿಸಬೇಕು. ತುರ್ತು ಸಂದರ್ಭದಲ್ಲಿ ಜನರ ರಕ್ಷಣೆಗೆ ಧಾವಿಸಬೇಕು ಎಂದು ಹೈಕೋರ್ಟ್ ಹೇಳಿದೆ.

    ಲಸಿಕೆ‌ ಉತ್ಪಾದಕರೊಂದಿಗೆ ಕೇಂದ್ರ ಸರ್ಕಾರ ಸಮಾಲೋಚಿಸಬೇಕು. ಶೀಘ್ರ ಲಸಿಕೆ ಪೂರೈಕೆಗೆ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್​ ಸೂಚಿಸಿದೆ. ಈಗಾಲೇ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ  ಗಣನೀಯವಾಗಿ ಹೆಚ್ಚಳವಾಗಿದ್ದು, ಈ ಮಧ್ಯೆ ರಾಜ್ಯದಲ್ಲಿ ಆಕ್ಸಿಜನ್, ಬೆಡ್, ಚುಚ್ಚುಮದ್ದುಗಳಿಗೆ ಭಾರಿ ಕೊರತೆ ಉಂಟಾಗಿ ಸಾವಿನ ಪ್ರಮಾಣ ಹೆಚ್ಚಾಗಿ ತೊಡಗಿದ್ದಕ್ಕೆ ನ್ಯಾಯಲಯ ಎಚ್ಚರಿಕೆ ನೀಡಿದೆ.

ದೇವರಾಜ ಅರಸು ಹಾಸ್ಟೆಲ್ ಸದ್ಯ ಭಾರತೀಯ ರೆಡ್ ಕ್ರಾಸ್ ಕೊರೊನಾ ಕೇರ್ ಸೆಂಟರ್ ಪರಿವರ್ತನೆ

JANANUDI.COM NETWORK

ಕುಂದಾಪುರ,ಮೇ. ದೇವರಾಜ ಅರಸು ಹಾಸ್ಟೆಲ್ ಸದ್ಯ ಭಾರತೀಯ ರೆಡ್ ಕ್ರಾಸ್ ಕೊರೊನಾ ಕೇರ್ ಸೆಂಟರ್ ಆಗಿ ಇಂದಿನಿಂದ ಪರಿವರ್ತನೆ ಗೊಂಡಿದೆ. ಇದಕ್ಕೆ ಅಗತ್ಯವಿರುವ ಕುಡಿಯುವ ನೀರಿನ ವ್ಯವಸ್ತೆ ಮತ್ತುಕುಂದಾಪುರ ರೆಡ್ ಕ್ರಾಸ್ ಸಂಸ್ಥೆ ಬೆಡ್, ಹಾಸಿಗೆ, ಬೆಡ್ ಸೀಟ್, ಜಗ್ಗು, ಡಸ್ಟ್ ಬೀನ್ , ಮಾಟ್ಸ್ ಇತ್ಯಾದಿಗಳನ್ನು ಖರೀದಿಸಿ ಒದಗಿಸಿದೆ. ಒದಗಿಸಿದೆ. ನಿನ್ನೆ ಸಂಜೆ ಸಭಾಪತಿಗಳಾದ ಎಸ್. ಜಯಕರ ಶೆಟ್ಟಿ ಯವರು ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ನಾಗಭೂಷಣ ಉಡುಪ ಇವರ ತಂಡ ಕ್ಕೆ ಹಸ್ತಾಂತರಿಸಿದರು. ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಸದಸ್ಯರುಗಳಾದ ಗಣೇಶ್ ಆಚಾರ್ಯ , ಡಾ. ಸೋನಿ ಮತ್ತು ಬಶೀರ್ ಅಹಮದ್ ಹಾಜರಿದ್ದರು.

ಡಾ.ಜಿ.ಭಾ‌ಸ್ಕರ ಮಯ್ಯ ಅವರಿಗೆ ಅಂತಿಮ ನಮನಗಳು – ಸಿ.ಪಿ.ಐ(ಎಂ) ಎಚ್.ನರಸಿಂಹ

JANANUDI.COM NETWORK

ಹಲವಾರು ದಶಕಗಳಿಂದಲೂ ವೈಚಾರಿಕ ಚಿಂತನೆ, ಪ್ರಗತಿಪರ ಚಟುವಟಿಕೆಗಳ ಪರವಾಗಿ ಧ್ವನಿಯೆತ್ತಿದ ಮತ್ತು ಹಲವಾರು ವಿದ್ಯಾರ್ಥಿ,ಯುವಜನ,ಬುದ್ದಿ ಜೀವಿಗಳ ನಡುವೆ, ಸಾಂಸ್ಕ್ರತಿಕವಾಗಿ, ಸಾಹಿತ್ಯ ಕ್ಷೇತ್ರದಲ್ಲಿ ತನ್ನ ಕೊಡುಗೆ ನೀಡಿದ ಡಾ.ಜಿ.ಭಾಸ್ಕರ ಮಯ್ಯ ರವರ ಅಗಲಿಕೆ ತುಂಬಾ ನೋವಿನ ವಿಚಾರ ಎಂದು ಸಿ.ಪಿ.ಐ(ಎಂ) ಕುಂದಾಪುರ ವಲಯ ಕಾರ್ಯದರ್ಶಿ ಎಚ್.ನರಸಿಂಹ ರವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಹ

ಬೆಡ್ ಗಾಗಿ ಲಂಚ ಪ್ರಕರಣ ಲೋಕಾಯುಕ್ತ ಪಿ.ವಿಶ್ವನಾಥ್ ಶೆಟ್ಟಿ ಸ್ವಯಂ ಪ್ರೇರಿತ ತನಿಕೆಗೆ ಆದೇಶ

JANANUDI.COM NETWORK

ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ ಬಿಬಿಎಂಪಿ ಹಣಕ್ಕಾಗಿ ಬೆಡ್ ಬ್ಲಾಕಿಂಗ್ ದಂಧೆಯ ವಿರುದ್ಧ ಲೋಕಾಯುಕ್ತರು ಅಸಮಧಾನ ಗ್ಗೊಂಡಿದ್ದು ಅವರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಲೋಕಾಯುಕ್ತರು ಪೊಲೀಸರಿಗೆ ಆದೇಶ ನೀಡಿದ್ದಾರೆ.

    ಕರ್ನಾಟಕದ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಶಾಸರಕಾರ ಸತೀಶ್ ರೆಡ್ಡಿ, ಉದಯ ಗರುಡಾಚಾರಾ ಹಾಗೂ ರವಿ ಸುಬ್ರಹ್ಮಣ್ಯ ಮಂಗಳವಾರ ವಿವಿಧ ವಾರ್ ರೂಂಗೆ ಭೇಟಿ ನೀಡಿ ಹಾಸಿಗೆಯನ್ನು ಹಣಕ್ಕಾಗಿ ಬ್ಲಾಕ್ ಮಾಡಿಡುವ ದಂಧೆಯನ್ನು ಬೆಳಕಿಗೆ ತಂದಿದ್ದರು. ಈ ಬಗ್ಗೆ ವಿವಿಧ ಪತ್ರಿಕೆಗಳು ವರದಿ ಪ್ರಕಟಿಸಿದ್ದು, ಪತ್ರಿಕಾ ವರದಿ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲು ನ್ಯಾಯಮೂರ್ತಿಗಳು ಆದೇಶ ನೀಡಿದ್ದಾರೆ.

    ಈಗಾಗಲೇ ರಾಜ್ಯ ಸರ್ಕಾರವು ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಿದ್ದು, ಇದರೊಂದಿಗೆ ಲೋಕಾಯುಕ್ತ ಪೊಲೀಸರು ಪ್ರಕರಣದ ಬಗ್ಗೆ ಪ್ರತ್ಯೇಕವಾಗಿ ತನಿಖೆ ನಡೆಸಲಿದ್ದಾರೆ ಎಂದು ನ್ಯಾಯಮೂರ್ತಿಗಳು ವಿವರಣೆ ನೀಡಿದ್ದಾರೆ.

     ಈ  ಪ್ರಕಾರ ರಾಜ್ಯ ಸರ್ಕಾರ ಮುಖ್ಯಕಾರ್ಯದರ್ಶಿ, ಆರೋಗ್ಯ ಇಲಾಖೆಯ ಕಾರ್ಯದರ್ಶಿ,ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ಆಯುಕ್ತರು, ಬಿಬಿಎಂಪಿ ಆಡಳಿತಾಧಿಕಾರಿ, ಮುಖ್ಯಾಯುಕ್ತರು, ವಲಯ ಆಯುಕ್ತರು ಸೇರಿದಂತೆ ಒಟ್ಟು 31 ಜನರ ವಿರುದ್ಧ ಪ್ರಕರಣ ಲೋಕಾಯುಕ್ತರಿಂದ ದಾಖಲಿಸಿ ಕೊಳ್ಳಲಾಗಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಜಿ.ಭಾಸ್ಕರ ಮಯ್ಯ ನಿಧನ

JANANUDI.COM NETWORK

ಕುಂದಾಪುರ,ಮೇ. 6 : ಕರ್ನಾಟಕ ವೈಚಾರಿಕ ಸಾಹಿತ್ಯದ ಮೇರುಕೊಂಡಿಯೊಂದು ಇಂದು ಕಳಚಿಕೊಂಡಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಖ್ಯಾತ ವೈಚಾರಿಕ ಸಾಹಿತಿ ಉಡುಪಿಯ ಡಾ.ಜಿ.ಭಾಸ್ಕರ್ ಮಯ್ಯ ನಿಧನರಾಗಿದ್ದಾರೆ

   ಅವರಿಗೆ 70 ವರ್ಷ ವಯಸ್ಸಾಗಿತ್ತು. ಅವರಿಗೆ ಕೊವೀಡ್ ಸೊಂಕು ತಗಲಿದ್ದರಿಂದ ಕಳೆದ 4 ದಿನಗಳಿಂದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ 4:30ರ ಸುಮಾರಿಗೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾ ರೆಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ.

     ಹಿಂದಿ ಸಾಹಿತ್ಯ ಅಧ್ಯಯನದಲ್ಲಿ ಮೇರು ವ್ಯಕ್ತಿತ್ವ ಹೊಂದಿದ್ದ ಡಾ.ಜಿ. ಭಾಸ್ಕರ್ ಮಯ್ಯ ಅವರ ವೈಚಾರಿಕ ಕೃತಿಗೆ ಕೇಂದ್ರ ಸರ್ಕಾರ 2004ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತ್ತು.     ಇವರು ಧೀರ್ಘಕಾಲ ಕುಂದಾಪುರ ಭಂಡಾರ್ ಕಾರ್ಸ್  ಕಾಲೇಜಿನಲ್ಲಿ ಹಿಂದಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದರು. ಅವರು ವೈಚಾರಿಕ ಹಾಗೂ ಪ್ರಗತಿಪರ ಸಾಹಿತ್ಯದಲ್ಲಿ 50ಕ್ಕೂ ಹೆಚ್ಚು ಗ್ರಂಥ ರಚಿಸಿದ್ದ ಭಾಸ್ಕರ್ ಮಯ್ಯ ಅವರ ನಿಧನಕ್ಕೆ ಸಾಹಿತ್ಯ ಲೋಕ, ಮತ್ತು ಅವರ ಅಭಿಮಾನಿಗಳು ದುಖಿತರಾಗಿದ್ದಾರೆ.

ಎಸ್.ಆರ್.ವಿಶ್ವನಾಥ್ ಅವರಿಂದ ಎಚ್.ವಿಶ್ವನಾಥ್ ಅವರಿಗೆ ಮಂಗಳಾರತಿ

JANANUDI.COM NETWORK

ಬೆಂಗಳೂರು:ತಮಗೆ ಸ್ಥಾನಮಾನ ನೀಡಿದ ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿ ಪಕ್ಷಕ್ಕೆ ಓಡಿ ಹೋಗಿ ಈಗ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿರುವ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಿರುದ್ಧ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತೀವ್ರ ಆಕ್ರೋಶ ಗೊಂಡು ಅವರಿಗೆ ಮಂಗಳಾರತಿ ಮಾಡಿದ್ದಾರೆ.  

   “ಬೇರೆ ಪಕ್ಷಕ್ಕೆ ರಾಜೀನಾಮೆ ನೀಡಿ ಬಂದ ನಿಮಗೆ ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂದು ಪಕ್ಷ ಹೇಳಿದ್ದರೂ ಹಠಕ್ಕೆ ಬಿದ್ದು ಸ್ಪರ್ಧಿಸಿ ಹೀನಾಯವಾಗಿ ಸೋತಿರಿ. ಸೋಲನುಭವಿಸಿದ ನಿಮಗೆ ಮೇಲ್ಮನೆಗೆ ನಾಮನಿರ್ದೇಶನ ಮಾಡುವ ಅಗತ್ಯವಿರಲಿಲ್ಲ. ಆದರೆ, ಕರೆತಂದು ಟಿಕೆಟ್ ಕೊಟ್ಟು ನಿಮಗೆ ಗೌರವ ಕೊಟ್ಟು ಎಂಎಲ್ ಸಿ ಮಾಡಿದ ಯಡಿಯೂರಪ್ಪ ಮತ್ತು ಸರ್ಕಾರದ ವಿರುದ್ಧವೇ ಮಾತನಾಡುವ ಮೂಲಕ ಪಕ್ಷದ್ರೋಹ ಮಾಡುತ್ತಿದ್ದೀರಿ” ಎಂದು ಎಚ್.ವಿಶ್ವನಾಥ್ ಗೆ ಮೂದಲಿಸಿದ್ದಾರೆ.

     ಪ್ರತಿಕ್ರಿಯೆ ನೀಡುತ್ತಾ ಎಸ್.ಆರ್.ವಿಶ್ವನಾಥ್ ಅವರು, ಎಚ್.ವಿಶ್ವನಾಥ್ ನೀವು ನಮ್ಮ ಪಕ್ಷದಲ್ಲಿದ್ದುಕೊಂಡು ಪಕ್ಷ ಮತ್ತು ಸರ್ಕಾರದ ವಿರುದ್ಧ ಹೇಳಿಕೆ ನೀಡುವುದನ್ನು ಬಿಡಿ. ಇಲ್ಲವಾದರೆ, ಪಕ್ಷದಿಂದ ಹೊರಹೋಗಿ.ನಿಮ್ಮ ಅಗತ್ಯ ನಮ್ಮ ಪಕ್ಷಕ್ಕಿಲ್ಲ’ ಎಂದು ಕಿಡಿಕಾರಿದ್ದಾರೆ.

  ಇದೊಂದು ಪಕ್ಷಾಂತರ ಮಾಡುವರಿಗೆ ಪಾಠವಾಗ ಬಹುದೇ?

ಕೊರೊನಾ ಸೋಂಕಿತರು ಆತ್ಮ ವಿಶ್ವಾಸದಿಂದ ಚಿಕಿತ್ಸೆ ಪಡೆಯಬೇಕು – ಎಸ್.ಆನಂದ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಕೊರೊನಾ ಸೋಂಕಿತರು ಆತ್ಮ ವಿಶ್ವಾಸದಿಂದ ಚಿಕಿತ್ಸೆ ಪಡೆಯಬೇಕು. ಕೋವಿಡ್ ನಿಯಮಗಳಿಗೆ ಬದ್ಧರಾಗಿ ನಡೆದುಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ಹೇಳಿದರು.
ತಾಲ್ಲೂಕಿನ ಚಲ್ದಿಗಾನಹಳ್ಳಿ ಗ್ರಾಮದ ಸಮೀಪ ಪ್ರಾರಂಭಿಸಲಾಗಿರುವ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿ, ಆತಂಕದ ನಡುವೆ ಬದುಕು ಭಾರವಾಗುತ್ತದೆ. ಅದಕ್ಕೆ ಅವಕಾಶ ನೀಡಬಾರದು. ಸಮಸ್ಯೆಯನ್ನು ಧೈರ್ಯವಾಗಿ ಎದುರಿಸಬೇಕು. ಅದಕ್ಕೆ ಪೂರಕವಾದ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.
ಈ ಕೇಂದ್ರದಲ್ಲಿ ಬೇರೆ ಬೇರೆ ವಯೋಮಾನದ 53 ಕೊರೊನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಅಗತ್ಯವಾದ ಔಷಧ ಹಾಗೂ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಮಕ್ಕಳು ಬೇಸರ ಕಳೆಯಲು ಕೋವಿಡ್ ನಿಯಮ ಪಾಲನೆಯೊಂದಿಗೆ ಅಂತ್ಯಾಕ್ಷರಿ, ಅಚ್ಚಂಕಾಯಿ ಮುಂತಾದ ಆಟಗಳನ್ನು ಆಡಿಸಲಾಗುತ್ತಿದೆ. ಇದರಿಂದ ಅವರಲ್ಲಿ ಮನೋಲ್ಲಾಸ ಉಂಟಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸೋಂಕಿನ ಆರಂಭಿಕ ಹಂತದಲ್ಲಿ ಮುಕ್ತ ಮನಸ್ಸಿನಿಂದ ಆಸ್ಪತ್ರೆಗೆ ಹೋಗಿ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದರೆ ಅದರ ತೀವ್ರತೆ ಕಡಿಮೆಯಾಗಿ, ಬೇಗ ವಾಸಿಯಾಗುತ್ತದೆ. ನಿರ್ಲಕ್ಷ್ಯ ವಹಿಸಿದರೆ ಸಮಸ್ಯೆ ಜಟಿಲವಾಗುತ್ತದೆ. ಭರವಸೆಯೇ ಬದುಕು. ಪ್ರತಿಯೊಬ್ಬರೂ ಭರವಸೆಯ ನೆರಳಲ್ಲಿ ಬದುಕು ಸಾಗಿಸಬೇಕು ಎಂದು ಹೇಳಿದರು.
ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಮೇಗೌಡ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರೋಗಿಗಳ ಯೋಗ ಕ್ಷೇಮ ವಿಚಾರಿಸಿದರು
.

ಮಾವು ಮಾರುಕಟ್ಟೆಗೆ ಮೂಲಭೂತ ಸೌಕರ್ಯ ಒದಗಿಸಿ, ಕೊರೊನಾ ಜಾಗೃತಿ ಮೂಡಿಸಲು ತಂಡ ರಚಿಸಿ – ರೈತ ಸಂಘ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಮೇ.04: ಮಾವು ಮಾರುಕಟ್ಟೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊರೊನಾ ನಿಯಮಗಳನ್ನು ಪಾಲಿಸುವಂತೆ ಕರಪತ್ರಗಳ ಮೂಲಕ ಜಾಗೃತಿ ಮೂಡಿಸುವ ಜೊತೆಗೆ ವಿಶೇಷ ತಂಡ ರಚನೆ ಮಾಡಿ ಸಂಕಷ್ಟದಲ್ಲಿರುವ ಮಾವು ಬೆಳೆಗಾರರ ನೆರವಿಗೆ ಜಿಲ್ಲಾಡಳಿತ ಮುಂದಾಗಬೇಕೆಂದು ರೈತ ಸಂಘದಿಂದ ತಹಶೀಲ್ದಾರ್ ಶ್ರೀನಿವಾಸ್‍ರವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಮನವಿ ನೀಡಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಬರುವ ಅನುಧಾನಗಳಿಗೆ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಲೂಟಿ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ. ಪ್ರತಿ ವರ್ಷ ತಮಗೆ ಇಷ್ಟ ಬಂದ ರೀತಿ ಅಂಗಡಿಗಳಿಗೆ ಪರವಾನಗಿ ನೀಡಿ ಕಾನೂನು ಉಲ್ಲಂಘನೆ ಮಾಡಿ ಆಡಳಿತ ಮಂಡಳಿಯನ್ನೇ ರದ್ದು ಮಾಡುವ ಮಟ್ಟಕ್ಕೆ ಭ್ರಷ್ಟಚಾರ ತುಂಬಿ ತುಳುಕುತ್ತಿದೆ. ಮಾವು ಸುಗ್ಗಿ ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗುತ್ತಿದ್ದರೂ ಮುಂಜಾಗ್ರತವಾಗಿ ಯಾವುದೇ ಸಿದ್ದತೆಗಖನ್ನು ಮಾಡಿಕೊಳ್ಳದೆ ರೈತ ವಿರೋಧಿ ದೋರಣೇ ಅನುಸರಿಸುತ್ತಿರುವ ಆಡಳಿತ ಮಂಡಳಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವರ್ಷ ಕೊರೊನಾದ ಮೊದಲನೇ ಅಲೆಯಲ್ಲಿ 3 ತಿಂಗಳ ಕಾಲ ಲಾಕ್‍ಡೌನ್ ಮಾಡಿದ್ದ ಸಂದರ್ಭದಲ್ಲಿಯೂ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಸಿ.ಸತ್ಯಭಾಮ ಅವರು ಮಾವು ಬೆಳೆಗಾರರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಂಡು ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದರು. ಅದೇ ರೀತಿ ಈ ಭಾರಿ 2 ನೇ ಕೋರೋನಾ ಆವಳಿ ಬೀಕರವಾಗಿರುವುದರಿಂದ ಪ್ರಾಣ ಹಾನಿಯೂ ಆಗಬಾರದು ರೈತರು ವ್ಯಾಪಾರಸ್ಥರು ದಲ್ಲಾಳರು ಆರೋಗ್ಯವೂ ಮುಖ್ಯವಾಗಿರುವುದರಿಂದ ಪಾಲಿಸಬೇಕಾದ ನಿಯಮಗಳ ಬಗ್ಗೆ ಜಾಗೃತವಹಿಸಬೇಕೆಂದು ಸಲಹೆ ನೀಡಿದರು.


ತಾಲ್ಲೂಕಾದ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುವ ಮಾವು ಮಾರುಕಟ್ಟೆ ಯಾವುದೇ ಅಡೆತಡೆಯಿಲ್ಲದೆ ಈ ವರ್ಷವು ಕೊರೊನಾ ಇಲ್ಲದೆ ತಮ್ಮ ವಹಿವಾಟನ್ನು ನಿರ್ಭಯವಾಗಿ ಮಾಡಿಕೊಳ್ಳಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ಕೊರೊನಾ 2ನೇ ಅಲೆಯ ಆರ್ಭಟದಿಂದಾಗಿ ಸಾಕಷ್ಟು ಆತಂಕ ಮನೆ ಮಾಡಿದೆ. ವಿಶ್ವ ವಿಖ್ಯಾತ ಹೊಂದಿರುವ ಜಿಲ್ಲೆಯ ಮಾವು ದೇಶ ವಿದೇಶಗಳಿಗೆ ರಫ್ತಾಗುವ ಕಾಲ ಸಮೀಪದಲ್ಲಿದೆ. ಈ ಹಿನ್ನೆಲೆಯಲ್ಲಿ ಪ್ರತಿನಿತ್ಯ ಸಾವಿರಾರು ಮಂದಿ ಹೊರರಾಜ್ಯಗಳಿಂದಲೂ ಆಗಮಿಸುತ್ತಾರೆ. ಮಾವು ಸಹ 250-300 ಲಾರಿ ಲೋಡ್ ಆಗುವುದರಿಂದ ಕಾರ್ಮಿಕರು, ಮಂಡಿ ಮಾಲೀಕರು, ರೈತರ ರಕ್ಷಣೆಗೆ ಆದ್ಯತೆ ನೀಡಬೇಕಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಎಲ್ಲ ನಿಯಮಗಳನ್ನು ಪಾಲಿಸುವ ಜೊತೆಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಊಟದ ವ್ಯವಸ್ಥೆ ಸೇರಿದಂತೆ ಎಲ್ಲವೂ ವ್ಯವಸ್ಥಿತವಾಗಿ ಕಲ್ಪಿಸಬೇಕು. ಕಳೆದ ಬಾರಿ ಯಾವುದೇ ಅವಘಡಗಳು ಸಂಭವಿಸದಂತೆ ಜಿಲ್ಲಾಡಳಿತದಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈ ಬಾರಿ ಕೊರೊನಾ 2ನೇ ಅಲೆಯು ಸಾಕಷ್ಟು ಪರಿಣಾಮಕಾರಿಯಾಗಿರುವುದರಿಂದಾಗಿ ಮಾವು ಮಾರುಕಟ್ಟೆಯಲ್ಲಿ ಹೆಚ್ಚಿನ ಕ್ರಮಕೈಗೊಳ್ಳಬೇಕಾಗಿದೆ. ಹಾಗಾಗಿ ಕಡ್ಡಾಯವಾಗಿ ಕೊರೊನಾ ನಿಯಮಗಳನ್ನು ಪಾಲಿಸುವಂತೆ ಕರಪತ್ರಗಳ ಮೂಲಕ ಜಾಗೃತಿ ಮೂಡಿಸುವ ಜೊತೆಗೆ ವಿಶೇಷ ತಂಡ ರಚನೆ ಮಾಡಿ ಸಂಕಷ್ಟದಲ್ಲಿರುವ ಮಾವು ಬೆಳೆಗಾರರ ನೆರವಿಗೆ ಜಿಲ್ಲಾಡಳಿತ ಮುಂದಾಗಬೇಕೆಂದು ಮಾನ್ಯರನ್ನು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಶ್ರೀನಿವಾಸ್ ರವರು ಮಾವು ಮಾರುಕಟ್ಟೆಗೆ ಅನುಕೂಲವಾಗುವ ರೀತಿ ಎಲ್ಲಾ ಅಧಿಕಾರಿಗಳ ಸಭೆ ಕರೆದು ಜಾಗೃತಿ ಮೂಡಿಸುವ ಜೊತೆಗೆ ರೈತರಿಗೆ , ವ್ಯಾಪಾರಸ್ಥರು, ದಲ್ಲಾಳಿರಿಗೆ ತೊಂದರೆಯಾಗಂದಂತೆ ಕ್ರಮ ವಹಿಸುವ ಭರವಸೆ ನೀಡಿದರು.
ಮನವಿ ನೀಡುವಾಗ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಆಂಚಂಪಲ್ಲಿ ಗಂಗಾಧರ್, ಲೋಕೇಶ್, ಸಹದೇವಣ್ಣ, ತೂಪಲ್ಲಿ ಮಾರಪ್ಪ ಮೊದಲಾದವರು ಇದ್ದರು

ಕುಂದಾಪುರ ಜಲಸಿರಿ ಕಾಮಾಗಾರಿ ; ಚಿಕ್ಕನಸಾಲ್ ರಸ್ತೆಯಲ್ಲಿ ಸಂಚಾರ ತತ್ಕಾಲಿಕ ನಿರ್ಬಂದ

JANANUDI.COM NETWORK


ಕುಂದಾಪುರ,ಮೇ.5; ಕುಂದಾಪುರ ಪುರಸಭೆ ವ್ಯಾಪ್ತಿಯ ಚಿಕ್ಕನಸಾಲ್ ಕಾಂಕ್ರಿಂಟ್ ರಸ್ತೆಂiÀ ಬದಿಯಲ್ಲಿ ಜಲಸಿರಿ ಕುಡಿಯುವ ನೀರಿನ ಯೋಜನೆಗಾಗಿ ಸುಮಾರು 12 ಇಂಚು ಗಾತ್ರದ ಕಬ್ಬಿಣದ ಪೈಪುಗಳನ್ನು ಮಣ್ಭಿನ ಅಡಿಯಲ್ಲಿ ಅಳವಡಿಸುವ ಕಾಮಗಾರಿ ಮೇ 4ರಂದು ಆರಂಭಗೊಂಡಿದೆ.
ಆದರಿಂದ ಚಿಕ್ಕನಸಾಲು ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂದಿಸಲಾಗಿದೆ. ಜನರು ಬೇರೆ ರಸ್ತೆಗಳಿಂದ ಸಂಚರಿಸಿ ಸಹಕರಿಸಬೇಕೆಂದು ಪುರಸಭೆ ವಿನಂತಿಸಿಕೊಂಡಿದೆ. ಈ ಕಾಮಾಗಾರಿ ಸುಮಾರು ಹತ್ತು ದಿನಗಳ ತನಕ ನಡೆಯಬಹುದೆಂದು ತಿಳಿದು ಬಂದಿದೆ.