HOLY ROSARY CHURCH, KUNDAPUR – 450 th JUBILEE SOUVENIR 2021

ಸಂಕಷ್ಟದಲ್ಲಿರು ಪ್ರತಿ ಕುಟುಂಬಕ್ಕೆ 10 ಸಾವಿರ ರೂಪಾಯಿ ಮತ್ತು10 ಕೆ.ಜಿ ಅಕ್ಕಿ ನೀಡಲು ;ಸಿದ್ದರಾಮಯ್ಯ ಸರ್ಕಾರಕ್ಕೆ ಪತ್ರ

JANANUDI.COM NETWORK

ಬೆಂಗಳೂರು:ಮೇ. 9; ನಾಳೆಯಿಂದ ರಾಜ್ಯಾದ್ಯಂತ ಲಾಕ್ ಡೌನ್ ಜಾರಿಗೆ ಬರುತ್ತಿದ್ದು, ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ,ಬಡ, ದುಡಿಯುವ ವರ್ಗಕ್ಕೆ ನೆರವು ನೀಡ ಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ.

ಕೊರೊನಾ ಮಾಹಾಮಾರಿಯಿಂದಾಗಿ ಈಗಾಗಲೇ ಹಲವು ಕ್ಷೇತ್ರಗಳ ಜನರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಅನೇಕರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಲಾಕ್ ಡೌನ್ ಜಾರಿಯಾಗುತ್ತಿರುವುದರಿಂದ ನಗರಗಳನ್ನು ತೊರೆದು ಹಳ್ಳಿಗಳತ್ತ ತೆರಳಲು ಸಿದ್ದವಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಬಡವರ, ಆರ್ಥಿಕ ಸಂಕಷ್ಟದಲ್ಲಿರುವರ ನೆರವಿಗೆ ನಿಲ್ಲಬೇಕು.

    ಹಾಗಾಗಿ ಪ್ರತಿ ಕುಟುಬಕ್ಕೆ 10 ಕೆಜಿ ಅಕ್ಕಿ, ಬೇಳೆ, ಅಡುಗೆ ಎಣ್ಣೆ ಮುಂತಾದ ದಿನಸಿ ಪದಾರ್ಥಗಳ ಕಿಟ್ ನೀಡಬೇಕು. ರೈತರು, ಕುಶಲಕರ್ಮಿಗಳು, ಕಾರ್ಮಿಕರು, ಚಾಲಕರು ಹಾಗೂ ಪ್ರತಿ ಬಿಪಿಎಲ್ ಕುಟುಂಬಗಳಿಗೆ ಆರಂಭದಲ್ಲಿ 10,000 ರೂಪಾಯಿಗಳನ್ನು ನಂತರ ತಿಂಗಳಿಗೆ 6000 ರೂ. ಗಳನ್ನು ನೀಡಬೇಕು ಎಂದು ಪತ್ರದ ಮುಖಾಂತರ ಮನವಿ ಮಾಡಿದ್ದಾರೆ.

ಉಡುಪಿ ಜಿಲ್ಲೆ ಲಾಕ್ ಡೌನ್; ನಾಳೆಯಿಂದ ನಿಯಮಾವಳಿ ಉಲ್ಲಂಘಿಸಿದರೆ ಕಠಿಣ ಕ್ರಮ ; ಉಡುಪಿ ಜಿಲ್ಲಾಧಿಕಾರಿ ಜಗದೀಶ್

JANANUDI.COM NETWORK

ಉಡುಪಿ ಜಿಲ್ಲೆ ಲಾಕ್ ಡೌನ್; ನಾಳೆಯಿಂದ ನಿಯಮಾವಳಿ ಉಲ್ಲಂಘಿಸಿದರೆ ಕಠಿಣ ಕ್ರಮ ; ಡಿಸಿ ಜಗದೀಶ್
ಉಡುಪಿ :ಮೇ.9: ನಾಳೆ ಮೇ 10 ರಿಂದ ಜಾರಿಯಾಗಲಿರುವ ಎರಡನೇ ಹಂತದ ಲಾಕ್ ಡೌನ್ ನಿಯಮಾವಳಿಗಳನ್ನು ಉಲ್ಲಂಘಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ,ಜಗದೀಶ್ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಹೊರಗಿನಜಿಲ್ಲೆಯಿಂದ ಬಂದವರಿಗೆ ಉಡುಪಿ ಜಿಲ್ಲೆಯೊಳಗೆ ಯಾರನ್ನೂ ಬಿಡುವುದಿಲ್ಲ. ಈ ಬಗ್ಗೆ ಪೊಲೀಸ್ ಅಧಿಕಾರ ಸಭೆ ನಡೆಸಿ ನಿರ್ದೇಶನ ನೀಡಲಾಗಿದೆ ಡಿ.ಸಿ.ತಿಳಿಸಿದ್ದಾರೆ
ಸುದ್ದಿಗೋಷ್ಟಿಯಲ್ಲಿ ಶಾಸಕರಾದ ಲಾಲಾಜಿ ಆರ್.ಮೆಂಡನ್, ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ಜಿ.ಪಂ.ಸಿಇಒ ಡಾ. ನವೀನ್ ಭಟ್, ಸಹಾಯಕ ಕಮಿಷ್ನರ್ ರಾಜು, ಎಡಿಸಿ ಸದಾಶಿವ ಪ್ರಭು ಹಾಜರಿದ್ದರು.

ಏನು ಇದೆ – ಏನು ಇಲ್ಲ


*ಹೋಟೆಲ್ ಗಳಲ್ಲಿ ಬೆಳಿಗ್ಗೆಯಿಂದ ರಾತ್ರಿಯವರಿಗೆ ಪಾರ್ಸೆಲ್ ಗೆ ಅವಕಾಶ. ಸಮೀಪದ *ಹೊಟೇಲ್ ಗೆ ಹೋಗಲು ಅವಕಾಶ. ವಾಹನ ಬಳಸುವಂತಿಲ್ಲ.
*ಮನೆ ಸಮೀಪದ ಅಂಗಡಿಗಳಿಗೆ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅವಕಾಶ.
*ಬಾರ್ ಗಳಲ್ಲಿ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಪಾರ್ಸೆಲ್ ಅವಕಾಶ.
*ಔಷಧಿ ಖರೀದಿಗೂ ಸಮೀಪದ ಅಂಗಡಿಗಳಿಗೆ ತೆರಳಿ.
*ಹಾಪ್ ಕಾಮ್ಸ್ ಮತ್ತು ಕೆಎಂಎಫ್ ಹಾಲಿನ ಬೂತುಗಳಿಗಷ್ಟೇ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ತೆರೆಯಲು ಅವಕಾಶ. ಬೇಕರಿಗಳಲ್ಲಿ ಅವಕಾಶವಿಲ್ಲ.
*ತಳ್ಳುಗಾಡಿಗಳಲ್ಲಿ ತರಕಾರಿ ಕೊಳ್ಳಲು, ಮಾರಲು ಅವಕಾಶ. ಹೋಂ ಡೆಲಿವರಿಗೂ ಅವಕಾಶ.
*ಮೀನು ಮನೆಗೆ ಕೊಂಡೊಯ್ದು ಮಾರಲು ಅವಕಾಶ. ಬಂದರು ಪ್ರದೇಶಕ್ಕೆ ಸಾರ್ವಜನಿಕರಿಗೆ ನೋ ಎಂಟ್ರಿ.
*ಮದುವೆಗೆ 40 ಮಂದಿ, ಅಂತ್ಯಸಂಸ್ಕಾರಕ್ಕೆ 5 ಮಂದಿ. ಬೀಗರ ಔತಣ, ಮೆಹೆಂದಿ ಕಾರ್ಯಕ್ರಮ ಮಾಡುವಂತಿಲ್ಲ. ಮದುವೆಗೆ ಸಂಚರಿಸಲು ಅನುಮತಿ ಅಗತ್ಯ.
*ತುರ್ತು ಸೇವೆಗಳು, ಆಸ್ಪತ್ರೆಗಳು, ಆರೋಗ್ಯ ಸಿಬ್ಬಂದಿಗಳಿಗಿದೆ ಅವಕಾಶ. ಅಂತಾರಾಜ್ಯ, *ಜಿಲ್ಲಾ ಪ್ರವಾಸಕ್ಕೆ ಅವಕಾಶವಿಲ್ಲ.
*ಕಾಮಗಾರಿ ನಿವೇಶನದಲ್ಲಿ ಕಾರ್ಮಿಕರನ್ನು ಉಳಿಸಿಕೊಂಡು ಕಾಮಗಾರಿ ಮಾಡಬಹುದು.
*ಸರಕು, ಸಾಗಾಟಕ್ಕೆ ಅವಕಾಶ.ಮಂದಿರ,ಚರ್ಚ್,ಮಸೀದಿ ಮತ್ತು ಪ್ರಾರ್ಥನಲಾಯಗಳಲ್ಲಿ ಪೂಜೆಗಳಿಗೆ ಸಾರ್ವಜನಕರಿಗೆ ಅವಕಾಶವಿಲ್ಲ

*ಸಿನೀಮಾಥೀಯೆಟಗಳು ಬಂದ್

ಕಾಡುತ್ತಿರುವ ಕೋವಿಡ್ -19 ಸೋಂಕಿನ ಮಾರಕದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಅಗತ್ಯವಾಗಿ ನಿಯಮಗಳನ್ನು ಪಾಲಿಸುವ – ಜೆರಾಲ್ಡ್ ಲೋಬೊ ಉಡುಪಿಯ ಧರ್ಮಾಧ್ಯಕ್ಷರು

JANANUDI.COM NETWORK


ಕಳೆದ ಒಂದು ವರ್ಷದಿಂದ ನಮ್ಮನ್ನು ಕಾಡುತ್ತಿರುವ ಕೋವಿಡ್ -19 ಸೋಂಕಿನ ಮಾರಕ ಎರಡನೇ ಅಲೆಯು ಇದೀಗ ನಮ್ಮನ್ನೆಲ್ಲ ಅತೀವವಾಗಿ ಕಂಗೆಡಿಸಿದೆ. ನಮ್ಮ ದೇಶದಲ್ಲಿ ಪ್ರತಿನಿತ್ಯ ಸಾವಿರಾರು ಅಮಾಯಕರು ಈ ಸೋಂಕಿಗೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಲಕ್ಷಾಂತರ ಜನರು ಈ ಸೋಂಕಿನಿಂದ ಚಡಪಡಿಸುತ್ತಿದ್ದಾರೆ. ಈ ಅತ್ಯಂತ ವಿಷಮ ಪರಿಸ್ಥಿತಿಯಲ್ಲಿ ನಾವೆಲ್ಲರೂ ಧೈರ್ಯಗುಂದದೆ ಇರಬೇಕಾಗಿದೆ. ದಿಟ್ಟತನದಿಂದ ನಮ್ಮ ಜನರನ್ನು ಹಾಗೂ ನಮ್ಮನ್ನು ಈ ಸೋಂಕಿನ ದವಡೆಯಿಂದ ರಕ್ಷಿಸಬೇಕಾಗಿದೆ.

  1. ವಿಜ್ಞಾನಿಗಳು, ತಜ್ಞರು, ವೈದ್ಯರು ಹಾಗೂ ಇತರ ವಿಶೇಷ ಪರಿಣತಿಯುಳ್ಳವರು ಕೋವಿಡ್-19 ಸೋಂಕಿನ ಬಗ್ಗೆ ಆಳವಾಗಿ ಅಧ್ಯಯನವನ್ನು ನಡೆಸಿ ರಾಷ್ಟ್ರದ, ರಾಜ್ಯದ ಹಾಗೂ ಸ್ಥಳೀಯ ಆಡಳಿತಕ್ಕೆ ಈ ಸೋಂಕನ್ನು ಎದುರಿಸಲು ಸೂಕ್ತ ಮಾರ್ಗದರ್ಶನವನ್ನು ನೀಡಿರುತ್ತಾರೆ. ನಾವೆಲ್ಲರೂ ಯಾವುದೇ ಊಹಾಪೋಹಗಳು, ಸುಳ್ಳು ಸುದ್ಧಿ ಅಥವ ತಪ್ಪುತಿಳುವಳಿಕೆಗಳಿಗೆ ಬಲಿಯಾಗದೆ ನಮಗಿತ್ತ ಮಾರ್ಗದರ್ಶನವನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಗತ್ಯ.
  2. ಕೋವಿಡ್-19 ಸೋಂಕಿನ ವಿರುದ್ಧ ಅತ್ಯಲ್ಪ ಕಾಲದಲ್ಲಿ ಲಸಿಕೆಗಳನ್ನು ಕಂಡುಹಿಡಿದ ವಿಜ್ಞಾನಿಗಳು ಹಾಗು ತಜ್ಞರು ಅಭಿನಂದನಾರ್ಹರು. ಕೋವಿಡ್-19 ಸೋಂಕನ್ನು ಸೋಲಿಸಲು ಎಲ್ಲರೂ ತಪ್ಪದೆ ಈ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಯಾವುದೇ ಧಾರ್ಮಿಕ ಅಥವ ಸಾಮಾಜಿಕ ತಪ್ಪು ತಿಳುವಳಿಕೆ ಹಾಗೂ ಮೂಢನಂಬಿಕೆಗಳಿಗೆ ಬಲಿಯಾಗದೆ ಎಲ್ಲರೂ ಆದಷ್ಟು ಬೇಗ ಈ ಲಸಿಕೆಯನ್ನು ಹಾಕಿಸಿಕೊಳ್ಳೋಣ.
  3. ನಮ್ಮ ಉಡುಪಿ ಜಿಲ್ಲೆಯಲ್ಲಿ ಮೇ 10 ರಿಂದ ಕಟ್ಟುನಿಟ್ಟಿನ ಸಂಪೂರ್ಣ ಲಾಕ್‍ಡೌನ್ ಮಾಡುವುದಾಗಿ ಜಿಲ್ಲಾ ಆಡಳಿತವು ತಿಳಿಸಿದೆ. ಕೋವಿಡ್-19 ಸೋಂಕು ಒಬ್ಬರಿಂದ ಒಬ್ಬರಿಗೆ ಹರಡದೇ ಇರಲು ಇರುವ ಅತ್ಯಂತ ಪರಿಣಾಮಕಾರಿ ಮಾರ್ಗ ಎಂದರೆ ಈ ಸಮಯದಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಯ ಸುರಕ್ಷತೆಯಲ್ಲೇ ಉಳಿಯುವುದು. ಇದು ಬಹಳ ಕಷ್ಟದ ಕೆಲಸ. ಆದರೂ, ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ನಮ್ಮಿಂದ ಇತರ ಅಮಾಯಕರು ಸೋಂಕಿಗೆ ಬಲಿಯಾಗುವುದನ್ನು ತಪ್ಪಿಸಲು ಎಲ್ಲರೂ ಗರಿಷ್ಠ ಪ್ರಯತ್ನಿಸಿ ಲಾಕ್‍ಡೌನ್‍ನ್ನು ಪಾಲಿಸೋಣ.
  4. ಕಳೆದ ವರ್ಷದ ಕೋವಿಡ್-19 ಸಮಯದಲ್ಲಿ ಸೋಂಕಿಗೆ ಸಿಲುಕಿದವರು, ಕಾರ್ಮಿಕರು, ನಿರಾಶ್ರಿತರು, ವೃದ್ಧರು ಇನ್ನಿತರರಿಗೆ ಸಹಾಯ ಹಸ್ತವನ್ನು ನೀಡಿದಂತೆ, ಈಗಲೂ ಸಾಧ್ಯವಾದ ಎಲ್ಲಾ ಸಹಾಯವನ್ನು ನೀಡಲು ಉಡುಪಿ ಧರ್ಮಪ್ರಾಂತ ಹಾಗೂ ಅದರ ಎಲ್ಲಾ ಚರ್ಚುಗಳು ಸಿದ್ಧವಾಗಿವೆ. ಜಿಲ್ಲೆಯ ಎಲ್ಲಾ 52 ಧರ್ಮಕೇಂದ್ರಗಳೂ ಕಥೊಲಿಕ್ ಸಭಾ, ಯುವ ಸಂಚಲನ ಹಾಗೂ ಇನ್ನಿತರ ಸಂಸ್ಥೆಗಳ ಮೂಲಕ ಬೇಕಾದ ನೆರವನ್ನು ನೀಡುತ್ತಿವೆ.
    ಈ ವಿಷಮ ಕಾಲದಲ್ಲಿ ಕೋವಿಡ್ ಸೋಂಕಿನಿಂದ ಮುಕ್ತಿ ಹೊಂದಲು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡೋಣ. ಸೃಷ್ಟಿಸಿದ ಭಗವಂತ ರಕ್ಷಕನೂ ಹೌದು, ಅವನಲ್ಲಿ ಮೊರೆಯಿಡೋಣ. ಪರಸ್ಪರರಿಗಾಗಿ ಪ್ರಾರ್ಥಿಸೋಣ. ಕರುಣಾಮಯಿ ದೇವರು ನಮ್ಮನ್ನೆಲ್ಲ ರಕ್ಷಿಸಿ ಕಾಪಾಡಲಿ.
    ಪರಮಪೂಜ್ಯ ಡಾ| ಜೆರಾಲ್ಡ್ ಲೋಬೊ
    ಉಡುಪಿಯ ಧರ್ಮಾಧ್ಯಕ್ಷರು

ಕುಂಭಮೇಳದಿಂದ ಭಾಗವಹಿಸಿ ವಾಪಸ್ ಆದ ಶೇ.99ರಷ್ಟು ಜನರಿಗೆ ಪಾಸಿಟಿವ್; ಮಹಾ ಸ್ಪ್ರೆಡರ್ ಆಯ್ತು ಹರಿದ್ವಾರ

JANANUDI.COM NETWORK


ಹರಿದ್ವಾರ: ಕೊರೋನಾ 2ನೇ ಅಲೆಯಿಂದ ತತ್ತರಿಸುತ್ತಿರುವ ಭಾರತಕ್ಕೆ ಅದೇ ಸಮಯದಲ್ಲಿ ಉತ್ತಾರಖಂಡ್ನ ಹರಿದ್ವಾರದಲ್ಲಿ ನಡೆದ ಕುಂಭಮೇಳ ಈಗ ಕೊರೋನಾ ಮಹಾ ಸ್ಪ್ರೆಡರ್ ಆಗಿ ಹೊರ ಹಮ್ಮಿದೆ. . ಪವಿತ್ರ ಗಂಗಾ ಸ್ನಾನದಲ್ಲಿ (ಶಾಹಿ ಸ್ನಾನ್) ಮಿಂದೆದ್ದ ಸಾವಿರಾರು ಮಂದಿಗೆ ಸೋಂಕು ಅಂಟಿಕೊಂಡಿದೆ. ಹರಿದ್ವಾರದಿಂದ ಮಧ್ಯಪ್ರದೇಶಕ್ಕೆ ಹಿಂತಿರುಗಿದ ಶೇ.99ರಷ್ಟು ಮಂದಿಯ ರಿಪೋರ್ಟ್ ಕೋವಿಡ್ ಪಾಸಿಟಿವ್ ಬಂದಿದೆ. ಕುಂಭ ಮೇಳದಲ್ಲಿ ಭಾಗಿಯಾಗಿ ರಾಜ್ಯಕ್ಕೆ ಮರಳಿದವರೆಲ್ಲರಿಗೂ 14 ದಿನಗಳ ಕಾಲ ಕ್ವಾರಂಟೈನ್ಗೆ ಒಳಪಡಿಸಿ, ಕೋವಿಡ್ ಪರೀಕ್ಷೆ ನಡೆಸಲಾಗಿದೆ.
ಕಳೆದ ವರ್ಷ ತಬ್ಲಿಘಿ ಜಮಾತ್ನಿಂದ ಕೊರೋನಾ ಹರಡಿತ್ತು. ಆಗ ಕೊರೋನಾ ಬಗ್ಗೆ ತಿಳಿಯದೇ ಅವರೆಲ್ಲಾ ದೆಹಲಿಯಲ್ಲಿ ಒಂದೆಡೆ ಸೇರಿದ್ದರು.ಮತ್ತು ಇಷ್ಟೊಂದು ಆಗಾದ ಪ್ರಮಾಣದಲ್ಲಿ ಜನ ಸೇರಿರಲಿಲ್ಲಾ ಆದರೆ ಈ ವರ್ಷ ಕೊರೋನಾ ಬಗ್ಗೆ ತಿಳಿದಿದ್ದರೂ ಕುಂಭಮೇಳ ನಡೆಸಲಾಗುತ್ತಿದೆ. ತಬ್ಲಿಘಿ ಜಮಾತ್ಗಿಂತ ದೊಡ್ಡ ಮಟ್ಟದಲ್ಲಿ ಕುಂಭಮೇಳ ನಡೆಸಿದರಿಂದ ಸೋಂಕು ತೀವ್ರ ಗತಿಯಲ್ಲಿ ಹರಡಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಅದರೆಂತೆ ಈಗ ಕುಂಭಮೇಳದಿಂದ ಮಧ್ಯಪ್ರದೇಶಕ್ಕೆ ವಾಪಸ್ ಆದರವರಲ್ಲಿ ಶೇ.99ರಷ್ಟು ಮಂದಿಗೆ ಕೊರೋನಾ ಬಂದಿದೆ. ಇನ್ನು 22 ಯಾತ್ರಾರ್ಥಿಗಳ ಸುಳಿವು ಸಿಕ್ಕಿಲ್ಲ. ಹೀಗಾಗಿ ಮಧ್ಯಪ್ರದೇಶದಲ್ಲಿ ಕೊರೋನಾ ಆತಂಕ ಹೆಚ್ಚಾಗಿದೆ ಎಂದು ಹೇಳಲಾಗುತ್ತದೆ. ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಕುಂಭಮೇಳದಲ್ಲಿ ಭಾಗಿಯಾಗಿದ್ದರು. ಹರಿದ್ವಾರದಿಂದ ಹಿಂತಿರುಗಿದವರಲ್ಲಿ ಬಹುತೇಕರಿಗೆ ಕೊರೋನಾ ಬಂದಿದ್ದು ಅನೇಕ ಜನ ಸಾವನ್ನಪ್ಪಿದ್ದಾರೆ,ಅದರಲ್ಲಿ ಸಾಧು ಸಂತರೂ ಸಾವನ್ನಪ್ಪಿದ್ದಾರೆಂದು ವದಂತಿಗಳಿವೆ.

ವಿಲ್ಫಿ ರೆಬಿಂಬಸಾಚ್ಯಾ ’ಪಿಂತ್ರಾಂ’ ಕಥೆಚೆರ್ ಅಧ್ಯಯನ್ – विलफी रेबिंबसाच्या ’पिंत्रां’ कथेचेर अध्ययन

JANANUDI.COM NETWORK

8 ಮಾಯ್ 2021: ಆಶಾವಾದಿ ಪ್ರಕಾಶನ್, ಅಖಿಲ್ ಭಾರತೀಯ್ ಕೊಂಕಣಿ ಪರಿಶದ್ ಆನಿ ಉಜ್ವಾಡ್ ಪಂದ್ರಾಳೆ ಹಾಂಚ್ಯಾ ಜೋಡ್ ಪಾಲವಾಂತ್ ಚಲ್‌ಲ್ಲ್ಯಾ ಕಥಾಪಾಠ್ ದುಸ್ರ್ಯಾ ಶಿಂಕಳೆಂತ್, ವಿಲ್ಫಿ ರೆಬಿಂಬಸಾನ್ 1970-ವ್ಯಾ ದಾಕ್ಡ್ಯಾಂತ್ ಬರಯಿಲ್ಲ್ಯಾ ’ಪಿಂತ್ರಾಂ’ ಕಥೆಚೆರ್ ಖೊಲಾಯೆನ್ ಅಧ್ಯಯನ್, ಪಯ್ಣಾರಿ ಸಂಪಾದಕ್ ವಲ್ಲಿ ಕ್ವಾಡ್ರಸಾನ್ ಚಲವ್ನ್ ವೆಲೆಂ. ಮಂಗ್ಳುರ್, ಗೊಂಯ್ ಕೊಲೆಜಿಂನಿ ಶಿಕ್ಚಿಂ ವಿಧ್ಯಾರ್ಥಿಂ ತಶೆಂಚ್ ಪ್ರಾಧ್ಯಾಪಕ್, ತಶೆಂಚ್ ಹೆರ್ ಪ್ರಾಂತ್ಯಾಥಾವ್ನ್ ಸಾಹಿತಿಕ್ ಅಭಿರುಚ್ ಆಸ್ಚ್ಯಾಂನಿ ಹಾಜರ್ ಆಸ್‌ಲ್ಲ್ಯಾ ಹ್ಯಾ ವೆಬಿನಾರಾಚಿ ಸುರ‍್ವಾತ್ ಮಾ|ಜೇಸನ್ ಪೀಂತ್ ಉದ್ಯಾವರ್ ಹಾಣಿ ಜೆರಾಲ್ ಯೆವ್ಕಾರ್ ಮಾಗುನ್, ಹ್ಯಾ ಕಥಾಪಾಠಾಚ್ಯಾ ಮಿಸಾಂವಾವಿಶಿಂ ಮಟ್ವೊ ವಿವರ್ ದಿಲೊ. ಅಖಿಲ್ ಭಾರತೀಯ್ ಕೊಂಕಣಿ ಪರಿಶದೆಚಿ ಅಧ್ಯಕ್ಷ್ ಬಾಯ್ ಉಶಾ ರಾಣೆನ್ ಯೆವ್ಕಾರ್ ಉಲವ್ಪ್ ಕರುನ್, ಕೊಂಕಣಿಂತ್ಲ್ಯೊ ಉತ್ತೀಮ್ ಕಥಾ ಖಂಚ್ಯಾ ಪ್ರಾಂತ್ಯಾಂತ್ ಆಸ್ಲ್ಯಾರ್‌ಯೀ ತ್ಯೊ ಆಮ್ಕಾಂ ಸಮೇಸ್ತಾಂಕ್ ಪಾವಂವ್ಚೆವಿಶಿಂ ಆಟೊವ್ ಗರ‍್ಜೆಚೊ ಆನಿ ಕೊಂಕಣಿ ಸಾಹಿತ್ಯಾಚಿ ಗ್ರೇಸ್ತ್‌ಕಾಯ್ ಆಮಿ ಸಮ್ಜುಂಚಿ ಗರ‍್ಜ್ ಮ್ಹಣಾಲಿ.
ವಲ್ಲಿ ಕ್ವಾಡ್ರಸಾನ್ 1970ವ್ಯಾ ಕಾಳಾರ್ ದೇಶಾಚಿ, ರಾಜ್ಯಾಚಿ ತಶೆಂಚ್ ಮಂಗ್ಳುರ‍್ಚಿ ಪರಿಗತ್ ಕಸ್ಲಿ ಆಸ್ಲಿ ಮ್ಹಳ್ಳ್ಯಾಚೆರ್ ಮಟ್ವೊ ವಿವರ್ ದಿತಚ್, ಕಥೆಚ್ಯಾ ಪಾಂಚ್ ಅಂಶಾಂಚೊ ಉಲ್ಲೇಕ್ ಕರುನ್, ಪಿಂತ್ರಾಂ ಕಥೆಚೆರ್ ಖೊಲಾಯೆನ್ ವಿಶ್ಲೇಷಣ್ ಕೆಲೆಂ. 
ದೊ|ಪ್ರಕಾಶ್ ಪೆರಿಯಂಕರ್ ಹಾಣಿಂ ಕಥಾಪಾಠಾಚಿ ಥೊಕ್ಣಾಯ್ ಕರುನ್, ಅಶೆಂ ಆಮ್ಚ್ಯಾ ಕೊಂಕಣಿಚ್ಯಾ ಹೆರ್ ಲಿಪಿಂನಿ ಆಸ್ಚೆಂ ಉತ್ತೀಮ್ ಸಾಹಿತ್ಯ್ ಆಮಿ ಅಧ್ಯಯನ್ ಕರಿಜಾಯ್ ಆನಿ ಹ್ಯಾ ದಿಶೆನ್ ಆಮ್ಚೊ ವಾವ್ರ್ ಚಡುಂಕ್ ಜಾಯ್ ಮ್ಹಣಾಲೊ. ಮಾ|ಚೇತನ್ ಲೋಬೊನ್ ’ಆಯ್ಚಿ ಕಥಾ ಮ್ಹಳ್ಯಾರ್ ಫಾಲ್ಯಾಂಚೊ ಇತಿಹಾಸ್’ ಮ್ಹಣುನ್, ವಿಲ್ಫಿ ರೆಬಿಂಬಸಾಚ್ಯಾ ’ಪಿಂತ್ರಾಂ’ ಕಥೆಂತ್ಲೊ ವರ‍್ಗ್‌ಭೇದ್, ಜೊ ಸಮಾಜಿಕ್ ಮಾರೆಕಾರ್ ಜಾವ್ನ್ ಅಜೂನ್ ಆಸಾ ತಾಚೆರ್ ಅಪ್ಲೆ ವಿಚಾರ್ ಉತ್ರಾಯ್ಲೆ.
ಮಾ|ರೋಯ್ಸನ್ ಫೆರ‍್ನಾಂಡಿಸಾನ್ ಧಿನ್ವಾಸ್ ಆಟಯ್ಲೆ.
ಮಾ|ಜೇಸನ್ ಪೀಂತಾನ್ ಹೆಂ ವೆಬಿಬಾರ್ ಚಲವ್ನ್ ವ್ಹೆಲೆಂ
.

विलफी रेबिंबसाच्या ’पिंत्रां’ कथेचेर अध्ययन



८ माय २०२१: आशावादी प्रकाशन, अखील भारतीय कोंकणी परिशद आनी उज्वाड पंद्राळे हांच्या जोड पालवांत चल‌ल्ल्या कथापाठ दूसऱ्या शिंकळेंत, विलफी रेबिंबसान १९७०-व्या दाकड्यांत बरयिल्ल्या ’पिंत्रां’ कथेचेर खोलायेन अध्ययन, पयणारी संपादक वल्ली क्वाड्रसान चलवन वेलें. मंगळूर, गोंय कोलेजिंनी शिकचीं विध्यार्थीं तशेंच प्राध्यापक, तशेंच हेर प्रांत्याथावन साहितीक अभिरूच आसच्यांनी हाजर आस‌ल्ल्या ह्या वेबिनाराची सूर‍्वात मा|जेसन पींत उद्यावर हाणी जेराल येवकार मागून, ह्या कथापाठाच्या मिसांवाविशीं मटवो विवर दिलो. अखील भारतीय कोंकणी परिशदेची अध्यक्ष बाय उशा राणेन येवकार उलवप करून, कोंकणिंतल्यो उत्तीम कथा खंच्या प्रांत्यांत आसल्यार‌यी त्यो आमकां समेसतांक पावंवचेविशीं आटोव गर‍्जेचो आनी कोंकणी साहित्याची ग्रेसत‌काय आमी समजुंची गर‍्ज म्हणाली.
वल्ली क्वाड्रसान १९७०व्या काळार देशाची, राज्याची तशेंच मंगळूर‍्ची परिगत कसली आसली म्हळ्ळ्याचेर मटवो विवर दितच, कथेच्या पांच अंशांचो उल्लेक करून, पिंत्रां कथेचेर खोलायेन विशलेषण केलें.

दो|प्रकाश पेरियंकर हाणीं कथापाठाची थोकणाय करून, अशें आमच्या कोंकणिच्या हेर लिपिंनी आसचें उत्तीम साहित्य आमी अध्ययन करिजाय आनी ह्या दिशेन आमचो वावर चडुंक जाय म्हणालो. मा|चेतन लोबोन ’आयची कथा म्हळ्यार फाल्यांचो इतिहास’ म्हणून, विलफी रेबिंबसाच्या ’पिंत्रां’ कथेंतलो वर‍्ग‌भेद, जो समाजीक मारेकार जावन अजून आसा ताचेर अपले विचार उत्रायले.

मा|रोयसन फेर‍्नांडिसान धिन्वास आटयले.
मा|जेसन पींतान हें वेबिबार चलवन व्हेलें.

ದೇಶಾದ್ಯಂತ 9 ಲಕ್ಷ ಸೋಂಕಿತರು ಆಕ್ಸಿಜನ್ ಮತ್ತು 1.7 ಲಕ್ಷ ರೋಗಿಗಳು ವೆಂಟಿಲೇಟರ್‌ ಆಸರೆಯಲ್ಲಿದ್ದಾರೆ

JANANUDI.COM NETWORK

ನವದೆಹಲಿ: ಮೇ. ೮.”ದೇಶದಲ್ಲಿ 9,02,291 ಸೋಂಕಿತರು ಆಮ್ಲಜನಕದ ಸಹಾರದಿಂದ ಮತ್ತು 1,70,841 ಕೋವಿಡ್ ರೋಗಿಗಳು ವೆಂಟಿಲೇಟರ್‌ ಸಹಾರದಿಂದ ಆಸ್ಪತ್ರೆಗಳಲ್ಲಿ ಇದ್ದಾರೆ’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಶನಿವಾರದಂದು ತಿಳಿಸಿದ್ದಾರೆ.

   ಸಾಂಕ್ರಾಮಿಕ ರೋಗದ ಪರಿಸ್ಥಿತಿ ಕುರಿತು ಚರ್ಚಿಸಲು ಸಚಿವರ ತಂಡದ ಜೊತೆ (ಜಿಒಎಂ)ದ 25ನೇ ವರ್ಚುವಲ್ ಸಭೆ ಉದ್ದೇಶಿಸಿ ಮಾತನಾಡಿದ ಹರ್ಷವರ್ಧನ್ ಮಾತನಾಡುತಿದ್ದರು “ದೇಶಾದ್ಯಂತ ಶೇ. 1.34 ರಷ್ಟು ಕೋವಿಡ್ ಸೋಂಕಿತರು ಐಸಿಯುನಲ್ಲಿದ್ದು, ಶೇ. 3.70 ಕೋವಿಡ್ ರೋಗಿಗಳು ಆಮ್ಲಜನಕದ ಆದಾರದಲ್ಲಿ ಮತ್ತು  ಶೇ.0.39 ರಷ್ಟು ಪ್ರಕರಣಗಳು ವೆಂಟಿಲೇಟರ್ ಆದಾರದಲ್ಲಿ ಇದ್ದಾರೆ ಎಂದು ಹೇಳಿದರು.

    ದೇಶದಲ್ಲಿ ಒಟ್ಟು 4,88,861 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಗೋಕಾಕ್‍ನಲ್ಲಿ ವೈದ್ಯರ ಜೊತೆ ಸತೀಶ ಜಾರಕಿಹೊಳಿ ತುರ್ತು ಸಮಾಲೋಚನೆ

JANANUDI.COMNETWORK

ಕೋವಿಡ್ 2ನೇ ಅಲೆ ತಡೆಗಟ್ಟಲು ರಾಜ್ಯ ಸರ್ಕಾರದ ಲಾಕ್‍ಡೌನ್ ನಿರ್ಧಾರ ಒಳ್ಳೆಯದು. ಆದರೆ, ಆಕ್ಸಿಜನ್, ಲಸಿಕೆ ಪೂರೈಕೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ತಾರತ್ಯಮ ಮಾಡುತ್ತಿರುವುದು ಸರಿಯಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಇಂದು ಗೋಕಾಕ್‍ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ

ಗೋಕಾಕ್ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿಇಂದು ಶನಿವಾರ ಸತೀಶ ಜಾರಕಿಹೊಳಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಸಭೆ ನಡೆಸಿದರು. ವೈದ್ಯರ ಜೊತೆ ಸಮಾಲೋಚನೆ ಮಾಡಿದ ಸತೀಶ ಜಾರಕಿಹೊಳಿ ’ಸೋಂಕು ವ್ಯಾಪಕವಾಗಿ ಹೆಚ್ಚಾಗುತ್ತಿದ್ದು. ಬಹಳಷ್ಟು ಸೂಕ್ಷ್ಮತೆ, ಜಾಗ್ರತಿ ಮಾಡಬೇಕಾಗುತ್ತದೆ.

ಸೋಂಕಿತರ ಚಿಕಿತ್ಸೆಗಾಗಿ ಬೇಕಾದ ವಿಶೇಷ ಸೌಲಭ್ಯ ಒದಗಿಸಿ. ಇಂಥ ಸಂದಿಗ್ದ ಸ್ಥಿತಿಯಲ್ಲಿ ಸೋಂಕಿತರಿಗೆ ಬೆಡ್, ಚಿಕಿತ್ಸೆ ಸೇರಿದಂತೆ ಯಾವುದೇ ಸಮಸ್ಯೆ ಆಗದಂತೆ ತೀವ್ರ ನಿಗಾ ವಹಿಸಬೇಕಿದೆ. ಸೋಂಕಿತರ ಬಗ್ಗೆ ವಿಶೇಷ ಕಾಳಜಿ ತೋರಿ ಧೈರ್ಯ ತುಂಬುವ ಕಾರ್ಯವಾಗಬೇಕು. ಆಕ್ಸಿಜನ್ ಕೊರತೆ ಆಗದಂತೆ ನೋಡಿಕೊಂಡು ಕಾರ್ಯನಿರ್ವಹಿಸ ಬೇಕು’ ಎಂದು ಅವರು ಸೂಚನೆ ನೀಡಿದರು

ಶ್ರೀನಿವಾಸಪುರ: ಪಟ್ಟಣದಲ್ಲಿ ಪುರಸಭೆ ಅಧಿಕಾರಿಗಳು ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ಗುಲಾಬಿ ನೀಡಿ ಅಭಿನಂದಿಸುವುದರ ಮೂಲಕ ಅರಿವು ಮೂಡಿಸಿದರು.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪಟ್ಟಣದಲ್ಲಿ ಪುರಸಭೆ ಅಧಿಕಾರಿಗಳು ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ಗುಲಾಬಿ ನೀಡಿ ಅಭಿನಂದಿಸುವುದರ ಮೂಲಕ ಅರಿವು ಮೂಡಿಸಿದರು.
ಪಟ್ಟಣದಲ್ಲಿ ಸಂಚರಿಸುವ ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಪಾಲಿಸುವಂತೆ ಪುರಸಭೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು. ಅಂಥ ವ್ಯಕ್ತಿಗಳನ್ನು ಗುರುತಿಸಿ ದಂಡ ವಿಧಿಸಿದ್ದರು. ಆದರೆ ಅದಾವುದಕ್ಕೂ ಬಗ್ಗದ ಕೆಲವರು ಮಾಸ್ಕ್ ರಹಿತವಾಗಿ ವ್ಯಾಪಾರ ವಹಿವಾಟು ಮಾಡುತ್ತಿದ್ದರು.
ಪುರಸಭೆಯ ಮುಖ್ಯಾಧಿಕಾರಿ ಡಿ.ಶೇಖರ್ ರೆಡ್ಡಿ ಹಾಗೂ ಆರೋಗ್ಯ ನಿರೀಕ್ಷಕ ಪೃಥ್ವಿರಾಜ್ ಶನಿವಾರ ವಿನೂತನ ನಡೆಯ ಮೂಲಕ ಮಾಸ್ಕ್ ಧರಿಸದ ವ್ಯಕ್ತಿಗಳು ಮಾಸ್ಕ್ ಧರಿಸುವಂತೆ ಮಾಡಿದರು. ರಸ್ತೆಯಲ್ಲಿ ಪುರಸಭೆ ಅಧಿಕಾರಿಗಳನ್ನು ಕಂಡು ದಂಡ ನೀಡಬೇಕಾಗುತ್ತಲ್ಲ ಎಂಬ ಚಿಂತೆಗೆ ಒಳಗಾಗಿದ್ದ ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದ ಜನರು, ಅಧಿಕಾರಿಗಳಿಂದ ಗುಲಾಬಿ ಸ್ವೀಕರಿಸಿ ನಾಚಿಕೆಯಿಂದ ಮಾಸ್ಕ್ ಧರಿಸಿ ಮುಜಗರಕ್ಕೆ ಒಳಗಾದರು.

ರಾಸು ವಿಮಾ, ಹಾಲು ಉತ್ಪಾದಕರ ಸ. ಸಂ. ಕಟ್ಟಡ ಅನುದಾನ ಚೆಕ್‍ಗಳನ್ನು ಕೋವಿಡ್ ತಡೆ ನಿಯಮಾನುಸಾರ ಫಲಾನುಭವಿಗಳಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ರಾಸು ವಿಮಾ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಅನುದಾನದ ಚೆಕ್‍ಗಳನ್ನು ಕೋವಿಡ್ ತಡೆ ನಿಯಮಾನುಸಾರ ಫಲಾನುಭವಿಗಳಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ತಿಳಿಸಿದ್ದಾರೆ.
ಇಷ್ಟು ದಿನ ಫಲಾನುಭವಿಗಳನ್ನು ಕ್ಯಾಂಪ್ ಕಚೇರಿಗೆ ಬರಮಾಡಿಕೊಂಡು ಸಾಮೂಹಿಕವಾಗಿ ಪರಿಹಾರದ ಚೆಕ್ ವಿತರಣೆ ಮಾಡಲಾಗುತ್ತಿತ್ತು. ಆದರೆ ಈಗ ಕೊರೊನಾ ಎರಡನೇ ಅಲೆ ತೀವ್ರವಾಗಿರುವುದರಿಂದ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕಿನ ಜೀಡಿಮಾಕಲಹಳ್ಳಿ ಹಾಲು ಉತ್ಪಾಕದರ ಸಂಘದ ವ್ಯಾಪ್ತಿಯಲ್ಲಿ ಮೃತಪಟ್ಟ ಹಸುವಿನ ಮಾಲೀಕರಿಗೆ ರೂ.60 ಸಾವಿರ, ಗುಂಡಮನತ್ತ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಟ್ಟಡ ನಿರ್ಮಿಸಲು ರೂ.5 ಲಕ್ಷ, ಬೂರಗಮಾಕಲಹಳ್ಳಿ, ಮಚ್ಚುವಾರಿಪಲ್ಲಿ, ದಿಗವ ಮೊರಂಪಲ್ಲಿ, ಅರಳಕುಂಟೆ ಗ್ರಾಮದ ಸಂಘಗಳಿಗೆ ತಲಾ ರೂ. 1.50 ಲಕ್ಷದಂತೆ ರೂ. 11.60 ಲಕ್ಷ ಮೊತ್ತದ ಚೆಕ್‍ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಬರುವ ವರೆಗೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು, ತಮ್ಮ ಕೆಲಸ ಕಾರ್ಯಗಳಿಗೆ ದೂರವಾಣಿಯಲ್ಲಿ ಸಂಪರ್ಕಿಸುವಂತೆ ಶಿಬಿರ ಕಚೇರಿ ವ್ಯವಸ್ಥಾಪಕ ಕೆ.ಎಸ್.ನರಸಿಂಹಯ್ಯ ತಿಳಿಸಿದ್ದಾರೆ.