HOLY ROSARY CHURCH, KUNDAPUR – 450 th JUBILEE SOUVENIR 2021

ಶ್ರೀನಿವಾಸಪುರದಲ್ಲಿ ಆಕ್ಸಿಜನ್ ಘಟಕ,ಕೋವಿಡ್ ಪ್ರಯೋಗಾಲಯ :15 ದಿನದಲ್ಲಿ ಲೋಕಾರ್ಪಣೆಗೆ ಕ್ರಮ-ಶಾಸಕ ರಮೇಶ್‍ಕುಮಾರ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಶ್ರೀನಿವಾಸಪುರದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಹಾಗೂ ಕೋವಿಡ್ ಪರೀಕ್ಷೆಗಾಗಿ ಸುಸಜ್ಜಿತ ಪ್ರಯೋಗಲಾಯವನ್ನು ಇನ್ನು 15 ದಿನದೊಳಗೆ ನಿರ್ಮಿಸಿ ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ ಕೆ.ಆರ್. ರಮೇಶ್ ಕುಮಾರ್ ತಿಳಿಸಿದರು.
ಶ್ರೀನಿವಾಸಪುರ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಮೂರು ಕಡೆ ಮಾತ್ರ ಪ್ರಯೋಗಲಾಯ ಮಾಡಲು ಅವಕಾಶಗಳಿದ್ದು, ಇದರಲ್ಲಿ ಶ್ರೀನಿವಾಸಪುರವು ಒಂದಾಗಿದೆ ಎಂದರು.
ಪ್ರಯೋಗಾಲಯಕ್ಕೆ ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಪರಿಕರಗಳನ್ನು 3-4 ದಿನದಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು.ಇನ್ನೊಂದು ವಾರದಲ್ಲಿ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯ ಅವರಣದಲ್ಲಿ ಟೆಸ್ಟಿಂಗ್‍ಲ್ಯಾಬ್ ಸ್ಥಾಪಿಸಲಾಗುವುದು ಎಂದರು.
ಆಕ್ಸಿಜನ್ ಪ್ಲಾಂಟ್ ನಿರ್ಮಿಸುವ ಮೂಲಕ ಸರ್ಕಾರಿ ಆಸ್ಪತ್ರೆಯನ್ನು 60 ಬೆಡ್‍ಗಳ ಸ್ವಾವಲಂಭಿ ಆಸ್ಪತ್ರೆಯಾಗಲಿದ್ದು ಇದಕ್ಕೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಂಡಿರುವುದಕ್ಕೆ ಸರ್ಕಾರಕ್ಕೆ ಕೃತಜ್ಞನತೆ ಸಲ್ಲಿಸುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಸಾರ್ವಜನಿಕರು ಕೋವಿಡ್ ಟೆಸ್ಟ್ ಮಾಡಿಸಿ ಕೊಳ್ಳಲು ಸ್ವಯಂ ಪ್ರೇರಿತರಾಗಿ ಮುಂದಾಗುತ್ತಿಲ್ಲ. ರೋಗದ ಲಕ್ಷಣಗಳು ಕಂಡು ಬರುವ ಪ್ರತಿಯೊಬ್ಬರೂ ಟೆಸ್ಟ್ ಮಾಡಿಸಿ ಕೊಳ್ಳುವುದು ಸೂಕ್ತ. ಒಂದು ದಿನಕ್ಕೆ 2 ಸಾವಿರ ಮಂದಿ ಟೆಸ್ಟ್ ಮಾಡಿಸಿ ಕೊಳ್ಳಬಹುದಾಗಿದೆ ಎಂದರು.

ಕೋವಿಡ್ ಟೆಸ್ಟ್ ಮಾಡಿದ ನಂತರ 3 ದಿನಕ್ಕೆ ಫಲಿತಾಂಶ ನೀಡುತ್ತಿರುವುದನ್ನು ಮುಂದಿನ ದಿನಗಳಲ್ಲಿ 24 ತಾಸುಗಳಲ್ಲಿ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಈಗಾಗಲೇ ಖಾಸಗಿ ಕಲ್ಯಾಣ ಮಂದಿರದಲ್ಲಿ 30 ಬೆಡ್‍ಗಳು ಹಾಗೂ ಕಿತ್ತೂರು ರಾಣಿ ಚೆನ್ನಮ ವಸತಿ ಶಾಲೆಯಲ್ಲಿ 30 ಬೆಡ್ ಅಳವಡಿಸಿ ಚಿಕಿತ್ಸೆಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. 30 ಜನಕ್ಕೆ ಆಕ್ಸಿಜನ್ ಸೇರಿದಂತೆ ಇತರೆ ಎಲ್ಲಾ ಸೌಲಭ್ಯಗಳಿಗೆ ಸರ್ಕಾರದ ವ್ಯವಸೆಗಳ ಜತೆಗೆ ನಾವು ಕೈ ಜೋಡಿಸಲು ಲ್ಯಾಬ್ ಹಾಗೂ ಆಕ್ಸಿಜನ್ ಪ್ಲಾಂಟ್‍ಗೆ 75 ಲಕ್ಷ ರೂ ವೆಚ್ಚವನ್ನು ಭರಿಸಬೇಕಾಗಿದ್ದು, ಸಂಸದರು, 15 ಲಕ್ಷ ರೂ, ಶಾಸಕರ ನಿಧಿಯಿಂದ 10 ಲಕ್ಷ ರೂ, ವಿಧಾನ ಪರಿಷತ್ ಸದಸ್ಯ ನಸೀರ್ ಆಹಮದ್ ಹಾಗೂ ಕೋಚಿಮುಲ್ ಅಧ್ಯಕ್ಷ ನಂಜೇಗೌಡರು, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಸೇರಿದಂತೆ ಇನ್ನು ಅನೇಕರ ನೆರವು ಪಡೆಯುತ್ತಿರುವುದಾಗಿ ತಿಳಿಸಿದರು.
ಪ್ರಸ್ತುತ ಶ್ರೀನಿವಾಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿನ 30 ಬೆಡ್‍ಗಳು ಭರ್ತಿಯಾಗಿದ್ದು, ಎಲ್ಲರಿಗೂ ಆಕ್ಸಿಜನ್ ಪೂರೈಕೆ ಮಾಡಲಾಗಿದೆ. ನಾಲ್ಕು ವೆಂಟಿಲೇಟರ್‍ಗಳು ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರ ತಂಡವನ್ನು ರಚಿಸಿ ಎಲ್ಲಾ ಪಂಚಾಯಿತಿಗಳಲ್ಲಿ ಪ್ರತಿಯೊಬ್ಬರಿಗೂ ಕೋವಿಡ್ ಟೆಸ್ಟ್ ಮಾಡಿಸಿ ಚಿಕಿತ್ಸೆ ನೀಡುವ ಮೂಲಕ ಕೊರೋನಾದಿಂದ ಮುಕ್ತಗೊಳಿಸಿ ಆರೋಗ್ಯ ಕರ್ನಾಟಕವನ್ನಾಗಿ ಮಾಡುವ ಪ್ರಯತ್ನ ಮಾಡಲಾಗುವುದು ಎಂದರು.
ಇದಲ್ಲದೆ ಕೋವಿಡ್ ಸೆಂಟರ್‍ಗಳನ್ನು ಮಾಡುವ ಮೂಲಕ ಓರ್ವ ವೈದ್ಯರು ಹಾಗೂ ಸಿಬ್ಬಂದಿಗಳನ್ನು ನೇಮಿಸಲಾಗುವುದು, ರೋಗಿಗಳಿಗೆ ಉತ್ತಮ ಗುಣಮಟ್ಟದ ಆಹಾರ ಪೂರೈಕೆಗೆ ಅವಶ್ಯಕವಾದ ಹಣ್ಣು, ತರಕಾರಿ. ಮೊಟ್ಟೆ ಇತ್ಯಾದಿಗಳಿಗೆ ವ್ಯವಸ್ಥೆ ಮಾಡಲಾಗುವುದು ಎಂದರು.
ಔಷಧಿಗಳನ್ನು ಬೆಂಗಳೂರಿನ ಮೆಡಿಕಲ್ ಕಾಲೇಜ್‍ನಿಂದ ಉಚಿತವಾಗಿ ಪೂರೈಸುವ ಭರವಸೆ ದೊರೆಕಿದೆ. ಕೋವಿಡ್ ವೈರಸ್ ಇರುವ ರೋಗಿಗಳಿಗೆ ಟೆಲಿಕಾಸ್ಟ್ ಮೂಲಕ ಸಲಹೆಗಳನ್ನು ನೀಡಿ ಆತ್ಮ ಸ್ಥೆರ್ಯ ತುಂಬಿ ಆತಂಕವನ್ನು ದೂರ ಮಾಡಲಾಗುವುದು ಎಂದರು.
ಖಾಸಗಿ ಕಲ್ಯಾಣ ಮಂಟಪ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ
ಇದರಲ್ಲಿ ಯಾವೂದೇ ರಾಜಕೀಯ ಇಲ್ಲ, ಯಾವೂದೇ ಜಾತಿ ಧರ್ಮ ಭೇದಭಾವಗಳಿಲ್ಲ. ನಾವು ಇದನ್ನು ಯಾವೂದೇ ರೀತಿ ರಾಜಕೀಯ ತೆವಲಿಗೆ ಮಾಡುತ್ತಿಲ್ಲ. ಜನಪ್ರತಿನಿಧಿಯಾಗಿ ನಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ ಎಂದರು
.

ರೈತರೇನು ಸರ್ಕಾರದ ಕಣ್ಣಿಗೆ ಭಿಕ್ಷುಕರಂತೆ ಕಾಣುತ್ತೇವೆಯೇ? ಹೆಕ್ಟೇರ್‍ಗೆ 75 ಸಾವಿರ ಪರಿಹಾರ ನೀಡಿ-ರಮೇಶ್‍ಕುಮಾರ್ ಆಗ್ರಹ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ ; ರೈತರೇನು ನಿಮ್ಮ ಕಣ್ಣಿಗೆ ಭಿಕ್ಷುಕರಂತೆ ಕಾಣುತ್ತೇವೇಯೇ, ಪರಿಹಾರ ಘೋಷಿಸುವಾಗ ಸೌಜನ್ಯಕ್ಕಾದರೂ ಕೃಷಿಕನ ಕಷ್ಟ ಆಲಿಸುವುದು ಬೇಡವೇ ಎಂದು ಪ್ರಶ್ನಿಸಿದ ಶಾಸಕ ಹಾಗೂ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ಪ್ರತಿ ಹೆಕ್ಟೇರ್ ಬೆಳೆಗೆ ಕನಿಷ್ಟ 75 ಸಾವಿರ ಘೋಷಿಸುವಂತೆ ಆಗ್ರಹಿಸಿದರು.
ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟದಲ್ಲಿ ಯಾರೂ ರೈತರಿಲ್ಲ, ಕೃಷಿಕನ ನೋವು ಇವರಿಗೆ ಹೇಗೆ ತಾನೇ ಅರ್ಥವಾದೀತು ಎಂದು ವಾಗ್ದಾಳಿ ನಡೆಸಿದರು.
ರೈತರ ನೋವು ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ, ಸಂಕಷ್ಟದಲ್ಲಿರುವ ಅನ್ನದಾತರನ್ನು ಸಂಪರ್ಕಿಸಿ ಅವರ ಕಷ್ಟನಷ್ಟಗಳ ಮಾಹಿತಿ ಪಡೆದು ಪ್ರತಿ ಹೆಕ್ಟೇರ್ ಬೆಳೆಗೆ 75 ಸಾವಿರ ರೂ ಘೋಷಣೆ ಮಾಡಬೇಕು ಎಂದರು.

ರೈತರ ಸಮಸ್ಯೆಗಳ ಬಗ್ಗೆ ಸೌಜನ್ಯಕ್ಕಾದರೂ ಓರ್ವ ಕೃಷಿಕನನ್ನು ಕೇಳಿಲ್ಲ, ಹೋಗಲಿ ಪರಿಸ್ಥಿತಿಗೆ ತಕ್ಕಂತೆ ಪರಿಹಾರ ನೀಡಿದ್ದಾರಾ ಅದೂ ಇಲ್ಲ, ಇವರು ನೀಡಿರುವ ಪರಿಹಾರಕ್ಕೆ ಅರ್ಥವೇ ಇಲ್ಲ ಎಂದು ಕಿಡಿಕಾರಿದರು.

ರೈತರನ್ನು ತುಚ್ಚವಾಗಿ ನೋಡುವ ಸರ್ಕಾರ

ರೈತರಿಗೆ ಮರ್ಯಾದೆ ಇಲ್ವೆ ಎಂದು ಪ್ರಶ್ನಿಸಿದ ಅವರು, ರೈತರನ್ನು ಇಷ್ಟೊಂದು ತುಚ್ಚವಾಗಿ ಯಾವುದೇ ಸರ್ಕಾರ ಕಾಣಬಾರದು. ಸರ್ಕಾರ ಆರ್ಥಿಕ ಸಂಕಷ್ಟ ದಲ್ಲಿದ್ದರೆ ರೈತರಿಗೆ ಪರಿಹಾರವನ್ನೆ ಕೊಡಕ್ಕೆ ಆಗಲ್ಲ ಎಂದು ಹೇಳಬೇಕಾಗಿತ್ತು ಎಂದರು.
ಹಸಿವಿನಿಂದ ಬೇರೆ ಯಾರು ಸಾಯಬಾರದು ಎಂದು ಬೆಳೆದ ಬೆಳೆಗೆ ಬೆಲೆ ದೊರೆಯದಿದ್ದರೂ ಮಾರುಕಟ್ಟೆಗೆ ಹಾಕುತ್ತಾರೆ. ನಾವು ಹೇಗೋ ಬದುಕುತ್ತೀವಿ, ಸದ್ಯ ಘೋಷಣೆ ಮಾಡಿರುವ ಪರಿಹಾರದ ಹಣವನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಇದು ದುರಹಂಕಾರ ಅಲ್ಲ. ಇದನ್ನು ಹೇಗೆ ನಿಮಗೆ ಯಾವ ರೀತಿ ಅರ್ಥೈಸಬೇಕು ಎನ್ನುವುದೇ ಗೊತ್ತಾಗ್ತಿಲ್ಲ. ಈಗ ಹೆಕ್ಟೇರ್‍ಗೆ 10 ಸಾವಿರ ಘೋಷಣೆ ಮಾಡಿರುವುದು ಏನೇನಕ್ಕೂ ಸಾಕಾಗುವುದಿಲ್ಲ. ಒಂದು ಎಕರೆ ಟಮೋಟೊ ಬೆಳೆ ಬೆಳೆಯಲು ಕನಿಷ್ಠ 2 ಲಕ್ಷ ರೂ ವೆಚ್ಚ ತಗುಲುತ್ತದೆ. ಮಾವು ಒಂದು ವರ್ಷದ ನಿರ್ವಹಣೆ 40 ಸಾವಿರದಿಂದ 50 ಸಾವಿರ ಖರ್ಚು ಆಗುತ್ತದೆ. ವೈಜ್ಞಾನಿಕ ಆಲೋಚನೆ ಮಾಡಿ ಪರಿಹಾರ ಘೋಷಣೆ ಮಾಡಬೇಕು ಎಂಬ ಸಾಮಾನ್ಯ ಜ್ಞಾನವಿಲ್ಲವೇ. ಕನಿಷ್ಟ 75 ಸಾವಿರ ಪರಿಹಾರ ನೀಡಿದರೆ ರೈತರ ಉಸಿರು ನಿಲ್ಲುತ್ತದೆ ಎಂದರು.
ನಾನು ರೈತ ಆಗಿರುವುದರಿಂದ ನೋವು ಅರ್ಥ ಆಗಿದೆ. ನಿಮ್ಮ ಇಡೀ ಸಚಿವ ಸಂಪುಟದಲ್ಲಿ ಒಬ್ಬ ರೈತ ಯಾರಾದರೂ ಇದಿದ್ದರೆ ಈ ನೋವು ಅನುಭವಿಸಿದ್ದರೆ ಗೊತ್ತಿರುತ್ತದೆ ಎಂದು ಆಕ್ರೊಶಭರಿತರಾದರು.
ಜನ, ರೈತರು ಅಂದರೆ ಸರ್ಕಾರಕ್ಕೆ ದುರಅಹಂಕಾರ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವೇ ನಮ್ಮನ್ನು ಅಸಹಾಯಕರಾನ್ನಾಗಿ ಮಾಡಿದೆ. ಬೀದಿಗೆ ಇಳಿದು ಪ್ರತಿಭಟಿಸುವಂತಿಲ್ಲ. ಭಗವಂತ ನಮಗೆ ಯಾಕೆ ಹೀಗೆ ಇಟ್ಟೀದ್ದೀಯಾ ಎಲ್ಲಾ ಉತ್ಸಾಹ ಕಳೆದುಕೊಂಡಿದ್ದೇವೆ. ಆದರೆ ಜವಾಬ್ದಾರಿ ಮರೆತು ದೂರ ಓಡಿ ಹೋಗೋಲ್ಲ. ನನ್ನ ಪ್ರಯತ್ನ ಮಾಡುತ್ತೇನೆ, ಮಾಡುತ್ತಲೇ ಇರುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಜಿಪಂ ಮಾಜಿ ಅಧ್ಯಕ್ಷ ಕೌನ್ಸಿಲರ್ ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ತಹಸೀಲ್ದಾರ್ ಶ್ರೀನಿವಾಸ್, ತಾಲ್ಲೂಕು ವೈದ್ಯಾಧಿಕಾರಿ ವಿಜಯಮ್ಮ, ಪಿ.ಎಸ್.ಐ. ರವಿಕುಮಾರ್, ಇ.ಓ. ಆನಂದ್ ವೃತ್ತ ನಿರೀಕ್ಷಕ ರವಿಕುಮಾರ್, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು
.

Sad Demise – Mr. Ranjan U Kunder , Kalathur (Bangalore)

Sad Demise

Mr.  Ranjan U Kunder , Kalathur (Bangalore)

18/12/1956 – 25/05/2021

(S/O A.S Kunder, Kalathur (Teacher)

H/O Edith R Kunder

F/O Abner R Kunder/  Keerthan Kunder,  Ezekiel R Kunder & Keturah Kunder

G/F/O Kefira Adelyn Kunder

Has passed away (25-5-21)

His funeral will be at 4 p.m am Today 25-5-21

CSI Kannada Devalaya T.Dasarahalli Bangalore

According to covid restrictions

Contact: 9844046505

(Ranjan is a Tool crib Incharge at Fouress Engineering Pvt Ltd, He has served for 38 years. also serving as Secretary of the Board of Parish at CSI Kannada Devalaya T.Dasarahalli Church)

ಕೋವಿಡ್ ಸೋಂಕಿತ ಮಹಿಳೆಯನ್ನು ಅನಾಥೆಯಾಗಿ ರೈಲ್ವೆ ದ್ವಾರಲ್ಲಿ ಬಿಟ್ಟು ಹೋದರು, ಒರ್ವ ವಕೀಲರಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ್ದಾರೆ

JANANUDI.COM NET WORK


[ಇಕೆಯ ಕುಟುಂಬದವರು ಅವಳನ್ನು ನಡೆದುಕೊಂಡ್ಡದ್ದು, ಅಮಾನವೀಯ ಕ್ರತ್ಯ ರೈಲ್ವೆ ಇಲಾಖೆಗೆ (ಗಾರ್ಡ್ಸ್ ಮತ್ತು ಇತರರಿಗೆ) ತಿಳಿಯದಿದ್ದದ್ದು ವಿಚಿತ್ರವಾಗಿಯೇ ಇದೇ, ನಮ್ಮ ರೈಲ್ವೆ ನಿಲ್ದಾಣಗಳಲ್ಲಿ ಇಷ್ಟೊಂದು ಅಲ್ಪಸುರಕ್ಷತೆಯೇ..!? ಇದರಿಂದಾಗಿ ಕೋವಿಡ್ ಹರಡುವ ಸಾಧ್ಯತೆ ಇಲ್ಲವೇ?]

ಬೆಂಗಳೂರು: ಕೋವಿಡ್ ಸೋಂಕಿತ ಮಹಿಳೆಯನ್ನು ರೈಲ್ವೇ ನಿಲ್ದಾಣದಲ್ಲಿ ಬಿಟ್ಟು ಹೋಗಿರುವ ಹ್ರದಯ ವಿದ್ರಾವಕ ಬೆಂಗಳೂರಿನಲ್ಲಿ ನಡೆದ ಘಟನೆ ವರದಿಯಾಗಿದೆ, ಸಂತ್ರಸ್ಥ ಮಹಿಳೆಯು, ವಕೀಲರೊಬ್ಬರ ಸಮಯ ಪ್ರಜ್ಞೆಯಿಂದ ಆಸ್ಪತ್ರೆ ಸೇರುವಂತಾಗಿದೆ.
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ, ಸಂತ್ರಸ್ಥ ಮಹಿಳೆಯು ಮೂರು ದಿನಗಳಿಂದ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಮಲಗಿದ್ದರು. ಅದೇ ದಾರಿಯಲ್ಲಿ ನಿತ್ಯ ಓಡಾಡುತ್ತಿರುವ ವಕೀಲರಾದ ಎಂ.ಶ್ರೀಧರನ್ ಇವಳನ್ನು ಗಮನಿಸಿ,ಈ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದು ಆಸ್ಪತ್ರೆಗೆ ದಾಖಲಿಸುವಂತೆ ಮಾಡಿದ್ದಾರೆ.
ಮಹಿಳೆ ಸುಮಾರು 30 ವರ್ಷ ವಯಸ್ಸಿನವಳಾಗಿದ್ದು, ಇಕೆಯನ್ನು ಶ್ರೀಧರನ್ ಮೂರನೆದಿನವೂ ಕಂಡು ಆಕೆಯನ್ನು ಪ್ರಶ್ನಿಸಿದಾಗ, ಆಕೆಯ ಹೀನಾಯ ಪರಿಸ್ಥಿತಿ ನಾನು ಕೋವಿಡ್ ಸೋಂಕಿತೆ ನನ್ನವರು ನನಗೆ ಇಲ್ಲಿ ಬಿಟ್ಟು ಹೋಗಿದ್ದಾರೆ’ ಅವರಿಗೆ ತಿಳಿಸಿದ್ದಾರೆ. ಕೂಡಲೇ ಇಂಟರ್ ನೆಟ್ ನಲ್ಲಿ ರೈಲ್ವೇ ಅಧಿಕಾರಿಗಳ ಮೊಬೈಲ್ ಸಂಖ್ಯೆ ಪಡೆದ ಶ್ರೀಧರನ್ ಅವರಿಗೆ ಮಾಹಿತಿ ನೀಡಿದ್ದಾರೆ.ಕೂಡಲೇ ಪ್ರತಿಕ್ರಿಯಿಸಿದ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಆಕೆಯನ್ನು ನಗರದ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ವಕೀಲ ಶ್ರೀಧರನ್ ಅವರು, ‘ರೈಲ್ವೆ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುವ ನನ್ನ ತಂಗಿಯನ್ನು ಪ್ರತಿದಿನ ಸಂಜೆ 5 ಗಂಟೆ ಸುಮಾರಿಗೆ ಕರೆದುಕೊಂಡು ಹೋಗಲು ನಾನು ಈ ಮಾರ್ಗದಲ್ಲಿ ಬರುತ್ತಿದ್ದೆ. ಒಬ್ಬ ಮಹಿಳೆಯು ಎರಡು ದಿನಗಳ ಕಾಲ ಮಳೆ ಸುರಿಯುತ್ತಿದ್ದರೂ ರೈಲ್ವೇ ಪ್ರವೇಶ ದ್ವಾರದಲ್ಲಿರುವುದನ್ನು, ಇನ್ನೊಂದು ದಿನ ಆಕೆಯ ಸುತ್ತ ನೊಣಗಳು ಮುಸುರಿದ್ದನ್ನು ನೋಡಿ ಇದನ್ನು ರೈಲ್ವೆ ಇಲಾಖೆಗೆ ತಿಳಿಸಿದ್ದೆ’ ಎಂದು ಹೇಳುತ್ತಾರೆ. ಅವಳು ಹಿಂದಿ ಮಾತನಾಡುವುಳಾಗಿದ್ದಳು ಎಂದು ತಿಳಿದು ಬಂದಿದೆ.
ಇಕೆಯ ಕುಟುಂಬದವರು ಅವಳನ್ನು ನಡೆದುಕೊಂಡ್ಡದ್ದು, ಅಮಾನವೀಯ ಕ್ರತ್ಯ, ಅವರು ಮನುಷ್ಯರಲ್ಲ, ಮಾನವ ರೂಪದ ರಾಕ್ಷಸರು ಎಂದು ಸಾಬೀತು ಆಗುತ್ತದೆ. ಆದರೆ ಇಷ್ಟಾಗಿಯೂ, ಮೂರು ದಿವಸಗಳಿಂದ ಇವಳು ದೇಶ ಇಂದು ಅಪಾಯದ ಸ್ಥಿತಿಯಲ್ಲಿ ಇರುವಾಗ ರೈಲ್ವೆ ಇಲಾಖೆಗೆ (ಗಾರ್ಡ್ಸ್ ಮತ್ತು ಇತರರಿಗೆ) ತಿಳಿಯದಿದ್ದದ್ದು ವಿಚಿತ್ರವಾಗಿಯೇ ಇದೇ, ನಮ್ಮ ರೈಲ್ವೆ ನಿಲ್ದಾಣಗಳಲ್ಲಿ ಇಷ್ಟೊಂದು ಅಲ್ಪಸುರಕ್ಷತೆಯೇ..!? ಇದರಿಂದಾಗಿ ಕೋವಿಡ್ ಹರಡುವ ಸಾಧ್ಯತೆ ಇಲ್ಲವೇ?
ಇದೇ ಮಾರು ವೇಷ ಹಾಕಿಕೊಂಡು ರೈಲಿಗೆ ದ್ರೋಹಿಗಳು ಅಪಾಯ ತಂದೊಡ್ಡುವ ಸಾಧ್ಯತೆಗಳು ಇಲ್ಲವೇ ? ನಮ್ಮಲ್ಲಿ ಭದ್ರತೆಗೆ, ರಕ್ಷಣೆಯ ಪ್ರಾಮುಖ್ಯತೆಗಳೇ ಇಲ್ಲವೇ. ಇಂತಹಹಲವಾರು ಪ್ರಶ್ನೆಗಳು ಮೂಡಿ ಬರುತ್ತೀವೆ
.

ಭಾರತಕ್ಕೆ ಲಸಿಕೆ ಬೇಕು, ಪ್ರಧಾನಿಯ ಕಣ್ಣೀರಲ್ಲ: ಪ್ರಧಾನಿಗೆ ಟ್ವೀಟ್​ ಮಾಡಿದ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್

JANANUDI.COM NETWORK

ನವದೆಹಲಿ, ಮೇ .24: ಮಾಜಿ ಪ್ರಧಾನಿ ಮನಮೋಹನ್​ ಸಿಂಗ್ ಕೊರೊನಾಗೆ ಸಂಬಂಧಿಸಿದಂತೆ ಅಪರೂಪವೆಂಬತ್ತೆ ಪ್ರಧಾನಿ ಮೋದಿಗೆ ಟ್ವೀಟ್​ ಮಾಡಿದ್ದಾರೆ “ಜಗತ್ತಿನ ಎಲ್ಲ ದೇಶಗಳು ಕೊರೊನಾದಿಂದ ಬಾಧಿತವಾಗಿವೆ. ಆದರೆ ಯಾವುದೇ ದೇಶದ ನಾಯಕ ಕಣ್ಣೀರು ಹಾಕಿಲ್ಲ. ಕೆನಡಾದ ಪ್ರಧಾನಿ, ಅಮೆರಿಕ ಅಧ್ಯಕ್ಷ, ಇಟಲಿ ಮತ್ತು ಯುಕೆ ಪ್ರಧಾನಿ ಸೇರಿದಂತೆ ಅನೇಕ ನಾಯಕರು ಕಣ್ಣೀರು ಹಾಕಲಿಲ್ಲ. ಆದ್ರೆ ನಮ್ಮ ಪ್ರಧಾನಿ ಮೋದಿ ಮಾತ್ರ ಕಣ್ಣೀರಿಟ್ಟರು” ಎಂದು ಅವರು ಟ್ವೀಟರನಲ್ಲಿ ಬರೆದುಕೊಂಡಿದ್ದಾರೆ.

“ಮೋದಿ ಭಾರತ ದೇಶದ ನಾಯಕರಾಗಿ ವಿಫಲರಾಗಿದ್ದಾರೆ. ಭಾರತಕ್ಕೆ ಲಸಿಕೆ ಬೇಕು, ನಿಮ್ಮ ಕಣ್ಣೀರಲ್ಲ. ದೇಶಕ್ಕಾಗಿ ಏನಾದರೂ ಮಾಡಿ. ಇಲ್ಲದಿದ್ದರೆ ತಕ್ಷಣ ರಾಜೀನಾಮೆ ನೀಡಿ” ಎಂದು ಕೂಡ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಲ್ಫಿ ರೆಬಿಂಬಸಾಚ್ಯಾ ’ಫಾತಿಮಾಚೆಂ ಕಾಜಾರ್’ ಕಥೆಚೆರ್ ಅಧ್ಯಯನ್/ विलफी रेबिंबसाच्या ’फातिमाचें काजार’ कथेचेर अध्ययन

JANANUDI.COM NETWORK

22 ಮಾಯ್ 2021: ಆಶಾವಾದಿ ಪ್ರಕಾಶನ್, ಅಖಿಲ್ ಭಾರತೀಯ್ ಕೊಂಕಣಿ ಪರಿಶದ್ ಆನಿ ಉಜ್ವಾಡ್ ಪಂದ್ರಾಳೆ ಹಾಂಚ್ಯಾ ಜೋಡ್ ಪಾಲವಾಂತ್ ಚಲ್‌ಲ್ಲ್ಯಾ ಕಥಾಪಾಠ್ ದುಸ್ರ್ಯಾ ಶಿಂಕಳೆಂತ್, ವಿಲ್ಫಿ ರೆಬಿಂಬಸಾನ್ 1970-ವ್ಯಾ ದಾಕ್ಡ್ಯಾಂತ್ ಬರಯಿಲ್ಲ್ಯಾ ’ಫಾತಿಮಾಚೆಂ ಕಾಜಾರ್’ ಕಥೆಚೆರ್ ಅಧ್ಯಯನ್, ಪಯ್ಣಾರಿ ಸಂಪಾದಕ್ ವಲ್ಲಿ ಕ್ವಾಡ್ರಸಾನ್ ಚಲವ್ನ್ ವೆಲೆಂ. ಮಂಗ್ಳುರ್, ಗೊಂಯ್ ಕೊಲೆಜಿಂನಿ ಶಿಕ್ಚಿಂ ವಿಧ್ಯಾರ್ಥಿಂ, ಪ್ರಾಧ್ಯಾಪಕ್, ತಶೆಂಚ್ ಹೆರ್ ಪ್ರಾಂತ್ಯಾಥಾವ್ನ್ ಸಾಹಿತಿಕ್ ಅಭಿರುಚ್ ಆಸ್ಚ್ಯಾಂನಿ ಹಾಜರ್ ಆಸ್‌ಲ್ಲ್ಯಾ ಹ್ಯಾ ವೆಬಿನಾರಾಚಿ ಸುರ‍್ವಾತ್ ಬಾಯ್ ಸ್ಮಿತಾ ಶೆಣಯ್ ಹಿಣೆಂ ಜೆರಾಲ್ ಯೆವ್ಕಾರ್ ಮಾಗುನ್, ಹ್ಯಾ ಕಥಾಪಾಠಾಚ್ಯಾ ಮಿಸಾಂವಾವಿಶಿಂ ಮಟ್ವೊ ವಿವರ್ ದಿಲೊ. ಅಖಿಲ್ ಭಾರತೀಯ್ ಕೊಂಕಣಿ ಪರಿಶದೆಚ್ಯಾ ಗವ್ರೀಶ್ ವೆರ್ಣೇಕರಾನ್ ಯೆವ್ಕಾರ್ ಕೆಲೊ.
ವಲ್ಲಿ ಕ್ವಾಡ್ರಸಾನ್ 1970ವ್ಯಾ ಕಾಳಾರ್ ಕಥೆಚಿ ಪಾಠ್‌ಭುಂಯ್‌ಚೆರ್ ವಿವರ್ ದಿವುನ್ ಮಂಗ್ಳುರ‍್ಚಿ, ಘಾಟಾಚಿ ಆರ್ಥಿಕ್, ಸಾಮಾಜಿಕ್ ಪರಿಗತ್ ಕಸಲಿ ಆಸ್ಲಿ ಮ್ಹಳ್ಳ್ಯಾಚೆರ್ ಮಟ್ವೊ ವಿವರ್ ದಿತಚ್, ಕಥೆಚ್ಯಾ ಪಾಂಚ್ ಅಂಶಾಂಚೊ ಉಲ್ಲೇಕ್ ಕರುನ್, ’ಫಾತಿಮಾಚೆಂ ಕಾಜಾರ್’ ಕಥೆಚೆರ್ ಖೊಲಾಯೆನ್ ವಿಶ್ಲೇಷಣ್ ಕೆಲೆಂ.
ಬಾಬ್ ವಿಲ್ಲಿ ಗೋಯೆಸಾನ್ ಅಪ್ಲ್ಯಾ ಸಮೀಕ್ಶೆಂತ್ ’ಫಾತಿಮಾಚೆಂ ಕಾಜಾರ್’ ಕಥಾ ತಶೆಂಚ್ ತ್ಯಾ ಕಥೆಚ್ಯಾ ಪಾಠ್‌ಭುಂಯ್‌ಚ್ಯಾ ಸವಿಸ್ತಾರ್ ವಿವರಣಾಚಿ ಥೊಕ್ಣಾಯ್ ಕೆಲಿ. ದುಸ್ರೊ ಸಮೀಕ್ಶಕ್ ಎಚ್ಚೆಮ್ ಪೆರ್ನಾಲಾನ್ ವಿಲ್ಫಿ ರೆಬಿಂಬಸ್ ಆಜ್ ಸಯ್ತ್ ಅಪ್ಲ್ಯಾ ಸಾಹಿತ್ಯಾಮುಖಾಂತ್ರ್ ಪ್ರಸ್ತುತ್ ಮ್ಹಣಾಲೊ.
ಉಜ್ವಾಡ್ ಪಂದ್ರಾಳ್ಯಾಚ್ಯಾ ಸಂಪಾದಕ್ ಫಾ|ರೊಯ್ಸನ್ ಹಾಣಿ ಧಿನ್ವಾಸ್ ಆಟಯ್ಲೆ. ಬಾಯ್ ಸ್ಮಿತಾ ಶೆಣಯ್ನ್ ಹೆಂ ವೆಬಿಬಾರ್ ಚಲವ್ನ್ ವ್ಹೆಲೆಂ.

विलफी रेबिंबसाच्या ’फातिमाचें काजार’ कथेचेर अध्ययन

२२ माय २०२१: आशावादी प्रकाशन, अखील भारतीय कोंकणी परिशद आनी उज्वाड पंद्राळे हांच्या जोड पालवांत चल‌ल्ल्या कथापाठ दूसऱ्या शिंकळेंत, विलफी रेबिंबसान १९७०-व्या दाकड्यांत बरयिल्ल्या ’फातिमाचें काजार’ कथेचेर अध्ययन, पयणारी संपादक वल्ली क्वाड्रसान चलवन वेलें. मंगळूर, गोंय कोलेजिंनी शिकचीं विध्यार्थीं, प्राध्यापक, तशेंच हेर प्रांत्याथावन साहितीक अभिरूच आसच्यांनी हाजर आस‌ल्ल्या ह्या वेबिनाराची सूर‍्वात बाय स्मिता शेणय हिणें जेराल येवकार मागून, ह्या कथापाठाच्या मिसांवाविशीं मटवो विवर दिलो. अखील भारतीय कोंकणी परिशदेच्या गवरीश वेर्णेकरान येवकार केलो.
वल्ली क्वाड्रसान १९७०व्या काळार कथेची पाठ‌भुंय‌चेर विवर दिवून मंगळूर‍्ची, घाटाची आर्थीक, सामाजीक परिगत कसली आसली म्हळ्ळ्याचेर मटवो विवर दितच, कथेच्या पांच अंशांचो उल्लेक करून, ’फातिमाचें काजार’ कथेचेर खोलायेन विशलेषण केलें.
बाब विल्ली गोयेसान अपल्या समीक्षेंत ’फातिमाचें काजार’ कथा तशेंच त्या कथेच्या पाठ‌भुंय‌च्या सविसतार विवरणाची थोकणाय केली. दुस्रो समीक्षक एच्चेम पेर्नालान विलफी रेबिंबस आज सयत अपल्या साहित्यामुखांत्र प्रसतूत म्हणालो.
उज्वाड पंद्राळ्याच्या संपादकान धिन्वास आटयले. बाय स्मिता शेणयन हें वेबिबार चलवन व्हेलें.

ಎಂತಹ ಕಠೋರ ಮಗ! ಅಪ್ಪನ ಹೆಣ ಬೇಡ, ಆದರೆ ಅಪ್ಪನ ಹಣ ಬೇಕು

JANANUDI.COM NETWORK

ಮೈಸೂರು : ಕೊರೋನಾದಿಂದ ಮ್ರತ ಪಟ್ಟ ಒರ್ವ ದುರ್ಧೈವಿಯ ತಂದೆಯ ಶವ ನನಗೆ ಬೇಡ, ಆ ಹೆಣವನ್ನು ನೀವೆ  ಅಂತ್ಯಕ್ರಿಯೆ ಮಾಡಿ,. ಆದರೆ ತಂದೆಯ ಬಳಿ ಇರುವ 6 ಲಕ್ಷ ಹಣ ಹಾಗೂ ಇನ್ನಿತರೆ ದಾಖಲೆಗಳನ್ನು ತಂದು ಕೊಡಿ ಎಂದು ಮಹಾ ನಗರ ಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್ ಫೋನ್ ಮಾಡಿ ಹೇಳಿದ್ದಾನೆ. ಬಳಿಕ ಆತನು  ತಂದೆಯ ಶವ ಕೂಡ ನೋಡಲು ಬಾರದಿರುವ ಘಟನೆ ಮೈಸೂರಲ್ಲಿ ನಡೆದಿದೆ.

    ನಗರದ ಹೆಬ್ಬಾಳದ ’ಸೂರ್ಯ’ ಎಂಬ ಬೇಕರಿ ಬಳಿಯ ಮನೆಯೊಂದರಲ್ಲಿ ವೃದ್ಧ ನಿವಾಸಿಯೊಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ಈ ಬಗ್ಗೆ ಎನೋ ಮನಸ್ತಾಪಗಳಿಂದ ತಂದೆಯಿಂದ ದೂರ ಇದ್ದ ಈ ಮಗ ನಿಜಕ್ಕೂಕಠೋರ ಮನಸಿನವನು, ಇಂತಹನ ಮಗ ಪಡೆದ ತಂದೆ ನಿಜಕ್ಕೂ ದುರ್ಧೈವಿಯ ಸಮಾಜದಲ್ಲಿ ಎಂತಂತಹ ಘಾತಕ ಮನಸಿನ ಜನರಿದ್ದಾರೆಂದು ಆಶ್ಚರ್ಯವಾಗುತ್ತದೆ.

ಇಂತಹ ಅಯೋಗ್ಯ ಪುತ್ರ ಮಹಾಶಯ ವಿರ್ಧಾಧ್ಯಕ್ಷಿಣವಾಗಿ ’ನನ್ನ ತಂದೆಯ ಅಂತ್ಯಕ್ರಿಯೆ ನೀವೆ ಮುಗಿಸಿ, ಅವರ ಬಳಿ ಇರುವ 6 ಲಕ್ಷ ಹಣ ಹಾಗೂ ಇನ್ನಿತರೆ ಎಲ್ಲ ದಾಖಲೆಗಳನ್ನು ತಂದು ಕೊಟ್ಟು ಬಿಡಿ, ನಾನು ಮೈಸೂರಿನ ಕುವೆಂಪು ನಗರದ ಶಾಂತಿ ಸಾಗರ್ ಕಾಂಪ್ಲೆಕ್ಸ್ ಬಳಿ ಇದ್ದೇನೆ’ಎಂದು ವಿಳಾಸ ಕೂಡ ತಿಳಿಸಿದ್ದಾನೆ.

 

ರಾಜ್ಯದ ವಿವಿಧ ಪ್ರಗತಿಪರ ಸಂಘಟನೆಗಳ ಸಹಬಾಗಿತ್ವದಲ್ಲಿ ‘ಜನಾಂದೋಲನ ಸಮಿತಿ’ ಯ ಅಡಿಯಲ್ಲಿ ‘ನಾವು ಬದುಕಬೇಕು’

JANANUDI.COM NETWORK

ಕುಂದಾಪುರ,ಮೇ.24; ರಾಜ್ಯದ ವಿವಿಧ ಪ್ರಗತಿಪರ ಸಂಘಟನೆಗಳ ಸಹಬಾಗಿತ್ವದಲ್ಲಿ ‘ಜನಾಂದೋಲನ ಸಮಿತಿ’ ಯ ಅಡಿಯಲ್ಲಿ ‘ನಾವು ಬದುಕಬೇಕು’ಎಂಬ ಪ್ರತಿಭಟನಾ ಕಾರ್ಯಕ್ರಮವು ಇಂದು ಬೆಳಿಗ್ಗೆ 8.30 ರಿಂದ 10.30 ರ ಅವಧಿಯಲ್ಲಿ ರಾಜ್ಯದ ಎಲ್ಲಾ ಗ್ರಾಮದಲ್ಲಿಯೂ ನಡೆಯಲಿದೆ.

ನಾವು ಮಾಡಬೇಕಾದುದು ಇಷ್ಟೇ: ಖಾಲಿ ಕಾಗದದಲ್ಲಿ ದೊಡ್ಡದಾಗಿ ‘ನಾವು ಬದುಕಬೇಕು’ ಎಂದು ದಪ್ಪ ಅಕ್ಷರದಲ್ಲಿ ಬರೆದ ಪೋಸ್ಟರ್ ಹಿಡಿದು ನಮ್ಮ ನಮ್ಮ ಮನೆಯ ಬಾಗಿಲಲ್ಲಿ ನಿಂತು ಫೋಟೋ ತಗೆದು ಬ್ಲಾಕ್ ಕಾಂಗ್ರೆಸ್ ಗ್ರೂಪಿಗೆ ಹಾಕೋಣ! ಈ ಫೋಟೋವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಮೂಲಕ ರಾಜ್ಯದ ಜನಾಂದೋಲನ ಸಮಿತಿಗೆ ತಲುಪಿಸಲಾಗುವುದು
ಬನ್ನಿ ನಾವೂ ಕೈಜೋಡಿಸೋಣ… ನಮ್ಮ ಹಕ್ಕುಗಳನ್ನು ಪಡೆಯೋಣ!


ಬೇಡಿಕೆಗಳು:
*ಕೊರೊನಾ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಬೇಕು ಹಾಗೂ ಸರ್ವರಿಗೂ ತ್ವರಿತಗತಿಯಲ್ಲಿ ವ್ಯಾಕ್ಸಿನ್ ವ್ಯವಸ್ಥೆ ಮಾಡಬೇಕು.
*ಗ್ರಾಮ ಪಂಚಾಯತ್ ಮಟ್ಟದಲ್ಲೂ ಕೋವಿಡ್ ಕೇರ್ ಸೆಂಟರ್ ಆರಂಬಿಸಬೇಕು.
*ದುಡಿವ ವ್ಯಕ್ತಿಯನ್ನು ಕಳೆದುಕೊಂಡ ಸಂಸಾರಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ಬೇಕು…
ಪೋಸ್ಟರ್ ಹಿಡಿದು ಕುಂದಾಪುರ ನಗರದಲ್ಲಿ ಇಂದು ನಡೆದ ಪ್ರತಿಭಟನೆಯಲ್ಲಿ ವಿನೋದ್ ಕ್ರಾಸ್ಟೊ, ದೇವಕಿ ಸಣ್ಣಯ್ಯ, ಗಣೇಶ ಶೇರಿಗಾರ್, ಕೆ.ಜಿ.ನಿತ್ಯಾನಂದ, ಕುಮಾರ ಖಾರ್ವಿ, ಜ್ಯೋತಿ ಡಿ.ನಾಯ್ಕ, ಕೋಡಿ ಸುನೀಲ್ ಪೂಜಾರಿ, ಕೇಶವ ಭಟ್, ಆಶಾ ಕರ್ವಾಲ್ಲೊ, ಶೋಭ ಸಚಿದಾನಂದ ಶಿವಕುಮಾರ್ ಕೆ. ಸ್ಟೀವನ್ ಡಿಕೋಸ್ತಾ, ರೋಶನ್ ಶೆಟ್ಟಿ, ಅಶೋಕ ಸುವರ್ಣ, ಅಬ್ದುಲ್ಲಾ ಕೋಡಿ, ಚಂದ್ರಶೇಖರ ಶೆಟ್ಟಿ, ಚಂದ್ರ ಅಮೀನ್, ಮುನಾಫ್, ಗಂಗಾಧರ ಶೆಟ್ಟಿ, ಕೆ.ಶಿವಕುಮಾರ್, ಸುನೀಲ್ ಪೂಜಾರಿ, ಶಸಿ ರಾಜ್,ಅಶ್ವಿನ್ ಕುಮಾರ್,ಡೋಲ್ಫಿ ಡಿಕೋಸ್ತಾ, ಶಿಶರ್ ಕುಮಾರ್ ಕೆ.,ಅರುಣ್ ಕುಮಾರ್, ಆಲೆಕ್ಸಾಂಡರ್ ಡೆಸಾ, ಸುರೇಶ್ ಕೆ. ಮುಂತಾದ ಬ್ಲಾಕ್ ಕಾಂಗ್ರೆಸ್ ಪುರಸಭಾ ವ್ಯಾಪ್ತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.

ಕರ್ನಾಟಕದಲ್ಲಿ 9 ವರ್ಷದೊಳಗಿನ 39,846, 10-19 ವರ್ಷ ವಯಸ್ಸಿನ 1,05,044 ಮಕ್ಕಳಿಗೆ ಕೊರೊನಾ ಸೋಂಕು

JANANUDI.COM NETWORK

ಬೆಂಗಳೂರು,ಮೇ.22: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದ್ದರೂ, ಇದರ ಜೊತೆಗೆ 9 ವರ್ಷ ಕೆಳಗಿನ 40 ಸಾವಿರ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ ಎಂಬ ಮಾಹಿತಿ ದೊರೆತಿದೆ.
ಕರ್ನಾಟಕದಲ್ಲಿ 9 ವರ್ಷದೊಳಗಿನ 39,846 ಮಕ್ಕಳಿಗೆ ಹಾಗೂ 10-19 ವರ್ಷ ವಯಸ್ಸಿನ 1,05,044 ಮಕ್ಕಳಿಗೆ ಕೊರೊನಾ ತಗುಲಿದೆ. ಈ ಅಂಕಿಅಂಶಗಳ ಪ್ರಕಾರ, ಎರಡನೇ ಅಲೆ ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂಬುದು ಸಾಬೀತಾಗಿದೆ.
ಕೊರೊನಾ ಸೋಂಕಿಗೆ ಒಳಗಾದ ವ್ಯಕ್ತಿ ಎರಡನೇ ದಿನಗಳಲ್ಲಿ ಮನೆಯವರಿಗೆ ಹರಡಬಲ್ಲ. ಮಕ್ಕಳು ಅವರ ಸಂಪರ್ಕಕ್ಕೆ ಬರುವುದ್ರಿಂದ ಅವರಿಗೆ ಕೊರೊನಾ ಬೇಗ ಬರ್ತಿದೆ ಎನ್ನಲಾಗ್ತಿದೆ