HOLY ROSARY CHURCH, KUNDAPUR – 450 th JUBILEE SOUVENIR 2021

ಪೌರ ಕಾರ್ಮಿಕರು ಸ್ವಚ್ಛತೆಗೆ ಹೆಚ್ಚು ಗಮನ ನೀಡಬೇಕು : ವೈ.ಎನ್.ಸತ್ಯನಾರಾಯಣ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪೌರ ಕಾರ್ಮಿಕರು ಸ್ವಚ್ಛತೆಗೆ ಹೆಚ್ಚು ಗಮನ ನೀಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ಸಭೆಯಲ್ಲಿ ಮಾತನಾಡಿ, ಪೌರ ಕಾರ್ಮಿಕರು ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ರೂ.1420 ಕೊಟ್ಟು ವಿಮೆ ಮಾಡಿಸಿದಲ್ಲಿ, ಆಕಸ್ಮಿಕ ಮರಣ ಹೊಂದಿದಲ್ಲಿ, ಮರಣ ಹೊಂದಿದ ಪೌರ ಕಾರ್ಮಿಕನ ಕಟುಂಬಕ್ಕೆ ರೂ.20 ಲಕ್ಷ ಪರಿಹಾರ ನೀಡಲಾಗುವುದು. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಕಾರ್ಯನಿರ್ವಹಿಸುವಾಗ ಕೈಗವಸು ಹಾಗೂ ಮಾಸ್ಕ್ ಧರಿಸಬೇಕು ಎಂದು ಹೇಳಿದರು.
ಪುರಸಭಾಧ್ಯಕ್ಷೆ ಲಲಿತಾ ಶ್ರೀನಿವಾಸ್, ಸಿಎಒ ರಾಜೇಶ್ವರಿ, ಪರಿಸರ ಅಭಿಯಂತರ ಡಿ.ಶೇಖರರೆಡ್ಡಿ, ಆರೋಗ್ಯ ನಿರೀಕ್ಷಕ ಪೃಥ್ವಿರಾಜ್, ನಾಗೇಶ್, ರಾಮಲಕ್ಷ್ಮಮ್ಮ, ಸುರೇಶ್ ಸಂತೊಷ್, ಚೆಂದು, ಶ್ರೀನಿವಾಸ್ ಇದ್ದರು.

ಕೋವಿಡ್ ಮಾರಿಯನ್ನು ತಡೆಯಲು ನಾಗರಿಕರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಕೋವಿಡ್ ಮಾರಿಯನ್ನು ತಡೆಯಲು ನಾಗರಿಕರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಎಂ.ಸಿ.ವಿಜಯ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಸೊಮವಾರ ಸಾರ್ವಜನಿಕ ಆರೋಗ್ಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಕೊರೊನಾ ಲಸಿಕೆ ಮೇಳ ಉದ್ಘಾಟಿಸಿ ಮಾತನಾಡಿ, ಕೆಲವರು ಮೂಢನಂಬಿಕೆ ಹಾಗೂ ಅಪಪ್ರಚಾರದಿಂದಾಗಿ ಕೊರೊನಾ ವಿರುದ್ಧ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಅದು ಸರಿಯಲ್ಲ. ಲಸಿಕೆಯಿಂದ ಯಾವುದೇ ಪ್ರತಿ ಪರಿಣಾಮ ಉಂಟಾಗುವುದಿಲ್ಲ. ಬದಲಿಗೆ ದೇಹದಲ್ಲಿ ರೋಗ ತಡೆಯುವ ಶಕ್ತಿ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಪಟ್ಟಣದಲ್ಲಿ ಲಸಿಕೆ ಪಡೆಯಲು ಯೋಗ್ಯರಾದ 23 ಸಾವಿರ ಮಂದಿಯಿದ್ದಾರೆ. ಆ ಪೈಕಿ ಈವರೆಗೆ 13 ಸಾವಿರ ಮಂದಿ ಲಸಿಕೆ ಪಡೆದಿದ್ದಾರೆ. 10 ಸಾವಿರ ಮಂದಿ ಲಸಿಕೆ ಹಾಕಿಸಿಕೊಳ್ಳಬೇಕಾಗಿದೆ. 18 ವರ್ಷ ಮೇಲ್ಪಟ್ಟ ಅರ್ಹ ವ್ಯಕ್ತಿಗಳಿಗೆ ಲಸಿಕೆ ನೀಡಲಾಗುವುದು. ಸ್ವಯಂ ಪ್ರೇರಣೆಯಿಂದ ನಿಗದಿತ ಸ್ಥಳದಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಹೇಳಿದರು.
ಪುರಸಭಾಧ್ಯಕ್ಷೆ ಲಲಿತಾ ಶ್ರೀನಿವಾಸ್, ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಆರೋಗ್ಯ ನಿರೀಕ್ಷಕ ಎಂ.ಪೃಥ್ವಿರಾಜ್, ಪರಿಸರ ಅಭಿಯಂತರ ಡಿ.ಶೇಖರ್ ರೆಡ್ಡಿ, ಟಿ.ನಾಗಲಕ್ಷ್ಮಿ, ಹಸ್ಮಾ, ಆಂಜಮ್ಮ, ಶಿವು, ಜಿ.ಆನಂದ್, ಅಮರೇಶ್ ಇದ್ದರು.

ಗ್ರಂಥಾಲಯ ಮೇಲ್ವಿಚಾರಕರಿಗೆ ದಿನಸಿ ಕಿಟ್ ವಿತರಿಸಿದ ಸಿಎಂಆರ್ ಶ್ರೀನಾಥ್ ಶಾಲೆಯ ಮಾದರಿಯಲ್ಲಿ ಗ್ರಂಥಾಲಯಗಳು ನಿರ್ವಹಣೆ ಆಗಬೇಕು

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ: ಕೋವಿಡ್ ಕಾಲದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯಗಳನ್ನು ಶಾಲೆಯ ಮಾದರಿಯಲ್ಲಿ ನಿರ್ವಹಣೆ ಮಾಡಿ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಬೇಕೆಂದು ಸಮಾಜ ಸೇವಕ ಸಿಎಂಆರ್‌ಶ್ರೀನಾಥ್ ಹೇಳಿದರು.
ನಗರದ ಗ್ರಂಥಾಲಯದ ಆವರಣದಲ್ಲಿ ಸೋಮವಾರ ಮೇಲ್ವಿಚಾರಕರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಓದುಗರಿಗೆ ಪುಸ್ತಕಗಳನ್ನ ಕೊಂಡುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಗ್ರಂಥಾಲಯದ ಮೂಲಕ ಪುಸ್ತಕಗಳನ್ನ ಕೊಟ್ಟು ವಿದ್ಯಾವಂತರನ್ನಾಗಿ ರೂಪಿಸುವಲ್ಲಿ ಗ್ರಂಥಾಲಯದ ಮೇಲ್ವಿಚಾರಕರ ಪಾತ್ರ ದೊಡ್ಡದು ಎಂದರು.
ದೇಶ ಮತ್ತು ರಾಜ್ಯಕ್ಕೆ ಉನ್ನತ ಅಽಕಾರಿಗಳನ್ನ ಕೊಟ್ಟ ಜಿಲ್ಲೆ ಕೋಲಾರ. ಅದಕ್ಕೆ ಮೂಲ ಶಿಕ್ಷಣ ಕಾರಣ. ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾವಂತರಿಗೆ ಕಾಲಕಾಲಕ್ಕೆ ತಲುಪಿಸಿ ಉನ್ನತ ಅಽಕಾರಿಗಳು ಆಗಲು ಗ್ರಂಥಾಲಯದ ಮೇಲ್ವಿಚಾರಕರ ಶ್ರಮ ಅಪಾರವಾದುದು ಎಂದರು.
ರೋಟರಿ ಸೆಂಟ್ರಲ್ ಅಧ್ಯಕ್ಷ ಎಸ್.ಸುಧಾಕರ್‌ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿನ ಜನರು ಇವತ್ತಿಗೂ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವುದಕ್ಕೆ ಹೆದರುತ್ತಿದ್ದಾರೆ. ಇದರಿಂದಲೇ ಹೆಚ್ಚಿಗೆ ಸಾವು-ನೋವುಗಳು ಆಗಿರುವುದು. ಇನ್ನು ಮುಂದಾದರೂ ಪ್ರತಿಯೊಬ್ಬರು ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಕೂಡಲೇ ತಪಾಸಣೆ ಮಾಡಬೇಕು, ಅಲ್ಲದೆ ಕಡ್ಡಾಯವಾಗಿ ಲಸಿಕೆಯನ್ನ ಹಾಕಿಸಿಕೊಂಡು ಅಮೂಲ್ಯವಾದ ಜೀವಗಳನ್ನ ಉಳಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷ ಹಾಗು ಕೋಲಾರ ಮತ್ತು  ಚಿಕ್ಕಬಳ್ಳಾಪುರ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರು ಕೆ.ಎಸ್.ಗಣೇಶ್ ಮಾತನಾಡಿ, ಕೊರೊನಾ ೨ನೇ ಅಲೆಯಲ್ಲಿ ನಾವು ಅನೇಕ ಸ್ನೇಹಿತರನ್ನ ಕಳೆದುಕೊಂಡಿದ್ದೇವೆ. ನಮ್ಮನ್ನ ನಾವು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿತ್ತು. ಲಾಕ್‌ಡೌನ್ ದಿನಗಳು ನಮ್ಮ ಜೀವಮಾನದಲ್ಲಿ ಎಂದಿಗೂ ಬಾರದ ರೀತಿಯಲ್ಲಿ ನಾವು ಎಚ್ಚರಿಕೆ ಕ್ರಮಗಳನ್ನ ತೆಗದುಕೊಂಡು ನಮ್ಮ ಜೀವವನ್ನು ಉಳಿಸಿಕೊಳ್ಳಬೇಕೆಂದರು.
ಕೋಲಾರ ಜಿಲ್ಲೆಯಲ್ಲಿ ಸುಮಾರು ೧೫ ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಪ್ರತಿಯೊಂದು ತಾಲೂಕಿನಲ್ಲಿ ಸಂಘ-ಸಂಸ್ಥೆಗಳು, ಜನಪ್ರತಿನಿಽಗಳು ಮುಂದೆ ಬಂದು ಬಡವರಿಗೆ ದಿನಸಿ ಕಿಟ್, ಔಷಽ ಕಿಟ್‌ಗಳನ್ನ ವಿತರಣೆ ಮಾಡುತ್ತಿದ್ದಾರೆ. ಆದರೆ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಜನಪ್ರತಿನಿಽಗಳು ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ, ಇಂತಹ ಸಂದರ್ಭದಲ್ಲಿ ವೈಯುಕ್ತಿಕವಾಗಿ ಸಿಎಂಆರ್ ಶ್ರೀನಾಥ್ ಮುಂದೆ ಬಂದು ತಮ್ಮ ಜೀವದ ಹಂಗನ್ನ ತೊರೆದು ಕೊರೋನಾ ಸೋಂಕಿತರ ಮನೆ ಬಾಗಲಿಗೆ ಹೋಗಿ ಮೆಡಿಸಿನ್ ಕಿಟ್ ವಿತರಣೆ ಮಾಡಿದರು. ಅಲ್ಲದೆ ಜೀವನದ ಬದುಕು ದುಸ್ತರವಾಗಿದ್ದ ಸಂದರ್ಭದಲ್ಲಿ ಬಡವರಿಗೆ, ದಿನಗೂಲಿ ನೌಕರರಿಗೆ ಆಹಾರ ಕಿಟ್‌ಗಳನ್ನ ವಿತರಣೆ ಮಾಡುತ್ತಿರುವುದನ್ನ ಪ್ರಶಂಸಿಸಿದರು.
ಕೊಲಾರ ಜಿಲ್ಲಾ ಗ್ರಂಥಾಲಯದ ಉಪ ನಿರ್ದೇಶಕರು ದಿವಾಕರ್ ಮಾತನಾಡಿ, ಕೊರೊನಾ ನಮಗೆ ಬದುಕಿನ ಪಾಠ ಹೇಳಿಕೊಟ್ಟಿದೆ. ಎಷ್ಟೋ ಮಂದಿ ಒಂದೊತ್ತಿನ ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿಯನ್ನು ತಂದು ಕೊಟ್ಟಿದೆ. ಸಾಕಷ್ಟು ಮಂದಿ ಸಮಾಜ ಸೇವಕರು, ಶ್ರೀಮಂತರ ಇದ್ದರೂ ಕೂಡ ಕೆಲವರಿಗೆ ಸೇವೆ,ದಾನ ಧರ್ಮ ಮಾಡುವ ಗುಣ ಇರೋದಿಲ್ಲ, ಇಂತಹ ಸಂದರ್ಭದಲ್ಲಿ ಸಿಎಂಆರ್ ಶ್ರೀನಾಥ್ ಅವರು ಬಡವರ ಪರವಾಗಿ ನಿಂತು ದಿನಸಿ- ಔಷಽ ಕಿಟ್‌ಗಳನ್ನ ಕೊಡುತ್ತಿರುವುದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದರು.
ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಛೇರ್ಮನ್  ಗೋಪಾಲಕೃಷ್ಣ ಮಾತನಾಡಿ, ಕೊರೊನಾ ಲಸಿಕೆಯನ್ನು ಪ್ರತಿಯೊಬ್ಬರು ಹಾಕಿಸಿಕೊಂಡು ಜೀವವನ್ನು ಉಳಿಸಿಕೊಳ್ಳಬೇಕು. ಈ ವಿಚಾರದಲ್ಲಿ ಯಾರು ನಿರ್ಲಕ್ಷ್ಯ ಮಾಡಬಾರದು ಎಂದರು.
ಇದೇ ಸಂದರ್ಭದಲ್ಲಿ ಕೋಲಾರ ತಾಲೂಕಿನ ೫೦ ಕ್ಕೂ ಹೆಚ್ಚು ಮಂದಿ ಗ್ರಂಥಾಲಯದ ಮೇಲ್ವಿಚಾರಕರಿಗೆ ದಿನಸಿ ಕಿಟ್‌ಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಕೆ.ಆರ್.ತ್ಯಾಗರಾಜು, ಕೋಲಾರ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ ಚಂದ್ರಶೇಖರ್, ಎಲ್‌ಸಿಸಿ ಸುಧಾಕರ್, ನಗರಸಭೆ ಸದಸ್ಯ ರಫೀಕ್, ವಕೀಲ ಜೆ.ಸಿ.ಹನುಮಂತು, ಮೇಲ್ವಿಚಾರಕ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.
ಕೋಲಾರ ತಾಲೂಕು ಗ್ರಂಥಾಲಯ ಮೇಲ್ವಿಚಾರಕ ಸಂಘದ ಅಧ್ಯಕ್ಷೆ  ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.

ಸಾವು,ನೋವಿನ ಸಂಕಟದಲ್ಲಿ ರಾಜಕಾರಣ ಮಾಡಿದರೆ ಮೃಗಗಳಿಗಿಂತ ಕಡೆ ಜಾತಿ,ಧರ್ಮ,ಪಕ್ಷ ಮರೆತು ಸಮಾಜವನ್ನು ಉಳಿಸೋಣ-ರಮೇಶ್‍ಕುಮಾರ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಸಾವು,ನೋವು,ಸಂಕಟದ ಸಮಯದಲ್ಲಿ ರಾಜಕಾರಣ ಮಾಡಿಕೊಂಡಿದ್ದರೆ ನಾವು ಮೃಗಗಳಿಗಿಂತ ಕಡೆಯಾಗುತ್ತೇವೆ, ಇಂದು ಜಾತಿ,ಪಕ್ಷ ಮರೆತು ಸಮಾಜವನ್ನು ಉಳಿಸುವ ಕೆಲಸಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸಬರಮತಿ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋವಿಡ್ ಸೇನಾನಿಗಳಿಗೆ ತಿಂಗಳಿಗಾಗುವಷ್ಟು ದಿನಸಿ, ಸೀರೆ, ಹರಿಸಿನ,ಕುಂಕುಮದೊಂದಿಗೆ ಮಡಿಲು ತುಂಬಿ ಅವರು ಮಾತನಾಡುತ್ತಿದ್ದರು.
ಕೋವಿಡ್ 2ನೇ ಅಲೆಯಲ್ಲಿ ಅನುಭವಿಸಿದ ನೋವು ಮರೆಯಲಾಗದು, ಅನೇಕರನ್ನು ಕಳೆದುಕೊಂಡಿದ್ದೇವೆ, ನಾನೊಬ್ಬ ಎಂಎಲ್‍ಎ ಎನಿಸಿಕೊಳ್ಳಲು ಅಸಹ್ಯಪಡುವ ಪರಿಸ್ಥಿತಿ ಎದುರಾಯಿತು. ನನಗೆ ಮತ ನೀಡಿದ ಜನ ಸಾಯುತ್ತಿದ್ದರೆ ಅವರಿಗೆ ಕನಿಷ್ಟ ಬೆಡ್,ಆಕ್ಸಿಜನ್ ಕೊಡಿಸಲಾಗದಷ್ಟು ಅಸಹಾಯಕನಾದೆ ಎಂದು ಭಾವುಕರಾಗಿ ನುಡಿದರು.
ಇಂತಹ ಪರಿಸ್ಥಿತಿಯಲ್ಲಿ ರಾಜಕಾರಣ ಏಕೆ ಬೇಕು, ಜನರನ್ನು ಉಳಿಸಲು ನಾವು ಸಂಕಲ್ಪ ಮಾಡಬೇಕಾಗಿದೆ, ಸಾವಿನ ಮನೆಯಲ್ಲೂ ನಾವು ನಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾದರೆ ದೇವರೂ ಮೆಚ್ಚಲಾರ, ನಾವು ಮನುಷ್ಯರೂ ಆಗಲಾರೆವು ಎಂದರು.


ಕ್ಷೇತ್ರದಜನರ ಉಳಿಸಲು 3ನೇ ಅಲೆಗೆ ಸಿದ್ದತೆ


ಕೋವಿಡ್ 3 ಅಲೆ ಬರುವ ಮುನ್ಸೂಚನೆಯನ್ನು ತಜ್ಞರು ನೀಡಿರುವುದರಿಂದ ಅಂತಹ ಭೀಕರ ಸನ್ನಿವೇಶದಿಂದ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಜನತೆಯನ್ನು ಕಾಪಡಿಕೊಳ್ಳಲು ಪೂರ್ವ ಸಿದ್ಧತೆಯನ್ನು ಮಾಡಿಕೊಂಡು ನಾವು ಸನ್ನದ್ಧರಾಗಿದ್ದೇವೆ ಎಂದು ತಿಳಿಸಿದರು.


ಕೋವಿಡ್ ಲ್ಯಾಬ್‍ಸಿದ್ದ 10 ಐಸಿಯು ಬೆಡ್


ಕೊರೊನ ಮೊದಲ ಹಾಗೂ ಎರಡನೆಯ ಅಲೆಯ ಹೊಡೆತಕ್ಕೆ ಜೀವನ, ಪ್ರಾಣ ಎರಡೂ ಲೆಕ್ಕಕ್ಕೆ ಸಿಗಾದಂತೆ ತತ್ತರಿಸಿ ಹೋಗಿದೆ, ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಾಂಕ್ರಾಮಿಕ ರೋಗವನ್ನು ಹಿಡಿತದಲ್ಲಿ ಇಡಲು ಎಲ್ಲಾ ರೀತಿಯ ಪ್ರಕ್ರಿಯೆಗಳನ್ನು ತಾಲೂಕಿನಲ್ಲಿ ಮಾಡಲಾಗಿದೆ ಎಂದು ಹೇಳಿದ ಅವರು, ಆಸ್ಪತ್ರೆಗಳನ್ನು ಸಿದ್ದಪಡಿಸಲಾಗಿದೆ ಎಂದರು.
ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಕೋಟಿ ರೂ ವೆಚ್ಚದಲ್ಲಿ ಕೋವಿಡ್ ಟೆಸ್ಟ್ ಲ್ಯಾಬ್, 10ಹಾಸಿಗೆಯ ಐಸಿಯು, ಸಕ್ರಿಯವಾಗಿದ್ದ 4 ವೆಂಟಿಲೇಟರ್ ಜತೆಗೆ ಇನ್ನೂ 4 ವೆಂಟಿಲೇಟರ್ ಖರೀದಿಸಿದ್ದು ಜನರ ಉಪಯೋಗಕ್ಕೆ ಬಳಸಲು ಸನ್ನದ್ದಗೊಳಿಸಲಾಗಿದೆ ಎಂದರು.
ದಿನಕ್ಕೆ 584 ಲೀ ಆಮ್ಲಜನಕವನ್ನು ಉತ್ಪತ್ತಿ ಮಾಡಬಹುದಾದ ಪ್ಲಾಂಟನ್ನು ಕೆಂಪೇಗೌಡ ಏರ್ ಫೆÇೀರ್ಸ್ ಅತಾರ್ಟಿ ಯಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಾಪಿಸುವ ಕಾರ್ಯ ನಡೆಯುತ್ತಿದೆ. ಜುಲೈ ತಿಂಗಳಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದ್ದು, ಕೊರೊನಾವನ್ನು ಕಟ್ಟಿಹಾಕುಲು ನಾವು ಸನ್ನದ್ಧರಾಗಿದ್ದೇವೆ ಎಂದು ನುಡಿದರು.
ಶ್ರೀನಿವಾಸಪುರ ತಾಲೂಕಿನ ಪ್ರತಿ ಹಳ್ಳಿಗಳಲ್ಲೂ ಲಸಿಕೆ ನೀಡುವುದು ನನ್ನ ಗುರಿಯಾಗಿದ್ದು, ಕ್ಷೇತ್ರದ ಎಲ್ಲರಿಗೂ ಲಸಿಕೆ ಹಾಕಿಸಲು ಅರಿವು ಮೂಡಿಸಲಾಗುತ್ತಿದೆ, ಲಸಿಕಾ ಅಭಿಯಾನದ ವೇಗವನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ದೇವರ ದಯೆಯಿಂದ ಕೊರೊನ ಅಬ್ಬರ ಕ್ಷೀಣಿಸುತ್ತಿದ್ದು, ಜನರು ಮತ್ತೆ ಜೀವನ ಕಟ್ಟಿಕೊಳ್ಳುವ ತವಕದಲ್ಲಿದ್ದಾರೆ. ಇಂತಹ ಕ್ಷಿಪ್ರಗತಿಯಲ್ಲಿ ದುಡಿಮೆ ಇಲ್ಲದೆ, ಬೆಳೆದ ಬೆಳೆಗೆ ಬೆಲೆ ಇಲ್ಲವಾಗಿದೆ. ರೋಗಗಳು ಬಂದರೆ ಇನ್ನು ಕಷ್ಟವಾಗುತ್ತದೆ ಎಂದರು.
ಕೊರೊನ ಸಮಯದಲ್ಲಿ ಪ್ರಾಣದ ಹಂಗು ತೊರೆದು ಸಹಾಯ ಮಾಡಿದವರ ಮಧ್ಯೆ ಇದನ್ನೇ ಬಂಡವಾಳ ಮಾಡಿಕೊಂಡವರು ಇದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗಡೆ ಔಷಧಿ ತೆಗೆದು ಕೊಳ್ಳುವಂತೆ ಚೀಟಿ ಬರೆದು ಕೊಡಬಾರದು ಎಂದು ಅಧಿಕ ಔಷಧಿಗಳ ದಾಸ್ತಾನು ಮಾಡಲಾಗಿದೆ. ಔಷಧಿ ಚೀಟಿ ಬರೆದು ಕೊಟ್ಟ ಮಾಹಿತಿ ನನಗೆ ಗೊತ್ತಾದರೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಸಿದರು.


ಕಾರ್ಯಕರ್ತೆಯರ ಸೇವೆ ಸ್ಮರಣೀಯ


ಪ್ರತಿ ಮನುಷ್ಯರಿಗೂ ಕಾಲ ಬರುತ್ತದೆ ಎನ್ನುವುದಕ್ಕೆ ತಕ್ಕ ಉದಾಹರಣೆ ಆಶಾ ಕಾರ್ಯಕರ್ತರು, ಇವರನ್ನು ನೆನೆಯದೇ ಇದ್ದ ದಿನವೂ ಇತ್ತು. ಆದರೆ, ಈ ಪ್ರಸ್ತುತ ಕಾಲದಲ್ಲಿ ಇವರನ್ನು ನೆನಯದ ದಿನವಿಲ್ಲ. ಸರ್ಕಾರದ ಆರೋಗ್ಯ ಸೌಲಭ್ಯವನ್ನು ಜನರಿಗೆ ತಲುಪಿಸುವ ಸೇತುವೆಯಾಗಿ ಇವರು ಕೆಲಸ ಮಾಡಿದ್ದಾರೆ ಎಂದರು.
ಆಶಾ ಕಾರ್ಯಕರ್ತರ ಸೇವೆ ಸ್ಮರಣೀಯವಾಗಿದೆ, ಇವರು ಸಮುದಾಯಕ್ಕೆ ನೀಡಿರುವ ಸೇವೆ ದೇವರು ಮೆಚ್ಚುವಂತಹದು. ಆರೋಗ್ಯ, ಪೆÇಲೀಸ್, ಕಂದಾಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು ಹಾಗೂ ಪೌರಕಾರ್ಮಿಕರ ಸೇವೆಗೆ ಎಲ್ಲರೂ ಚಿರಋಣಿಯಾಗಿರಬೇಕು. ಇವರ ಸೇವೆ ಗೌರವಿಸಲು ಮಡಿಲು ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದರು.


ಆರ್ಥಿಕ ಪರಿಸ್ಥಿತಿ ಡೋಲಾಯಮಾನ


ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಕೋವಿಡ್ ಮಹಾಮಾರಿಯಿಂದ ಆರ್ಥಿಕ ಪರಿಸ್ಥಿತಿಯೇ ಡೋಲಾಯಮಾನವಾಗಿದೆ. ಕಂಡು ಕೇಳದ ಸಂದರ್ಭಗಳು ಜರುಗಿವೆ, ಹಿಂದಿನ ಕಾಲದ ಸಾಂಕ್ರಾಮಿಕ ರೋಗಗಳು ಶಮನವಾಗಿದೆ. ಅದೇ ರೀತಿ ಕೊರೊನ ರೋಗವು ಮಾಯವಾಗುವುದು ನಿಶ್ಚಿತ ಎಂದರು.
ಜನತೆ ಭಯಪಡುವ ಅಗತ್ಯವಿಲ್ಲ ಆದರೆ ಜಾಗ್ರತೆಯಿಂದ ನಡೆದುಕೊಳ್ಳಬೇಕು, ಕೋವಿಡ್ ಮಾರ್ಗಸೂಚಿಯಡಿ ಮಾಸ್ಕ್,ಸ್ಯಾನಿಟೈಸರ್, ಸಾಮಾಜಿಕ ಅಂತರ ಪಾಲಿಸಬೇಕು, ಜೀವ ಮತ್ತು ಜೀವನ ಎರಡೂ ಅಗತ್ಯವಿದೆ, ಈ ನಿಟ್ಟಿನಲ್ಲಿ ಜನರ ನಡೆ ಅತಿ ಮುಖ್ಯ ಎಂದರು.
ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಜೀವದ ಹಂಗು ತೊರೆದು ಸಮುದಾಯದ ನಡುವೆಯೇ ಇದ್ದು ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರ ಸೇವೆಯನ್ನು ಜನ ಮರೆಯಲಾರರು ಎಂದು ತಿಳಿಸಿ, ಜೀವ ರಕ್ಷಣೆಯಲ್ಲಿ ದುಡಿದ ವಾರಿಯರ್ಸ್‍ಗೆ ಧನ್ಯವಾದ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷ ಜನ್ನಘಟ್ಟ ವಿ.ವೆಂಕಟಮುನಿಯಪ್ಪ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಟಿ.ವಿ.ಕೃಷ್ಣಪ್ಪ, ಸುಗಟೂರು ಎಸ್‍ಎಫ್‍ಸಿಎಸ್ ಅಧ್ಯಕ್ಷ ಟಿ.ವಿ.ತಿಮ್ಮರಾಯಪ್ಪ, ಸುಗಟೂರು ಗ್ರಾ.ಪಂ ಅಧ್ಯಕ್ಷೆ ವೆಂಕಟಲಕ್ಷಮ್ಮ, ಉಪಾಧ್ಯಕ್ಷೆ ಮುನಿರತಮ್ಮ, ತೊಟ್ಲಿ ಗ್ರಾ.ಪಂ ಅಧ್ಯಕ್ಷೆ ಆರ್.ಆಶಾ, ಉಪಾಧ್ಯಕ್ಷೆ ಸರಸ್ವತಮ್ಮ, ಸದಸ್ಯರಾದ ಭೂಪತಿ ಗೌಡ, ಶ್ಯಾಮಲಮ್ಮ, ಕೆ.ರವಿ, ಎಸ್.ಎಂ.ಮಂಜುನಾಥ್, ನಾಗೇಂದ್ರ ಶೆಟ್ಟಿ,ಪಿ.ಡಿ.ಒ.ರಮೇಶ್, ಸುಗಟೂರು ವೈದ್ಯಾಧಿಕಾರಿ ಡಾ.ಕಾವ್ಯ, ಮುಖಂಡರುಗಳಾದ ವೆಂಕಟರೆಡ್ಡಿ, ಶಶಿ, ವಿಶ್ವನಾಥ್, ರವಿ ಮುಂತಾದವರು ಉಪಸ್ಥಿತರಿದ್ದರು.

ಮೋದಿ ಆಡಳಿತದಲ್ಲೇ ಭಾರೀ ಹಣ ಸ್ವಿಸ್ ಬ್ಯಾಂಕ್ ನಲ್ಲಿ ಹೂಡಿಕೆಯಾಗಿದೆ

JANANUDI.COM NETWORK

ನವದೆಹಲಿ,ಜೂ.20: ಮೋದಿ ಅಧಿಕಾರಕ್ಕೆ ಬಂದರೆ ಕಪ್ಪುಹಣವನ್ನು ಸ್ವಿಸ್ ಬ್ಯಾಂಕ್ ನಿಂದ ವಾಪಾಸ್ಸು ತರುತ್ತೇನೆಂದು ಹೇಳಿ ದೆಹಲಿ ಗದ್ದುಗೆ ಏರಿದ್ದರು ಇದೀಗ ಮೋದಿಯ ಆಡಳಿತದಲ್ಲೇ ಅತಿ ಹೆಚ್ಚು ಕಪ್ಪುಹಣವನ್ನು ಸ್ವಿಸ್ ಬ್ಯಾಂಕ್ ನಲ್ಲಿ ಇರಿಸಲಾಗಿದೆ ಎನ್ನುವ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ.

    ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯ ವ್ಯಕ್ತಿಗಳು, ಸಂಸ್ಥೆಗಳು ಹಾಗೂ ಹಣಕಾಸು ಸಂಸ್ಥೆಗಳು ಇಟ್ಟಿರುವ ಹಣದ ಮೊತ್ತ  ಈ ಬಾರಿ 20,700 ಕೋಟಿಗೆ ಏರಿಕೆಯಾಗಿದೆ ಎಂದು ಸ್ವಿಟ್ಜರ್ಲ್ಯಾಂಡ್ ನ ಕೇಂದ್ರ ಬ್ಯಾಂಕ್ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ.

     ಕಳೆದ 13 ವರ್ಷಗಳಲ್ಲೇ ಭಾರತೀಯರು ಗರಿಷ್ಠ ಮೊತ್ತವನ್ನು ಸ್ವಿಸ್ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿದ್ದಾರೆ. 2020ರ ವಾರ್ಷಿಕ ವರದಿಯಲ್ಲಿ ಈ ಬ್ಯಾಂಕ್ ಮಾಹಿತಿ ನೀಡಿದ್ದು, ಸೆಕ್ಯೂರೀಟಿಸ್ ಮತ್ತು ಇತರ ಹೂಡಿಕೆಯಿಂದಾಗಿ ಈ ಮೊತ್ತ ಏರಿಕೆಯಾಗಿದೆ.ಇನ್ನು ಅನಿವಾಸಿ ಭಾರತೀಯರು ಬೇರೆ ದೇಶಗಳ ಸಂಸ್ಥೆಗಳ ಹೆಸರಿನಲ್ಲಿ ಇಟ್ಟ ಹಣವನ್ನು ಈ ಅಂಕಿ-ಅಂಶಗಳಲ್ಲಿ ಸೇರಿಸಿಲ್ಲ.

    2019 ರ ಅಂತ್ಯದ ವೇಳೆಗೆ ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರ ಹಣದ ಪ್ರಮಾಣದಲ್ಲಿ ಕುಸಿತವಾಗಿತ್ತು. ಆದರೆ 2020 ಅಂತ್ಯಕ್ಕೆ ಈ ಪ್ರಮಾಣ 13 ವರ್ಷಗಳಲ್ಲೇ ಗರಿಷ್ಟ ಪ್ರಮಾಣಕ್ಕೆ ಏರಿಕೆಯಾಗಿದೆ.

” ಜನಾಗ್ರಹ ” – – ಬ್ಲಾಕ್ ಕಾಂಗ್ರೆಸ್ ಸಮಿತಿ, ಕುಂದಾಪುರ.

JANANUDI.COM NETWORK

ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲತೆ ಕಂಡು ಇದೀಗ ಲಸಿಕೆ ಒದಗಿಸುವುದರಲ್ಲಿಯೂ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದೆ.
ಲಸಿಕಾ ಕೇಂದ್ರದಲ್ಲಿಯೂ ರಾಜಕೀಯ ಮೇಳೈಸುತ್ತಿದ್ದು ತಾರತಮ್ಯತೆ ಧೋರಣೆಯನ್ನು ಅನುಸರಿಸಲಾಗುತ್ತಿರುವುದರ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದೆ. ಎಲ್ಲಾ ವಯೋ ವರ್ಗದವರಿಗೂ ಲಸಿಕೆ ನೀಡುವುದಾಗಿ ಭರವಸೆ ನೀಡಿರುವ ಸರ್ಕಾರ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡಬೇಕಾದ ಮೊದಲ ಡೋಸನ್ನೇ ಇನ್ನೂ ಕೂಡ ನೀಡುವಲ್ಲಿ ಅಸಮರ್ಥವಾಗಿದೆ.
ರಾಜ್ಯ ಸರ್ಕಾರವು ಲಾಕ್ದೌನ್ ನಿಂದ ಸಂತ್ರಸ್ತರಾದ ಕಾರ್ಮಿಕ, ಶ್ರಮಿಕ ವರ್ಗದವರಿಗೆಂದು ಘೋಷಿಸಿರುವ ಪ್ಯಾಕೆಜ್ ಪಡೆಯಲು ವಿಧಿಸಲಾಗಿರುವ ಕಠಿಣ ಷರತ್ತುಗಳು ಮತ್ತು ನಿಯಮಗಳಿಂದಾಗಿ ಅರ್ಹರ ಕೈಸೇರದೆ ಘೋಷಿತ ಪ್ಯಾಕೇಜ್ “ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಾಗಿದೆ”.
ಪ್ಯಾಕೇಜ್ ನಿಂದ ಕೈಬಿಡಲಾಗಿದ್ದ ಇತರ ಹಲವು ಶ್ರಮಿಕ ವರ್ಗ ಮತ್ತು ಕುಲ ಕಸುಬಾಧಾರಿತ ವೃತ್ತಿ ಬಾಂಧವರಿಗೆ ಪ್ಯಾಕೇಜ್ ನೀಡುವಂತೆ ಈಗಾಗಲೇ ನಾವು ಆಗ್ರಹಿಸಿದ್ದರೂ ಯಾವುದೇ ಪ್ರತಿಕ್ರಿಯೆ ನೀಡದೆ ಕಡೆಗಣಿಸಿರುವುದು ಈ ವರ್ಗದ ಜನರಿಗೆ ಮಾಡಿದ ವಂಚನೆಯಾಗಿರುತ್ತದೆ. ಸರ್ಕಾರದ ಈ ಎಲ್ಲ ವೈಫಲ್ಯತೆಯನ್ನು ಖಂಡಿಸಿ ಸಮಾನ ಮನಸ್ಕ ಜಾತ್ಯಾತೀತ ಪಕ್ಷಗಳಾದ ಕಮ್ಯುನಿಸ್ಟ್ ಪಾರ್ಟಿ (ಸಿ.ಪಿ.ಎಂ), ಜಾತ್ಯಾತೀತ ಜನತಾ ದಳ, ವಿವಿಧ ಪ್ರಗತಿಪರ ಸಂಘಟನೆಗಳು ಮತ್ತು ಸಾರ್ವಜನಿಕರ ಸಹಯೋಗದೊಂದಿಗೆ ನಾಳೆ ಬೆಳಿಗ್ಗೆ, ದಿನಾಂಕ 22/06/2021, ಮಂಗಳವಾರ ದಂದು ಕುಂದಾಪುರ ಶಾಸಕರ ಕಚೇರಿಯ (ತಾಲೂಕು ಪಂಚಾಯತ್ ಕಛೇರಿ ,ಶಾಸ್ತ್ರಿ ಸರ್ಕಲ್‌ ಬಳಿ ) ಮುಂದೆ ಪ್ರತಿಭಟಿಸಿ ಅವ್ಯವ್ಯಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಲಾಗುವುದು.
ಆ ಪ್ರಯುಕ್ತ, ವಿವಿಧ ರಾಜಕೀಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು, ಸಾರ್ವಜನಿಕರು ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯ, ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಪದಾಧಿಕಾರಿಗಳು ಮತ್ತು ಮುಖಂಡರು,ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ಸೇವಾದಳ, ಎನ್.ಎಸ್. ಯೂ. ಐ, ಕಿಸಾನ್ ಕಾಂಗ್ರೆಸ್, ಅಲ್ಪಸಂಖ್ಯಾತರ ಘಟಕ, ಹಿಂದುಳಿದ ವರ್ಗಗಳ ಘಟಕ, ಎಸ್.ಸಿ.ಎಸ್. ಟಿ ಘಟಕ, ಕಾನೂನು ಘಟಕ ಮತ್ತು ಎಲ್ಲ ಗ್ರಾಮೀಣ ಕಾಂಗ್ರೆಸ್ ಸಮಿತಿ,ಬೂತ್ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಎಲ್ಲಾ ಸ್ತರದ ಸ್ಥಳೀಯಾಡಳಿತ ಸಂಸ್ಥೆಗಳ ಹಾಲಿ ಹಾಗೂ ಮಾಜಿ ಸದಸ್ಯರು, ಮತ್ತು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ನಾಳೆ ಬೆಳಿಗ್ಗೆ 10.30 ಕ್ಕೆ ಈ ಜನಾಗ್ರಹಕಾರ್ಯಕ್ರಮ ದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ವಿನಂತಿ…

     – ಬ್ಲಾಕ್ ಕಾಂಗ್ರೆಸ್ ಸಮಿತಿ, ಕುಂದಾಪುರ.

ಜೂ.23ರಿಂದ ದುಬೈಗೆ ವಿಮಾನ ಹಾರಾಟಕ್ಕೆ ಒಪ್ಪಿಗೆ ಪ್ರಯಾಣಿಕರಿಗೆ ಕೆಲವು ನಿಬಂಧನೆಗಳಿವೆ ಪಾಲಿಸಿ

JANANUDI.COM NETWORK

ದುಬೈ, ಜೂ.20: ಕೋವಿಡ್ ಹಿನ್ನೆಲೆಯಲ್ಲಿ ದುಬೈ ಪ್ರಯಾಣಕ್ಕೆ ವಿಧಿಸಿದ್ದ ನಿರ್ಬಂಧವನ್ನು ದುಬೈ ಎಮಿರೇಟ್ಸ್ ವಾಪಾಸ್ಸು ತೆಗೆದುಕೊಂಡಿದೆ. ಜೂನ್ 23ರಿಂದ ವಿಮಾನ ಹಾರಾಟಕ್ಕೆ ಕೆಲದೇಶಗಳಿಗೆ ಅನುಮತಿಯನ್ನು ನೀಡಿದೆ.

    ಶೇಖ್ ಮನ್ಸೂರ ಬಿನ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಖ್ತೂಮ್ ನೇತ್ರತ್ವದಲ್ಲಿ ದುಬೈನ ನೈಸರ್ಗಿಕ ವಿಕೋಪ ಮತ್ತು ಬಿಕ್ಕಟ್ಟು ನಿರ್ವಹಣೆಯ ಉನ್ನತ ಮಟ್ಟದ ಸಮಿತಿ  ಸಭೆ ಬಳಿಕ ಭಾರತ, ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾ ದೇಶಗಳಿಗೆ ಜೂನ್ 23ರಿಂದ ವಿಮಾನ ಹಾರಾಟ ಪ್ರಾರಂಭಗೊಳಿಸಲು ಅನುಮತಿ ನೀಡಲಾಗಿದೆ ಇದೇ ಸಮಯದಲ್ಲಿ. ಪ್ರಯಾಣಿಕರಿಗೆ ಕೆಲ ನಿರ್ಬಂಧವನ್ನು ಕೂಡ ವಿಧಿಸಲಾಗಿದೆ.

ಪ್ರಯಾಣಿಕರಿಗೆ ಕೆಲ ನಿರ್ಬಂಧಗಳು ಹೀಗಿವೆ

ಯುಎಇ ಮಾನ್ಯತೆ ಪಡೆದ ಎರಡು ಡೋಸ್ ಕೋವಿಡ್ ಲಸಿಕೆ ಪ್ರಯಾಣಿಕರು ಪಡೆದಿರಬೇಕು.

ಭಾರತದಿಂದ ದುಬೈಗೆ ಪ್ರಯಾಣಿಸುವ ಪ್ರಯಾಣಿಕರು 4 ಗಂಟೆ ಮೊದಲು ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಬೇಕು.

ದುಬೈನಲ್ಲಿ ಮತ್ತೆ ಪರೀಕ್ಷೆ ಮಾಡಿಸಬೇಕು ಎಂದು ಸೂಚನೆ ನೀಡಲಾಗಿದೆ.

ಕೆಎಸ್ಸಾರ್ಟಿಸಿ ಬಸ್ ಸಂಚಾರ ನಾಳೆಯಿಂದ ಆರಂಭ: ಸುಮಾರು 3 ಸಾವಿರ ಬಸ್ ಗಳು ರಸ್ತೆಗಿಳಿಯಲಿವೆ

ಬೆಂಗಳೂರು ಜೂ. 20:  ಕೊವೀಡ್ 19 ರಾಜ್ಯದಲ್ಲಿ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹಂತ ಹಂತವಾಗಿ ಅನ್ ಲಾಕ್ ಮಾಡಲಾಗುತ್ತಿದೆ. ಕೆಎಸ್ಸಾರ್ಟಿಸಿ ಮಾಹಿತಿಯ ಪ್ರಕಾರ ಕೆಎಸ್ಸಾರ್ಟಿಸಿ ಬಸ್ಗಳು ನಾಳೆಯಿಂದ ಸಂಚರಿಸಲಿವೆ ಎಂದು ತಿಳಿದು ಬಂದಿದೆ.

    ಮೈಸೂರು ಹೊರತುಪಡಿಸಿ ಜೂನ್ 21ರ ಬಳಿಕ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಕೆಎಸ್ಸಾರ್ಟಿಸಿ ಬಸ್ ಸಂಚಾರ ಆರಂಭವಾಗಲಿದೆ. ನಾಳೆ ಸುಮಾರು 3 ಸಾವಿರ ಬಸ್ ಗಳು ರಸ್ತೆಗಿಳಿಯಲಿವೆ ಎಂದು ಮಾಹಿತಿ ಇದೆ.

    ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಕೆಎಸ್ಸಾರ್ಟಿಸಿ ಬಸ್ ಗಳಲ್ಲಿ ಅವಕಾಶ ನೀಡಲಾಗಿದೆ. ಮೈಸೂರು ಜಿಲ್ಲೆ ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಮಾರ್ಗ ಸೂಚಿ ಸಡಿಲಿಕೆ ಮಾಡಲಾಗಿರುವ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್ ಗಳನ್ನು ರಸ್ತೆಗಿಳಿಸು ಸಜ್ಜಾಗಿವೆ ಎಂದು ಕೆಎಸ್ಸಾರ್ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರ ಪ್ರಕಟಣೆಯಲ್ಲಿ ತಿಳಿಸಿದೆ.

ಕೊಂಕಣಿಂತಲ್ಯಾ ಅಸ್ತುರಿ ಸಾಹಿತ್ಯಾಚೆರ್ ರಾಶ್ಟ್ರೀಯ್ ಮಟ್ಟಾಚೆಂ ವೆಬಿನಾರ್/कोंकणिंतल्या अस्तुरी साहित्याचेर राश्ट्रीय मट्टाचें वेबिनार

JANANUDI.COM NETWORK



19 ಜೂನ್ 2021: ಆಶಾವಾದಿ ಪ್ರಕಾಶನ್ ಮುಂಬಯ್, ಕಾರ್ಮೆಲ್ ಕೊಲೆಜ್ ನುವೆಂ-ಗೊಂಯ್ ತಶೆಂಚ್ ಸಾಂ|ಆಗ್ನೆಸ್ ಕೊಲೆಜ್ ಮಂಗ್ಳುರ್ ಹಾಂಚ್ಯಾ ಜೋಡ್ ಪಾಲಂವಾಖಾಲ್ ’ಕೊಂಕಣಿಂತಲ್ಯಾ ಅಸ್ತುರಿ ಸಾಹಿತ್ಯಾಚೆರ್’ ರಾಶ್ಟ್ರೀಯ್ ಮಟ್ಟಾಚೆಂ ವೆಬಿನಾರ್ ಜೂನ್ 19 ತಾರಿಕೆರ್ ಚಲ್ಲೆಂ. “ಅಸ್ತುರಿಚೊ ಪಾತ್ರ್ ಫಕತ್ ಕುಜ್ನಾಂತ್ ನ್ಹಯ್, ಬಗಾರ್ ಸಮಾಜೆಂತ್ ದಾದ್ಲ್ಯಾಕ್ ಸರಿ ಜಾವ್ನ್ ಆಸ್ಚೊ ಆನಿ ಹ್ಯಾ ದಿಶೆನ್ ಪಯ್ಲೆಂ ದರೇಕಾ ಅಸ್ತುರೆನ್ ಸಮ್ಜುನ್, ಅಸ್ತುರಿಚಿಂ ಹಕ್ಕಾಂ, ಅಸ್ತುರಿಚಿಂ ಸಂವೇದನಾಂ ಸಾಹಿತ್ಯಾರುಪಾರ್ ಅಭಿವ್ಯಕ್ತ್ ಕರ್ಚಿ ಗರಜ್ ಆಸಾ” ಅಶೆಂ ವೆಬಿನಾರಾಚೆಂ ಸುಂಕಾಣ್ ಘೆತ್‌ಲ್ಲ್ಯಾ ಬೆಸೆಂಟ್ ಕೊಲೆಜಿಚ್ಯಾ ಪತ್ರಿಕುಧ್ಯಮ್ ವಿಭಾಗಾಚಿ ಮುಖೆಸ್ತ್ ಕೊಂಕಣಿ ಕವಿ/ಲೇಖಕಿ ಬಾಯ್ ಸ್ಮಿತಾ ಶೆಣಯ್ ಹಿಣೆಂ ಯೆವ್ಕಾರ್ ಉಲವ್ಪಾಂತ್ ಸಾಂಗ್ಲೆಂ.

ಕಾರ್ಮೆಲ್ ಕೊಲೆಜಿಚ್ಯಾ ಪ್ರಿನ್ಸಿಪಾಲ್ ದೊ|ಅಲ್ಡಿನಾ ಬ್ರಗಾಂಜಾನ್ ಉಗ್ತಾವಣ್ ಉಲವ್ಪಾಂತ್ “ಏಕ್ ಸಮಾಜ್ ವಿಚಾರಾಂನಿ ಮಾತ್ರ್ ಮುಕಾರ್ ವೆತಾ ಆನಿ ವಿಚಾರ್ ವಾಡಂವ್ಚ್ಯಾ ದಿಶೆನ್ ಸಾಹಿತ್ಯ್ ಏಕ್ ಬಳ್ವಂತ್ ಹಾತೆರ್. ಆಜ್ ವಾಚ್ಪಿ ಉಣೆ ಜಾವ್ನ್ ಯೆಂವ್ಚ್ಯಾ ಕಾಳಾರ್, ಡಿಜಿಟಲ್ ಮಾಧ್ಯಮಾಚೊ ಥೆಂಕೊ ಘೆವ್ನ್ ಕೊಂಕಣಿಂತ್ಲ್ಯಾ ಅಸ್ತುರಿ ಸಾಹಿತ್ಯಾಕ್ ಜೊಕ್ತೊ ಪಾಟಿಂಬೊ ದಿಂವ್ಚಿ ಗರ್ಜ್ ಆಸಾ” ಮ್ಹಣಾಲಿ. ಉಗ್ತಾವಣ್ ಸಂಧೇಶಾಂತ್ ಭಯ್ಣ್ ದೊ|ವೆನಿಸ್ಸಾನ್ “ಕೊಂಕಣಿ ಆಮ್ಚಿ ಆವಯ್‌ಭಾಸ್ ಆನಿ ತಿಚೊ ಪೋಸ್ ಕರ್ಚಿ ಗರ್ಜ್ ಆಮಿ ಸಗಳ್ಯಾಂನಿ ಪಯ್ಲಿ ಸಮ್ಜುಂಚಿ ಆನಿ ಪಾಟ್ಲ್ಯಾ ಎಕಾ ಶೆಕ್ಡ್ಯಾ ಥಾವ್ನ್ ಸಮಾಜೆಂತ್ ಅಸ್ತುರೆನ್ ಸಯ್ತ್ ಮುಕಾರ್ ಯೆವ್ನ್ ದಾದ್ಲ್ಯಾಕ್ ಸರಿ ಜಾವ್ನ್ ಜವಾಭ್ದಾರೆಂತ್ ಖಾಂದ್ ಮಾರ್ಲಾ ತಶೆಂ ಅಸ್ತುರೆಕ್ ಸಾಹಿತ್ಯಾಂತ್ ತಶೆಂಚ್ ದರೇಕಾ ಶೆತಾಂತ್ ಮುಕ್ಲಿಂ ಪಾವ್ಲಾಂ ಕಾಡ್ಚಿ ಉರ್ಭಾ ಆನಿ ಪ್ರೇರಣ್ ಲಾಭುಂದಿ” ಮ್ಹಣಾಲಿ.

ಕೊಂಕಣಿಂತಲೆಂ ಅಸ್ತುರಿಂಚೆಂ ’ಅ ಸ್ತುರಿ ಸಾಹಿತ್ಯ್’ ವಿಶ್ಯಾಚೆರ್ ಏಕ್ ಖೊಲಾಯೆಚೆಂ ಅಧ್ಯಯನ್ ಪ್ರಬಂಧಾಕ್ ಕರ್ನಾಟಕ್ ಕೊಂಕಣಿ ಸಾಹಿತ್ಯ್ ಅಕಾಡೆಮಿಚಿ ದೋನ್ ಪಾವ್ಟಿಂ ಪುರಸ್ಕಾರ್ ಜೊಡ್ಪಿ ಬಾಯ್ ತಾರಾ ಲವಿ ಗಂಜಿಮಠ್ ಹಿಣೆಂ ಸಾದರ್ ಕರುನ್ ಗೊಂಯ್, ಮಹಾರಾಶ್ಟ್ರ, ಕೇರಳ ತಶೆಂಚ್ ಕರ್ನಾಟಕಾಂತ್ ಸಾಹಿತಿಕ್ ವಾವ್ರ್ ಕೆಲ್ಲ್ಯಾ ಅಸ್ತುರಿ ಲೇಖಿಕಾಂಚ್ಯಾ ವಾವ್ರಾಚೆರ್ ಉಲವ್ನ್, “ಅಸ್ತುರಿಕ್ ದಾದ್ಲ್ಯಾಕ್ ಸಮಾನ್ ಸ್ಥಾನ್-ಮಾನ್ ಲಾಭಾನಾ” ಮ್ಹಣಾಲಿ.

’ನವಿ ದಿಶಾ’ ಕಥೆಚೆರ್ ಏಕ್ ಖೊಲಾಯೆಚೆಂ ವಿಶ್ಲೇಷಣ್ ಪ್ರಬಂಧಾಕ್ ಗೊಂಯ್ಚ್ಯಾ ಬಾಯ್ ಉರ್ಜಿತಾ ಭೊಬೆನ್ ಸಾದರ್ ಕರ್ತಚ್, ಪ್ರಮುಕ್ ಉಲವ್ಪಿ ಎಚ್ಚೆಮ್ ಪೆರ್ನಾಳಾನ್ ” ’ಅಸ್ತುರಿ ಸಾಹಿತ್ಯ್’ ಏಕ್ ವಿಸ್ತಾರ್ ವಿಶಯ್. ಹಾಂಗಾಸರ್ ಅಸ್ತುರೆನ್ ಬರಯಿಲ್ಲೆಂ ಸಾಹಿತ್ಯ್ ತಶೆಂಚ್ ’ಅಸ್ತುರಿ ವಿಶ್ಯಾಚೆರ್ ಬರಯಿಲ್ಲೆಂ ಸಾಹಿತ್ಯ್’ ಸಯ್ತ್ ಮಹತ್ವಾಚೆಂ. ಕೊಂಕಣಿಂತ್ ಅಸ್ತುರಿ ಸಾಹಿತ್ಯ್ ಫುಲೊನ್ ಯೇಂವ್ಕ್ ಜಾಯ್” ಮ್ಹಣಾಲೊ. ಶೈಲೇಂದ್ರ ಮೆಹ್ತಾನ್ ’ನವಿ ದಿಶಾ’ ಪುಸ್ತಕಾಚಿ ವಳೊಕ್ ಕರುನ್ “ಬಾಯ್ ಮೊನಿಕಾಚ್ಯಾ ದರೇಕಾ ಕಥೆಂತ್ಲೆ ವಿಶಯ್ ಸಕಾಳಿಕ್ ಜಾವ್ನಾಸಾತ್, ಆನಿ ಹೆ ವಿಶಯ್ ಪ್ರಬುದ್ದ್ ರಿತಿನ್ ಉತ್ರಾಂವ್ಚ್ಯಾ ದಿಶೆನ್ ಥೊಡಿ ಮಿನತ್ ಕೆಲ್ಯಾರ್ ಕೊಂಕಣಿಚ್ಯಾ ಫುಡಾರಾಂತ್ ಏಕ್ ಬರಿ ಲೇಖಿಕಾ ಜಾಂವ್ಚ್ಯಾಂತ್ ದುಭಾವ್ ನಾ” ಮ್ಹಣಾಲೊ.

ತ್ಯೇ ಉಪ್ರಾಂತ್ ಆಶಾವಾದಿ ಪ್ರಕಾಶನಾನ್ ನಾಗರಿ ಲಿಪಿಯೆಕ್ ಲಿಪಿಯಂತರ್ ಕೆಲ್ಲ್ಯಾ ಡಿಜಿಟಲ್ ಪುಸ್ತಕಾಚೆಂ ಮೊಕ್ಳಿಕ್ ಕೆಲ್ಲ್ಯಾ ಬ್ರಾಯನ್ ಮಥಾಯಸಾನ್ “ಆಯ್ಚೊ ದೀಸ್ ಅಂತರ್‌ರಾಶ್ಟ್ರೀಯ್ ಮಟ್ಟಾರ್ ಘೊವಾಂಚೊ ದೀಸ್ ಜಾವ್ನಾಸುನ್, ಮ್ಹಜ್ಯಾ ಪತಿಣೆಚೆಂ ಇ-ಪುಸ್ತಕ್ ಮೊಕ್ಳಿಕ್ ಕರುಂಕ್ ಮ್ಹಾಕಾ ವರ್ತೊ ಸಂತೊಸ್ ತಶೆಂಚ್ ಅಭಿಮಾನ್ ಭಗ್ತಾ” ಮ್ಹಣಾಲೊ. ಬಾಯ್ ಮೊನಿಕಾ ಡೆ’ಸಾನ್ ಅಪ್ಲ್ಯಾ ಉಲವ್ಪಾಂತ್ “ಸಾಹಿತ್ಯಾಚಿ ವೋಡ್ ಮ್ಹಾಕಾ ಭುರ್ಗ್ಯಾಪಣಾರ್ ಆಸ್‌ಲ್ಲಿ ತಶೆಂಚ್ ಮ್ಹಜ್ಯೊ ಸಭಾರ್ ಕಥಾ ಪತ್ರಾಂನಿ ಪರ‍್ಗಟ್ ಜಾಲ್ಲ್ಯೊ ಪುಣ್ ಎಕಾ ಪುಸ್ತಕಾರುಪಾರ್ ಪರ್ಗಟ್ಚೆಂ ಸಪಣ್ ಜ್ಯಾರಿ ಕೆಲ್ಲ್ಯಾ ಆಶಾವಾದಿ ಪ್ರಕಾಶನಾಕ್ ತಶೆಂಚ್ ಪರ್ಗಾಂವಾಕ್ ಪಾವ್‌ಲ್ಲ್ಯಾ ಉಪ್ರಾಂತ್ ಪರತ್ ಲಿಖ್ನಿ ಮುಖಾರುನ್ ವ್ಹರುಂಕ್ ಉತ್ತೇಜನ್ ದಿಲ್ಲ್ಯಾ ಕಿಟಾಳ್ ಜಾಳಿಜಾಗ್ಯಾಕ್ ಅಪ್ಲೆ ಧಿನ್ವಾಸ್” ಮ್ಹಣಾಲಿ.

ತ್ಯೇ ಉಪ್ರಾಂತ್ ಚಲ್‌ಲ್ಲ್ಯಾ ಸಂವಾದ್ ಕಾರ್ಯಾಂತ್ ಉಲವ್ನ್ ತಿಣೆಂ ’ಫೊಟೊಗ್ರಾಫಿ/ಪೆಂಯ್ಟಿಂಗ್ ಆನಿ ಲಿಖ್ಣಿ – ಹ್ಯಾ ದೋನ್ ಹವ್ಯಾಸಾಂ ಪಯ್ಕಿಂತ್ ಅಪ್ಣಾಕ್ ಲಿಖ್ಣಿ ಖಾಯ್ಸ್ ಜಾತಾ’ ಮ್ಹಣಾಲಿ. ಸಂವಾದಾಂತ್ ದೊ|ಆಸ್ಟಿನ್ ಪ್ರಭು, ದೊ|ವಿಲ್ಲಿ ದ’ಸಿಲ್ವಾ, ಕನ್ಸೆಪ್ಟಾ ಫೆರ್ನಾಂಡಿಸ್ ಆಳ್ವ, ಪಾಸ್ಕಲ್ ಲೋಬೊ ಮುಂಬಯ್, ಮೆಲ್ವಿನ್ ರೊಡ್ರಿಗಸ್, ಸ್ಮಿತಾ ಶೆಣಯ್ ಹಾಣಿಂ ವಾಂಟೊ ಘೆತ್ಲೊ.

ಕ್ವೀನಿ ವೇಗಸಾನ್ ಧಿನ್ವಾಸ್ ಪಾಠಯ್ಲೆ. ಸ್ಮಿತಾ ಶೆಣಯ್ನ್ ಹೆಂ ವೆಬಿನಾರ್ ಚಲವ್ನ್ ವ್ಹೆಲೆಂ.

कोंकणिंतल्या अस्तुरी साहित्याचेर राश्ट्रीय मट्टाचें वेबिनार

१९ जून २०२१: आशावादी प्रकाशन मुंबय, कार्मेल कोलेज नुवें-गोंय तशेंच सां|आग्नेस कोलेज मंगळूर हांच्या जोड पालंवाखाल ’कोंकणिंतल्या अस्तुरी साहित्याचेर’ राश्ट्रीय मट्टाचें वेबिनार जून १९ तारिकेर चल्लें. “अस्तुरिचो पात्र फकत कुजनांत न्हय, बगार समाजेंत दादल्याक सरी जावन आस्चो आनी ह्या दिशेन पयलें दरेका अस्तुरेन समजून, अस्तुरिचीं हक्कां, अस्तुरिचीं संवेदनां साहित्यारुपार अभिव्यक्त कर्ची गरज आसा” अशें वेबिनाराचें सुंकाण घेत‌ल्ल्या बेसेंट कोलेजिच्या पत्रिकुध्यम विभागाची मुखेसत कोंकणी कवी/लेखकी बाय स्मिता शेणय हिणें येवकार उलवपांत सांगलें.

कार्मेल कोलेजिच्या प्रिन्सिपाल दो|अलडिना ब्रगांजान उग्तावण उलवपांत “एक समाज विचारांनी मात्र मुकार वेता आनी विचार वाडंवच्या दिशेन साहित्य एक बळवंत हातेर. आज वाचपी उणे जावन येंवच्या काळार, डिजिटल माध्यमाचो थेंको घेवन कोंकणिंतल्या अस्तुरी साहित्याक जोक्तो पाटिंबो दिंवची गर्ज आसा” म्हणाली. उग्तावण संधेशांत भयण दो|वेनिस्सान “कोंकणी आमची आवय‌भास आनी तिचो पोस कर्ची गर्ज आमी सगळ्यांनी पयली समजुंची आनी पाटल्या एका शेकड्या थावन समाजेंत अस्तुरेन सयत मुकार येवन दादल्याक सरी जावन जवाभदारेंत खांद मारला तशें अस्तुरेक साहित्यांत तशेंच दरेका शेतांत मुकलीं पावलां काडची उर्भा आनी प्रेरण लाभुंदी” म्हणाली.

कोंकणिंतलें अस्तुरिंचें ’अ स्तुरी साहित्य’ विश्याचेर एक खोलायेचें अध्ययन प्रबंधाक कर्नाटक कोंकणी साहित्य अकाडेमिची दोन पावटीं पुरसकार जोडपी बाय तारा लवी गंजिमठ हिणें सादर करून गोंय, महाराश्ट्र, केरळ तशेंच कर्नाटकांत साहितीक वावर केल्ल्या अस्तुरी लेखिकांच्या वावराचेर उलवन, “अस्तुरीक दादल्याक समान स्थान-मान लाभाना” म्हणाली.

’नवी दिशा’ कथेचेर एक खोलायेचें विशलेषण प्रबंधाक गोंयच्या बाय उर्जिता भोबेन सादर कर्तच, प्रमूक उलवपी एच्चेम पेर्नाळान ” ’अस्तुरी साहित्य’ एक विसतार विशय. हांगासर अस्तुरेन बरयिल्लें साहित्य तशेंच ’अस्तुरी विश्याचेर बरयिल्लें साहित्य’ सयत महत्वाचें. कोंकणिंत अस्तुरी साहित्य फुलोन येवंक जाय” म्हणालो. शैलेंद्र मेहतान ’नवी दिशा’ पुस्तकाची वळोक करून “बाय मोनिकाच्या दरेका कथेंतले विशय सकाळीक जावनासात, आनी हे विशय प्रबुद्द रितीन उत्रांवच्या दिशेन थोडी मिनत केल्यार कोंकणिच्या फुडारांत एक बरी लेखिका जांवच्यांत दुभाव ना” म्हणालो.

त्ये उपरांत आशावादी प्रकाशनान नागरी लिपियेक लिपियंतर केल्ल्या डिजिटल पुस्तकाचें मोकळीक केल्ल्या ब्रायन मथायसान “आयचो दीस अंतर‌राश्ट्रीय मट्टार घोवांचो दीस जावनासून, म्हज्या पतिणेचें ई-पुस्तक मोकळीक करुंक म्हाका वर्तो संतोस तशेंच अभिमान भग्ता” म्हणालो. बाय मोनिका डे’सान अपल्या उलवपांत “साहित्याची वोड म्हाका भुर्ग्यापणार आस‌ल्ली तशेंच म्हज्यो सभार कथा पत्रांनी पर‍्गट जाल्ल्यो पूण एका पुस्तकारुपार पर्गटचें सपण ज्यारी केल्ल्या आशावादी प्रकाशनाक तशेंच पर्गांवाक पाव‌ल्ल्या उपरांत परत लिखनी मुखारून व्हरुंक उत्तेजन दिल्ल्या किटाळ जाळिजाग्याक अपले धिन्वास” म्हणाली.

त्ये उपरांत चल‌ल्ल्या संवाद काऱ्यांत उलवन तिणें ’फोटोग्राफी/पेंयटिंग आनी लिखणी – ह्या दोन हव्यासां पयकिंत अपणाक लिखणी खायस जाता’ म्हणाली. संवादांत दो|आसटीन प्रभू, दो|विल्ली द’सिलवा, कन्सेपटा फेर्नांडीस आळव, पासकल लोबो मुंबई, मेलवीन रोड्रिगस, स्मिता शेणय हाणीं वांटो घेतलो.

क्वीनी वेगसान धिन्वास पाठयले. स्मिता शेणयन हें वेबिनार चलवन व्हेलें.