HOLY ROSARY CHURCH, KUNDAPUR – 450 th JUBILEE SOUVENIR 2021

ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ದೊರೆಯುವಂತೆ ಮಾಡುವುದು ಪ್ರಥಮ ಆದ್ಯತೆ :ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಮುನಿರತ್ನ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ : ಜಿಲ್ಲೆಯ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಉತ್ತಮವಾದ ಚಿಕಿತ್ಸೆ ದೊರೆಯುವಂತೆ ಮಾಡುವುದು ನನ್ನ ಪ್ರಥಮ ಆದ್ಯತೆಯಾಗಿದ್ದು , ಆಸ್ಪತ್ರೆಗಳಲ್ಲಿ ಅವಶ್ಯಕತೆ ಇರುವ ಮೂಲಭೂತ ಸೌಲಭ್ಯಗಳನ್ನು ಹಾಗೂ ಕೋವಿಡ್ 3 ನೇ ಅಲೆ ಎದರಿಸಲು ಅಗತ್ಯವಿರುವ ಚಿಕಿತ್ಸಕ ಪರಿಕರಗಳನ್ನು ಒದಗಿಸಲಾಗುವುದು ಎಂದು ತೋಟಗಾರಿಕೆ , ಯೋಜನೆ , ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ ಅವರು ತಿಳಿಸಿದರು . ಇಂದು ನಗರದ ಸರ್.ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 75 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು . ಈಗಾಗಲೇ 6 ತಾಲ್ಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ಕುಂದು ಕೊರತೆಗಳನ್ನು ಪಟ್ಟಿ ಮಾಡಿಕೊಂಡಿದ್ದೇನೆ . ಶೀಘ್ರದಲ್ಲಿ ಅವಶ್ಯಕವಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುವುದು . ಜಿಲ್ಲಾ ಎಸ್ , ಎನ್.ಆರ್ ಆಸ್ಪತ್ರೆಯು ಮೈಸೂರು ಮಹಾರಾಜರ ಕಾಲದಲ್ಲಿ ಕಟ್ಟಿದ್ದು , ಇದಕ್ಕೆ ಹೊಸ ರೂಪ ನೀಡಲಾಗುವುದು ಎಂದು ತಿಳಿಸಿದರು . ಮಾಲೂರು ಆಸ್ಪತ್ರೆಗೆ ಕಟ್ಟಡದ ಅವಶ್ಯಕತೆ ಇದ್ದು , ವಿದ್ಯುತ್‌ಚ್ಛಕ್ತಿ ಮಂಡಳಿಗೆ ಸೇರಿದ 10 ಗುಂಟೆ ಜಾಗವನ್ನು ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು . ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಐ.ಸಿ.ಯು ಬೆಡ್‌ಗಳನ್ನು ಹೆಚ್ಚಿಸಲಾಗುವುದು ಮಕ್ಕಳಿಗೆ ಅವಶ್ಯಕತೆ ಇರುವ ವೆಂಟಿಲೇಟರ್‌ಗಳನ್ನು ಒದಗಿಸಲಾಗುವುದು . ಜಿಲ್ಲೆಯ ಜನತೆ ಕೋವಿಡ್‌ನಿಂದ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾದರೆ ಅವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿಯೆ ಎಲ್ಲಾ ರೀತಿಯ ಚಿಕಿತ್ಸೆ ನೀಡುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು . ಕೋಲಾರ ಜಿಲ್ಲೆಯ ರೈತರು ಬೆಳೆದ ಕೃಷಿ ಉತ್ಪನ್ನಗಳು ಹಾಗೂ ತರಕಾರಿಗಳಿಗೆ ಉತ್ತಮ ಬೆಲೆ ದೊರೆಯುವಂತೆ ಕ್ರಮ ವಹಿಸಲಾಗುವುದು . ರಾಜ್ಯದಲ್ಲಿ ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್ ಬಿಟ್ಟರೆ ಬೇರೆ ದೊಡ್ಡ ಉದ್ಯಾನವನಗಳಿಲ್ಲ . 3 ನೇ ದೊಡ್ಡ ಉದ್ಯಾನವನವನ್ನು ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರದಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು . ಆಕರ್ಷಕ ಪಥಸಂಚಲನದಲ್ಲಿ 6 ತಂಡಗಳಾದ ಡಿ.ಆರ್.ಪೋಲೀಸ್ ತಂಡ , ಉಪ ವಿಭಾಗ ಪೋಲೀಸ್ ತಂಡ ಕೋಲಾರ , ಉಪ ವಿಭಾಗ ಪೋಲೀಸ್ ತಂಡ ಮುಳಬಾಗಿಲು , ಜಿಲ್ಲಾ ಮಹಿಳಾ ಪೊಲೀಸ್ ತಂಡ , ಪುರುಷ ಗೃಹ ರಕ್ಷಕದಳ ತಂಡ ಹಾಗೂ ಮಹಿಳಾ ಗೃಹ ರಕ್ಷಕ ದಳ ತಂಡಗಳು ಭಾಗವಹಿಸಿದ್ದವು . ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಉತ್ತಮ ಸಾಧನೆ ಮಾಡಿದ ಆಸ್ಪತ್ರೆಗಳಾದ ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆ , ಸಾರ್ವಜನಿಕ ಆಸ್ಪತ್ರೆ ಶ್ರೀನಿವಾಸಪುರ , ಸಾರ್ವಜನಿಕ ಆಸ್ಪತ್ರೆ ಕೆ.ಜಿ.ಎಫ್ , ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ಶ್ರೀನಿವಾಸಪುರ ತಾಲ್ಲೂಕಿನ ಮುತ್ತಕಪಲ್ಲಿ , ಕೋಲಾರ ತಾಲ್ಲೂಕಿನ ಅಣ್ಣೆಪಳ್ಳಿ , ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ , ಮುಳಬಾಗಿಲು ತಾಲ್ಲೂಕಿನ ಉತ್ತನೂರು , ಕೆ.ಜಿ.ಎಫ್ ತಾಲ್ಲೂಕಿನ ಅಂಡರ್ ಸನ್ ಪೇಟೆ , ಮಾಲೂರು ತಾಲ್ಲೂಕಿನ ದೊಡ್ಡ ಶಿವಾರ ಹಾಗೂ ಖಾಸಗಿ ಆಸ್ಪತ್ರೆಯಾದ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ಪ್ರಶಸ್ತಿ ಪ್ರಮಾಣ ಪತ್ರ ಸಚಿವರು ನೀಡಿದರು . ಕೋವಿಡ್ -19 ಸಂದರ್ಭದಲ್ಲಿ ಉತ್ತಮ ಸಾಧನೆ ಮಾಡಿದ ಆರೋಗ್ಯ ಇಲಾಖೆ , ಜಿಲ್ಲಾ ನಗರಾಭಿವೃದ್ಧಿ ಕೋಶದ ವತಿಯಿಂದ ಪೌರ ಕಾರ್ಮಿಕರಿಗೆ , ಪೊಲೀಸ್ ಇಲಾಖೆ , ಗೃಹ ರಕ್ಷಕ ದಳ , ಭಾರತ್ ಸ್ಟೇಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಪುರಸ್ಕಾರ ಪಡೆದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳನ್ನು ಗಳಿಸಿದ ಇಬ್ಬರು ವಿದ್ಯಾರ್ಥಿಗಳಿಗೆ ಹಾಗೂ ಕೋವಿಡ್ -19 ಸೋಂಕಿಗೆ ಒಳಪಟ್ಟು ಗುಣಮುಖರಾದ ಹಿರಿಯರಿಗೆ ಸಚಿವರು ಸನ್ಮಾನಿಸಿದರು . ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕಗಳಿಸಿ ಜಿಲ್ಲೆಗೆ ಕೀರ್ತಿ ತಂದ ಇಬ್ಬರು ವಿದ್ಯಾರ್ಥಿಗಳಿಗೆ ಲಾಪ್‌ಟಾಪ್ ನೀಡುವುದಾಗಿ ತಿಳಿಸಿದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀನಿವಾಸಗೌಡ ಅವರು ವಹಿಸಿದ್ದರು . ಕಾರ್ಯಕ್ರಮದಲ್ಲಿ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ , ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ , ಇಂಚರ ಗೋವಿಂದರಾಜು , ನಗರಸಭೆ ಅಧ್ಯಕ್ಷರಾದ ಶ್ವೇತಾಶಬರೀಶ್ , ಜಿಲ್ಲಾಧಿಕಾರಿಗಳಾದ ಆರ್.ಸೆಲ್ವಮಣಿ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡೆಕ್ಕಾ ಕಿಶೋರ್ ಬಾಬು , ಅಪರ ಜಿಲ್ಲಾಧಿಕಾರಿಗಳಾದ ಡಾ || ಸ್ನೇಹಾ ಸೇರಿದಂತೆ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು .

ಕ್ಷೇತ್ರದ ಜನರ ಸಹಕಾರ ಅಶೀರ್ವಾದ ಪ್ರೀತಿ ವಿಶ್ವಾಸವನ್ನು ಗಳಿಸಿ ಕ್ಷೇತ್ರವನ್ನು ಅಭಿವೃದ್ದಿಯನ್ನು ಮಾಡುತ್ತೇನೆ: ಗುಂಜೂರು ಆರ್.ಶ್ರೀನಿವಾಸ ರೆಡ್ಡಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ; ಈ ಕ್ಷೇತ್ರದ ಜನರ ಸಹಕಾರ ಅವರ ಅಶೀರ್ವಾದ ಪ್ರೀತಿ ವಿಶ್ವಾಸವನ್ನು ಗಳಿಸಿ ಈ ಕ್ಷೇತ್ರದ ಅಭಿವೃದ್ದಿಯನ್ನು ಮಾಡುತ್ತೇನೆ ನನಗೆ ಸಹಕಾರ ನೀಡ ಬೇಕೆಂದು ಸಮಾಜ ಸೇವಕ ಗುಂಜೂರು ಆರ್.ಶ್ರೀನಿವಾಸರೆಡ್ಡಿ ತಿಳಿಸಿದರು.
ಪಟ್ಟಣದ ಬೀದಿ ವ್ಯಾಪಾರಸ್ಥರಿಗೆ, ಛೆತ್ರಿ ಸರ್ಕಾರಿ ಅಸ್ವತ್ರೆ, ಪೋಲೀಸ್ ಇಲಾಖೆಗೆ, ತಾಲ್ಲೂಕು ಕಛೇರಿಯ ಸಿಬ್ಬಂದಿಗೆ, ಮಾಸ್ಕ್, ಸ್ಯಾನಿಟೈಜರ್ ವಿತರಿಸಿ ಹಾಗೆಯೇ ಎಸ್‍ಎಸ್‍ಎಲ್‍ಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಹೊಸಹಳ್ಳಿ ಗ್ರಾಮದ ರೈತ ಕೃಷ್ಣಾರೆಡ್ಡಿ ಮಗಳಾದ ಕೆ. ಪೂರ್ವಿ 625 ಅಂಕ ಗಳಿಸಿ ರಾಜ್ಯಕ್ಕೆ ಮೊದಲಾಗಿ ಒಳ್ಳೆಯ ಕೀರ್ತಿ ಬೆಳಗಿದ್ದಾಳೆ ಈ ವಿದ್ಯಾರ್ಥಿಗೆ 20 ಸಾವಿರ ಪ್ರೋತ್ಸಹವನ್ನು ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಶ್ರೀನಿವಾಸರೆಡ್ಡಿ ಈ ಕ್ಷೇತ್ರದ ಅಭಿವೃದ್ದಿಗೆ ಅಗಲಿರಳು ಶ್ರಮಿಸಲು ನನಗೆ ಸಹಕಾರ ನೀಡಬೇಕು ನಿಮ್ಮ ಮನೆಯ ಮಗನಂತೆ ಬಾವಿಸಿ ನನಗೆ ಅಶೀರ್ವಾದ ಮಾಡಿ ನಿಮ್ಮ ಸೇವೆ ಮಾಡಲು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸುತ್ತೇನೆ. ಸಾರ್ವಜನಿಕರು ಸಹಕಾರ ನೀಡಬೇಕು ಕಳೆದ 40 ವರ್ಷಗಳಿಂದ ಸ್ವಾಮಿ ರೆಡ್ಡಿಗೆ ಆಶೀರ್ವಾದ ಮಾಡಿದ್ದೀರಿ ಈ ಭಾರಿ ಮುಂದಿನ ವಿಧಾನ ಸಭೆಗೆ ಆಯ್ಕೆಯಾಗಲು ತಾಲ್ಲೂಕಿನ ಜನತೆ ಸಹಕಾರ ನೀಡಬೇಕು ನಿಮ್ಮ ಸೇವೆ ಮಾಡಲು ಸದಾ ಇರುತ್ತೇನೆ ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿಯೇ ಸ್ವಂತ ಮನೆಯನ್ನು ಮಾಡಿ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ ಎಂದರು.
ಕಳೆದ 2 ತಿಂಗಳಿಂದ ಅನೇಕ ಮುಖಂಡರನ್ನು ಬೇಟಿ ಮಾಡಿದ್ದೇನೆ ಅವರ ಆಶೀರ್ವಾದ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಹಲವಾರು ಈ ಭಾಗದ ಹಿರಿಯರು ನಿಮಗೆ ಸಹಕರಿಸುತ್ತೇವೆ ಎಂದು ಅಶ್ವಾಸನೆಯನ್ನು ನೀಡಿದ್ದಾರೆ. ಈ ಕ್ಷೇತ್ರದ ಜನತೆ ನನಗೆ ಅವಕಾಶ ನೀಡಬೇಕೆಂದು ಕೋರಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರಾಜಶೇಖರೆಡ್ಡಿ ಮಾತನಾಡಿ ನಾನು ಈಗಾಗಲೇ ಜೆಡಿಎಸ್ ಪಕ್ಷದಿಂದ ಹೊರಬಂದಿದ್ದೇನೆ ನಮ್ಮ ಅತ್ಮೀಯ ಸ್ನೇಹಿತ ಸಮಾಜ ಸೇವಕರಾದ ಶ್ರೀನಿವಾಸರೆಡ್ಡಿ ಸಮಾಜ ಸೇವೆ ಮಾಡುವ ಮೂಲಕ ಪಾದಾರ್ಪಣೆ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಅವರಿಗೆ ಬೆನ್ನೇಲುಬಾಗಿ ಕೆಲಸ ಮಾಡುತ್ತೇವೆ. ಈ ಕ್ಷೇತ್ರದಾಂತ್ಯ ಹೋರಾಡಿ ಅವರ ಕೈಬಲಪಡಿಸುವ ಕೆಲಸ ಮಾಡುತ್ತೇವೆ. ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ. ನಾವು ನೀವು ಎಲ್ಲರೂ ಸೇರಿ ವಿಧಾನಸೌಧಕ್ಕೆ ಶಾಸಕರಾಗಿ ಕಳುಹಿಸಿಕೊಡಬೇಕು ಅವರ ಗೆಲುವಿಗಾಗಿ ಅಗಲಿರಳು ಶ್ರಮಿಸೋಣ ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೀಳಿಸುವ ಕೆಲಸ ಮಾಡುತ್ತೇವೆ. ಈ ಚುನಾವಣೆಯಿಂದಲೇ ಸಂಕ್ರಿಯವಾಗಿ ತಾಲ್ಲೂಕಿನಾಂದ್ಯಂತ ಹೋರಾಡಿ ಇವರನ್ನು ಗೆಲ್ಲಿಸಿ ಕಳುಹಿಸುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಗೊಲ್ಲಪಲ್ಲಿ ಪ್ರಸನ್ನ, ಎಂ.ಟಿ.ಎಸ್. ಸುಬ್ರಮಣಿ, ವಕೀಲ ನರಸಿಂಹರಾಜು, ಸುನಿಲ್, ನಂಬಿಹಳ್ಳಿ ಮಹೇಶ್, ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು.

ಜಾಪ್ ಮೆಳಾತ್ ಗೀ (ಸ್ವಾತಂತ್ರ ವಿಶಿಂ ಕವನ್) ಜೊಸೇಪ್ ಲುವಿಸ್ ಸಾಸ್ತಾನ್.

ಸ್ವತಂತ್ರ್ ಭಾರತ್ ಮ್ಹುಜಾ
ತುಜ್ಯಾ ಗರ್ಭಾಂತ್ ಹಾಂವ್ ಶಾಬಿತ್ ಆಸಾ
ಕಷ್ಟಾಂ ಅನ್ವರಾಂನಿ ,ಮ್ಹಾಕಾ ರಾಕೋನ್ ಆಸಾಯ್
ದಿಸ್ಪೊಡ್ತೊ ಗ್ರಾಸ್ ಜೊಡುಂಕ್ ಮ್ಹಾಕಾ ಆಧಾರ್ ದಿತಾಯ್
ಪ್ರಕ್ರತೆಚಾ ಅನ್ವಾರಾಂನಿ ಮ್ಹಾಕಾ ಸಾಂಭಾಳ್ನ್ ಧರ್ತಾಯ್|


ದುಬ್ಳೊ ಲೋಕ್ ಪೊಟಾಚೊ ಗ್ರಾಸ್ ಆಶೆತಾ
ಚಡ್ಲಿಂ ಮೊಲಾಂ ದೆವೊಂಕ್ ಸೊಪ್ಣೆತಾ
ಲಡಾಯ್, ಝಗ್ಡೆಂ ಥಾಂವ್ನ್ ಶಾಂತಿ ಆಶೆತಾ
ಪರಿಸರ್ ನಿತಳ್ ಆಸೊನ್ ಸ್ವಾಸ್ ಸೊಡುಂಕ್ ಆಂವ್ಡೆತಾ
ನಿರ್ಮೊಳ್ ತಾಂಚಾ ಘರಾಂತ್ ವಸ್ತಿ ಕರುಂಕ್ ಲಾಲೆತಾ|


ಪೈಶಾಂ ಖಾತಿರ್ ದುಬ್ಳ್ಯಾಂಚಿ ಹಕ್ಕಾಂ ಮೊಡ್ತಾತ್
ತಾಂಚಿ ಆಸ್ತ್ ಬದಿಕ್ ದೆಸ್ವಾಟ್ ಕರ್ನ್ ವಾಟೇರ್ ಘಾಲ್ತಾತ್
ನಿರಾಫ್ರಾದಿ ಚಲಿಯಾಂಚೆರ್ ಅತ್ಯಾಚಾರ್ ಕರ್ತಾತ್
ನೀತ್ ವಿಚಾಲ್ಯಾರ್ ಮಾರ್ನ್ ಜೈಲಾಂತ್ ಬೊಸಯ್ತಾತ್
ಕಾಮಾ ನಾಸ್ತಾನಾ ಪೊಟಾ ಭುಕೇನ್ ಸದಾಂ ಮೊರ್ತಾತ್ |


ರಾಷ್ಟ್ರಾಚಾ ಅಧಿಕಾರಿಂ ಖಾತಿರ್ ಕೊರೊಡಾಂನಿ ಖರ್ಚಿತಾತ್
ತ್ಯಾ ಪೈಶಾಂ ಖಾತಿರ್ ದುಬ್ಳ್ಯಾಂಚೆ ರಗಾತ್ ಪಿಳ್ತಾತ್
ಅಧಿಕಾರಿ ಪೈಶಾಂಚಾ ಹಂಕಾರಾನ್ ಗರ್ವಾನ್ ಭೊರ್ತಾತ್
ಭ್ರಷ್ಠಾಚಾರ್ ಲಂಚ್ ಘೆವ್ನ್ ಕೊರೊಡಾಂನಿ ಲುಟ್ತಾತ್
ರಾಜಕೀಯ್ ಖಾತೀರ್ ದುಬ್ಳ್ಯಾಂಚೆ ರಗಾತ್ ಮಸ್ತೇನ್ ವ್ಹಾಳೆಯ್ತಾತ್|


ತರ್ ಮ್ಹುಜ್ಯಾ ಸ್ವತಂರ್ತ್ ಭಾರತ್ ಮಾತಾ
ಅತಾಂಯ್ ತುಂ ನೀಜ್ ಸ್ವತಂರ್ತ್ ಜಾವ್ನ್ ಆಸಾಯ್ ಗೀ……?
ತ್ಯಾ ದೀಸ್ ಸ್ವತಂರ್ತ್ ಜಾತಾನಾಂ ಆಶೆಲ್ಲೆಂ ಸ್ವಪಾಣ್ ತುಜೆಂ ಜ್ಯಾರಿ ಜಾಲೆಂ ಗೀ…..?
ನವೊ ಸರ್ಕಾರ್ ಏವ್ನ್ ದುಬ್ಳ್ಯಾಂಕ್ ಕಿತೆಂ ಬರೆಂ ಕೆಲೆಂ…..?|
ತರ್ ದುಬ್ಳ್ಯಾಂಚಿಂ ಹಕ್ಕಾಂ , ದುಃಖಾಂ
ಕೆದಾಳಾ ತುಂ ಪುಸುನ್ ಕಾಡ್ತಾಯ್
ಜಾಪ್ ಮೆಳಾತ್ ಗೀ…..,?
ಮ್ಹುಜ್ಯಾ ಸ್ವತಂರ್ತ್ ಭಾರತ್ ಮಾತಾ
ತುಜ್ಯಾ ಗರ್ಭಾಂತ್ಲ್ಯಾ ಲೊಕಾಂಕ್
ಮುಕ್ತೀ ಮೆಳಾತ್ ಗೀ…..?
ಮ್ಹುಜ್ಯಾ ಭಾರತ್ ಮಾತಾ.


✍️ಜೊಸೇಪ್ ಲುವಿಸ್ ಸಾಸ್ತಾನ್.

ಕುಂದಾಪುರ ಚರ್ಚ್ ಮೈದಾನದಲ್ಲಿ 75 ನೇಯ ಸ್ವಾತಂತ್ರ್ಯ ದಿನಾಚರಣೆ

JANANUDI.COM NETWORK

ಕುಂದಾಪುರ,ಅ.15: ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದ ವತಿಯಿಂದ ಕುಂದಾಪುರ ಹೋಲಿ ರೋಜರಿ ಮಾತಾ ಇಗರ್ಜಿಯ ಮೈದಾನದಲ್ಲಿ, 75 ನೇಯ ಸ್ವಾತಂತ್ರ್ಯತ್ರ್ಸೋವವನ್ನು ಆಚರಿಸಿಲಾಯಿತು.
ಮಾಜಿ ಕುಂದಾಪುರ ಪುರಸಭೆಯ ಉಪಾಧ್ಯಕ್ಷೆ ಲಿಯೊನಿಲ್ಲಾ ಕ್ರಾಸ್ಟೊ ಗೌರವ ಸ್ವೀಕರಿಸಿ ಧ್ವಜಾ ರೋಹಣಗೈದು ‘ನಮ್ಮ ಹಿರಿಯರು ಪ್ರಾಣ ತ್ಯಾಗ ಕಷ್ಟದಿಂದ ಸ್ವಾತಂತ್ರವನ್ನು ಗಳಿಸಿಕೊಟ್ಟಿದ್ದು ನಾವು ಸದಾ ನೆನಪಿನಲ್ಲಿ ಇಟ್ಟು ಕೊಳ್ಳಬೇಕು ಎಂದು, ಅವರು ಅಮ್ರತೋತ್ಸವ ಸ್ವಾತಂತ್ರ ದಿನಾಚರಣೆಯ ಶುಭ ಕೋರಿದರು. ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಎಲ್ಲರಿಗೂ ಗೌರವ ಕೊಟ್ಟು ಬಾಳೋಣ ಎಂದು ಸಂದೇಶ ನೀಡಿದರು
ಸಹಾಯಕ ಧರ್ಮಗುರು ವಂ| ವಿಜಯ್ ಡಿಸೋಜಾ, ಪಾಲನ ಮಂಡಳಿ ಉಪಧ್ಯಾಕ್ಷ ಲುವಿಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಕಥೊಲಿಕ್ ಸಭಾದ ನಿಯೋಜಿತೆ ಅಧ್ಯಕ್ಷೆ ಜೂಲಿಯೆಟ್ ಪಾಯ್ಸ್, ನಿರ್ಗಮನ ಅಧ್ಯಕ್ಷ ವಾಲ್ಟರ್ ಡಿಸೋಜಾ, ಪದಾಧಿಕಾರಿಗಳಾದ ವಿನೋದ್ ಕ್ರಾಸ್ಟೊ, ವಿಲ್ಸನ್ ಡಿ ಆಲ್ಮೇಡಾ, ಮೈಕಲ್ ಗೊನ್ಸಾಲ್ವಿಸ್, ಜೋನ್ ಮಾಸ್ಟರ್, ಮತ್ತು ಕಾರ್ಯಕ್ರಮದ ಸಂಚಾಲಕಿ ಶೈಲಾ ಡಿಆಲ್ಮೇಡಾ ಇನ್ನಿತರರು ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ ಸ್ವಾಗತಿಸಿದರು, ಕಾರ್ಯದರ್ಶಿ ಆಲ್ಡ್ರಿನ್ ಡಿಸೋಜಾ ವಂದಿಸಿದರು, ಡಾ|ಸೋನಿ ಡಿಕೋಸ್ತಾ ನಿರೂಪಿಸಿದರು
.

ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ದೇವಾಲಯದ ವತಿಯಿಂದ 625 ಅಂಕ ಪಡೆದ ಶ್ರೇಯಾಳಿಗೆ ಸನ್ಮಾನ

JANANUDI.COM NETWORK

2020-21 ನೇ ಸಾಲಿನ ಕರ್ನಾಟಕ ರಾಜ್ಯ ಎಸ್.ಎಸ್.ಎಲ್.ಸಿ. ಪರೀಕ್ಷೇಯಲ್ಲಿ 625 ರಲ್ಲಿ 625 ಅಂಕ ಪಡೆದು ಗಂಗೊಳ್ಳಿಯ ಇತಿಹಾಸದಲ್ಲಿ ಅವಿಸ್ಮರಣೀಯ ಸಾಧನೆಗೈದ ಸ್ಟೆಲ್ಲಾ ಮಾರಿಸ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕು.ಶ್ರೇಯಾ ಮೇಸ್ತಾರವರನ್ನು ಅಗೋಸ್ತ್ 14 ರಂದು ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ದೇವಾಲಯದ ವತಿಯಿಂದ ಅವರ ಮನೆಗೆ ತೆರಳಿ ಸನ್ಮಾನಿಸಲಾಯಿತು. ಶ್ರೇಯಾಳ ಜೊತೆ ಜನಿಸಿದ ಅವಳ ಅವಳಿ ತಮ್ಮ ಸಂಜಯ್ ಸಂಜಯ್ 96% ಶೇಕಡಾ ಅಂಕವನ್ನು ಪಡೆದಿದ್ದನು ಅವನನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಸನ್ಮಾನದ ವೇಳೆ ಇವರ ಹೆತ್ತವರಾದ ಪುರುಷೋತಮ ಮೇಸ್ತ ಪವಿತ್ರ ಮೇಸ್ತ ಹಾಜರಿದ್ದರು.

ದೇವಾಲಯದ ಧರ್ಮಗುರುಗಳು ವಂದನೀಯ ಫಾದರ್ ತೊಮಸ್ ರೊಶನ್ ಡಿಸೊಜ ಶುಭಾಶಯದ ಮಾತುಗಳನ್ನಾಡಿ ಅಭಿನಂದಿಸಿದರು. ಗಂಗೊಳ್ಳಿ ಕಾನ್ವೆಂಟಿನ ಸುಪಿರಿಯರ್ ಭಗಿನಿ ಜ್ಯೊತಿ ಎ.ಸಿ. ಭಗಿನಿ ಮುಖ್ಯೋಪಾಧ್ಯಾಯಿನಿ ಕ್ರೆಸೆನ್ಸ್ ಎ.ಸಿ. ಮತ್ತು ದೇವಾಲಯದ ಪಾಲನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಅಂತರ್ಲಾ: ವೆರೊನಿಕಾ ಡಿ’ಅಲ್ಮೇಡಾ, ಕುಂದಾಪುರ್ ( ಹೆರಿಕುದ್ರು)

JANANUDI.COM NETWORK

ವೆರೊನಿಕಾ ಡಿ’ಅಲ್ಮೇಡಾ, 83ವರ್ಸಾಂ,ಕುಂದಾಪುರ್ ( ಹೆರಿಕುದ್ರು)

ಪತಿಣ್ ಜಾಕಿ ಅಲ್ಮೆಡಾಚಿ,


ಆಜ್ (13/08/21) ದೆವಾದೀನ್ ಜಾಲಿ. ತಿಚಿ ಮರ್ಣಾಚಿ ರೀತ್ ಫಾಲ್ಯಾ (14/8/21) ಘರಾ ಥಾವ್ನ್ (ಸಾಂ ಬಸ್ತ್ಯಾಂವ್ ವಾಡೊ) ಆನಿ 4:00 ವರಾರ್ ಇಗರ್ಜೆಂತ್ ಚಲ್ತೆಲಿ.


ಫೋನ್: 944850438
1

ಕೋವಿಡ್ 3 ನೇ ಅಲೆ ಬರುವ ಮುನ್ನ ಅಗತ್ಯ ಮುನ್ನೆಚ್ಚರಿಕೆ ವಹಿಸಿ – ಸಚಿವ ಮುನಿರತ್ನ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ : ಹತ್ತು ದಿನಗಳೊಳಗಾಗಿ ಕೊವಿಡ್ ವಾರ್ ರೂಂನ್ನು ನಿರ್ಮಿಸಿ ಮಕ್ಕಳಲ್ಲಿ ಯಾವುದೇ ಚಿಕಿತ್ಸೆ ತೊಂದರೆ ಯಾಗದಂತೆ ಚಿಕಿತ್ಸೆ ನೀಡಬೇಕು . ಆಸ್ಪತ್ರೆಯಲ್ಲಿ ಹಾಸಿಗೆಗಳ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ತೋಟಗಾರಿಕೆ , ಯೋಜನೆ ಮತ್ತು ಸ್ಯಾಂಖಿಕ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ ಅವರು ಸೂಚಿಸಿದರು . ಇಂದು ಶ್ರೀನಿವಾಸಪುರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ನಡೆಸಿ ಮಾತನಾಡಿ , 3 ನೇ ಅಲೆಯಿಂದ ಸಂಕಷ್ಟಕ್ಕಿಡಾಗದೆ ಐಸಿಯು ಹಾಸಿಗೆಗಳು , ವೆಂಟಿಲೇಟರ್ , ಪೈಪ್ ಲೈನ್ ಆಕ್ಸಿಜನ್ ಮತ್ತಿತರ ಸೌಲಭ್ಯಗಳ ಬಗ್ಗೆ ಅವರು ಪರಿಶೀಲನೆ ಮಾಡಿ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದು ಆಸ್ಪತ್ರೆ ಹಾಗೂ ಕೋವಿಡ್ ವಾರ್ ರೂಂನಲ್ಲಿರುವ ಕೊರತೆ ಮತ್ತು ಆಸ್ಪತ್ರೆಗಳಲ್ಲಿರುವ ಕೊರತೆ ಬಗ್ಗೆ ಮಾಹಿತಿ ಪಡೆದುಕೊಂಡರು . ಕೋವಿಡ್ ಸಂಭಾವ್ಯ 3 ನೇ ಅಲೆ ಬರುವ ಮುನ್ನವೇ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು , ಮಕ್ಕಳ ಆರೋಗ್ಯವನ್ನು ಕಾಪಾಡುವ ಬಗ್ಗೆ ವಿಶೇಷ ಗಮನ ಹರಿಸಬೇಕು . ಮಕ್ಕಳಿಗೆ ಪಾಸಿಟಿವ್ ಬಂದ ತಕ್ಷಣ ಚಿಕಿತ್ಸೆ ಪ್ರಾರಂಭ ಮಾಡಿ ವೇಗವಾಗಿ ಕೋವಿಡ್ ನಿಯಂತ್ರಣ ಮಾಡಲಾಗುವುದು ಎಂದು ಅವರು ತಿಳಿಸಿದರು . ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಆಸ್ಪತ್ರೆಗಳಲ್ಲಿ 3 ನೇ ಅಲೆಯನ್ನು ನಿಯಂತ್ರಣ ಮಾಡಲು ಬೇಕಾದ ಎಲ್ಲಾ ಸಲಕರಣೆಗಳನ್ನು ಒದಗಿಸುವುದು . ಕೋವಿಡ್ 3 ನೇ ಅಲೆಯಲ್ಲಿ ತಜ್ಞರ ವರದಿ ಪ್ರಕಾರ ಮಕ್ಕಳ ಮೇಲೆ ಎಷ್ಟು ಪರಿಣಾಮ ಬೀರುತ್ತದೆ . ಆ ಮಕ್ಕಳ ಮೇಲೆ ಪರಿಣಾಮ ಬೀರದಿರುವುದಕ್ಕೆ ನೀವು ಏನು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿರಾ . ಎಷ್ಟು ಮಕ್ಕಳಿಗೆ ಬೆಡ್‌ಗಳ ವ್ಯವಸ್ಥೆ ಇದೆ ಎಂದು ಆರೋಗ್ಯ ಅಧಿಕಾರಿಗಳನ್ನು ಕೇಳಿ ಮಾಹಿತಿ ಪಡೆದುಕೊಂಡರು , ಆಸ್ಪತ್ರೆಯಲ್ಲಿ ಸಂಪೂರ್ಣವಾಗಿ ಆಸಕ್ತಿ ವಹಿಸಿ ಕೆಲಸ ನಿರ್ವಹಿಸಬೇಕು . ನಾವು ಮಾಡುವ ಕೆಲಸ ಜನರ ಜೀವನವನ್ನು ಕೆಲಸವಾಗಬೇಕು ತಿಳಿಸಿದರು . ಆಸ್ಪತ್ರೆಯ ಸಿಬ್ಬಂದಿಗಳ ಮತ್ತು ಔಷಧಿ ಕೊರತೆಯಾಗದಂತೆ ನೋಡಿಕೊಳ್ಳಬೇಕು . ಮಕ್ಕಳ ಆರೋಗ್ಯದ ಬಗ್ಗೆ ನಿರಂತರ ನಿಗಾ ವಹಿಸಬೇಕು . ಈಗ ಇರುವ 100 ಹಾಸಿಗಳ ಜೊತೆಗೆ 25 ಹಾಸಿಗೆಳ ಬೆಡ್‌ಗಳನ್ನು ಹೆಚ್ಚಿಸಲಾಗುವುದು . ಮಕ್ಕಳಿಗಾಗಿ 5 ವೆಂಟಿಲೇಟರ್ , ವಯಸ್ಕರ 5 ವೆಂಟಿಲೇಟರ್‌ಗಳ ಪೈಪ್ ಲೈನ್‌ಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು . ಈ ಸಂದರ್ಭದಲ್ಲಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ರಮೇಶ್ ಕುಮಾರ್ , ಜಿಲ್ಲಾಧಿಕಾರಿಗಳಾದ ಡಾ || ಆರ್.ಸೆಲ್ವಮಣಿ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್ , ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂ ಶ್ರೀನಿವಾಸ್, ಬಿ ಜೆ ಪಿ ಜಿಲ್ಲಾ ಅಧ್ಯಕ್ಷ ಡಾ ವೇಣುಗೋಪಾಲ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


ಕ್ಷೇತ್ರದ ಜನರ ಸಹಕಾರ,ಅಶೀರ್ವಾದ ಪ್ರೀತಿ ವಿಶ್ವಾಸವನ್ನು ಗಳಿಸಿ ಈ ಕ್ಷೇತ್ರದ ಅಭಿವೃದ್ದಿಯನ್ನು ಮಾಡುತ್ತೇನೆ:ಗುಂಜೂರು ಆರ್.ಶ್ರೀನಿವಾಸರೆಡ್ಡಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಈ ಕ್ಷೇತ್ರದ ಜನರ ಸಹಕಾರ ಅವರ ಅಶೀರ್ವಾದ ಪ್ರೀತಿ ವಿಶ್ವಾಸವನ್ನು ಗಳಿಸಿ ಈ ಕ್ಷೇತ್ರದ ಅಭಿವೃದ್ದಿಯನ್ನು ಮಾಡುತ್ತೇನೆ ನನಗೆ ಸಹಕಾರ ನೀಡ ಬೇಕೆಂದು ಸಮಾಜ ಸೇವಕ ಗುಂಜೂರು ಆರ್.ಶ್ರೀನಿವಾಸರೆಡ್ಡಿ ತಿಳಿಸಿದರು.
ಪಟ್ಟಣದ ಬೀದಿ ವ್ಯಾಪಾರಸ್ಥರಿಗೆ, ಛೆತ್ರಿ ಸರ್ಕಾರಿ ಅಸ್ವತ್ರೆ, ಪೋಲೀಸ್ ಇಲಾಖೆಗೆ, ತಾಲ್ಲೂಕು ಕಛೇರಿಯ ಸಿಬ್ಬಂದಿಗೆ, ಮಾಸ್ಕ್, ಸ್ಯಾನಿಟೈಜರ್ ವಿತರಿಸಿ ಹಾಗೆಯೇ ಎಸ್‍ಎಸ್‍ಎಲ್‍ಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಹೊಸಹಳ್ಳಿ ಗ್ರಾಮದ ರೈತ ಕೃಷ್ಣಾರೆಡ್ಡಿ ಮಗಳಾದ ಕೆ. ಪೂರ್ವಿ 625 ಅಂಕ ಗಳಿಸಿ ರಾಜ್ಯಕ್ಕೆ ಮೊದಲಾಗಿ ಒಳ್ಳೆಯ ಕೀರ್ತಿ ಬೆಳಗಿದ್ದಾಳೆ ಈ ವಿದ್ಯಾರ್ಥಿಗೆ 20 ಸಾವಿರ ಪ್ರೋತ್ಸಹವನ್ನು ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಶ್ರೀನಿವಾಸರೆಡ್ಡಿ ಈ ಕ್ಷೇತ್ರದ ಅಭಿವೃದ್ದಿಗೆ ಅಗಲಿರಳು ಶ್ರಮಿಸಲು ನನಗೆ ಸಹಕಾರ ನೀಡಬೇಕು ನಿಮ್ಮ ಮನೆಯ ಮಗನಂತೆ ಬಾವಿಸಿ ನನಗೆ ಅಶೀರ್ವಾದ ಮಾಡಿ ನಿಮ್ಮ ಸೇವೆ ಮಾಡಲು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸುತ್ತೇನೆ. ಸಾರ್ವಜನಿಕರು ಸಹಕಾರ ನೀಡಬೇಕು ಕಳೆದ 40 ವರ್ಷಗಳಿಂದ ಸ್ವಾಮಿ ರೆಡ್ಡಿಗೆ ಆಶೀರ್ವಾದ ಮಾಡಿದ್ದೀರಿ ಈ ಭಾರಿ ಮುಂದಿನ ವಿಧಾನ ಸಭೆಗೆ ಆಯ್ಕೆಯಾಗಲು ತಾಲ್ಲೂಕಿನ ಜನತೆ ಸಹಕಾರ ನೀಡಬೇಕು ನಿಮ್ಮ ಸೇವೆ ಮಾಡಲು ಸದಾ ಇರುತ್ತೇನೆ ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿಯೇ ಸ್ವಂತ ಮನೆಯನ್ನು ಮಾಡಿ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ ಎಂದರು.
ಕಳೆದ 2 ತಿಂಗಳಿಂದ ಅನೇಕ ಮುಖಂಡರನ್ನು ಬೇಟಿ ಮಾಡಿದ್ದೇನೆ ಅವರ ಆಶೀರ್ವಾದ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಹಲವಾರು ಈ ಭಾಗದ ಹಿರಿಯರು ನಿಮಗೆ ಸಹಕರಿಸುತ್ತೇವೆ ಎಂದು ಅಶ್ವಾಸನೆಯನ್ನು ನೀಡಿದ್ದಾರೆ. ಈ ಕ್ಷೇತ್ರದ ಜನತೆ ನನಗೆ ಅವಕಾಶ ನೀಡಬೇಕೆಂದು ಕೋರಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರಾಜಶೇಖರೆಡ್ಡಿ ಮಾತನಾಡಿ ನಾನು ಈಗಾಗಲೇ ಜೆಡಿಎಸ್ ಪಕ್ಷದಿಂದ ಹೊರಬಂದಿದ್ದೇನೆ ನಮ್ಮ ಅತ್ಮೀಯ ಸ್ನೇಹಿತ ಸಮಾಜ ಸೇವಕರಾದ ಶ್ರೀನಿವಾಸರೆಡ್ಡಿ ಸಮಾಜ ಸೇವೆ ಮಾಡುವ ಮೂಲಕ ಪಾದಾರ್ಪಣೆ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಅವರಿಗೆ ಬೆನ್ನೇಲುಬಾಗಿ ಕೆಲಸ ಮಾಡುತ್ತೇವೆ. ಈ ಕ್ಷೇತ್ರದಾಂತ್ಯ ಹೋರಾಡಿ ಅವರ ಕೈಬಲಪಡಿಸುವ ಕೆಲಸ ಮಾಡುತ್ತೇವೆ. ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ. ನಾವು ನೀವು ಎಲ್ಲರೂ ಸೇರಿ ವಿಧಾನಸೌಧಕ್ಕೆ ಶಾಸಕರಾಗಿ ಕಳುಹಿಸಿಕೊಡಬೇಕು ಅವರ ಗೆಲುವಿಗಾಗಿ ಅಗಲಿರಳು ಶ್ರಮಿಸೋಣ ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೀಳಿಸುವ ಕೆಲಸ ಮಾಡುತ್ತೇವೆ. ಈ ಚುನಾವಣೆಯಿಂದಲೇ ಸಂಕ್ರಿಯವಾಗಿ ತಾಲ್ಲೂಕಿನಾಂದ್ಯಂತ ಹೋರಾಡಿ ಇವರನ್ನು ಗೆಲ್ಲಿಸಿ ಕಳುಹಿಸುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಗೊಲ್ಲಪಲ್ಲಿ ಪ್ರಸನ್ನ, ಎಂ.ಟಿ.ಎಸ್. ಸುಬ್ರಮಣಿ, ವಕೀಲ ನರಸಿಂಹರಾಜು, ಸುನಿಲ್, ನಂಬಿಹಳ್ಳಿ ಮಹೇಶ್, ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು.

ಕುಂದಾಪುರ:ಕಾಂಗ್ರೆಸ್ ಕಚೇರಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ

JANANUDI.COM NETWORK

ಕುಂದಾಪುರ,ಅ.14: 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ದಿನಾಂಕ 15 -8-2021 ಆದಿತ್ಯವಾರ ಬೆಳಿಗ್ಗೆ 9 ಗಂಟೆಗೆ ಸರಿಯಾಗಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು ಪಕ್ಷದ ಮುಖಂಡರು ,ಪದಾಧಿಕಾರಿಗಳು,ಜನಪ್ರತಿನಿಧಿಗಳು ಕಾರ್ಯಕರ್ತರು ಬಾಗವಹಿಸಬೇಕಾಗಿ ಕುಂದಾಪುರ,ಬ್ಲಾಕ್ ಕಾಂಗ್ರೆಸ್ ಸಮಿತಿ ವಿನಂತಿಸಿಕೊಂಡಿದೆ.