HOLY ROSARY CHURCH, KUNDAPUR – 450 th JUBILEE SOUVENIR 2021

ಇಂದು 28-8-21 ರಂದು ಬೀಜಾಡಿಯಲ್ಲಿ ಕೋವಿಡ್ ಲಸಿಕೆ

JANANUDI.COM NETWORK


ಬೀಜಾಡಿ: ಬೆಳ್ಳಿ ಹಬ್ಬದ ಸಂಭ್ರಮದಲ್ಲಿರು ಬೀಜಾಡಿ-ಗೋಪಾಡಿ ಮಿತ್ರ ಸಂಗಮದ ಸಾರಥ್ಯದಲ್ಲಿ ಆರೋಗ್ಯ ಇಲಾಖೆ, ಗ್ರಾಮ ಪಂಚಾಯತ್ ಬೀಜಾಡಿ ಇವರ ಆಶ್ರಯದಲ್ಲಿ ಬೀಜಾಡಿ ಮೂಡು ಶಾಲಾ ವಠಾರದಲ್ಲಿ
ದಲ್ಲಿ ಕೋವಿಡ್ ಲಸಿಕೆ ಶಿಬಿರ ಆ.28ರಂದು ಶನಿವಾರ ಬೆಳಿಗ್ಗೆಯಿಂದ ನಡೆಯಲಿದ್ದು, ಸುಮಾರು 300 ಡೋಸ್ ಲಸಿಕೆ ಲಭ್ಯವಿದ್ದು, 18 ವರ್ಷ ಮೇಲ್ಪಟ್ಟ ಪರಿಸರದ ಎಲ್ಲರೂ ಈ ಲಸಿಕೆ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದ್ದು, ಬೆಳಿಗ್ಗೆ 9 ಗಂಟೆಯಿಂದ ಟೋಕನ್ ನೀಡಲಾಗುವುದು. ಮೊದಲು ಬಂದವರಿಗೆ ಪ್ರಥಮ ಆದ್ಯತೆ ನೀಡಲಾಗುತ್ತಿದ್ದು, ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ರೈತರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು : ಸಚಿವ ಮುನಿರತ್ನ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ರೈತರ ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.
ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪುರಸಭೆಯ ನೂತನ ಪುರಸಭಾ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ತೋಟಗಾರಿಕಾ ಇಲಾಖೆಯಿಂದ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು. ತೋಟಗಾರಿಕಾ ಉತ್ಪನ್ನಗಳನ್ನು ರಸ್ತೆಗಳ ಮೇಲೆ ಚೆಲ್ಲುವ ಪರಿಸ್ಥಿತಿ ನಿರ್ಮಾಣವಾಗಿರುವುದ ಖೇದಕರ ಸಂಗತಿಯಾಗಿದೆ ಎಂದು ಹೇಳಿದರು.
ಜಿಲ್ಲೆಯ ರೈತರ ಅನುಕೂಲಕ್ಕಾಗಿ ಹಣ್ಣು ಸಂಸ್ಕರಣ ಘಟಕ, ಶೈತ್ಯಾಲಯ ಹಾಗೂ ಸರಕು ಸಾಗಣೆ ವ್ಯವಸ್ತೆ ಮಾಡಬೇಕಾದ ಅಗತ್ಯವಿದೆ. ವ್ಯಕ್ತಿ ಶಾಶ್ವತವಲ್ಲ. ಮಾಡುವ ಕೆಲಸ ಶಾಶ್ವತ. ಜನರಿಗೆ ಅನುಕೂಲವಾಗುವ ಶಾಶ್ವತ ಕೆಲಸಗಳನ್ನು ಮಾಡಲು ಆದ್ಯತೆ ನೀಡಲಾಗುವುದು. ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲೆ ಮುಂಚೂಣಿಯಲ್ಲಿದೆ. ಈ ವಿಷಯದಲ್ಲಿ ಜಿಲ್ಲೆ ನಾಡಿನ ಹೆಮ್ಮೆಯಾಗಿದೆ ಎಂದು ಹೇಳಿದರು.
ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ಮಾತನಾಡಿ, ಪುರಸಭಾ ಸದಸ್ಯರು ಪಕ್ಷಪಾತ ಮಾಡದೆ, ಸಾಂಘಿಕ ಪ್ರಯತ್ನದ ಮೂಲಕ ಪಟ್ಟಣದ ಅಭಿವೃದ್ಧಿ ಮಾಡಬೇಕು. ನಾಗರಿಕರಿಗೆ ಮೂಲ ಸೌಕರ್ಯ ಕಲ್ಪಿಸುವುದರ ಜತೆಗೆ ಪರಿಸರ ಮಾಲಿನ್ಯ ತಡೆಗೆ ಗಿಡ, ಮರ ಬೆಳೆಸಬೇಕು. ಪಟ್ಟಣದಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಶಾಸಕ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ಜಿಲ್ಲಾ ಕೇಂದ್ರದಲ್ಲೂ ಕಾಣಲು ಸಾಧ್ಯವಿಲ್ಲದಂಥ ವಿಶಾಲವಾದ ಪುರಸಭಾ ಕಾರ್ಯಾಲಯವನ್ನು ನಿರ್ಮಿಸಲಾಗಿದೆ. ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣ ಸೇರಿದಂತೆ ಇಲ್ಲಿನ ಎಲ್ಲ ಸರ್ಕಾರಿ ಕಟ್ಟಡಗಳನ್ನು ಮಾದರಿಯಾಗಿ ನಿರ್ಮಿಸಲಾಗಿದೆ. ದೂರದೃಷ್ಟಿ ಇಟ್ಟುಕೊಂಡು ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಕ್ರೀಡಾಂಗಣದ ಅಭಿವೃದ್ಧಿಗೆ ಸರ್ಕಾರದಿಂದ ರೂ.5 ಕೋಟಿ ಮಂಜೂರಾಗಿದೆ. ಈ ಹಣದಲ್ಲಿ ಒಳಾಂಗಣ ಹಾಗೂ ಹೊರಾಂಗಣ ಕ್ರಿಡೆಗಳಿಗೆ ಅಗತ್ಯವಾದ ಕಟ್ಟಡ ಹಾಗೂ ನಿರ್ಮಾನಗಳನ್ನು ಕೈಗೊಳ್ಳಲಾಗುವುದು. ಪಟ್ಟಣದಲ್ಲಿ ಮಾಂಸದ ಮಾರುಕಟ್ಟೆಯನ್ನು ಪ್ರತ್ಯೇಕವಾಗಿ ನಿರ್ಮಿಸಲಾಗುವುದು. ಪಟ್ಟಣದ ಬಡವರಿಗೆ ಮನೆ, ವಿವಿಧ ರೀತಿಯ ವೇತನ ಹಾಗೂ ನೀರು ಒದಗಿಸುವಲ್ಲಿ ರಾಜಕೀಯ ಮಾಡಿದರೆ ಸಹಿಸಲಾಗದು. ಅಗತ್ಯ ಇರುವ ಎಲ್ಲರಿಗು ಮನೆ ನಿರ್ಮಿಸಿಕೊಡಲಾಗುವುದು. ಸಫಾಯಿ ಕರ್ಮಚಾರಿಗಳಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು, ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್, ಉಪಾಧ್ಯಕ್ಷೆ ಆಯಿಷಾ ನಯಾಜ್, ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್, ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಕೋಲಾರ ನಗರಸಭಾಧ್ಯಕ್ಷೆ ಶ್ವೇತಾ ಶಬರೀಶ್, ಮುಖಂಡರಾದ ದಿಂಬಾಲ ಅಶೋಕ್, ಎನ್.ಹನುಮೇಶ್, ಸಂಜಯ್ ರೆಡ್ಡಿ ಇದ್ದರು.

OBITUARY- Mrs .Helen Helga Margaret Dsouza (92) Kundapur

OBITUARY

Mrs. Helen Helga Margaret Dsouza  (92) Kundapur (Nithyadar ward)

Passed away 26.8.2021

Date of birth 7.5.1929  Married on 5.2.1948

Wife of Late  William Dsouza

Mother of Rita/David Nainie , Jeffrey/ Carol Dsouza

Grand mother of Mona Nainie ,Lisa/ Avinash Bohra, Samuel Rohan Dsouza ,Sebastian Rohit Dsouza

Great Grandmother of Ameya Bohra, Avirat Bohra

Funeral cortege leaves residence RJ . MANSION   for Holy Rosary Church, Kundapura on today 27- 0-21 at 3.30 pm. Followed  By Mass At 4.00 P.M.

Contact: +9449 370880

M.P. ROAD ,VODERHOBLI , KUNDAPURA 576201

ಸಮೂಹ ಹಾಲು ಕರೆಯುವ ಯಂತ್ರಗಳ ಉದ್ಘಾಟನೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ : ಕೋಲಾರ ತಾಲೂಕು ಮಟ್ಟಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸಮೂಹ ಹಾಲು ಕರೆಯುವ ಯಂತ್ರಗಳ ಉದ್ಘಾಟನೆ ಹಾಗೂ ಹಾಲು ಉತ್ಪಾದಕರಿಗೆ ಉಚಿತ ಆಹಾರ ಕಿಟ್‌ಗಳನ್ನು ಒಕ್ಕೂಟದ ನಿರ್ದೇಶಕ ಡಿ.ವಿ. ಹರೀಶ್‌ರವರು ವಿತರಣೆ ಮಾಡಿದರು . ಈ ಸಂದರ್ಭದಲ್ಲಿ ಮಾತನಾಡುತ್ತಾ , ಘಟಕಕ್ಕೆ ಒಕ್ಕೂಟದಿಂದ ಸುಮಾರು ೩.೫ ಲಕ್ಷ ರೂಗಳನ್ನು ಮಂಜೂರು ಮಾಡಿಸಿದ್ದು ಇದರಲ್ಲಿ ಘಟಕದ ವೆಚ್ಚ ಮತ್ತು ಸಿವಿಲ್ ಕಾಮಗಾರಿಗಾಗಿ ಅನುಧಾನ ಇರುವುದಾಗಿ ತಿಳಿಸಿದರು . ಇದರ ಸದುಪಯೋಗವನ್ನು ಎಲ್ಲಾ ಹಾಲು ಉತ್ಪಾದಕರು ಬಳಸಿಕೊಳ್ಳಲು ಕರೆ ನೀಡಿದರು . ರಾಸುಗಳು ಸಮೂಹ ಹಾಲು ಕರೆಯುವ ಯಂತ್ರಗಳಲ್ಲಿ ಹಾಲು ಕರೆಯುವುದರಿಂದ ಕೆಚ್ಚಲು ಬಾವು ಬರುವ ಸಾಧ್ಯತೆಗಳು ಇರುವುದಿಲ್ಲ ಹಾಗೂ ಒಕ್ಕೂಟದಿಂದ ಸಂಘಕ್ಕೆ ಲೀಟರ್‌ಗೆ ರೂ . ೧.೩ಂಪೈಸೆ ಹೆಚ್ಚಿಗೆ ನೀಡಲಾಗುವುದು . ಇದರಲ್ಲಿ ರೂ .೧.೧೦ ಪೈಸೆ ಉತ್ಪಾದಕರಿಗೆ ಮತ್ತು ರೂ .೧.೨೦ ಪೈಸೆ ಸಂಘದ ನಿರ್ವಹಣೆಗೆ ಬರುತ್ತದೆಂದು ತಿಳಿಸಿಸರು . ಈ ವ್ಯವಸ್ಥೆಯಿಂದ ಶುದ್ಧ ಮತ್ತು ಗುಣಮಟ್ಟದ ಹಾಲು ಉತ್ಪಾದನೆಗೆ ಸಹಕಾರಿಯಾಗುತ್ತದೆ . ಗ್ರಾಮದಲ್ಲಿ ಮಹಿಳೆಯರಿಗೆ ಹಾಲು ಕರೆಯುವ ಭವಣಿಯಿಂದ ಮುಕ್ತಿ ಸಿಗುತ್ತದೆಂದರು . ಇಂತಹ ಹಾಲಿನಿಂದ ಒಕ್ಕೂಟದಲ್ಲಿ ಹಾಲಿನ ಉತ್ಪನ್ನಗಳನ್ನು ತಾಯರಿಸುವುದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಸಿಗುವುದಾಗಿ ತಿಳಿಸಿದರು ಹಾಗೂ ಉತ್ಪಾದಕರು ಒಕ್ಕೂಟದಿಂದ ಸಿಗುವ ಸೌಲಭ್ಯಗಳಾದ ರಾಸುಗಳ ಗುಂಪುವಿಮೆ , ಹಾಗೂ ತಾಂತ್ರಿಕ ಸೌಲಭ್ಯಗಳನ್ನು ಬಳಸಿಕೊಂಡು , ಉತ್ಪಾದನ ವೆಚ್ಚ ಕಡಿಮೆ ಮಾಡಿ , ಗುಣಮಟ್ಟದ ಹಾಲು ಉತ್ಪಾದನೆಗೆ ಒತ್ತು ನೀಡಲು ತಿಳಿಸಿದರು .
ಹಾಲು ತಾಲೂಕಿನ ಉಪವ್ಯವಸ್ಥಾಪಕರಾದ ಶ್ರೀಧರಮೂರ್ತಿ ಮಾತನಾಡಿ , ಸಂಘಗಳಲ್ಲಿ ಸಮೂಹ ಕರೆಯುವ ಯಂತ್ರಗಳನ್ನು ಅಳವಡಿಸಿ ಹಾಲಿನ ಜೈವಿಕ ಗುಣಮಟ್ಟವನ್ನು ಕಾಪಡಬಹುದೆಂದು ತಿಳಿಸಿದರು . ಜಿಡ್ಡಿನ ಆಧಾರದ ಮೇಲೆ ಧರ ನೀಡಬೇಕೆಂದು ತಿಳಿಸಿದರು . ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ವಿ . ನಾಗರಾಜ್ , ಮುಖಂಡರಾದ ಎನ್ ಚೌಡೇಗೌಡ , ಎಂ.ಎಸ್ . ಸೊಣೇಗೌಡ , ಎನ್ ಮಂಜುನಾಥಗೌಡ , ಗ್ರಾಮಪಂಚಾಯಿತಿ ಸದಸ್ಯರು , ಕಾರ್ಯಕಾರಿ ಮಂಡಳಿ ಸದಸ್ಯರುಗಳು , ಹಾಗೂ ಹಾಲು ಉತ್ಪಾದಕರು , ಗ್ರಾಮಸ್ಥರು ಮತ್ತು ಶಿಬಿರದ ವಿಸ್ತರಣಾಧಿಕಾರಿಗಳಾದ ಅಣ್ಣಪ್ಪ , ಶ್ರೀನಿವಾಸ್ , ನಾಗೇಂದ್ರ ಎಸ್ . ಎಸ್ . ರಾಮಾಂಜಿನಪ್ಪ , ಮತ್ತು ಸಂಘದ ಸಿಬ್ಬಂದಿ ಹಾಜರಿದ್ದರು
.

ಕೊವಿಡ್ ಮುಕ್ತ ಶಾಲೆಗಾಗಿ ವಿದ್ಯಾರ್ಥಿಗಳೆಲ್ಲಾ ಮಾಸ್ಕ್ ಧರಿಸಿ ಸ್ವಚ್ಚತೆ , ಸಾಮಾಜಿಕ ಅಂತರ ಕಾಪಾಡಿ – ಬಿಇಒ ರಾಮಕೃಷ್ಣಪ್ಪ ಕರೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ : – ಕೋವಿಡ್ ಮುಕ್ತ ಶಾಲೆಗಾಗಿ ಪ್ರತಿ ವಿದ್ಯಾರ್ಥಿಯೂ ಮಾಸ್ಕ್ ಧರಿಸಿ , ಸಾಮಾಜಿಕ ಅಂತರ ಕಾಪಾಡಿ , ಸ್ವಚ್ಛತೆಗೆ ಒತ್ತು ನೀಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಬಿ.ರಾಮಕೃಷ್ಣಪ್ಪ ಕರೆ ನೀಡಿದರು . ತಾಲ್ಲೂಕಿನ ಅರಾಬಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಅವರು ಮಾತನಾಡುತ್ತಿದ್ದರು . ಕೋವಿಡ್ ಹೆಮಾರಿಯಾಗಿ ಪ್ರಪಂಚವನ್ನು ಕಾಡಿದೆ , ಮಕ್ಕಳು ಕಲಿಕೆಯಿಂದ ದೂರವಾಗಲೂ ಕಾರಣವಾಗಿದೆ . ಆನ್‌ಲೈನ್ ಕ್ಲಾಸ್‌ಗಳಿಂದ ಮಕ್ಕಳ ಕಲಿಕೆ ಪೂರ್ಣಗೊಳ್ಳಲು ಸಾಧ್ಯವಿಲ್ಲ ಎಂಬ ಕಾರಣದಿಂದ ಇದೀಗ ಶಾಲೆಗಳ ಭೌತಿಕ ತರಗತಿ ತೆರೆಯಲಾಗಿದೆ ಎಂದರು . ಪ್ರೌಢಶಾಲೆಗಳ ೯ ಮತ್ತು ೧೦ ನೇ ತರಗತಿ ವಿದ್ಯಾರ್ಥಿಗಳು ಕೋಎಡ್ ಮಾರ್ಗಸೂಚಿಯಡಿ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿ ಕೋಡ್‌ಗೆ ಸಡ್ಡು ಹೊಡೆದು ಕೋವಿಡ್ . ಮುಕ ಶಾಲೆಯಾಗಿಸಿದರೆ ಮಾತ್ರ ಮುಂದಿನ ದಿನಗಳಲ್ಲಿ ೧ ರಿಂದ ೮ ನೇ ತರಗತಿ ಮಕ್ಕಳಿಗೂ ಧೈರ್ಯದಿಂದ ಶಾಲೆ ಆರಂಭಿಸಲು ಸಹಕಾರಿಯಾಗಲಿದೆ ಎಂದರು . ಹೊಸ ಪಠ್ಯಪುಸ್ತಕಗಳ ಸರಬರಾಜಿಗೆ ಇಲಾಖೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುತ್ತಿದೆ . ಅದುವರೆಗೂ ಮಕ್ಕಳ ಕಲಿಕೆಗೆ ಅಡ್ಡಿಯಾಗದಂತೆ ಪ್ರತಿ ಶಾಲೆಯಲ್ಲಿ ಬುಕ್ ಬ್ಯಾಂಕ್‌ ಮಾಡಿದ್ದು , ಹಳೆಯ ಪುಸ್ತಕಗಳನ್ನು ನೀಡಿ ಕಲಿಕೆ ಮುಂದುವರೆಸಲಾಗಿದೆ ಎಂದರು . ಆರಾಧಿ ಕೊತ್ತನೂರು ಪೌಢಶಾಲೆ ಜಿಲ್ಲೆಯಲ್ಲಿ ಮಾದರಿ ಶಾಲೆಗಳ ಪಟ್ಟಿಯಲ್ಲಿದೆ . ಇಲ್ಲಿನ ಕಂಪ್ಯೂಟರ್ ಲ್ಯಾಬ್ ವಿಜ್ಞಾನ ಪ್ರಯೋಗಾಲಯ , ಸುಂದರ ಪರಿಸರ ಮಕ್ಕಳ ಕಲಿಕೆಗೆ ಪೂರಕವಾಗಿದೆ ಎಂದು ಅಭಿನಂದಿಸಿದರು .

ನೇತ್ರದಾನ ಮಾಡುವ ಮೂಲಕ ಅಂದತ್ವ ನಿವಾರಣೆಗೆ ಸಹಕರಿಸಿ – ಎನ್.ಎಮ್.ನಾಗರಾಜ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ ; ಪ್ರಪಂಚದಲ್ಲಿ ಪ್ರತಿಯೊಬ್ಬರು ನೇತ್ರದಾನ ಮಾಡಿದರೆ ಶಾಶ್ವತವಾಗಿ ಅಂಧತ್ವ ನಿರ್ಮೂಲನೆಯಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಮರಣದ ನಂತರ ನೇತ್ರದಾನ ಮಾಡಿ ವಿಶ್ವಕ್ಕೆ ಬೆಳಕಾಗಬೇಕು. ನೇತ್ರದಾನ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎನ್.ಎಮ್.ನಾಗರಾಜ್ ಅವರು ತಿಳಿಸಿದರು.
ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 36ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಕಣ್ಣಿಗೆ ತುಂಬಾ ಮಹತ್ವವಿದೆ. ಆದ್ದರಿಂದ ನೇತ್ರದಾನ ಮಹಾದಾನ ಎಂದು ಕರೆಯುತ್ತಾರೆ. ಕಣ್ಣು ಜ್ಞಾನದ ಮೂಲ ದೇಹದ ಅಂಗಾಂಗಳನ್ನು ದಾನ ಮಾಡುವುದರಿಂದ ಇನೊಬ್ಬ ವ್ಯಕ್ತಿಗೆ ಜೀವನ ನೀಡಬಹುದು ಎಂದು ತಿಳಿಸಿದರು.
ಮನುಷ್ಯ ತುಂಬಾ ಸ್ವಾರ್ತಿಯಾಗಿದ್ದು, ತಾನು ಬದುಕಿದ್ದಾಗ ಯಾವುದನ್ನು ತ್ಯಾಗ ಮಾಡಲು ಇಚ್ಚಿಸುವುದಿಲ್ಲ, ಆದ್ದರಿಂದ ಮರಣದ ನಂತರ ನಿಸ್ವಾರ್ಥವಾಗಿ ಪ್ರತಿಯೊಬ್ಬರು ನೇತ್ರಗಳನ್ನು ದಾನಮಾಡಿ ವ್ಯಕ್ತಿಗಳ ಬಾಳಿಗೆ ಬೆಳಕನ್ನು ನೀಡಬಹುದಾಗಿದೆ. ಸತ್ತ ನಂತರವು ಬದುಕಿರುವ ಅವಕಾಶವನ್ನು ಎಲ್ಲರೂ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ|| ಜಗದೀಶ್ ಅವರು ಮಾತನಾಡಿ, ವ್ಯಕ್ತಿಯು ಮರಣ ಹೊಂದಿದ್ದ ನಂತರವು ಜೀವಂತವಾಗಿರಬೇಕಾದರೆ ಅಂಗಾಗ ದಾನ ಮಾಡಬೇಕು. ಮೆದುಳು ನಿಷ್ಠ್ರೀಯಗೊಂಡಿದ್ದರೆ ಅಂಗಾಗ ದಾನಮಾಡಬಹುದು. ಆದರೆ ಮನುಷ್ಯ ಸತ್ತ ಆರು ಗಂಟೆಯೊಳಗೆ ಕಣ್ಣುಗಳನ್ನು ದಾನಮಾಡಬಹುದು. ರಕ್ತ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಬಿಟ್ಟು ಎಲ್ಲರೂ ನೇತ್ರದಾನ ಮಾಡಬಹುದು. ನೇತ್ರದಾನ ಮಾಡುವುದಕ್ಕಿಂತ ಉತ್ತಮ ಕಾರ್ಯ ಬೇರೆಯೊಂದಿಲ್ಲ. ಅಂಗಾಗ ದಾನ ಮಾಡುವುದರಿಂದ ತುಂಬಾ ಜನರ ಜೀವನಕ್ಕೆ ಬೆಳಕಾಗಬಹುದು ಎಂದು ತಿಳಿಸಿದರು.
ಕಾರ್ಯಕ್ರಮ ಅನುಷ್ಠಾಧಿಕಾರಿಗಳಾದ ಡಾ|| ನಾರಾಯಣಸ್ವಾಮಿ ಅವರು ಮಾತನಾಡಿ, 36ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕವನ್ನು ಆಗಸ್ಟ್ 25 ರಿಂದ ಸೆಪ್ಟೆಂಬರ್ 08ರ ವರೆಗೆ ಆಚರಿಸಲಾಗುತ್ತಿದೆ. ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆ ಮನೆಗಳಿಗೆ ಭೇಟಿ ನೀಡಿ ನೇತ್ರದಾನದ ಬಗ್ಗೆ ಹಾಗೂ ಕಣ್ಣಿನ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವರು. ತಮ್ಮ ಕಣ್ಣುಗಳನ್ನು ದಾನ ಮಾಡುವುದರಿಂದ ಮರಣ ಹೊಂದಿದ್ದ ನಂತರವು ಇನ್ನೊಬ್ಬ ವ್ಯಕ್ತಿಯ ಜೀವನಕ್ಕೆ ಬೆಳಕಾಗಬಹುದು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ 32 ನೇತ್ರಾ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿದ್ದು, 7 ನೇತ್ರ ಬ್ಯಾಂಕುಗಳು ಸರ್ಕಾರಿ ಸ್ವಾಮ್ಯದಲ್ಲಿದೆ. ಪ್ರತಿ ವರ್ಷ ಸರಾಸರಿ 5,600 ವ್ಯಕ್ತಿಗಳು ನೇತ್ರದಾನ ಮಾಡುತ್ತಿದ್ದಾರೆ. ಅಂದಾಜು 1.25 ಲಕ್ಷ ಜನರು ಕಾರ್ನಿಯಾ ಸಂಬಂಧಿ ಅಂಧತ್ವದಿಂದ ಬಳಲುತ್ತಿದ್ದು, ನೇತ್ರದಾನಕ್ಕಾಗಿ ಕಾಯುತ್ತಿದ್ದಾರೆ. ಒಬ್ಬ ವ್ಯಕ್ತಿ ದಾನ ಮಾಡಿದ ನೇತ್ರಗಳಿಂದ ಇಬ್ಬರು ಕಾರ್ನಿಯಾ ಅಂಧರಿಗೆ ದೃಷ್ಠಿ ಬರುತ್ತದೆ. ನೇತ್ರದಾನ ಮಾಡಲು ವಯಸ್ಸು, ಲಿಂಗ, ಜಾತಿ ರಕ್ತದ ಗುಂಪು ಯಾವುದೇ ಭೇದಬಾವವಿಲ್ಲದೆ ಪ್ರತಿಯೊಬ್ಬರು ಮಾಡಬಹುದು ಎಂದು ತಿಳಿಸಿದರು.
ವ್ಯಕ್ತಿಯು ಮರಣ ಹೊಂದಿದ್ದ ಆರು ಗಂಟೆಯೊಳಗೆ ನೇತ್ರಗಳನ್ನು ಸಂಗ್ರಹಿಸಲಾಗುವುದು. ನೇತ್ರಗಳನ್ನು ಕೇವಲ 20 ನಿಮಿಷಗಳಲ್ಲಿ ಸಂಗ್ರಹಿಸಲಾಗುವುದು. ವ್ಯಕ್ತಿ ಮರಣ ಹೊಂದಿದ್ದ ನಂತರ ಸಹಾಯವಾಣಿ 104 ಗೆ ಕರೆ ಮಾಡಿದರೆ ಆರೋಗ್ಯ ಸಿಬ್ಬಂದಿಯ ತಂಡ ಸ್ಥಳಕ್ಕೆ ಭೇಟಿ ನೀಡಿ ಕಣ್ಣುಗಳನ್ನು ಸಂಗ್ರಹಿಸುವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಐ.ಇ.ಸಿ ಕರ ಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎನ್.ಎಮ್.ನಾಗರಾಜ್ ಅವರು ತಮ್ಮ ಕಣ್ಣುಗಳನ್ನು ದಾನ ಮಾಡುವುದಾಗಿ ನೋಂದಣಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ|| ಕಮಲ.ಎಂ., ಅಪರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಪ್ರೇಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮಾನವ ವಿರೋಧಿ ನಿಲುವು ಹೊಂದಿರುವ ಯಾವುದೇ ಧರ್ಮವನ್ನು, ಧರ್ಮವೆಂದು ಕರೆಯಲು ಸಾಧ್ಯವಿಲ್ಲ : ಕೆ.ಆರ್.ರಮೇಶ್ ಕುಮಾರ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಮಾನವ ವಿರೋಧಿ ನಿಲುವು ಹೊಂದಿರುವ ಯಾವುದೇ ಧರ್ಮವನ್ನು, ಧರ್ಮವೆಂದು ಕರೆಯಲು ಸಾಧ್ಯವಿಲ್ಲ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
  ಪಟ್ಟಣದ ಶಂಕರ ಮಠದ ಸಮೀಪ ರೂ.7 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಜಗದ್ಗುರು ಶ್ರೀ ಭಾರತೀತೀರ್ಥ ಸಭಾಭವನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದೂ ಧರ್ಮ ನಂಬಿಕೆಗಳ ಹುತ್ತ. ಕುಲಗಳ ಬೆಟ್ಟ. ಶಾಂತಿ ಬೋಧನೆ ಯಾವುದೇ ಧರ್ಮದ ಮುಖ್ಯ ಉದ್ದೇಶ ಎಂದು ಹೇಳಿದರು.    ‘ನನಗೆ ಮುಖ್ಯ ಮಂತ್ರಿಯಾಗಬೇಕು, ಇನ್ನೇನೋ ಆಗಬೇಕು ಎಂಬ ಆಸೆ ಇಲ್ಲ. ಸಾಮಾನ್ಯ ಕುಟುಂಬವೊಂದರಲ್ಲಿ ಹುಟ್ಟಿದ ನಾನು, ಕ್ಷೇತ್ರದ ಎಲ್ಲ ಸಮುದಾಯದ ಜನರ ಆಶೀರ್ವಾದಿಂದ ಈಗಾಗಿರುವುದೇ ಸಾಕು. ಆದರೆ ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಸಂಬಂಧಿಸಿದಂತೆ ಎರಡು ನೀರಿನ ಯೋಜನೆಗಳು ಅಪೂರ್ಣವಾಗಿ ಉಳಿದಿವೆ. ಅವುಗಳನ್ನು ಪೂರ್ಣಗೊಳಿಸುವ ಉದ್ದೇಶದಿಂದ ಮಾತ್ರ ಬರಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ’ ಎಂದು ತಮ್ಮ ಮನದ ಇಂಗಿತ ವ್ಯಕ್ತಪಡಿಸಿದರು.    ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಡಾ. ವಿ.ಆರ್.ಗೌರೀಶಂಕರ್ ಮಾತನಾಡಿ, ಧರ್ಮದ ಮೂಲ ಉದ್ದೇಶ ಪರೊಪಕಾರ. ಸಮಾಜದಲ್ಲಿ ಒಳ್ಳೆಯದನ್ನು ಬೆಳೆಸುವುದೇ ಧರ್ಮ. ಹಂಚಿಕೊಂಡು ಬಾಳುವುದನ್ನು ಕಲಿತಾಗ ಮಾತ್ರ ಸಮಾಜದಲ್ಲಿ ನೆಮ್ಮದಿ ಕಾಣದಲು ಸಾಧ್ಯವಾಗುತ್ತದೆ. ಧರ್ಮಪರಿ¥  ನರೇಂದ್ರ ಸೋಮಿಯಾಜಿ, ಆರ್.ಎಸ್.ಪ್ರಕಾಶ್, ಜಿ.ಕೃಷ್ಣ ಮಾತನಾಡಿ, ಕಟ್ಟಡ ನಿರ್ಮಾಣಕ್ಕೆ ನೆರವು ನೀಡಿದ ವ್ಯಕ್ತಿಗಳನ್ನು ಸ್ಮರಿಸಿದರು. ಸಮಾರಂಭದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು.  ವೆಲ್ಲಾಲ ಸತ್ಯನಾರಾಯಣ ಸಾಸ್ತ್ರಿ, ವೈ.ಆರ್.ಶಿವಪ್ರಕಾಶ್, ದಿಂಬಾಲ ಅಶೋಕ್, ಎಂ.ಶ್ರೀನಿವಾಸನ್, ಎನ್.ಬಿ.ಬ್ಯಾಟಪ್ಪ, ಡಿ.ಸತ್ಯಮೂರ್ತಿ, ಕೆ.ದಿವಾಕರ್, ಟಿ.ಎಸ್.ಮಾಯಾ ಬಾಲಚಂದ್ರ, ಮಂಗಳ ಸತ್ಯಮೂರ್ತಿ, ಎಲ್.ಕೆ.ಶ್ರೀನಿವಾಸಮೂರ್ತಿ, ಜಿ.ಗೋವಿಂದಗೌಡ, ಸುಬ್ರಮಣಿ, ಶಿವಶಂಕರ್, ಕಾಣಿ ಪಾಕಂ ಸ್ವಾಮಿ ಗಣೇಶ್, ಜೆ.ಕೆ.ಮಂಜುನಾಥ್, ಶ್ರೀನಿವಾಸ್, ಎಸ್ ವೇಣುಗೋಪಾಲ್, ಎಸ್ಆಶಾ, ಸುಧೀಂದ್ರ, ಸತೀಶ್ ಶಾಸ್ತ್ರಿ ಎನ್ ಅರುಣ್ ಕುಮಾರ್ ಶರ್ಮ,ದಿವಾಕರ್ಸುಧಾಕರ್, ಜನತಾ ಕ್ಯಾಂಟೀನ್ ಮಂಜು ರಾಘವೇಂದ್ರಭವನ್ ಶ್ರೀ ನಿವಾಸ್,ಚಂದ್ರಶೇಖರ್, ಕೆ.ರಾಘವೇಂದ್ರ ಗುರುರಾಜರಾವ್ ಇದ್ದರು.

ಮೈಸೂರು ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ : ಜೊತೆಗಿದ್ದ ಗೆಳೆಯನು ಮಾಹಿತಿ ನೀಡಿದ್ದಾನೆ

JANANUDI.COM NETWORK


ಮೈಸೂರು, ಆಗಸ್ಟ್ 25: ಶಾಂತಿ ಹಾಗೂ ಸೌಹಾರ್ದತೆಗೆ ಹೆಸರಾಗಿರುವ ಸಾಂಸ್ಕೃತಿಕ, ಪ್ರವಾಸಿ ನಗರಿಯಾದ ಮೈಸೂರು ಇದೀಗ ಅಪರಾಧಗಳ ನಗರ ಎಂದು ಬದಲಾಗುತ್ತಿದೆ. ಈಗ ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಮೈಸೂರಿಗರನ್ನು ಬೆಚ್ಚಿಬೀಳಿಸಿದೆ.
ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ನಡೆದಿರುವ ಘೋರ ಘಟನೆ ಕುರಿತು ಯುವತಿಯ ಗೆಳೆಯ ಈ ಕೆಳಗಿನಂತೆ ಮಾಹಿತಿ ಕೊಟ್ಟಿದ್ದಾನೆ
“ನಾವು ವಿಹಾರಕ್ಕೆ ಹೋದಾಗ ದುಷ್ಕರ್ಮಿಗಳು ನಮ್ಮ ಜೊತೆ ಗಲಾಟೆ ಮಾಡಿ, ನನ್ನ ತಲೆಗೆ ಕಲ್ಲಿನಿಂದ ಹೊಡೆದರು. ನಾನು ಪ್ರಜ್ಞೆ ತಪ್ಪಿ ಬಿದ್ದಾಗ ಹುಡುಗಿಯನ್ನು ದೂರ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ,” ಎಂದು ಅತ್ಯಾಚಾರ ಸಂತ್ರಸ್ತೆಯ ಗೆಳೆಯ ಹೇಳಿದ್ದಾನೆ. “ನಾನು ನನ್ನ ಸ್ನೇಹಿತೆ ವಿಹಾರಕ್ಕೆ ಬಂದಿದ್ದೆವು. ಈ ವೇಳೆ ಅಲ್ಲೇ ಮದ್ಯ ಕುಡಿಯುತಿದ್ದ ್ದ್ದ 5-6 ಜನರು ಗಲಾಟೆ ಶುರು ಮಾಡಿದರು. ಇದರಲ್ಲಿ ಎಲ್ಲರೂ ಕನ್ನಡ ಮಾತಾಡುತ್ತಿದ್ದರು. ಒಬ್ಬ ಮಾತ್ರ ಬೇರೆ ಬಾಷೆ ಮಾತಾಡುತ್ತಿದ್ದ.” “ಇದೇ ಸಂದರ್ಭದಲ್ಲಿ ಗಲಾಟೆ ಮಾಡಿದವರು ನನಗೆ ಕಲ್ಲಿನಲ್ಲಿ ತಲೆಗೆ ಹೊಡೆದರು. ಆಗ ನಾನು ಪ್ರಜ್ಞೆ ತಪ್ಪಿ ಬಿದ್ದೆ. ನಂತರ ಹುಡುಗಿಯನ್ನು ದೂರ ಕರೆದುಕೊಂಡು ಹೋಗಿ ಅತ್ಯಚಾರ ಮಾಡಿದರು,” ಎಂದು ಯುವಕ ನಡೆದ ಅತ್ಯಾಚಾರ ಘಟನೆಯನ್ನು ವಿವರಿಸಿದ್ದಾನೆ.
ಸದ್ಯ ಯುವಕ ಹಾಗೂ ಯುವತಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳ ವಿರುದ್ಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಯುವತಿ ಉತ್ತರ ಭಾರತ ಮೂಲದವಳಾಗಿದ್ದಾಳೆ ಎನ್ನಲಾಗಿದೆ. ಸಾಮೂಹಿಕ ಅತ್ಯಾಚಾರ ಕೃತ್ಯ ನಡೆದಿರುವ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಕೃತ್ಯ ನಡೆದಿರುವ ಬಗ್ಗೆ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ

ಜೇಸಿಐ ಬೆಳ್ಮಣ್ಣು : ವಲಯಾಧ್ಯಕ್ಷರ ಅಧಿಕೃತ ಭೇಟಿ ಸಮಾರಂಭ

ವರದಿ :  ವಾಲ್ಟರ್ ಮೊಂತೇರೊ, ಬೆಳ್ಮಣ್ಣು


ಬೆಳ್ಮಣ್ಣು: ಜೇಸಿಐ ಬೆಳ್ಮಣ್ಣು, ಜೂನಿಯರ್ ಜೇಸಿ ವಿಭಾಗ ಮತ್ತು ಜೇಸಿರೇಟ್ ವಿಭಾಗದ ಸಹಯೋಗದಲ್ಲಿ ಆದಿತ್ಯವಾರ ಬೆಳ್ಮಣ್ಣು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರಗಿದ ವಲಯಾಧ್ಯಕ್ಷರ ಅಧಿಕೃತ ಭೇಟಿ ಸಮಾರಂಭದಲ್ಲಿ ಭಾರತೀಯ ಜೇಸಿಐನ ವಲಯ 15ರ ವ¯ಯಾಧ್ಯಕ್ಷರಾದ ಸೌಜನ್ಯ ಹೆಗ್ಡೆ ಭಾಗವಹಿಸಿ ಬೆಳ್ಮಣ್ಣು ಜೇಸಿಐನ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭಕ್ಕೂ ಮೊದಲು ನಂದಳಿಕೆ ಶ್ರೀ ಲಕ್ಷ್ಮೀಜನಾರ್ಧನ ದೇವಸ್ಥಾನಕ್ಕೆ ಭೇಟಿ ನೀಡಿ, ಬೆಳ್ಮಣ್ಣು ಶ್ರೀ ಲಕ್ಷ್ಮೀ ಜನಾರ್ಧನ ಇಂಟರ್‍ನ್ಯಾಶನಲ್ ಸ್ಕೂಲ್ ಬಳಿ ದಾರಿಸೂಚನಾ ನಾಮಫಲಕ ಉದ್ಘಾಟನೆ, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಬಳಿ ವನಮಹೋತ್ಸವ ಮತ್ತು ಗಿಡ ವಿತರಣಾ ಕಾರ್ಯಕ್ರಮ, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ಗೆ ಡೆಸ್ಟ್‍ಬಿನ್ ಹಸ್ತಾಂತರ, ಅಬ್ಬನಡ್ಕ ಬಳಿ ಹಾಗೂ ಇಟ್ಟಮೇರಿ ಬಳಿ ದಾರಿಸೂಚನಾ ಫಲಕಗಳ ಲೋಕಾರ್ಪಣೆ ನಂತರ ಬೆಳ್ಮಣ್ಣು ಶ್ರೀ ದುರ್ಗಾಪಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು. ಸಭಾ ಕಾರ್ಯಕ್ರಮದಲ್ಲಿ ಕೆದಿಂಜೆ ಅಂಗನವಾಡಿ ಕೇಂದ್ರಕ್ಕೆ 40 ಕುರ್ಚಿ ಕೊಡುಗೆ ಹಸ್ತಾಂತರ ಹಾಗೂ ಎರಡು ವಾಕರ್‍ಗಳ ಕೊಡುಗೆ ಹಸ್ತಾಂತರ ಮತ್ತು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧನೆ ನಡೆಯಿತು.
ಸಮಾರಂಭದಲ್ಲಿ ಬೆಳ್ಮಣ್ಣು ಜೇಸಿಐ ಫಟಕಾಧ್ಯಕ್ಷ ಕೃಷ್ಣ ಪವಾರ್ ಅಧ್ಯಕ್ಷತೆ ವಹಿಸಿದ್ದರು. ಪೂರ್ವ ವಲಯಾಧ್ಯಕ್ಷ ರಾಜೇಂದ್ರ ಭಟ್ ಕೆ. ವಲಯ ಉಪಾಧ್ಯಕ್ಷ ಸತ್ಯನಾರಾಯಣ ಭಟ್, ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ದೀಪಕ್ ಗಂಗೊಳ್ಳಿ, ಕಾರ್ಯಕ್ರಮದ ನಿರ್ದೇಶಕ ಅಶ್ವಥ್ ಶೆಟ್ಟಿ, ಜೇಸಿರೇಟ್ ವಿಭಾಗದ ಅಧ್ಯಕ್ಷೆ ಮಾಯಾ ರಾವ್, ಜೂನಿಯರ್ ಜೇಸಿ ವಿಭಾಗದ ಅಧ್ಯಕ್ಷ ಪ್ರಥಮ್ ಮಲ್ಯ ಮೊದಲಾದವರಿದ್ದರು.
ಬೆಳ್ಮಣ್ಣು ಜೇಸಿಐನ ಘಟಕಾಧ್ಯಕ್ಷ ಕೃಷ್ಣ ಪವಾರ್ ಸ್ವಾಗತಿಸಿದರು. ಪೂರ್ವಾಧ್ಯಕ್ಷ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ವಲಯಾಧ್ಯಕ್ಷರ ಪರಿಚಯ ವಾಚಿಸಿದರು. ಕಾರ್ಯದರ್ಶಿ ಅಬ್ಬನಡ್ಕ ಸತೀಶ್ ಪೂಜಾರಿ ವರದಿ ಮಂಡಿಸಿ ಧನ್ಯವಾದ ನೀಡಿದರು. ಸಮಾರಂಭದಲ್ಲಿ ಘಟಕದ ಪೂರ್ವಾಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತಿತರಿದ್ದರು.