HOLY ROSARY CHURCH, KUNDAPUR – 450 th JUBILEE SOUVENIR 2021

ಪೌರಕಾರ್ಮಿಕರ ಸಿಬ್ಬಂದಿಗೆ ಮೂಲಭೂತ ಸವಲತ್ತುಗಳಿಗೆ ಮುಖ್ಯಮಂತ್ರಿಗಳಿಗೆ ಮನವಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ ಸೆಪ್ಟೆಂಬರ್ 24 : ಕೋಲಾರ ನಗರಸಭೆಯ ‘ಸಿ’ ಗ್ರೂಪ್ ಪೌರಕಾರ್ಮಿಕ ಸಿಬ್ಬಂದಿಗೆ ಮೂಲಭೂತ ಸವಲತ್ತುಗಳನ್ನು ಒದಗಿಸುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರನ್ನು ಸಾಮಾಜಿಕ ಕಾರ್ಯಕರ್ತ ಗೌರಿಪೇಟೆಯ ಕೆ.ಎನ್.ರವೀಂದ್ರನಾಥ್‍ರವರು ಒತ್ತಾಯಿಸಿದ್ದಾರೆ.
ಕೋಲಾರ ನಗರದ ಸ್ವಚ್ಚತೆಯನ್ನು ಕಾಪಾಡುವಲ್ಲಿ ಶ್ರಮಿಸುವ, ಕಸವಿಲೇವಾರಿ ಮಾಡುವ, ಒಳಚರಂಡಿ ಸ್ವಚ್ಚತೆ ಕೆಲಸವನ್ನು ನಿರ್ವಹಿಸುವ, ನೀರು ಸರಬರಾಜು ಮಾಡುವ ಪೌರಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ಇವರುಗಳ ಬದುಕು ಒದ್ದೆಬಟ್ಟೆಯಾಗಿದ್ದು, ಅತಂತ್ರ ಬದುಕನ್ನು ನಡೆಸಬೇಕಾಗಿದೆ ಎಂದಿದ್ದಾರೆ.
ಪೌರಕಾರ್ಮಿಕರಿಗೆ ಕೆಲಸ ಮಾಡಲು ಸುರಕ್ಷಿತ ಸಲಕರಣೆಗಳಾದ ಬೂಟು, ಹ್ಯಾಂಡ್ ಗ್ಲವ್ಸ್‍ಗಳು, ಮುಖ ಕವಚ, ಸ್ಯಾನಿಟೈಜರ್‍ಗಳನ್ನು ನಿಗಧಿತ ಪ್ರಮಾಣದಲ್ಲಿ ವಿತರಿಸಬೇಕು. ಇವರು ಕೆಲಸ ನಿರ್ವಹಿಸುಲು ಹೋಗುವ ಪ್ರದೇಶಗಳಿಗೆ ನಗರಸಭೆಯ ಸ್ಥಳದಿಂದ ಪಿಕಪ್ ಮತ್ತು ಡ್ರಾಪ್‍ಗೆ ವಾಹನದ ವ್ಯವಸ್ಥೆ ಮಾಡಬೇಕು. ಇವರುಗಳಿಗೆ ಬೆಳಿಗ್ಗಿನ ಮತ್ತು ಮಧ್ಯಾಹ್ನದ ಉಪಹಾರ ಊಟದ ಜೊತೆಗೆ ಮೊಟ್ಟೆ, ಹಾಲಿನಂತೆ ಪೌಷ್ಠಿಕಾಂಶದ ಆಹಾರ ನೀಡಬೇಕು. ಕೆಲಸದಿಂದ ಹಿಂದಿರುಗಿದ ನಂತರ ಅಶುದ್ಧಗೊಂಡಿರುವ ಮೈಲಿಗೆಯನ್ನು ತೊಳೆದುಕೊಳ್ಳಲು/ಸ್ವಚ್ಚಗೊಳಿಸಿಕೊಳ್ಳಲು ನಗರಸಭೆಯಲ್ಲಿ ಪ್ರತ್ಯೇಕ ಸ್ನಾನದ ಕೊಠಡಿಗಳನ್ನು ನಿರ್ಮಿಸಬೇಕು ಎಂದಿದ್ದಾರೆ.
ಪ್ರತಿ ತಿಂಗಳಿಗೆ ಒಮ್ಮೆ ವೈದ್ಯರಿಂದ ಇವರುಗಳ ವೈದ್ಯಕೀಯ ತಪಾಸಣೆಯನ್ನು ಕೈಗೊಳ್ಳಲು ವ್ಯವಸ್ಥೆಯನ್ನು ನಗರಸಭೆ ಆವರಣದಲ್ಲಿ ಮಾಡಬೇಕು. ಪೌರಕಾರ್ಮಿಕರಿಗೆ ವಸತಿಗೃಹಗಳ ವ್ಯವಸ್ಥೆಯನ್ನು ಸರ್ಕಾರದ ವತಿಯಿಂದ ಮಾಡಬೇಕು. ಪ್ರತಿ ಕಾರ್ಮಿಕರಿಗೆ ಆರೋಗ್ಯ ಭಾಗ್ಯ ಕಾರ್ಡ್ ಒದಗಿಸಿ ಒಳ್ಳೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅನುವು ಮಾಡಿಕೊಡಬೇಕು. ಪೌರ ಕಾರ್ಮಿಕರ ನೌಕರರ ಭವನವನ್ನು ನಿರ್ಮಾಣ / ಸಮುದಾಯ ಭವನವನ್ನು ನಿರ್ಮಿಸಬೇಕು. ಪೌರ ಕಾರ್ಮಿಕರನ್ನು ಜೇಷ್ಠತೆ ಆಧಾರದ ಮೇಲೆ ಖಾಯಂಗೊಳಿಸಬೇಕು. ಪೌರಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಪ್ರಾಥಮಿಕ ಶಾಲೆಯಿಂದ ಉನ್ನತ ಶಿಕ್ಷಣದವರೆಗೆ ನೀಡಬೇಕು. ಪೌರಕಾರ್ಮಿಕರ ಪ್ರತಿ ಕುಟುಂಬಕ್ಕೂ ಉಚಿತವಾಗಿ ರೇಷನ್ ನೀಡಬೇಕು ಅಥವಾ ಬಿ.ಪಿ.ಎಲ್ ಪಡಿತರ ಚೀಟಿಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ವಿಶ್ರಾಂತಿ ಪಡೆಯದೆ ಶ್ರಮಿಸುವ ಹೃದಯ ಘಾಸಿಗೊಳ್ಳದಂತೆ ಎಚ್ಚರ ವಹಿಸಬೇಕು : ಡಾ. ಯಶ್ವಂತ್ ಲಕ್ಷ್ಮಯ್ಯ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ವಿಶ್ರಾಂತಿ ಪಡೆಯದೆ ಶ್ರಮಿಸುವ ಹೃದಯ ಘಾಸಿಗೊಳ್ಳದಂತೆ ಎಚ್ಚರ ವಹಿಸಬೇಕು ಎಂದು ನಾರಾಯಣ ಹೃದಯಾಲಯದ ಹೃದಯ ತಜ್ಞ ಡಾ. ಯಶ್ವಂತ್ ಲಕ್ಷ್ಮಯ್ಯ ಹೇಳಿದರು.
ಪಟ್ಟಣದ ವೆಂಕಟೇಶ್ವರ ಪ್ಯಾರಾ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ರೊಟರಿ ಸೆಂಟ್ರಲ್ ಶ್ರೀನಿವಾಸಪುರ ಸಂಸ್ಥೆಯ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ‘ನಮ್ಮ ಹೃದಯಕ್ಕೆ ನಮ್ಮ ಕೊಡುಗೆ’ ಎಂಬ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹೃದಯ ನಿರಾತಂಕವಾಗಿ ಕಾರ್ಯನಿರ್ವಹಿಸಬೇಕಾದರೆ, ದೇಹ ಹಾಗೂ ಮನಸ್ಸಿನ ಆರೋಗ್ಯ ಮುಖ್ಯವಾಗುತ್ತದೆ. ಧನಾತ್ಮಕ ಚಿಂತನೆಯೂ ಬೇಕಾಗುತ್ತದೆ ಎಂದು ಹೇಳಿದರು.
ರೋಟರಿ ಸೆಂಟ್ರಲ್ ಶ್ರೀನಿವಾಸಪುರ ಸಂಸ್ಥೆಯ ಅಧ್ಯಕ್ಷ ಡಾ.ವೈ.ವಿ.ವೆಂಕಟಾಚಲ ಮಾತನಾಡಿ, ಬದಲಾದ ಪರಿಸ್ಥಿತಿಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ಹಣದ ಹಿಂದೆ ಬಿದ್ದಿರುವ ಮನುಷ್ಯ ಆರೋಗ್ಯದ ಕಡೆ ಅಗತ್ಯ ಗಮನ ಕೊಡದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ರಾಜೇಂದ್ರ ಪ್ರಸಾದ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ವಿ.ಸುಧಾಕರ್, ರೋಟರಿ ಸೆಂಟ್ರಲ್ ಶ್ರೀನಿವಾಸಪುರ ಸಂಸ್ಥೆಯ ಕಾರ್ಯದರ್ಶಿ ಎಚ್.ಆರ್.ನಾರಾಯಣಸ್ವಾಮಿ ಇದ್ದರು.

ನಂದಳಿಕೆ ಬೋರ್ಡ್ ಶಾಲೆಯಲ್ಲಿ 1 ನೇ ತರಗತಿಯಿಂದ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ : ನಿತ್ಯಾನಂದ್ ಅಮೀನ್

ವರದಿ :  ವಾಲ್ಟರ್ ಮೊಂತೇರೊ, ಬೆಳ್ಮಣ್ಣು


ಸರಕಾರಿ ಶಾಲೆಯಲ್ಲಿ ದಾಖಲಾತಿಗಳು ಕಡಿಮೆ ಆಗುತ್ತಿದ್ದು ಈ ಹಿನ್ನಲೆಯಲ್ಲಿ ನಂದಳಿಕೆ ಗ್ರಾಮದ ಒಂದು ಕನ್ನಡ ಶಾಲೆಯು ಈಗಾಗಲೇ ಮುಚ್ಚಲ್ಪಟ್ಟಿದೆ .ಈಗ ಉಳಿದಿರುವ ಒಂದು ಕನ್ನಡ ಶಾಲೆ 100 ವರ್ಷವನ್ನು ಪೂರೈಸುತ್ತಿದ್ದು  ಪ್ರಸಕ್ತ ವರ್ಷ ಒಟ್ಟು 75  ಮಕ್ಕಳು ಕಲಿಯುತ್ತಿದ್ದಾರೆ . ನಂದಳಿಕೆ ಗ್ರಾಮದ ಹೆಚ್ಚಿನ ಪೋಷಕರು ತಮ್ಮ ಮಕ್ಕಳಿಗೆ ಆಂಗ್ಲ ಮಾದ್ಯಮ ಶಿಕ್ಷಣ ಸಿಗಬೇಕು ಎನ್ನುವ ನಿಟ್ಟಿನಲ್ಲಿ ತಮ್ಮ ಮಕ್ಕಳನ್ನು ಆಂಗ್ಲ ಮಾದ್ಯಮ ಶಾಲೆಗೆ ಸೇರಿಸುತ್ತಿದ್ದಾರೆ ಎಂದು ಇತ್ತೀಚೆಗೆ ನಡೆಸಿದ ಸರ್ವೆಯಲ್ಲಿ ತಿಳಿದು ಬಂದಿದ್ದು ಈ ಹಿನ್ನಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ,ಗ್ರಾಮಪಂಚಾಯತ್ , ಹಳೆ ವಿದ್ಯಾರ್ಥಿ ಸಂಘ , ಹಾಗೂ ದಾನಿಗಳ ನೆರವಿನಿಂದ ಈ ವರ್ಷದಿಂದ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸನ್ನು  1 ನೇ ತರಗತಿಯಿಂದಲೇ ಪ್ರಾರಂಭಿಸಲಾಗುವುದು ಹಾಗೂ ಸರಕಾರಿ ಶಾಲೆ ಮಕ್ಕಳು  ಯಾವುದೇ ಖಾಸಗಿ ಆಂಗ್ಲ ಮಾದ್ಯಮ ಶಾಲಾ ಮಕ್ಕಳಿಗಿಂತ ಕಡಿಮೆ ಇಲ್ಲ ಎನ್ನುವುದನ್ನು ನಿರೂಪಿಸುವ ನಿಟ್ಟಿನಲ್ಲಿ ನಂದಳಿಕೆ ಗ್ರಾಮ ಪಂಚಾಯತ್ ಈ ಒಂದು ವಿನೂತನ ಕಾರ್ಯಕ್ಕೆ ಮುಂದಾಗಿದೆ ಎಂದು ನಂದಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ್  ಅಮೀನ್ ಅವರು ಬೋರ್ಡ್ ಶಾಲೆಯಲ್ಲಿ ಪೋಷಕರ ,ಶಾಲಾಭಿವೃದ್ಧಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳೊಂದಿಗೆ ನಡೆದ ವಿಶೇಷ ಸಭೆಯಲ್ಲಿ ತಿಳಿಸಿದರು .
ಇದೇ ಸಂಧರ್ಭದಲ್ಲಿ ಬೋರ್ಡುಶಾಲೆಯನ್ನು ಅಮೃತ ಶಾಲಾ ಸೌಲಭ್ಯ ಯೋಜನೆಗೆ  ಶಿಫಾರಸ್ಸು ಮಾಡುವಂತೆ ಮಾನ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ.ವಿ . ಸುನಿಲ್ ಕುಮಾರ್ ರವರಿಗೆ ಮನವಿ ನೀಡುವುದಾಗಿ ತಿಳಿಸಿದರು.

       ನಂದಳಿಕೆ ಗ್ರಾಮ ಪಂಚಾಯತ್
ಕಾರ್ಕಳ ತಾಲೂಕು  ಉಡುಪಿ ಜಿಲ್ಲೆ 576111

ವಿದ್ಯಾರ್ಥಿಗಳು ತನ್ನ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಂಡರೆ ಶ್ರೇಷ್ಠ ಸಾಧನೆಗಳನ್ನು ಮಾಡಲು ಸಾಧ್ಯ : ಫಾ|ಜೊರ್ಜ್ ಡಿಸೋಜ

JANANUDI.COM NETWORK

“ವಿದ್ಯಾರ್ಥಿಗಳು ತನ್ನ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಂಡರೆ ಶ್ರೇಷ್ಠ ಸಾಧನೆಗಳನ್ನು ಮಾಡಲು ಸಾಧ್ಯವಾಗುತ್ತದೆ .ಉತ್ತಮ ಶಿಕ್ಷಣ ಸಂಸ್ಥೆ ,ಆದರ್ಶ ಗುರುಗಳು ಮತ್ತು ಹೆತ್ತವರ ಆಶೀರ್ವಾದ ದೊರೆತಾಗ ಸಾಧನೆಯ ಖುಷಿಯೂ ಇಮ್ಮಡಿಯಾಗುತ್ತದೆ “ಎಂದು ಮೂಡುಬೆಳ್ಳೆ ಸಂತ ಲಾರೆನ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಜೊರ್ಜ್ ಡಿಸೋಜ ಅವರು ಹೇಳಿದರು. ಅವರು ಮೂಡುಬೆಳ್ಳೆಯ ಸಂತ ಲಾರೆನ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಸಾಧಕರ ಸನ್ಮಾನ ಕಾರ್ಯಕ್ರಮ ” ಎಕ್ಸಲೆನ್ಸ್ ಡೇ “ಇದರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು .ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಯುವ ವಿಜ್ಞಾನಿ ಪ್ರಶಸ್ತಿ ಪಡೆದ ಸಂಸ್ಥೆಯ ಹಳೆ ವಿದ್ಯಾರ್ಥಿ ಡಾಕ್ಟರ್ ರೋಷನ್ ಮಾರ್ಟಿಸ್ ಇವರನ್ನು ಸನ್ಮಾನಿಸಲಾಯಿತು .ಅದೇ ರೀತಿ ಕಳೆದ ವರ್ಷದ ಪಬ್ಲಿಕ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಹಾಗೂ ಸಂಸ್ಥೆ ಹಳೆವಿದ್ಯಾರ್ಥಿ ಕುದಿ ವಸಂತ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು . ಚರ್ಚ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಜೆರಾಲ್ಡ್ ಪೆರ್ನಾಂಡಿಸ್ ಉಪಸ್ಥಿತರಿದ್ದರು . ರೊಯ್ಸ್ಟನ್ ಮಾರ್ಟಿಸ್ ಮತ್ತು ಮೆಲಿಸಾ ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ಲಿಜ್ವಿಟಾ ಅತಿಥಿ ಪರಿಚಯ ಮಾಡಿದರು .ಬ್ರದರ್ ಫಿಲಿಪ್ ನೊರೊನಾ ಸ್ವಾಗತಿಸಿ, ಕು. ಶ್ರೇಯ ಸಲ್ಡಾನಾ ವಂದಿಸಿದರು. ಶ್ರೀಮತಿ ಜೆಸಿಂತಾ ಲೊಬೊ ಮತ್ತು ಜೋನ್ ಕ್ಯಾಸ್ತಲೀನೊ ಫಲಿತಾಂಶ ವಿಶ್ಲೇಷಣೆ ಮಾಡಿದರು. ಪ್ರಾಂಶುಪಾಲರಾದ ಎಡ್ವರ್ಡ್ ಲಾರ್ಸನ್, ಹಿರಿಯ ಶಿಕ್ಶಕಿ ಸುನೀತಾ ಕಾಮತ್, ಶಿಕ್ಷಣ ಸಂಸ್ಥೆಯ ಶಿಕ್ಷಕ ವ್ರಂದ ವಿದ್ಯಾರ್ಥಿಗಳು ಪೋಷಕರು ಭಾಗವಹಿಸಿದ್ದರು.

ಶಾಂತಿಯಿಂದ ಜಗತ್ತಿನ ಏಳ್ಗೆ ಸಾಧ್ಯ -ಶಿಕ್ಷಣಾಧಿಕಾರಿ ಸಿ.ಆರ್. ಅಶೋಕ್

ವರದಿ : ಶಬ್ಬೀರ್ ಅಹ್ಮದ್ ,ಶ್ರೀನಿವಾಸಪುರ

ಕೋಲಾರ ಸೆಪ್ಟೆಂಬರ್ 21 : ಇಂದು ವಿಶ್ವ ಶಾಂತಿ ದಿನ. ಶಾಂತಿಯಿಂದ ಜಗತ್ತಿನ ಏಳ್ಗೆ ಸಾಧ್ಯ. ವಿಶ್ವವೇ ಶಾಂತಿಯತ್ತ ಸಾಗು ಎನ್ನುವ ಸಂದೇಶವನ್ನು ವಿಶ್ವ ಸಂಸ್ಥೆ ವಿಶ್ವಕ್ಕೆ ಸಾರಿದ ದಿನವೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿಗಳಾದ ಸಿ. ಆರ್ ಅಶೋಕ್ ಅಭಿಪ್ರಾಯ ಪಟ್ಟರು.
ನÀಗರದದಲ್ಲಿಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಬಾಲ್ಡ್‍ವಿನ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಶಾಂತಿ ದಿನಾಚರಣೆಯನ್ನು ಉದ್ಘಾಟಿಸಿ ಮಾತಾನಾಡಿದರು.
ಕ್ರೌರ್ಯದಿಂದ ಏನನ್ನೂ ಸಾಧಿಸಲಾರೆವು. ಶಾಂತಿಯೇ ಬದುಕನ್ನು ಹಸನಾಗಿಸುವ ಮೂಲ ಮಂತ್ರ ಎಂದು ವಿಶ್ವಸಂಸ್ಥೆ ಜಗತ್ತಿಗೆ ಸಾರಿದ ದಿನ. ಪ್ರಪಂಚಕ್ಕೆ ಶಾಂತಿಯ ಮೌಲ್ಯಗಳನ್ನು ಪರಿಚಯ ಮಾಡಿಕೊಡುವ ಸಲುವಾಗಿ ವಿಶ್ವಸಂಸ್ಥೆ ಸೆಪ್ಟೆಂಬರ್ 21 ನ್ನು ವಿಶ್ವ ಶಾಂತಿ ದಿನವನ್ನಾಗಿ ಘೋಷಿಸಿದೆ ಎಂದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಚೇರ್ಮನ್ ಗೋಪಾಲಕೃಷ್ಣ ಗೌಡ ಮಾತನಾಡುತ್ತಾ ಶಾಂತಿ ಸೌಹಾರ್ದತೆಯಿಂದ ಏಳಿಗೆ ಸಾಧ್ಯ. ಶಾಂತಿಯಿಂದ ಸಮಾಜದ ಸುವ್ಯವಸ್ಥೆ ಕಾಪಾಡಲು ಸಾಧ್ಯ. ಶಾಂತಿಯಿಂದ ಯುದ್ಧ ಗಲಭೆ ರಕ್ತಪಾತಗಳನ್ನು ತಡೆಯಲು ಸಾಧ್ಯ ಎಂಬುದನ್ನು ವಿಶ್ವ ಶಾಂತಿ ದಿನ ಸಾರುತ್ತದೆ ಎಂದರು.
ಪ್ರಾಂಶುಪಾಲರಾದ ಸುಜಾತ ಮಾತಾನಡುತ್ತಾ ಯುದ್ಧ ಮತ್ತು ಅಹಿಂಸೆಯನ್ನು ತೊಡೆದು ಹಾಕಿ ಶಾಂತಿ ಸಹಬಾಳ್ವೆಯಿಂದ ಬದುಕಬೇಕು ಎಂಬ ಸಂದೇಶವನ್ನು ಹೊತ್ತು ಪ್ರತಿವರ್ಷ ನವ ಪೀಳಿಗೆಗೆ ಶಾಂತಿಯ ಪ್ರಾಮುಖ್ಯತೆಯನ್ನು ಸಾರುತ್ತ ಮುನ್ನಡೆಯಲು ಈ ದಿನ ಆಚರಿಸಲಾಗುತ್ತದೆ ಎಂದರು.
ಶಿಕ್ಷಣ ಇಲಾಖೆಯ ಇಸಿಓ ಆರ್ ಶ್ರೀನಿವಾಸನ್ ಮಾತಾನಾಡಿ ಮಕ್ಕಳು ಗುರುಹಿರಿಯರಿಗೆ ಗೌರವಿಸುವ, ದೇಶಕ್ಕಾಗಿ ದುಡಿಯುವ, ದೇಶದ ಗೌರವ ಕಾಪಾಡುವ ಹಾಗೂ ಉತ್ತಮ ಪರಿಸರ ನಿರ್ಮಾಣ ಮಾಡುವ ಬಗ್ಗೆ ಆಲೋಚಿಸುವ ಕಡೆಗೆ ಗಮನ ಹರಿಸಬೇಕು. ವಿದ್ಯಾರ್ಥಿಗಳು ಮಾನವೀಯತೆಯ ನೆಲೆಯಲ್ಲಿ ಜೀವನವನ್ನು ಅರ್ಥೈಸಿಕೊಂಡು ಸಾಗಬೇಕಾಗಿದೆ. ಈ ದೇಶದ ಬಡತನ ಹಸಿವು ನಿರುದ್ಯೋಗ ಹವಾಮಾನ ವೈಪರೀತ್ಯಗಳಿಂದ ಗಂಭೀರವಾದ ಪರಿಣಾಮಗಳನ್ನು ಅನುಭವಿಸುತ್ತಿದ್ದೇವೆ. ಹಾಗಾಗಿ ಇಂತಹ ಸಮಸ್ಯೆಗಳಿಂದ ಹೊರ ಬರಲು ಮಕ್ಕಳು ಪ್ರಮಾಣಿಕವಾಗಿ ಕಾರ್ಯ ನಿರ್ವಹಿಸಿ ತಮ್ಮ ಬದುಕನ್ನು ಉಜ್ವಲಗೊಳಿಸಿಕೊಂಡಾಗ ಮಾತ್ರ ಇಡೀ ವಿಶ್ವವೇ ಕುಟುಂಬವಾಗಿ ಪರಿವರ್ತನೆ ಆಗುವುದರಲ್ಲಿ ಸಂದೇಶವೇ ಇಲ್ಲ ಎಂದರು.
ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ಶರಣಪ್ಪ ಗಬ್ಬೂರು ಮಾತಾನಾಡಿ ಶಾಂತಿ ನಮ್ಮೊಳಗೆ ಇದೆ. ಬೇರೆಲ್ಲೂ ಅದನ್ನು ಹುಡಕಬೇಡಿ. ಒಗ್ಗಟ್ಟಾಗಿ ಶಾಂತಿಯನ್ನು ರೂಪಿಸುವ ಕಡೆಗೆ ಇಡೀ ಜನ ಸಮುದಾಯ ಚಿಂತಿಸಬೇಕಾಗಿದೆ. ಶಾಂತಿ ಎಂದರೆ ಕೇವಲ ದೇಶ ದೇಶಗಳ ನಡುವೆ ಶಾಂತಿ ಸೌಹಾರ್ದಯುತ ಸಂಬಂಧವಲ್ಲ ಅದು ಮನುಷ್ಯ ಮನುಷ್ಯರ ನಡುವೆ ಸ್ನೇಹಯುತ ವಾತಾವರಣ ಸೃಷ್ಟಿ ಮಾಡುವುದೇ ನಿಜವಾದ ಶಾಂತಿ ಎಂದು ತಿಳಿಕೊಳ್ಳುತ್ತಾ ಕಣ್ಣ ಮುಂದೆ ಕಂಡು ಬರುವ ಇಂತಹ ಅನೇಕ ನಿಗೂಡ ಪ್ರಶ್ನೆಗಳಿಗೆ ಉತ್ತರ ನಮ್ಮಲ್ಲಿಯೇ ಇದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಸಂಘದ ಜಿಲ್ಲಾಧ್ಯಕ್ಷ ಜಿ. ಶ್ರೀನಿವಾಸ, ಶಾಲೆಯ ವ್ಯವಸ್ಥಾಪಕರಾದ ಶಾಂತಕುಮಾರ್, ಸಂತೋμï ಕುಮಾರ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ನಿರ್ದೇಶಕ ವೆಂಕಟಕೃಷ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂದೀಶ್ ಕುಮಾರ್, ಚಿಟ್ನಹಳ್ಳಿ ರಾಮಚಂದ್ರ ಮತ್ತು ಶಾಲೆಯ ಶಿಕ್ಷಕರು, ವಿದ್ಯಾರ್ಥಿ ಮಿತ್ರರು ಉಪಸ್ಥಿತರಿದ್ದರು.

ಕಳೆನಾಶಕ ಮತ್ತು ದ್ರವ ರೂಪದ ಗೊಬ್ಬರ ಸಿಂಪರಣೆ ಮಾಡುವುದು ಎಷ್ಟು ಮುಖ್ಯವೋ ಸಿಂಪರಕಗಳ ಆಯ್ಕೆ ಮತ್ತು ಅವುಗಳನ್ನು ಬಳಸುವ ವಿಧಾನ ಅಷ್ಟೇ ಮುಖ್ಯ

ವರದಿ : ಶಬ್ಬೀರ್ ಅಹ್ಮದ್ ,ಶ್ರೀನಿವಾಸಪುರ

ಕೋಲಾರ ; ಬೆಳೆಗಳನ್ನು ಸಂರಕ್ಷಿಸಲು ಪೀಡೆನಾಶಕಗಳನ್ನು, ಕಳೆನಾಶಕಗಳನ್ನು ಮತ್ತು ದ್ರವ ರೂಪದ ಗೊಬ್ಬರಗಳನ್ನು ಸಿಂಪರಣೆ ಮಾಡುವುದು ಎಷ್ಟು ಮುಖ್ಯವೋ ಸಿಂಪರಕಗಳ ಆಯ್ಕೆ ಮತ್ತು ಅವುಗಳನ್ನು ಬಳಸುವ ವಿಧಾನ ಅಷ್ಟೇ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಕೋಲಾರವು ಆಜಾದಿಕಾ ಅಮೃತ ಮಹೊತ್ಸವದ ಅಂಗವಾಗಿ ರೈತಭಾಂದವರಿಗೆ “ಕೃಷಿಯಲ್ಲಿ ಬಳಸುವ ವಿವಿಧ ಸಿಂಪರಕಗಳು ಮತ್ತು ಅವುಗಳ ಕಾರ್ಯವಿಧಾನ”ದ ಬಗ್ಗೆ ಸಾಮಥ್ರ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ದಿನಾಂಕ: 20.09.2021, ಹಮ್ಮಿಕೊಂಡಿತ್ತು ಎಂದು ಕಾರ್ಯಕ್ರಮದ ಸಂಯೋಜಕಿ ಡಾ. ಅಂಬಿಕಾ ಡಿ. ಎಸ್. ವಿಜ್ಞಾನಿ (ಸಸ್ಯ ಸಂರಕ್ಷಣೆ) ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ, ಬಾಗಲಕೋಟೆಯ ಕೃಷಿ ಅಭಿಯಂತರ ಸಹಾಯಕ ಪ್ರಾದ್ಯಾಪಕರಾದ ಶ್ರೀ. ಶ್ರೀನಾಥ. ಎ. ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಬೆಳೆಗಳ ಮೇಲೆ ನೀರಿನಲ್ಲಿ ಕರಗುವ ರಸಗೊಬ್ಬರಗಳು, ಕಳೆನಾಶಕಗಳು, ಪಿಡೆನಾಶಕಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಸಿಂಪಡಿಸಲು ಬಳಸುವ ಸಾಧನವೇ ಸಿಂಪಡಣಾ ಯಂತ್ರ ಮತ್ತು ಅವುಗಳ ಕಾರ್ಯ ವಿಧಾನಗಳಾದ *ರಾಸಾಯನಿಕ ದ್ರಾವಣವನ್ನು ಪರಿಣಾಮಕಾರಿ ಗಾತ್ರದ ಸೂಕ್ಷ್ಮ ಹನಿಗಳಾಗಿ ಒಡೆಯುವುದು. *ಸಸ್ಯಗಳ ಮೇಲೆ ಏಕರೂಪವಾಗಿ ಹನಿಗಳನ್ನು ವಿತರಿಸುವುದು, *ರಾಸಾಯನಿಕಗಳು ಧನಾತ್ಮಕವಾಗಿ ತಲುಪಲು ಸಾಕಷ್ಟು ಒತ್ತಡದೊಂದಿಗೆ ರಾಸಾಯನಿಕಗಳನ್ನು ಅನ್ವಯಿಸುವುದು. *ರಾಸಾಯನಿಕ ದ್ರಾವಣವನ್ನು ಪೋಲಾಗುವುದನ್ನು ತಪ್ಪಿಸಲು ಸಸ್ಯಗಳ ಮೇಲೆ ಅನ್ವಯಿಸುವ ದ್ರವದ ಪ್ರಮಾಣವನ್ನು ನಿಯಂತ್ರಿಸುವುದರ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ನಂತರ ಉತ್ತಮ ಗುಣಮಟ್ಟದ ಸಿಂಪಡಣಾ ಯಂತ್ರವು ಬಯಸಿದ ಗಾತ್ರದಲ್ಲಿ ಸ್ಥಿರವಾದ ಹನಿಗಳನ್ನು ಉತ್ಪಾದಿಸಬೇಕು, ದ್ರವವನ್ನು ಸಾಕಷ್ಟು ಒತ್ತಡದಲ್ಲಿ ತಲುಪಿಸಬೇಕು, ಇದರಿಂದ ಸಿಂಪರಣಾ ದ್ರಾವಣವು ಎಲ್ಲಾ ಎಲೆಗಳನ್ನು ತಲುಪುತ್ತವೆ ಮತ್ತು ಸಸ್ಯದ ಮೇಲೆ ಏಕರೂಪವಾಗಿ ಹರಡುತ್ತವೆ ಎಂದು ತಿಳಿಸಿದರು. ಜೊತೆಗೆ ಸಿಂಪರಣಾ ಯಂತ್ರವು ಹಗುರವಾಗಿರಬೇಕು ಆದರೆ ಸಾಕಷ್ಟು ಬಲವಾಗಿರಬೇಕು, ಸುಲಭವಾಗಿ ಕೆಲಸ ಮತ್ತು ರಿಪೇರಿ ಮಾಡುವಂತಿರಬೇಕು ಎಂದು ಸಾಕಷ್ಟು ಮಾಹಿತಿ ನೀಡಿದರು.
ಕಳೆನಾಶಕಗಳನ್ನು ಸಿಂಪಡಿಸುವಾಗ ಪ್ರತ್ಯೇಕ ಸಿಂಪಡಕಗಳನ್ನು ಉಪಯೋಗಿಸುವುದು ಯಾವುದೇ ಕಾರಣಕ್ಕೆ ಅವುಗಳನ್ನು ಪೀಡೆನಾಶಕ ಸಿಂಪರಣೆಗೆ ಬಳಸಬಾರದು ಅಲ್ಲದೇ, ಕಳೆನಾಶಕ ಸಿಂಪರಣೆ ಮಾಡಲು ಹಾಲೋ ಕೋನ್ ನಾಜಲ್ (ನಳಿಕೆ) ಮತ್ತು ಪೀಡೆÉನಾಶಕಗಳಾಗಿ ಫ್ಲಾಟ್ ಕೋನ್ ನಾಜಲ್ (ನಳಿಕೆ) ಉಪಯೋಗಿಸುವುದು ಸೂಕ್ತ ಎಂದು ತಿಳಿಸಿದರು. ಅಲ್ಲದೇ ರೈತರ ಸಿಂಪರಣೆಯನ್ನು ಮಾಡುವಾಗ ಸಂರಕ್ಷಣಾ ಉಡುಪನ್ನು ಧರಿಸಿ, ಕಾಲಿಗೆ ಬೂಟು, ಕೈಗೆ ಕೈಗವಸಗಳನ್ನು, ಕಣ್ಣಿಗೆ ಕನ್ನಡಕವನ್ನು ಸಿಂಪರಣೆಯನ್ನು ಕೈಗೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಸಿಂಪಡಣೆಯಾದ ವಿವಿಧ ಭಾಗಗಳ ಮತ್ತು ಅವುಗಳ ಕಾರ್ಯಕ್ಷಮತೆ ಹೆಚ್ಚಿಸುವ ವಿಧಾನಗಳನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಕೃಷಿಯಲ್ಲಿ ಸಿಂಪರಣೆಗೆ ಬಳಸುತ್ತಿರುವ ದ್ರೋಣದ ಬಳಕೆ ಬಗ್ಗೆ ವಿವರಿಸಿದರು. ಸುಮಾರು 50 ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

ಶ್ರೀನಿವಾಸಪುರ:ತಾಡಿಗೋಳ್ ಬಳಿ ವಿದ್ಯಾರ್ಥಿನೀಯರ ಮೇಲೆ ನಡೆದ ಘಟನೆಯನ್ನು ಖಂಡಿಸಿ ದಲಿತ ಸಂಘಟನೆಗಳ 11 ಕಿ.ಮೀಟರ್ ಕಾಲ್ನಡಿಗೆ ಜಾಥ

ವರದಿ : ಶಬ್ಬೀರ್ ಅಹ್ಮದ್ ,ಶ್ರೀನಿವಾಸಪುರ

ಶ್ರೀನಿವಾಸಪುರ:ತಾಡಿಗೋಳ್ ಬಳಿ ವಿದ್ಯಾರ್ಥಿನೀಯರ ಮೇಲೆ ನಡೆದ ಘಟನೆಯನ್ನು ಖಂಡಿಸಿ ಸೋಮವಾರ 11 ದಲಿತ ಸಂಘಟನೆಗಳ ಕಾರ್ಯಕರ್ತರು 11 ಕಿ.ಮೀಟರ್ ಕಾಲ್ನಡಿಗೆ ಜಾಥ ಮೂಲಕ ಘಟನೆಯನ್ನು ಖಂಡಿಸಿ ಮತ್ತೊಂದು ಬಾರಿ ಯಾವ ಹೆಣ್ಣು ಮಗುವಿನ ಮೇಲೆ ಈ ರೀತಿಯ ದಬ್ಬಾಳಿಕೆ, ದೌರ್ಜನ್ಯ ನಡೆಯಬಾರದು ಎಂದು ಒತ್ತಾಯಿಸಿ ದಲಿತ ಸಂಘಟನೆಗಳ ಕಾರ್ಯಕರ್ತರು ಬೃಹತ್ ಶಕ್ತಿ ಪ್ರದರ್ಶನ ನಡೆಸಿದರು.ಬೆಳಿಗ್ಗೆ 10 ಗಂಟೆಗೆ ತಾಡಿಗೋಳ್ ಗ್ರಾಮದಿಂದ ಹೊರಟ ದಲಿತ ಸಂಘಟನೆಗಳ ನೂರಾರು ಕಾರ್ಯಕತರು ಜಾಥ ಹಮ್ಮಿಕೊಂಡರು. ರಸ್ತೆಯುದ್ದಕ್ಕೂ ಜಾಥದಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಬಂದ ದಲಿತ ಸಂಘಟನೆಗಳ ಮುಖಂಡರುಗಳು ಜಾಥಗೆ ಸಾಥ್ ನೀಡಿದರು. ಕೋಲಾರ-ಮದನಪಲ್ಲಿ ರಸ್ತೆ ಮೂಲಕ ಜಾಥ ಸಾಗಿ ಬರುತ್ತಿದ್ದಾಗ ಟ್ರಾಫಿಕ್ ಜಾಮ್ ಆಗದಂತೆ ಪೊಲೀಸರು ಹರಸಾಹಸ ಪಡುತ್ತಿದ್ದರು.
ಶ್ರೀನಿವಾಸಪುರಕ್ಕೆ ಜಾಥ ಬರುವೊಳಗಾಗಿ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಜಮಾ ಆದರು ಪ್ರವಾಸಿ ಮಂದಿರದಿಂದ ತಾಲ್ಲೂಕು ಕಛೇರಿಯ ತನಕ ಬೃಹತ್ ಪ್ರತಿಭಟನೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಈ ಎರಡು ಸರ್ಕಾರಗಳನ್ನು ಕಿತ್ತೊಗೆಯ ತನಕ ನಮ್ಮ ಮೇಲೆ ದೌರ್ಜನ್ಯಗಳು ನಡೆಯುತ್ತಲೆ ಇರುತ್ತವೆ ಮುಂದಿನ ದಿನಗಳಲ್ಲಿ ಇದಕ್ಕೆ ಒಂದು ಇತಿಶ್ರೀ ಹಾಡಲೇಬೇಕು ಎಂದು ದಲಿತ ಮುಖಂಡರಿಂದ ಕೆಳಿ ಬರುತ್ತಿತ್ತು. ರಸ್ತೆಯುದ್ದಕ್ಕೂ ಕ್ರಾಂತಿಗೀತೆಗಳನ್ನು ಹಾಡುತ್ತಾ ತಮಟೆ ವಾದ್ಯಗಳ ಸದ್ದು ಕೇಳಿ ಬರುತ್ತಿತ್ತು.

ಶ್ರೀನಿವಾಸಪುರ: ಅಣಬೆ ತಿನ್ನುವ ಪ್ರಧಾನ ಮಂತ್ರಿ ನಮ್ಮ ದೇಶವನ್ನು ಆಳುತ್ತಿರುವುದು ದುರದೃಷ್ಟಕರ

ವರದಿ : ಶಬ್ಬೀರ್ ಅಹ್ಮದ್ ,ಶ್ರೀನಿವಾಸಪುರ

ಶ್ರೀನಿವಾಸಪುರ,ನಮ್ಮ ದೇಶವನ್ನು ಅಣಬೆ ತಿನ್ನುವ ಪ್ರಧಾನ ಮಂತ್ರಿ ಈ ದೇಶವನ್ನು ಆಳುತ್ತಿರುವುದು ದುರದೃಷ್ಟಕರ. ಸ್ವಾತಂತ್ರ ಬಂದು 75 ವರ್ಷಗಳು ಕಳೆದರೂ ಶೋಷಿತ ಸಮುದಾಯಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಕಂದಾಚಾರ ಕೌರ್ಯಗಳು ಕಣ್ಣು ಮುಂದೆ ಕುಣಿಯುತ್ತಿದ್ದರೂ ಆಳುವ ಸರ್ಕಾರಗಳು ಕಣ್ಣು ಮುಚ್ಚಿ ಕುಳಿತಿವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಆರೋಪಿಸಿದರು.
ತಾಲೂಕಿನ ತಾಡಿಗೋಳ್ ಕ್ರಾಸ್ ನಲ್ಲಿ ವಿದ್ಯಾರ್ಥಿನೀಯರ ಮೇಲೆ ನಡೆದಿರುವ ದೌಜನ್ಯವನ್ನು ಖಂಡಿಸಿ ತಾಡಿಗೋಳ್ ಗ್ರಾಮದಿಂದ ಜಾಥಾವನ್ನು 11 ದಲಿತ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದು ನಂತರ ತಾಲ್ಲೂಕು ಕಛೇರಿ ಮುಂದೆ ಏರ್ಪಡಿಸಲಾಗಿದ್ದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ವ್ಯವಸ್ಥೆ ಆಳುವ ಸರ್ಕಾರಗಳು ವಿಲಾಸ ಜೀವನವನ್ನು ನಡೆಸುತ್ತಿದ್ದಾರೆ. ಈ ದೇಶವನ್ನು ಬಸವಣ್ಣ, ಬುದ್ದ, ಅಂಬೇಡ್ಕರ್ ಹೀಗೆ ಅನೇಕ ಮಹನೀಯರು ಈ ರಾಷ್ಟ್ರವನ್ನು ಕಟ್ಟಿದ್ದಾರೆ. ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ನಿಲ್ಲುತ್ತಿಲ್ಲ ಈ ದೇಶವನ್ನು ಆಳುವ ಮೋದಿ ಸರ್ಕಾರ ಸಂವಿಧಾನ ವಿರೋಧಿಗಳಾಗಿ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಈ ರಾಜ್ಯದಲ್ಲಿ 198 ಕೊಲೆಗಳು ಆಗಿದೆ ಆದರೆ ಶಿಕ್ಷೆಯ ಪ್ರಮಾಣ ಶೇ.2ರಷ್ಟು ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಸಂಸದರು ದೌರ್ಜನಗುಕ್ಕೊಳಗಾದ ಗ್ರಾಮಗಳಿಗೆ ಹೋಗುತ್ತಿಲ್ಲ. ಗುಜರಾತ್, ಬಿಹಾರ, ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಘಟನೆಗಳು ಈ ಜಿಲ್ಲೆ ಮತ್ತು ತಾಲೂಕಿನಲ್ಲಿ ನಡೆದಿರುವುದು ತುಂಬಾ ಶೋಷನೀಯ. ನಮ್ಮ ದಲಿತ ಸಂಘಟನೆಗಳು ದೌರ್ಜನ್ಯಕ್ಕೆ ಒಳಗಾದ ಕುಟುಂಬಗಳಿಗೆ ನ್ಯಾಯವನ್ನು ದೊರೆಕಿಸುವ ಕೆಲಸ ಮಾಡುತ್ತೇವೆ. ಈ ದೇಶ ವಿಶ್ವಗುರು ಆಗುವುದಕ್ಕೆ ಹೊರಟಿದೆ. ದೇಶದಲ್ಲಿ ಒಂದು ಆರ್.ಎಸ್.ಎಸ್ ಇರಬೇಕು ಅಥವಾ ಡಿ.ಎಸ್.ಎಸ್ ಇರಬೇಕು. ಆದ್ದರಿಂದ ಹಳ್ಳಿಯಲ್ಲಿ ಕಾರ್ಯಕರ್ತರು ಎಚ್ಚೆತ್ತುಕೊಂಡು ಇಂತಹ ಘಟನೆಗಳು ಮರುಕಳಿಸಿದಂತೆ ಹೋರಾಟಗಳನ್ನು ಹಮ್ಮಿಕೊಳ್ಳಬೇಕು. ಈ ಚಳುವಳಿಗೆ ರಾಜ್ಯದ ಅನೇಕ ಭಾಗಗಳಿಂದ ಆಗಮಿಸಿ ಈ ಹೋರಾಟವನ್ನು ಯಶಸ್ವಿಗೊಳಿಸಿದ್ದೀರಿ. ಈ ನೆಲದ ಕಾನೂನನನ್ನು ಪೊಲೀಸರು ಕಾಪಾಡಬೇಕು. ನೊಂದವರ ಪರ ನ್ಯಾಯವನ್ನು ಕೊಡಿಸುವ ಕೆಲಸ ಮಾಡಬೇಕು. ಕೋಲಾರದ ಯುವ ಜನತೆ ಇಂತಹ ವಿಷಯಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಜಿಲ್ಲೆಯಲ್ಲಿ ಅನೇಕ ದಲಿತ ಸಂಘಟನೆಯ ಮುಖಂಡರು ಹೋರಾಟಗಳನ್ನು ನಡೆಸಿ ಅವರ ತ್ಯಾಗ, ಬಲಿದಾನಗಳು ಇಂದು ನಮಗೆ ಸ್ಪೂರ್ತಿಯಾಗಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಈ ಕುಟುಂಬಕ್ಕೆ ನ್ಯಾಯವನ್ನು ಒದಗಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ದಲಿತ ಸಂಘರ್ಷ ಸಮಿತಿಯ ರಾಜ್ಯ ಮುಖಂಡ ಎನ್. ಮುನಿಸ್ವಾಮಿ ಮಾತನಾಡಿ ತಾಡಿಗೋಳ್ ಗ್ರಾಮದಲ್ಲಿ ನಡೆದ ಘಟನೆ ಸಮಾಜ ತಲೆ ತಗ್ಗಿಸುವಂತಾಗಿದೆ. ಇಂತಹ ಅಮಾನುಷ ಹೀನ ಕೃತ್ಯಗಳನ್ನು ಇನ್ನು ಮುಂದೆ ಆಗದಂತೆ ದಲಿತ ಸಂಘಟನೆಗಳು ಎಚ್ಚೆತ್ತುಕೊಳ್ಳಬೇಕು ಇದಕ್ಕೆಲ್ಲ ಕಾರಣ ಪೊಲೀಸ್ ವೈಫಲ್ಯವೇ ಕಾರಣ ಒಬ್ಬ ಜವಾಬ್ದಾರಿ ಡಿ.ವೈ.ಎಸ್.ಪಿ. ಕೇವಲ ಬಸ್ ಸೀಟಿಗಾಗಿ ಎಂದು ಹೇಳಿರುವುದು ದುರದೃಷ್ಟಕರ ಈ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆ ಹೋರಾಟಗಳ ತವರೂರಾಗಿದೆ. ಈ ಜಿಲ್ಲೆಗಳಲ್ಲಿ ಗುಂಡಾ ಸಂಸ್ಕøತಿ ನಿಲ್ಲಬೇಕು ಈ ದೇಶ ಪುರುಷ ಮತ್ತು ಮಹಿಳಾ ಪ್ರಧಾನ ರಾಷ್ಟ್ರವಾಗಿದ್ದು ಎಲ್ಲರಿಗೂ ಸಮಾನ ಹಕ್ಕುಗಳು ಸಿಗಬೇಕು ಈ ಸಂಸ್ಕøತಿಯನ್ನು ಮಟ್ಟ ಹಾಕುವ ಕೆಲಸ ನಾವೆಲ್ಲರೂ ಮಾಡಬೇಕು ಅನ್ಯಾಯದ ವಿರುದ್ದ ದ್ವನಿ ಎತ್ತುವ ಕೆಲಸ ಮಾಡುತ್ತೇವೆ. ಇಂತಹ ಗುಂಡಾ ಸಂಸ್ಕøತಿಗೆ ಜಿಲ್ಲೆಯಲ್ಲಿ ಕಡಿವಾಣ ಹಾಕಬೇಕು ಎಂದರು.
ರಾಜ್ಯ ದಲಿತ ಸಂಘರ್ಷ ಸಮಿತಿಯ ಮುಖಂಡ ಗೊಳ್ಳಹಳ್ಳಿ ಶಿವಪ್ರಸಾದ್ ಮಾತನಾಡಿ ಹೆಣ್ಣು ಮಕ್ಕಳ ಮೇಲೆ ಗುಂಡಾ ವರ್ತನೆ ತೋರಿದ ಮಹಿಳೆಯನ್ನು ಕೂಡಲೇ ಬಂಧಿಸಬೇಕು ಕುಟುಂಬಕ್ಕೆ ನ್ಯಾಯವನ್ನು ಒದಗಿಸುವ ಕೆಲಸ ಆಗಬೇಕು ಈ ಬೃಹತ್ ಜಾಥದಲ್ಲಿ ಎಲ್ಲಾ ಸಂಘಟನೆಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದೀರಿ ಅನ್ಯಾಯವಾದಾಗ ದ್ವನಿ ಎತ್ತುವ ಕೆಲಸ ನಾವು ಮಾಡುತ್ತೇವೆ ನಮ್ಮ ಪ್ರಾಣ ಇರುವರೆಗೂ ಇಂತಹ ದೌರ್ಜನ್ಯ, ದಬ್ಬಾಳಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಈ ಸಂಧರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಮುಖಂಡ ಎನ್. ವೆಂಕಟೇಶ್, ದಲಿತ ಪ್ರಜಾ ಸೇನೆಯ ಜಿಲ್ಲಾಧ್ಯಕ್ಷ ಡಿ.ಪಿ.ಎಸ್. ಮುನಿರಾಜು, ನರಾಸಪುರ ನಾರಾಯಣಸ್ವಾಮಿ, ಆಂದ್ರ ಪ್ರದೇಶದ ದಲಿತ ಮುಖಂಡ ಶಿವಪ್ರಸಾದ್, ಸ್ವಾಭಿಮಾನಿ ಚಳುವಳಿಯ ದೇವರಾಜ್, ಕಾರಹಳ್ಳಿ ಶ್ರೀನಿವಾಸ್, ಗಾಂಧಿನಗರ ವೆಂಕಟೇಶ್, ಹಾರೋಹಳ್ಳಿ ರವಿ, ದಲಿತ ಬುದ್ದಸೇನೆಯ ರಾಜ್ಯದ್ಯಕ್ಷ ವರ್ತನಹಳ್ಳಿ ವೆಂಕಟೇಶ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ಅಗ್ರಹಾರ ವೆಂಕಟೇಶ್, ದಲಿತ ಮುಖಂಡರಾದ ಈರಪ್ಪ, ರಾಮಾಂಜಮ್ಮ, ದೊಡ್ಡಬಂದಾರ್ಲಹಳ್ಳಿ ಮುನಿಯಪ್ಪ, ಮುಳಬಾಗಲಪ್ಪ, ಮುದಿಮುಡುಗು ವಾಸು, ಉಪ್ಪರಪಲ್ಲಿ ತಿಮ್ಮಯ್ಯ ಮುಂತಾದವರು ಉಪಸ್ಥಿತರಿದ್ದರು.



ದುಡಿಯುವ ಕೈಗೆ ಕೆಲಸ ಕೊಡದೆ ಜೆಸಿಬಿ ಮೂಲಕ ಕಾಮಗಾರಿ ಮಾಡುತ್ತಿರುವವರ ವಿರುದ್ಧ ಗೂಂಡಾ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿ

ವರದಿ : ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ

ಕೋಲಾರ-ಸೆ-20, ನರೇಗಾ ಕಾಮಗಾರಿಯನ್ನು ದುಡಿಯುವ ಕೈಗೆ ಕೆಲಸ ಕೊಡದೆ ಜೆಸಿಬಿ ಮೂಲಕ ವಿವಿಧ ಕಾಮಗಾರಿಗಳನ್ನು ಮಾಡುತ್ತಿರುವವರ ವಿರುದ್ಧ ಗೂಂಡಾ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿ ಪಂಚಾಯಿತಿಗಳಲ್ಲಿನ ಭ್ರಷ್ಟಾಚಾರತೆ ತನಿಖೆ ಮಾಡಲು ಸೂಕ್ತ ಅಧಿಕಾರಿಗಳಿಂದ ತನಿಖೆ ಮಾಡಬೇಕೆಂದು ರೈತ ಸಂಘದಿಂದ ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಮುಂದೆ ಜೆ.ಸಿ.ಬಿ ಸಮೇತ ಹೋರಾಟ ಮಾಡಿ, ಉಪ ಕಾರ್ಯದರ್ಶಿಗಳಾದ ಸಂಜೀವಪ್ಪರವರಿಗೆ ಮನವಿ ನೀಡಿ, ಆಗ್ರಹಿಸಲಾಯಿತು.
ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷಗಳು ಕಳೆದರೂ ಹಳ್ಳಿಗಳ ಅಭಿವೃದ್ಧಿ ಮರುಚಿಕೆಯಾಗಿದೆ. ಕೇಂದ್ರ ಸರ್ಕಾರದ ದುಡಿಯುವ ಕೈಗೆ ಕೆಲಸ ನೀಡದೆ ನರೇಗ ಯೋಜನೆ ಇಂದು ಜೆ.ಸಿ.ಬಿ ಯೋಜನೆಯಾಗಿ ಮಾರ್ಪಟ್ಟು ಬಡವರ ಹೆಸರಿನಲ್ಲಿ ಜಾಬ್‍ಕಾರ್ಡ್‍ಗಳನ್ನು ಸೃಷ್ಟಿ ಮಾಡಿ ಜೆ.ಸಿ.ಬಿ ಮುಖಾಂತರ ಕೆಲಸ ಮಾಡಿ ಬಡವರ ಹೆಸರಿನಲ್ಲಿ ಹಣವನ್ನು ಪಡೆದುಕೊಂಡು ಅವರ ಅನ್ನವನ್ನು ಅಧಿಕಾರಿಗಳಿಗೆ ಜನ ಪ್ರತಿನಿಧಿಗಳಿಗೆ ಚಿನ್ನದ ಮೊಟ್ಟೆ ಇಡುವ ಯೋಜನೆಯಾಗಿದೆ ಎಂದು ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಅಧಿಕಾರಿಗಳ ವಿರುದ್ದ ಅಸಮದಾನ ವ್ಯಕ್ತಪಡಿಸಿದರು.
ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ರವರು ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶಗಳ ಬಡ ಕೂಲಿಕಾರ್ಮಿಕರಿಗೆ ಅನುಕೂಲವಾಗಲೆಂದು ದುಡಿಯುವ ಕೈಗಳಿಗೆ ಕೆಲಸ ನೀಡಲು ಸಾವಿರಾರು ಕೋಟಿ ಅನುದಾನಗಳನ್ನು ಬಿಡುಗಡೆ ಮಾಡುತ್ತಿದ್ದರೆ ಅದನ್ನು ಸಮರ್ಪಕವಾಗಿ ನಿರ್ವಹಿಸಬೇಕಾದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಸರ್ಕಾರಕ್ಕೆ ಸವಾಲು ಎಂಬಂತೆ ದುಡಿಯೋಣ ಅಭಿಯಾನ ಇಂದು ಜೆಸಿಬಿ ಮುಖಾಂತರ ಕಾಮಗಾರಿ ಮಾಡಿ ಜನಸಾಮಾನ್ಯರ ಕಣ್ಣು ತಪ್ಪಿಸಿ ಹಣ ಮಾಡೋಣ ಬಾ ಎಂಬ ಅಭಿಯಾನವಾಗಿ ಬದಲಾಗಿದೆ. ಹುತ್ತೂರು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನರೇಗಾ ಯೋಜನೆಯ ರಸ್ತೆ, ಕೆರೆಗಳಲ್ಲಿ ಬದು ನಾಲೆಗಳ ನಿರ್ಮಾಣ ಕೆರೆ-ಕುಂಟೆ ಸ್ವಚ್ಛತೆ ಸ್ಮಶಾನ, ಗೋಕುಂಟೆ, ನಮ್ಮ ಹೊಲ ನಮ್ಮ ರಸ್ತೆ, ಕಾಲುವೆ ಅಭಿವೃದ್ದಿ ಹಾಗೂ ಗ್ರಾಮೀಣ ಪ್ರದೇಶಗಳ ಕೆಲವು ಕಾಮಗಾರಿಗಳನ್ನು ರಾಜಾರೋಷವಾಗಿ ದುಡಿಯುವ ಬಡವರ ಕೈಗೆ ಕೆಲಸ ಕೊಡದೆ ರಾತ್ರೋರಾತ್ರಿ ಜೆಸಿಬಿ ಮುಖಾಂತರ ಕಾಮಗಾರಿಯನ್ನು ಮುಗಿಸುತ್ತಿದ್ದರೂ ಅಧಿಕಾರಿಗಳ ಮೌನವೇಕೆ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.
ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ ಮಾತನಾಡಿ ನರೇಗಾದಲ್ಲಿ ಕೆಲಸ ಮಾಡುವ ಮೊದಲು ಆ ಕಾಮಗಾರಿಗೆ ಆಗುವ ಅಂದಾಜು ವೆಚ್ಚ, ಕೂಲಿ ಕಾರ್ಮಿಕರ ಪಟ್ಟಿ (ಎನ್ಎಂಆರ್) ಕ್ರಿಯಾಯೋಜನೆ ಮತ್ತಿತರ ಕಾನೂನಾತ್ಮಕ ನಿಯಮಗಳನ್ನು ಪಾಲನೆ ಮಾಡುವ ಜೊತೆಗೆ ಕಾಮಗಾರಿ ಮಾಡುವ ಸ್ಥಳವನ್ನು ಸಂಬಂಧಪಟ್ಟ ಎಂಜಿನಿಯರ್ ಹಾಗೂ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ಮಾಡಿ ಜಿಪಿಎಸ್ ಪೂರ್ಣಗೊಳಿಸಿದ ನಂತರ ಪ್ರತಿದಿನ ಕಾಮಗಾರಿಯ ಸ್ಥಳಕ್ಕೆ ಹೋಗಿ ಕೂಲಿ ಕಾರ್ಮಿಕರ ಪೆÇೀಟೋಗಳನ್ನು ತೆಗೆದು ಕಾಮಗಾರಿಯ ಸಂಪೂರ್ಣ ದಾಖಲೆಗಳನ್ನು ಕಡತ ಮಾಡಬೇಕು. ಆದರೆ ಇಂದು ಅದು ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ನಾವೇ ರಾಜ ನಾವೇ ಮಂತ್ರಿ ಎಂಬಂತೆ ತಮಗೆ ಇಷ್ಟ ಬಂದ ಕಾಮಗಾರಿಗಳನ್ನು ಹಾಕಿಸಿಕೊಂಡು ಲಕ್ಷರೂಪಾಯಿ ವೆಚ್ಚವಾಗುವ ಕಾಮಗಾರಿಗೆ 5 ಲಕ್ಷದಿಂದ 50 ಲಕ್ಷದವರೆಗಿನ ಅಂದಾಜು ಪಟ್ಟಿ ಕ್ರಿಯಾ ಯೋಜನೆ ತಯಾರು ಮಾಡಿ ಸ್ಥಳ ಪರಿಶೀಲನೆ, ಪೋಟೋ ಹಾಗೂ ಜಿ.ಪಿ.ಎಸ್. ಮಾಡುವ ಮುಖಾಂತರ ಕಾಮಗಾರಿ ಪ್ರಾರಂಭ ಮಾಡಿ ಅಂತ್ಯದ ವರೆಗೂ ಪ್ರತಿನಿತ್ಯ ಪರಿಶೀಲನೆ ಮಡಬೇಕಾದ ಅಧಿಕಾರಿಗಳು ನಾಪತ್ರೆಯಾಗಿದ್ದಾರೆಂದು ಅಸಮದಾನ ವ್ಯಕ್ತಪಡಿಸಿದರು. ಒಂದುವಾರದೊಳಗೆ ಜಿಲ್ಲಾದ್ಯಂತ 158 ಪಂಚಾಯಿತಿ 1950 ಹಳ್ಳಿಯಲ್ಲಿನ ಕಾಮಗಾರಿಗಳ ಅವ್ಯವಹಾರ ಹಾಗೂ 14 ಮತ್ತು 15 ರ ಹಣಕಾಸು ಯೋಜನೆಯಲ್ಲಿನ ಭ್ರಷ್ಟಾಚಾರತೆ ತನಿಖೆ ನಡೆಸಲು ವಿಶೇಷ ತಂಡ ರಚನೆ ಮಾಡಿ ಹಳ್ಳಿಗಳ ಅಭಿವೃದ್ಧಿ ಹಣವನ್ನು ನುಂಗಿ ನೀರು ಕುಡಿದಿರುವ ಕಾಮಗಾರಿ ಹಾಗೂ ಅಧಿಕಾರಿಗಳು ಜನ ಪ್ರತಿನಿಧಿಗಳ ವಿರುದ್ದ ಕ್ರಮ ಕೈಗೊಳ್ಳದೇ ಹೋದರೆ ಸಾವಿರಾರು ಟ್ರಾಕ್ಟರ್‍ನೊಂದಿಗೆ ಮಾನ್ಯ ಮುಖ್ಯ ಮಂತ್ರಿಗಳ ಮನೆಯನ್ನು ಮುತ್ತಿಗೆ ಹಾಕುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಉಪ ಕಾರ್ಯದರ್ಶಿ ಸಂಜೀವಪ್ಪರವರು ನೀವು ಹೇಳುತ್ತಿರುವುದು ಸತ್ಯವಾಗಿದೆ. ಜೆ.ಸಿ.ಬಿ ಗಳ ಮೂಲಕ ಕೆಲಸ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಿ ನರೇಗಾ ಯೋಜನೆಯಲ್ಲಿ ಸರ್ಕಾರದ ಆದೇಶದಂತೆ ದುಡಿಯುವ ಕೈಗಳಿಗೆ ಕೆಲಸ ಕೊಡುವ ಭರವಸೆ ನೀಡಿದರು.
ಹೋರಾಟದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಹಸಿರು ಸೇನೆ ಜಿಲ್ಲಾಧ್ಯಕ್ಷ ಕಿರಣ್, ಮರಗಲ್ ಮುನಿಯಪ್ಪ, ಮೂರಾಂಡಹಳ್ಳಿ ಶಿವಾರೆಡ್ಡಿ, ನಲ್ಲಾಂಡಹಳ್ಳಿ ಕೇಶವ, ಯಲ್ಲಪ್ಪ, ಹರೀಶ್, ಮಂಗಸಂದ್ರ ತಿಮ್ಮಣ್ಣ, ನಗರ ಸಂಚಾಲಕ ಮಂಗಸಂದ್ರ ನಾಗೇಶ್, ವೆಂಕಟೇಶಪ್ಪ, ಅಶ್ವಥಪ್ಪ, ಕುವಣ್ಣ, ಸುಪ್ರಿಂಚಲ , ನಳಿನಿ.ವಿ, ನಾಗರತ್ನಮ್ಮ, ಚೌಡಮ್ಮ. ನಾಗವೇಣಿ ವೆಂಕಟರತ್ನಮ್ಮ, ಚಂದ್ರಪ್ಪ, ಮುಂತಾದವರು ಇದ್ದರು.