ಕುಂದಾಪುರ : ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ 19.06.2024 ಬುಧವಾರದಂದು ವಿದ್ಯಾರ್ಥಿ ಸಂಸತ್ ಗೆ ವಿದ್ಯಾರ್ಥಿ ನಾಯಕರ ಆಯ್ಕೆಗಾಗಿ ಚುನಾವಣೆ ನಡೆಯಿತು.ಚುನಾವಣೆಯ ಪ್ರತಿಯೊಂದು ಮಜಲುಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಸಲುವಾಗಿ ನೈಜ ಚುನಾವಣಾ ಮಾದರಿಯಲ್ಲಿಯೇ ಆರಂಭವಾದ ಈ ಚುನಾವಣಾ ಪ್ರಕ್ರಿಯೆ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂಪಡೆಯುವಿಕೆ, ಚಿನ್ಹೆಗಳ ವಿತರಣೆ, ಚುನಾವಣಾ ಪ್ರಚಾರ, ಅಭ್ಯರ್ಥಿಗಳ ಆಯ್ಕೆ ಹೀಗೆ ಅನೇಕ ಹಂತಗಳನ್ನು ಒಳಗೊಂಡಿತ್ತು. […]
ಕುಂದಾಪುರ, 2024 ಜೂನ್ 16 ರಂದು ತಲ್ಲೂರಿನ ಸಂತ ಫ್ರಾನ್ಸಿಸ್ ಆಸಿಸ್ಸಿ ಚರ್ಚಿನಲ್ಲಿ ಕುಟುಂಬ ಆಯೋಗದಿಂದ ವಿಶ್ವ ಅಪ್ಪಂದಿರ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಮೊದಲಿಗೆ ಚರ್ಚಿನ ಧರ್ಮ ಗುರುಗಳಾದ ರೆ. ಫಾ. ಎಡ್ವಿನ್ ಡಿಸೋಜರವರು ಬಲಿ ಪೂಜೆಯನ್ನು ಅರ್ಪಿಸಿದರು. ನಂತರ ಅವರು ಬಳಿಕ ಚರ್ಚಿನ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ವಾಗತ ಕೋರಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಧರ್ಮ ಪ್ರಾಂತ್ಯದ ಕುಟುಂಬ ಆಯೋಗದ ನಿರ್ದೇಶಕರಾಗಿರುವ ಶ್ರೀಯುತ ಲೆಸ್ಲಿ ಆರೋಜರವರು ಹಾಜರಿದ್ದು ಕುಟುಂಬದಲ್ಲಿ ತಂದೆಗೆ ಇರುವ ಸ್ಥಾನಮಾನ […]
ವಿಶ್ವ ರಕ್ತಧಾನಿಗಳ ದಿನ: ಮೂಡ್ಲುಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಹಯೋಗದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ರಕ್ತಧಾನಿಗಳ ದಿನದ ಅಂಗವಾಗಿ ರಕ್ತದಾನ ಶಿಬಿರ ಜರಗಿತು. ಮುಖ್ಯ ಅತಿಥಿಯವರಾದ ಶ್ರೀಯುತ ವೈ .ಸೀತಾರಾಮ್ ಶೆಟ್ಟಿ (ಕಾರ್ಯದರ್ಶಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ) ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಒದ್ದಾಟಿಸಿ ,ವಿದ್ಯಾರ್ಥಿಗಳಿಗೆ ರಕ್ತದಾನದ ಮಹತ್ವವನ್ನು ತಿಳಿಸುತ್ತಾ ರಕ್ತ ಸಂಗ್ರಹಣೆ , ಪರಿಷ್ಕರಣೆಯ ಬಗ್ಗೆ ತಿಳಿಸಿ ಮುಖ್ಯ ಅತಿಥಿಯವರಾದ ಶ್ರೀಯುತ ವೈ .ಸೀತಾರಾಮ್ ಶೆಟ್ಟಿ (ಕಾರ್ಯದರ್ಶಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ) ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಒದ್ದಾಟಿಸಿ,ವಿದ್ಯಾರ್ಥಿಗಳಿಗೆ ರಕ್ತದಾನದ ಮಹತ್ವವನ್ನು ತಿಳಿಸುತ್ತಾ ರಕ್ತ ಸಂಗ್ರಹಣ, ಪರಿಷ್ಕರಣೆಯ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಶ್ರೀಯುತ ಶಿವರಾಮ ಶೆಟ್ಟಿ (ಕೋಶಾಧಿಕಾರಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ),ಪ್ರಾಂಶುಪಾಲೆಯವರಾದ ಜನಿಫರ್ ಫ್ರೀಡ ಮೆನೇಜಸ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶರೀಲ್ ಸಾರಾ ಕಾರ್ಯಕ್ರಮವನ್ನು ನಿರೂಪಿಸಿದರು, ನಿತ್ಯ ಪಿ ಸ್ವಾಗತಿಸಿ, ಭಾಗ್ಯಶ್ರೀ ಕಾರ್ಯಕ್ರಮವನ್ನು ವಂದಿಸಿದರು.
ಕುಂದಾಪುರ ಜಾಮಿಯಾ ಮಸೀದಿಯಲ್ಲಿ ಈದುಲ್ ಅಝಆ ( ಬಕ್ರೀದ್) ಹಬ್ಬವನ್ನು ಆಚರಿಸಲಾಯಿತು. ಮಸೀದಿಯ ಇಮಾಮ್ ತಬ್ರೇಜ್ ಆಲಂ ಅವರು ಈದ್ ನಮಾಜ್ ನೆರವೇರಿಸಿದರು. ನಮಾಜ್ ನಂತರ ಈದ್ಗಾ ತನಕ ಮುಸ್ಲಿಂ ಬಾಂಧವರು ತಕಬೀರ್ ಹೇಳುತ್ತಾ ನಗರದ ಮುಖ್ಯ ಬೀದಿಗಳಲ್ಲಿ ಜುಲುಸ್ ನಡೆಸಿದರು.
ಕುಂದಾಪುರ: ಗಿಳಿಯಾರು ಕುಶಲಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ (ರಿ) ಕುಂದಾಪುರ ವತಿಯಿಂದ ಜೂನ್ 19 ರಂದು ಬುಧವಾರ ಮಧ್ಯಾಹ್ನ 3 ಗಂಟೆಗೆ ಕುಂದಾಪುರ ಸ.ಪ.ಪೂ.ಕಾಲೇಜಿನ ರೋಟರಿಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ, ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಸಮಾರಂಭ ನಡೆಯಲಿದೆ. ಹಿರಿಯ ಸಾಹಿತಿ, ಸಂಶೋಧಕ ಪ್ರೊ.ಎ.ವಿ. ನಾವಡ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಮಾಡಲಿದ್ದಾರೆ.ಖ್ಯಾತ ಲೆಕ್ಕ ಪರಿಶೋಧಕರು ಹಾಗೂ ಕಾನೂನು ಸಲಹೆಗಾರರಾದ ಸಿ.ಎ.ನಾಗರಾಜ ಆಚಾರ್ ಬೆಂಗಳೂರು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.ಸಮಾರಂಭದ ಅಧ್ಯಕ್ಷತೆಯನ್ನು ಗಿಳಿಯಾರು ಕುಶಲ ಹೆಗ್ಡೆ ಸ್ಮಾರಕ […]
ಕುಂದಾಪುರ: ಸಾಮಾನ್ಯ ಪ್ರವೇಶ ಪರೀಕ್ಷೆ-2024(C.E.T) ಯಲ್ಲಿ ಕುಂದಾಪುರದ ಆರ್.ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಿಶಾ ಇವರು ಎಗ್ರಿಕಲ್ಚರ್ B.Sc ವಿಭಾಗದಲ್ಲಿ 2974 ನೇ ರ‍್ಯಾಂಕ್, ಎಂಜಿನೀಯರಿಂಗ್ ನಲ್ಲಿ 7011, BNYS ನಲ್ಲಿ 5704 ನೇ ರ‍್ಯಾಂಕ್, ಸುಜನ್ ಕುಮಾರ್ ಎಗ್ರಿಕಲ್ಚರ್ B.Sc ಯಲ್ಲಿ 5136, ಎಂಜಿನೀಯರಿಂಗ್ ನಲ್ಲಿ 9934, BNYS ನಲ್ಲಿ 11,316 ನೇ ರ‍್ಯಾಂಕ್, ಸುಹಾನಿ ಎನ್ ಇವರು ಎಗ್ರಿಕಲ್ಚರ್ B.Sc . ಯಲ್ಲಿ 5940, BNYS ನಲ್ಲಿ 8312, ಎಂಜಿನಿಯರಿಂಗ್ ನಲ್ಲಿ […]
ಜೂನ್ 14 ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಅಂಗವಾಗಿ ಕಸ್ತೂರಬಾ ಆಸ್ಪತ್ರೆ ಮಣಿಪಾಲ ಆಯೋಜಿಸಿದ ರಕ್ತದಾನಿಗಳಿಗೆ ಹಾಗೂ ರಕ್ತದಾನ ಶಿಬಿರದ ಆಯೋಜಕರಿಗೆ ಗೌರವ ಪ್ರಧಾನ ಸಭಾ ಕಾರ್ಯಕ್ರಮದಲ್ಲಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಸತತವಾಗಿ 4 ನೇ ಬಾರಿ ರಕ್ತ ಕೇಂದ್ರ ಮಣಿಪಾಲ ಸಹಕಾರದಲ್ಲಿ ಅತೀ ಹೆಚ್ಚು ರಕ್ತದಾನ ಶಿಬಿರ ಆಯೋಜಿಸಿದಕ್ಕಾಗಿ ಡಾ. ಸತೀಶ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಪ್ರಶಸ್ತಿ ಯನ್ನು ಸಂಸ್ಥೆಯ ಅಧ್ಯಕ್ಷರಾದ ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ್ ಅವರಿಗೆ ಕುಮಾರಿ ರಶ್ಮಿ […]
ಮಂಗಳೂರು: ಅಭಯ ಫ್ರೆಂಡ್ಸ್ ಸ್ಥಳೀಯ ಗೆಳೆಯರ ಬಳಗವು ಶನಿವಾರ ಸಂಜೆ ಸೇಂಟ್ ಅಲೋಶಿಯಸ್ ವಿಶ್ವವಿದ್ಯಾನಿಲಯದ ಎಲ್‌ಸಿಆರ್‌ಐ ಆಡಿಟೋರಿಯಂನಲ್ಲಿ ಅತ್ಯಂತ ಮೆಚ್ಚುಗೆ ಪಡೆದ “ದಿ ಫೇಸ್ ಆಫ್ ದಿ ಫೇಸ್‌ಲೆಸ್” ಚಲನಚಿತ್ರದ ಉದ್ಘಾಟನಾ ಪ್ರದರ್ಶನವನ್ನು ಆಯೋಜಿಸಿದ್ದರಿಂದ ಮಂಗಳೂರು ಸಿನಿಮೀಯ ಮೈಲಿಗಲ್ಲೊಂದಕ್ಕೆ ಸಾಕ್ಷಿಯಾಯಿತು. ಶೈಸನ್ ಪಿ. ಜೋಸೆಫ್ ನಿರ್ದೇಶಿಸಿದ್ದಾರೆ ಮತ್ತು ಸಾಂಡ್ರಾ ಡಿಸೋಜಾ ರಾಣಾ ನಿರ್ಮಿಸಿದ್ದಾರೆ, “ದಿ ಫೇಸ್ ಆಫ್ ದಿ ಫೇಸ್‌ಲೆಸ್” ತನ್ನ ಬಲವಾದ ನಿರೂಪಣೆ ಮತ್ತು ಅಸಾಧಾರಣ ಅಭಿನಯಕ್ಕಾಗಿ ಅಂತರರಾಷ್ಟ್ರೀಯ ಗಮನವನ್ನು ಗಳಿಸಿದೆ. ಇದು ಭಾರತದ ಮಧ್ಯಪ್ರದೇಶದ […]
ಗಂಗೊಳ್ಳಿ: ಕೊಸೆಸಾಂವ್ ಅಮ್ಮನವರ ಇಗರ್ಜಿಯಲ್ಲಿ ಕ್ರೈಸ್ತ ಶಿಕ್ಷಣದ ವರ್ಷದ ಉದ್ಘಾಟನೆ ಜೂನ್ 9 ರಂದು ನಡೆಯಿತು. ಪ್ರಧಾನ ಧರ್ಮಗುರುಗಳಾಗಿ ಉಡುಪಿ ಧರ್ಮ ಪ್ರಾಂತ್ಯದ ಕ್ರೈಸ್ತ ಶಿಕ್ಷಣ ಆಯೋಗದ ನಿರ್ದೇಶಕರಾದ ವಂದನೀಯ ಸಿರಿಲ್ ಲೋಬೊ ಮತ್ತು ಗಂಗೊಳ್ಳಿ ಇಗರ್ಜಿಯ ಧರ್ಮಗುರು ತೋಮಸ್ ರೋಶನ್ ಡಿಸೋಜ ಇವರು ಪ್ರವಿತ್ರ ಬಲಿಪೂಜೆಯನ್ನು ಅರ್ಪಿಸಿದರು. ಪ್ರಾರಂಭದಲ್ಲಿ ಪವಿತ್ರ ಬೈಬಲನ್ನು ಮೆರವಣಿಗೆಯಲ್ಲಿ ತಂದು ಪ್ರತಿಷ್ಟಾಪಿಸಿ, ಬೈಬಲಿಗೆ ಪುಷ್ಪಾಹಾರವನ್ನು ಅರ್ಪಿಸಿದರು. ತದನಂತರ ಇಗರ್ಜಿಯ ಧರ್ಮಗುರುಗಳು ಧ್ಯೇಯವಾಕ್ಯ “ಕ್ರಿಸ್ತಾಂವ್ ಶಿಕ್ಷಣಾಚೆಂ ಬಳ್ ; ಕರ್ತಾ ಮಾಗ್ಣೆಂ ಸುಫಳ್ […]