ಕೊಟೇಶ್ವರ ಚರ್ಚಿನ ಫಾದರ್ ಸಿರಿಲ್ ಮಿನೇಜೆಸ್ ಅದೇ ಬಸ್ಸಿನಲ್ಲಿ ಪ್ರಯಾಣ ಮಾಡುತಿದ್ದರು ಉಪ್ಪಿನಂಗಡಿ,ಮಾ. 19: ನಿನ್ನೆ ವೇಣೂರಿನ ಪಡಂಗಡಿ ಗ್ರಾಮದ ಗರ್ಡಾಡಿ ನಂದಿಬೆಟ್ಟಬಳಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಸ್ಕೂಟರ್ ನಡುವೆ ನಡೆದ ಘೋರ ಅಪಘಾತದಲ್ಲಿ ಹಿರೆಬಂಡಾಡಿಯ ಸಹೋದರರಿಬ್ಬರು ಸ್ಥಳದಲ್ಲೇ ಮೃತಪಟ್ಟರು.. ಹಬ್ಬದ ದಿನವೇ ಘಟನೆ ನಡೆದಿದ್ದು ಉಪ್ಪಿನಂಗಡಿಯ ಹಿರೆಬಂಡಾಡಿ ಭಾಗದಲ್ಲಿ ಜನರಲ್ಲಿ ಶೋಕ ಮುಡುಗಟ್ಟಿತ್ತು.ಉಪ್ಪಿನಂಗಡಿ ಸನಿಹದ ಹಿರೆಬಂಡಾಡಿ ನಿವಾಸಿ, ನಿವೃತ ಶಿಕ್ಷಕ ಅಬ್ದುಲ್ ರಝಾಕ್ ಪುತ್ರರಾದ ಹಮ್ಮಬ್ಬ ಸಿರಾಜ್ (28 )ಮತ್ತು ಕಜುತುಬುದ್ದೀನ್ ಸಾದಿಕ್ (32) ಆಗಿದ್ದಾರೆ.ಗುರುವಾರ […]
ವರದಿ : ಕೆ.ಜಿ.ವೈದ್ಯ,ಕುಂದಾಪುರ ಕುಂದಾಪುರ : ಕೋಟೇಶ್ವರದ ಪ್ರಸಿದ್ಧ ಚೇತನಾ ಕಲಾರಂಗದ ಸಕ್ರಿಯ ಸದಸ್ಯ, ಅಪ್ರತಿಮ ನಾಟಕ ಕಲಾವಿದ ರಾಮಚಂದ್ರ (ಬೆನಕ) ಆಚಾರ್ಯ (60) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನರಾದರು.ಕುಂಭಾಶಿಯ ನಾರಾಯಣ ಆಚಾರ್ಯ – ಸತ್ಯಮ್ಮ ದಂಪತಿಯ ಪುತ್ರನಾದ ರಾಮಚಂದ್ರ ಆಚಾರ್ಯ ಸೆಂಟ್ರಿಂಗ್ ಮತ್ತು ಮರಗೆಲಸಗಳನ್ನು ಮಾಡುತ್ತಿದ್ದರು. ಕೋಟೇಶ್ವರದ ಚೇತನಾ ಕಲಾರಂಗದ ಸದಸ್ಯನಾಗಿ, ಸಂಸ್ಥೆಯ ಹಲವು ನಾಟಕಗಳಲ್ಲಿ ಪಾತ್ರ ನಿರ್ವಹಿಸಿ ಜನಪ್ರಿಯರಾಗಿದ್ದರು. ಪ್ರಸಿದ್ಧ ನಿರ್ದೇಶಕರಾದ ಪ್ರಭಾಕರ ಐತಾಳ, ವಾದಿರಾಜ ತವಳ, ವಾಸುದೇವ ಶೆಟ್ಟಿಗಾರ್, ಗಣೇಶ್ ಐತಾಳರ […]
JANANUDI.COM NETWORK ಕು೦ದಾಪುರ: ಯುವಶಕ್ತಿ ಮಿತ್ರ ಮ೦ಡಲ ಹೆಗಾರ್‌ಬೈಲು, ವಕ್ಕಾಡಿ ಇವರ ಬೆಳ್ಳಿ ಹಬ್ಬದ ಪ್ರಯುಕ್ತ ಯುವಸ೦ಭ್ರಮ-2022 ಮಾ.19ರ೦ದು ಶನಿವಾರ ವಕ್ವಾಡಿಯ ಯುವಶಕ್ತಿ ವೇದಿಕೆ, ಪ೦ಚಾಯತ್ ವಠಾರ ಇಲ್ಲಿನಡೆಯಲಿದೆ.ಸ೦ಜಿ 6 ಗಂಟಿಗೆ ಯುವಶಕ್ತಿ ಸಿನಿಮಾ ನೃತ್ಯ ಸ್ಪರ್ಧೆ – ಹೆಜ್ಜೆ ಸಪ್ಪಳ-2022, 6.45ಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ತ೦ಡ ತಾ೦ಡವ ಡ್ಯಾನ್ಸ್ ಸ್ಟುಡಿಯೊ ಕುಂದಾಪುರ ಇವರಿಂದ ಡ್ಯಾನ್ಸ್ ಧಮಾಕ, ರಾತ್ರಿ 8ಗ೦ಟೆಗೆ ಪುಷ್ಪನಮನಮತ್ತು ಯುವ ಸ್ನೂರ್ತಿ ಪುರಸ್ಕಾರ ಪ್ರದಾನ ಸಮಾರ೦ಭ ನಡೆಯಲಿದೆ. ಲೇಖಕ ಸತೀಶ್ ಶೆಟ್ಟಿ […]
JANANUDI.COM NETWORK ನೂರಾರು ವರ್ಷಗಳ ಹೋರಾಟದಿಂದ ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕೇವಲ ರಾಜಕೀಯ ಪಕ್ಷವಲ್ಲ ಇದು ಒಂದು ಆಂದೋಲನ ,ದೇಶದ ಜನರೇ ರೂಪಿಸಿದ ಸಂಘಟನೆ .ಭಾರತ ಪ್ರಜಾಪ್ರಭುತ್ವ ,ಸಂವಿಧಾನ ಉಳಿಸಲು, ಸೌಹಾರ್ದತೆ ಮತ್ತು ಐಕ್ಯತೆಯನ್ನು ಕಾಪಾಡಲು ಕಟಿಬದ್ಧವಾಗಿರುವ ಪಕ್ಷ.ದೇಶ ಈಗ ಮತ್ತೊಮ್ಮೆ ಸಂಕಷ್ಟದಲ್ಲಿದೆ .ಬೆಲೆಯೇರಿಕೆ, ನಿರುದ್ಯೋಗ ,ಸರ್ವಾಧಿಕಾರ ,ಜನವಿರೋಧಿ ಧೋರಣೆಗಳಿಂದ ದೇಶದ ಜನತೆಗೆ ಮುಕ್ತಿ ಬೇಕಾಗಿದೆ .ಭಾರತವನ್ನು ಮತ್ತೆ ಅಭಿವೃದ್ಧಿ ಹಾದಿಗೆ ಮರಳಿಸಬೇಕಿದೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಬದಲಾವಣೆ […]
ವರದಿ : ಮಝರ್, ಕುಂದಾಪುರ ಸ್ಥಳೀಯ ಖಾರ್ವಿಕೇರಿ ನಿವಾಸಿ ಶಂಕರ ಖಾರ್ವಿ (53) ಅವರು ಅಲ್ಪಕಾಲದ ಅಸೌಖ್ಯದಿಂದ ಮಾರ್ಚ್ 14 ರ ಸೋಮವಾರ ನಿಧನರಾದರು.ಪ್ರಮುಖ ಬಸ್ ಏಜೆಂಟರಾಗಿ ಗುರುತಿಸಲ್ಪಟ್ಟಿದ್ದ ಇವರು ಬಿಜೆಪಿ ಪಕ್ಷದ ಧುರೀಣರಾಗಿದ್ದಲ್ಲದೇ ಕುಂದಾಪುರ ಪುರಸಭೆಯ ಮಾಜಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.ಮೃತತು ಪತ್ನಿ, ಎರಡು ಹೆಣ್ಣುಮಕ್ಕಳ ಸಹಿತ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
jANANUDI.COM NETWORK ಕುಂದಾಪುರ,ಮಾ.13: ಕುಂದಾಪುರ ರೋಜರಿ ಚರ್ಚಿನ ಕೆಥೊಲಿಕ್ ಸ್ತ್ರೀ ಸಂಘಟನೇಯ ಮುಂದಾಳತ್ವದಲ್ಲಿ ಸ್ವಸಹಾಯ ಗುಂಪುಗಳ ಜೊತೆ ಭಾನುವಾರ 13 ರಂದು ಚರ್ಚ್ ಸಭಾಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.ಮಹಿಳಾ ದಿನಾಚರಣೆಯ ಪ್ರಯುಕ್ತ ಮೊದಲಿಗೆ ಹೋಲಿ ರೋಜರಿ ಚರ್ಚಿನಲ್ಲಿ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜರ ನೇತ್ರತ್ವದಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಫಾ| ವಿಜಯ್ ಮಾತನಾಡಿ “ಸಮಾಜದಲ್ಲಿ ಮಹಿಳೆ ಅದ್ವೀತಿಯ ಪಾತ್ರವನ್ನು ವಹಿಸಿದ್ದಾಳೆ, ತಾಯಿಯಾಗಿ,ಮನೆಕೆಲಸ,ಉದ್ಯೋಗ,ಹೋರಾಟ, ಹೀಗೆ ಎಲ್ಲ ರಂಗಗಳಲ್ಲಿ ಮಹಿಳೆ ತನ್ನ ಪಾತ್ರವನ್ನು ಚೆನ್ನಾಗಿ […]