ಕೋಟೇಶ್ವರದ ಸಂತ ಅಂತೋನಿಯವರ ದೇವಾಲಯದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಂಜೆಯ ಭಾಗವಾಗಿ 06 ಬುಧವಾರ, 2024 ರಂದು ಸಂಜೆ 6.30ಗೆ ಕಟ್ಕೆರೆಯ ಕಾರ್ಮೆಲ್ ಆಶ್ರಮದಲ್ಲಿ ’ಅಮರ್ ಅಂತೋಣಿ’ ಎಂಬ ನೂತನ ಕೊಂಕಣಿ ಹಾಸ್ಯ ನಾಟಕ ಪ್ರದರ್ಶನಗೊಂಡಿತು. ಜೊ.ಸಿ.ಸಿದ್ದಕಟ್ಟೆ ವಿರಚಿತ ಹಾಗೂ ನಿರ್ದೇಶನದ ಈ ನಾಟಕ ಸಂತ ಅಂತೋಣಿ ದೇವಾಲಯದ ಕಲಾವಿದರಿಂದ ಪ್ರಸ್ತುತಗೊಳಿಸಲಾಯಿತು. ಸಂತೋಷ್ ಮಾರ್ಟಿಸ್, ಕೋಟೇಶ್ವರ ಸಹನಿರ್ದೇಶನ ಮಾಡಿದ್ದು ಪಾತ್ರಧಾರಿಯೂ ಆಗಿದ್ದರು. ಅವರೊಂದಿಗೆ ಸಹಕಲಾವಿದರಾದ ವಂ. ಪ್ರವೀಣ್ ಪಿಂಟೊ, ಉಲ್ಲಾಸ್ ಫೆರ್ನಾಂಡಿಸ್, ವಿಜಯ್ ಬಾರೆಟ್ಟೊ, […]
ಆಕಾಶ್ ಎಜುಕೇಶನ್ ಸಂಸ್ಥೆ ಸಂಪೂರ್ಣ ಭಾರತದಲ್ಲಿ ನೆಡೆಸುವ ಎಸ್ ಎಸ್ ಎಲ್ ಸಿ,ಹಾಗೂ ಫಸ್ಟ್ ಪಿಯುಸಿ, ಸೆಕೆಂಡ್ ಪಿಯುಸಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವಿಷಯಗಳ ಆಯ್ಕೆಯಲ್ಲಿ ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ನಡೆಸುವ ಪರೀಕ್ಷೆಯಲ್ಲಿ ಇಂಜಿನಿಯರ್ ವಿಷಯನ್ನು ಆಯ್ದುಕೊಂಡು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕುಂದಾಪುರ ಇಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ಆಕಾಶ್ ಈಶ್ವರ್ ಮೊಗವೀರ 80 ಪ್ರತಿಶತ ಅಂಕ ಪಡೆದು ಉಡುಪು ಜಿಲ್ಲೆಗೆ ತೃತೀಯ ರಾಂಕ್ ಸ್ಕಾಲರ್ಶಿಪ್ ಗೆ ಆಯ್ಕೆಯಾಗಿರುತ್ತಾರೆ. ಈತ ಹೆಮ್ಮಾಡಿ ಸುಳ್ಸೆ ಸುಗುಣ […]
ಉಡುಪಿ, ತಾ 06-11-2024 ಬುಧವಾರ ಸಂಜೆ 4-00 ಗಂಟೆಗೆ ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷರು, ಮಾಜಿ ಲೋಕಸಭಾ ಸದಸ್ಯರು, ಮಾಜಿ ಸಚಿವರು ಆಗಿರುವ ಸನ್ಮಾನ್ಯ ಶ್ರೀ ಜಯಪ್ರಕಾಶ್ ಹೆಗ್ಡೆ ರವರು ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಅಹವಾಲು ಸ್ವೀಕರಿಸಿದರು. ಈ ಸಂಧರ್ಭದಲ್ಲಿ ಸಾರ್ವಜನಿಕರು,ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಉಪಸ್ಥಿತರಿದ್ಧರು.
ಮಂಗಳೂರು, ನ.7: ಬಿಕರ್ನಕಟ್ಟೆ ಜಂಕ್ಷನ್‌ನಲ್ಲಿ ಸ್ಟಾನ್ಲಿ ಬಂಟ್ವಾಳ ಮತ್ತು ಲಿಯೋ ರಾಣಿಪುರ ಮಾಲೀಕತ್ವದ ಮತ್ತು ನಿರ್ವಹಣೆಯ ನವೀಕೃತ ಅನ್ವಿತಾ ಫೋಟೋಗ್ರಫಿ ಮತ್ತು ಆನ್ಸಿತಾ ವಿಡಿಯೋಗ್ರಫಿ ಸ್ಟುಡಿಯೋ ಮತ್ತು ಯುನಿವರ್ಸಲ್ ಮೆಲೋಡೀಸ್ ಆಡಿಯೋ ವಿಷುಯಲ್ ಸ್ಟುಡಿಯೋ ಉದ್ಘಾಟನೆಗೊಂಡಿತು.ಅನ್ವಿತಾ ಫೋಟೋಗ್ರಫಿ & ಅನ್ಸಿತಾ ವಿಡಿಯೋಗ್ರಫಿ ಸ್ಟುಡಿಯೋವನ್ನು ಅನಿವಾಸಿ ಭಾರತೀಯ ಉದ್ಯಮಿ ಮತ್ತು ಸಾಮಾಜಿಕ ಚಿಂತಕ ಮೈಕೆಲ್ ಡಿಸೋಜಾ ಅವರು ಉದ್ಘಾಟಿಸಿದರೆ, ಯುನಿವರ್ಸಲ್ ಮೆಲೋಡೀಸ್ ಆಡಿಯೋ ವಿಷುಯಲ್ ಸ್ಟುಡಿಯೋವನ್ನು ಎನ್‌ಆರ್‌ಐ ಉದ್ಯಮಿ ಮತ್ತು ಸಾಮಾಜಿಕ ಚಿಂತಕ ಜೇಮ್ಸ್ ಮೆಂಡೋನ್ಕಾ ಉದ್ಘಾಟಿಸಿದರು. ಉದ್ಘಾಟನೆಯ […]
ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ- ನಂದಳಿಕೆಯ ನೇತೃತ್ವದಲ್ಲಿ ಸಂಸ್ಥೆಯ 25ನೇ ವರ್ಷಾಚರಣೆ ಅಂಗವಾಗಿ ಅಬ್ಬನಡ್ಕದ ಕುಂಟಲಗುಂಡಿಯಲ್ಲಿ ಗೋಪೂಜೆ ಸಂಭ್ರಮ ಕಾರ್ಯಕ್ರಮ ಜರಗಿತು.ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ- ನಂದಳಿಕೆಯ ಮಹಿಳಾ ಸದಸ್ಯರು ಹಾಗೂ ಸಂಘದ ಸದಸ್ಯರಿಂದ ಗೋವಿಗೆ ಪೂಜೆ ಸಲ್ಲಿಸಲಾಯಿತು.ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಅವರು ದೀಪಾವಳಿ ಆಚರಣೆ ಮತ್ತು ಗೋಪೂಜೆ ಮಹತ್ವದ ಕುರಿತು ಮಾತನಾಡಿದರು.ನಂದಳಿಕೆ […]
ಮಂಗಳೂರು: ಭಾರತ ದೇಶವನ್ನು ಸಮೃದ್ಧವಾಗಿ ಕಟ್ಟಲು ಎಲ್ಲರೂ ಒಗ್ಗೂಡಿ ಶ್ರಮಿಸುವುದು ಅಗತ್ಯ ಎಂದು ಎನ್‍ಆರ್‍ಐ ಉದ್ಯಮಿ, ಕೊಡುಗೈ ದಾನಿ ಮೈಕಲ್ ಡಿಸೋಜ ಕರೆ ನೀಡಿದ್ದಾರೆ. ದೇಶಪ್ರೇಮ, ಸಾಮರಸ್ಯ ಮತ್ತು ಶಾಂತಿ, ಸೌಹಾರ್ದತೆಯನ್ನು ಹೆಚ್ಚಿಸುವುದರ ಜೊತೆಗೆ ಮಾನವತೆಯ ಧರ್ಮವು ಮುಖ್ಯ ಎಂದು ಅವರು ಪ್ರತಿಪಾದಿಸಿದರು. ಸಂತ ಮದರ್ ತೆರೇಸಾ ವಿಚಾರ ವೇದಿಕೆ, ಮಂಗಳೂರು ಇವರ ಆಶ್ರಯದಲ್ಲಿ, ಹೋಲಿಕ್ರಾಸ್ ಚರ್ಚ್ ಕೋರ್ಡೆಲ್, ಕುಲಶೇಖರ ಇದರ ಸಹಕಾರದಲ್ಲಿ ಮಂಗಳವಾರ ಕುಲಶೇಖರದ ಕಲ್ಪನೆ ಮೈದಾನದಲ್ಲಿ ನಡೆದ ಬೆಳಕಿನ ಹಬ್ಬ ದೀಪಾವಳಿ ಸಮಾರಂಭ 2024 […]
ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನ.10 ರಂದು ಪ್ರಾತ: ಕಾಲ ಗಂಟೆ 5:00ಕ್ಕೆ ಹಣತೆ ದೀಪಗಳ ಬೆಳಕಿನಲ್ಲಿ ಶ್ರೀ ದೇವರ ವಿಶ್ವರೂಪ ದರ್ಶನ ಜರುಗಲಿದೆ. ಆ ಸಂದರ್ಭದಲ್ಲಿ ದೇವಸ್ಥಾನದ ಸುತ್ತ ಚಿತ್ತಾಕರ್ಷಕ ರಂಗೋಲಿಗಳು ಪ್ರದರ್ಶನಗೊಳ್ಳಲಿವೆ ಎಂದು ದೇವಳದ ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ ತಿಳಿಸಿದ್ದಾರೆ.
ಉಡುಪಿ; ಕ್ರಿಯಾಶೀಲ ಯುವ ನಾಯಕಿ, ಆಶ್ಲೇ ಡಿಸೋಜಾ ಅವರು ತಮ್ಮ ಸ್ಥಳೀಯ ಮೌಂಟ್ ರೋಸರಿ ಚರ್ಚ್‌ನಲ್ಲಿ ಸನ್ಮಾನಿಸಿದರು.‘ಯಂಗ್ ‘ಅಚೀವರ್ ನ್ಯಾಶನಲ್ ಯೂತ್ ಅವಾರ್ಡ್’ ಪುರಸ್ಕೃತೆ ಮಿಸ್ ಆಶ್ಲೇ ಡಿಸೋಜಾ ಅವರ ಸಾಧನೆಗಳನ್ನು ಅನುಸರಿಸಿ ಅವರ ಸ್ಥಳೀಯ ಧರ್ಮಕೇಂದ್ರ, ಸಂತೆಕಟ್ಟೆಯ ಮೌಂಟ್ ರೋಸರಿ ಚರ್ಚ್‌ನಲ್ಲಿ ಸನ್ಮಾನಿಸಲಾಯಿತು. ಜಬಲ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಕೆಯ ಅಸಾಧಾರಣ ಕೊಡುಗೆಗಳನ್ನು ಎದ್ದು ತೋರಿತು, ಆಕೆಯ ಸಮರ್ಪಣೆ ಮತ್ತು ಪ್ರಭಾವವನ್ನು ಪ್ರತಿಬಿಂಬಿಸುತ್ತದೆ ಮತ್ತು ಆಕೆಯ ಸಮುದಾಯವು ಆಕೆಯ ಸಾಧನೆಗಳನ್ನು ಹೃತ್ಪೂರ್ವಕ ಸಮಾರಂಭದಲ್ಲಿ ಹೆಮ್ಮೆಯಿಂದ ಆಚರಿಸಿತು.ನವೆಂಬರ್ 3, […]
ಕುಂದಾಪುರ: ಜೀವನದಲ್ಲಿ ಅನುಭವಕ್ಕೆ ಬರುವ ಮೌಲ್ಯಗಳು ಜೀವನದ ಆಶಯ ನೆರವೇರಿಸಲು ಪ್ರೇರಣೆಯಾಗಲಿ ಎಂದು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ ದೇವದಾಸ ಕಾಮತ್ ಹೇಳಿದರು. ಅವರುನವೆಂಬರ್ 4ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪದವಿಪೂರ್ವ ಮತ್ತು ಪದವಿ ಕಾಲೇಜು, ಶ್ರೀ ಜನಾರ್ದನ ಮಹಾಕಾಳೀ ದೇವಸ್ಥಾನ ಅಂಬಲಪಾಡಿ ಮತ್ತು ಶ್ರೀ ಕುಂದೇಶ್ವರ ದೇವಸ್ಥಾನ, ಕುಂದಾಪುರ ಇವರ ಸಹಯೋಗದಲ್ಲಿ ಒಂದು ದಿನದ “ಜೀವನ ಮೌಲ್ಯ ಶಿಕ್ಷಣ ಶಿಬಿರ” ಉದ್ಘಾಟಿಸಿ ಮಾತನಾಡಿದರು. ಮೌಲ್ಯಗಳು ನಮ್ಮ ಗುರಿಯನ್ನು ಮುಟ್ಟಲು ನೆರವಾಗಬೇಕು ಎಂದು ಅಭಿಪ್ರಾಯಪಟ್ಟರು.ಈ […]