ಮಂಗಳೂರು; “ದಾನ ನೀಡುವವರು ದೊಡ್ಡವರಲ್ಲ, ದಾನ ಪಡೆಯುವವರು ಸಣ್ಣವರಲ್ಲ. ನಾವೆಲ್ಲರೂ ದೇವರ ಮಕ್ಕಳಾದ್ದರಿಂದ ಸಮಾನರು. ಸಮಜದ ಅಶಕ್ತ ವರ್ಗದ ಜನರ ಮಕ್ಕಳ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ, ಮನೆ ಕಟ್ಟಲು ಮತ್ತು ದುರಸ್ಥಿಗೆ ದಾನ – ಹೀಗೆ ಸಮಾಜದ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಲೇ ಇರುವ ಅನಿವಾಸಿ ಉದ್ಯಮಿ, ಕೊಡುಗೈ ದಾನಿ ಶ್ರೀ ಮೈಕಲ್ ಡಿ’ಸೊಜಾ ನಮ್ಮ ಸಮಾಜಕ್ಕೆ ಪ್ರೇರಣೆ” ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ದಾನ್ಹಾ ಅಭಿಪ್ರಾಯಪಟ್ಟರು. ಡಾ| ಸಲ್ಡಾನ್ಹಾ […]
ಎಂ.ಬಿ.ಎ ವಿಭಾಗ ಎಂ.ಐ.ಟಿ.ಕೆ, ಮೂಡ್ಲಕಟ್ಟೆ, ಕುಂದಾಪುರ ವಿದ್ಯಾರ್ಥಿಗಳಿಗೆ ಎಂ.ಎಸ್ ಎಕ್ಸೆಲ್ ಕುರಿತು ಕಾರ್ಯಾಗಾರ ನಡೆಯಿತು. ಶ್ರೀ ಅನಂತ್ ನಾಯ್ಕ್, ಜನತಾ ಗ್ರೂಪ್ಸ್ ಸಹಾಯಕ ವ್ಯವಸ್ಥಾಪಕ (ವ್ಯವಹಾರ ಬೆಂಬಲ), ಕೋಟ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಎಂ.ಎಸ್ ಎಕ್ಸೆಲ್ ಕುರಿತು ಸಂಕ್ಷಿಪ್ತ ಪರಿಚಯದೊಂದಿಗೆ ಕಾರ್ಯಾಗಾರವನ್ನು ಪ್ರಾರಂಭಿಸಿದ ಅವರು ಉತ್ತಮ ಉದಾಹರಣೆಗಳೊಂದಿಗೆ ಕಂಪನಿಗಳಲ್ಲಿ ಎಕ್ಸೆಲ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಸಮಗ್ರ ಮಾಹಿತಿ ನೀಡಿದರು. ಅವರು ಸೆಲ್ ಉಲ್ಲೇಖ ಮತ್ತು ರೆಫರೆನ್ಸ್ ಬೋಡ್‍ಮಾಸ್ ಬಳಕೆಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆ ನೀಡಿದರು. ಪ್ರೊ.ಅಮೃತಮಲಾ ಸ್ವಾಗತಿಸಿ, […]
ಕುಂದಾಪುರದ ಎಂ.ಐ.ಟಿ.ಕೆ ಮೂಡ್ಲಕಟ್ಟೆಯ ಮೂಲ ವಿಜ್ಞಾನ ಮತ್ತು ಮಾನವಿಕ ವಿಭಾಗವು ಪ್ರಥಮ ವರ್ಷದ ಬಿಇ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಯೋಗಾಭ್ಯಾಸವನ್ನು ಆಯೋಜಿಸಿತ್ತು. ಶ್ರೀ ಗೋಪಾಲಕೃಷ್ಣ ದೀಕ್ಷಿತ್ ಮತ್ತು ಶ್ರೀಮತಿ. ಪ್ರಿಯಾಂಕಾ ದೀಕ್ಷಿತ್, ಬ್ರಹ್ಮಾವರ ಸಂಪನ್ಮೂಲ ವ್ಯಕ್ತಿಗಳಾಗಿದ್ದರು ಕಾರ್ಯಕ್ರಮದಲ್ಲಿ ಸುಮಾರು 200 ವಿದ್ಯಾರ್ಥಿಗಳು ಭಾಗವಹಿಸಿ ಸೂರ್ಯನಮಸ್ಕಾರ, ವಜ್ರಾಸನ, ತಾಡಾಸನ, ತ್ರಿಕೋನಾಸನ, ಭುಜಂಗಾಸನ, ಧನುರಾಸನ ಮುಂತಾದ ಯೋಗಾಸನಗಳನ್ನು, ಧ್ಯಾನ ಮತ್ತು ಪ್ರಾಣಾಯಾಮವನ್ನು ಕಲಿತರು. ಆರಂಭದಲ್ಲಿ ಶ್ರೀ ಗೋಪಾಲಕೃಷ್ಣ ಅವರು ಯೋಗದ ಮಹತ್ವ ಮತ್ತು ಶಕ್ತಿಯನ್ನು ವಿವರಿಸಿದರು ಮತ್ತು ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ […]
ಶ್ರೀ ಬ್ರಾಹ್ಮೀ ಸೌಹಾರ್ದ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ಕುಂದಾಪುರ ಉಪ್ಪುಂದ ಶಾಖೆ, ರೋಟರಿ ಕುಂದಾಪುರ ದಕ್ಷಿಣ ಸಹಯೋಗದಲ್ಲಿ, ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಉಪ್ಪುಂದ ವಲಯದ ಸಹಕಾರದೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ಶಂಕರ ಕಲಾ ಮಂದಿರ ಉಪ್ಪುಂದದಲ್ಲಿ ಜುಲೈ 29ರಂದು ನಡೆಯಿತು.ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಉದ್ಘಾಟಿಸಿದರು. ಶ್ರೀ ಬ್ರಾಹ್ಮಿ ಸೌಹಾರ್ದ […]
ಮಂಗಳೂರು: ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋ ಸಿಯೇ ಶನ್ ಮಂಗಳೂರು ವಲಯದ 2022-23ನೇ ಸಾಲಿನ 21 ನೇ ವಾರ್ಷಿ ಕಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯ ಕ್ರಮ ಮಂಗಳೂರಿನ ಸೈ ಂಟ್ ಸೆಬಾಸ್ಟಿಯನ್ ಸಭಾಂಗಣದಲ್ಲಿನಡೆಯಿತು.ದೀ ಪಬೆಳಗಿಸಿ ಕಾರ್ಯ ಕ್ರಮವನ್ನು ಉದ್ಘಾ ಟಿಸಿ ಮಾತನಾಡಿದ ಸೌತ್ ಕೆನರಾ ಫೊಟೋ ಗ್ರಾಫರ್ಸ್ ಅಸೋಸಿಯೇಶನ್ಜಿಲ್ಲಾಧ್ಯಕ್ಷ ಆನಂದ್ ಎನ್. ಬಂಟ್ವಾ ಳ್, ಮಂಗಳೂರು ವಲಯ ಅತ್ಯು ತ್ತಮ ಕಾರ್ಯ ಕ್ರಮಗಳನ್ನು ಸಂಘಟಿಸುತ್ತಾ ಸುಭದ್ರಸಂಘಟನೆ ಎಂದೆನಿಸಿದೆ ಎಂದು ಶ್ಲಾಘಿಸಿದರು.2023-25ನೇ ಸಾಲಿನ ನೂತನ […]
ಬಸ್ರೂರು: ಬಸ್ರೂರು ಕೆಳಪೇಟೆಯ ಆಶುರ್ ಖಾನಾದಲ್ಲಿ ಮೊಹರಂ ಪ್ರಯುಕ್ತ ದುವಾ ಕಾರ್ಯಕ್ರಮ ನಡೆಯಿತು. ಮೊಹರಂ . ಚರಣೆ ಕಾರ್ಯಕ್ರಮದ ಅಧ್ಯಕ್ಷ ಫಾರೂಕ್ ಸಾಹೇಬ್ ನೀರೋಣಿ, ಉಪಾಧ್ಯಕ್ಷ ಇರ್ಷಾದ್ ಸಾಹೇಬ್ . ಪಾನಕದಕಟ್ಟೆ ಕಾರ್ಯದರ್ಶಿ ಶೇಖ್ ಇರ್ಫಾನ್, ದರ್ಗಾ ಕಮಿಟಿ. ಅಧ್ಯಕ್ಷ ಲಾಲಾಅನ್ವರ್, ಜಾಮಿಯಾ ಮಸೀದಿಯ ಉಪಾಧ್ಯಕ್ಷ ಅಬ್ದುಲ್ ಅಜೀಜ್ ನೀರೋಣಿ ಮತ್ತುಜಮಾತಿನ ಬಾಂಧವರು ಉಪಸ್ಥಿತರಿದ್ದರು.
ಬೀಜಾಡಿ:ಪ್ರಾಣಿ,ಪಕ್ಷಿ,ಮಾನವ ಜೀವಿಸುವ ಈ ಭೂಮಿಯಲ್ಲಿ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಂಡಲ್ಲಿ ದೊಡ್ಡ ಸಮಸ್ಯೆ ಸೃಷ್ಠಿಯಾಗಲಿದೆ. ಅದಕ್ಕಾಗಿ ಪ್ರತಿಯೊಬ್ಬ ನಾಗರಿಕರು ಜಲ ರಕ್ಷಣೆಗೆ ಬದ್ಧರಾಗಬೇಕು ಎಂದು ರೋಟರಿ ಕ್ಲಬ್ ಕುಂದಾಪುರ ರಿವರ್‍ಸೈಡ್ ಮಾಜಿ ಅಧ್ಯಕ್ಷ ಮಂಜುನಾಥ ಕೆ.ಎಸ್ ಹೇಳಿದರು.ಅವರು ರೋಟರಿ ಕ್ಲಬ್ ಕುಂದಾಪುರ ರಿವರ್‍ಸೈಡ್, ಬೀಜಾಡಿ-ಗೋಪಾಡಿ ರೋಟರಿ ಸಮುದಾಯದಳ ಮತ್ತು ಬೀಜಾಡಿ ಮಿತ್ರ ಸಂಗಮದ ಆಶ್ರಯದಲ್ಲಿ ನಡೆದ ಮಣ್ಣಿನ ಫಲವತ್ತತೆ, ಸಂರಕ್ಷಣೆ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಅಧ್ಯಕ್ಷ ಜಗನ್ನಾಥ ಮೊಗೇರ ಸಮಾರಂಭದ […]
ಉಡುಪಿ.ಜು.2: ಮಣಿಪುರ ರಾಜ್ಯದಲ್ಲಿ ಹಿಂಸಾಚಾರ ಮತ್ತು ಮಹಿಳೆಯರ ಮೇಲೆ ಅಮಾನವೀಯ ಲೈಗಿಂಕ ಹಲ್ಲೆ ಖಂಡಿಸಿ ಬ್ರಹತ್ ಜಾಥಾಕ್ಕೆ ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ಮಾಜಿ ಮಂತ್ರಿ ವಿನಯ್ ಕುಮಾರ್ ಸೊರಕೆ ಚಾಲನೆ ನೀಡಿದರು. ನಂತರ ಜಾಥಾ ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಪ್ರತಿಭಟನಾ ಸಮಾವೇಷ ನಡೆಯಿತು.ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಾಮಾಜಿಕ ಚಿಂತಕ ಖ್ಯಾತ ಮಾಧ್ಯಮ ವಿಶ್ಲೇಷಕ ಶಿವಸುಂದರ್ ಅವರು, ಮಣಿಪುರದ ಹಿಂಸಾಚಾರ ಮತ್ತು ದೌರ್ಜನ್ಯಗಳು ಆಕಸ್ಮಿಕವಲ್ಲ. ಅದರ ಹಿಂದೆ ಮತೀಯ ರಾಜಕಾರಣದ ದುರುದ್ದೇಶವಿದೆ. ಪ್ರಧಾನಿ ಮೌನವನ್ನ ಆಯುಧ ಮಾಡಿಕೊಂಡಾಗ, […]
ಕುಂದಾಪುರ, 2 93 ದಿನಗಳ ಹಿಂದೆ ಮಣಿಪುರದಲ್ಲಿ ನಡೆದ ಬೆತ್ತಲೆ ಮೆರವಣಿಗೆ ಅತ್ಯಾಚಾರದ ಬಗ್ಗೆ ಪ್ರಧಾನಮಂತ್ರಿಗಳು ಹಾಗೂ ಗೃಹ ಸಚಿವರು ಮೌನವಾಗುವ ಮೂಲಕ ಇಡೀ ದೇಶವೇ ತಲೆತಗ್ಗಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಆರೋಪಿಸಿದ್ದಾರೆ. ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಬುಧವಾರ ಬೆಳಿಗ್ಗೆ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿ ‘ಮಣಿಪುರದ ಜನಾಂಗೀಯ ಕಲಹವನ್ನು ಕೇಂದ್ರದ ಬಿಜೆಪಿ ಸರ್ಕಾರ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದ ಅವರು, ಸಂಸತ್ ಕಲಾಪದಲ್ಲಿ […]