ಕುಂದಾಪುರ:ಶಿಕ್ಷಣ ಎನ್ನುವುದು ನಮ್ಮ ಕೈಯಲ್ಲಿರುವ ಶಕ್ತಿಯುತವಾದ ಅಸ್ತ್ರ. ವಿದ್ಯಾರ್ಥಿಗಳು ತಮ್ಮ ಗುರಿಯೆಡೆಗೆ ಉತ್ಸಾಹಕರಾಗಿದ್ರೆ ಅವಕಾಶಗಳು ಸಿಕ್ಕೇ ಸಿಗುತ್ತದೆ. ಅರ್ಧಂಬರ್ಧ ಕೆಲಸ, ಅರ್ಧಂಬರ್ಧ ಕಲಿಕೆ ಯಾವತ್ತು ಮಾಡಬಾರದು, ಮಾಡಿದ ಒಂದೇ ಕೆಲಸವಾದ್ರೂ ಕೂಡ ಅದು ಅಚ್ಚುಕಟ್ಟಾಗಿರಬೇಕು, ಏನೇ ಕೆಲಸ ಮಾಡಿದರು ಪ್ರೀತಿಯಿಂದ ಮಾಡಿ ಮತ್ತು ಎಷ್ಟೇ ಕಷ್ಟ ಬಂದರು ಸಾಧಿಸುವ ಛಲ ನಿಮ್ಮಲ್ಲಿರಬೇಕು ಎಂದು ಬಿಗ್ ಬಾಸ್ ಖ್ಯಾತಿಯ ಅರವಿಂದ್ ಕೆ. ಪಿಯವರು ಇಲ್ಲಿನ ಪ್ರತಿಷ್ಠಿತ ಭಂಡಾರಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು, ಕುಂದಾಪುರಕ್ಕೆ ತಮ್ಮ “ಅರ್ಧಂಬರ್ಧ ಪ್ರೇಮಕಥೆ” […]
ಕುಂದಾಪುರ: ನವೆಂಬರ್ 23 ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸ್ಪಿಕ್ ಮೆಕೆ (ಸೊಸೈಟಿ ಫಾರ್ ದ ಪ್ರಮೋಶನ್ ಆಫ್ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ಅಂಡ್ ಕಲ್ಚರ್ ಅಮಾಂಗಸ್ಟ್ ಯೂಥ್) ಆಶ್ರಯದಲ್ಲಿ ಖ್ಯಾತ ಶಾಸ್ತ್ರೀಯ ಹಿಂದುಸ್ತಾನಿ ಕೊಳಲು ವಾದಕ ಪ್ರವೀಣ್ ಗೋಡ್ಕಿಂಡಿ ಅವರಿಂದ ಕೊಳಲು ವಾದನ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದಿದೆ.ಕೊಳಲು ವಾದಕ ಪ್ರವೀಣ್ ಗೋಡ್ಕಿಂಡಿ ಅವರು ತಮ್ಮ ಕೊಳಲು ವಾದನ ಕಾರ್ಯಕ್ರಮ ನೆರೆದ ವಿದ್ಯಾರ್ಥಿಗಳನ್ನು ಮತ್ತು ಸಭಿಕರ ಮನಸೋರೆಗೊಳಿಸುವಲ್ಲಿ ಯಶಸ್ವಿಯಾಯಿತು. ಅಂತಹ ಅಭೂತಪೂರ್ವ ಶಕ್ತಿ ಅವರು ಕೊಳಲು ವಾದನದಲ್ಲಿತ್ತು. […]
ಕುಂದಾಪುರ,ನ. 24; ಸ್ಥಳೀಯ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನ. 24 ರಂದು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಮತ್ತು ಹೋಲಿ ರೋಜರಿ ಶಾಲೆಯ ಜೊತೆ ಕಾರ್ಯದರ್ಶಿಯಾಗಿರುವ ಅತೀ ವಂದನೀಯ ಧರ್ಮಗುರು ಸ್ಟ್ಯಾನಿ ತಾವ್ರೊ “ಎಲ್ಲಾ ವಿದ್ಯಾರ್ಥಿಗಳು ವಿಜೇತರಾಗಲು ಮತ್ತು ಎಲ್ಲರಿಗೂ ಬಹುಮಾನ ಸಾಧ್ಯವಿಲ್ಲ ಆದರೆ ಕಠಿಣ ಪರಿಶ್ರಮ, ಸಮಯ ಪಾಲನೆ, ದೃಡ ಸಂಕಲ್ಪ, ಗುರಿ […]
ಕುಂದಾಪುರ:ಇಲ್ಲಿನ ಕೊರವಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಬಡ್ಡಿ ತಂಡಕ್ಕೆ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಕರ್ನಾಟಕ ಟೇಬಲ್ ಟೆನಿಸ್ ಅಸೋಸಿಯೇಷನ್ ಉಪಾಧ್ಯಕ್ಷ ಗೌತಮ್ ಶೆಟ್ಟಿ ಕುಂದಾಪುರ 12 ಜೊತೆ ಶೂ ವಿತರಿಸಿದರು. ಕೊರವಡಿ ಹಿರಿಯ ಪ್ರಾಥಮಿಕ ಶಾಲೆಯು ಕಬಡ್ಡಿ ಜಿಲ್ಲಾ ಮಟ್ಟದಲ್ಲಿ ಜಯಗಳಿಸಿ ನವೆಂಬರ್ ಮಂಡ್ಯದಲ್ಲಿ ಮೈಸೂರು ವಿಭಾಗ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದೆ. ಮೈಸೂರು ವಿಭಾಗ ಮಟ್ಟದಲ್ಲಿ ಭಾಗವಹಿಸಲು ತಂಡದ ಆಟಗಾರರಿಗೆ ಪ್ರಾಯೋಜಿತ 12 ಜೊತೆ ಕಬಡ್ಡಿ […]
ಕುಂದಾಪುರ: ” ಕ್ರೀಡೆಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳೂ ಕೂಡ ನಮ್ಮ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಪೂರಕವಾಗಿರುತ್ತವೆ. ಒಂದು ವೇಳೆ ಸ್ಪರ್ಧೆಯಲ್ಲಿ ಸೋತರೂ, ಅದನ್ನು ಕ್ರೀಡಾಸ್ಪೂರ್ತಿಯಿಂದ ಸ್ವೀಕರಿಸುವುದು ನಮಗೆ ಜೀವನಪಾಠವನ್ನು ಕಲಿಸುತ್ತದೆ. ಕ್ರೀಡೆಯನ್ನು ಮರೆತರೆ ಮುಂದೊಂದು ದಿನ ಆರೋಗ್ಯವಂತ ಯುವಕ- ಯುವತಿಯರನ್ನು ಹುಡುಕಬೇಕಾದೀತು” ಎಂದು ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿದ ಶ್ರೀ ಚಂದ್ರಶೇಖರ ಶೆಟ್ಟಿ, ಉಪ ಪ್ರಾಂಶುಪಾಲರು, ಕೆ.ಪಿ.ಎಸ್, ಕೋಟೇಶ್ವರ- ಇವರು ತಮ್ಮಉದ್ಘಾಟನಾ ನುಡಿಯಲ್ಲಿ ತಿಳಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಕುಸುಮಾಕರ ಶೆಟ್ಟಿ, ತಾಲೂಕು ಕ್ರೀಡಾ ಮತ್ತು ಯುವಜನ […]
ಮಂಗಳೂರು:ಮಿಲಾಗ್ರೆಸ್ ಸೆಂಟ್ರಲ್ ಶಾಲೆಯ ವಾರ್ಷಿಕ ಕ್ರೀಡಾಕೂಟವು 21 ನವೆಂಬರ್ 2023 ರಂದು ಮಂಗಳಾ ಕ್ರೀಡಾಂಗಣದಲ್ಲಿ ನಡೆಯಿತು. VI ರಿಂದ C ತರಗತಿಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉತ್ಸಾಹ ಮತ್ತು ಉತ್ಸಾಹದಿಂದ ಭಾಗವಹಿಸಿದ್ದರು. ಶಾಲಾ ಬ್ಯಾಂಡ್ ವಾದ್ಯದ ಮೂಲಕ ಅತಿಥಿಗಳನ್ನು ಕ್ರೀಡಾಂಗಣಕ್ಕೆ ಸ್ವಾಗತಿಸಲಾಯಿತು. ಈ ಕೆಳಗಿನ ಅತಿಥಿಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ರೆ.ಫಾ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿಲಾಗ್ರಿಸ್ ಸೆಂಟ್ರಲ್ ಸ್ಕೂಲ್ ನ ಕರೆಸ್ಪಾಂಡೆಂಟ್ ಬೋನವೆಂಚರ್ ನಜರೆತ್ ವಹಿಸಿದ್ದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಪದುವಾ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್‌ನ […]
ಕುಂದಾಪುರ: ಇಲ್ಲಿನ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ನವಜಾತ ಶಿಶು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ನಿರಂತರ ಪ್ರತಿಭಟನೆ ಮಂಗಳವಾರ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ವೈದ್ಯರ ನಿರ್ಲಕ್ಷದಿಂದಾಗಿ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿದ ಪೋಷಕರು ಹಾಗೂ ಗ್ರಾಮಸ್ಥರು, ಸೋಮವಾರ ಸಂಜೆ ಆಸ್ಪತ್ರೆ ಎದುರು ಜಮಾಯಿಸಿ ತಮ್ಮ ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ಡಿಎಚ್‍ಓ, ಡಿಸಿ ಬಾರದೇ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು. . ಉಪವಿಭಾಗಾಧಿಕಾರಿ, ಡಿಎಚ್‍ಓ ಹಾಗೂ ತಹಸೀಲ್ದಾರ್ ಆಗಮಿಸಿ ಪ್ರತಿಭಟನಾನಿರತರ ಮನವೊಲಿಸಲು ಪ್ರಯತ್ನಿಸಿದರೂ ಪಟ್ಟು ಬಿಡದ ಪ್ರತಿಭಟನಾಕಾರರು […]
ಕುಂದಾಪುರ: ಎಂಐಟಿಕೆಯಲ್ಲಿ ಸಿ-ಡಾಕ್ ಯೋಜನೆಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಸಿ-ಡಿಎಸಿ ನಿರ್ದೇಶಕ ಡಾ.ಮಹಮ್ಮದ್ ಮಿಸ್ಬಾಹುದ್ದೀನ್ ಇದಕ್ಕೆ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಕಾರ್ಯಕ್ರಮದಲ್ಲಿ ಸಿ-ಡಿಎಸಿ ಬೆಂಗಳೂರಿನ ಸುಧಾರಿತ ಕಂಪ್ಯೂಟಿಂಗ್ ತರಬೇತಿ ಶಾಲೆಯ ನಿಯೋಜನಾ ಅಧಿಕಾರಿ ಶ್ರೀಮತಿ ಇಂದ್ರಾಣಿ ಹಂದೆ ಪಿ ಎಸ್ ಉಪಸ್ಥಿತರಿದ್ದರು. ಸಿ-ಡಾಕ್ ಮತ್ತು ಸಂಸ್ಥೆಯ ಅತ್ಯಾಧುನಿಕ ಯೋಜನೆಗಳು ಮತ್ತು ಉನ್ನತ ಕೌಶಲ್ಯದ ಅವಕಾಶಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ವಿವರಿಸಿದರು ಸಿ-ಡಾಕ್ ನ ತಾಂತ್ರಿಕ ವಿಚಾರ ಸಂಕಿರಣ ಐ ಟಿ ಮತ್ತು ಎಲೆಕ್ಟ್ರಾನಿಕ್ಸ್ ಆರ್ & ಡಿನಲ್ಲಿ […]
ಉಡುಪಿ: ಇತ್ತೀಚೆಗೆ ನೇಜಾರಿನಲ್ಲಿ ನಡೆದ ತಾಯಿ ಮಕ್ಕಳ ಕೊಲೆ ನಡೆದ ಮನೆಗೆ ಉಡುಪಿ ಕಥೊಲಿಕ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರ ಪ್ರತಿನಿಧಿಗಳು ಮತ್ತು ಸಮನ್ವಯ ಸೌಹಾರ್ದ ಸಮಿತಿ ತೊಟ್ಟಾಂ ಇದರ ಪದಾಧಿಕಾರಿಗಳು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.ಈ ವೇಳೆ ಮಾತನಾಡಿದ ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಟ ಗುರು ಮೊನ್ಷಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಘಟನೆಯ ಕುರಿತು ಧರ್ಮಾಧ್ಯಕ್ಷರು ಅತೀವ ಆಘಾತ ಮತ್ತು ನೋವನ್ನು ವ್ಯಕ್ತಪಡಿಸಿದ್ದು, ಇಂತಹ ಘಟನೆ ಬುದ್ದಿವಂತರ ಜಿಲ್ಲೆಯಾದ […]