ಉಡುಪಿ: ಬೆಳಪು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಅತಿಥಿ ಉಪನ್ಯಾಸಕರೊಬ್ಬರು ಕಾಪು ದೇವಸ್ಥಾನದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಪಡುಬಿದ್ರಿ ವಿನಯ ರಾವ್ (27) ಆತ್ಮಹತ್ಯೆ ಮಾಡಿಕೊಂಡವರು.ಮೃತ ವಿನಯ್ ಅವಿವಾಹಿತರಾಗಿದ್ದು ತಂದೆ, ತಾಯಿ, ಸಹೋದರಿ, ಸಹೋದರನನ್ನು ಅಗಲಿದ್ದಾರೆ. ಅತಿಥಿ ಉಪನ್ಯಾಸಕ ವಿನಯ್ ರಾವ್ ಗುರುವಾರ ಮನೆಯಿಂದ ಕಾಲೇಜಿಗೆ ತೆರಳಿದ್ದು, ಸಂಜೆ ಇನ್ನಂಜೆ ದೇಗುಲದ ಸುತ್ತಮುತ್ತ ಓಡಾಡಿಕೊಂಡ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸರೆಯಾಗಿದೆ. ಶುಕ್ರವಾರ ಮುಂಜಾನೆ ದೇವಳದ ಕೆರೆಯಲ್ಲಿ ಮೃತ ದೇಹ ಪತ್ತೆಯಾಗಿದ್ದು,ಕೆರೆಯ ದಡದಲ್ಲಿ ಲ್ಯಾಪ್ ಟ್ಯಾಪ್ ಸಹಿತ […]
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಸಂತೋಷ್ ಶೆಟ್ಟಿ ಮಹೇಂದ್ರ ಆಚಾರ್ಯ, ಸುಹಾಸ್ ಚಾತ್ರ, ಜಗದೀಶ್ ಹೆಚ್.ವಿ ಮತ್ತು ಗುರುರಾಜ್ ಕರ್ವಾಡಿ ಗೆಳೆಯರು ಕಾಲೇಜಿನ ಮಧ್ಯಾಹ್ನದ ಭೋಜನಕ್ಕೆ ಮೂವತ್ತು ಸಾವಿರ (30000) ರೂಪಾಯಿಗಳನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ
ಕುಂದಾಪುರ, ಕರಾವಳಿ ಮೀನುಗಾರರು, ಮಹಿಳೆಯರು, ಅಲ್ಪ ಸಂಖ್ಯಾತರುಗಳೂ ಸೇರಿದಂತೆ ಎಲ್ಲರ ಶ್ರೇಯಕ್ಕೆ, ಸುಖಕ್ಕೆ ಸಮಗ್ರವಾಗಿ ಬಜೆಟ್‌ನಲ್ಲಿ ಅನುದಾನ ಒದಗಿಸಲಾಗಿದೆ. ವಡ್ಡರ್ಸೆಯವರ ಹೆಸರಲ್ಲಿ ಪ್ರಶಸ್ತಿ ಘೋಷಿಸಿದ್ದು ಸರಕಾರ ಸದಾ ಸಮ ಸಮಾಜದ ಪರವಾಗಿದೆ ಎನ್ನುವ ನಿಲುವನ್ನು ಧ್ವನಿಸುತ್ತದೆ. ಕೇಂದ್ರ ಸರಕಾರದ ಮಲತಾಯಿ ಧೋರಣೆಗೆ ಸೆಡ್ಡು ಹೊಡೆದು ಕನ್ನಡಿಗರ ಸ್ವಾಭಿಮಾನವನ್ನು ಎತ್ತಿಹಿಡಿಯುವಂತಿರುವ ಬಜೆಟ್ ಮಂಡನೆಗಾಗಿ ಕಾಂಗ್ರೆಸ್ ಮುಖಂಡರಾದ ಗಣೇಶ್ ಕೆ ನೆಲ್ಲಿಬೆಟ್ಟು ಮಾನ್ಯ ಸಿದ್ಧರಾಮಯ್ಯನವರಿಗೆ ಅಭಿನಂದನೆಗಳು ಸಲ್ಲಿಸಿದ್ದಾರೆ.
ಕೋಟ: ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ನೇ ಸಾಲಿನ ರಾಜ್ಯ ಬಜೆಟ್‍ನಲ್ಲಿ ಖ್ಯಾತ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿದ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದು, ಇದು ವಡ್ಡರ್ಸೆಯ ಅಭಿಮಾನಿಗಳಿಗೆ, ಹುಟ್ಟೂರಿನವರಿಗೆ ಸಂಭ್ರಮ ತಂದಿದೆ. ಸಾಮಾಜಿಕ ನ್ಯಾಯದ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಪತ್ರಕರ್ತರಿಗೆ ಖ್ಯಾತ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ ಸ್ಥಾಪಿಸಿ ಪ್ರತಿ ವರ್ಷ ನೀಡಲಾಗುವ ಮಹತ್ವದ ಘೋಷಣೆ ಮಾಡಿರುವುದು ವಡ್ಡರ್ಸೆ ರಘುರಾಮ ಶೆಟ್ಟಿ ಅಭಿಮಾನಿಗಳಿಗೆ ಖುಷಿ ತಂದಿದೆ. ನಮ್ಮೂರಿನ ಖ್ಯಾತ ಪತ್ರಕರ್ತ ವಡ್ಡರ್ಸೆ […]
ಕುಂದಾಪುರ (ಫೆ.16) : ಚಾಣಾಕ್ಷ ಚೆಸ್ ಸ್ಕೂಲ್, ಶಿವಮೊಗ್ಗ ಮತ್ತು ಮೌಂಟ್ ಕ್ಯಾರಮಲ್ ಸ್ಕೂಲ್ ಮತ್ತು ಶ್ರೀ ಶ್ರೀ ಟ್ರಸ್ಟ್ ಸಹಭಾಗಿತ್ವದಲ್ಲಿ ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಚೆಸ್ ಸ್ಪರ್ಧೆ – 2024ರಲ್ಲಿ ಕುಂದಾಪುರದ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿ ಶ್ರೀನಿತ್ ಶೆಟ್ ಭಾಗವಹಿಸಿ ಬಾಲಕರ 7ರ ವಯೋಮಿತಿಯ ವಿಭಾಗದಲ್ಲಿ 7ರಲ್ಲಿ 4 ಪಾಯಿಂಟ್ ಗಳನ್ನು ಗಳಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಇವರನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಹಾಗೂ […]
ಕುಂದಾಪುರ ಫೆಬ್ರವರಿ 15, 2024 ಕುಂದಾಪುರ ತಾಲೂಕಿನ ಹೊಸಂಗಡಿ,ಕೆರೆಕಟ್ಟೆ ಸಂತ ಅಂತೋನಿಯವರ ಪ್ರಸಿದ್ದ ಪುಣ್ಯ ಕ್ಷೇತ್ರದಲ್ಲಿ ಸಂತ ಅಂತೋನಿಯವರ ಅವರ ನಾಲಿಗೆಯ ಅವಶೇಷದ ಹಬ್ಬವನ್ನು ಶ್ರದ್ಧಾ ಭಕ್ತಿ ಮತ್ತು ಸಂಭ್ರಮದಿಂದ ಫೆ.15 ರಂದು ಆಚರಿಸಲಾಯಿತು.ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅತಿ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಹಬ್ಬದ ಪ್ರಯುಕ್ತ ದಿವ್ಯ ಬಲಿದಾನವನ್ನು ಅರ್ಪಿಸಿದರು.“ದೇವರೆ ನಮಗೆ ಪ್ರಾರ್ಥಿಸಲು ಕಲಿಸು” ಎಂಬುದು ಹಬ್ಬದ ವಿಷಯವಾಗಿದ್ದು, ತೊಟ್ಟಾಮ್ ಚರ್ಚಿನ ಧರ್ಮಗುರು ಹಾಗೂ ಸಂಪರ್ಕ ಸಾಧನ ಆಯೊಗೀದ ನಿರ್ದೇಶಕರಾರ ವಂ|ಡೆನಿಸ್ ಡೆಸಾ ದೇವರ ವಾಕ್ಯವನ್ನು […]
ಹಂಗಾರಕಟ್ಟೆ : ಸಮಕಾಲೀನ ಸಮಾಜದ ಸ್ಥಿತಿಗತಿಯಲ್ಲಿ ನಾವೆಲ್ಲ ಕಲಿತು-ಬೆರೆತು ಅನನ್ಯತೆಯನ್ನು ಸಾಧಿಸಬೇಕಾಗಿದೆ. ಮೌಲ್ಯಗಳು ಕಟ್ಟಾಜ್ಞೆ ಆಗುವುದಿಲ್ಲ. ಅದು ದಿನೇ ದಿನೇ ರೂಢಿಸಿಕೊಳ್ಳುವ ಪ್ರಕ್ರಿಯೆಯಾಗಿದ್ದು ನಾವುಗಳು ಸನ್ನಿವೇಶವನ್ನು ರೂಪಿಸಿಕೊಡುವ ಮಹತ್ತರ ಕೆಲಸ ಮಾಡಬೇಕಾಗಿದೆ. ಮೌಲ್ಯ ಪ್ರಜ್ಞೆಯನ್ನು ಸಾಕ್ಷಾತ್ಕರಿಸಿಕೊಳ್ಳಲು ತಂದೆ, ತಾಯಿ, ಪಾಲಕರು, ಸಂಘ ಸಂಸ್ಥೆಯವರು ಕ್ರಿಯಾತ್ಮಕ ಹೆಜ್ಜೆ ಇಡುವಂತೆ ಮಗುವಿನಲ್ಲಿ ಅಂತರಂಗದ ತುಡಿತವನ್ನು ಪ್ರೇರೇಪಿಸುವುದಾಗಿದೆ ಎಂದು ರೊ| ಕೆ.ಆರ್. ನಾೈಕ್, ಸೂಪರ್ ಗ್ರೇಡ್ ಇಲೆಕ್ಟ್ರಿಕಲ್ ಕಂಟ್ರಾಕ್ಟರ್ ಹಂಗಳೂರು ಅವರು ಹೇಳಿದರು.ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ.), ಬಾಳ್ಕುದ್ರು ಹಂಗಾರಕಟ್ಟೆ […]
ಕುಂದಾಪುರ (ಫೆ.15) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಶಿಕ್ಷಕರಿಗಾಗಿ “ಕಲಿಕಾ ನ್ಯೂನ್ಯತೆಯ ಕಾರಣಗಳು” ಎಂಬ ವಿಷಯಾಧಾರಿತ ಶಿಕ್ಷಕ ಪುನಶ್ಚೇತನ ಕಾರ್ಯಾಗಾರ ಫೆಬ್ರವರಿ 13, ಮಂಗಳವಾರದಂದು ಜರುಗಿತು.ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ, ಕೇರಳದ, ಕೊಚ್ಚಿನ್ನಲ್ಲಿ ಮಕ್ಕಳ ಮನಶಾಸ್ತ್ರಜ್ಞರು ಮತ್ತು ಹಿರಿಯ ಸಲಹೆಗಾರರಾಗಿರುವ ಡಾ. ಫಿಲಿಪ್ ಜಾನ್ ಆಗಮಿಸಿ, ಮಕ್ಕಳಲ್ಲಿ ಕಂಡುಬರುವ ಕಲಿಕಾ ನ್ಯೂನ್ಯತೆಗಳು, ಅದಕ್ಕೆ ಕಾರಣಗಳು ಮತ್ತು […]
ಕುಂದಾಪುರ ಫೆ. 15 : ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಮತ್ತು ವಿ. ಕೆ ಆರ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಫೆಬ್ರವರಿ 12, ಸೋಮವಾರದಂದು 6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ “ಮಕ್ಕಳೊಂದಿಗೆ ಮಾತು–ಕತೆ” ಕಾರ್ಯಾಗಾರ ಜರುಗಿತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಕವಿ, ವಿದ್ವಾಂಸ, ನಿರ್ದೇಶಕ, ನಾಟಕಕಾರರೂ ಆಗಿರುವ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಆಗಮಿಸಿ, ಮಕ್ಕಳಿಗೆ ಅನೇಕ ಕಥೆಗಳನ್ನು ಬಹಳ ಅತ್ಯುತ್ತಮವಾದ […]