ಯೇಸು ಕ್ರಿಸ್ತನ ಜೀವನದ ಮೇಲೆ ಖ್ಯಾತ ಕೊಂಕಣಿ ಕವಿ, ಸಾಹಿತಿ ಶ್ರೀ ಮರಿಯಾಣ್ ಪಾವ್ಲ್ ರೊಡ್ರಿಗಸ್ ಬರೆದಿರುವ ಕೊಂಕಣಿ ಪುಸ್ತಕ ’ದೇವ್ ಮನ್ಶಾಂತ್ ಆಯ್ಲೊ – ಜೆಜು ಕ್ರಿಸ್ತಾಚೆಂ ಜಿವಿತ್’ ಮಿಲಾಗ್ರಿಸ್ ಸೆನೆಟ್ ಸಭಾಂಗಣದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡೊಕ್ಟರ್ ಪೀಟರ್ ಪಾವ್ಲ್ ಸಲ್ಡಾನ್ಹಾ ಬಿಡುಗಡೆಗೊಳಿಸಿದರು. “ದೇವರ ವಾಕ್ಯವೆಂದರೆ ಅದು ಸೂರ್ಯನ ಬಿಸಿಲಿನಂತೆ. ಕೆಲವರು ಓದಿ ಒಳ್ಳೆಯವರಾದರೆ, ಇನ್ನು ಕೆಲವರು ದೇವರ ವಾಕ್ಯವನ್ನೇ ಓದಿ ಅನ್ಯಥಾ ಬಳಸುವುದೂ ಇದೆ. ದೇವರ ವಾಕ್ಯವನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳಲು […]
ಕುಂದಾಪುರದ ಆರ್. ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ.‘ನಮ್ಮ ನಮ್ಮ ವ್ಯಾಪ್ತಿಯಲ್ಲಿ, ಕಾರ್ಯಕ್ಷೇತ್ರದಲ್ಲಿ ನಮ್ಮಲ್ಲಿರುವ ಪ್ರತಿಭೆ– ಕೌಶಲ್ಯವನ್ನು ಉಪಯೋಗಿಸಿ ದೇಶದ ಅಭಿವೃದ್ಧಿಗೆ ತಳಮಟ್ಟದಿಂದ ಯತ್ನಿಸಬೇಕು. ಯಾವುದೋ ಒಂದು ಚೌಕಟ್ಟಿನಲ್ಲಿ ನಿತ್ಯಜೀವನದ ಚಟುವಟಿಕೆಗಳನ್ನು ಮಾಡುವ ನಾವು ದೇಶಪ್ರೇಮದ ವಿಚಾರದಲ್ಲಿ ನಮ್ಮ ಎಳೆಪ್ರಾಯದಲ್ಲಿರುತ್ತಿದ್ದ ಸ್ವಯಂಸ್ಪೂರ್ತಿಯ ಉತ್ಸಾಹವನ್ನು ಮತ್ತೆ ಪಡೆಯುವಂತಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಮುಂದಿನ ಪೀಳಿಗೆಯವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರುವಂತೆ ಪ್ರೇರೇಪಿಸಬೇಕು‘ ಎಂದು ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣಗೈದು ಕರೆ ನೀಡಿದರು. ಕಾಲೇಜಿನ ಕನ್ನಡ ಭಾಷಾ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಇವರು ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾದ ಶ್ರೀ ಸಂದೀಪ್ ಪೂಜಾರಿಯವರು ಧ್ವಜಾರೋಹಣ ಕಾರ್ಯಕ್ರಮವನ್ನು ನಿರ್ದೇಶಿಸಿದರು. ಕಾಲೇಜಿನ ಎಲ್ಲಾ ಬೋಧಕ–ಬೋಧಕೇತರ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೋಲಾರ: ಅನೇಕರ ತ್ಯಾಗಬಲಿದಾನಗಳ ಹೋರಾಟದಿಂದ ದೇಶದಲ್ಲಿ ಬ್ರಿಟೀಷರ ಅಂಧಕಾರ ಆಡಳಿತ ತೊಲಗಿ ಸ್ವಾತಂತ್ರ್ಯದ ಜ್ಯೋತಿ ಬೆಳಗುವಂತಾಯಿತು, ಈ ಜ್ಯೋತಿ ಪ್ರತಿ ಭಾರತೀಯರ ಮನೆ ಮನಗಳಲ್ಲಿ ಪ್ರಜ್ವಲಿಸಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಹೇಳಿದರು.ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಭಾರತ ಸೇವಾದಳ ಜಿಲ್ಲಾ ತಾಲೂಕು ಸಮಿತಿ, ಹಳೇ ಮಾಧ್ಯಮಿಕ, ಉರ್ದು ಪ್ರಾಥಮಿಕ ಶಾಲೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 77 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ಸ್ವಾತಂತ್ರ್ಯ ಎಂದಿಗೂ ಸ್ವೇಚ್ಛಾಚಾರವಾಗಬಾರದು ಎಂದು ಎಚ್ಚರಿಸಿದ ಅವರು, ಪ್ರತಿ ಭಾರತೀಯರು ದೇಶದ ಐಕ್ಯತೆಗಾಗಿ […]
ಶ್ರೀನಿವಾಸಪುರ: ವಿದ್ಯಾರ್ಥಿಗಳು ದೇಶದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಸ್ವಾತಂತ್ರ್ಯ ಹೋರಾಟಗಾರರಿಂದ ಸ್ಫೂರ್ತಿ ಪಡೆದು ರಾಷ್ಟ್ರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿಐಪಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಹೇಳಿದರು.ವಿಐಪಿ ಶಾಲಾ ಆಟದ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವಾತಂತ್ಯ ಯೋಧರು ತ್ಯಾಗ ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಸ್ವಾತಂತ್ರ್ಯಾನಂತರ ದೇಶ ಪ್ರಗತಿ ಪಥದಲ್ಲಿ ಸಾಗುತ್ತಿದೆ ಎಂದು ಹೇಳಿದರು.ಪ್ರತಿಯೊಬ್ಬರೂ ದೇಶದ ಕಾನೂನು ಗೌರವಿಸಬೇಕು. ದೇಶದ ಹಿತ ರಕ್ಷಣೆಗೆ ಪೂರಕವಲ್ಲದ ಯಾವುದೇ […]
ಶ್ರೀನಿವಾಸಪುರ: ಸ್ವಾತಂತ್ರ್ಯದ ಸವಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಿಗಬೇಕು ಎಂಬ ಆಶಯ ಸಾಕಾರಗೊಳ್ಳಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಯೋಜನೆ ರೂಪಿಸಿ ಜಾರಿಗೆ ತರಲಾಗುವುದು ಎಂದು ಹೇಳಿದರು.ಕ್ಷೇತ್ರದ ಯುವ ಸಮುದಾಯಕ್ಕೆ ಉದ್ಯೋಗಾವಕಾಶ ಒದಗಿಸುವ ಉದ್ದೇದಿಂದ ಪಟ್ಟಣದ ಹೊರವಲಯದಲ್ಲಿ ಕೈಗಾರಿಕಾ ವಲಯ ನಿರ್ಮಿಸಲಾಗುವುದು. ಈ […]
ಕುಂದಾಪುರ,16: ಸಂತ ಜೋಸೆಪರ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಇವರ ಆಶ್ರಯದಲ್ಲಿ 15-08-2023 ರಂದು “ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಕಾನೂನು ಅರಿವು” ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ರೋ.ಜಗನ್ನಾಥ್ ಮೊಗೆರ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕುಂದಾಪುರದ ವಕೀಲರಾದ ವೈ ಶರತ್ ಕುಮಾರ್ ಶೆಟ್ಟಿ ಇವರು ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಕಾನೂನು ಅರಿವು ಮಾಹಿತಿ ನೀಡಿದರು. ವ್ಯಕ್ತಿಯ ವ್ಯಕ್ತಿತ್ವದ ವಿಕಸನಕ್ಕೆ ಅಗತ್ಯವಾದ ಸಾಮಾಜಿಕ ಮತ್ತು ರಾಜಕೀಯ […]
ಕುಂದಾಪುರ: ಆಟೋರಿಕ್ಷಾ ,ಟ್ಯಾಕ್ಸಿ ,ಮೆಟಾಡೊರ್, ಡ್ರೈವರ್ ಅಸೋಸಿಯೇಷನ್ ನಿಂದ ಸ್ವಾತಂತ್ರ್ಯ 77 ನೇ ದಿನಾಚರಣೆಯನ್ನು ಆಚರಿಸಲಾಯಿತು. ’ಸ್ವಾತಂತ್ರ್ಯ ,ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಲವು ರೀತಿಯಲ್ಲಿ ಧಕ್ಕೆ ಬರುತ್ತಿದೆ. ನಾವೆಲ್ಲರೂ ಒಂದಾಗಿ ಇವುಗಳ ಸಂರಕ್ಷಣೆಯ ಸಂಕಲ್ಪ ತೊಡಬೇಕಾಗಿದೆ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿಯವರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.ಅಸೋಸಿಯೇಷನ್ ಅಧ್ಯಕ್ಷರಾದ ಲಕ್ಷ್ಮಣ್ ಶೆಟ್ಟಿಯವರು ಮಾತನಾಡಿ ದೇಶದ ಇಂದಿನ ಸರ್ವತೋಮುಖ ಬೆಳವಣಿಗೆಗೆ ಕಾಂಗ್ರೆಸ್ ಪಕ್ಷ ಕಾರಣ ಎಂದು ಹೇಳಿ ಎಲ್ಲರನ್ನೂ […]
ಕುಂದಾಪುರ,17,ಉಪ ವಿಭಾಗೀಯ ಕುಂದಾಪುರ ಸಾರ್ವಜನಿಕ ಆಸ್ಪತ್ರೆಗೆ ಅಪ್ರಿಶಿಯೇಶನ್ ಪ್ರಶಸ್ತಿ ಲಭಿಸಿದೆ. ಉಡುಪಿ ಅಜ್ಜರಕಾಡು ಮೈದಾನದಲ್ಲಿ ನಡೆದ 77 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಆಯುಷ್ಠಾನ್ ಭರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ- ಆರೋಗ್ಯ ಕರ್ನಾಟಕ (AB -PMJAY -ARK ) ಯೋಜನೆಯಡಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸಂಬಂಧ ಜಿಲ್ಲಾ ಮಟ್ಟದಿಂದ ಪ್ರಶಂಸಾ ಪ್ರಮಾಣಪತ್ರವನ್ನು ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆಯಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಇವರು ಆಸ್ಪತ್ರೆಯ ಆಡಳಿತ ಶಸ್ತ್ರಚಿಕಿತ್ಸಕರಾದ ಡಾ. […]
ಗಂಗೊಳ್ಳಿ :2023 ಆಗಸ್ಟ್ 15 ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾರ್ಥಿ ಆದಿತ್ಯ9th ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಮುಖ್ಯ ಅತಿಥಿ ಶಾಲಾ ಹಳೆ ವಿದ್ಯಾರ್ಥಿ ಅಮೀರ್ ಸಾಹೇಬರವರು ಧ್ವಜಾರೋಹಣಗೈದು, “ಸ್ವಾತಂತ್ರ್ಯ ಫಲಪ್ರದವಾಗಲು ಶಿಕ್ಷಣದ ಪಾತ್ರ ಮಹತ್ವವಾದದ್ದು, ಆ ನಿಟ್ಟಿನಲ್ಲಿ ಈ ಶಿಕ್ಷಣ ಸಂಸ್ಥೆ ಉತ್ತಮ ಶಿಕ್ಷಣ ನೀಡುತ್ತಿದೆ.” ಎಂದು ಹೇಳಿದರು. ಶಾಲಾ ಜಂಟಿ ಕಾರ್ಯದರ್ಶಿ ಭ. ಡಯಾನ ತ್ರಿವಳಿ ಸಂಸ್ಥೆಗಳ ಮುಖ್ಯೋಪಾದ್ಯಾಯಿನಿರಾ ದ ಭ. ಕ್ರೆಸೆನ್ಸ್, ಭ. ಡೋರಿನ್, ಭ. ಜ್ಯೋತಿಪ್ರಿಯ, ಶಿಕ್ಷಕ […]