ಫೆ. 23ರಂದು ಜೇಸಿಐ ಬೆಳ್ಮಣ್ಣು ನೇತೃತ್ವದಲ್ಲಿ ಸಾರ್ವಜನಿಕ ಶನಿಪೂಜೆ

ವರದಿ:ವಾಲ್ಟರ್ ಮೊಂತೇರೊ

ಫೆ. 23ರಂದು ಜೇಸಿಐ ಬೆಳ್ಮಣ್ಣು ನೇತೃತ್ವದಲ್ಲಿ ಸಾರ್ವಜನಿಕ ಶನಿಪೂಜೆ

ಜೇ

ಸಿಐ ಬೆಳ್ಮಣ್ಣು ನೇತೃತ್ವದಲ್ಲಿ ಮತ್ತು ರೋಟರಿ ಕ್ಲಬ್ ಬೆಳ್ಮಣ್ಣು ಹಾಗೂ ನಂದಳಿಕೆ ಶ್ರೀ ಗುರುದುರ್ಗಾ ಮಿತ್ರ ಮಂಡಳಿಯ ಸಹಕಾರದೊಂದಿಗೆ ಫೆ. 23ರಂದು ಶನಿವಾರ ಸಂಜೆ 4 ರಿಂದ ನಂದಳಿಕೆಯ ಗೋಳಿಕಟ್ಟೆ ಮೈದಾನದಲ್ಲಿ ಸಾರ್ವಜನಿಕ ಶನಿಪೂಜೆ ಜರಗಲಿರುವುದು.
ಜಿಲ್ಲೆಯ ಸುಪ್ರಸಿದ್ಧ ಯಕ್ಷಗಾನ ಕಲಾವಿದರಿಂದ “ಶನಿಕಥೆ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದೆ ಎಂದು ಬೆಳ್ಮಣ್ಣು ಜೇಸಿಐನ ಅಧ್ಯಕ್ಷರಾದ ಶ್ವೇತಾ ಸುಭಾಸ್‍ರವರು ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.